MADHWA · vijayeendra theertharu · vyasarayaru

Sri Vyasaraja sthothram

ವಂದೇ ಮುಕುಂದಮರವಿಂದಭವಾದಿವಂದ್ಯಮ್
ಇಂದಿಂದಿರಾಪ್ರತತಮೇಚಕಮಾಕಟಾಕ್ಷಂ |
ಬಂದೀಕೃತಾಮರಮಮಂದಮತಿಮ್ ವಿದಧ್ಯಾತ್
ಆನಂದತೀರ್ಥಹೃದಯಾಂಬುಜಮತ್ತಭೃಂಗಃ || ೧ ||

ಶ್ರೀ ವ್ಯಾಸಯೋಗೀ ಹರಿಪಾದರಾಗೀ
ಭಕ್ತಾತಿಪೂಗೀ ಹಿತದಕ್ಷಸದ್ಗೀಃ |
ತ್ಯಾಗೀ ವಿರಾಗೀ ವಿಷಯೇಷು ಭೋಗೀ
ಮುಕ್ತೌ ಸದಾ ಗೀತಸುರೇಂದ್ರಸಂಗೀ || ೨ ||

ಲಕ್ಷ್ಮೀಶಪಾದಾಂಬುಜಮತ್ತಭೃಂಗಃ
ಸದಾ ದಶಪ್ರಜ್ಞನಯಪ್ರಸಂಗಃ |
ಅದ್ವೈತವಾದೇ ಕೃತಮೂಲಭಂಗಃ
ಮಹಾವ್ರತೀಶೋ ವಿಷಯೇಷ್ವಸಂಗಃ || ೩ ||

ಸದಾ ಸದಾಯತ್ತಮಹಾನುಭಾವಃ
ಭಕ್ತಾಘತೂಲೋಚ್ಛಯತೀವ್ರದಾವಃ |
ದೌರ್ಜನ್ಯವಿಧ್ವಂಸನದಕ್ಷರಾವಃ
ಶಿಷ್ಯೇಭ್ಯ ಯೋ ಯಚ್ಛತಿ ದಿವ್ಯಗಾವಃ || ೪ ||

ಅದ್ವೈತದಾವಾನಲಕಾಲಮೇಘಃ
ರಮಾರಮಸ್ನೇಹವಿದಾರಿತಾಘಃ |
ವಾಗ್ವೈಖರೀನಿರ್ಜಿತಸಜ್ಜನೌಘಃ
ಮಾಯಾಮತವ್ರಾತಹಿಮೇ ನಿದಾಘಃ || ೫ ||

ಮಧ್ವಸಿದ್ಧಾಂತದುಗ್ದಾಬ್ಧಿವೃದ್ದಿಪೂರ್ಣಕಲಾಧರಃ
ವ್ಯಾಸರಾಜಯತೀಂದ್ರೋ ಮೇ ಭೂಯಾದೀಪ್ಸಿತಸಿದ್ಧಯೇ || ೬ ||

ಯನ್ನಾಮಗ್ರಹಣಾದೇವ ಪಾಪರಾಶಿಃ ಪಲಾಯತೇ |
ಸೋಽಯಂ ಶ್ರೀವ್ಯಾಸಯೋಗೀಂದ್ರೋ ನಿಹಂತು ದುರಿತಾನಿ ನಃ || ೭ ||

ಯನ್ಮೃತ್ತಿಕಾದರ್ಶನಮಾತ್ರಭೀತಃ
ಕ್ವಚಿತ್ಪಿಶಾಚಸ್ತದನುವ್ರತೇಭ್ಯಃ |
ದತ್ವಾಧನಂ ವಾಂಛಿತಮಾಪ್ಯ ತಸ್ಯ
ತೈರ್ವಾ ಜಿತೋಽಯಾದಚಿರೇಣ ಮುಕ್ತಿಮ್ || ೮ ||

ಯತ್ಕೌಶಿಕಾನಾಸಿಕಾಕ್ತಜಲಾನ್ನಿಃ ಶಂಕಿತೇ ನರೇ |
ವ್ಯಾಘ್ರೋಮಹಾನಪಿ ಸ್ಪ್ರಷ್ಟುಂ ನಾಶಕತ್ತ್ವಾಮಿಹಾಶ್ರಯೇ || ೯ ||

ದ್ವಾತ್ರಿಂಶತ್ಸಪ್ತಶತಕಮೂರ್ತೀರ್ಹನುಮತಃ ಪ್ರಭೋ |
ಪ್ರತಿಷ್ಠಾತಾ ಸ್ಮ್ರುತಿಖ್ಯಾತಸ್ತಂ ಭಜೇ ವ್ಯಾಸಯೋಗಿನಮ್ || ೧೦ ||

ಸೀಮಾನಂ ತತ್ರ ತತ್ರೈತ್ಯ ಕ್ಷೇತ್ರೇಷು ಚ ಮಹಾಮತಿಃ |
ವ್ಯವಸ್ಥಾಪ್ಯಾತ್ರ ಮರ್ಯಾದಾಂ ಲಭ್ದವಾಂಸ್ತಮಿಹಾಶ್ರಯೇ || ೧೧ ||

ಮಧ್ವದೇಶಿಕಸಿದ್ಧಾಂತಪ್ರವರ್ತಕಶಿಖಾಮಣಿಃ |
ಸೋಽಯಂ ಶ್ರೀವ್ಯಾಸಯೊಗೀಂದ್ರೋ ಭೂಯಾದೀಪ್ಸಿತ ಸಿದ್ಧಯೇ || ೧೨ ||

ಭೂತಪ್ರೇತಪಿಶಾಚಾದ್ಯಾ ಯಸ್ಯ ಸ್ಮರಣಮಾತ್ರತಃ |
ಪಲಾಯಂತೇ ಶ್ರೀನೃಸಿಂಹಸ್ಥಾನಂ ತಮಹಮಾಶ್ರಯೇ || ೧೩ ||

ವಾತಜ್ವರಾಽದಿ ರೋಗಾಶ್ಚ ಭಕ್ತ್ಯಾ ಯಮುಪಸೇವಿನಃ |
ದೃಢವ್ರತಸ್ಯ ನಶ್ಯಂತಿ ಪಿಶಾಚಾಶ್ಚ ತಮಾಶ್ರಯೇ || ೧೪ ||

ತಾರಾಪೂರ್ಣಂ ಬಿಂದುಯುಕ್ತ ಪ್ರಥಮಾಕ್ಷರಪೂರ್ವಕಮ್ |
ಚತುರ್ಥ್ಯಂತಂ ಚ ತನ್ನಾಮ ನಮಃ ಶಬ್ದಾಂತಭೂಷಿತಮ್ || ೧೫ ||

ಪಾಠಯಂತಂ ಮಧ್ವ್ವನಯಂ ಮೇಘಗಂಭೀರಯಾ ಗಿರಾ |
ಧ್ಯಾಯನ್ನಾವರ್ತಯೇದ್ಯಸ್ತು ಭಕ್ತ್ಯಾ ಮೇಧಾಂ ಸ ವಿಂದತೇ || ೧೬ ||

ರತ್ನಸಿಂಹಾಸನಾಽರೂಢಂ ಚಾಮರೈರಭಿವೀಜಿತಮ್ |
ಧ್ಯಾಯನ್ನಾವರ್ತತೇ ಯಸ್ತು ಮಹತೀಂ ಶ್ರಿಯಮಾಪ್ನುಯಾತ್ || ೧೭ ||

ಪ್ರಹ್ಲಾದಸ್ಯಾವತರೋಸಾವೀಂದ್ರಸ್ಯಾಽನುಪ್ರವೇಶವಾನ್ |
ತೇನ ತತ್ಸೇವಿನಾಂ ನೃಣಾಂ ಸರ್ವಮೇತದ್ಭವೇದ್ಧ್ರುವಮ್ || ೧೮ ||

