dasara padagalu · MADHWA · tulasi

Tulasi devi namisi beduve

ತುಳಸಿ ದೇವಿ ನಮಿಸಿ ಬೇಡುವೇ | ನಿಮ್ಮ ಪಾದಒಲುಮೆಯಿಂದ ಭಜಿಸಿ ಪಾಡುವೇ ||pa||

ಅಲವ ಬೋಧರ ಹೃದಯ ವಾಸ |
ಸುಲಭ ನಮ್ಮ ಹರಿಯ ರೂಪಫಲಿಸಿ ಎನ್ನ ಹೃದಯದಲ್ಲಿ |
ಗೆಲಿಸು ಎನ್ನ ಭವದ ತಾಪ ||.a.pa||

ಹರಿಯ ನಯನಧಾರೆ ಸಂಭವೇ | ಕಾಯೆ ತಾಯಿಸಿರಿಯ ರಮಣ ನಮಿತ ಪ್ರೀಯಳೇ ||
ವರ ಸುವರ್ಣ ಪುಷ್ಪವಮಿತ |
ಎರಮಿಸಿ ಬೇಡಿದಾರುಹರಿಯು ಒಪ್ಪ ನಿಮ್ಮದಳ |
ವಿರಹಿತವಾದ ಪೂಜೆಯನ್ನ ||1||

ಸರಸಿಜಾಕ್ಷಿ ನಿನ್ನ ಮೃತ್ತಿಕಾ | ಫಾಲದಲ್ಲಿಧರಿಸುವರ ಅಘಕೆ ಪಾವಕಾ ||
ಕರಣ ತೀರ್ಥಾದಿಗ |
ವರದಳಗಳ್ ದ್ವಿನವಗಳನ್ನಧರಿಪ ಜನರ ಭಿ್ಟ5ವಿತ್ತು |
ಘೋರ ಪಾಪವನ್ನು ಕಳೆವೆ ||2||

ಶ್ರೀರಮಣಿ ಆವಿಷ್ಟಯೇ | ನಮಿಪೆ ತಾಯೆಕರುಣಿಸೆನಗೆ ಸುಜನ ಸೇವಿತೇ ||
ಗುರುಗಳಂತರ್ಯಾಮಿಯಾದ |
ಗುರು ಗೋವಿಂದ ವಿಠಲಾನಚರಣ ವನಜ ತೋರಿ ಎನಗೆ |
ಹರಿಸು ಎನ್ನ ತ್ರಿವಿಧ ತಾಪ||3|

Tuḷasi dēvi namisi bēḍuvē | nim’ma pāda’olumeyinda bhajisi pāḍuvē ||pa|| 

alava bōdhara hr̥daya vāsa | sulabha nam’ma hariya rūpaphalisi enna hr̥dayadalli | gelisu enna bhavada tāpa ||.A.Pa|| 

hariya nayanadhāre sambhavē | kāye tāyisiriya ramaṇa namita prīyaḷē || vara suvarṇa puṣpavamita | eramisi bēḍidāruhariyu oppa nim’madaḷa | virahitavāda pūjeyanna ||1|| 

sarasijākṣi ninna mr̥ttikā | phāladallidharisuvara aghake pāvakā || karaṇa tīrthādiga | varadaḷagaḷ dvinavagaḷannadharipa janara bhiṭa5vittu | ghōra pāpavannu kaḷeve ||2|| 

śrīramaṇi āviṣṭayē | namipe tāyekaruṇisenage sujana sēvitē || gurugaḷantaryāmiyāda | guru gōvinda viṭhalānacaraṇa vanaja tōri enage | harisu enna trividha tāpa||3||

aarathi · dasara padagalu · MADHWA · tulasi

Tulasi deviya padake

ತುಳಸಿದೇವಿ ಪದಕೇ | ನಾರೇರು | ಬೆಳಗಿರಿ ಆರುತಿಯಾ ||pa||

ಬೆಳಗುವುದೂ ನಮ್ಮ | ಅಳಗಿರಿ ರಂಗನಲಲನೆ ಶ್ರೀ ತುಳಸಿಗೆ | ಕಲಿಮಲ ಹಾಗೆ ||a.pa||

ದಳಪ್ರತಿ ದಳದಲ್ಲಿ | ಶ್ರೀಹರಿ |
ನೆಲಸಿಹ ತಾನಲ್ಲಿಒಲಿಮೆಲಿ ಭಕುತರ |
ಹಲವು ಸೇವೆಗಳಿಗೊಲಿದು ಅಭೀಷ್ಟವ |
ಸಲಿಸುವ ದೇವಿಗೆ ||1||

ಶರದಿ ಮಥಿಸೆ ಅಮೃತ | ಕಲಶವ |
ಧರಿಸುತ ಧನ್ವಂತ್ರಿಬರಲು ನಯನದಿಂ |
ಮರುಳೆ ಆನಂದಕೆವರ ಬಿಂದೋದ್ಭವೆ |
ಹರಿ ಪ್ರಿಯೆ ತುಳಸೀ ||2||

ಜಾಂಬುವತಿಯು ದೇವಿ | ನಿನ್ನಲಿ |
ಇಂಬು ತೋರಿ ಇರಲುಅಂಬುಜಾಕ್ಷ |
ಗುರು ಗೋವಿಂದ ವಿಠಲನ |
ತುಂಬಿ ದ್ವೈಭವದಿ | ಸಂಭ್ರಮ ಸೇವಿಪ ||3||

Tuḷasidēvi padakē | nārēru | beḷagiri ārutiyā ||pa||

beḷaguvudū nam’ma | aḷagiri raṅganalalane śrī tuḷasige | kalimala hāge ||a.Pa||

daḷaprati daḷadalli | śrīhari |
nelasiha tānalli’olimeli bhakutara |
halavu sēvegaḷigolidu abhīṣṭava |
salisuva dēvige ||1||

śaradi mathise amr̥ta | kalaśava |
dharisuta dhanvantribaralu nayanadiṁ |
maruḷe ānandakevara bindōdbhave |
hari priye tuḷasī ||2||

jāmbuvatiyu dēvi | ninnali |
imbu tōri iralu’ambujākṣa |
guru gōvinda viṭhalana |
tumbi dvaibhavadi | sambhrama sēvipa ||3||

dasara padagalu · MADHWA · tulasi

Yenendu bannisuveno naanu

ಏನೆಂದು ಬಣ್ಣಿಸುವೆನೊ ನಾನು |
ಶ್ರೀನಾಥ ಪ್ರಿಯಳಾದ ಶ್ರೀ ತುಳಸಿ ಮಹಿಮೆಯನು ||pa||

ಜಲದಿ ಮಥನದಿ ಅಮೃತ ಕಲಶ ಬರೆಕಂಡು ಅತಿ |
ಜಲಜಾಂಬಕನ ಪ್ರೇಮಾಂಜಲ ಉದರಲು |
ಇಳಯೊಳದಿರಿಂದುದಿಸಿ ಬೆಳೆದು ನಿಂದಿರೆ ನೋಡಿ |
ಒಲಿದು ಕೋಮಲ ಮುಗುಳು ತಳೆದ ಶ್ರೀಹರಿ ತಾನು|1||

