dasara padagalu · MADHWA · tulasi

Varava kode vaarijakshi

ವರವ ಕೊಡೆ ವಾರಿಜಾಕ್ಷಿ ನೀರೆ ತುಳಸಿಯೆ
ಕರಕರೆಯಗೊಳಿಸಬೇಡೆ ಕರುಣ ಪೂರ್ಣಳೆ ||pa||

ಸಿರಿವರನ ಸಹಿತ ನಿನ್ನ ಪೂಜಿಪೆ ಮುನ್ನ
ಪರಿಪರಿಯ ಧೂಪ ದೀಪ ಗಂಧಾಕ್ಷತೆಗಳಿಂ ||1||

ವಾರಿಜಾಕ್ಷಿ ಷಡ್ರಸಗಳ ಆರೋಗಣೆ ಕೊಳ್ಳೆ
ನಾರಿ ನಿನಗೆ ಸರ್ವವಿಧದಿ ನಾನು ಎರಗುವೆ ||2||

ಸಿರಿವರ ಗೋಪಾಲಕೃಷ್ಣವಿಠ್ಠಲನರಸಿಯೆ
ಕರದು ಎನಗೆ ಸರ್ವಾಭೀಷ್ಟ ಕೊಟ್ಟು ಪಾಲಿಸೆ||3||

varava koDe vArijAkShi nIre tuLasiye
karakareyagoLisabEDe karuNa pUrNaLe ||pa||

sirivarana sahita ninna pUjipe munna
paripariya dhUpa dIpa gandhAkShategaLiM ||1||

vArijAkShi ShaDrasagaLa ArOgaNe koLLe
nAri ninage sarvavidhadi nAnu eraguve ||2||

sirivara gOpAlakRuShNaviThThalanarasiye
karadu enage sarvABIShTa koTTu pAlise||3||

aarathi · dasara padagalu · MADHWA · tulasi

Belagire aruthiya sri tulasige

ಬೆಳಗಿರೆ ಆರುತಿಯ ಶ್ರೀ ತುಳಸಿಗೆ ||pa||

ಬೆಳಗಿರೆ ಆರುತಿ ತುಳಸಿದೇವಿಗೆ ನಿತ್ಯ
ಲಲನೆಯರೆಲ್ಲ ಮಂಗಳವೆಂದು ಪಾಡುತ ||a.pa||

ಸುಧೆಯ ಕಲಶದೊಳು ಮಧುವೈರಿನಯನದ
ಮುದ ಜಲಬೀಳಲು ಉದುಭವಿಸಿದಳೆಂದು ||1||

ದರುಶನ ಮಾತ್ರದಿ ದುರಿತಗಳೋಡಿಸಿ
ಸ್ಥಿರವಾದ ಸೌಭಾಗ್ಯ ಕರುಣಿಸುವಳೆಂದು ||2||

ಇಳೆಯೊಳು ಕಾರ್ಪರ ನಿಲಯ ಶ್ರೀನರಹರಿ
ಒಲುಮೆಯ ಪಡೆದ ಶ್ರೀ ತುಳಸಿದೇವಿಗೆ ಬೇಗ||3||

beLagire Arutiya SrI tuLasige ||pa||

beLagire Aruti tuLasidEvige nitya
lalaneyarella maMgaLavendu pADuta ||a.pa||

sudheya kalaSadoLu madhuvairinayanada
muda jalabILalu uduBavisidaLendu ||1||

daruSana mAtradi duritagaLODisi
sthiravAda sauBAgya karuNisuvaLendu ||2||

iLeyoLu kArpara nilaya SrInarahari
olumeya paDeda SrI tuLasidEvige bEga||3||

dasara padagalu · MADHWA · tulasi

Svikarisenna poojeya tulasi

ಸ್ವೀಕರಿಸೆನ್ನಯ ಪೂಜೆಯ ತುಳಸೀ
ಲೋಕೋತ್ತರನರಸೀ ||pa||

ಈ ಕರಗಳು ಧನ್ಯಗಳಾಗಲಿ ಮನ
ವ್ಯಾಕುಲ ಪರಿಹರಿಸಮ್ಮ ಜನನಿ ||a.pa||

ಮಲ್ಲಿಗೆ ಸಂಪಿಗೆ ಜಾಜಿ ಸೇವಂತಿಗೆ
ಫುಲ್ಲ ಕುಸುಮವಿರಲು
ಒಲ್ಲನು ಹರಿ ನೀನಿಲ್ಲದ ಪೂಜೆಯ
ಬಲ್ಲರಿದನು ಜ್ಞಾನಿ ಗಳು ಮಾತೆ ||1||

ವಂದಿಸಿ ನಿನ್ನಯ ಚರಣಗಳಿಗೆ ಫಲ
ಗಂಧ ಪುಷ್ಪಗಳನರ್ಪಿಸುವೆ
ಬೃಂದಾವನಲೋಲನ ವಲ್ಲಭೆ ಮೃದು
ಮಂದಹಾಸವನು ತೋರೆ ಮಾತೆ||2||

ನೀನಿದ್ದೆಡೆ ಹರಿ ತಾನಿರುವನು ಅನು
ಮಾನವಿಲ್ಲವೆನಗೆ
ದಾನ ಧರ್ಮಗಳ ಫಲಕೆ ಕಾರಣಳು
ನೀನಾಗಿರುವೆ ಪ್ರಸನ್ನವದನೆ ||3||

svIkarisennaya pUjeya tuLasI
lOkOttaranarasI ||pa||

I karagaLu dhanyagaLAgali mana
vyAkula pariharisamma janani ||a.pa||

mallige saMpige jAji sEvaMtige
Pulla kusumaviralu
ollanu hari nInillada pUjeya
ballaridanu jnanigaLu mAte ||1||

vandisi ninnaya caraNagaLige Pala
gandha puShpagaLanarpisuve
bRundAvanalOlana vallaBe mRudu
mandahAsavanu tOre mAte||2||

nIniddeDe hari tAniruvanu anu
mAnavillavenage
dAna dharmagaLa Palake kAraNaLu
nInAgiruve prasannavadane ||3||

dasara padagalu · MADHWA · prasanna venkata dasaru · tulasi

Sri tulasi mahimeyadu

ಶ್ರೀ ತುಳಸಿ ಮಹಿಮೆಯದು ಪೊಗಳಲಳಿವಿಲ್ಲ ಶ್ರೀ
ನಾಥ ನಾರಾಯಣನ ಅರ್ಚನೆಗೆ ಸರ್ವದಾ
ಪ್ರೀತಿಕರಳಾಗಿ ರಾಜಿಪಳು ಕಲಿಯುಗದಲ್ಲಿ ನೋಂತವರ ಭಾಗ್ಯವೆಂತೊ ||ಪ||