ನಮೋ ವ್ಯಾಸಮುನೀಂದ್ರಾಯ ಭಕ್ತಾಭೀಷ್ಟಪ್ರದಾಯಿನೇ |
ನಮತಾಂ ಕಲ್ಪತರವೇ ಭಜತಾಂ ಕಾಮಧೇನವೇ || ೧೯ ||

ವ್ಯಾಸರಾಜಗುರೋ ಮಹ್ಯಂ ತ್ವತ್ಪಾದಾಂಬುಜಸೇವನಾತ್ |
ದುರಿತಾನಿ ವಿನಶ್ಯಂತು ಯಚ್ಛ ಶೀಘ್ರಂ ಮನೋರಥಾನ್ || ೨೦ ||

ಯೋ ವ್ಯಾಸತ್ರಯಸಂಜ್ಞಕಾನ್ ದ್ರೃಢತರಾನ್ ಮಧ್ವಾರ್ಯಶಾಸ್ತ್ರಾರ್ಥಕಾನ್
ರಕ್ಷದ್ವಜ್ರಶಿಲಾಕೃತೀನ್ ಬಹುಮಾತಾನ್ ಕೃತ್ವಾ ಪರೈರ್ದುಸ್ತರಾನ್ |
ಪ್ರಾಯಚ್ಛನ್ನಿಜಪಾದಪದ್ಮಸರಸಿಜಾಸಕ್ತನೃಣಾಂ ಮುದಾ
ಸೋಯಂ ವ್ಯಾಸಮುನೀಶ್ವರೋ ಭವತು ಮೇ ತಪತ್ರಯಾಕ್ಷಾಂತಯೇ || ೨೧ ||

ಮಧ್ವಭಕ್ತೋ ವ್ಯಾಸಶಿಷ್ಯಪೂರ್ಣಪ್ರಜ್ಞಮತಾನುಗಃ |
ವ್ಯಾಸರಾಜಮುನಿಶ್ರೇಷ್ಠಃ ಪಾತು ನಃ ಕೃಪಯಾ ಗುರುಃ || ೨೨ ||

ವ್ಯಾಸರಾಜೋ ವ್ಯಾಸರಾಜ ಇತಿ ಭಕ್ತ್ಯಾ ಸದಾ ಜಪನ್ |
ಮುಚ್ಯತೇ ಸರ್ವದುಃಖೇಭ್ಯಸ್ತದಂತರ್ಯಾಮಿಣೋಬಲಾತ್ || ೨೩ ||

ಸ್ತುವನ್ನನೇನ ಮಂತ್ರೇಣ ವ್ಯಾಸರಾಜಾಯ ಧೀಮತೇ |
ಅಭಿಷೇಕಾರ್ಚನಾದೀನ್ಯಃ ಕುರುತೇ ಸ ಹಿ ಮುಕ್ತಿಭಾಕ್ || ೨೪ ||

ಗುರುಭಕ್ತ್ಯಾ ಭವೇದ್ವಿಷ್ಣುಭಕ್ತಿರವ್ಯಭಿಚಾರಿಣೀ |
ತಯಾ ಸರ್ವಂ ಲಭೇದ್ಧೀಮಾಂಸ್ತಸ್ಮಾದೇತತ್ಸದಾ ಪಠೇತ್ || ೨೫ ||

ನ್ಯಾಯಚಂದ್ರಿಕಯಾ ಯುಕ್ತಂ ನ್ಯಾಯಾಮೃತಕಲಾನಿಧಿಮ್ |
ತರ್ಕೋಡುತಾಂಡವಕೃತಿಂ ವ್ಯಾಸತೀರ್ಥವಿಧುಂ ಭಜೇ || ೨೬ ||
|| ಇತಿ ಶ್ರೀ ವಿಜಯೀಂದ್ರತೀರ್ಥ ವಿರಚಿತ ಶ್ರೀವ್ಯಾಸರಾಜಸ್ತೋತ್ರಮ್ ಸಂಪುರ್ಣಂ ||

vandE mukundamaravindaBavAdivaMdyam
indindirApratatamEcakamAkaTAkShaM |
bandIkRutAmaramamandamatim vidadhyAt
AnandatIrthahRudayAMbujamattaBRungaH || 1 ||

SrI vyAsayOgI haripAdarAgI
BaktAtipUgI hitadakShasadgIH |
tyAgI virAgI viShayEShu BOgI
muktau sadA gItasurEndrasangI || 2 ||

lakShmISapAdAMbujamattaBRungaH
sadA daSapraj~janayaprasangaH |
advaitavAdE kRutamUlaBangaH
mahAvratISO viShayEShvasangaH || 3 ||

sadA sadAyattamahAnuBAvaH
BaktAGatUlOcCayatIvradAvaH |
daurjanyavidhvaMsanadakSharAvaH
SiShyEBya yO yacCati divyagAvaH || 4 ||

advaitadAvAnalakAlamEGaH
ramAramasnEhavidAritAGaH |
vAgvaiKarInirjitasajjanauGaH
mAyAmatavrAtahimE nidAGaH || 5 ||

madhvasiddhAntadugdAbdhivRuddipUrNakalAdharaH
vyAsarAjayatIndrO mE BUyAdIpsitasiddhayE || 6 ||

yannAmagrahaNAdEva pAparASiH palAyatE |
sO&yaM SrIvyAsayOgIndrO nihantu duritAni naH || 7 ||

yanmRuttikAdarSanamAtraBItaH
kvacitpiSAcastadanuvratEByaH |
datvAdhanaM vAnCitamApya tasya
tairvA jitO&yAdacirENa muktim || 8 ||

yatkauSikAnAsikAktajalAnniH SaMkitE narE |
vyAGrOmahAnapi spraShTuM nASakattvAmihASrayE || 9 ||

dvAtriMSatsaptaSatakamUrtIrhanumataH praBO |
pratiShThAtA smrutiKyAtastaM BajE vyAsayOginam || 10 ||

sImAnaM tatra tatraitya kShEtrEShu ca mahAmatiH |
vyavasthApyAtra maryAdAM laBdavAMstamihASrayE || 11 ||

madhvadESikasiddhAntapravartakaSiKAmaNiH |
sO&yaM SrIvyAsayogIndrO BUyAdIpsita siddhayE || 12 ||

BUtaprEtapiSAcAdyA yasya smaraNamAtrataH |
palAyaMtE SrInRusiMhasthAnaM tamahamASrayE || 13 ||

vAtajvarA&di rOgASca BaktyA yamupasEvinaH |
dRuDhavratasya naSyanti piSAcASca tamASrayE || 14 ||

tArApUrNaM binduyukta prathamAkSharapUrvakam |
caturthyantaM ca tannAma namaH SabdAntaBUShitam || 15 ||

pAThayantaM madhvvanayaM mEGagaMBIrayA girA |
dhyAyannAvartayEdyastu BaktyA mEdhAM sa viMdatE || 16 ||

ratnasiMhAsanA&rUDhaM cAmarairaBivIjitam |
dhyAyannAvartatE yastu mahatIM SriyamApnuyAt || 17 ||

prahlAdasyAvatarOsAvIndrasyA&nupravESavAn |
tEna tatsEvinAM nRuNAM sarvamEtadBavEddhruvam || 18 ||

namO vyAsamunIndrAya BaktABIShTapradAyinE |
namatAM kalpataravE BajatAM kAmadhEnavE || 19 ||

vyAsarAjagurO mahyaM tvatpAdAMbujasEvanAt |
duritAni vinaSyantu yacCa SIGraM manOrathAn || 20 ||

yO vyAsatrayasaMj~jakAn drRuDhatarAn madhvAryaSAstrArthakAn
rakShadvajraSilAkRutIn bahumAtAn kRutvA parairdustarAn |
prAyacCannijapAdapadmasarasijAsaktanRuNAM mudA
sOyaM vyAsamunISvarO Bavatu mE tapatrayAkShAMtayE || 21 ||

madhvaBaktO vyAsaSiShyapUrNapraj~jamatAnugaH |
vyAsarAjamuniSrEShThaH pAtu naH kRupayA guruH || 22 ||