ಹರಿಯು ಧರಿಸಿದ ಕಂಡು ಸುರರೆಲ್ಲ ವಂದಿಸುತ |
ಶಿರದಲಾಂತರು ಪರಮ ಹರುಷದಿಂದ |
ಸಿರಿಸರಸ್ವತಿ ಗಿರಜೆ ನಿರುತ ನಿನ್ನಯ ವ್ರತದಿ |
ಧರೆಯೊಳಗೆ ತಮ್ಮ ತಮ್ಮ ಅರಸರೊಲಿಸಿದರೆಂದು ||2||

ನೋಡಿದರೆ ದುರಿತ ಕುಲ ಓಡುವವು ತನುವ ನೀ
ಡಾಡಿ ಜಲನೀಡಿ ಕೊಂಡಾಡಿ ನಿಂದು |
ಕೂಡೆ ಮೃತ್ತಿಕೆ ಫಣಿಗೆ ತೀಡಿದರೆ ಭಕುತಿಯಲಿ |
ಬೇಡಿದಿಷ್ಟಾರ್ಥ ಕೈಗೂಡಬಹುದಿಳೆಯೊಳಗೆ ||3||

ತುಲಸಿ ಭಕುತಿಲ್ಲದವ ಕಲಿವಂಶದನುಜನವ |
ತುಲಸಿ ಧರಿಸಿದ ತನುವು ಸಲೆಮುಕ್ತಿ ಮಂಟಪವು |
ತುಲಸಿ ಬೆಳೆಹದಿ ಮನೆಯು ಬಲಿದ ಪುಣ್ಯದ ಖಣಿಯು |
ತುಲಸಿ ಇಲ್ಲದ ಗೇಹ ಕಲುಷಾಲಯ||4||

ಮೂಲದಲಿ ಬ್ರಹ್ಮ ತಾ ನೀಲಕಂಠನು ನಡುವೆ |
ಮೇಲುತುದಿಯಲಿ ವಿಷ್ಣು ಲೋಲಾಡುವಾ |
ಸಾಲಕೊಂಬೆಗಳಲಿ ವಿಶಾಲದೇವತೆಗಳಿಹರು |
ತಾಳಿ ಪ್ರೇಮವನು ಮಹೀಪತಿ ನಂದನಾಜ್ಞೆಯಲಿ||5||

Ēnendu baṇṇisuveno nānu |
śrīnātha priyaḷāda śrī tuḷasi mahimeyanu ||pa||

jaladi mathanadi amr̥ta kalaśa barekaṇḍu ati |
jalajāmbakana prēmān̄jala udaralu |
iḷayoḷadirindudisi beḷedu nindire nōḍi |
olidu kōmala muguḷu taḷeda śrīhari tānu|1||

hariyu dharisida kaṇḍu surarella vandisuta |
śiradalāntaru parama haruṣadinda |
sirisarasvati giraje niruta ninnaya vratadi |
dhareyoḷage tam’ma tam’ma arasarolisidarendu ||2||

nōḍidare durita kula ōḍuvavu tanuva nī
ḍāḍi jalanīḍi koṇḍāḍi nindu |
kūḍe mr̥ttike phaṇige tīḍidare bhakutiyali |
bēḍidiṣṭārtha kaigūḍabahudiḷeyoḷage ||3||

tulasi bhakutilladava kalivanśadanujanava |
tulasi dharisida tanuvu salemukti maṇṭapavu |
tulasi beḷehadi maneyu balida puṇyada khaṇiyu |
tulasi illada gēha kaluṣālaya||4||

mūladali brahma tā nīlakaṇṭhanu naḍuve |
mēlutudiyali viṣṇu lōlāḍuvā |
sālakombegaḷali viśāladēvategaḷiharu |
tāḷi prēmavanu mahīpati nandanājñeyali||5||

dasara padagalu · MADHWA · pranesha dasaru · tulasi

namo namo sri tulasi

ನಮೋ ನಮೋ ಶ್ರೀ ತುಳಸಿ ।
ಪಾಹೀ ಪಾಹೀ ಕುಮತಿಯ ಪರಿಹರಿಸಿ । ।pa।|

ಅಮಿತ ಮಹಿಮೆ ಸದ್ಗುಣಗಳ ಪೂರ್ಣಿ ।
ಕಮಲೇಕ್ಷಣ ಮಧುಸೂಧನನರಸಿ । a.pa |

ಅಂದಿನ ಕಾಲದಲ್ಲಿ ಹರಿಪಾದ ವಂದಿಸಿ ಭಕುತಿಯಲಿ
ಅಂದದಿ ವರಪಡೆಗಿಂದಿಗೂ ಸರ್ವರ
ಮಂದಿರದೊಳಗೆ ಪೂಜೆಯಗೊಳುತಲಿ ।|1||

ನಾ ನಂಬಿದೆ ನಿನ್ನ ದೇವತಾ ಮಾನಿನಿ ಮಣಿ ಇನ್ನಾ
ಹೀನದಿ ಎಣಿಸದೇ ಕರುಣಿಸಿ ಸರ್ವರ
ಪ್ರಾಣೇಶ ವಿಠಲನ ಧ್ಯಾನದೊಳಿಡಿಸಿ । ।2||

Namō namō śrī tuḷasi।
pāhī pāhī kumatiya pariharisi। ।pa।|

amita mahime sadguṇagaḷa pūrṇi।
kamalēkṣaṇa madhusūdhananarasi। a.Pa |

andina kāladalli haripāda vandisi bhakutiyali
andadi varapaḍegindigū sarvara
mandiradoḷage pūjeyagoḷutali।|1||

nā nambide ninna dēvatā mānini maṇi innā
hīnadi eṇisadē karuṇisi sarvara
prāṇēśa viṭhalana dhyānadoḷiḍisi। ।2||

dasara padagalu · MADHWA · purandara dasaru · tulasi

Elamma tulasi komalaveni

ಏಳಮ್ಮಾ ತುಳಸಿ ಕೋಮಲವೇಣಿ ನೀಲವರ್ಣನ ರಾಣಿ ನಿತ್ಯ ಕಲ್ಯಾಣಿ||ಪ||

ಏಳುತಲೆದ್ದು ಶ್ರೀತುಳಸಿಗೆ ಕೈ ಮುಗಿದು
ಏಳು ಪ್ರದಕ್ಷಿಣೆ ಹಾಕುತಲಿ
ಏಳು ಜನ್ಮದ ಪಾಪ ಕಳೆವಂಥ ತಾಯೆ ನೀ||೧||