ಶ್ರೀ ಮದಾರ್ಚಿತ ಕ್ಷೀರವಾರಿಧಿಯ ಮಥಿಸುತಿರೆ
ಆ ಮಹಾವಿಷ್ಣುವಿನ ನೇತ್ರದಿಂದಲಿ ಹೊರಟ
ಪ್ರೇಮಜಲದುದ್ಭವಿಸಿ ನಳನಳಿಸಿ ದಿವ್ಯ ಆಮೋದ ಪೂರ್ಣಳಾಗಿ
ಭೂಮಿ ಪಾವನವ ಮಾಡುತಲಿ ಭೂನಿರ್ಜರರ
ಧಾಮ ಧಾಮಗಳಲ್ಲಿ ವೃಂದಾವನದಿ ನೆಲೆಸಿ
ಕಾಮಿತ ಫಲನೀವ ಕಲ್ಯಾಣಿ ಕೃಷ್ಣನಿಗೆ ನೇಮದಿಂ ಪ್ರಿಯಳಾದ. || ೧ ||

ಈ ಮನುಜ ದೇಹದಲಿ ದಾವ ಪ್ರಾಣಿಯು ಪಿತೃ-
ಸ್ತೋಮವನ್ನುದ್ಧರಿಪೆನೆಂದರೆ ಸುಲಭ ಸಾಧ್ಯ
ಕೋಮಲ ದಳವನೊಂದು ತಂದು ಶ್ರೀ ಮಾಧವನ ಚರಣ ತಾಮರಸಕರ್ಪಿಸುವದು
ತಾ ಮುನ್ನ ಮಾಡಿದಘ ಪಂಚಕಗಳೋಡಿದವು
ಸಾಮಾನ್ಯವಲ್ಲ ತುಳಸಿಯ ವನವ ಸೋಂಕಿ ಬಂ
ದಾ ಮರುತದಿಂದ ದೇಶ ಗ್ರಾಮಗಳು ಪಾವನವು ಧೀಮಂತ ಮಾನ್ಯಳಾದ || ೨ ||

ತುಳಸಿ ನೆಳಲಲ್ಲಿ ಅಂಕುರಗಳೆದ್ದಲ್ಲಿ ಪಿತೃ-
ಗಳಿಗೆ ಅನ್ನವಿತ್ತರೆ ಕ್ಷಯಫಲವು ಊರ್ಧ್ವಪುಂಡ್ರ
ತಳದಮೃತ್ತಿಕೆಯಲಿಟ್ಟರೆ ಕೋಟಿ ತೀರ್ಥಗಳ ಮುಳುಗೆದ್ದ ಫಲ ಸಿದ್ಧವು
ನಿಲಯದಲಿ ಪತ್ರ ಮೃತ್ತಿಕೆ ಕಾಷ್ಠವಿರಲಲ್ಲಿ
ಕಲಿ ಮುಟ್ಟಲಂಜಿ ತೊಲಗುವನು ಮಣಿಸರಗಳನು
ಕೊರಳಲ್ಲಿರೆ ಕಲುಷ ಸಂಹರವು ಸಹ ನಿಜ ಸಲೆ ವಿಷ್ಣುಪದವಿಯನೀವ || ೩ ||

ಶತಸಾಸಿರಪರಾಧವಿರಲಿನ್ನು ಮೃತ್ತಿಕೆಲಿ
ಪಿತ ಕಾಯದವನಿಗೆ ಬಹುಜನ ನೋಡೆ ವಿಘ್ನಗಳ
ಸ್ಥಿತಿಯ ಗತಿಯುಡುಗಿ ದುಷ್ಟಗ್ರಹಗಳೆಲ್ಲನುಕೂಲಗತಿಯಾದ ಫಲವೀವವು
ಪ್ರತಿದಿನದಿ ನಿರ್ಮಾಲ್ಯಗಳ ಧರಿಸಿ ಹರಿಪಾದ ತೀ
ರ್ಥವೊಮ್ಮೆ ಸೇವಿಸಿದವರ ಮುಕ್ತಿ ಕರತಳವಕ್ಕು ಪತಿತಪಾವನಿ ಎನಿಸುವಾ || ೪ ||

ದರುಶನದಿ ಸ್ಪರುಶನದಿ ಧ್ಯಾನದಿಂ ಕೀರ್ತನಿಯು
ನಿರುತ ಪ್ರಣಾಮಗಳು ಸ್ತೋತ್ರದಾರೋಪಣಿಂ
ಪರಮಜಲ ಶೇಚನಾರ್ಚನ ನಿಷ್ಠೆಯಿಂದ ನವ ಪರೀಕ್ಷೆಯನು ಮಾಡಲು
ಹರಿಚರಣ ಕಮಲರತಿ ದೊರಕಿ ಯುಗ ಕೋಟಿ ಸಾ-
ಸಿರ ಕಾಲ ತಿರುಗಿ ಬಂದರೆ ಸತತ ಮಾಂಗಲ್ಯ
ಹರಿಯ ಮನೆಯಲ್ಲಿ ನಿಜ ಹರುಷವನ್ನುಂಬುವರು ಮುರಾರಿ ವರದಂತೆ ಪದವ || ೫ ||

ಒಂದೊಂದು ದಳ ಕೋಟಿ ಸ್ವರ್ಣಭಾರಕೆ ಮಿಗಿಲು
ಎಂದು ವಿಶ್ವಾಸದಲಿ ತಂದು ಸಾಸಿರನಾಮ
ದಿಂದ ಗೋವಿಂದಗರ್ಪಿಸಿದರಿಲ್ಲಿಹ ಭವದುಂದುಗವು ಮಾನುಷ್ಯರಿಗೆ
ಸುಂದರ ತುಲಸಿ ಮೂಲವನ್ನು ತೊಡಕಿರ್ದ ಕಳೆ
ಯಂದೆಗೆದು ಶಾಖೋಪಶಾಖದಿಂ ವೃದ್ಧಿಸಾ
ನಂದವಿತ್ತಾರ ನೂರೊಂದು ಕುಲ ಕೋಟೆಗಳ ನರಕವನು ಹೊಂದಲೀಸರು ಪುಣ್ಯವು || ೬ ||

