dasara padagalu · MADHWA · subramanya · Vijaya dasaru

Subbaraya subakaya

ಸುಬ್ಬರಾಯ ಶುಭ ಕಾಯಾ |
ಸುಬ್ಬರಾಯ ಶುಭ ಕಾಯಂಗಜ ನೀನೆ ||
ನಿಬ್ಬರ ಮಹಿಮಾ ದಯಾಂಬುಧಿ ಸ್ಕಂದಾ ||pa||

ಮಾರಾ ಭರತನೆ ಶಂಬ | ರಾರಿ ಸನತ್ಕುಮಾರ ಕು |
ಮಾರಾ ಸಾಂಬಾ ||
ಸಾರಿದೆ ನಿನ್ನವತಾರ ಮೂಲರೂಪ ||
ಸಾರಿಸಾರಿಗೆ ಸಂಸಾರಮನ ವಿ ||
ಸ್ತಾರವಾಗದಂತೆ
ಹಾರಿಸುದುರವ್ಯಾಪಾರ ಗುಣ ಪಾರಾವಾರಾ ||1||

ಮಾಡುವೆ ವಂದನೆ ಸತತ | ಸಜ್ಜನರೊಳ |
ಗಾಡಿಸು ಭಕ್ತ ಪ್ರೀತಾ ||
ಪಾಡಿದವರ ಕಾ | ಪಾಡುವ ರತಿ-ಪತಿ |
ಈಡಾರು ನಿನಗೇ ನಾಡಿನೊಳಗೆಲ್ಲ |
ಬೇಡುವೆ ದಯವನ್ನು | ಮಾಡುವಿರಕುತಿಯ |
ನೀಡು ಬಿಡದಲೆ ನೋಡು||2||

ಕುಕ್ಕೆಪುರಿಯ ನಿಲಯಾ | ಶ್ರೀಧರ ಬೊಮ್ಮ |
ಮುಕ್ಕಣ್ಣಗಳ ತನಯ ||
ಸೊಕ್ಕಿದ ತಾರಕ ರಕ್ಕಸ ಹರ ದೇ |
ವಕ್ಕಳ ನಿಜ ದಳಕೆ ನಾಯಕನಾದೆ ||
ಪಕ್ಕಿವಾಹನ ಸಿರಿ ವಿಜಯವಿಠ್ಠಲನ |
ಚಕ್ರ ಐದೊಂದು ವಕ್ರಾ ||3||

Subbaraya subakaya |
Subbaraya nija kayangaja nine |
Nibbara mahima mahambudhi skanda || pa||

Mara Baratane sambarari | sanatku |
Mara kumara samba |
Saride ninnavatara mularupa ||
Sari sarige samsarake mana | vi |
Staravaguvante | harisu |
Dara vyapara guna paravara || 1 ||

Maduve vandane satata | sajjanarola |
Gadisu Bakta prita |
Padidavara kapaduva rati pati ||
Idaru ninagi nadinolagella |
Beduve dayavannu madu virakutiya |
Nidu bidadale nodu || 2 ||

Kukkepuriya nilaya | sridhara bomma |
Mukkannagala tanaya |
Sokkida taraka rakkasa hara | de ||
Vakkala nija dalake nayakanade |
Pakshivahana siri vijayaviththalana |
Chakra aidondu vaktra || 3 ||

dasara padagalu · MADHWA · Vadirajaru

Vadirajara padava smarisuve

ವಾದಿರಾಜರ ಪದವ ಸ್ಮರಿಸುವೆ ಅ-
ಗಾಧ ಮಹಿಮರ ಸದಯ ಹೃದಯರ ||pa||

ಮೋದತೀರ್ಥರಾಗಮದ ಸಾರವ
ಸಾಧು ಜನರಿಗೆ ಬೋಧಿಸಿರ್ಪರ
ವಾದದಿಂದಲಿ ವೀರಶೈವರ
ಗೆದ್ದು ಮುತ್ತಿನ ಪೀಠವೇರ್ದರ ||1||

ಪಾದದಿಂದಲಿ ಸಕಲ ತೀರ್ಥವ
ಮೋದದಿಂದ ಚರಿಸಿ ತೀರ್ಥ ಪ್ರ-
ಬಂಧ ಗ್ರಂಥವ ರಚಿಸಿ ಮಾನ್ಯರಾ
ಗಿರ್ದ ಗುರುಗಳನೆಂತು ಬಣ್ಣಿಪೆ ||2||