ಉಟ್ಟ ಪೀತಾಂಬರ ಹೃದಯದೊಳ್ ಕೌಸ್ತಭ
ತೊಟ್ಟ ಮುತ್ತಿನ ಅಂಗಿ ತೋಳ ಬಾಪುರಿಯು
ಇಟ್ಟ ದ್ವಾದಶನಾಮ ನೊಸಲಲ್ಲೆ ತಿಲಕವು
ಲಕ್ಷ್ಮೀರಮಣನು ನಿನಗೊಪ್ಪಿದನಲ್ಲ ತುಳಸಿ||೨||

ಎಡದ ಕೈಯಲ್ಲಿ ಶಂಖ ಬಲದ ಕೈಯಲ್ಲಿ ಚಕ್ರ
ಎಡಬಲಕೊಪ್ಪುವ ಛತ್ರಚಾಮರವು
ಡಿದ ಮಲ್ಲಿಗೆ ಹೂಮುಡಿಯಿಂದಲುದುರುತ
ಒಡೆಯ ಶ್ರೀ ಪುರಂದರವಿಠಲನ ರಾಣೀ||೩||

Ēḷam’mā tuḷasi kōmalavēṇi nīlavarṇana rāṇi nitya kalyāṇi||pa||

ēḷutaleddu śrītuḷasige kai mugidu
ēḷu pradakṣiṇe hākutali
ēḷu janmada pāpa kaḷevantha tāye nī||1||

uṭṭa pītāmbara hr̥dayadoḷ kaustabha
toṭṭa muttina aṅgi tōḷa bāpuriyu
iṭṭa dvādaśanāma nosalalle tilakavu
lakṣmīramaṇanu ninagoppidanalla tuḷasi||2||

eḍada kaiyalli śaṅkha balada kaiyalli cakra
eḍabalakoppuva chatracāmaravu
ḍida mallige hūmuḍiyindaluduruta
oḍeya śrī purandaraviṭhalana rāṇī||3||

 

dasara padagalu · MADHWA · mangalam · tulasi

Tulasi devige Jaya mangalam

ತುಳಸೀ ದೇವಿಗೆ ಜಯ ಮಂಗಳಂ ।। PA ।।

ಜಗನ್ಮಾತೆಯಾಗಿ ಶ್ರೀ ಹರಿಯ । ಪ್ರೀತಿಪಾತ್ರ ।
ಳಾಗಿ ಮೆರೆವ ।। A.pa।।

ಮಂದರ ಗಿರಿಧರನಾ
ನಂದ ಬಾಷ್ಪದಿಂದಲಿ ವ-
ಸುಂಧರೆಯೊಳುದಿಸಿ ಬುಧ ।
ಮಂದರ ತರುವೆಂದೆನಿಸಿದ ।। 1 ।।

ಸರಸ ಬುದ್ಧಿಯಿಂದ ಹರಿ
ಚರಣನಾಶ್ರಯಿಸಿ ।
ದರ ಬ್ರಹ್ಮಾದ್ಯರುಗಳಿಂ ಬಹುಮಾನ ।
ಪರಸ್ಪರೆಯದಿಂದಲರುವಾ ।। 2 ।।

ಕಮಲೇಶವಿಠ್ಠಲರಾಯನಾ ।
ಸಮವಾಗದೆ ಮೇಲೆ ಮೆರೆದು ।
ಮಮತೆಯಿಂದಿರುವಳು ।
ಗಾಮಿಕ್ಯಾಡೊ ವನಮಾಲೆಯಾವ ।। 3।।

Tuḷasī dēvige jaya maṅgaḷaṁ।। PA।।

jaganmāteyāgi śrī hariya। prītipātra।
ḷāgi mereva।। A.Pa।।

mandara giridharanā
nanda bāṣpadindali va-
sundhareyoḷudisi budha।
mandara taruvendenisida।। 1।।

sarasa bud’dhiyinda hari
caraṇanāśrayisi।
dara brahmādyarugaḷiṁ bahumāna।
paraspareyadindalaruvā।। 2।।

kamalēśaviṭhṭhalarāyanā।
samavāgade mēle meredu।
mamateyindiruvaḷu।
gāmikyāḍo vanamāleyāva।। 3।।

MADHWA · tulasi · tulasi vivaha

Ashta nama sthava Tulasi/Eight names of Tulasi

  1. ವೃಂದಾವನಿ
  2. ವೃಂದ
  3. ವಿಶ್ವಪೂಜಿತಾ
  4. ಪುಷ್ಪಸಾರ
  5. ನಂದಿನಿ
  6. ಕೃಷ್ಣ ಜೀವನಿ
  7. ವಿಶ್ವ ಪಾವನಿ
  8. ತುಳಸಿ

Anyone who chant this 8 names of Tulasi, will get the same results as performing Ashwamedhaya yaga

  1. VRINDAVANI – One who first manifested in Vrindavan.
  2. VRINDA – The goddess of all plant and trees ( even if one Tulasi plant is present in a forest it can be called Vrindavana.)
  3. VISHVAPUJITA – One whom the whole universe worships.
  4. PUSHPASARA – The topmost of all flowers, without whom Krishna does not like to look upon other flowers.
  5. NANDINI – Seeing whom gives unlimited bliss to the devotees.
  6. KRISHNA-JIVANI – The life of Sri Krishna.
  7. VISHVA-PAVANI – One who purifies the three worlds.
  8. TULASI – One who has no comparison.

Chanting this 8 names everyday yields more punya and protects you from all dangers.