vyAsarAjO vyAsarAja iti BaktyA sadA japan |
mucyatE sarvaduHKEByastadaMtaryAmiNObalAt || 23 ||

stuvannanEna mantrENa vyAsarAjAya dhImatE |
aBiShEkArcanAdInyaH kurutE sa hi muktiBAk || 24 ||

guruBaktyA BavEdviShNuBaktiravyaBicAriNI |
tayA sarvaM laBEddhImAMstasmAdEtatsadA paThEt || 25 ||

nyAyacandrikayA yuktaM nyAyAmRutakalAnidhim |
tarkODutAnDavakRutiM vyAsatIrthavidhuM BajE || 26 ||
|| iti SrI vijayIndratIrtha viracita SrIvyAsarAjastOtram saMpurNaM ||

dasara padagalu · MADHWA · madhwacharyaru · vyasarayaru

Entu pogalalo ninna

ಎಂತು ಪೊಗಳಲೊ ನಿನ್ನ-ಯತಿಕುಲ ಶಿರೋರನ್ನ ||pa||

ಶಾಂತ ಮಧ್ವಾಚಾರ್ಯ ಸಂತ ಕುಲವರ್ಯ ||a.pa||

ಪ್ರಥಮಾವತಾರದಲಿ ವ್ರತತಿ ರಾಮನ ಭಜಿಸಿಅತಿ ಪಂಥದಿಂದ ಶರಧಿಯನು
ದಾಟಿಕ್ಷಿತಿಜೆಗಂಕಿತವಿತ್ತು ಪೂದೋಟವನು ಕಿತ್ತೆಪ್ರತಿಗಾಣೆ ನಿನಗೆ ಅಪ್ರತಿ ಪರಾಕ್ರಮಿಯೆ ||1||

ದ್ವಿತಿಯಾವತಾರದಲಿ ದೇವಕೀಜನ ಕಂಡುಸತಿಗೆ ಕಾಮಿಸಿದವನ ಸಾಹಸದಿ ಸದೆದೆ
ಪ್ರತಿಯಾದ ಮಾಗಧನಪೃತನದಲಿ ನೀ ಕೊಂದೆಪ್ರತಿಯ ಕಾಣೆನೊ ನಿನಗೆ ಮೂಜ್ಜಗದೊಳಗೆ ||2||

ತೃತಿಯಾವತಾರದಲಿ ತ್ರಿಜಗನುತಿಸಲು ಬಂದುಯತಿಯಾಗಿ ಮಹಾಮಹಿಮನನು ಭಜಿಸಿದೆಕ್ಷಿತಿಗಧಿಕ
ಉಡುಪಿಯಲಿ ಕೃಷ್ಣನ್ನ ನಿಲಿಸಿ ಪ್ರತಿಮತಮತವ ಮುರಿದೆ ಪೂರ್ಣಪ್ರಜ್ಞ ಮುನಿವರನೆ ||3||

Entu pogalalo ninna-yatikula siroranna ||pa||

Santa madhvadhvadhvacarya santa kulavarya ||a.pa||

Prathamavataradali vratati ramana Bajisi^^ati panthadinda Saradhiyanu
Datikshitijegankitavittu pudotavanu kittepratigane ninage aprati parakramiye ||1||

Dvitiyavataradali devakijana kamdusatige kamisidavana sahasadi sadede
Pratiyada magadhanaprutanadali ni kondepratiya kaneno ninage mujjagadolage ||2||

Trutiyavataradali trijaganutisalu banduyatiyagi mahamahimananu bajisidekshitigadhika
Udupiyali krushnanna nilisi pratimatamatava muride purnapraj~ja munivarane ||3||

dasara padagalu · MADHWA · narayana varma · vyasarayaru

Narayana varma by Vyasarajaru

ಸರ್ವದೇಶದಲ್ಲೇ ಶ್ರೀಹರಿ ನಮ್ಮನ್ನು ರಕ್ಷಿಸೋ
ಜಲದಲ್ಲಿ ಮತ್ಸ್ಯಾವತಾರನಾಗಿ
ಸ್ಥಳದಲ್ಲಿ ವಾಮನನಾಗಿ ರಕ್ಷಿಸೋ ನಿನ್ನ ಭಕ್ತರನ್ನು
ಆಕಾಶದಲ್ಲಿ ತ್ರಿವಿಕ್ರಮನಾಗಿ ರಕ್ಷಿಸೋ।।

ಭಯಗಳಲ್ಲಿ ನಾರಸಿಂಹನಾಗಿ
ಮಾರ್ಗದಲ್ಲಿ ವರಾಹನಾಗಿ ರಕ್ಷಿಸೋ ನಿನ್ನ ಭಕ್ತರನ್ನು
ಪರ್ವತಾಗ್ರದಲ್ಲಿ ಪರಶುರಾಮನಾಗಿ ರಕ್ಷಿಸೋ
ವನವಾಸದಲ್ಲಿ ರಾಮಚಂದ್ರನಾಗಿ ।।

ಕರ್ಮಬಂಧಂಗಳ ಕಳೆದು ರಕ್ಷಿಸೋ ನಮ್ಮ ಕಪಿಲಮೂರ್ತಿ
ಕಾವೇಶದಲ್ಲಿ ಸನತ್ಕುಮರನಾಗಿ ರಕ್ಷಿಸೋ
ದುರ್ಮಾರ್ಗದಲ್ಲಿ ಹಯಗ್ರೀವನಾಗಿ
ಅನ್ಯದೇವತೆ ಪೂಜಾ ಅಲ್ಲೇ ರಕ್ಷಿಸೋ ನಮ್ಮ ಮಹಿದಾಸ ।।

ಪಾಷಂಡಮತದಲ್ಲಿ ಬೌದ್ಧನಾಗಿ ರಕ್ಷಿಸೋ
ಅನ್ಯ ದೂತಣಿ ಅವತರಿಸಿ ನಮ್ಮ ದುಂದುಭಿಯಾದಿಂದಲಿ ರಕ್ಷಿಸೋ
ನಮ್ಮ ಶ್ರೀವಿಶ್ವಮೂರ್ತಿ ನರಕಗಳಿಂದಲಿ ಕೂರ್ಮನಾಗಿ ರಕ್ಷಿಸೋ
ಆಪತ್ತುಗಳಿಗೆ ಧನ್ವಂತ್ರಿಯಾಗಿ ಕಲಿಯುಗ ಕಲ್ಮಶ ರಕ್ಷಿಸೋ ।।

ನಮ್ಮ ಕಲ್ಕಿ ಮೂರ್ತಿ
ಪ್ರಾತಃಕಾಲದಲ್ಲಿ ಕೇಶವ ನಮ್ಮನ್ನು ರಕ್ಷಿಸೋ
ಸಂಧ್ಯಾಕಾಲದಲ್ಲಿ ವಿಷ್ಣು ನಮ್ಮ ರಕ್ಷಿಸೋ
ಸಂಗಮದಲಿ ಗೋವಿಂದನಾಗಿ ಸಾಯಂಕಾಲದಲ್ಲಿ ರಕ್ಷಿಸೋ ।।

ನಮ್ಮ ಶ್ರೀಧರನಾಗಿ ಪೂರ್ವಕಾಲದಲ್ಲಿ ಹೃಷೀಕೇಶ ನಮ್ಮನ್ನು ರಕ್ಷಿಸೋ
ನಿಶಾಕಾಲದಲ್ಲಿ ಪದ್ಮನಾಭನಾಗಿ ಅಪರಾತ್ರಿ ಕಾಲದಲ್ಲಿ ರಕ್ಷಿಸೋ
ನಮ್ಮ ಶ್ರೀ ವಿಶ್ವಮೂರ್ತಿ ಉಷಃಕಾಲದಲ್ಲಿ ಜನಾರ್ಧನನಾಗಿ ರಕ್ಷಿಸೋ ।।

