ಧ್ರುವತಾಳ
ನಿನ್ನ ಕಾಂಬುವದೆನಗೆ ನಿಖಿಳ ಸೌಭಾಗ್ಯ ಪ್ರಾಪ್ತಿನಿನ್ನ ಕಾಂಬುವದೆನಗೆ ನಿತ್ಯಾನಂದನಿನ್ನ ಕಾಂಬುವದೆನಗೆ ಶುಭ ದಿನವೆನಿಪದುನಿನ್ನ ಕಾಂಬುವದೆ ಪರಮ ಮಂಗಳವೋನಿನ್ನ ಕಾಂಬುವದೆ ಘನ್ನ ಯಶಸ್ಸು ಎನಗೆನಿನ್ನ ಕಾಂಬುವದೆ ನಿತ್ಯೋತ್ಸವನಿನ್ನ ಕಾಂಬುವದೆ ದೇಹ ಪಟುತ್ವ ಎನಗೆನಿನ್ನ ಕಾಂಬುವದೆ ನಿಶ್ಚಿಂತವೋನಿನ್ನ ಕಾಂಬುವದೆ ಪರಮ ಪವಿತ್ರ ಎನಗೆನಿನ್ನ ಕಾಂಬುವದೆ ಆರೋಗ್ಯವೋನಿನ್ನ ಕಾಂಬುವದೆ ಗಂಗಾದಿ ಸ್ನಾನ ಎನಗೆನಿನ್ನ ಕಂಡದ್ದನೇಕ ಕೃತು ವಿಶೇಷ ನಿನ್ನ ಕಾಂಬುವದೆ ಷೋಡಶ ಮಹದಾನ ನಿನ್ನ ಕಾಂಬುವದೆ ಸಕಲ ವ್ರತವೋನಿನ್ನ ಕಾಂಬುವದೆ ಶೌರ್ಯ ಧೈರ್ಯನಿನ್ನ ಕಾಂಬುವದೆ ಇಹಪರ ಸೌಖ್ಯವೆಲ್ಲನಿನ್ನ ಕಂಡದ್ದೆ ಮುಕ್ತಿ ನಿಜವಿದುಅನ್ಯಥವಿದಕಿಲ್ಲ ನಿನ್ನ ಪಾದವೆ ಸಾಕ್ಷಿಪನ್ನಗಶಯನ ಗುರು ವಿಜಯ ವಿಠ್ಠಲರೇಯನಿನ್ನ ಕಾಂಬುವದೆ ಇಷ್ಟ ಎನಗೆ ||1||
ಮಟ್ಟತಾಳ
ನಿನ್ನ ಕಾಣದ ದಿನ ಅಶುಭ ದುರ್ದಿನನಿನ್ನ ಕಾಣದ ಜ್ಞಾನ ಅಡವಿಯ ರೋದನ ನಿನ್ನ ಕಾಣದ ಭಕ್ತಿ ರೋಗಿಷ್ಟನ ಶಕುತಿನಿನ್ನ ಕಾಣದ ಸುಖ ತ್ರೈತಾಪ1ದ ದುಃಖನಿನ್ನ ಕಾಣದ ಸ್ನಾನ ಬಧಿರ ಕೇಳುವ ಗಾನನಿನ್ನ ಕಾಣದ ಜಪ ಚಂಡಾರ್ಕನ ತಾಪನಿನ್ನ ಕಾಣದ ತಪ ನಿರ್ಗತ ಪ್ರತಾಪನಿನ್ನ ಕಾಣದ ಆಚಾರ ಬಾಧಿಪ ಗ್ರಹಚಾರನಿನ್ನ ಕಾಣದ ನರ ಕ್ರಿಮಿ ಕೀಟ ವಾನರನಿನ್ನ ಕಾಣದ ಕರ್ಮ ಅರಿಯದಿಪ್ಪ ಮರ್ಮನಿನ್ನ ಕಾಣದ ಪುಣ್ಯ ಗತವಾದ ಧಾನ್ಯನಿನ್ನ ಕಾಣದ ಯಾತ್ರಾ ಅಂಧಕನ ನೇತ್ರಾನಿನ್ನ ಕಾಣದ ಪಾತ್ರಾ ಕಾಣದಿಪ್ಪ ನೇತ್ರಾನಿನ್ನ ಕಾಣದೆ ಬಂದೆ ಪರಿಪರಿ ಸಾಧನ ಅನ್ನಂತ ಮಾಡಿದರು ಅವರಿಗಿಲ್ಲ ಸುಖ ಸ್ವರುಶಚಿನ್ಮಯ ಮೂರುತಿ ಗುರು ವಿಜಯ ವಿಠ್ಠಲ ರೇಯನಿನ್ನ ಕಾಂಬುವದೆಲ್ಲ ಕರ್ಮಕ್ಕೆ ಸಾಧಕ ||2||
ತ್ರಿವಿಡಿ ತಾಳ
ನಿನ್ನ ಕಂಡವ ಸಕಲ ಸಾಧನ ಮಾಡಿದವನಿನ್ನ ಕಂಡವನು ನಿರ್ಮಲನುನಿನ್ನ ಕಂಡವಗುಂಟೆ ಕಲಿಕೃತ ಅಘವನ್ನುನಿನ್ನ ಕಂಡವನೆ ಜೀವನ್ಮುಕ್ತಾನಿನ್ನ ಕಂಡವರಲ್ಲಿ ಸಕಲ ಸುರರು ಉಂಟುನಿನ್ನ ಕಾಂಬುವ ದೇಹ ಸುಕ್ಷೇತ್ರವೊನಿನ್ನ ಕಾಂಬುವ ತನುವು ಪಾವನವೆನಿಪುದುನಿನ್ನ ಕಾಂಬುವದೆ ವಿಮಲ ಕೀರ್ತಿನಿನ್ನ ಕಾಂಬುವ ನರಗೆ ನರಕದ ಭಯ ಉಂಟೆ ?ನಿನ್ನ ಕಾಂಬುವದೆ ಮಾನ್ಯತೆಯೋಉನ್ನತ ಮಹಿಮ ಗುರು ವಿಜಯ ವಿಠ್ಠಲ ರೇಯನಿನ್ನ ಕಾಂಬುವದೇ ನಿಖಿಳ ಸುಖವೋ ||3||
ಅಟ್ಟತಾಳ