MADHWA · POOJA · tulasi

Detailed Tulasi pooja procedure

I have earlier posted blog on importance of tulasi and quick pooja method : daily tulasi pooja with slokas

This post contains detailed pooja procedure (Shodasopachara pooja) in Kannada and English as well

ಸಂಕಲ್ಪ
ಶುಭೇ ಶೋಭನೇ ಮುಹೂರ್ತೇ ವಿಷ್ಣೋರಾಜ್ಞಯಾ ಪ್ರವರ್ತಮಾನಸ್ಯ ಆದ್ಯ ಬ್ರಹ್ಮಣಃ ದ್ವಿತೀಯಪರಾರ್ಧೆ ಶ್ರೀಶ್ವೇತವರಾಹಕಲ್ಪೇ ವೈವಸ್ವತಮನ್ವಂತರೇ ಅಷ್ಟಾವಿಂಶತಿತಮೇ ಕಲಿಯುಗೇ ಪ್ರಥಮಪಾದೇ ಭಾರತವರ್ಷೇ ಭರತಖಂಡೇ ಮೇರೊಃ ದಕ್ಷಿಣಪಾರ್ಶ್ವೇ ದಂಡಕಾರಣ್ಯೇ ಗೋದಾವರ್ಯಾಃ ದಕ್ಷಿಣೇತೀರೇ ಶಾಲಿವಾಹನಶಕೇ ಬೌದ್ಧಾವತಾರೇ ರಾಮಕ್ಷೇತ್ರೇ ಅಸ್ಮಿನ್ ವರ್ತಮಾನೇ ಚಾಂದ್ರಮಾನೇನ () ಸಂವತ್ಸರೇ, (ದಕ್ಷಿಣಾಯನೇ), (), ()ಮಾಸೇ, ( )ಪಕ್ಷೇ, () ಶುಭತಿಥೌ ()ವಾಸರೇ ()ಕಾಲೇ ಶುಭನಕ್ಷತ್ರೇ ಶುಭಯೋಗೇ ಶುಭಕರಣೇ ಏವಂಗುಣ ವಿಶೇಷಣ ವಿಶಿಷ್ಟಾಯಾಂ ಶುಭತಿಥೌ ತುಲಸ್ಯಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ದಾಮೋದರಪ್ರೇರಣಯಾ ಶ್ರೀ ದಾಮೋದರ ಪ್ರೀತ್ಯರ್ಥಂ ತುಲಸೀ ಪೂಜಾಖ್ಯಂ ಕರ್ಮ ಕರಿಷ್ಯೆ ||

sankalpa

SuBE SOBanE muhUrtE viShNOrAj~jayA pravartamAnasya Adya brahmaNaH dvitIyaparArdhe SrISvEtavarAhakalpE vaivasvatamanvantarE aShTAvinSatitamE kaliyugE prathamapAdE BAratavarShE BarataKanDE mEroH dakShiNapArSvE danDakAraNyE gOdAvaryAH dakShiNEtIrE SAlivAhanaSakE bauddhAvatArE rAmakShEtrE asmin vartamAnE cAndramAnEna () saMvatsarE, (dakShiNAyanE), (), ()mAsE, ( )pakShE, () SuBatithau ()vAsarE ()kAlE SuBanakShatrE SuBayOgE SuBakaraNE EvanguNa viSEShaNa viSiShTAyAM SuBatithau tulasyaMtargata BAratIramaNa muKyaprANAntargata SrI dAmOdaraprEraNayA SrI dAmOdara prItyarthaM tulasI pUjAKyaM karma kariShye ||

ಧ್ಯಾನಮ್
ಧ್ಯಾಯಾಮಿ ತುಲಸೀಂ ದೇವೀಂ ಶ್ಯಾಮಾಂ ಕಮಲಲೋಚನಾಮ್ |
ಪ್ರಸನ್ನಾಂ ಪದ್ಮಕಲ್ಹಾರವರಾಭಯಚತುರ್ಭುಜಾಮ್ ||
ಕಿರೀಟಹಾರಕೇಯೂರಕುಂಡಲಾದಿ ವಿಭೂಷಿತಾಮ್ |
ಧವಲಾಂಶುಕಸಂಯುಕ್ತಾಂ ಪದ್ಮಾಸನನಿಷೇದುಷೀಮ್ ||

ದೇವಿ ತ್ರಿಲೋಕ ಜನನೀ ಸರ್ವಭೂತೈಕ ಪಾವನೀ |
ಆಗಚ್ಛ ಭಗವತ್ಯತ್ರ ಪ್ರಸೀದ ತುಲಸೀ ಪ್ರಿಯೇ ||
ಶ್ರೀತುಲಸ್ಯೈ ನಮಃ | ಧ್ಯಾಯಾಮಿ, ಧ್ಯಾನಂ ಸಮರ್ಪಯಾಮಿ ||
(ಪುಷ್ಪಾಕ್ಷತೆಗಳನ್ನು ಸಮರ್ಪಿಸುವುದು)

dhyAnam

dhyAyAmi tulasIM dEvIM SyAmAM kamalalOcanAm |
prasannAM padmakalhAravarABayacaturBujAm ||
kirITahArakEyUrakunDalAdi viBUShitAm |
dhavalAMSukasaMyuktAM padmAsananiShEduShIm ||

dEvi trilOka jananI sarvaBUtaika pAvanI |
AgacCa Bagavatyatra prasIda tulasI priyE ||
SrItulasyai namaH | dhyAyAmi, dhyAnaM samarpayAmi ||
(puShpAkShategaLannu samarpisuvudu)

ಆವಾಹನಮ್
ಶ್ರೀತುಲಸೀದೇವಿಯನ್ನು ಪೂಜಾಸ್ಥಳಕ್ಕೆ ಬರುವಂತೆ ಬೇಡಿಕೊಳ್ಳುವುದು.
ತುಲಸಿ ಶ್ರೀಸಖಿ ಶುಭೇ ಪಾಪಹಾರಿಣಿ ಪುಣ್ಯದೇ |
ಆವಾಹಯಾಮಿ ತ್ವಾಂ ದೇವಿ ನಾರಾಯಣಮನಃಪ್ರಿಯೇ ||

ಕೃಷ್ಣಾನಂದಾಶ್ರುಸಂಭೂತೇ ವರದೇ ತುಲಸೀ ಸ್ವಯಮ್ |
ತ್ವಾಮದ್ಯಾಹಂ ಭಜಾಮೀಹ ಕಮಲಾಪತಿವಲ್ಲಭೇ ||
ಶ್ರೀತುಲಸ್ಯೈ ನಮಃ| ಆವಾಹಯಾಮಿ ಆವಾಹನಂ ಸಮರ್ಪಯಾಮಿ||
(ಮಂತ್ರಾಕ್ಷತೆಗಳನ್ನು ಸಮರ್ಪಿಸುವುದು)

