dasara padagalu · MADHWA · purandara dasaru · Vijaya dasaru

Dasara bagyavidu purandara dasara bagyavidu

ದಾಸರ ಭಾಗ್ಯವಿದು-ಪುರಂದರ-ದಾಸರ ಭಾಗ್ಯವಿದು ||pa||

ತುಂಬಿ ಸೂಸುತಲಿದೆ ||a.pa||

ಭೂಸುರ ಜನುಮದಿ ಬಂದು ಬೆಳೆದು ಉಪ-
ದೇಶಗೊಂಡು ಮಧ್ವಮತ ಪೊಂದಿ
ಲೇಸಾಗಿ ಭಕ್ತಿ ವಿರಕ್ತಿ e್ಞÁನದ ವಿ-
ಶೇಷವಾಗಿ ನಾ ಬಾಳುವದೆಲ್ಲ ||1||

ಸಜ್ಜನ ಸಂಗತಿ ಮಾಡಿ ದುರುಳಜನ
ವರ್ಜನಗೈದು ಸತ್ಕರ್ಮಗಳ
ಆರ್ಜಿಸಿ ನಾಮ ಮುದ್ರೆ ಹಗಲು ಇರಳು ನಿ
ರ್ಲಜ್ಜನಾಗಿ ನಾ ಬಾಳುವುದೆಲ್ಲ ||2||

ಶ್ರವಣ ಕೀರ್ತನೆ ವಂದನೆ ಸ್ತೋತ್ರ ಹರಿನಾಮ
ತವಕದಿಂದ ನುಡಿಯುವ ಕವನ
ನವನವ ವಚನವು ಮಂತ್ರ ಸಂಕಲ್ಪವು
ಸವಿದು ಸ್ಮರಿಸಿ ನಾ ಬಾಳುವುದೆಲ್ಲ||3||

ಯಾತ್ರೆ ತೀರ್ಥ ದಿವ್ಯ ದಾನಧರ್ಮಂಗಳು
ಕ್ಷೇತ್ರ ಮೆಟ್ಟಿ ಬಹ ಸಂಭ್ರಮವು
ಮಿತ್ರರ ಕೂಡಾಡಿ ಹರಿಪರನೆಂದು ಸ-
ತ್ಪಾತ್ರನಾಗಿ ನಾ ಬಾಳುವುದೆಲ್ಲ ||4||

ಹರಿದಿನದುಪವಾಸ ಜಾಗರಣೆ ಪಾರಣಿ
ಗುರು ಹಿರಿಯರಲಿ ವಿಹಿತಸೇವೆ
ಹಿರಿದಾಗಿ ಮಾಡೋಡು ಪರಿಪರಿಯಿಂದಲಿ
ಹರುಷದಿಂದಲಿ ನಲಿದಾಡುವುದೆಲ್ಲ ||5||

ಷಡುರಸಭೋಜನ ದಿವ್ಯವಸನ ನಿತ್ಯ
ಉಡುವುದು ಹೊದೆವುದು ಹಸನಾಗಿ
ತಡೆಯದೆ ಜನರಿಂದ ಪೂಜೆಗೊಂಡು ಸುಖ-
ಬಡಿಸುತಿರುವ ವಿಚಿತ್ರಗಳೆಲ್ಲ ||6||

ಮನವೆ ಹಿಗ್ಗದಿರು ಹಿಯ್ಯಾಳಿಕೆಯಿಂದ
ಗುಣಿಸಿಕೊ ಸುಖವಾವುದು ಲೇಶ
ನಿನಗೆ ಸ್ವತಂತ್ರ ಎಂಬುದು ಕಾಣೆನೆಂದಿಗು
ಗುಣನಿಧಿ ವಿಜಯವಿಠ್ಠಲನ ಪ್ರೇರಣೆಯೆಲ್ಲ ||7||

Dasara bagyavidu-purandara-dasara bagyavidu ||pa||

Tumbi susutalide ||a.pa||

Busura janumadi bandu beledu upa-
Desagondu madhvamata pondi
Lesagi Bakti virakti gnánada vi-
Seshavagi na baluvadella ||1||

Sajjana sangati madi durulajana
Varjanagaidu satkarmagala
Arjisi nama mudre hagalu iralu ni
Rlajjanagi na baluvudella ||2||

Sravana kirtane vandane stotra harinama
Tavakadimda nudiyuva kavana
Navanava vacanavu mantra sankalpavu
Savidu smarisi na baluvudella||3||

Yatre tirtha divya danadharmangalu
Kshetra metti baha sambramavu
Mitrara kudadi hariparanendu sa-
Tpatranagi na baluvudella ||4||

Haridinadupavasa jagarane parani
Guru hiriyarali vihitaseve
Hiridagi madodu paripariyimdali
Harushadimdali nalidaduvudella ||5||

Shadurasabojana divyavasana nitya
Uduvudu hodevudu hasanagi
Tadeyade janarinda pujegondu suka-
Badisutiruva vicitragalella ||6||

