dasara padagalu · MADHWA · sripadarajaru

Harihararu sariyemba marulu janaru

ಹರಿಹರರು ಸರಿಯೆಂಬ ಮರುಳು ಜನರು
ಹರಿಹರರ ಚರಿತೆಯನು ತಿಳಿದು ಭಜಿಸುವುದು || ಪ ||
ಸುರರು ಮುನಿಗಳು ಕೂಡಿ ಪರದೈವವಾರೆಂದು
ಅರಿಯಬೇಕೆಂದೆರಡು ವರಧನುಗಳಹರಿಹರರಿಗಿತ್ತು
ಸಂಗರವ ಮಾಡಿಸಿ ನೋಡೆ
ಮುರಹರನು ಪುರಹರನ ಗೆಲಿದುದರಿಯಾ || 1 ||

ಹರನ ಕುರಿತ ಸುರ ಮಹತಪವ ಮಾಡಲು
ಮೆಚ್ಚಿವರವನವಗಿತ್ತು ಹರ ಬಳಲಿ ಓಡಿಬರಲು
ಹರಿ ಬಂದವನ ಕರವ ಶಿರದ ಮ್ಯಾಲಿರಿಸಿ
ಖಳ-ನುರುಹಿ ಹರನನು ಕಾಯಿದ ಕಥೆಯ ನೀನರಿಯಾ || 2 ||

ದೂರ್ವಾಸರೂಪ ಹರನಂಬರೀಷನ ಮುಂದೆ
ಗರ್ವವನು ಮೆರೆಸಿ ಜಡೆಯನು ಕಿತ್ತಿಡೆ
ಸರ್ವಲೋಕದೊಳವನ ಚಕ್ರನಿಲಲೀಯದಿರೆ
ಉರ್ವೀಶನನು ಸಾರಿ ಉಳಿದನರಿಯಾ || 3 ||

ಹರನಂಶ ದ್ರೋಣಸುತನು ಪಾಂಡವಾ ಎಂದು
ಉರವಣಿಸಿ ನಾರಾಯಣಾಸ್ತ್ತ್ರವನು ಬಿಡಲು
ಹರಿ ಬಂದು ಬೇಗ ತನ್ನಸ್ತ್ರವನು ತಾ ಸೆಳೆದು
ಶರಣಾಗತರ ಕಾಯಿದ ಕಥೆಯನರಿಯಾ || 4 ||

ನರನಾರಾಯಣರು ಬದರಿಕಾಶ್ರಮದಲಿರೆ
ಹರನು ಹರಿಯೊಡನೆ ಕದನವನು ಮಾಡೆ
ಹರಿ ಹರನ ಕಂಠವನು ಕರದಲಿ ಪಿಡಿದು ನೂಕೆ
ಕೊರಳ ಕಪ್ಪಾದ ಕಥೆ ಕೇಳಿ ಅರಿಯಾ || 5 ||

ಹರಿ ಸುರರಿಗಮೃತವನು ಎರೆದ ರೂಪವನೊಮ್ಮೆ
ಹರ ನೋಡುವೆನೆಂದು ಸಂಪ್ರಾರ್ಥಿಸೆ
ಪರಮ ಮೋಹನ ರೂಪಲಾವಣ್ಯವನು ಕಂಡು
ಹರ ಮರಳುಗೊಂಡ ಕಥೆ ಕೇಳಿ ಅರಿಯಾ || 6 ||

ಹರಿಯ ಮೊಮ್ಮನ ಬಾಣಾಸುರನು ಸೆರೆವಿಡಿಯೆ
ಗರುಡವಾಹನನಾಗಿ ಕೃಷ್ಣ ಬಂದು
ಹರನ ಧುರದಲಿ ಜಯಿಸಿ ಅವನ ಕಿಂಕರನ
ಸಾ-ವಿರ ತೋಳುಗಳ ತರಿದ ಕಥೆಯ ನೀನರಿಯಾ || 7 ||

ಸುರತರುವ ಕಿತ್ತು ಹರಿ ಸುರಲೋಕದಿಂದ ಬರೆ
ಹರನು ಹರಿಯೊಡನೆ ಕದನವನು ಮಾಡೆ
ತರಹರಿಸಲಾರದೋಡಿದ ಕಥೆಯ ನೀನೊಮ್ಮೆ
ಹಿರಿಯರ ಮುಖದಿ ಕೇಳಿ ನಂಬು ಹರಿಯಾ || 8 ||