ಸಕಲ ಕಾಲವು ಸಂಧಿಸಿ ಶ್ರೀ ಹರಿ ನಿಮ್ಮ ಚಕ್ರವು
ಅತಿ ಶಾಲಪ್ರಭೆಯಂತೆ ಪ್ರಳಯಕಾಲದ ಅಗ್ನಿಯಂತೆ
ಈ ಮೂರು ಷಡವೈದು ಸೈನ್ಯಗಳ ಅಗ್ನಿವಾಯು ಒಡಗೂಡಿ ತೃಣವ
ಸುಡುವಂತೆ ಭೂತಗಂಧರ್ವರ ಪೂಷಾಂಡವ ಕೆಡಿಸಿ
ನಮ್ಮ ಸಲಹದೆನುತ ವಿಷ್ಣು ಶಂಖವೇ ನಿಮ್ಮ ಧ್ವನಿ ಕೇಳಿ
ರಾಕ್ಷಸರು ಭಯಬಿಡಿಸಿ ಎದೆಯೊಡೆಸಿ ಲಯವನ್ನು ಮಾಡಿ
ವಿಷ್ಣು ಗಜೇಂದ್ರ ರಾಕ್ಷಸರ ಕಡೆದು ಚೂರ್ಣವ ಮಾಡಿ
ಕಿವಿಗಳ೦ತುದುರಿಸಿ ಭೂಮಿಯಲ್ಲೇ ಅವತರಿಸಿ
ವೈಷ್ಣವ ಸುಜನರನು ಸಲಹೆಂದು ನಿಮ್ಮ ಪ್ರಾರ್ಥನೆಯ ನಾ ಮಾಡಿದೆ
ಸಾಮವೇದಕೆ ಭೀಮನಾದ ಗರುಡಗೆ ಸಲಹುವನು
ನಮ್ಮ ಪ್ರಾಣಾ೦ಗ ಭೂಮಿ ದಿಕ್ಕು ದಿಕ್ಕಿಗೆ ನಾರಸಿಂಹ ಮೂರುತಿಯಾಗಿ
ತಾ ಒಳ ಹೊರಗೆ ವ್ಯಾಪಕನಾಗಿ
ಶ್ರೀಹರಿ ಇದ್ದು ರಕ್ಷಿಸಲಿ ಘೋರ ದುರಿತಗಳೆಲ್ಲ
ಓಡುತಿರಲಿ ಅಂದಾಪರಿಯಲಿ ಸರ್ವವ್ಯಾಪಕನಾಗಿ ರಕ್ಷಿಸೋ
ಎಲ್ಲಾ ಪರಿಯಿಂದ ಭಕ್ತರನ್ನು ನೆನೆಯೆ ಮಧ್ವಗುರು ಅಂತರ್ಯಾಮಿ
ನಮ್ಮ ಶ್ರೀಮದಾನಂದತೀರ್ಥರನು ಸುವ್ವಿ ಸರ್ವೋತ್ತಮನೆ
ಸುವ್ವಿ ವಿಶ್ವರೂಪನೆ ಸುವ್ವಿ ನಮ್ಮ ಶ್ರೀಮದನಂತಾವತಾರಗಳಿಗೆ
ಸುವ್ವಿ ಎಂದು ಪಾಡಿ ಸುಖಿಯಾದ ಜಮದಗ್ನಿ ವತ್ಸಲ ಭೃಗುರಾಮ
ಭೂಮಿ ಜಲದಲ ಜಯ ಶ್ರೀರಾಮ ಜಾನಕಿ ವಲ್ಲಭ
ದಶರಥ ರಾಮ ರಾಮ ನಾಮಕ್ಕಿಂತ ಇನ್ನ್ಯಾವುದೂ ಸರಿಯಿಲ್ಲವೆಂದು
ಮೊರೆ ಹೊಕ್ಕೆನು ಶ್ರೀಹರಿಯೇ ಮುಕ್ತಿ ಬಲವಂತ
ಮುಕ್ತಿ ಗೋವಿಂದ ಕಾಮಧೇನು ಕಲ್ಪತರು ಗೋವಿಂದ
ನಾಮೋಚ್ಚರಣ ಪರಮಾತ್ಮ ಗೋವಿಂದ ಸ್ಮೃತಿತತಿಗಳ ಕೊಂಡಾಡುವೆ
ಹರೇ ನಾರಾಯಣ ಪುರಾಣ ಪುರುಷೋತ್ತಮ
ಆದಿನಾರಾಯಣ ಮಂತ್ರವೊಂದೇ ಅಂಬರೀಷನ ಮರಿಕಾಯ್ದಿತ್ತು
ಈ ಮಂತ್ರ ತುಂಬುರು ನಾರದರಿಗೆ ಶ್ರೀ ಕೃಷ್ಣಮಂತ್ರ
ಶಂಭು ನಾರಿಪಿತನ ಸಲಹಿತು


Sarvadesadalle srihari nammannu rakshiso
Jaladalli matsyavataranagi
Sthaladalli vamananagi rakshiso ninna Baktarannu
Akasadalli trivikramanagi rakshiso||

Bayagalalli narasimhanagi
Margadalli varahanagi rakshiso ninna Baktarannu
Parvatagradalli parasuramanagi rakshiso
Vanavasadalli ramachandranagi ||

Karmabandhangala kaledu rakshiso namma kapilamurti
Kavesadalli sanatkumaranagi rakshiso
Durmargadalli hayagrivanagi
Anyadevate puja alle rakshiso namma mahidasa ||

Pashandamatadalli bauddhanagi rakshiso
Anya dutani avatarisi namma dundubiyadindali rakshiso
Namma srivisvamurti narakagalindali kurmanagi rakshiso
Apattugalige dhanvantriyagi kaliyuga kalmasa rakshiso ||

Namma kalki murti
Pratahkaladalli kesava nammannu rakshiso
Sandhyakaladalli vishnu namma rakshiso
Sangamadali govindanagi sayankaladalli rakshiso ||

Namma sridharanagi purvakaladalli hrushikesa nammannu rakshiso
Nisakaladalli padmanabanagi aparatri kaladalli rakshiso
Namma sri visvamurti ushahkaladalli janardhananagi rakshiso ||

Sakala kalavu sandhisi sri hari nimma cakravu
Ati salaprabeyante pralayakalada agniyamte
I muru shadavaidu sainyagala agnivayu odagudi trunava
Suduvante butagandharvara pushandava kedisi
Namma salahadenuta vishnu sankave nimma dhvani keli
Rakshasaru bayabidisi edeyodesi layavannu madi
Vishnu gajendra rakshasara kadedu curnava madi
Kivigalantudurisi bumiyalle avatarisi
Vaishnava sujanaranu salahendu nimma prarthaneya na madide
Samavedake bimanada garudage salahuvanu
Namma prananga bumi dikku dikkige narasimha murutiyagi
Ta ola horage vyapakanagi
Srihari iddu rakshisali gora duritagalella
Odutirali andapariyali sarvavyapakanagi rakshiso
Ella pariyinda Baktarannu neneye madhvaguru antaryami
Namma srimadanandatirtharanu suvvi sarvottamane
Suvvi visvarupane suvvi namma srimadanantavataragalige
Suvvi endu padi sukiyada jamadagni vatsala brugurama
Bumi jaladala jaya srirama janaki vallaba
Dasaratha rama rama namakkinta innyavudu sariyillavemdu
More hokkenu srihariye mukti balavanta
Mukti govinda kamadhenu kalpataru govinda
Namoccarana paramatma govinda smrutitatigala kondaduve
Hare narayana purana purushottama
Adinarayana mantravonde ambarishana marikaydittu
I mantra tumburu naradarige sri krushnamantra
Sambu naripitana salahitu

dasara padagalu · MADHWA · vyasarayaru

Elli mayavadane rangayyanu

ಎಲ್ಲಿ ಮಾಯಾವಾದನೆ ರಂಗಯ್ಯನು ಎಲ್ಲಿ ಮಾಯಾವಾದನೆ||pa||

ಎಲ್ಲಿ ಮಾಯಾವಾದ ಫುಲ್ಲನಾಭಕೃಷ್ಣ|
ಚೆಲ್ಲೆ ಗಂಗಳೆಯರು ಹುಡುಕ ಹೋಗುವ ಬನ್ನಿ ||a.pa||

ಮಂದ ಗಮನೆಯರೆಲ್ಲ ಕೃಷ್ಣನ ಕೂಡೆಚೆಂದದಿ ಇದ್ದೆವಲ್ಲ
ಕಂದರ್ಪ ಬಾಧೆಗೆ ಗುರಿಯ ಮಾಡಿದನಲ್ಲಮಂದಮತಿ ನಮಗೆ ಬಂದು ಒದಗಿತಲ್ಲ ||1||