ರಾಜಸಭೆಯೊಳು ರಾಜಭೀಷ್ಮಕ
ತನುಜೆಯರಸನ ಸ್ತುತಿಪ ಕಾವ್ಯವ
ಈ ಜಗತ್ತಿನೊಳ್ ಶ್ರೇಷ್ಠ ಕಾವ್ಯವೆಂ
ದಿದನೆ ಗಜದೊಳು ಮೆರೆಸಿದರಸನು ||3||

ಒಂದುನೂರ ಇಪ್ಪತ್ತು ವರ್ಷದೊಳ್
ಸಿಂಧುಶಯನನ ಸೇವಿಸುತ್ತಲಿ
ಇಂದ್ರದತ್ತ ವಿಮಾನದಿಂದಲಿ
ಸತ್ಯಲೋಕವನೈದಿದ ಗುರುವರ ||4||

ಯುಕ್ತಿಮಲ್ಲಿಕಾ ಗ್ರಂಥದಿಂದ
ರಾಜೇಶ ಹಯಮುಖಾನಂತ ಗುಣಗಳ
ಪೊಗಳುತಿರ್ಪರ ರಾಗಶೂನ್ಯರ
ಋಜು ಗಣೇಶರ ಸುಜ್ಞಾನ ಪೂರ್ಣರ ||5||
Vadirajara padava smarisuve a-
Gadha mahimara sadaya hrudayara ||pa||

Modatirtharagamada sarava
Sadhu janarige bodhisirpara
Vadadindali virasaivara
Geddu muttina pithaverdara ||1||

Padadindali sakala tirthava
Modadinda carisi tirtha pra-
Bandha granthava racisi manyara
Girda gurugalanentu bannipe ||2||

Rajasabeyolu rajabishmaka
Tanujeyarasana stutipa kavyava
I jagattinol sreshtha kavyaven
Didane gajadolu meresidarasanu ||3||

Ondunura ippattu varshadol
Sindhusayanana sevisuttali
Indradatta vimanadindali
Satyalokavanaidida guruvara ||4||

Yuktimallika granthadinda
Rajesa hayamukananta gunagala
Pogalutirpara ragasunyara
Ruju ganesara suj~jana purnara ||5||

dasara padagalu · MADHWA · Vadirajaru

Sodakshetrave divya kshetra

ಸೋದಾಕ್ಷೇತ್ರವೆ ದಿವ್ಯ ಕ್ಷೇತ್ರ
ಬಂದ ಜನರಿಗಿಷ್ಟವನೀವ ಕ್ಷೇತ್ರ
ವಾದಿರಾಜರು ವಾದದಿಂದ ವಾದಿಸಿ
ವೀರಶೈವರ ಗೆದ್ದ ಕ್ಷೇತ್ರ ||pa||

ಒಂದು ಭಾಗದಿ ರೂಪ್ಯಪೀಠ ಮ-
ತ್ತೊಂದು ಭಾಗದಿ ಸೋದಾಕ್ಷೇತ್ರ
ಕುಂದು ಎಳ್ಳಷ್ಟಿಲ್ಲದೆ ತೋರ್ಪು
ದೆಂದು ಹರಿಭಕ್ತರಾದರಿಸುವರು ||1||

ಒಂದೇ ಸ್ಥಾನದಿ ಶ್ವೇತದ್ವೀಪ ಮತ್ತೆ
ವೈಕುಂಠನಂತಾಸನಗಳು
ಒಂದಾಗಿ ಶೋಭಿಸುತಿರುವ
ಚೆಂದವೇನೆಂದು ಪೇಳಲಿ ಮನವೆ ||2||

ರಾಜೇಶ ಹಯಮುಖ ಚರಣ
ಕಂಜ ಮಧುಪನಂತಿರುವ ಶ್ರೀಭಾವಿ-
ಕಂಜಜಾತನ ಪದಕರುಹ
ವಾದಿರಾಜರಾಯರ ದಿವ್ಯ ಕ್ಷೇತ್ರ ||3||
Sodakshetrave divya kshetra
Banda janarigishtavaniva kshetra
Vadirajaru vadadinda vadisi
Virasaivara gedda kshetra ||pa||

Ondu bagadi rupyapitha ma-
Ttondu bagadi sodakshetra
Kundu ellashtillade torpu
Dendu haribaktaradarisuvaru ||1||

Onde sthanadi svetadvipa matte
Vaikunthanantasanagalu
Ondagi sobisutiruva
Cendavenendu pelali manave ||2||

