MADHWA · modalakalu sesha dasaru · sulaadhi

Mangala vaara suladhi

ಧ್ರುವತಾಳ
ಮಿತ್ರನು ಎಂದು ನಿನ್ನ ಮನದಿ ನಂಬಿದಕ್ಕೆಉತ್ತಮ ಉಪಕಾರ ಮಾಡಿದಯ್ಯಾಶತ್ರುಗಳಂತೆ ನಿಂದು ಬಹಿರಂತರಂಗದಲ್ಲಿಕತ್ತಲೆ ಚರರಿಗೆ ಸಹಾಯಕನಾಗಿನಿತ್ಯ ದುಃಖಗಳುಣಿಸಿ ಎಷ್ಟು ಕೂಗಿದರುನೇತ್ರ ದೃಷ್ಟಿಲಿ ನೋಡದಲೆ ಇರುವ ಬಗೆಯೋಮಿತ್ರರಲಕ್ಷಣವೆ ಅಥವಾ ಶತ್ರುತ್ವದ ಸೊಬಗೆ ಎತ್ತಣದೊ ಇದನು ತೋರದೆನಗೆಕರ್ತೃ ನಿನ್ನಲ್ಲಿ ದೋಷ ಎಂದೆಂದಿಗೆನಿಸ್ತ್ರೈಗುಣ್ಯ ನೆಂದು ಶ್ರುತಿ ಸಾರಿತು ಸ-ರ್ವತ್ರ ಸಮನಾದ ಹರಿ ನೀನು ಜೀವ ಕಾಲ ಪ್ರ-ಕೃತಿ ಅನುಸರಿಸಿ ಸುಖ ದುಃಖ ಹೊತ್ತು ಹೊತ್ತಿಗೆ ತಂದು ತುತ್ತು ಮಾಡಿ ಉಣಿಸಿಕೀತ್ರ್ಯಾಪಕೀರ್ತಿಗಳ ಜಾದಿಗಳಿಗೆಇತ್ತು ಪೊರೆವಿ ಎಂಬ ಕಾರಣದಿಂದ ನಿನಗೆಯುಕ್ತವಾಗದಯ್ಯಾ ದೋಷವನ್ನುಈ ತೆರವಾದ ಬಗೆಯಿಂದ ಎನ್ನ ಕರ್ಮದಂತೆ ದು-ಷ್ಕøತ್ಯಗಳುಂಬೆನೆಂದು ನಿಶ್ಚೈಸುವೆ ಧಾ-ರಿತ್ರಿಯೊಳಗೆ ಅಶಕ್ತರಾದವರೆಲ್ಲಶಕ್ತರಾದವರೆಲ್ಲ ಆಶ್ರೈಸೆಅತ್ಯಭಿಮಾನದಿಂದ ಪೊರೆಯದಿರಲು ಆವ ಕೀರ್ತಿ ಐದುವನೆಂತು ಮಾನ್ಯನಾಗಿ ತಾ-ಪತ್ರಯ ಕಳಿಯದಿರೆ ಅನುಸಾರ ಮಾಳ್ಪದೇಕೆ (ದ್ಯಾಕೊ)ಕೃತ್ಯಾಭಿಮಾನಿಗಳ2 ಸುರರೊಡಿಯ ಮುಕ್ತಾಮುಕ್ತರಾಶ್ರಯ ಗುರು ವಿಜಯ ವಿಠ್ಠಲರೇಯಭಕ್ತವತ್ಸಲ ದೇವ ಮಹಾನುಭಾವಾ ||1||

ಮಟ್ಟತಾಳ
ಅನಾದಿ ಕರ್ಮವನು ಅನುಭವ ಮಾಡುವದುಪ್ರಾಣಾದ್ಯಮರರಿಗೆ ತಪ್ಪುವದು ಎಂದುಜಾಣತನದಲಿಂದ ಜಾರಿ ಪೋಗುವದೊಳಿತೆಶ್ರೀನಾಥನ ನಿನ್ನ ಪಾದ ಸಾರಿದ ಜನಕೆ ಅನೇಕ ಜನ್ಮದ ಪಾಪ ತಕ್ಷಣದಲ್ಲೆವೇವಿನಾಶವಾಗುವದೆಂದು ಶೃತಿ ಸಾರುತಲಿದಕೋದೀನರಾಗಿ ನಿನ್ನ ಸ್ತುತಿಪರು ಸುರರೆಲ್ಲ ಎನಗಿದ್ದ ಕರ್ಮವನು ಕ್ಷೀಣವೈದಿಸದಿರಲುವಿನಯದಿಂದಲಿ ನಿನಗೆ ಬೇಡಿಕೊಂಬುವದೇಕೆ (ದ್ಯಾಕೆ)ಪ್ರಾಣನಾಥ ಗುರು ವಿಜಯ ವಿಠ್ಠಲರೇಯಾ ಪ್ರೀಣ ನಾಗುತಿರಲು ನಿಲ್ಲುವದೆ ದೋಷ ||2||