ಸರಸಿಜಾಕ್ಷಿಯರು ಕೂಡಿ ಕೃಷ್ಣನ ಕೂಡೆಸರಸವಾಡುತಲಿದ್ದೆವೆ|
ಕರೆಕರೆಗೊಳಿಸಿ ಮನ್ಮಥ ಬಾಧೆಗೊಪ್ಪಿಸಿಚರಣ ಸೇವಕರಾದ ತರಳೆಯರನು ಬಿಟ್ಟು ||2||

ಭಕ್ತವತ್ಸಲ ದೇವನು ತನ್ನವರನ್ನುಅಕ್ಕರದಲಿ ಪೊರೆವನು
ಸಿಕ್ಕದೆ ಹೋಗನು ಹುಡುಕುತ್ತ ಹೋಗುವಅಕ್ಕಯ್ಯ ಬನ್ನಿರೆ ಉಡುಪಿ ಶ್ರೀಕೃಷ್ಣನು ||3||

Elli mayavadane rangayyanu ||pa||

Elli mayavada pulanaba krushna
Calvagamgaleyaru hudukahoguva banni ||a.pa||

Mandagamaneyarella krushnana kude
Chandadi iddevalla
Kamndarpana badhege guriya madidanalla
Mandamatiyu namage bandu odagitalla ||1||

Sarasijakshiyaru kudi krushnana kude
Sarasavadutaliddeve
Karekaregolisi manmatha badhegoppisi
Carana sevakarada tarunirille bittu ||2||

Baktavatsaladevanu tannavaranu
Akkarimdali porevenu
Sikkade hoganu hudukutta hoguva
Akkayya bannire udupi srikrushnanu ||3||

MADHWA · sulaadhi · Vijaya dasaru · vyasarayaru

Vyasarayara suladhi

ಧ್ರುವತಾಳ
ಬಂದು ದಿವಸ ನಾರಂದ ಮುನೀಶ್ವರ
ನಂದ ಗೋಪನ ಕಂದ ಇಂದಿರಾರಮಣನ
ಸಂದರುಶನ ಮಾಡಿ ಬಂದ ಹರಿವರ್ಷ
ವೆಂದೆಂಬೊ ಖಂಡದೊಳಾನಂದ ಗಾಯನದಿಂದ
ನಿಂದು ನರ ಮೃಗಗೆ ವಂದಿಸಿ ತೆರಳುತಿರೆ
ಅಂದು ಪ್ರಹ್ಲಾದನು ದ್ವಂದ್ವ ಪಾದಕೆರಗಿ
ಇಂದು ದ್ವಾರಕೆ ಪುರದಿಂದ ಪೊರಟು ನಡೆ
ತಂದ ವಾರ್ತೆ ಎನಗೊಂದುಸರಲಿಲ್ಲ ದೀನ
ಬಂಧು ಎನಿಸಿ ಕೊಂಬ ವೃಂದಾರಕ ಮುನಿ
ಮುಂದುಗಾಣದಲೆ ಕಣ್ಣಿಂದ ಬಾಷ್ಪೋದಕ
ಬಿಂದುಗಳುದರಿಸುತ ನಂದನಂದನ ಚರಿತೆ
ಒಂದೊಂದು ಪೇಳಲದರಿಂದ ಮೈಮರೆದು ಹೋ
ಎಂದು ಶಿರವದೂಗಿ ಮುನಿಗೆ ಎರಗಿ
ಕಂಧರ ಬಾಗಿ ನಾನೆಂದಿಗೆ ಕೃಷ್ಣನ
ವಂದಿಸುವೆನೆನಲು ಮಂದಹಾಸದಿಂದ
ಮಂದರೋದ್ಧರ ವಿಜಯವಿಠ್ಠಲ ಯಶೋದೆ
ಕಂದನ ಲೀಲೆಯಾನಂದ ಪೇಳೆನ್ನ ಮುನಿ
ಅಂದು ವಿವರಿಸಿದ ಅಂದವಾಗಿ ನಲಿದು ||1||

ಮಟ್ಟತಾಳ
ಸಕಲದೇವರೊಳು ರುಕ್ಮಿಣಿ ಅರಸನ್ನ
ಸುಖಸಮುದಾಯಕೆ ಅಕಟ ನಾನೇನೆಂಬೆ
ಸಕಲಭೂಷಣ ಸುರನಿಕರ ಸಂದಣಿಯಲ್ಲಿ
ಮುಕುತಾಮುಕುತರ ಸೇವಕರ ಕರದಿಂದ
ಅಕಳಂಕನಾಗಿ ಸಕಲ ಸೇವಿಯಗೊಂಬ
ಮಕ್ಕಳಮಾಣಿಕ ರಂಗ ವಿಜಯ ವಿಠ್ಠಲನ್ನ
ಭಕುತರೊಳಗ್ರಣಿ ಯುಕುತಿಯಲಿ ಪೇಳಿದನು ||2||

ತ್ರಿವಿಡಿತಾಳ
ಹರಿಯ ಪಾದಕ್ಕೆರಗಿ ವರಪ್ರಹ್ಲಾದನು
ಎರದೊಂದು ಮಾರ್ಗದಲ್ಲಿ ಕೃಷ್ಣನ ಮೂರುತಿಯ
ಪರಿಪರಿಯಲ್ಲಿ ಭಜಿಸಿ ಧನ್ಯನಾಗುವೆನೆಂದು
ಸುರ ಮುನಿಗೆರಗಿ ನಿಂದಿರಲಾಗಿ ನಾರದ
ಕರುಣದಿಂದಲಿ ಉತ್ತರವ ಪೇಳಿದ ನಾನೀ
ಧರೆಯೊಳು ಜನಿಸುವ ವರವ ಪಡೆದು ಇಪ್ಪೆ
ಪರಮ ಭಾಗವತರ ರಮಣಿಯೆ ನೀನು
ಧಾರುಣಿಯೊಳಗವತರಿಸಿ ಅಧಿಕವಾದ
ಮಾರುತ ಮತದೊಳಗೆ ಚರಿಸಿ ಕೃಷ್ಣನ ಪೂಜೆ
ನಿರುತ ಬಿಡದೆ ಮಾಡಿ ಹರುಷ ಬಡೆಂದೆನಲು
ಕರುಣವಾರಿಧಿ ನರಹರಿ ವಿಜಯ ವಿಠಲನ್ನ
ಸ್ಮರಿಸಿ ಶೇಷಾಂಶ ಧರಿಸಿ ದೇಹವ ತಾಳ್ದಾ||3||

ಅಟ್ಟತಾಳ
ಬನ್ನೂರು ಸ್ಥಳದಲ್ಲಿ ಜನಿಸಿದರು ಬ್ರ
ಹ್ಮಣ್ಯ ತೀರ್ಥರಪಾವನ್ನ ಕರದಲ್ಲಿ
ಸನ್ಮನವಾಗಿ ಪಾಲನವಾದರು ಮುನಿ
ರನ್ನ ಶ್ರೀ ಪಾದರಾಯನ್ನ ಬಳಿಯಲ್ಲಿ
ಚನ್ನಾಗಿ ವಿದ್ಯಾ ಸಂಪನ್ನವಾದರು ಬಲು
ಅನ್ಯಮತವ ಬೇವಾಟನ್ನ ಮಾಡಿ ಸುಪ್ರ
ಸನ್ನ ಹರಿಯ ಕಾರುಣ್ಯವ ಪಡೆದರು
ಚನ್ನಾಗಿ ಕೃಷ್ಣ ಶ್ರೀ ವಿಜಯ ವಿಠಲನ್ನ
ಸನ್ನುತಿಸಿ ಧ್ಯಾನವನ್ನೆ ಕೈಕೊಂಡ ||4||