ಶ್ರೀ ವಿಷ್ಣುವಲ್ಲಭೆಯ ಮೂಲದಲಿ ತೀರ್ಥಗಳು
ಬಾವನ್ನಗಂಧಿಯಳ ಮಧ್ಯದಲಿ ಸುರನಿಕರ
ಪಾವನಿಯಳಾ ಹರಿಯ ಕೊನೆಯಲಿ ಶ್ರುತಿ ಸಮೂಹ ಲಾವಣ್ಯ ಗುಣರಾಸಿಯು
ಭಾವಶುದ್ಧಿಯಲಿ ಉದಯದಿ ಸ್ಮರಿಸಿ ನಿರುತದಿ
ನಾವ ಕಾರ್ಯಕೆ ಗೆಲುವು ಇಹಪರದ ಸೌಖ್ಯವಿ
ತ್ತಾವ ಕಾಲಕ್ಕೆ ಹೊರೆವ ಪ್ರಸನ್ನವೆಂಕಟ ದೇವನಂಗ ದೊಳೊಪ್ಪುವಾ || ೭ ||

SrI tuLasi mahimeyadu pogaLalaLivilla SrI
nAtha nArAyaNana arcanege sarvadA
prItikaraLAgi rAjipaLu kaliyugadalli nOntavara BAgyavento ||pa||

SrI madArcita kShIravAridhiya mathisutire
A mahAviShNuvina nEtradindali horaTa
prEmajaladudBavisi naLanaLisi divya AmOda pUrNaLAgi
BUmi pAvanava mADutali BUnirjarara
dhAma dhAmagaLalli vRundAvanadi nelesi
kAmita PalanIva kalyANi kRuShNanige nEmadiM priyaLAda. || 1 ||

I manuja dEhadali dAva prANiyu pitRu-
stOmavannuddharipenendare sulaBa sAdhya
kOmala daLavanoMdu tandu SrI mAdhavana caraNa tAmarasakarpisuvadu
tA munna mADidaGa pancakagaLODidavu
sAmAnyavalla tuLasiya vanava sOnki ban
dA marutadiMda dESa grAmagaLu pAvanavu dhImanta mAnyaLAda || 2 ||

tuLasi neLalalli ankuragaLeddalli pitRu-
gaLige annavittare kShayaPalavu UrdhvapunDra
taLadamRuttikeyaliTTare kOTi tIrthagaLa muLugedda Pala siddhavu
nilayadali patra mRuttike kAShThaviralalli
kali muTTalanji tolaguvanu maNisaragaLanu
koraLallire kaluSha saMharavu saha nija sale viShNupadaviyanIva || 3 ||

SatasAsiraparAdhaviralinnu mRuttikeli
pita kAyadavanige bahujana nODe viGnagaLa
sthitiya gatiyuDugi duShTagrahagaLellanukUlagatiyAda PalavIvavu
pratidinadi nirmAlyagaLa dharisi haripAda tI
rthavomme sEvisidavara mukti karataLavakku patitapAvani enisuvA || 4 ||

daruSanadi sparuSanadi dhyAnadiM kIrtaniyu
niruta praNAmagaLu stOtradArOpaNiM
paramajala SEcanArcana niShTheyinda nava parIkSheyanu mADalu
haricaraNa kamalarati doraki yuga kOTi sA-
sira kAla tirugi bandare satata mAngalya
hariya maneyalli nija haruShavannuMbuvaru murAri varadante padava || 5 ||

ondondu daLa kOTi svarNaBArake migilu
endu viSvAsadali taMdu sAsiranAma
dinda gOvindagarpisidarilliha Bavadundugavu mAnuShyarige
sundara tulasi mUlavannu toDakirda kaLe
yandegedu SAKOpaSAKadiM vRuddhisA
nandavittAra nUroMdu kula kOTegaLa narakavanu hoMdalIsaru puNyavu || 6 ||

SrI viShNuvallaBeya mUladali tIrthagaLu
bAvannagandhiyaLa madhyadali suranikara
pAvaniyaLA hariya koneyali Sruti samUha lAvaNya guNarAsiyu
BAvaSuddhiyali udayadi smarisi nirutadi
nAva kAryake geluvu ihaparada sauKyavi
ttAva kAlakke horeva prasannavenkaTa dEvananga doLoppuvA || 7 ||

dasara padagalu · Dvaitha · MADHWA · pranesha dasaru

Pancha BEda by Pranesha dasaru

ಪಂಚಭೇದ ತಿಳಿವದು ಪ್ರತಿದಿನದಲೀ |
ಮುಂಚಿನಜ ಮಧ್ವಮುನಿ ಮತವನುಸರಿಸಿದವರು || ಪ ||

ಜೀವೇಶರಿಗೆ ಭೇದ ಜೀವ ಜೀವಕೆ ಭೇದ |
ದೇವರಿಗು ಜಡಕು, ಜಡಕೆ ಜಡ ಭೇದಾ ||
ಆವಾಗ ಜೀವರಿಗೆ ಜಡಗಳಿಗೆ ಭೇದುಂಟು |
ಈ ವಿವರವ ಪೇಳ್ವೆ ಯನ್ನಾಪನಿತು ಕೇಳುವದೂ || 1 ||

ಈಶ ನಿತ್ಯ ಅನಾದಿ ಸ್ವರತ ಸರ್ವಗ ಸ್ವಪ್ರ- |
ಕಾಶ ಸರ್ವಜ್ಞ ವಿಶ್ವ ವಿಲಕ್ಷಣಾ ||
ಮೇಶ ಅಪರಿಚ್ಛಿನ್ನ ಮೂರ್ತಿ ಪ್ರಾಣಿಗಳಿಂದ |
ತಾ ಸಾಕ್ಷಿಯಾಗಿ ಬಹು ಕರ್ಮಗಳ ಮಾಡಿಸುವ || 2 ||

ಶ್ರೀ ಮುಖ ಜಗತ್ಯಕುತ್ಪತ್ಯಾದಿ ಕಾರಣ ಮ- |
ಹಾ ಮಹಿಮ ಸರ್ವತಂತ್ರ ಸ್ವತಂತ್ರಾ ||
ಆಮಯ ವಿದೂರ ಜ್ಞಾನಾನಂದ ಬಲ ಪೂರ್ಣ |
ಸೀಮೆಯಿಲ್ಲದ ಸುಗುಣ ಕ್ರಿಯಾತ್ಮಕ ಸ್ವರೂಪ || 3 ||