ತ್ರಿವಿಡಿತಾಳ
ವೆಂಕಟನೆಂಬೊ ನಾಮ ವ್ಯವಹಾರ ತೋರುತಿದೆಪಂಕಜಾಕ್ಷನೆ ಇನಿತು ನಡತಿಯಿಂದ“ಯತ ತೋಪಿ ಹರೆಃ ಪದ ಸಂಸ್ಮರಣೆ ಸಕಲಂ ಹ್ಯಗಮಾಶುಲಯಂ ವ್ರಜತಿ’’ಎಂಬೋ ಉಕ್ತಿಗೆ ಕಳಂಕ ಬಾರದೇನೊ ಈ ತೆರ ನುಡಿದರೆಶಂಕರ2ನೆಂಬೊ ನಾಮ ನುಡಿಯಲ್ಯಾಕೆ ನಿಖಿಳಾಘ ವಿನಾಶಕನೆಂಬೊದೇನೋಮಂಕು ಜನರ ಪಾಪ ಕಳೆಯದಿರೆ“ಯಂಕಾಮಯೆ ತಂತು ಮುಗ್ರಂ ತೃಣೋಮಿ’’ ಎಂಬಬಿಂಕದ ಉಕುತಿಗೆ ಘನ್ನತ್ಯಾಕೆ ಸಂಕಟ ಹರ ಗುರ ವಿಜಯ ವಿಠ್ಠಲ ನಿನ್ನಗ-ಲಂಕಾರವಾಗದಯ್ಯಾ ಇನಿತು ನೋಡೆ ||3||

ಅಟ್ಟತಾಳ
ಮಾಡಿದ ಕರ್ಮವ ಕ್ಷೀಣವೈದಸದಿರಲುನಾಡೊಳಗೆ ಪುಟ್ಟಿ ಅನುಭವಿಸಲೆ ಎನ್ನಯೂಢವಾದ ಕಲ್ಪ ತಿರುಗಿ ತಿರುಗಿದರುಗಾಢವಾದ ಕರ್ಮ ನಾಶವಾಗದು ಕೇಳೊಈಡು ಇಲ್ಲದಿಪ್ಪ ಸೌಖ್ಯದಾಯ ಮುಕ್ತಿಪ್ರೌಢರಾದವರಿಗೆ ದುರ್ಲಭವೆ ಸರಿ ರೂಢಿಯ ಜನಕಿನ್ನು ಪೇಳುವದ್ಯಾತಕೆಗೂಢ ಕರುಣಿ ಗುರು ವಿಜಯ ವಿಠ್ಠಲ ಎಂಬೊರೂಢಿಯ ಸರಿ ಮತ್ತೆ ಯೋಗ ಎನ್ನಲ್ಯಾಕೆ ||4||

ಆದಿತಾಳ
ವಿನಯದಿಂದಲಿ ಒಮ್ಮೆ ಹರಿ ಎನೆ ಹರಿ ಎಂದು ಸ್ಮರಿಸಲುಜನ್ಮ ಜನ್ಮದ ಪಾಪ ಪರಿಹಾರವಾಗುವವುಅನುನಯದಿ ಮತ್ತೊಮ್ಮೆ ಅಚ್ಯುತನೆಂದು ನೆನೆಯೆಮನದಲ್ಲಿ ತೋರಿ ನೀನು ಆನಂದ ಬಡಿಸುವಿಘನ ಮಹಿಮನೆ ನಿನ್ನ ಮೂರನೆ ಖ್ಯಾತಿ ನೆನೆಯೆಅನಾದಿಯಿಂದ ಬಂದ ಪ್ರತಿಬಂಧ ದೂರ ಮಾಡಿಆನಂದಪ್ರದವಾದ ಸ್ಥಾನವನ್ನು ಐದಿಸುವ ಚಿನುಮಯನೆ ನಿನ್ನ ನಾಲ್ಕನೆಯ ಬಾರಿ ನೆನೆಯೆಋಣವನ್ನೆ ತೀರೆಸುವೆ ಉಪಾಯವಿಲ್ಲ ನಿನಗೆಅನುಮಾನ ಇದಕಿಲ್ಲ ಬಲಿಯೇ ಇದಕೆ ಸಾಕ್ಷಿಇನಿತು ನಿನ್ನ ಮಹಿಮೆ ಶ್ರುತಿ ಸ್ಮøತಿ ವರಲುತಿರೆಎನಗಿದ್ದ ದುಷ್ಕರ್ಮ ಪರಿಹಾರ ಮಾಡದಿರಲುಘನವಾದ ಮಹಿಮೆಯು ಲೌಕಿಕವಾಗದೇನೊಸನಕಾದಿ ಮುನಿ ವಂದ್ಯ ಗುರು ವಿಜಯ ವಿಠ್ಠಲರೇಯಮನಕ್ಕೆ ತಂದುಕೋ ಎನ್ನ ಬಿನ್ನಪವ ||5||