AvAhanam
SrItulasIdEviyannu pUjAsthaLakke baruvaMte bEDikoLLuvudu.
tulasi SrIsaKi SuBE pApahAriNi puNyadE |
AvAhayAmi tvAM dEvi nArAyaNamanaHpriyE ||

kRuShNAnandASrusaMBUtE varadE tulasI svayam |
tvAmadyAhaM BajAmIha kamalApativallaBE ||
SrItulasyai namaH| AvAhayAmi AvAhanaM samarpayAmi||
(mantrAkShategaLannu samarpisuvudu)

ಆಸನಮ್
ಪದ್ಮನಾಭಪ್ರಿಯೇ ದೇವಿ ಪದ್ಮಮೇತನ್ಮಯಾಽರ್ಪಿತಮ್ |
ಸಂಗೃಹಾಣಾಸನಂ ಶ್ಯಾಮೇ ವರದೇ ವರವರ್ಣಿನಿ ||
ಶ್ರೀತುಲಸ್ಯೈ ನಮಃ | ಆಸನಂ ಸಮರ್ಪಯಾಮಿ ||
(ಅಕ್ಷತೆಕಾಳು ಸಮರ್ಪಿಸುವುದು)

Asanam
padmanABapriyE dEvi padmamEtanmayA&rpitam |
sangRuhANAsanaM SyAmE varadE varavarNini ||
SrItulasyai namaH | AsanaM samarpayAmi ||
(akShatekALu samarpisuvudu)

ಅರ್ಘ್ಯಮ್
ಕ್ಷೀರೋದಧಿ ಸಮುತ್ಪನ್ನೇ ದೇವಾದಿಮುನಿಪೂಜಿತೇ |
ವಿಷ್ಣುಪ್ರಿಯೇ ಮಯಾ ದತ್ತಂ ಗೃಹಾಣಾರ್ಘ್ಯಂ ನಮೋಽಸ್ತುತೇ |
ಶ್ರೀತುಲಸ್ಯೈ ನಮಃ | ಹಸ್ತಯೋಃ ಅರ್ಘ್ಯಂ ಸಮರ್ಪಯಾಮಿ |
(ತುಲಸಿಗೆ ಮಂತ್ರಾಕ್ಷತೋದಕವನ್ನು ನೀಡಬೇಕು)

arGyam
kShIrOdadhi samutpannE dEvAdimunipUjitE |
viShNupriyE mayA dattaM gRuhANArGyaM namO&stutE |
SrItulasyai namaH | hastayOH arGyaM samarpayAmi |
(tulasige mantrAkShatOdakavannu nIDabEku)

ಪಾದ್ಯಮ್
ವೃಂದಾವನಸ್ಥಿತೇ ದೇವಿ ವೃಂದಾರಕ ಸುಪೂಜಿತೇ |
ಇದಂ ಪಾದ್ಯಂ ಗೃಹಾಣ ತ್ವಂ ದೇವಿ ದೈತ್ಯಾಂತಕಪ್ರಿಯೇ ||
(ಕಲಶದ ನೀರನ್ನು ಉದ್ಧರಣೆಯಿಂದ ಎತ್ತಿಕೊಂಡು ದೇವಿಗೆ ತೋರಿಸಿ ಅರ್ಘ್ಯಪಾತ್ರೆಗೆ ಬಿಡಬೇಕು)

pAdyam
vRundAvanasthitE dEvi vRuMdAraka supUjitE |
idaM pAdyaM gRuhANa tvaM dEvi daityAMtakapriyE ||
(kalaSada nIrannu uddharaNeyiMda ettikoMDu dEvige tOrisi arGyapAtrege biDabEku)

ಆಚಮನಮ್
ಏಲಾ ಲವಂಗ ಕರ್ಪೂರ ಚಂದನಾದ್ಯೈಃ ಸುವಾಸಿತಮ್ |
ಪಾನೀಯಂ ತೇ ಮಯಾನೀತಂ ಸಮ್ಯಗಾಚಮನೀಯಕಮ್ ||
ಶ್ರೀತುಲಸ್ಯೈ ನಮಃ | ಮುಖೇ ಆಚಮನೀಯಂ ಸಮರ್ಪಯಾಮಿ |
(ಕಲಶೋದಕವನ್ನು ತುಳಸಿಗೆ ತೋರಿಸಿ ಅರ್ಘ್ಯಪಾತ್ರೆಗೆ ಬಿಡಬೇಕು)

Acamanam
ElA lavanga karpUra candanAdyaiH suvAsitam |
pAnIyaM tE mayAnItaM samyagAcamanIyakam ||
SrItulasyai namaH | muKE AcamanIyaM samarpayAmi |
(kalaSOdakavannu tuLasige tOrisi arGyapAtrege biDabEku)

ಮಧುಪರ್ಕಃ
ದಾಮೋದರಪ್ರಿಯೇ ದೇವಿ ದಧಿಕ್ಷೌರಸಮನ್ವಿತಮ್ |
ಮಧುಪರ್ಕಂ ಗೃಹಾಣ ತ್ವಂ ಮಯಾ ದತ್ತಂ ಸುರೇಶ್ವರಿ ||
ಶ್ರೀತುಲಸ್ಯೈ ನಮಃ | ಮಧುಪರ್ಕಂ ಸಮರ್ಪಯಾಮಿ |
(ಮೊಸರು, ಜೇನು, ತುಪ್ಪಗಳನ್ನು ಹೂವಿನಿಂದ ಮುಟ್ಟಿ ಅರ್ಪಣೆ ಮಾಡಬೇಕು)

madhuparkaH
dAmOdarapriyE dEvi dadhikShaurasamanvitam |
madhuparkaM gRuhANa tvaM mayA dattaM surESvari ||
SrItulasyai namaH | madhuparkaM samarpayAmi |
(mosaru, jEnu, tuppagaLannu hUvininda muTTi arpaNe mADabEku)

ಪುನರಾಚಮನಮ್
ಸುರಾಸುರ ಪ್ರಪೂಜ್ಯಾಯೈ ತುಲಸ್ಯೈ ತೇ ನಮೋ ನಮಃ |
ಪುನರಾಚಮನಂ ದೇವಿ ಗೃಹಾಣ ವರದಾ ಭವ ||
ಶ್ರೀತುಲಸ್ಯೈ ನಮಃ | ಪುನರಾಚಮನಂ ಸಮರ್ಪಯಾಮಿ |
ಮೀಸಲು ನೀರನ್ನು ತುಳಸಿಗೆ ತೋರಿಸಿ ಅರ್ಘ್ಯಪಾತ್ರೆಗೆ ಬಿಡಬೇಕು)

punarAcamanam
surAsura prapUjyAyai tulasyai tE namO namaH |
punarAcamanaM dEvi gRuhANa varadA Bava ||
SrItulasyai namaH | punarAcamanaM samarpayAmi |
mIsalu nIrannu tuLasige tOrisi arGyapAtrege biDabEku)