ಸುಖ ದುಃಖ ಭೋಗಿ ಜೀವನು ಅಸ್ವತಂತ್ರ ಬಹು |
ಕಕುಲಾತಿ ಉಳ್ಳವನು ದುರ್ವಿಷಯದೀ ||
ಲಕುಮೀಶನಲ್ಲಿ ಭಕ್ತಿ ವಿವರ್ಜಿತನು ಪ್ರತಿ ಕ್ಷ- |
ಣಕೆ ಅನಂತ ಅಪರಾಧಿ ಜನ್ಮ ಮೃತಿ ಉಳ್ಳವನು || 4 ||

ಆದಿ ವ್ಯಾಧಿಗಳಿಂದ ಪೀಡಿತನು ಅಜ್ಞಾನಿ |
ಮಾಧವನ ಬಂಧಕ ಶಕುತಿಯೊಳಗಿಹ್ಯಾ ||
ತಾ ಧರಿಸಿಹನು ಪ್ರಾಕೃತ ಪ್ರಾಕೃತಾವರಣ |
ಭೇದವೆ ಸಿದ್ಧ ಯಿಂಥ ಜೀವಗೂ ಹರಿಗ್ಯೂ || 5 ||

ಒಂದಲ್ಲ ಸರ್ವ ಜೀವರು ಸತ್ವ ರಜ ತಮರು |
ಯಂದು ಭೇದಗಳುಂಟವರ ಲಕ್ಷಣಾ ||
ಮುಂದಿನ ಪದದಿ ಪೇಳ್ವೆ ಸಜ್ಜನರು ಕೇಳಿಯಾ- |
ನಂದ ಬಡಲೆಂದು ವಿನಯದಲಿ ಬಿನ್ನೈಸುವೆನು || 6 ||

ಛಿನ್ನ ಭಕ್ತರು ಯನಿಪರೆಲ್ಲ ದೇವತಿಗಳ |
ಚ್ಛಿನ್ನ ಭಕ್ತರು ವಿಧೀರವರ್ಹೆಂಡರೂ ||
ಚನ್ನಾಗಿ ಮುದದಿ ಈ ನಿರ್ಜರರ ತರತಮ್ಯ |
ವನ್ನು ಕೇಳಿಕೊಬೇಕು ಜ್ಞಾನಿಗಳ ಮುಖದಿಂದ || 7 ||

ವಿಧಿ ಮೊದಲು ತೃಣ ಜೀವ ಪರಿಯಂತ ಸಾತ್ವಿಕರು |
ಇದರೊಳಗೆ ದೇವ, ಋಷಿ, ಪಿತೃಪ, ನರರೂ ||
ಸುಧಿಗೆ ಯೋಗ್ಯ ರಜಾದಿ ಗೀರ್ವಾಣ ಗಂಧರ್ವ |
ತುದಿಯಾಗಿ ಸಾಂಶರು ನಿರಂಶರುಳಿದವರೆಲ್ಲ || 8 ||

ಇವರಿಂದ ಭಿನ್ನ ರಾಜಸರು ಗೋ ಭೂ ನರಕ |
ತ್ರಿವಿಧ ಗತಿ ಉಳ್ಳವರು ಪಂಚಭೇದಾ ||
ವಿವರ ತರತಮ ದೇವರ ಮಹತ್ಮಿಯನು ಅರಿಯ |
ದವರು ಲಿಂಗಕಳಿಯರು ಧಾಮತ್ರಯ ಪೊಗದವರೂ || 9 ||

ಸಂಸಾರಿಗಳಿಗೆ ಭಿನ್ನರು ತಮೋಗುಣದವರು |
ಕಂಸಾರಿಯಲಿ ದ್ವೇಷವರ ಸ್ವಭಾವಾ ||
ಆ ಸುರಾರಿಗಳು ನಾಲ್ಕು ಪ್ರಕಾರ ದೈತ್ಯ ರಾ |
ಕ್ಷಸರು, ಪಿಶಾಚರವರನುಗರು, ನರಾಧಮರು || 10 ||

ಈ ನಾಲ್ಕು ಬಗೆಯ ಸುರರಿಗೆ ಅರಸು ಕಲಿಯವನಾ |
ಹೀನತನವೆಷ್ಟುಚ್ಚರಿಸಲಿ ಮಿಥ್ಯಾ ||
ಜ್ಞಾನಿ ಭೇದವನರಿಯ ಪಂಚ ಮಹಾಪಾತಕಿ ಪು- |
ರಾಣ ವೇದಗಳಿಗೆ ವಿರುದ್ಧಾರ್ಥ ಕಲ್ಪಿಸುವಾ || 11 ||

ಸುಜನರಾಚರಣೆ ನಡಿಯಗುಡ ದುಃಖ ಬಡಿಸುವ |
ಕುಜನರಿಗನೇಕ ಬಗೆ ಸಹಯವಹನೂ ||
ಪ್ರಜಗಳನ ರೋಗನಾ ವೃಷ್ಟಿಯಿಂ ದಣಿಸುವನು |
ವೃಜನವನ ವಪು ತಾಯಿ ತಂಗಿಯಂಬರನರಿಯ || 12 ||

ಬವರ ಬಂಗಾರ ದ್ಯೂತಾ ಪೇಯ ಅನೃತ ನಟ |
ಯುವತಿಯೀಯಾರು ಸ್ಥಳ ನಿಲಯವವರಿಗೆ ||
ನವವಿಧ ದ್ವೇಷಿಗಳಿಗಾಕಾರನೆನಿಸುವನು |
ಅವನ ಸಮ ಪಾಪಿಗಳು ಮೂರು ಲೋಕದಲಿಲ್ಲ || 13 ||

ಆ ನೀಚನ ಮಲಮೂತ್ರ ವಿಸರ್ಜನದಿ ಘೋರ |
ಕಾನನದಿ ಕತ್ತಲಿಯೊಳಗೆ ಸ್ಮರಿಪುದೂ ||
ಕ್ಷೊಣಿಯೊಳವನ ನಿಂದೆ ನಿರುತದಲಿ ಮಾಡುವದೆ |
ಶ್ರೀನಾಥನರ್ಚನೆ ಮಹಾಯಜ್ಞವೆನಿಸುವದು || 14 ||

ಈ ವಿಧದಿ ಮೂರು ಗುಣದಿಂದ ಪರಸ್ಪರ ಜೀವ |
ಜೀವರಿಗೆ ಭೇದ ಯೋಗ್ಯತಿ ಪ್ರಕಾರಾ ||
ಮೂವರಿಗೆ ಪಾಪಮಿಶ್ರಿತ ಕರ್ಮ ಪುಣ್ಯ ಬಹು |
ನೋವು ಸ್ವರ್ಗ ನರಕ ಸುಮೋಕ್ಷಾದಿ ಗತಿ ಉಂಟು || 15 ||