ಜತೆ
ಭಕುತಿ ಇಲ್ಲದೆ ಬರಿದೆ ಸಥೆಯಿಂದಲಿ ಬಿನ್ನೈಸಿದೆಉಕುತಿ ಲಾಲಿಸು ಗುರು ವಿಜಯ ವಿಠ್ಠಲರೇಯ ||

Dhruvatāḷa
mitranu endu ninna manadi nambidakke’uttama upakāra māḍidayyāśatrugaḷante nindu bahirantaraṅgadallikattale cararige sahāyakanāginitya duḥkhagaḷuṇisi eṣṭu kūgidarunētra dr̥ṣṭili nōḍadale iruva bageyōmitraralakṣaṇave athavā śatrutvada sobage ettaṇado idanu tōradenagekartr̥ ninnalli dōṣa endendigenistraiguṇya nendu śruti sāritu sa-rvatra samanāda hari nīnu jīva kāla pra-kr̥ti anusarisi sukha duḥkha hottu hottige tandu tuttu māḍi uṇisikītryāpakīrtigaḷa jādigaḷige’ittu porevi emba kāraṇadinda ninageyuktavāgadayyā dōṣavannu’ī teravāda bageyinda enna karmadante du-ṣkaøtyagaḷumbenendu niścaisuve dhā-ritriyoḷage aśaktarādavarellaśaktarādavarella āśraise’atyabhimānadinda poreyadiralu āva kīrti aiduvanentu mān’yanāgi tā-patraya kaḷiyadire anusāra māḷpadēke (dyāko)kr̥tyābhimānigaḷa2 suraroḍiya muktāmuktarāśraya guru vijaya viṭhṭhalarēyabhaktavatsala dēva mahānubhāvā ||1||

maṭṭatāḷa
anādi karmavanu anubhava māḍuvaduprāṇādyamararige tappuvadu endujāṇatanadalinda jāri pōguvadoḷiteśrīnāthana ninna pāda sārida janake anēka janmada pāpa takṣaṇadallevēvināśavāguvadendu śr̥ti sārutalidakōdīnarāgi ninna stutiparu surarella enagidda karmavanu kṣīṇavaidisadiraluvinayadindali ninage bēḍikombuvadēke (dyāke)prāṇanātha guru vijaya viṭhṭhalarēyā prīṇa nāgutiralu nilluvade dōṣa ||2||

triviḍitāḷa
veṅkaṭanembo nāma vyavahāra tōrutidepaṅkajākṣane initu naḍatiyinda“yata tōpi hareḥ pada sansmaraṇe sakalaṁ hyagamāśulayaṁ vrajati’’embō uktige kaḷaṅka bāradēno ī tera nuḍidareśaṅkara2nembo nāma nuḍiyalyāke nikhiḷāgha vināśakanembodēnōmaṅku janara pāpa kaḷeyadire“yaṅkāmaye tantu mugraṁ tr̥ṇōmi’’ embabiṅkada ukutige ghannatyāke saṅkaṭa hara gura vijaya viṭhṭhala ninnaga-laṅkāravāgadayyā initu nōḍe ||3||

aṭṭatāḷa
māḍida karmava kṣīṇavaidasadiralunāḍoḷage puṭṭi anubhavisale ennayūḍhavāda kalpa tirugi tirugidarugāḍhavāda karma nāśavāgadu kēḷo’īḍu illadippa saukhyadāya muktiprauḍharādavarige durlabhave sari rūḍhiya janakinnu pēḷuvadyātakegūḍha karuṇi guru vijaya viṭhṭhala emborūḍhiya sari matte yōga ennalyāke ||4||

āditāḷa
vinayadindali om’me hari ene hari endu smarisalujanma janmada pāpa parihāravāguvavu’anunayadi mattom’me acyutanendu neneyemanadalli tōri nīnu ānanda baḍisuvighana mahimane ninna mūrane khyāti neneye’anādiyinda banda pratibandha dūra māḍi’ānandapradavāda sthānavannu aidisuva cinumayane ninna nālkaneya bāri neneye’r̥ṇavanne tīresuve upāyavilla ninage’anumāna idakilla baliyē idake sākṣi’initu ninna mahime śruti smaøti varalutire’enagidda duṣkarma parihāra māḍadiralughanavāda mahimeyu laukikavāgadēnosanakādi muni vandya guru vijaya viṭhṭhalarēyamanakke tandukō enna binnapava ||5||

jate
bhakuti illade baride satheyindali binnaiside’ukuti lālisu guru vijaya viṭhṭhalarēya ||

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s