Manave higgadiru hiyyalikeyinda
Gunisiko sukavavudu lesa
Ninage svatantra embudu kanenendigu
Gunanidhi vijayaviththalana preraneyella ||7||

dasara padagalu · MADHWA · purandara dasaru

Purandara guru varya

ಪುರಂದರ ಗುರುವರ್ಯ ||ಪ||

ಗುರುವರ್ಯ ಕಾಯಬೇಕೆನ್ನ ಮಧ್ವ
ಗುರುಕೃತ ಗ್ರಂಥಾರ್ಥe್ಞÁನ ಕೊಟ್ಟು
ಕರಣತ್ರಯ ಗಳಿಂದಾಚರಿಸುವ ಕರ್ಮವ
ಹರಿಮಾಡಿಸುವನೆಂಬ ಸ್ಮರಣೆಯ ಕರುಣಿಸೊ ||a.pa||

ಸುರಮುನಿ ನಿನ್ನ ಪ್ರಾರ್ಥನದಿ ಶ್ರೀ ಮ
ದ್ಗುರು ವೇದವ್ಯಾಸರು ದಯದಿ ಪಾ-
ಮರ ಪಂಡಿತರಿಗೆ ಸುಲಭದಿ ಧರ್ಮ ತಿಳಿದಾ-
ಚರಿ ಪರೆಂದು ಮುದದಿ ಅರಿತು
ನಿರುತ ಶೇವಿಪರಿಗೆ ಪರಮ ಮಂಗಳವೀವ
ಭಾಗವತ ಗ್ರಂಥ ನಿರ್ಮಿಸಿದರು ಸತ್ಯ ||1||

ಕಲಿಯುಗದಲಿ ಹರಿನಾಮ ಜನರ
ಕಲಿ ಕಲ್ಮಷಾದ್ರಿ ಸೂತ್ರಾಮ ಎಂದು
ತಿಳಿದು ಕೀರ್ತಿಪರಿಗೆ ಪರಮ ಮಂ
ಗಳ ಕರನಾಮದ ಮಹಿಮ ಎನುತ
ಪುರಂದರ ಗಡ
ದಲಿ ಪುಟ್ಟಿ ಬಲು ವಿಧ ಹರಿನಾಮಂ-
ಗಳನು ವಿರಚಿಸಿದ ||2||

ಕಾಶ್ಯಾದಿ ಕ್ಷೇತ್ರ ಸಂಚರಿಸಿ ಪದ
ರಾಶಿ ಸುಳಾದಿಗಳ ರಚಿಸಿ ಸಂ-
ತೋಷ ತೀರ್ಥರ ಮತ ಬಲಿಸಿ ಗುರು
ವ್ಯಾಸರಿಂದುಪದೇಶ ಗ್ರಹಿಸಿ ಜಗದಿ
ಭೂಸುರ ಪಾಲಕ ಶ್ರೀಶಕಾರ್ಪರನರ
ಕೇ ಸರಿ ಗತಿ ಪ್ರಿಯ ದಾಸರೆಂದೆನಿಸಿದ||3||

Purandara guruvarya ||pa||

Guruvarya kayabekenna madhva
Gurukruta grantharthae jnana kottu
Karanatraya galindacharisuva karmava
Harimadisuvanemba smaraneya karuniso ||a.pa||

Suramuni ninna prarthanadi sri ma
Dguru vedavyasaru dayadi pa-
Mara panditarige sulabadi dharma tilida-
Cari parendu mudadi aritu
Niruta seviparige parama mangalaviva
Bagavata grantha nirmisidaru satya ||1||

Kaliyugadali harinama janara
Kali kalmashadri sutrama endu
Tilidu kirtiparige parama man
Gala karanamada mahima enuta
Purandara gada
Dali putti balu vidha harinamam-
Galanu viracisida ||2||

Kasyadi kshetra sancarisi pada
Rasi suladigala racisi san-
Tosha tirthara mata balisi guru
Vyasarindupadesa grahisi jagadi
Busura palaka srisakarparanara
Ke sari gati priya dasarendenisida||3||

dasara padagalu · MADHWA · purandara dasaru · Vijaya dasaru

Besarade Bhajisiro Purandara dasaraayara

ಬೇಸರದೆ ಭಜಿಸಿರೋ ಪುರಂದರ ದಾಸರಾಯರ
ಶ್ರೀಶ ನಿಮ್ಮನು ಉದಾಶೀನ ಮಾಡದೆ
ಪೋಷಿಸುವ ಸಂತೋಷದಿಂದಲಿ ||pa||

ಪುರಂದರಗಡಾದ ಒಳಗೆ ಹಿರಿಯ ಸಾವುಕಾರನೆನಸಿ
ಪರಿಪರಿಯ ಸೌಖ್ಯಗಳ ಸುರಿಸುತ್ತ
ಇರುತಿರಲು ನರಹರಿ ತ್ವರಿತದಿಂ ಬ್ರಾಹ್ಮಣನಾಗುತ್ತ
ಕರುಣದಲಿ ಅವರುದ್ಧ್ದರಿಸಲೋಸುಗ ಮನೆಗೆ
ಪೋಗುತ್ತ ಯಜಮಾನ ಕಂಡು
ಜರಿದು ಬ್ರಾಹ್ಮಣನ್ಹೊರಗೆ ಹಾಕಲು
ಮರುದಿವಸ ಮತ್ಹೋಗಿ ನಿಂತ ||1||