ನಿನ್ನನು ಕಾಣದೆ ಧನ್ಯನಾಗೆನೆಂಬೋದುಖಿನ್ನ ಮಾತಲ್ಲದೆ ಸಮ್ಮತವಲ್ಲವುಉನ್ನತ ಗುಣ ನಾರಿ ಪತಿಯುಕ್ತಳಾಗಲುಸನ್ಮಾನ್ಯಳೆನಿಪಳು ಸಂತತ ಸುಖದಿ ಅನಂತ ರೂಪನ್ನ ಕಾಂಬುವ ಜನರೆಲ್ಲಚಿನ್ಮಯನೆನಿಸಿ ಶುಭದಿ ಶೋಭಿಸುವರುಪನ್ನಗಾರಿ ವಾಹನ ಗುರು ವಿಜಯ ವಿಠ್ಠಲರೇಯನಿನ್ನಿಂದ ಭಕುತ ವಿಚ್ಛಿನ್ನ ದಾರಿದ್ರನೋ ||4||
ಆದಿತಾಳ
ನಿನ್ನ ಕಾಂಬುವದೆ ಜನ್ಮಕ್ಕೆ ಸಫಲವೋನಿನ್ನ ಕಾಂಬುವಗೆ ಪುನರಪಿ ಜನ್ಮವಿಲ್ಲಅನಾದಿ ಪ್ರಾರಬ್ಧ ಸಂಬಂಧ ನಿಮಿತ್ಯಜನ್ಮವು ಒದಗಲು ಅವಗಿಲ್ಲ ಲೇಪವುನಿನ್ನ ಕಾಂಬುವನ್ನ ಸುರರೆಲ್ಲ ಮನ್ನಿಪರುನಿನ್ನ ಕಾಂಬುವದೆ ಷಡುರಸ ಭೋಜನಉನ್ನತ ಭಕ್ತ1ನಿಗೆ ಅನ್ನವನೀವೆನೆನಿಪಅನ್ನಮಯ ದೇವ ಗುರು ವಿಜಯ ವಿಠ್ಠಲರೇಯನಿನ್ನ ಕಾಂಬುವಂತೆ ಅಭಿಮುಖನಾಗುವದು ||5||
ಜತೆ
ನಿನ್ನ ಕಾಂಬುವದೆ ನಿತ್ಯೈಶ್ವರ್ಯವೊ ದೇವಾ ಪ್ರ-ಸನ್ನನಾಗುವುದು ಗುರು ವಿಜಯ ವಿಠ್ಠಲರೇಯ ||
Dhruvatāḷa
ninna kāmbuvadenage nikhiḷa saubhāgya prāptininna kāmbuvadenage nityānandaninna kāmbuvadenage śubha dinavenipaduninna kāmbuvade parama maṅgaḷavōninna kāmbuvade ghanna yaśas’su enageninna kāmbuvade nityōtsavaninna kāmbuvade dēha paṭutva enageninna kāmbuvade niścintavōninna kāmbuvade parama pavitra enageninna kāmbuvade ārōgyavōninna kāmbuvade gaṅgādi snāna enageninna kaṇḍaddanēka kr̥tu viśēṣa ninna kāmbuvade ṣōḍaśa mahadāna ninna kāmbuvade sakala vratavōninna kāmbuvade śaurya dhairyaninna kāmbuvade ihapara saukhyavellaninna kaṇḍadde mukti nijavidu’an’yathavidakilla ninna pādave sākṣipannagaśayana guru vijaya viṭhṭhalarēyaninna kāmbuvade iṣṭa enage ||1||
maṭṭatāḷa
ninna kāṇada dina aśubha durdinaninna kāṇada jñāna aḍaviya rōdana ninna kāṇada bhakti rōgiṣṭana śakutininna kāṇada sukha traitāpa1da duḥkhaninna kāṇada snāna badhira kēḷuva gānaninna kāṇada japa caṇḍārkana tāpaninna kāṇada tapa nirgata pratāpaninna