ಈ ಜೀವರಿಗೆ ಉಳ್ಳನುಭವ ಜಡಗಳಿಗಿಲ್ಲ |
ನೈಜವಾಯಿತು ಭೇದ ಜೀವ ಜಡಕೇ ||
ಆ ಜಡ ತ್ರಿ, ನಿತ್ಯಾ ಅನಿತ್ಯನಿತ್ಯಾ, ನಿತ್ಯ |
ಮಾಜದವು ಅವ್ಯಾಕೃತ ನಭಶೃತಿ ವರ್ಣಗಳೂ || 16 ||

ಪ್ರಾಕೃತ ವಿಕೃತ ವೈಕೃತತ್ರಯ ಅಸ್ಥಿರ ಜಡವು |
ಪ್ರಾಕೃತವಜಾಂಡ ಧೊರ ಆವರಣವೂ ||
ಸ್ವೀಕೃತೈವತ್ತು ಕೋಟ್ಯೋಜನ ಸುವರ್ಣಾತ್ಮ |
ಕಾಕ್ರಮಿಸಿಹದಜಾಂಡಕಿದು ವಿಕೃತ ಜಡವೆಂದು || 17 ||

ಸರಸಿಜ ಭವಾಂಡದೊಳಿಹ ನೆಲ ಜಲಧಿ ಗಿರಿಗಳು |
ಎರಡೇಳು ಭುವನ ವೈಕೃತ ಜಡವಿದೂ ||
ಸ್ಥಿರ ಅಸ್ಥಿರ ಜಡತ್ರಯ ವಿಧ ಪುರಾಣಗಳರ್ಥ |
ಇರುತಿಹವು ಅಚಲಾಗಿ ಶಬ್ದಗಳ ನಿತ್ಯಾ || 18 ||

ಮೂಲ ಪ್ರಕೃತಿಗತ ತ್ರಿವಿಧಾನಂತ ಪರಮಾಣು |
ಜಾಲ ಕಾರಣತ ಸುಸ್ಥಿರವೆನಿಪವೂ ||
ಮ್ಯಾಲೆ ಅದರಿಂದಾದ ತತ್ವಗಳ ನಿತ್ಯ ಮಹ |
ಕಾಲವೆಂದಿಗ್ಯು ನಿತ್ಯ ಅಣುಕಾಲಗಳ ನಿತ್ಯಾ || 19 ||

ಹೀಗೆ ಮೂರು ವಿಧ ಜಡ ಒಂದೊಂದೆ ಮೂರು ಮೂ- |
ರಾಗಿರಲು ಜಡ ಜಡಕೆ ಭೇದ ಸಿದ್ಧಾ ||
ಭಾಗಾರ ಮಾಡಿ ಗುಣರೂಪ ಕ್ರಯದಿ ನೋಡೆ |
ನಾಗಾರಿವಹಗೆ ಜಡಗಳಿಗೆ ಭೇದವೇ ಸತ್ಯಾ || 20 ||

ಈ ಕಮಲಜಾಂಡವು ಅನಿತ್ಯವಿದರೊಳಗೆ ಎಂ- |
ದೂ ಕೆಡದೆ ಸುಖಕಾಂತಿ ಯುಕ್ತವಾದಾ ||
ಶ್ರೀಕಳತ್ರನ ತ್ರಿಧಾಮಗಳು ಕುಕಲಿಗೆ ತಕ್ಕ |
ಶೋಕಪೂರಿತವಾದ ನಿತ್ಯ ನರಕಗಳಿಹವು || 21 ||

ಈ ಪಂಚಭೇದ ಜ್ಞಾನಿಲ್ಲದವ ಶ್ರೀ ಮುದ್ರಿ |
ಗೋಪಿಚಂದನ ಧರಿಸಿದರು ಫಲವೇನೂ ||
ಈ ಪೊಡವಿಯೊಳು ವೇಷಧಾರಿಗಳು ಜೀವಿಸರೆ |
ಆ ಪರಿಯ ಭಾಸ ವೈಷ್ಣವನೆಂದರಿಯಬೇಕೂ || 22 ||

ಹರಿಗುರುಗಳ ದಯ ಪಡೆವರಿಗೆ ರುಚಿ ತೋರ್ವದಿತ |
ರರಿಗೆ ಈ ಕೃತಿಯು ಕರ್ಣ ಕಠೋರವೂ ||
ತರಣಿ ಬರೆ ಸರ್ವರಿಗೆ ಘೂಕಗಾದಂತೆ ಇದು |
ಬರಿಯ ಮಾತಲ್ಲ ಶಾಸ್ತ್ರಕೆ ಸಮ್ಮತಾಗಿಹದು || 23 ||

ಹೀನರೊಳು ಬೆರಿಯದಲೆ ಪಂಚಭೇದವ ತಿಳಿದು |
ಸಾನುರಾಗದಲಿ ಹರಿ ಸರ್ವೋತ್ತುಮಾ ||
ಪ್ರಾಣದೇವರೆ ಗುರುಗಳೆಂದರಿತು ಭಜಿಸುವರು |
ಕಾಣರು ಕು ಸಂಸಾರ ಧಾಮತ್ರ ವೈದುವರು || 24 ||

ಇಪ್ಪತ್ತೈದು ಪದಗಳಿಂದ ಸಂಗತಿಯಾಗಿ |
ಒಪ್ಪುತಿಹ ಈ ಪಂಚಭೇದವನ್ನೂ ||
ತಪ್ಪದಲೆ ನಿತ್ಯ ಪಠಿಸುವರ ಪೊರವವನು ಬೊಮ್ಮ- |
ನಪ್ಪ ಶ್ರೀ ಪ್ರಾಣೇಶ ವಿಠಲನಿಹಪರದಲ್ಲಿ || 25 ||

pancaBEda tiLivadu pratidinadalI |
muncinaja madhvamuni matavanusarisidavaru || pa ||

jIvESarige BEda jIva jIvake BEda |
dEvarigu jaDaku, jaDake jaDa BEdA ||
AvAga jIvarige jaDagaLige BEdunTu |
I vivarava pELve yannApanitu kELuvadU || 1 ||

ISa nitya anAdi svarata sarvaga svapra- |
kASa sarvaj~ja viSva vilakShaNA ||
mESa aparicCinna mUrti prANigaLinda |
tA sAkShiyAgi bahu karmagaLa mADisuva || 2 ||