ಭಾರಿಭಾರಿಗೆ ಸಾವುಕಾರನ
ಮೋರೆಗ್ಹೊತ್ತಿ ಮೇರೆಯಿಲ್ಲದೆ
ಆರು ತಿಂಗಳು ಬೆನ್ನು ಬೀಳುತ್ತ ನಾಯಕರು ಈತನ
ಆರು ಅಟ್ಯಾರೆಂದು ಬೈಯುತ್ತ ಬೇಸತ್ತು ಎರಡು
ಹೇರು ರೊಕ್ಕಾ ಮುಂದೆ ಸುರಿಯುತ್ತ ಅದರೊಳಗೊಂದು
ಡ್ಡಾರಿಸಿಕೋ ಎಂದು ಹೇಳಲು ನಾರಾಯಣ ಬಿಟ್ಹೋದ ನಗುತ||2||

ಹಿತ್ತಲಾ ಬಾಗಿಲಿಗೆ ಹೋಗಿ ಮತ್ತೆ ಆತನ ಮಡದಿಗಾಗಿ
ಹತ್ತಿ ಬಿದ್ದನು ವಿತ್ತ ತಾ ಯೆನುತ ತನ ಮಗನ ಮುಂಜ್ಯೆಂ
ದೆತ್ತಿ ಕರದಿಂ ಬಾಯಿ ತೆರೆಯುತ್ತ ಆ ಪ್ರಾಣಿ ನುಡಿದಳು
ಎತ್ತಣ ದ್ರವ್ಯವು ತನಗೆನುತ ನಿನ್ನ ಮೂಗಿನ
ಮುತ್ತಿನ ಮೂಗುತಿಯ ಕೊಡು ಎನೆ
ಉತ್ತುಮಳು ತೆಗೆದಿತ್ತಳಾಕ್ಷಣ ||3||

ಜೋಕೆಯಿಂ ಮೂಗುತಿಯನೊಯ್ದು
ಆಕಿ ಗಂಡನ ಕಣ್ಣೆದುರಿಗೆ ಹಾಕಿದನು ತಾ
ಪಾಕಿ ಕೊಡೆಯೆನುತ ಅದು ಕಂಡು ಇದು ನ
ಮ್ಮಾಕಿದೆಂದು ಈತ ನುಡಿಯುತ್ತ ಅನ್ಯರದು ಯಿಂಥಾ
ದ್ಯಾಕೆ ಯಿರಬಾರದೆನ್ನುತ್ತಾ ಬೆಲೆ ಹೇಳು ಎನಲು
ನಾಕು ನೂರು (ಪಾಕಿ) ಶುಭ್ರ ಕೊಡು
ಎಂದಾಕೆ ಹೋದನು ತಿರೂಗಿ ಬಾರದೆ ||4||

ತಿರುಗಿ ಬ್ರಾಹ್ಮಣ ಬಾರದಿರಲು ಕರೆದು ತನ್ನ ಹೆಂಡತಿಯ
ಬರಿಯ ನಾಶಿಕವನ್ನೆ ಕಂಡುನು ಮೂಗುತಿಯ ಎಲ್ಲೆನೆ
ಮುರಿದಿಹುದು ಯೆಂದಾಕೆ ಹೇಳಲು ಒಳಗ್ಹೋಗಿ ನೀ ತಾರದಿರೆ
ಅರೆವೆ ನಿನ್ನಯ ಜೀವವೆಂದನು ವಿಷಕೊಂಬೆನೆಂದು
ಕರದಿ ಬಟ್ಟಲು ಧರಿಸಲಾಕ್ಷಣ
ತ್ವರಿತದಲಿ ಹರಿ ಅದರೊಳಾಕಿದ ||5||

ಹರುದಿಂ ಮೂಗುತಿಯನ್ನು
ಪುರುಷನಾ ಕೈಕೊಳಗೆಯಿಡಲು
ತರಿಸಿ ತನ್ನಲ್ಲಿದ್ದ ಪೆಟ್ಟಿಗೆಯಾ ಅದು ಕಾಣದಿರಲು
ಬೆರಗಾಗಿ ನೋಡಿದನು ಮಡದಿಯ ನಿಜ ಪೇಳುಯೆನಲು
ಅರಸಿ ಪೇಳ್ದಳು ಕೊಟ್ಟ ಸುದ್ದಿಯಾ ಅಭಿಮಾನಕಂಜಿ
ಅರದು ವಿಷವನು ಕುಡಿವೆನಲು ಸಿರಿರಮಣಾ ಕೊಟ್ಟ ಖರಿಯಾ ||6||

ದೇವ ದೇವನು ಎನ್ನ ಮನದ
ಭಾವವನ್ನು ತಿಳಿವುದಕೆ ತಾ ವೃದ್ಧ ಬ್ರಾಹ್ಮಣನಾಗಿ
ಬಂದಿದ್ದ ಪರಿಪಕ್ವವೆನಗೆ
ನ್ನಾವ ಕಾಲಕೆ ಆಗಬೇಕೆಂದ ವೈರಾಗ್ಯಭಾವದಿ
ಜೀವಿಸಿಕೊಂಡಿರುವುದೇ ಛಂದ ಹೀಗೆನುತ ಮನೆ ಧನ
ಕೋವಿದರ ಕರೆದಿತ್ತ ಹರುಷದಿ
ಕಾವನಯ್ಯನ ದಾಸನಾದ ||7||