ಆದಿತಾಳ
ಗುರು ವ್ಯಾಸಮುನಿಯೆಂದು ಧರಣಿಯೊಳಗೆ ಪೆಸರಾಗಿ
ನೆರದು ಸಜ್ಜನರಿಗೆರೆದು ನ್ಯಾಯಶಾಸ್ತ್ರ
ಅರುಹಿ ವೈಷ್ಣವಮತ ಅದರಿಂದ ಉದ್ಧರಿಸಿ
ಪೊರೆದು ನಂಬಿದವರ ಎರಡೊಂದು ಜನ್ಮ
ಸುಂದರ ಗರ್ಭದಲಿ ಬಂದು
ಪರಿಪೂರ್ಣ ಜ್ಞಾನಭಕ್ತಿ ವೈರಾಗ್ಯದಲ್ಲಿ ನಡೆದು
ಎರಡೊಂದು ಉತ್ತಮ ಗುರುಸಂತತಿಯೊಳಗೆ
ಚರಿಸಿ ಚತುರಾಶ್ರಮ ಧರಿಸಿ ಚತುರರಾಗಿ
ಭರತ ಖಂಡದೊಳು ಪಸರಿಸಿ ಕೀರ್ತಿಯ ಪಡೆದು
ಭರದಿಂದ ವಾಲಗವ ಸುರರಿಂದ ಕೈಕೊಳುತ
ಪರಲೋಕದಲಿ ಒಪ್ಪಿ ನಿರಾಮಯ
ಗುಣನಿಧಿ ವಿಜಯವಿಠ್ಠಲರೇಯನ
ನೆರೆನಂಬಿ ಪ್ರತಿದಿನ ಮೆರೆದು ಮೂರ್ಧನ್ಯರಾಗಿ||5||

ಜತೆ
ಪ್ರಹ್ಲಾದನೇ ವ್ಯಾಸಮುನಿಯೇ ರಾಘವೇಂದ್ರ
ಅಹುದೆಂದು ಭಜಿಸಿರೋ ವಿಜಯ ವಿಠ್ಠಲ ಒಲಿವಾ||6||

Dhruva tala

bAndu divasa narada munisvara
Nandagopana kanda indiraramanana
Sandarusana madi bandha hari varsha
Vendembo kandadolananda gayanadinda
Nindu nara mrugage vandisi teralutire
Andu pralhadanu dvandva padakkeragi
Indu dvarakapuradinda poratu nade-
Tanda varte enagondusaralilla dina
Bandhu enisikomba vrundaraka muni
Munduganadale kanninda bashpodaka
Bindugaludarisuta nanda nandana charite
Ondondu pelaladarinda maimaredu ho
Endu Sirava dugi munige eragi
Kandhara bagi nanendige krushnana
Vandisuvenenalu mandahasadinda
Mandaroddhara “vijayaviththala” yasode
Kandana lileyananda pelenna muni

Matta tala

Amdu vivarisida andavagi nalidu
Sakala devarolu rugmini arasanna
Suka samudayakke akata nanenembe
Sakala bushana suranikara sandaniyalli
Mukutamukutara sevakara karadinda
Akalankanagi sakala seveyagomba
Makkala manika ramga ” vijayaviththala”nna
Bakutarolagrani yukutili pelidanu

Trividi tala 

Hariya padakkeragi vara pralhadanu
Eradondu margadali krushna murtiya
Pari pariyalli Bajisi dhanyanaguvenendu
Suramunigeragi nindiralagi narada
Karunadindali uttarava pelida nani
Dhareyolu janisuva varava padedu ippe
Parama bagavatara vara maniye ninu
Dharuniyolagavatarisi adhikavada
Maruta matadolage carisi krushnana puje
Niruta bidade madi harushabadendenalu karuna
Varidhi narahari ” vijayaviththala”nna smarisi “sesha
Vesa” dharisi dehava talda

Atta tala 

Bannuru sthaladalli janisidaru bra
Hmanyatirthara pavanna karadalli
Sanmanavagi palanavadaru muni
Ranna sripadarayanna baliyalli
Channagi vidya sampannaradaru balu
Anya matava bevatanyava madi supra
Sanna hariyu karunyava padedaru
Chennagi krushna sri “vijayaviththala”nna
Sannutisi dhyanavanne kaigonda

aadi tala 

Guruvyasamuniyendu dharuniyolage
Pesaragi nerada sajjanarige eradu nyayasastra
Aruhi vaishnava mata adarinda uddharisi
Poredu nambidavara eradondu janma
Sundara garbadali bandu
Paripurna j~jana Bakti vairagyadalli nadedu
Eradondu uttama guru santateyolage
Charisi chaturasramadharisi chaturaragi
Baratakandadolu pasarisi kirtiya padedu
Baradinda valagavu suradinda kaikoluta
Paralokadali oppi niramaya gunanidhi
“vijayaviththala ” reyana neranambi pratidina
Meredu murdhanyaragi

Jate
Prahladane vYasamuniye raghavendra rahu|
Dendu bajisiro “vijayaviththala” valiva ||

bhagavad gita sara · dasara padagalu · MADHWA · vyasarayaru

Bhagavad gita sara

ಕೇಳಯ್ಯ ಎನ್ನ ಮಾತು ಪಾರ್ಥನೆ ಗೀತಾದರ್ಥನೆ ||ಪ||

ಶ್ಲೋಕ |
ಕುರುಕ್ಷೇತ್ರದಿ ಎನ್ನವರು ಪಾಂಡವರು
ಪೇಳೋ ಸಂಜಯಾ ಏನು ಮಾಡುವರು ಕೂಡಿ |
ಕೇಳಯ್ಯ ಅರಸನೆ ನೋಡಿ ಪಾಂಡವರ ಸೇನಾ|
ಮಾತನಾಡಿದ ನಿನ್ನ ಸುತ ದ್ರೋಣಗಿಂತು ||

ಪಲ್ಲವಿ|
ಕೇಳಿ ತಾ ಪಾರ್ಥನು ಕುರು ದಂಡ
ರಣದಲಿ ಚಂಡ | ಗಾಂಡೀವ ಕರದಂಡ
ಅಚ್ಯುತ ಪಿಡಿರಥ ನಡೆ ಮುಂದ
ಬಹು ತ್ವರದಿಂದ | ನೋಡುವೆ ನೇತ್ರದಿಂದ ||
ಗುರುಹಿರಿಯರ ಕೂಡ ಯಾಕೆಂದ
ಯುದ್ಧ ಸಾಕೆಂದ | ಭಿಕ್ಷವೆ ಸುಖವೆಂದ||
ಕುಂತಿಸುತ ಈ ಮಾತು ಉಚಿತಲ್ಲ
ನಿನಗಿದು ಸಲ್ಲ | ಪಿಡಿ ಗಾಂಡೀವ ಬಿಲ್ಲ ||೧||

ಶ್ಲೋಕ|
ಬಾಲ್ಯ ಯೌವನ ಮುಪ್ಪುತನ ದೇಹದಲ್ಲಿ
ಇಂಥ ದೇಹಕೆ ಮೋಹ ಮತ್ತ್ಯಾಕಿಲ್ಲಿ|
ಕಾಯ್ದು ಕೊಲ್ಲುವ ನಾನು ಇರುತಿರಲು ಇಲ್ಲಿ
ಬಿಲ್ಲು ಪಿಡಿದು ಕೀರ್ತಿಪಡೆ ಲೋಕದಲ್ಲಿ ||

