ಸ್ವೀಕರಿಸೆನ್ನಯ ಪೂಜೆಯ ತುಳಸೀ
ಲೋಕೋತ್ತರನರಸೀ ||pa||
ಈ ಕರಗಳು ಧನ್ಯಗಳಾಗಲಿ ಮನ
ವ್ಯಾಕುಲ ಪರಿಹರಿಸಮ್ಮ ಜನನಿ ||a.pa||
ಮಲ್ಲಿಗೆ ಸಂಪಿಗೆ ಜಾಜಿ ಸೇವಂತಿಗೆ
ಫುಲ್ಲ ಕುಸುಮವಿರಲು
ಒಲ್ಲನು ಹರಿ ನೀನಿಲ್ಲದ ಪೂಜೆಯ
ಬಲ್ಲರಿದನು ಜ್ಞಾನಿ ಗಳು ಮಾತೆ ||1||
ವಂದಿಸಿ ನಿನ್ನಯ ಚರಣಗಳಿಗೆ ಫಲ
ಗಂಧ ಪುಷ್ಪಗಳನರ್ಪಿಸುವೆ
ಬೃಂದಾವನಲೋಲನ ವಲ್ಲಭೆ ಮೃದು
ಮಂದಹಾಸವನು ತೋರೆ ಮಾತೆ||2||
ನೀನಿದ್ದೆಡೆ ಹರಿ ತಾನಿರುವನು ಅನು
ಮಾನವಿಲ್ಲವೆನಗೆ
ದಾನ ಧರ್ಮಗಳ ಫಲಕೆ ಕಾರಣಳು
ನೀನಾಗಿರುವೆ ಪ್ರಸನ್ನವದನೆ ||3||
svIkarisennaya pUjeya tuLasI
lOkOttaranarasI ||pa||
I karagaLu dhanyagaLAgali mana
vyAkula pariharisamma janani ||a.pa||
mallige saMpige jAji sEvaMtige
Pulla kusumaviralu
ollanu hari nInillada pUjeya
ballaridanu jnanigaLu mAte ||1||
vandisi ninnaya caraNagaLige Pala
gandha puShpagaLanarpisuve
bRundAvanalOlana vallaBe mRudu
mandahAsavanu tOre mAte||2||
nIniddeDe hari tAniruvanu anu
mAnavillavenage
dAna dharmagaLa Palake kAraNaLu
nInAgiruve prasannavadane ||3||
One thought on “Svikarisenna poojeya tulasi”