ಲಕ್ಷ್ಮಿಪತಿಯ ಪಾದದಲ್ಲಿ ಲಕ್ಷ್ಯವಿಟ್ಟು ವ್ಯಾಸರಾಯರ
ಶಿಕ್ಷೆಯಿಂದಲಿ ಅಂಕಿತವ ಕೊಳುತ ತಿರಿಪಾದ ಐದು
ಲಕ್ಷಪದ ಸುಳಾದಿ ಪೇಳುತ್ತ ಪ್ರತಿದಿವಸದಲ್ಲು
ಪಕ್ಷಿವಾಹನ ನಾಟ್ಯವಾಡುತ ಅಪರೋಕ್ಷ ಪುಟ್ಟಲು
ಮೋಕ್ಷಸ್ಥಾನಕ್ಕೆ ಕರೆದೊಯ್ದು ಅ
ಧೋಕ್ಷಜನು ಸಂರಕ್ಷಿಸಿದ||8||

ಘೊರ ನರಕದೊಳಗೆ ಬಿದ್ದಾ
ಪಾರ ಜನರು ಚೀರುತಿರಲು
ದ್ಧಾರ ಮಾಡಿದ ನಾರದಾರಿವರು ಅವ
ತಾರ ಮಾಡಿ ಧಾರುಣಿಯಲಿ ಮತ್ತೆ ಬಂದರು ಸರುವೋತ್ತಮ
ಹರಿ ನಾರಾಯಣನೆ ಎಂದು ಸಾರಿದರು ಹೀಗೆಂದು ತಿಳಿಯಲು
ಮಾರ ಜನಕ ವಿಜಯವಿಠ್ಠಲ ಆರಿಗಾದರು ಒಲಿವ ಕಾಣಿರೊ ||9||

Besarade bajisiro purandara dasarayara
Srisa nimmanu udasina madade
Poshisuva samtoshadindali ||pa||

Purandaragadada olage hiriya savukaranenasi
Paripariya saukyagala surisutta
Irutiralu narahari tvaritadim brahmananagutta
Karunadali avaruddhdarisalosuga manege
Pogutta yajamana kandu
Jaridu brahmananhorage hakalu
Marudivasa mat~hogi nimta ||1||

Baribarige savukarana
Moreg~hotti mereyillade
Aru timgalu bennu bilutta nayakaru Itana
Aru atyarendu baiyutta besattu eradu
Heru rokka munde suriyutta adarolagomdu
Ddarisiko endu helalu narayana bit~hoda naguta||2||

Hittala bagilige hogi matte Atana madadigagi
Hatti biddanu vitta ta yenuta tana magana munjyem
Detti karadim bayi tereyutta A prani nudidalu
Ettana dravyavu tanagenuta ninna mugina
Muttina mugutiya kodu ene
Uttumalu tegedittalakshana ||3||

Jokeyim mugutiyanoydu
Aki gandana kannedurige hakidanu ta
Paki kodeyenuta adu kandu idu na
Mmakidendu Ita nudiyutta anyaradu yintha
Dyake yirabaradennutta bele helu enalu
Naku nuru (paki) subra kodu
Endake hodanu tirugi barade ||4||

Tirugi brahmana baradiralu karedu tanna hendatiya
Bariya nasikavanne kandunu mugutiya ellene
Muridihudu yendake helalu olag~hogi ni taradire
Areve ninnaya jivavendanu vishakombenendu
Karadi battalu dharisalakshana
Tvaritadali hari adarolakida ||5||

Harudim mugutiyannu
Purushana kaikolageyidalu
Tarisi tannallidda pettigeya adu kanadiralu
Beragagi nodidanu madadiya nija peluyenalu
Arasi peldalu kotta suddiya abimanakanji
Aradu vishavanu kudivenalu siriramana kotta kariya ||6||

Deva devanu enna manada
Bavavannu tilivudake ta vruddha brahmananagi
Bamdidda paripakvavenage
Nnava kalake agabekemda vairagyabavadi
Jivisikondiruvude camda higenuta mane dhana
Kovidara kareditta harushadi
Kavanayyana dasanada ||7||

Lakshmipatiya padadalli lakshyavittu vyasarayara
Siksheyindali ankitava koluta tiripada aidu
Lakshapada suladi pelutta pratidivasadallu
Pakshivahana natyavaduta aparoksha puttalu
Mokshasthanakke karedoydu a
Dhokshajanu samrakshisida||8||

Gora narakadolage bidda
Para janaru cirutiralu
Ddhara madida naradarivaru ava
Tara madi dharuniyali matte bandaru saruvottama
Hari narayanane endu saridaru higendu tiliyalu
Mara janaka vijayaviththala arigadaru oliva kaniro ||9||