ಪಲ್ಲವಿ|
ಶಸ್ತ್ರದಂಜಿಕೆಯಿಲ್ಲ ಜೀವಕ್ಕೆ
ಈ ದೇಹಕ್ಕೆ| ಪಾವಕನ ದಾಹಕ್ಕೆ |
ಉದಕಗಳಿಂದ ವೇದನೆಯಕ್ಕೆ
ಜೀವಕ್ಕ | ಮಾರುತನ ಶೋಷಕ್ಕೆ
ನಿತ್ಯ ಅಭೇದ್ಯ ತಾ ಜೀವನ
ಸನಾತನ| ವಸ್ತ್ರದಾಂಗೆ ಈ ತನವು |
ನನಗಿಲ್ಲಯ್ಯ|ಅದನಾ ಬಲ್ಲೆನಯ್ಯಾ ||೨||

ಶ್ಲೋಕ|
ಜ್ಞಾನ ದೊಡ್ಡದು ಕರ್ಮಬಂಧನವ ಬಿಟ್ಟು
ಕರ್ಮ ಬಿಟ್ಟರೆ ಪ್ರತ್ಯವಾಯವದೆಷ್ಟು |
ಫಲ ಬಿಟ್ಟು ನೀ ಮಾಡು ಸತ್ಕರ್ಮಗಳ
ಸಮ ದೇಹಕೆ ಫಲಕರ್ಮ ಕಾರಣವಲ್ಲ ||
ಪಲ್ಲವಿ | ಕರ್ಮದಲ್ಲೆ ನಿನಗಧಿಕಾರ
ಫಲ ತಾ ದೂರ| ಧನುಂಜಯಗೋಸ್ಕರ|
ಇತ್ತ ಬಾರಯ್ಯ | ಯೋಗಬುದ್ಧಿ ಮಾಡಯ್ಯ|
ಜಿತ ಬುದ್ಧಿ ಯಾವುದೈ ಕೇಶವ
ಜಗತ್ಪಾಶವ | ನೋಡದೇ ಪರಮೇಶ |
ಗೋವಿಂದನಲಿ ಮನವಿಟ್ಟವ
ಕಾಮ ಬಿಟ್ಟವ ಜಿತ ದೇಹ ತಾನಾದಾ ||೩||

ಶ್ಲೋಕ|
ಜ್ಞಾನ ದೊಡ್ಡದು ಕರ್ಮದಲ್ಲ್ಯಾಕೆ ಎನ್ನ
ಬುದ್ಧಿ ಮೋಹಿಸಿ ಕೃಷ್ಣ ಕೇಳಯ್ಯ ಬಿನ್ನಪ||
ಕರ್ಮವಿಲ್ಲದೆ ಮೋಕ್ಷವುಂಟೆ ಇನ್ನು
ಕರ್ಮ ಮೋಕ್ಷದ ಬುದ್ಧಿಗೆ ಬೀಜವಲ್ಲೆ||
ಪಲ್ಲವಿ |
ಯುದ್ಧ ಕರ್ಮವ ಮಾಡೋ ಪಾಂಡವ
ರಣ ತಾಂಡವ | ವೈರಿ ಷಂಡನೆಂಬುವ|
ಜನರೆಲ್ಲ ಮಾಳ್ಪರೋ ನಿನ್ನ ನೋಡಿ
ಮತ್ತೆನ್ನ ನೋಡಿ | ನೋಡಿದರ ನೀ ಬೇಡಿ |
ಎನಗ್ಯಾಕೆ ಪೇಳಯ್ಯ ಜನಕರ್ಮ
ಕ್ಷತ್ರಿಯ ಧರ್ಮ | ನಷ್ಟವಾಗುವದು ಧರ್ಮ|
ಅರ್ಪಿಸು ಎನ್ನಲ್ಲಿ ಸರ್ವವು
ಬಿಟ್ಟು ಗರ್ವವು | ತಿಳಿ ಎನ್ನೊಳು ಸರ್ವವು ||೪||

ಶ್ಲೋಕ|
ಯೋಗ ಸನ್ಯಾಸ ಎರಡು ಮುಕ್ತಿಗೆ ಧೃಡವು
ಭೋಗವರ್ಜಿತ ಕೀಳು ಸನ್ಯಾಸಿಯಿರವು |
ಹೇಗೆ ಪದ್ಮಕೆ ವಾರಿಯ ಲೇಪವಿಲ್ಲ
ಹಾಗೆ ಭಕ್ತಿಗೆ ಸಂಸೃತಿಯ ಇಲ್ಲ ||
ಪಲ್ಲವಿ |
ಅಜನಲ್ಲಿ ದ್ವಿಜನಲ್ಲಿ ಗಜದಲ್ಲಿ
ಸಮನಾನಲ್ಲಿ| ಭಜಿಪರ ಮನದಲ್ಲಿ
ಮನಸು ಯಾರ ಜೀವಕೆ ಬಂದು
ಇತ್ತ ಬಾರೆಂದು | ಮತ್ತೆ ವೈರಿ ದಾರೆಂದು|
ಲೋಷ್ಟ ಕಾಂಚನ ನೋಡು ಸಮಮಾಡಿ|
ಆಸನ ಹೂಡಿ | ನಾಸಿಕ ತುದಿ ನೋಡಿ|
ಧ್ಯಾನ ಮಾಡು ಹರಿ ಅಲ್ಲಿಹ
ಅವನಲ್ಲಿಹ | ಯೋಗ ಸನ್ನಿಹಿತನವನೇ ||೫||

ಶ್ಲೋಕ|
ಯಾರ ಭಕ್ತಿಯು ಎನ್ನ ಪಾದಾಬ್ಜದಲ್ಲಿ
ಘೋರ ಸಂಸಾರ ಯಾತನೆ ಅವರಿಗೆಲ್ಲಿ|
ಶರೀರವೆ ಕ್ಷೇತ್ರವೆಂತೆಂದು ತಿಳಿಯೋ||
ಪಲ್ಲವಿ | ಶರೀರದೊಳಗಿದ್ದು ಪಾಪಿಲ್ಲ
ದುಃಖಲೇಪಿಲ್ಲ | ಆಕಾಶವು ಎಲ್ಲಾ|
ಮೂರು ಸದ್ಗುಣ |ಕೇಳೈಯ್ಯ ಫಲ್ಗುಣ|
ಸುಖದುಃಖ ಸಮಮಾಡಿ ನೋಡು ನೀ |
ಈಡ್ಯಾಡು ನೀ| ಬ್ರಹ್ಮನ ನೋಡು ನೀ|
ಸೂರ್ಯ ಚಂದ್ರರ ತೇಜ ನನದಯ್ಯ
ಗುಡಾಕೇಶಯ್ಯ| ಅನ್ನ ಪಚನ ನನ್ನದಯ್ಯ ||೬||

ಶ್ಲೋಕ|
ನಾನೇ ಉತ್ತಮ ಮನಸು ಎನ್ನಲ್ಲು ಮಾಡೋ
ಜ್ಞಾನ ಅಜ್ಞಾನ ಪೇಳುವೆ ತಿಳಿದು ನೋಡೋ
ಜ್ಞಾನ ದುರ್ಲಭ ಅವರ ಭಕ್ತಿಗಳಂತೆ
ನಾನು ಕೊಡುವೆನು ಫಲವ ಮನಸು ಬಂದಂತೆ||
ಪಲ್ಲವಿ | ಸ್ಮರಣೆ ಮಾಡುತ ದೇಹ ಬಿಡುವರೋ
ನನ್ನ ಪಡೆವರೋ | ಬಲು ಭಕ್ತಿ ಮಾಡುವರೋ|
ಅನಂತ ಚೇತನ ಸುಳಿವೆನು
ಹರಿ ಸುಲಭನು | ಮತ್ತೆ ಜನನವಿಲ್ಲವಗೆ|
ಎನ್ನ ಭಕ್ತರಿಗಿಲ್ಲ ನಾಷವು
ಸ್ವರ್ಗದಾಶವು| ಬಿಟ್ಟು ಚರಣ ಭಕುತಿಯ ||೭||