ಸ್ನಾನಮ್
ಗಂಗಾದಿಭ್ಯೋ ನದೀಭ್ಯಶ್ಚ ಸಮಾನೀತಮಿದಂ ಜಲಮ್|
ಸ್ನಾನಾರ್ಥಂ ತುಲಸಿ ಸ್ವಚ್ಚಂ ಪ್ರೀತ್ಯೈತತ್ ಪ್ರತಿಗೃಹ್ಯತಾಮ್||
ಶ್ರೀತುಲಸ್ಯೈ ನಮಃ| ಸ್ನಾನಂ ಸಮರ್ಪಯಾಮಿ|
(ಕಲಶದ ನೀರನ್ನು ಉದ್ಧರಣೆಯಿಂದ ಎತ್ತಿಕೊಂಡು ದೇವಿಗೆ ತೋರಿಸಿ ಅರ್ಘ್ಯಪಾತ್ರೆಗೆ ಬಿಡಬೇಕು)

snAnam
gaMgAdiByO nadIByaSca samAnItamidaM jalam|
snAnArthaM tulasi svaccaM prItyaitat pratigRuhyatAm||
SrItulasyai namaH| snAnaM samarpayAmi|
(kalaSada nIrannu uddharaNeyiMda ettikoMDu dEvige tOrisi arGyapAtrege biDabEku)

ವಸ್ತ್ರಮ್
ತುಲಸ್ಯಮೃತಜನ್ಮಾಸಿ ಸದಾ ತ್ವಂ ಕೇಶವಪ್ರಿಯೇ |
ವಸ್ತ್ರಂ ಗೃಹಾಣ ದೇವೇಡ್ಯೇ ದೇವಾಂಗಸದೃಶಂ ನವಮ್||
ಶ್ರೀತುಲಸ್ಯೈ ನಮಃ| ವಸ್ತ್ರಯುಗ್ಮಂ ಸಮರ್ಪಯಾಮಿ|
(ಅಕ್ಷತೆಕಾಳು ಸಮರ್ಪಿಸುವುದು)

vastram
tulasyamRutajanmAsi sadA tvaM kESavapriyE |
vastraM gRuhANa dEvEDyE dEvAMgasadRuSaM navam||
SrItulasyai namaH| vastrayugmaM samarpayAmi|
(akShatekALu samarpisuvudu)

ಆಭರಣಮ್

ನಾನಾರತ್ನವಿಚಿತ್ರಾಡ್ಯಾನ್ ವಲಯಾನ್ ಸುಮನೋಹರಾನ್|
ಅಲಂಕಾರಾನ್ ಗೃಹಾಣ ತ್ವಂ ಮಮಾಭೀಷ್ಟಪ್ರದಾ ಭವ||
ಶ್ರೀತುಲಸ್ಯೈ ನಮಃ| ಆಭರಣಾನಿ ಸಮರ್ಪಯಾಮಿ|
(ಅಕ್ಷತೆಕಾಳು ಸಮರ್ಪಿಸುವುದು)

ABaraNam
nAnAratnavicitrADyAn valayAn sumanOharAn|
alankArAn gRuhANa tvaM mamABIShTapradA Bava||
SrItulasyai namaH| ABaraNAni samarpayAmi|
(akShatekALu samarpisuvudu)

ಕುಂಕುಮಾದಿ
ಕುಂಕುಮಂ ತಿಲಕಂ ಚಾರು ರಕ್ತವರ್ಣಂ ಸುಶೋಭನಮ್|
ಮಂಗಲಂ ಮಂಗಲೇ ದೇವಿ ಫಾಲಧಾರ‍್ಯಂ ದದಾಮಿ ತೇ||
ಶ್ರೀತುಲಸ್ಯೈ ನಮಃ| ಹರಿದ್ರಾಕುಂಕುಮಾದಿ ಸಮರ್ಪಯಾಮಿ|
(ಅರಶಿನ, ಕುಂಕುಮಗಳನ್ನು ಸಮರ್ಪಿಸುವುದು)

kuMkumAdi
kuMkumaM tilakaM cAru raktavarNaM suSOBanam|
mamgalaM maMgalE dEvi PAladhAr^yaM dadAmi tE||
SrItulasyai namaH| haridrAkuMkumAdi samarpayAmi|
(araSina, kuMkumagaLannu samarpisuvudu)

ಗಂಧಮ್
ಗಂಧಂ ಚಂದನಸಂಯುಕ್ತಂ ಕುಂಕುಮಾದಿವಿಮಿಶ್ರಿತಮ್|
ಗೃಹಾಣ ದೇವಿ ತುಲಸಿ ಅಲಂಕಾರಾರ್ಥಮಾಹೃತಮ್ ||
ಶ್ರೀತುಲಸ್ಯೈ ನಮಃ| ಗಂಧಂ ಸಮರ್ಪಯಾಮಿ| ಅಕ್ಷತಾನ್ ಸಮರ್ಪಯಾಮಿ|
(ಗಂಧ, ಅಕ್ಷತೆಗಳನ್ನು ಸಮರ್ಪಿಸುವುದು)

gandham
gaMdhaM caMdanasaMyuktaM kuMkumAdivimiSritam|
gRuhANa dEvi tulasi alaMkArArthamAhRutam ||
SrItulasyai namaH| gandhaM samarpayAmi| akShatAn samarpayAmi|
(gandha, akShategaLannu samarpisuvudu)

ಪುಷ್ಪಮ್
ಮಾಲತೀ ಬಿಲ್ವ ಮಂದಾರ ಕುಂದಾದಿ ಸುಮನೋಹರಮ್|
ಪುಷ್ಪಂ ಗೃಹಾಣ ದೇವೇಶಿ ಸರ್ವಮಂಗಲದಾ ಭವ ||
ಶ್ರೀತುಲಸ್ಯೈ ನಮಃ| ನಾನಾ ಪರಿಮಲ ಪುಷ್ಪಾಣಿ ಸಮರ್ಪಯಾಮಿ|
(ಹೂವುಗಳನ್ನು ಸಮರ್ಪಿಸುವುದು)

puShpam
mAlatI bilva maMdAra kuMdAdi sumanOharam|
puShpaM gRuhANa dEvESi sarvamaMgaladA Bava ||
SrItulasyai namaH| nAnA parimala puShpANi samarpayAmi|
(hUvugaLannu samarpisuvudu)