dasara padagalu · jagannatha dasaru · MADHWA · purandara dasaru

Dasaraaya purandara dasaraaya

ದಾಸರಾಯ ಪುರಂದರ ದಾಸರಾಯ ||pa||

ದಾಸರಾಯ ಪ್ರತಿವಾಸರದಲಿ ಶ್ರೀನಿ
ವಾಸನ್ನ ತೋರೋ ದಯಾಸಾಂದ್ರ ||a.pa||

ವರದನಾಮಕ ಭೂಸುರನ ಮಡದಿ ಬ
ಸಿರಲಿ ಜನಿಸಿ ಬಂದು ಮೆರೆದೆ ಧರಣಿಯೊಳು ||1||

ಕುಲಿಶಧರಾಹ್ವಯ ಪೊಳಲೊಳು ಮಡದಿ ಮ
ಕ್ಕಳ ಕೂಡಿ ಸುಖದಿ ಕೆಲ ಕಾಲದಲಿದ್ಯೊ ||2||

ವ್ಯಾಸರಾಯರಲಿ ಭಾಸುರ ಮಂತ್ರೋ ಪ
ದೇಶವ ಕೊಂಡು ರಮೇಶನ ಒಲಿಸಿದ್ಯೊ ||3||

ಮನೆ ಧನ ಧಾನ್ಯ ವಾಹನ ವಸ್ತುಗಳನೆಲ್ಲ
ತೃಣಕೆ ಬಗೆದು ಕೃಷ್ಣಾರ್ಪಣವೆಂದೆ ಬುಧರಿಗೆ ||4||

ಪ್ರಾಕೃತ ಭಾಷೆಯೊಳ್ ನೀ ಕೃತಿ ಪೇಳಿ ಆ
ಪ್ರಾಕೃತ ಹರಿಯಿಂದ ಸ್ವೀಕೃತ ನೀನಾದ್ಯೊ ||5||

ತೀರ್ಥಕ್ಷೇತ್ರಗಳ ಮೂರ್ತಿ ಮಹಿಮೆಗಳ
ಕೀರ್ತಿಸಿ ಜಗದಿ ಕೃತಾರ್ಥನೆಂದೆನಿಸಿದೆ||6||

ಪಾತಕ ವನಧಿ ಪೋತನೆನಿಪ ಜಗ
ನ್ನಾಥ ವಿಠ್ಠಲನ ಸುಪ್ರೀತಿಯಿಂದೊಲಿಸಿದೆ ||7||

Dasaraaya purandara dasaraaya ||pa||

Dasaraya prativasaradali srini
Vasanna toro dayasandra ||a.pa||

Varadanamaka busurana madadi ba
Sirali janisi bandu merede dharaniyolu ||1||

Kulisadharahvaya polalolu madadi ma
Kkala kudi sukadi kela kaladalidyo ||2||

Vyasarayarali basura mantro pa
Desava kondu ramesana olisidyo ||3||

Mane dhana dhanya vahana vastugalanella
Trunake bagedu krushnarpanavende budharige ||4||

Prakruta basheyol ni kruti peli A
Prakruta hariyimda svikruta ninadyo ||5||

Tirthakshetragala murti mahimegala
Kirtisi jagadi krutarthanendeniside||6||

Pataka vanadhi potanenipa jaga
Nnatha viththalana supritiyindoliside ||7||

dasara padagalu · MADHWA · namaskara · purandara dasaru

Dwadasa namaskara

 ದ್ವಾದಶ ನಮಸ್ಕಾರಗಳು 

 ಒಂದು ನಮಸ್ಕಾರವು ಇಂದಿರಾ ರಮಣನಿಗೆ ಎರಡು ನಮಸ್ಕಾರವು ಗರುಡ ವಾಹನನಿಗೆ      ಮೂರು ನಮಸ್ಕಾರವು ಮುಚಕುಂದನಿಗೆ  ನಾಲ್ಕು ನಮಸ್ಕಾರವು ನಂದತನಯನಿಗೆ  ಐದು ನಮಸ್ಕಾರವು ಯದುಕುಲಾನಂದನನಿಗೆ ಆರು ನಮಸ್ಕಾರವು ಅನುರೂಪಹಾರನಿಗೆ ಏಳು ನಮಸ್ಕಾರವು ಪ್ರಹ್ಲಾದ ವರದನಿಗೆ ಎಂಟು ನಮಸ್ಕಾರವು ವೈಕುಂಠಪತಿಗೆ  ಒಂಬತ್ತು ನಮಸ್ಕಾರವು ಕಂಬುಕಂಠನಿಗೆ  ಹತ್ತು ನಮಸ್ಕಾರವು ಭಕ್ತರೊಡೆಯನಿಗೆ  ಹನ್ನೊಂದು ನಮಸ್ಕಾರವು ಪನ್ನಗಶಯನನಿಗೆ  ಹನ್ನೆರಡು ನಮಸ್ಕಾರವು ಶ್ರೀಹರಿ ನಿಮಗೆ  ಇಷ್ಟ ನಮಸ್ಕಾರಗಳನ್ನು ಭಕ್ತಿಯಿಂದ ಮಾಡುವೆನು ತಪ್ಪು ಕ್ಷಮಿಸು ಪುರಂದರವಿಠ್ಠಲ ||

*dvadasa namaskaragalu*
Ondu namaskaravu indira ramananige
Eradu namaskaravu garuda vahananige
Muru namaskaravu muchakundanige
Nalku namaskaravu namdatanayanige
Aidu namaskaravu yadukulanandananige
Aru namaskaravu anurupaharanige
Elu namaskaravu prahlada varadanige
Entu namaskaravu vaikunthapatige
Ombattu namaskaravu kambukanthanige
Hattu namaskaravu baktarodeyanige
Hannondu namaskaravu pannagasayananige
Hanneradu namaskaravu srihari nimage
Ishta namaskaragalannu Baktiyinda
Maduvenu tappu kshamisu *purandaraviththala* ||

dasara padagalu · purandara dasaru

kesava madhava govinda

ಕೇಶವ ಮಾಧವ ಗೋವಿಂದ ವಿಠಲೆಂಬ
ದಾಸಯ್ಯ ಬಂದ ಕಾಣಿರೆ
ದೋಷರಹಿತ ನರವೇಷ ಧರಿಸಿದ
ದಾಸಯ್ಯ ಬಂದ ಕಾಣಿರೇ      ||ಪ||

ಖಳನು ವೇದವನೊಯ್ಯೆ ಪೊಳೆವಕಾಯನಾದ
ಘಳಿಲಾನೆ ಕೂರ್ಮ ತಾನಾಗಿ ಗಿರಿಯ ಪೊತ್ತ
ಇಳೆಯ ಕದ್ದಸುರನ ಕೋರೆದಾಡೀಲಿ ಕೊಂದ
ಛಲದಿ ಕಂಬದಿ ಬಂದು ಅಸುರನ ಕೊಂದ   ||೧||

ಲಲನೆಯನೊಯ್ಯೆ ತಾ ತಲೆಹತ್ತರನ ಕೊಂದ
ನೆಲಕೊತ್ತಿ ಕಂಸನ ಬಲವ ಸಂಹರಿಸಿದ
ಪುಂಡತನದಿ ಪೋಗಿ ಪುರವಾನುರಪಿ ಬಂದ
ಭಂಡರ ಸದೆಯಲು ತುರುಗವನೇರಿದ    ||೨||

ಹಿಂಡು ವೇದಗಳೆಲ್ಲ ಅರಸಿ ನೋಡಲು ಸಿಗದೆ
ದಾಸಯ್ಯ ಬಂದ ಕಾಣಿರೇ
ಪಾಂಡುರಂಗ ನಮ್ಮ ಪುರಂದರವಿಠಲ
ದಾಸಯ್ಯ ಬಂದ ಕಾಣಿರೇ      ||೩||

Kesava madhava govinda vithalemba
Dasayya banda kanire
Dosharahita naravesha dharisida
Dasayya banda kanire ||pa||

Kalanu vedavanoyye polevakayanada
Galilane kurma tanagi giriya potta
Ileya kaddasurana koredadili konda
Caladi kambadi bandu asurana konda ||1||

Lalaneyanoyye ta talehattarana konda
Nelakotti kamsana balava samharisida
Pundatanadi pogi puravanurapi banda
Bandara sadeyalu turugavanerida ||2||

Hindu vedagalella arasi nodalu sigade
Dasayya bamda kanire
Panduranga namma purandaravithala
Dasayya banda kanire ||3||

dasara padagalu · purandara dasaru

Enu helali tangi

Enu helali tangi timmayyana padavanu kande ||pa||

Kanasu kandene manadali kalavalagondene ||a.pa||

honna kadagavannittu timmayya ta kolva namavittu
anduge phalukenuta enna munde bandu nintiddanalle ||1||

makara kundalavannittu timmayya ta kasturi tilakavannittu
gejje Galukenuta svamiyu bandu nintiddanalle ||2||

muttina pallakki yatigalu hottu nintiddaralle
Chatra chamaradinda rangayyana utsava murutiya ||3||

tamara kamaladalli krushnayya ta bandu nintiddanalle
vayu bommadigalu rangayyana seveya maduvare ||4||

navaratna kettisida svami enna hrudaya mantapadalli
sarvabharanadinda purandara viththalana kudidane ||5||

dasara padagalu · MADHWA · purandara dasaru · vijayeendra theertharu

Vijayindra munindra

ವಿಜಯೀ೦ದ್ರ ಮುನೀಂದ್ರರೆಂಬಾಶ್ಚರ್ಯದ ।
ಗಜೇಂದ್ರ ಬಂದಿದೆ ಸುಜನರು ನೋಡ ಬನ್ನಿ ।। ಪ ।।

ಕಲುಷವೆಂಬ ಪಂಕವ ನೀಡಾಡಿ । ವಿ ।
ಮಲ ಹರಿ ಪದ ತೀರ್ಥದ ಜಲಪಾನ ಮಾಡಿ ।
ಸಲೆ ಮಧ್ವಮತಾಂಬುಧಿಯೊಳು ।
ನಲಿ ನಲಿದು ಕುಣಿದಾಡುತಲಿ ।। 1 ।।

ರಮೇಶನ ಧ್ಯಾನವೆಂಬ ಮದವೇರಿ ।
ಮಮತೆಯೆಂಬ ಕದಳಿ ಕಿತ್ತೀಡಾಡಿ ।
ವಿಮಲ ಶ್ರೀಹರಿ ಪದ ರಜ ಶಿರದಿ ಧರಿಸಿ ।
ಕುಮತಗಳೆಂಬ ತರುಗಳ ಮುರಿಯುತಲಿ ।। 2 ।।

ಗುರು ಸುರೇಂದ್ರತೀರ್ಥರೆಂಬ ।
ವರ ಮಾವಟಿಗನ ಆಜ್ಞೆಯೊಳಿದ್ದು ।
ಗುರು ಪುರಂದರವಿಠಲ ಭಕ್ತಿಯೆಂಬ ।
ಸರಪಣಿಯೊಳು ನಲಿ ನಲಿದಾಡುತಲಿ ।। 3 ।।

Vijayindra munindrarembascaryada |
Gajendra bandide sujanaru noda banni || pa ||

Kalushavemba pankava nidadi | vi |
Mala hari pada tirthada jalapana madi |
Sale madhvamatambudhiyolu |
Nali nalidu kunidadutali || carana || 1 ||

Ramesana dhyanavemba madaveri |
Mamateyemba kadali kittidadi |
Vimala srihari pada raja Siradi dharisi |
Kumatagalemba tarugala muriyutali || 2 ||