SrI muKa jagatyakutpatyAdi kAraNa ma- |
hA mahima sarvataMtra svatantrA ||
Amaya vidUra j~jAnAnanda bala pUrNa |
sImeyillada suguNa kriyAtmaka svarUpa || 3 ||

suKa duHKa BOgi jIvanu asvatantra bahu |
kakulAti uLLavanu durviShayadI ||
lakumISanalli Bakti vivarjitanu prati kSha- |
Nake anaMta aparAdhi janma mRuti uLLavanu || 4 ||

Adi vyAdhigaLinda pIDitanu aj~jAni |
mAdhavana baMdhaka SakutiyoLagihyA ||
tA dharisihanu prAkRuta prAkRutAvaraNa |
BEdave siddha yintha jIvagU harigyU || 5 ||

oMdalla sarva jIvaru satva raja tamaru |
yandu BEdagaLunTavara lakShaNA ||
mundina padadi pELve sajjanaru kELiyA- |
nanda baDalendu vinayadali binnaisuvenu || 6 ||

Cinna Baktaru yaniparella dEvatigaLa |
cCinna Baktaru vidhIravarheMDarU ||
cannAgi mudadi I nirjarara taratamya |
vannu kELikobEku j~jAnigaLa muKadinda || 7 ||

vidhi modalu tRuNa jIva pariyaMta sAtvikaru |
idaroLage dEva, RuShi, pitRupa, nararU ||
sudhige yOgya rajAdi gIrvANa gandharva |
tudiyAgi sAMSaru niraMSaruLidavarella || 8 ||

ivarinda Binna rAjasaru gO BU naraka |
trividha gati uLLavaru pancaBEdA ||
vivara taratama dEvara mahatmiyanu ariya |
davaru liMgakaLiyaru dhAmatraya pogadavarU || 9 ||

saMsArigaLige Binnaru tamOguNadavaru |
kaMsAriyali dvEShavara svaBAvA ||
A surArigaLu nAlku prakAra daitya rA |
kShasaru, piSAcaravaranugaru, narAdhamaru || 10 ||

I nAlku bageya surarige arasu kaliyavanA |
hInatanaveShTuccarisali mithyA ||
j~jAni BEdavanariya paMca mahApAtaki pu- |
rANa vEdagaLige viruddhArtha kalpisuvA || 11 ||

sujanarAcaraNe naDiyaguDa duHKa baDisuva |
kujanariganEka bage sahayavahanU ||
prajagaLana rOganA vRuShTiyiM daNisuvanu |
vRujanavana vapu tAyi tangiyaMbaranariya || 12 ||

bavara bangAra dyUtA pEya anRuta naTa |
yuvatiyIyAru sthaLa nilayavavarige ||
navavidha dvEShigaLigAkAranenisuvanu |
avana sama pApigaLu mUru lOkadalilla || 13 ||

A nIcana malamUtra visarjanadi GOra |
kAnanadi kattaliyoLage smaripudU ||
kShoNiyoLavana ninde nirutadali mADuvade |
SrInAthanarcane mahAyaj~javenisuvadu || 14 ||

I vidhadi mUru guNadinda paraspara jIva |
jIvarige BEda yOgyati prakArA ||
mUvarige pApamiSrita karma puNya bahu |
nOvu svarga naraka sumOkShAdi gati unTu || 15 ||

I jIvarige uLLanuBava jaDagaLigilla |
naijavAyitu BEda jIva jaDakE ||
A jaDa tri, nityA anityanityA, nitya |
mAjadavu avyAkRuta naBaSRuti varNagaLU || 16 ||

prAkRuta vikRuta vaikRutatraya asthira jaDavu |
prAkRutavajAnDa dhora AvaraNavU ||
svIkRutaivattu kOTyOjana suvarNAtma |
kAkramisihadajAnDakidu vikRuta jaDavendu || 17 ||

sarasija BavAnDadoLiha nela jaladhi girigaLu |
eraDELu Buvana vaikRuta jaDavidU ||
sthira asthira jaDatraya vidha purANagaLartha |
irutihavu acalAgi SabdagaLa nityA || 18 ||

mUla prakRutigata trividhAnanta paramANu |
jAla kAraNata susthiravenipavU ||
myAle adarindAda tatvagaLa nitya maha |
kAlaveMdigyu nitya aNukAlagaLa nityA || 19 ||

hIge mUru vidha jaDa ondonde mUru mU- |
rAgiralu jaDa jaDake BEda siddhA ||
BAgAra mADi guNarUpa krayadi nODe |
nAgArivahage jaDagaLige BEdavE satyA || 20 ||

I kamalajAnDavu anityavidaroLage eM- |
dU keDade suKakAnti yuktavAdA ||
SrIkaLatrana tridhAmagaLu kukalige takka |
SOkapUritavAda nitya narakagaLihavu || 21 ||

I pancaBEda j~jAnilladava SrI mudri |
gOpichandana dharisidaru PalavEnU ||
I poDaviyoLu vEShadhArigaLu jIvisare |
A pariya BAsa vaiShNavanendariyabEkU || 22 ||

harigurugaLa daya paDevarige ruci tOrvadita |
rarige I kRutiyu karNa kaThOravU ||
taraNi bare sarvarige GUkagAdante idu |
bariya mAtalla SAstrake sammatAgihadu || 23 ||

hInaroLu beriyadale pancaBEdava tiLidu |
sAnurAgadali hari sarvOttumA ||
prANadEvare gurugaLendaritu Bajisuvaru |
kANaru ku saMsAra dhAmatra vaiduvaru || 24 ||

ippattaidu padagaLinda sangatiyAgi |
opputiha I pancaBEdavannU ||
tappadale nitya paThisuvara poravavanu bomma- |
nappa SrI prANESa viThalanihaparadalli || 25 ||

dasara padagalu · Harapanahalli bheemavva · MADHWA · siva

Kashi vishweshwara gangadara

ಕಾಶೀ ವಿಶ್ವೇಶ್ವರ ಗಂಗಾಧರ ಹಿಂಗಿಸೆನ್ನ
ಲಿಂಗ ಭಂಗಬಡಿಸೊ ನರಸಿಂಹ ಭಕ್ತ ||1||

ಭೂತನಾಥ ಪಾರ್ವತೀನಾಥ ತ್ರಿನೇತ್ರ ಎನ್ನ
ಭೀತಿ ಬಿಡಿಸು ಸೇತು ಶ್ರೀರಾಮಲಿಂಗ ||2||

ಹಂಪೆಯಲ್ವಾಸವಾದ ಪಂಪಾಭೀಮೇಶ ಕೃಷ್ಣ ನಿ-
ನ್ನೆಂತೊಲಿಸುವುದೊ ಗೌರೀಕಾಂತ ಶಿವಲಿಂಗ ||3||

kASI viSvESvara gangAdhara hingisenna
linga BangabaDiso narasiMha Bakta ||1||

BUtanAtha pArvatInAtha trinEtra enna
BIti biDisu sEtu SrIrAmalinga ||2||

haMpeyalvAsavAda paMpABImESa kRuShNa ni-
nnentolisuvudo gaurIkAnta Sivalinga ||3||