ಹರಸುತನು ತಪದಿಂದ ಹರಿಯ ಚಕ್ರವ ಬೇಡೆ
ಪರಮ ಹರುಷದಲಿ ಚಕ್ರವನೀಯಲುಭರದಿಂದ
ಧರಿಸಲಾರದೆ ಚಕ್ರವನಂದುಹರನು
ಭಂಗಿತನಾದನೆಂದರಿಯಲಾ || 9 ||

ರಾವಣಾಸುರ ಕುಂಭಕರ್ಣ ನರಕಾದಿಗಳು
ಶೈವತಪವನು ಮಾಡಿ ವರವ ಪಡೆಯೆ
ಅವರುಗಳನು ವಿಷ್ಣು ನರರೂಪಿನಿಂದರಿದು
ದೇವರ್ಕಳನು ಕಾಯಿದ ಕಥೆಯ ನೀನರಿಯಾ || 10 ||

ಗಂಗಾಜನಕನ ಸನ್ಮಂಗಲ ಚರಿತ್ರ್ರೆಗಳ
ಹಿಂಗದಲೆ ಕೇಳಿ ಸುಖಿಸುವ ಜನರಿಗೆ
ಭಂಗವಿಲ್ಲದ ಪದವನಿತ್ತು ಸಲಹುವ
ನಮ್ಮರಂಗವಿಠ್ಠಲರಾಯನ ನೆರೆ ನಂಬಿರೋ || 11 ||

Harihararu sariyemba maruḷu janaru hariharara cariteyanu tiḷidu bhajisuvudu || pa ||

suraru munigaḷu kūḍi paradaivavārendu ariyabēkenderaḍu varadhanugaḷaharihararigittu saṅgarava māḍisi nōḍe muraharanu puraharana gelidudariyā || 1 ||

harana kurita sura mahatapava māḍalu meccivaravanavagittu hara baḷali ōḍibaralu hari bandavana karava śirada myālirisi khaḷa-nuruhi harananu kāyida katheya nīnariyā || 2 ||

dūrvāsarūpa haranambarīṣana munde garvavanu meresi jaḍeyanu kittiḍe sarvalōkadoḷavana cakranilalīyadire urvīśananu sāri uḷidanariyā || 3 ||

harananśa drōṇasutanu pāṇḍavā endu uravaṇisi nārāyaṇāsttravanu biḍalu hari bandu bēga tannastravanu tā seḷedu śaraṇāgatara kāyida katheyanariyā || 4 ||

naranārāyaṇaru badarikāśramadalire haranu hariyoḍane kadanavanu māḍe hari harana kaṇṭhavanu karadali piḍidu nūke koraḷa kappāda kathe kēḷi ariyā || 5 ||

hari surarigamr̥tavanu ereda rūpavanom’me hara nōḍuvenendu samprārthise parama mōhana rūpalāvaṇyavanu kaṇḍu hara maraḷugoṇḍa kathe kēḷi ariyā || 6 ||

hariya mom’mana bāṇāsuranu sereviḍiye garuḍavāhananāgi kr̥ṣṇa bandu harana dhuradali jayisi avana kiṅkarana sā-vira tōḷugaḷa tarida katheya nīnariyā || 7 ||

surataruva kittu hari suralōkadinda bare haranu hariyoḍane kadanavanu māḍe taraharisalāradōḍida katheya nīnom’me hiriyara mukhadi kēḷi nambu hariyā || 8 ||

harasutanu tapadinda hariya cakrava bēḍe parama haruṣadali cakravanīyalubharadinda dharisalārade cakravananduharanu bhaṅgitanādanendariyalā || 9 ||

rāvaṇāsura kumbhakarṇa narakādigaḷu śaivatapavanu māḍi varava paḍeye avarugaḷanu viṣṇu nararūpinindaridu dēvarkaḷanu kāyida katheya nīnariyā || 10 ||

gaṅgājanakana sanmaṅgala caritrregaḷa hiṅgadale kēḷi sukhisuva janarige bhaṅgavillada padavanittu salahuva nam’maraṅgaviṭhṭhalarāyana nere nambirō || 11 ||

 

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s