Guru surendratirtharemba |
Vara mavatigana Aj~jeyoliddu |
Guru purandaravithala baktiyemba |
Sarapaniyolu nali nalidadutali || 3 ||

MADHWA · purandara dasaru · sulaadhi · tulasi

Sulaadhi on Tulasi devi by Purandara dasaru

ಧ್ರುವತಾಳ
ಸಂತತ ಹನ್ನೆರಡು ಕೋಟಿ ಸುವರ್ಣ ಪುಷ್ಪ ಸಮರ್ಪಿಸಲು |
ಅಂತಾಫಲದಿ ಕೋಟಿ ಕೋಟಿ ಗುಣಿತ ತುಳಸೀ ದಳಕೆ |
ತಂತು ಮಾತ್ರ ಭಕ್ತಿಯಲಿ ತವಕದಿ ಪೂಜಿಸು ಶ್ರೀ-
ಮಂತ ಶ್ರೀ ಪುರಂದರವಿಠ್ಠಲ ವೈಕುಂಠವ ನೀವ || 1 ||

ಮಟ್ಟತಾಳ
ಆದಿವಾರದಿ ಸಂಜೆಯಲಿ ರಾತ್ರಿಯಲಿ |
ಅಂಗಾರಕ ಶುಕ್ರವಾರದಲ್ಲಿ |
ಆದಿತ್ಯ ಸೋಮಗ್ರಹಣ ಅಮವಾಸ್ಯೆ ಹುಣ್ಣಿವೆ |
ದ್ವಾದಶಿಯಲಿ ಸಾದರಾರ್ಚಿತ ಜಯಂತಿಗಳಲಿ |
ವೈಧೃತಿ ವ್ಯತಿಪಾತ ಸಂಕ್ರಾಂತಿಗಳಲಿ ಶ್ರೀ ಪು-
ರಂದರವಿಠ್ಠಲ ಮುನಿವ ಶ್ರೀ ತುಲಸಿಯ ತೆಗೆದರೆ || 2 ||

ತ್ರಿಪುಟಿ ತಾಳ
ಸಾರಂಗಧರನಿಗೆ ಸಂವತ್ಸರದ ತುಳಸಿ |
ಆರು ತಿಂಗಳ ಬಿಲ್ವ ಆಹೋದು ಆಚ್ಯುತನರ್ಚನೆಗೆ |
ಕಾರುಣ್ಯ ಮೂರುತಿಗೆ ಕಮಲ ಏಳು ದಿನವಹುದು |
ಪುರಂದರವಿಠ್ಠಲನಿಗೆ ದಿನ ದಿನದಿ ಕಣಗಿಲ ಆಹೋದು ಸತತ || 3 ||

ಅಟ್ಟತಾಳ
ಇಲ್ಲದಿದ್ದರೆ ಚಿಗುರು ತುಳಸಿ ಅದು |
ಇಲ್ಲದಿದ್ದರೆ ಮುಗುಳು ತೆನೆಯು ಅದು |
ಇಲ್ಲದಿದ್ದರೆ ತುಳಸಿ ಎಲೆಯು ಅದು |
ಇಲ್ಲದಿದ್ದರೆ ಒಣಗಿದ ಕಾಷ್ಟ ಅದು |
ಇಲ್ಲದಿದ್ದರೆ ತುಳಸಿಯ ಬುಡದ ಮಣ್ಣು ಅದು |
ಇಲ್ಲದಿದ್ದರೆ ತುಳಸಿ ತುಳಸಿ ಎಂದು ಕೂಗಿದರೆ |
ನಮ್ಮ ಪುರಂದರವಿಠ್ಠಲ ಒಲಿವ ಕಾಣಿರೊ || 4 ||

ಝಂಪೆತಾಳ
ಶ್ರೀರಮಣನು ತನ್ನ ಶ್ರೀಯನ್ನೆ ಕೂಡಿ |
ಶ್ರೀವತ್ಸ ಕೌಸ್ತುಭ ಮಾಲೆ ವೈಜಯಂತಿಹಾರ-ಏ-
ಕಾವಳಿಯನು ಒಲ್ಲೆ ತುಳಸಿ ಎನ್ನವಳೆಂದ ಪುರಂದರವಿಠ್ಠಲ || 5 ||

ಆದಿತಾಳ
ಒಂದೇ ಒಂದು ಬೆರಳ ಜಪ ಒಂದೇ ಐದು ಗೆರೆಯ ಜಪ |
ಒಂದೇ ಹತ್ತು ಪುತ್ರ ಜೀವಿಮಣಿಯ ಜಪ |
ಒಂದೇ ನೂರು ಶಂಖಮಣಿಯ ಜಪ |
ಒಂದೇ ಸಾವಿರ ಹವಳದ ಜಪ |
ಒಂದೇ ಹತ್ತು ಸಾವಿರ ಮುತ್ತಿನ ಮಣಿಯ ಜಪ |
ಒಂದೇ ಹತ್ತು ಲಕ್ಷ ಸುವರ್ಣ ಮಣಿಯ ಜಪ |
ಒಂದು ಕೋಟಿ ದರ್ಭೆ ಬೆಟ್ಟಿನ ಜಪ |
ಒಂದೇ ಅನಂತ ಶ್ರೀ ತುಲಸೀ ಮಣಿಯ ಜಪ- |
ವೆಂದು ಪುರಂದರವಿಠ್ಠಲ ಪೇಳ್ದ | || 6 ||

ಜತೆ
ಸ್ನಾನದಾನಕೆ ತುಳಸಿ ಪ್ರಯೋಜನ ತುಳಸಿ |
ಪುರಂದರವಿಠ್ಠಲಗೆ ಅತಿ ಪ್ರಿಯೆ ತುಳಸಿ ||

Tala : dhruva
Santata hanneradu koti suvarnada pushpa samarpisalu |
Antha Paladi koti gunita ardha tulasidalake |
Kintu matradi Bakutiyinda |
Santata namisalu sri purandaraviththala vaikunthavaniva ||

Tala : mathya
Adivaradalli sanje ratriyalli |
Angaraka sukravaradalli |
Vaidhruti vyatipata sankramanagalalli |
Tulasi tegedare sri puramdaraviththalamuniva ||

Tala : Adi
Muru dina kanagala pushpa |
Aru tingala bilva samvatsarada tulasi |
Muru tingala kamalacyutane bahudu |
Sri purandaraviththala||

Tala : rupaka
Illadiddare ciguru yaliyu |
Yilladiddare beru mruttike |
Yilladiddare baradu kattige adu |
Illadiddare tulasi tulasi endu karedare saku |
Ella vastugaliddu tulasi |
Yilladiddare sri purandaraviththala munidu |
Ellavagalidaduvu ||

Tala : Jampe
Ondu ondu beralu japa |
Ondu aidu beralu gereya japa |
Ondu hattu puthuramja mani japa |
Onde koti darbe gantina japa |
Onde ananta tulasi maniya japa | hi |
Gendu sri purandaraviththalanemisida ||

Jate
Snana danake tulasidala | prayo |
Janake tulasi sri purandaraviththalage ati priya tulasi ||

dasara padagalu · dhanur maasa · MADHWA · purandara dasaru

Dhanur maasadalli pandavaru sri krishnannu karedaddu(Invitation)

Puje madidaru byaga | puje madidaru punnaga pushpagalinda raja dharmajaru ramakrushnaribbaranu || pa ||

Vajra manikyada pithada mele kullirisi Suddha snanava madi madiyuttu dharmajaru argyapadyarchanadinda sriharige samarpisi vedokta mantradinda abishekavane madidaru krushna || 1 ||

Gopalakrushnanige gokshiradinderedu aparamahimage pitambara udisi dhupa gandhakshate dipadarati madi aneka sambramadimda ekarati madidaru krushna||2||

Bumandalesana munde mandalavane madi mandige penigalu dundu gullorigeyu curumabundedumdi bisorigeyu anandadimdali tandittaru krushna || 3 ||

Anna krushnana munde ennorige, holige, benne kasida tuppa kannige impaguva kalasanna kesaribatu dadhyannavane tandittaro krushna || 4 ||

Sagaradodeyana munde saru, sambaru, sasvigayi muntaddu huggi hugadabu kayihalu kosambariya begane tandittaru krushna || 5 ||

Appa mahimana munde happala sandige tuppadali kareda cakkuli karacikayigalu appalu atirasa ambodi hurana kadabugalu oppadale tandittaru krushna ||6||

Nana vidhada catni nalku tarada uppinakayi savige gavali paradi paramanna Aga tabakadali tamdu tambula dakshine panniru tamdittaru krushna || 7 ||

Akala kenehalu Aga kasida tuppa bekemba kenemosaru benne sikaraneyu A kamalanabaga aneka naivedya byagadali tandittaru krushna || 8 ||

Gamtenadadinda penti penti karpuravu vaikunthapatige nurentu mangalaratiyanu madi bamtarallavo navu nimma nentarendenuta vaikunthapatige namo namo andaru krushna || 9 ||

Kudibale elehaki naduve muttina maniyu edabaladali eradu jyotigalane hacci busuraru kudiva tambige thali uduva pitambaravu tandittaro kadimillavo krushna || 9 ||

Deva^^rushi muni rushigala sahita yadavaru pamdavaru bame rukmini, draupadi, subadreyaru bojanaka kulitaraga krushna || 10 ||

Aga krushnarpana emdu karamugidu bima, parthanu, bimesa, krushnana sutanu soma suryaru kamteyarumdu kaitolevaru Aga tabakadali tandu tambula dakshineya takkomdu hogi baruttevemdaro krushna || 12 ||

Jambavanadambara ninage tandano svami | jambuvantesa uda baro enaginnu imbu vaikunthadallidabaro krushna || 13 ||

Vajra manikada hosa vanki kamkana jodu prajvalisutiruvantha haralu pamjaradoledole gejje sarapani | valiva pitambara rukmini devige udugore krushna ||14||

Acca muttinadandi aracamdra ratipolu ratna kettisida guttada cauri raguti gonde heralu bangara satyabamege udugore krushna || 15 ||

Jala kamalakodyana jalaja tayita muttu saragi jintaku nagamurugigoppuva kubasa hariyu hadinarusavira mandi||16||

Ashtabaryarinda odagudidavageragi krushne ta nintiralu baktalane nodi srikrushnanu naguta kotte&nai vaikumtha padaviyanendanu krushna || 17 ||

I pariyindali balarama krushnage puje madidaremba suddiyane keli busuraru sripurumdaraviththalana krupeyada pamdavara mele humalegaredaro krushna || 18 ||