ಅರ್ಚನೆ

• ತುಲಸ್ಯೈ ನಮಃ |
• ವಿಷ್ಣುಪತ್ನ್ಯೈ ನಮಃ |
• ಅಘಹಂತ್ರ್ಯೈ ನಮಃ |
• ಲೋಕವಂದಿತಾಯೈ ನಮಃ |
• ರಂಭೋರ್ವೈ ನಮಃ |
• ಪೀತಾಂಬರಧಾರಿಣ್ಯೈ ನಮಃ |
• ಕ್ಷೀರಾಬ್ಧಿತನಯಾಯೈ ನಮಃ |
• ದಾಮೋದರಪ್ರಿಯಾಯೈ ನಮಃ |
• ಕುಂಭಸ್ತನ್ಯೈ ನಮಃ |
• ಲೋಕಜನನ್ಯೈ ನಮಃ |
• ಸರ್ವಾಭರಣಭೂಷಿತಾಯೈ ನಮಃ |
• ಸುಮುಖಾಯೈ ನಮಃ|
• ಬಿಂಬೋಷ್ಠೈ ನಮಃ|
• ಸುನಾಸಿಕಾಯೈನಮಃ|
• ಉತ್ಪಲಾಕ್ಷ್ಯೈ ನಮಃ|
• ತಾಟಂಕಧಾರಿಣ್ಯೈ ನಮಃ|
• ರಮಾಯೈನಮಃ|
• ಇಂದುಸೋದರ್ಯೈ ನಮಃ |
• ತುಲಸ್ಯೈ ನಮಃ
(ಹೂವುಗಳನ್ನು ಸಮರ್ಪಿಸುವುದು)

archane

• tulasyai namaH |
• viShNupatnyai namaH |
• aGahntryai namaH |
• lOkavanditAyai namaH |
• raMBOrvai namaH |
• pItAMbaradhAriNyai namaH |
• kShIrAbdhitanayAyai namaH |
• dAmOdarapriyAyai namaH |
• kuMBastanyai namaH |
• lOkajananyai namaH |
• sarvABaraNaBUShitAyai namaH |
• sumuKAyai namaH|
• biMbOShThai namaH|
• sunAsikAyainamaH|
• utpalAkShyai namaH|
• tATankadhAriNyai namaH|
• ramAyainamaH|
• indusOdaryai namaH |
• tulasyai namaH
(hUvugaLannu samarpisuvudu)

ಧೂಪ
ವನಸ್ಪತಿರಸೋತ್ಪನ್ನೋ ಗಂಧಾಡ್ಯೋ ಧೂಪ ಉತ್ತಮ:|
ಆಘ್ರೇಯಃ ಸರ್ವದೇವಾನಾಂ ಧೂಪೋಽಯಂ ಪ್ರತಿಗೃಹ್ಯತಾಮ್||
ಶ್ರೀತುಲಸ್ಯೈ ನಮಃ| ಧೂಪಮಾಘ್ರಪಯಾಮಿ|

dhUpa
vanaspatirasOtpannO gaMdhADyO dhUpa uttama:|
AGrEyaH sarvadEvAnAM dhUpO&yaM pratigRuhyatAm||
SrItulasyai namaH| dhUpamAGrapayAmi|

ದೀಪ
ಸಾಜ್ಯಂ ತ್ರಿವರ್ತಿಸಂಯುಕ್ತಂ ವಹ್ನಿನಾ ಯೋಜಿತಂ ಮಯಾ|
ದೀಪಂ ಗೃಹಾಣ ದೇವೇಶಿ ಸರ್ವಮಂಗಲದಾ ಭವ ||
ಶ್ರೀತುಲಸ್ಯೈ ನಮಃ| ದೀಪಂ ದರ್ಶಯಾಮಿ|

dIpa
sAjyaM trivartisaMyuktaM vahninA yOjitaM mayA|
dIpaM gRuhANa dEvESi sarvamaMgaladA Bava ||
SrItulasyai namaH| dIpaM darSayAmi|

ನೈವೇದ್ಯಮ್
ನೈವೇದ್ಯಂ ಷಡ್ರಸೋಪೇತಂ ನಾನಾ ಲಡ್ಡುಕಮಿಶ್ರಿತಂ |
ನಾನಾಭಕ್ಷ್ಯಫಲೋಪೇತಂ ಗೃಹಾಣಾಭೀಷ್ಟದಾಯಿನಿ ||
ಶ್ರೀತುಲಸ್ಯೈ ನಮಃ | ನೈವೇದ್ಯಂ ಸಮರ್ಪಯಾಮಿ ||
(ಪರಮಾತ್ಮನಿಗೆ, ಲಕ್ಷ್ಮೀದೇವಿಗೆ ನೈವೇದ್ಯ ಮಾಡಿ ನಂತರ ತುಲಸಿಗೆ ನಿವೇದನ ಮಾಡಬೇಕು)

naivEdyam
naivEdyaM ShaDrasOpEtaM nAnA laDDukamiSritaM |
nAnABakShyaPalOpEtaM gRuhANABIShTadAyini ||
SrItulasyai namaH | naivEdyaM samarpayAmi ||
(paramAtmanige, lakShmIdEvige naivEdya mADi naMtara tulasige nivEdana mADabEku)

ಮಂಗಲನೀರಾಜನಮ್
ನೀರಾಜನಂ ಸುಮಾಂಗಲ್ಯಂ ಕರ್ಪೂರೇಣ ಸಮನ್ವಿತಮ್ |
ವಹ್ನಿಚಂದ್ರಾರ್ಕಸದೃಶಂ ಗೃಹಾಣ ದುರಿತಾಪಹೇ ||
ಶ್ರೀತುಲಸ್ಯೈ ನಮಃ | ಮಹಾನೀರಾಜನಂ ಸಮರ್ಪಯಾಮಿ ||
(ಮಂಗಳಾರತಿ ಮಾಡುವುದು) (ಆರತಿ ಹಾಡನ್ನು ಹೇಳಬಹುದು)

maMgalanIrAjanam
nIrAjanaM sumAngalyaM karpUrENa samanvitam |
vahnicandrArkasadRuSaM gRuhANa duritApahE ||
SrItulasyai namaH | mahAnIrAjanaM samarpayAmi ||
(mangaLArati mADuvudu) (Arati hADannu hELabahudu)

ಮಂತ್ರಪುಷ್ಪಾಂಜಲಿ
ನಮಸ್ತೇ ಸರ್ವಲೋಕಾನಾಂ ಜನನ್ಯೈ ಪುಣ್ಯಮೂರ್ತಯೇ |
ನಮಸ್ತೇ ದೇವಿ ಕಲ್ಯಾಣಿ ನಮಸ್ತೇ ಮುನಿಪೂಜಿತೇ ||
ತುಲಸ್ಯೈ ನಮಃ | ಮಂತ್ರಪುಷ್ಪಾಂಜಲಿಂ ಸಮರ್ಪಯಾಮಿ ||
(ಮಂತ್ರಾಕ್ಷತೆ-ಹೂಗಳನ್ನು ಹಿಡಿದುಕೊಂಡು ಮಂತ್ರ ಹೇಳಿ ಸಮರ್ಪಿಸಿ)

mantrapuShpAnjali
namastE sarvalOkAnAM jananyai puNyamUrtayE |
namastE dEvi kalyANi namastE munipUjitE ||
tulasyai namaH | mantrapuShpAnjaliM samarpayAmi ||
(mantrAkShate-hUgaLannu hiDidukonDu maMtra hELi samarpisi)

ರಾಜೋಪಚಾರಪೂಜಾ
ಶ್ರೀತುಲಸ್ಯೈ ನಮಃ |
ಛತ್ರಚಾಮರವ್ಯಜನದರ್ಪಣನೃತ್ಯಗೀತವಾದ್ಯಾಂದೋಲಿಕಾದಿ
ಸಮಸ್ತರಾಜೋಪಚಾರಾನ್ ಸಮರ್ಪಯಾಮಿ |
(ಮಂತ್ರಾಕ್ಷತೆ-ಹೂಗಳನ್ನು ಸಮರ್ಪಿಸಿ)

rAjOpacArapUjA
SrItulasyai namaH |
CatracAmaravyajanadarpaNanRutyagItavAdyAndOlikAdi
samastarAjOpacArAn samarpayAmi |
(maMtrAkShate-hUgaLannu samarpisi)

ನಮಸ್ಕಾರ
ನಮಃ ತುಲಸೀ ಕಲ್ಯಾಣಿ ನಮೋ ವಿಷ್ಣುಪ್ರಿಯೇ ಶುಭೇ |
ನಮೋ ಮೋಕ್ಷಪ್ರದೇ ದೇವಿ ನಮಃ ಸಂಪತ್ಪ್ರದಾಯಿಕೇ ||

ಪ್ರಸೀದ ತುಲಸಿದೇವಿ ಪ್ರಸೀದ ಹರಿವಲ್ಲಭೇ
ಕ್ಷೀರೋದಮಥನೋದ್ಭೂತೇ ತುಲಸಿ ತ್ವಾಂ ನಮಾಮ್ಯಹಮ್||

ಯನ್ಮೂಲೇ ಸರ್ವತೀರ್ಥಾನಿ ಯನ್ಮಧ್ಯೇ ಸರ್ವದೇವತಾಃ |
ಯದಗ್ರೇ ಸರ್ವವೇದಾಶ್ಚ ತುಲಸಿ ತ್ವಾಂ ನಮಾಮ್ಯಹಮ್ ||

ಶ್ರೀತುಲಸ್ಯೈ ನಮಃ | ನಮಸ್ಕಾರಾನ್ ಸಮರ್ಪಯಾಮಿ |
(ನಮಸ್ಕಾರಗಳನ್ನು ಮಾಡಬೇಕು)

namaskAra
namaH tulasI kalyANi namO viShNupriyE SuBE |
namO mOkShapradE dEvi namaH saMpatpradAyikE ||

prasIda tulasidEvi prasIda harivallaBE
kShIrOdamathanOdBUtE tulasi tvAM namAmyaham||

yanmUlE sarvatIrthAni yanmadhyE sarvadEvatAH |
yadagrE sarvavEdASca tulasi tvAM namAmyaham ||

SrItulasyai namaH | namaskArAn samarpayAmi |
(namaskAragaLannu mADabEku)

ಪ್ರಾರ್ಥನಾ
ಮನಃ ಪ್ರಸಾದಜನನೀ ಸುಖಸೌಭಾಗ್ಯವರ್ಧಿನೀ |
ಆಧಿಂ ವ್ಯಾಧಿಂ ಚ ಹರ ಮೇ ತುಲಸಿ ತ್ವಾಂ ನಮಾಮ್ಯಹಮ್ ||

ಶ್ರಿಯಂ ದೇಹಿ ಯಶೋ ದೇಹಿ ಕೀರ್ತಿಮಾಯುಸ್ತಥಾ ಸುಖಮ್ |
ಬಲಂ ಪುಷ್ಟಿಂ ತಥಾ ಧರ್ಮಂ ತುಲಸಿ ತ್ವಂ ಪ್ರಯಚ್ಛ ಮೇ ||
ಶ್ರೀತುಲಸ್ಯೈ ನಮಃ| ಪ್ರಾರ್ಥನಾಂ ಸಮರ್ಪಯಾಮಿ || (ಹೂವುಗಳನ್ನು ಹಾಕುವುದು)

prArthanA
manaH prasAdajananI suKasauBAgyavardhinI |
AdhiM vyAdhiM ca hara mE tulasi tvAM namAmyaham ||

SriyaM dEhi yaSO dEhi kIrtimAyustathA suKam |
balaM puShTiM tathA dharmaM tulasi tvaM prayacCa mE ||
SrItulasyai namaH| prArthanAM samarpayAmi || (hUvugaLannu hAkuvudu)

ಕಾಯೇನ ವಾಚಾ ಮನಸೇಂದ್ರಿಯೈರ್ವಾ ಬುದ್ಧ್ಯಾತ್ಮನಾ ವಾಽನುಸೃತ ಸ್ವಭಾವಮ್|
ಕರೋಮಿ ಯದ್ಯತ್ ಸಕಲಂ ಪರಸ್ಮೈ ನಾರಾಯಣಾಯೇತಿ ಸಮರ್ಪಯಾಮಿ ||

ಅನೇನ ಮಯಾ ಆಚರಿತೇನ ಪೂಜಾಕರ್ಮಣಾ ತುಲಸ್ಯಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ದಾಮೋದರರೂಪೀ ಪರಮಾತ್ಮಾ ಪ್ರೀಯತಾಮ್ ||
ಶ್ರೀಕೃಷ್ಣಾರ್ಪಣಮಸ್ತು ||

kAyEna vAcA manasEndriyairvA buddhyAtmanA vA&nusRuta svaBAvam|
karOmi yadyat sakalaM parasmai nArAyaNAyEti samarpayAmi ||

anEna mayA AcaritEna pUjAkarmaNA tulasyantargata BAratIramaNa muKyaprANAMtargata dAmOdararUpI paramAtmA prIyatAm ||
SrIkRuShNArpaNamastu ||

Check my other links on Tulasi devi: