dasara padagalu · krishna · MADHWA · sripadarajaru

Kombu kolalanudutta

ಕೊಂಬು ಕೊಳಲನೂದುತ್ತ ನಂಬಿಸಿ ಪೋದನೆಯವ್ವಾ
ಅಂಬುಜನಾಭಗೆ ಮನ ಹಂಬಲಿಸುತ್ತಿದೆಯವ್ವಾ ||ಪ||

ನಡೆಯಲಾರೆನೆಯವ್ವಾ ಅಡಿಯಿಡಲೊಶವಿಲ್ಲ
ಬೆಡಗುಗಾರನ ಕೂಡೆ ನುಡಿ ತೆರಳಿತ್ತೆಯವ್ವಾ ||೧||

ಮಾತು ಮನಸು ಬಾರದವ್ವಾ ಸೋತೆವವ್ವಾ ಕೃಷ್ಣಗಾಗಿ
ಆತನ ಕಾಣದೆ ಮನ ಕಾತರಿಸುತಿದೆಯವ್ವಾ ||೨||

ಅನ್ನೋದಕ ಒಲ್ಲೆವವ್ವಾ ಕಣ್ಣಿಗೆ ನಿದ್ರೆ ಬಾರದು
ಮನ್ನಣೆಗಾರನ ಕೂಡೆ ಹೆಣ್ಣು ಜನ್ಮ ಸಾಕೆಯವ್ವಾ ||೩||

ಮನೆಮನೆ ವಾರುತೆಗೆ ಮನವೆಳಸದೆಯವ್ವಾ
ಮನಸಿಜಪಿತನೊಡನೆ ಮನ ತೆರಳಿತೆಯವ್ವಾ ||೪||

ಗೋಪಮ್ಮನ ವಾರುತೆಗೆ ತಾಪ ಹಿರಿಯದಾಯಿತವ್ವಾ
ಗೋಪಜನರ ಕೂಡಿದ ಶ್ರೀಪತಿ ರಂಗವಿಠಲಾ ||೫||

Kombu kolalanudutta nambisi podeneyavva
Ambujanabage mana hambalisuttideyavva ||pa||

Nadeyalareneyavva adiyidalosavilla
Bedagugarana kode nudi teralitteyavva ||1||

Matu manasu baradava sotevavva krushnagagi
Atana kanade mana katarisutideyavva ||2||

Annodaka ollevava kannige nidre baradu
Mannanegarana kude hennu janma sakeyavva ||3||

Manemane varutege manavelasadeyavva
Manasijapitanodane mana teraliteyavva ||4||

Gopammana varutege tapa hiriyadayitavva
Gopa janara kudida sripati rangavithala ||5|

dasara padagalu · jagannatha dasaru · krishna · MADHWA

Krushnanna nodirai

ಕೃಷ್ಣನ ನೋಡಿರೈ ಭಕ್ತಿ ತುಷ್ಟನ ಪಾಡಿರೈ
ಕೃಷ್ಣೆಗೆ ಬಲಿದತಿ ದುಷ್ಟ ರಾಯರನು ತರಿದಾ
ಜಗದೊಳು ಮೆರೆದಾ ||pa||

ನಂದ ವ್ರಜದಲಿ ಕಂದನಾಗಿ ತಾ ಬೆಳೆದಾ ದೈತ್ಯನರಳಿದಾ
ವೃಂದಾವನದೊಳು ಇಂದುಮುಖಿಯರನು
ಕೂಡಿ ಪರಿಪರಿಯಾಡಿ
ಒಂದೊಂದು ಪರಿಲೀಲೆ ಸಂದೇಹ
ತೋರಿಸಿದಾ ಮೋಹ ಚರಿಸಿದ
ಕಂದರ್ಪಪಿತ ತನ್ನ ಹೊಂದಿದ ಜನರನು
ಕಾವಾ ವರಗಳನೀವಾ ||1||

ಬಾಲೆರ ಮನೆಯಲಿ ಪಾಲು ಮೊಸರುಗಳ
ಕದ್ದಾ ತೀವ್ರದಿ ಮೆದ್ದಾ
ಕಾಲಕಾಲದಿ ಗೋಪಾಲರ ಒಡಗೂಡಿ
ಗೋವಾ ಕಾಯ್ದನು ದೇವಾ
ಶೈಲವ ಬೆರಳಲಿ ತಾಳಿ ಗೋಕುಲವ
ಪೊರೆದ ಗರ್ವವ ಮೆರೆದಾ
ಶ್ರೀ ಲೋಲುಪನು ವಿಶಾಲ ಮಹಿಮೆಗಳ ತೊರೆದಾ
ಸುರದಿಂದ ಮೆರೆದಾ ||3||

ಮಧುರ ಪಟ್ಟಣದಲಿ ಕದನ ಕರ್ಕಶರ
ಕೊಂದಾ ಸಚ್ಚಿದಾನಂದಾ
ಸದುಗುಣ ನಿಧಿಯ ಪಡೆದವಳ
ಜನಕಗೆ ಪಟ್ಟಾ ಗಟ್ಟದ ದಿಟ್ಟಾ
ಸುದತಿಗೋಸುಗ ಸುಧಾ ಪಾನೀಯ
ಪುರದಿಂದಾ ಸುರಪಮ ತಂದ
ಪದುಮಜಾಂಡಧರ ಜಗನ್ನಾಥ ವಿಠಲ
ಗೀತಾ ತ್ರಿಗುಣಾತೀತಾ||3||

Krushnanna nodirai baktisantushtanapadirai
Krushnageolidatidushtarayana taridaja +gadolumereda ||pa||

Nanda vrajadallikandanagita beledadaityaranalida
Vrundavanadoluindu mukiyaranu kudiparipariyadi
Ondondu parililesandohagalatorisida mohaberesida
Kandarpa pitatannahondidajanarannukava varagalaniva ||1||

Baleramaneyalli palumosarugala kaddativradimedda
Kala kaladali gopalaraodagudigo vakaydanudeva
Sailava beralalitaligo kulava poredagaruvamurida
Srilolupanuvisala mahimegala torida surarindamereda ||2||

Madhura pattan adikadanakarka sarakomndasaccidananda
Sadu gunanidhiya padedavalajanakag epattagattidaditta
Sudatiyago sugasurapana puradindasuratarutanda
Padumajandadhara jagannathavithalanitatri gunatita ||3||

dasara padagalu · kanakadasaru · krishna · MADHWA

Itaniga vasudevanu

ಈತನೀಗ ವಾಸುದೇವನು ಲೋಕದೊಡೆಯ
ಈತನೀಗ ವಾಸುದೇವನು                                            ।।ಪ॥

ಈತನೀಗ ವಾಸುದೇವ ಈ ಸಮಸ್ತ ಲೋಕದೊಡೆಯ
ದಾಸಗೊಲಿದು ತೇರನೇರಿ ತೇಜಿ ಪಿಡಿದು ನಡೆಸಿದಾತ       ।।ಅ.ಪ॥

ಧನುಜೆಯಾಳ್ದನಣ್ಣನಯ್ಯನ ಪಿತನ ಮುoದೆ ಕೌರವೇಂದ್ರ
ನನುಜೆಯಾಳಿದವನ ಶಿರವ ಕತ್ತರಿಸುತ ತನ್ನ
ಅನುಜೆಯಾಳಿದವನ ಬೆಂಕಿ ಮುಟ್ಟದoತೆ ಕಾಯ್ದ ರುಕ್ಮ
ನನುಜೆಯಾಳಿದವನ ಮೂರ್ತಿಯನ್ನು ನೋಡಿರೋ           ।।೧।।

ನರನ ಸುತನರಣ್ಯದಲಿ ಗಿರಿಯೊಳ್ನಿಂತು ತನ್ನ ರೋಷದಿ
ಶರಗಳನ್ನು ತೀಡುತಿಪ್ಪನ ಯೋಚಿಸಿ
ಭರದಲವನ ಕರೆದು ಕುರುಹು ತೋರಿ ಪತ್ರವನ್ನು ಹಾರಿಸಿದವನ
ಶಿರವನ್ನು ಛೇದಿಸಿದ ದೇವ ಕಾಣಿರೋ                             ।।೨।।

ಸೃಷ್ಟಿಕರ್ತಗೆ ಮಗನಾದವನಿಗಿಷ್ಟ ಭೂಷಣ ಅಶನವಾದನ
ಜ್ಯೇಷ್ಠಪುತ್ರಗೆ ವೈರಿ ತೊಡೆಯ ಛೇದಿಸೆಂದು ಬೋಧಿಸಿ
ಕಷ್ಟವನ್ನು ಕಳೆದು ಭಕ್ತರಿಷ್ಟವನು ಕಾದ ಉ
ತ್ಕೃಷ್ಟ ಮಹಿಮನಾದ ದೇವ ಕಾಣಿರೋ                            ।।೩।।

ಕ್ರೂರವಾದ ಫಣಿಪಬಾಣವನ್ನು ತರಣಿಜನೆಚ್ಚಾಗ
ವೀರನರನತ್ತ ಬಪ್ಪುದನ್ನು ಈಕ್ಷಿಸಿ
ಧಾರಿಣಿಯ ಪದದೊಳೌಕಿ ಚರಣಭಜಕ ನರನ ಕಾಯ್ದ
ಭಾರಕರ್ತನಾದ ದೇವನೀತ ಕಾಣಿರೋ                           ।।೪।।

ವ್ಯೋಮಕೇಶನಿಪ್ಪ ದೆಸೆಯ ಸರ್ವ ಜಗಕೆ ತೋರುತ
ಸಾಮಜವನೇರಿ ಬರುವ ಶಕ್ತಿಯನೀಕ್ಷಿಸಿ
ಪ್ರೇಮದಿಂದ ಉರವನೊಡ್ಡಿ ಡಿoಗರಿಗನ ಕಾಯ್ದಾ ಸಾರ್ವ
ಭೌಮ ಬಾಡದಾದಿಕೇಶವನ್ನ ನೋಡಿರೋ                         ।।೫।।

Itaniga vasudevanu lokadodeya
Itaniga vasudevanu ||pa||

Itaniga vasudeva I samasta lokadodeya
Dasagolidu teraneri teji pididu nadesidata ||a.pa||

Dhanujeyaldanannanayyana pitana ;de kauravendra
Nanujeyalidavana Sirava kattarisuta tanna
Anujeyalidavana bemki muttada te kayda rukma
Nanujeyalidavana murtiyannu nodiro ||1||

Narana sutanaranyadali giriyolnimtu tanna roshadi
Saragalannu tidutippana yocisi
Baradalavana karedu kuruhu tori patravannu harisidavana
Siravannu cedisida deva kaniro ||2||

Srushtikartage maganadavanigishta bushana asanavadana
Jyeshthaputrage vairi todeya chedisendu bodhisi
Kashtavannu kaledu baktarishtavanu kada u
Tkrushta mahimanada deva kaniro ||3||

Kruravada panipabanavannu taranijaneccaga
Viranaranatta bappudannu ikshisi
Dhariniya padadolauki charanabajaka narana kayda
Barakartanada devanita kaniro ||4||

Vyomakesanippa deseya sarva jagake toruta
Samajavaneri baruva saktiyanikshisi
Premadimda uravanoddi Digarigana kayda sarva
Bauma badadadikesavanna nodiro ||5||

dasara padagalu · krishna · MADHWA · Vadirajaru

Venunada priya gopalakrushna |

ವೇಣುನಾದ ಪ್ರಿಯ ಗೋಪಾಲಕೃಷ್ಣ ||pa||

ವೇಣುನಾದ ವಿನೋದ ಮುಕುಂದಗಾನವಿನೋದ ಶೃಂಗಾರ ಗೋಪಾಲ ||a.pa||

ವಂದಿತಚರಣ ವಸುಧೆಯಾಭರಣಇಂದಿರಾರಮಣ ಇನಕೋಟಿತೇಜ|
ಮಂದರಧರ ಗೋವಿಂದ ಮುಕುಂದಸಿಂಧುಶಯನ ಹರಿ ಕಂದರ್ಪಜನಕ ||1||

ನವನೀತಚೋರ ನಂದಕುಮಾರಭುವನೈಕವೀರ ಬುದ್ಧಿವಿಸ್ತಾರ|
ರವಿಕೋಟಿತೇಜ ರಘುವಂಶರಾಜದಿವಿಜವಂದಿತ ದನುಜಾರಿ ಗೋಪಾಲ||2||

ಪರಮದಯಾಳು ಪಾವನಮೂರ್ತಿವರ ಕೀರ್ತಿಹಾರ ಶೃಂಗಾರಲೋಲ
ಉರಗೇಂದ್ರಶಯನ ವರ ಹಯವದನಶರಣರಕ್ಷಕ ಪಾಹಿ ಕೋದಂಡರಾಮ ||3||

Venunada priya gopalakrushna ||pa||

Venunada vinoda mukunda
Ganavinoda srungara gopala ||a.pa||

Vandita charana vasudheya abarana
Indira ramana ina koti teja
Mandaradhara govinda mukunda
Sindhu Sayana hari kandarpa janaka ||1||

Navanita cora nanda kumara
Buvaneka vira buddhi vistara
Ravikoti teja raguvamsa raja
Divija vandita dhanujari gopala ||2||

Parama dayalu pavana murti
Varakirti hara srungara lola
Uragendra Sayana varahayavadana
Saranu rakshaka pahi kodanda rama ||3||

dasara padagalu · krishna · MADHWA · Vadirajaru

Lokabaritano ranganeka charitano

ಲೋಕ ಭರಿತನೋ ರಂಗಾನೇಕ ಚರಿತನೊ ||ಪ||

ಕಾಕು ಜನರ ತರಿದು ತನ್ನೇಕಾಂತ ಭಕ್ತರ ಪೊರೆವ ಕೃಷ್ಣ ||ಅ.ಪ||

ರಾಜಸೂಯ ಯಾಗದಲ್ಲಿ ರಾಜರಾಜರಿರಲು ವಸು-
ದೇವಸುತನು ಈತನೆ ಸಭಾಪೂಜೆಗರ್ಹನೆನಿಸಿದಾತ||1||

ಮಿಕ್ಕ ನೃಪರ ಜರಿದು ಅಮಿತವಿಕ್ರಮ ಯದುವರನೆ ತನಗೆ
ತಕ್ಕ ರಮಣನೆಂದು ರುಕ್ಮಿಣಿ ಉಕ್ಕಿ ಮಾಲೆಯಿಕ್ಕಿದಳಾಗ||2||

ಉತ್ತರೆಯ ಗರ್ಭದಲ್ಲಿ ಸುತ್ತುಮುತ್ತಿದ ಅಸ್ತ್ರವನ್ನು
ಒತ್ತಿ ಚಕ್ರದಿಂದ ನಿಜಭಕ್ತ ಪರೀಕ್ಷಿತನ ಕಾಯ್ದ||3||

ಜ್ಞಾನಶೂನ್ಯನಾಗಿ ಸೊಕ್ಕಿ ನಾನೇ ವಾಸುದೇವನೆಂದ
ದೀನ ಪೌಂಡ್ರಕನ ಶಿರವ ಜಾಣರಾಯ ಖಂಡಿಸಿ ಮೆರೆದ||4||

ತನ್ನ ಸೇವಕಜನರ ಪೊರೆದು ಉನ್ನತ ಉಡುಪಿಯಲ್ಲಿ ನಿಂತು
ಘನ್ನ ಮಹಿಮೆಯಿಂದ ಮೆರೆವ ಪ್ರಸನ್ನ ಹಯವದನನ ಕೃಷ್ಣ||5||

Lokabaritano ranganeka charitano ||pa||

Kakujanara muridu tanna ekanta Baktara poreva krushna ||a.pa||

Rajasuya yagadalli rajarajariralu dharma-
Rajasutanu itane sarva pujegarhanenisidata ||1||

Mikka nrupara jaridu amita vikrama yaduvarane tanage
Takka ramananendu rukmini ukki maleyikkidalaga ||2||

J~janasunyanagi sokki tane vasudevanenalu
Hina paundrakana Sirava janaraya taridanaga ||3||