dasara padagalu · MADHWA · siva

Paalisennanu Paampakshethravaasa

ಪಾಲಿಸೆನ್ನನು ಪಂಪಾಕ್ಷೇತ್ರವಾಸ
ಫಾಲಲೋಚನ ಶಂಭೋ ವ್ಯೋಮಕೇಶ ||pa||

ನೀಲ ಲೋಹಿತ ವೀತ | ಚೈಲ ಭೂಷಿತ ಭಸಿತ
ಕಾಲಾರಿ ಶಿವ ದ್ರೌಣಿ | ಶೂಲ ಪಾಣಿ ||
ಕಾಲ ಕೂಟವ ಮೆದ್ದು
ಕೊಂಡ ಮೇತೌಷಧವನಿತ್ತು ||1||

ವ್ಯಾಧರೂಪದಿ ರಣದಿ ಕಾದು ಪಾರ್ಥಗೆ ಸೋತು
ನೀದಯದಿ ದಿವ್ಯಾಸ್ತ್ರ ಕರುಣಿಸಿದೆಯೋ
ಮೇದಿನೀಶಗೆ ಶಾಸ್ತ್ರ ಬೋಧಿಸಿದ ಮುನಿವರ್ಯ
ವೇದನಂದನ ನಿನ್ನ ಪಾದಕ್ಕೆ ನಮಿಸುವೆನು ||2||

ಕಾಮಾರಿ ಸುಪವಿತ್ರ | ಸೋಮಾರ್ಕಶಿಖಿ ನೇತ್ರ
ಶಾಮಸುಂದರವಿಠಲ ಸ್ವಾಮಿ ಮಿತ್ರ
ಭೀಮ ಪಾವನಗಾತ್ರ ಪ್ರೇಮಾಬ್ಧಿ ಸುಚರಿತ್ರ
ಕಳತ್ರ | ಮಹಿಮ ಚಿತ್ರಾ ||3||

pAlisennanu paMpAkShEtravAsa
PAlalOcana SaMBO vyOmakESa ||pa||

nIla lOhita vIta | caila BUShita Basita
kAlAri Siva drauNi | SUla pANi ||
kAla kUTava meddu
koMDa mEtauShadhavanittu ||1||

vyAdharUpadi raNadi kAdu pArthage sOtu
nIdayadi divyAstra karuNisideyO
mEdinISage SAstra bOdhisida munivarya
vEdanandana ninna pAdakke namisuvenu ||2||

kAmAri supavitra | sOmArkaSiKi nEtra
SAmasundaraviThala svAmi mitra
BIma pAvanagAtra prEmAbdhi sucaritra
kaLatra | mahima citrA ||3||

dasara padagalu · MADHWA · siva

Sambo sura Ganaadarane

ಶಂಭೋ ಸುರಗಂಗಾಧರನೆ ಪಾಲಿಸಂಬಾರಮಣ ಲಿಂಗ ||pa||

ರಂಭ ಜನಕ ಕರುಣಾಂಬುಧಿ ಗುರುವರ ||a.pa||

ಮುರಾರಿ ಮಹದೇವ ನಿನ್ನಯ ಪಾದ
ವಾರಿಜದಳಯುಗವ
ಸಾರಿದೆ ಸತತ ಸರೋರುಹೇಕ್ಷಣ ಹೃ
ದ್ವಾರಿಜದೊಳು ತೋರು ಗಾರುಮಾಡದಲೆನ್ನ
ಅಮಿತ ಗುಣಗುಣ
ವಾರಿನಿಧಿ ವಿಗತಾಘ ವ್ಯಾಳಾ
ಗಾರ ವಿತ್ತಪ ಮಿತ್ರ ಸುಭಗ ಶ
ಪಾವಕ ||1||

ಇಂದು ಮೌಳೀ ಈಪ್ಸಿತಫಲ
ಸಲಿಸುವ ಘನತ್ರಿಶೂಲೀ
ಸಲೆ ನಂಬಿದೆನೊ ಹಾಲಾ ಹಲಕಂಠ ಎನ್ನ ನೀ
ಸಲಹೋ ಸಂತತ ರೌಪ್ಯಾಚಲವಾಸ ವರಪಂಪಾ
ನಿರ್ಜರ ಸೇವಿತಾನಲ
ನಳಿನಸಖ ಸೋಮೇಕ್ಷಣನೆ ಬಾಂ
ದಳಪುರಾಂತಕ ನಿಜಶರಣವ
ತ್ಸಲ ವೃಷಾರೋಹಣ ವಿಬುಧವರ ||2||

ದೃತಡಮರುಗ ಸಾರಂಗ ನಿನ್ನಯಪಾದ
ಶತಪತ್ರಾರ್ಚಿಪರ ಸಂಗ
ಸತತ ಪಾಲಿಸೊ ಜಗನ್ನಾಥ ವಿಠ್ಠಲನ ಸ
ನ್ನುತಿಸುವ ನೆರೆಧೀರ ಕ್ಷಿತಿಧರ ಧೃತಧನ್ವಿ
ಶತಮಖನ ಜೈಸಿದನ ಪುತ್ರನ
ಪಿತನ ಜನಕನ ಕೈಲಿ ಕೊಲಿಸಿದೆ
ಅತುಳ ಭುಜಜಲ ಭೂತಪಡೆ ಪಾ
ವನತಿ ಮುಖಾಂಭೋರುಹ ದಿವಾಕರ ||3||
SaMBO suragangAdharane pAlisaMbAramaNa linga ||pa||

raMBa janaka karuNAMbudhi guruvara ||a.pa||

murAri mahadEva ninnaya pAda
vArijadaLayugava
sAride satata sarOruhEkShaNa hRu
dvArijadoLu tOru gArumADadalenna
amita guNaguNa
vArinidhi vigatAGa vyALA
gAra vittapa mitra suBaga Sa
pAvaka ||1||

indu mauLI IpsitaPala
salisuva GanatriSUlI
sale naMbideno hAlA halakanTha enna nI
salahO santata raupyAcalavAsa varapaMpA
nirjara sEvitAnala
naLinasaKa sOmEkShaNane bAn
daLapurAntaka nijaSaraNava
tsala vRuShArOhaNa vibudhavara ||2||

dRutaDamaruga sAranga ninnayapAda
SatapatrArcipara sanga
satata pAliso jagannAtha viThThalana sa
nnutisuva neredhIra kShitidhara dhRutadhanvi
SatamaKana jaisidana putrana
pitana janakana kaili koliside
atuLa Bujajala BUtapaDe pA
vanati muKAMBOruha divAkara ||3||

dasara padagalu · MADHWA · siva

Shivabaktanaago praani

ಶಿವಭಕ್ತನಾಗೋ ಪ್ರಾಣೀ | ಅವನಿಯಲ್ಲಿ ಪರದಲ್ಲಿ ||
ವಿವಿಧ ಭೋಗಗಳ ಕಾಂಬೀ | ಶಿವಭಕ್ತನಾಗೊ ಪ್ರಾಣೀ ||pa||

ಲಿಂಗಾಧಾರಣ ಮಾಡಿ ಜಂಗಮರಧಿಕಾರಾ ಸಾರೀ |ಹಿಂಗಿಕೊ ಭವಜನ್ನ್ಯ ದುಃಖ ||
ಸಂಗಾವಾಗಿ ರುದ್ರಾಕ್ಷಿಯಂಗಾಳರ್ಚಿಸೂತಾ | ನಿಃ ಸಂಗನಾಗೊ ದುರ್ವಿಷಯದೀ ||1||

ಸುವಿವೇಕಿ ಮನಸಿಲಿಂದಾ ಶಿವಶಬ್ದವ ಶೋಧಿಸಿ |ಕವಿಗಳ ಮುಖದಿಂದ ತಿಳಿಯೋ ||
ನವತ್ರಿಪತ್ರಯುಕ್ತ ಬಿಲ್ವಾ ಸಮರ್ಪಣೆ ಮಾಡೊ |ಸವೆಯಾದಂಥ ಪದವೈದೂವಿ||2||

ಭಜಿಸೋ ವೀಭೂತಿಯನ್ನು ದ್ವಿಜಸ್ತೋಮಾಕೆರಗಾದೀರೊ |ಪ್ರಜಗಳಿಗೆ ತೋರದಿರು ಭಾವಾ ||
ಅಜ ಪ್ರಾಣೇಶ ವಿಠ್ಠಲಾನು ಅಜಿನಾಂಬರ ಸಮನೆನಬ್ಯಾಡಾ |ವಿಜಯವಂತನಾಗುವೀ ಜಗದೀ ||3||

SivaBaktanAgO prANI | avaniyalli paradalli ||
vividha BOgagaLa kAMbI | SivaBaktanAgo prANI ||pa||

lingAdhAraNa mADi jangamaradhikArA sArI |hingiko Bavajannya duHKa ||
sangAvAgi rudrAkShiyangALarcisUtA | niH sanganAgo durviShayadI ||1||

suvivEki manasilindA SivaSabdava SOdhisi |kavigaLa muKadinda tiLiyO ||
navatripatrayukta bilvA samarpaNe mADo |saveyAdantha padavaidUvi||2||

BajisO vIBUtiyannu dvijastOmAkeragAdIro |prajagaLige tOradiru BAvA ||
aja prANESa viThThalAnu ajinAMbara samanenabyADA |vijayavantanAguvI jagadI ||3||

dasara padagalu · MADHWA · siva · Vijaya dasaru

ISha Kailaasavasa

ಈಶಾ ಕೈಲಾಸವಾಸಾ | ಕಾಶೀನಗರಾಧೀಶಾ |
ಶೇಷಭೂಷಣ | ಗಿರೀಶಾ | ವಿಶ್ವೇಶ ಚಿತ್ತವಾಸಾ ||pa||

ಶಿವಸಿದ್ಧ ಸಾಧ್ಯ ಸೇವ್ಯಾ | ಭವವನಾಶವ ದಿವ್ಯ |
ಭವಮೂರ್ತಿ ಕೀರ್ತಿಭವ್ಯಾ | ಕವಿ ಪ್ರಿಯ ಜ್ಞಾನ ದ್ರವ್ಯಾ ಹಾ ||
ಶಿವ ಓಂ ನಮಃ ಶಿವ | ಸÀವಚರಣ ನೋಡುವ |
ಪವಿತ್ರ ಚಿತ್ತವ ಕೊಡು | ಧವಳ ಗಂಗಾಧರನೇ |||1||

ಸತಿನಾಥ ಭೂತ ಪ್ರೀತ | ಸತತ ಸದ್ಗುಣ ವ್ರಾತ |
ಪತಿತ ಪಾವನ ತಾತ | ಕೃತುವೈ ಪದ್ಮಜಾತ ಹಾ ||
ಕ್ಷಿತಿಯೊಳು ನೀಲಲೋಹಿತ | ನೀನೇ ಗುರುವೆಂದು |
ತುತಿಪ ಗತಿಗೆ ರಘು | ಪತಿನಾಮ ಎನಗೀಯೋ ||2||

ತ್ರಯನೇತ್ರ ಚಿತ್ರಗಾತ್ರ | ನಯ ನಮಿಪರ ಮಿತ್ರ ಜಯ |
ಜಯಾಮರ ಸ್ತೋತ್ರ | ದಯಮಾಡೋ ಪುಣ್ಯ ಪಾತ್ರಾ ಹಾ ||
ಭಯ ನಿವಾರಣ ಸಿರಿ | ವಿಜಯವಿಠ್ಠಲನ |
ಭಕುತಿಯ ಕೊಡು ಅತಿ | ಶಯದಿ ಪಿನಾಕೀಶಾ ||3||

ISA kailAsavAsA | kASInagarAdhISA |
SEShaBUShaNa | girISA | viSvESa cittavAsA ||pa||

Sivasiddha sAdhya sEvyA | BavavanASava divya |
BavamUrti kIrtiBavyA | kavi priya j~jAna dravyA hA ||
Siva OM namaH Siva | saÀvacaraNa nODuva |
pavitra cittava koDu | dhavaLa gangAdharanE |||1||

satinAtha BUta prIta | satata sadguNa vrAta |
patita pAvana tAta | kRutuvai padmajAta hA ||
kShitiyoLu nIlalOhita | nInE guruvendu |
tutipa gatige raGu | patinAma enagIyO ||2||

trayanEtra citragAtra | naya namipara mitra jaya |
jayAmara stOtra | dayamADO puNya pAtrA hA ||
Baya nivAraNa siri | vijayaviThThalana |
Bakutiya koDu ati | Sayadi pinAkISA ||3||