ಶ್ಲೋಕ|
ಕೃಷ್ಣ ತೋರಿಸು ನಿನ್ನ ವಿಭೂತಿ ರೂಪ |
ಇಷ್ಟ ಪೂರ್ತಿಯ ಆಗಲೊ ಎನಗೆ ಶ್ರೀಪ|
ರಾಮ ನಾನಯ್ಯ ರಾಜರ ಗುಂಪಿನಲ್ಲಿ
ಸೋಮ ನಾನಯ್ಯ ರಾಜರ ಗುಂಪಿನಲ್ಲಿ
ಸೋಮ ನಾನಯ್ಯ ತಾರಕ ಮಂಡಲದಲಿ||
ಪಲ್ಲವಿ | ಅಕ್ಷರದೊಳಗೆ ಅಕಾರನು
ಗುಣಸಾರನು| ಪಕ್ಷಿಗಳಲಿ ನಾನು ಗರುಡನು|
ಸಕಲ ಜಾತಿಗಳಲ್ಲಿ
ಶ್ರೇಷ್ಟತನದಲಿ| ಎನ್ನ ರೂಪ ತಿಳಿಯಲ್ಲಿ|
ತೋರಿಸೋ ಶ್ರೀಕೃಷ್ಣ ನಿನ್ನ ರೂಪ|
ನಾನಾ ರೂಪ| ಅರ್ಜುನ ನೋಡೋ ರೂಪ|
ಕಂಡನು ತನ್ನನು ಸಹಿತದಿ |
ಹರಿ ದೇಹದಿ| ಬ್ರಹ್ಮಾಂಡಗಳಲ್ಲಿ ||೮||

ಶ್ಲೋಕ|
ಕ್ಷರ ಅಕ್ಷರ ಎರಡಕ್ಕೂ ಉತ್ತಮನು ನಾನು|
ಗೋರ ನರಕದ ಲೋಭ ಕಾಮನು ನಾನು |
ಸಾರ ದಾನವು ಸಜ್ಜನರ ಹಸ್ತದಲ್ಲಿ
ಭೂರಿ ದಕ್ಷಿಣೆ ನೀಡೋ ಸತ್ಪಾತ್ರರಲ್ಲಿ ||
ಪಲ್ಲವಿ | ಸರ್ವ ದಾನದಕಿಂತ ಎನಭಕ್ತಿ
ಕೇಳೊ ಭೂಶಕ್ತಿ | ಮಾಡಯ್ಯ ವರಕ್ತಿ |
ಕೃಷ್ಣ ಹರಣವಾಯ್ತು ನಿನ್ನಿಂದ
ಮೋಹ ಎನ್ನಿಂದ| ಬಹು ಸುವಾಕ್ಯ ದಿಂದ|
ಕೃಷ್ಣ ಭೀಮಾನುಜರ ಸಂವಾದ
ಮಹ ಸುಖಪ್ರದ| ಧೃತರಾಷ್ಟ್ರ ಕೇಳಿದ|
ಬಲ್ಲೆನು ವ್ಯಾಸರ ದಯದಿಂದ|
ಮನಸಿನಿಂದ| ಕೃಷ್ಣನಲ್ಲೇ ಜಯವೆಂದ ||೯||


Kelayya enna matu parthane gitadarthane ||pa||

Sloka |
Kurukshetradi ennavaru pandavaru
Pelo sanjaya Enu maduvaru kudi |
Kelayya arasane nodi pandavara sena|
Matanadida ninna suta dronagintu ||

Pallavi|
Keli ta parthanu kuru danda
Ranadali chanda | gandiva karadanda
Achyuta pidiratha nade munda
Bahu tvaradinda | noduve netradinda ||
Guruhiriyara kuda yakenda
Yuddha sakenda | bikshave sukavenda||
Kuntisuta I maatu uchitalla
Ninagidu salla | pidi gandiva billa ||1||

Sloka|
Balya yauvana mupputana dehadalli
Intha dehake moha mattyakilli|
Kaydu kolluva nanu irutiralu illi
Billu pididu kirtipade lokadalli ||

Pallavi|
Sastradanjikeyilla jivakke
I dehakke| pavakana dahakke |
Udakagalinda vedaneyakke
Jivakka | marutana soshakke
Nitya abedya ta jivana
Sanatana| vastradange I tanavu |
Nanagillayya|adana ballenayya ||2||

Sloka|
J~jana doddadu karmabandhanava bittu
Karma bittare pratyavayavadeshtu |
Pala bittu ni madu satkarmagala
Sama dehake Palakarma karanavalla ||
Pallavi | karmadalle ninagadhikara
Pala ta dura| dhanunjayagoskara|
Itta barayya | yogabuddhi madayya|
Jita buddhi yavudai kesava
Jagatpasava | nodade paramesa |
Govindanali manavittava
Kama bittava jita deha tanada ||3||

Sloka|
J~jana doddadu karmadallyake enna
Buddhi mohisi krushna kelayya binnapa||
Karmavillade mokshavunte innu
Karma mokshada buddhige bijavalle||

Pallavi |
Yuddha karmava mado pandava
Rana tandava | vairi shandanembuva|
Janarella malparo ninna nodi
Mattenna nodi | nodidara ni bedi |
Enagyake pelayya janakarma
Kshatriya dharma | nashtavaguvadu dharma|
Arpisu ennalli sarvavu
Bittu garvavu | tili ennolu sarvavu ||4||

Sloka|
Yoga sanyasa eradu muktige dhrudavu
Bogavarjita kilu sanyasiyiravu |
Hege padmake variya lepavilla
Hage Baktige samsrutiya illa ||

Pallavi |
Ajanalli dvijanalli gajadalli
Samananalli| Bajipara manadalli
Manasu yara jivake bandu
Itta barendu | matte vairi darendu|
Loshta kanchana nodu samamnadi|
Asana hudi | nasika tudi nodi|
Dhyana madu hari alliha
Avanalliha | yoga sannihitanavane ||5||

Sloka|
Yara Baktiyu enna padabjadalli
Gora samsara yatane avarigelli|
Sarirave kshetraventendu tiliyo||
Pallavi | sariradolagiddu papilla
Duhkalepilla | akasavu ella|
Muru sadguna |kelaiyya palguna|
Sukaduhka samamadi nodu ni |
Idyadu ni| brahmana nodu ni|
Surya camdrara teja nanadayya
Gudakesayya| anna pachana nannadayya ||6||

Sloka|
Nane uttama manasu ennallu mado
J~jana aj~jana peluve tilidu nodo
J~jana durlaba avara baktigalante
Nanu koduvenu Palava manasu bandante||
Pallavi | smarane maduta deha biduvaro
Nanna padevaro | balu Bakti maduvaro|
Ananta chetana sulivenu
Hari sulabanu | matte jananavillavage|
Enna Baktarigilla nashavu
Svargadasavu| bittu charana Bakutiya ||7||

Sloka|
Krushna torisu ninna vibuti rupa |
Ishta purtiya Agalo enage sripa|
Rama nanayya rajara gumpinalli
Soma nanayya rajara gumpinalli
Soma nanayya taraka mamdaladali||
Pallavi | aksharadolage akaranu
Gunasaranu| pakshigalali nanu garudanu|
Sakala jatigalalli
Sreshtatanadali| enna rupa tiliyalli|
Toriso srikrushna ninna rupa|
Nana rupa| arjuna nodo rupa|
Kandanu tannanu sahitadi |
Hari dehadi| brahmandagalalli ||8||

Sloka|
Kshara akshara eradakku uttamanu nanu|
Gora narakada loba kamanu nanu |
Sara danavu sajjanara hastadalli
Buri dakshine nido satpatraralli ||
Pallavi | sarva danadakimta enabakti
Kelo busakti | madayya varakti |
Krushna haranavaytu ninninda
Moha ennimda| bahu suvakya dinda|
Krushna bimanujara samvada
Maha sukaprada| dhrutarashtra kelida|
Ballenu vyasara dayadinda|
Manasininda| krushnanalle jayavenda ||9||

||sri krushnarpanamastu||