Uttareya garbadalli sutti muttidastravannu
Otti chakradinda nija Bakta parikshitana kayda ||4||

Tanna sevaka janarigolidu unnata udupiyalli nintu
Ganna mahimeyinda poreva prasanna hayavadana krushna ||5||

dasara padagalu · krishna · MADHWA · vyasarayaru

Baro bega nirajaksha

ಬಾರೊ ಬೇಗ ನೀರಜಾಕ್ಷದೂರು ಇದು ಯಾತಕೊ ||pa||

ಮೊಸರು ಮಾರುವ ಗೊಲ್ಲತಿಯರಅಸವಳಿಸಿ ಕೈಯ ಪಿಡಿದು
ವಶನಾಗು ಎಂದು ಪೇಳಿನಸುನಗುತಲಿದ್ದೆಯಂತೆ ||1||

ಕುಸುಮಶರನ ಪೆತ್ತವನೆಬಸವನಾದೆ ಊರೊಳಗೆ
ಶಶಿಮುಖೇರ ದೂರು ಬಹುಪಸರಿಸಿತು ಪೇಳಲಾರೆ||2||

ಕಂದಕೇಳು ಇಂದುಮುಖಿಯರಹೊಂದಿ ಆಡಲೇಕೆ |
ಈಮಂದಿರದೊಳಾಡಿ ಸಲಹೊತಂದೆ ಉಡುಪಿ ಸಿರಿಕೃಷ್ಣ ||3||

Baro bega nirajaksha
Duru idu etako ||pa||

Mosaru maruva gollatiyara
Asavalisi ni kaiyapididu
Vasavagu endu peli
Nasunagutaliddeyante ||1||

Kusumasarana pettavane
Basavanade urolage
Sasimukiyara duru bahu
Pasarisitu na pelalare ||2||

Kanda kelu indumukiyara
Hondi ninadalyake
Mandiradoladi salaho
Tande udupi sirikrushna ||3||

dasara padagalu · MADHWA · vyasarayaru

Elli mayavadane rangayyanu

ಎಲ್ಲಿ ಮಾಯಾವಾದನೆ ರಂಗಯ್ಯನು ಎಲ್ಲಿ ಮಾಯಾವಾದನೆ||pa||

ಎಲ್ಲಿ ಮಾಯಾವಾದ ಫುಲ್ಲನಾಭಕೃಷ್ಣ|
ಚೆಲ್ಲೆ ಗಂಗಳೆಯರು ಹುಡುಕ ಹೋಗುವ ಬನ್ನಿ ||a.pa||

ಮಂದ ಗಮನೆಯರೆಲ್ಲ ಕೃಷ್ಣನ ಕೂಡೆಚೆಂದದಿ ಇದ್ದೆವಲ್ಲ
ಕಂದರ್ಪ ಬಾಧೆಗೆ ಗುರಿಯ ಮಾಡಿದನಲ್ಲಮಂದಮತಿ ನಮಗೆ ಬಂದು ಒದಗಿತಲ್ಲ ||1||

ಸರಸಿಜಾಕ್ಷಿಯರು ಕೂಡಿ ಕೃಷ್ಣನ ಕೂಡೆಸರಸವಾಡುತಲಿದ್ದೆವೆ|
ಕರೆಕರೆಗೊಳಿಸಿ ಮನ್ಮಥ ಬಾಧೆಗೊಪ್ಪಿಸಿಚರಣ ಸೇವಕರಾದ ತರಳೆಯರನು ಬಿಟ್ಟು ||2||

ಭಕ್ತವತ್ಸಲ ದೇವನು ತನ್ನವರನ್ನುಅಕ್ಕರದಲಿ ಪೊರೆವನು
ಸಿಕ್ಕದೆ ಹೋಗನು ಹುಡುಕುತ್ತ ಹೋಗುವಅಕ್ಕಯ್ಯ ಬನ್ನಿರೆ ಉಡುಪಿ ಶ್ರೀಕೃಷ್ಣನು ||3||

Elli mayavadane rangayyanu ||pa||

Elli mayavada pulanaba krushna
Calvagamgaleyaru hudukahoguva banni ||a.pa||

Mandagamaneyarella krushnana kude
Chandadi iddevalla
Kamndarpana badhege guriya madidanalla
Mandamatiyu namage bandu odagitalla ||1||

Sarasijakshiyaru kudi krushnana kude
Sarasavadutaliddeve
Karekaregolisi manmatha badhegoppisi
Carana sevakarada tarunirille bittu ||2||

Baktavatsaladevanu tannavaranu
Akkarimdali porevenu
Sikkade hoganu hudukutta hoguva
Akkayya bannire udupi srikrushnanu ||3||

dasara padagalu · MADHWA · Vijaya dasaru

Chiranjeevu yaagelo chinna neenu

This song is composed by Vijaya dasaru to cure Mohana dasaru in his childhood from sore diesease

ಚಿರಂಜೀವಿಯಾಗಿರೆಲೊ ಚಿಣ್ಣ ನೀನು||pa||

ಪರಮ ಭಾಗವತರ ಪದಧೂಳಿ ಧರಿಸುತಲಿ||a.pa||

ಜರಿಯಬೇಡ ಹರಿಯ ಮರೆಯಬೇಡೆಂದೆಂದು
ತಿರಿಯಬೇಡ ಖಳರ ಮನೆಗೆ ಪೋಗಿ
ಜರೆಯಬೇಡನ್ಯರಿಗೆ ರಹಸ್ಯ ತತ್ತ್ವಗಳನ್ನು
ಬೆರೆಯಬೇಡ ಪರರ ಸತಿಯ ಸ್ವಪ್ನದಲೂ ||1||

ಲೋಕವಾರ್ತೆಯ ನಿನ್ನ ಕಿವಿಗೆ ಕೇಳಿಸಬೇಡ
ಶ್ರೀ ಕಾಂತ ಚರಿತೆಯನು ಕೇಳದಿರಬೇಡ
ಪಾಕವನು ಮಾಡಿ ಏಕಾಂಗಿಯಾಗುಣಬೇಡ
ಭೂಕಾಂತರನುಸರಿಸಿ ಬೆಸಗೊಳ್ಳಬೇಡ ||2||

ಸಾಲ ಮಾಡಲಿ ಬೇಡ ಸಾಲದೆಂದೆನಬೇಡ
ನಾಳೆಗೆ ಹ್ಯಾಗೆಂಬ ಚಿಂತೆ ಬೇಡ
ಖೂಳ ಜನರೊಡಗೂಡಿ ಕಂಗೆಡಲಿ ಬೇಡ ನೀ
ಬಾಳುವರ ಸಂಗದಲಿ ಬಾಳೆಲವೊ ಬಾಲ ||3||

ಪಂಡಿತರು ಪಾಮರರು ಆರಿಗಾದರೂ ನಿನ್ನ
ಕಂಡವರಿಗೆಲ್ಲ ಕೌತುಕ ತೋರಲಿ
ಹೆಂಡಿರು ಮಕ್ಕಳು ಅಳಿಯ ಸೊಸೆ ಮೊಮ್ಮಕ್ಕಳು
ಉಂಡುಟ್ಟು ದ್ವಿಜರ ಸಹ ಗಂಡುಗಲಿಯಾಗೋ ||4||

ಮಂದಮತಿಗಳ ಕೂಡೆ ಮಾತಾಡಲಿ ಬೇಡ
ನಿಂದಕರ ಕಣ್ಣೆತ್ತಿ ನೋಡಬೇಡ
ಇಂದಿರೆಯರಸ ಶ್ರೀ ವಿಜಯವಿಠ್ಠಲನ ಚರಣ
ದ್ವಂದ್ವದಲಿ ಮಸ್ತಕವ ನೀಡದಿರಬೇಡ||5||

Chiranjeevu yaagelo chinna neenu hari dasa dasara paada dhoolagi||pa||

jariya beda hariya mareya byadadendu
thiriya byada kalara manage pogi
oreya beda anyarige thathvagalannu
bereya beda anya sathiya swapadhali||1||

saala madalu beda saaladhu enalu beda
nalige hyangembo chintheyu beda
koola janaradone mithrathva maadali beda
baaluvara sankata baalelo baala||2||

loka vaartheyanu ninna keevi kelisalu beda
sri kaathana vaarthe keladhira beda
paakavanu maadi yekaangiyagi unna beda
loukikavanu anusarisi dhanu kolali beda||3||

panditharu paamararu araadharu nina
kandavarigella kouthuka thorali
hendiru makkalu halaya sose mommakkalu
undutta dhvijaru saha kandu galiyaagirelo||4||

mandha mathigalanu kooda maathadhiru  hari
ninthakara kanetthi noda beda
indira ramana siri vijaya vittala sarana
dhvandhvandhali masthakavana needadhira beda||5||

 

 

 

 

 

dasara padagalu · krishna · purandara dasaru

Nodu nodu nodu krushna

ನೋಡು ನೋಡು ನೋಡು ಕೃಷ್ಣ ಹೇಗೆ ಮಾಡುತಾನೆ
ಬೇಡಿಕೊಂಡರೆ ಬಾರ ಕೃಷ್ಣ, ಓಡಿ ಹೋಗುತಾನೆ ||ಪ||

ಕಂಡಕಂಡವರ ಮೇಲೆ ಕಣ್ಣ ಹಾಕುತಾನೆ
ಉಂಡು ಉಂಡು ಮುಸುಕನಿಟ್ಟು ಮಲಗಿಕೊಳ್ಳುತಾನೆ
ಲಂಡತನವ ಮಾಡಿ ಮಾಡಿ ಮಣ್ಣ ಗೋರುತಾನೆ
ಭಂಡು ಮಾಡಿ ಬಾಗಿಲೊಳಗೆ ಚೀರಿಕೊಳ್ಳುತಾನೆ ||೨||

ಕರುಣವಿಲ್ಲದಲೆ ಬಂದು ಕಾಲಲೊದೆಯುತಾನೆ
ಶರಣು ಹೊಕ್ಕರೆಯು ತಾನೆ ಕೊಡಲಿ ಮಸೆಯುತಾನೆ
ಹರಿಯುವ ವಾನರರ ಕೂಡ ಹಾರಾಡುತಾನೆ
ಸಿರಿಕೃಷ್ಣ ಹಾಲು-ತುಪ್ಪ ಸೂರೆಮಾಡುತಾನೆ ||೩||

ಬಾಲೆಯರಿಗೆ ವರವನಿತ್ತು ಪುರವ ಕೆಡಿಸುತಾನೆ
ನೀಲಗುದುರೆಯನೇರಿ ಹಾರಿಸಾಡುತಾನೆ
ಬಾಲಕರ ಕೂಡಿಕೊಂದು ಕುಣಿದಾಡುತಾನೆ
ಲೋಲಪುರಂದರವಿಠಲ ತಾನು ಕುಣಿಯುತಾನೆ||೪||

Nodu nodu nodu krushna |hege madutane |
Bedikondare bara krushna |odi hogutane ||pa||

Kanda kandavara mele kannu hakutane |
Undu undu musukanittu malagikollutane ||
Landatanava madi madi manna gorutane |
Bandu madi bagilolage cirikollutane ||1||

Karunavilladale bandu kalalodeyutane |
Saranu hokkareyu tanu kodali maseyutane ||
Hariyuva vanarara koda haradutane |
Sirikrushna halu – tuppa suremadutane ||2||

Baleyarige varavanittu purava kedisutane |
Nilagudureyaneri harisadutane ||
Balakara kudikondu kunidadutane |
Lolapurandara vithala tanu kuniyutane ||3||

dasara padagalu · krishna · MADHWA

Thottila thuguve

Tottila tuguve krushnana tottila tuguve putta balakaroluparama sreshthanadana ||pa||

Minanagi barapottu beru mellidanaknurarupa tori bumidana beddana ||1||

Bumipara samharisida sriramachandranamava kamsana tarida balaramananujana ||2||

Buddharupadinda tripuraranodda dhiranamuddu tejineri mereda padmanabana ||3||

Ulivu madabediramma caluvamalaguvanalinanabanannu smarisi nalidu paduva ||4||

Kamalamukiyarella banni kunidu paduvakamalanaba viththalanangri smarane maduva ||5||