Rajesa hayamuka carana
Kanja madhupanantiruva sribavi-
Kanjajatana padakaruha
Vadirajarayara divya kshetra ||3||

dasara padagalu · guru jagannatha dasaru · MADHWA · Vadirajaru

Vadiraja nija modaniduva tava

ವಾದಿರಾಜ ನಿಜ ಮೋದನೀಡುವ ತವ
ಪಾದವ ತೋರಿಸಯ್ಯಾ ಹೇ ಜೀಯಾ ||pa||

ವೇದವೇದ್ಯ ಯತ್ಯಾರಾಧೀತ ಸುಜ –
ನೋದ್ಧಾರಮಾಡಿದ ಪಾದವೋಗುರುರಾಯಾ |
ಮೇದಿನಿ ಸುರರಿಗೆ ಸಾದರದಿಂದ
ಭೋಧನೀಡಿದ ಪಾದವೋ ಮಹರಾಯಾ ||1||

ವಂಧ್ಯಸತೀ ಜನಕೆ ಸಂದೇಹಮಾಡದೆ
ಕಂದರ ಕೊಟ್ಟ ಪಾದ ಯತಿರಾಯಾ
ಮಂದಭಾಗ್ಯಗೆ ಭಾಗ್ಯಸಂದೋಹÀ ದಿನದಿನಾ
ಮಂದ ನೀಡುವ ಪಾದವೋ ಸುರನಾಥ ||2||

ನಷ್ಟನಯನ ಮಹಾಕುಷ್ಟಜನರ ನಿಜ
ಇಷ್ಟಾ ನೀಡುವೋ ಮಹರಾಜಾ
ಕಷ್ಟಬಡುವ ಸುಜನಾನಿಷ್ಟ ಕಳೆದು ಸರ್ವೋ
ತ್ಕøಷ್ಟರೆನಿಸಿದ ಪಾದವೋ ಹೇ ಪ್ರಭುವೇ ||3||

ಎಲ್ಲಾರ ಮನೋರಥ ನಿಲ್ಲಾದೆ ಸರ್ವದ
ಸಲ್ಲೀಸಿರುವ ಪಾದವೋ ಕರುಣಾಳೋ
ಪುಲ್ಲಲೋಚನ ಬಲ್ಲಿದ ಮಮ ಮನೋರಥ
ಸಲ್ಲಿಸ ದೇನೋ ಪಾದ ಶ್ರೀಕರಾ ||4||

ಪಾತಕÀ ಪರಿಹಾರಾನಾಥರಕ್ಷಕ ಭಾವಿ
ಧಾತಾ ನಿನ್ನಯ ಪಾದವೋ ಹೇ ತಾತಾ
ದಾತಾ ಗುರುಜಗನ್ನಾಥ ವಿಠಲ ನಿಜ
ದೂತನ ಶುಭಪಾದವೋ ಮನ್ನಾಥಾ ||5||
Vadiraja nija modaniduva tava
Padava torisayya he jiya ||pa||

Vedavedya yatyaradhita suja –
Noddharamadida padavogururaya |
Medini surarige sadaradinda
Bodhanidida padavo maharaya ||1||

Vandhyasati janake sandehamadade
Kandara kotta pada yatiraya
Mandabagyage bagyasandohaà dinadina
Manda niduva padavo suranatha ||2||

Nashtanayana mahakushtajanara nija
Ishta niduvo maharaja
Kashtabaduva sujananishta kaledu sarvo
Tkaøshtarenisida padavo he prabuve ||3||

Ellara manoratha nillade sarvada
Sallisiruva padavo karunalo
Pullalocana ballida mama manoratha
Sallisa deno pada srikara ||4||

Patakaà pariharanatharakshaka bavi
Dhata ninnaya padavo he tata
Data gurujagannatha vithala nija
Dutana subapadavo mannatha ||5||

dasara padagalu · guru jagannatha dasaru · MADHWA · Vadirajaru

Vadiraja suraraja tanadare

ವಾದಿರಾಜ ಸುರರಾಜ ತಾನಾದರೆ
ಮೇದಿನಿಯೊಳಗಿಹನ್ಯಾಕೆ ? ||pa||

ಮೇದಿನಿ ಸುರರಿಗೆ ಮೋದ ಕೊಡೋದಕೆ
ಸ್ವಾದಿಯೊಳಗೆ ನಿಂತಿಹನದಕೇ ||a.pa||

ಋಜುