ತುಳಸಿದೇವಿ ಪದಕೇ | ನಾರೇರು | ಬೆಳಗಿರಿ ಆರುತಿಯಾ ||pa||
ಬೆಳಗುವುದೂ ನಮ್ಮ | ಅಳಗಿರಿ ರಂಗನಲಲನೆ ಶ್ರೀ ತುಳಸಿಗೆ | ಕಲಿಮಲ ಹಾಗೆ ||a.pa||
ದಳಪ್ರತಿ ದಳದಲ್ಲಿ | ಶ್ರೀಹರಿ |
ನೆಲಸಿಹ ತಾನಲ್ಲಿಒಲಿಮೆಲಿ ಭಕುತರ |
ಹಲವು ಸೇವೆಗಳಿಗೊಲಿದು ಅಭೀಷ್ಟವ |
ಸಲಿಸುವ ದೇವಿಗೆ ||1||
ಶರದಿ ಮಥಿಸೆ ಅಮೃತ | ಕಲಶವ |
ಧರಿಸುತ ಧನ್ವಂತ್ರಿಬರಲು ನಯನದಿಂ |
ಮರುಳೆ ಆನಂದಕೆವರ ಬಿಂದೋದ್ಭವೆ |
ಹರಿ ಪ್ರಿಯೆ ತುಳಸೀ ||2||
ಜಾಂಬುವತಿಯು ದೇವಿ | ನಿನ್ನಲಿ |
ಇಂಬು ತೋರಿ ಇರಲುಅಂಬುಜಾಕ್ಷ |
ಗುರು ಗೋವಿಂದ ವಿಠಲನ |
ತುಂಬಿ ದ್ವೈಭವದಿ | ಸಂಭ್ರಮ ಸೇವಿಪ ||3||
Tuḷasidēvi padakē | nārēru | beḷagiri ārutiyā ||pa||
beḷaguvudū nam’ma | aḷagiri raṅganalalane śrī tuḷasige | kalimala hāge ||a.Pa||
daḷaprati daḷadalli | śrīhari |
nelasiha tānalli’olimeli bhakutara |
halavu sēvegaḷigolidu abhīṣṭava |
salisuva dēvige ||1||
śaradi mathise amr̥ta | kalaśava |
dharisuta dhanvantribaralu nayanadiṁ |
maruḷe ānandakevara bindōdbhave |
hari priye tuḷasī ||2||
jāmbuvatiyu dēvi | ninnali |
imbu tōri iralu’ambujākṣa |
guru gōvinda viṭhalana |
tumbi dvaibhavadi | sambhrama sēvipa ||3||