kāṇada ācāra bādhipa grahacāraninna kāṇada nara krimi kīṭa vānaraninna kāṇada karma ariyadippa marmaninna kāṇada puṇya gatavāda dhān’yaninna kāṇada yātrā andhakana nētrāninna kāṇada pātrā kāṇadippa nētrāninna kāṇade bande paripari sādhana annanta māḍidaru avarigilla sukha svaruśacinmaya mūruti guru vijaya viṭhṭhala rēyaninna kāmbuvadella karmakke sādhaka ||2||
triviḍi tāḷa
ninna kaṇḍava sakala sādhana māḍidavaninna kaṇḍavanu nirmalanuninna kaṇḍavaguṇṭe kalikr̥ta aghavannuninna kaṇḍavane jīvanmuktāninna kaṇḍavaralli sakala suraru uṇṭuninna kāmbuva dēha sukṣētravoninna kāmbuva tanuvu pāvanavenipuduninna kāmbuvade vimala kīrtininna kāmbuva narage narakada bhaya uṇṭe?Ninna kāmbuvade mān’yateyō’unnata mahima guru vijaya viṭhṭhala rēyaninna kāmbuvadē nikhiḷa sukhavō ||3||
aṭṭatāḷa
ninnanu kāṇade dhan’yanāgenembōdukhinna mātallade sam’matavallavu’unnata guṇa nāri patiyuktaḷāgalusanmān’yaḷenipaḷu santata sukhadi ananta rūpanna kāmbuva janarellacinmayanenisi śubhadi śōbhisuvarupannagāri vāhana guru vijaya viṭhṭhalarēyaninninda bhakuta vicchinna dāridranō ||4||
āditāḷa
ninna kāmbuvade janmakke saphalavōninna kāmbuvage punarapi janmavilla’anādi prārabdha sambandha nimityajanmavu odagalu avagilla lēpavuninna kāmbuvanna surarella manniparuninna kāmbuvade ṣaḍurasa bhōjana’unnata bhakta1nige annavanīvenenipa’annamaya dēva guru vijaya viṭhṭhalarēyaninna kāmbuvante abhimukhanāguvadu ||5||
jate
ninna kāmbuvade nityaiśvaryavo dēvā pra-sannanāguvudu guru vijaya viṭhṭhalarēya ||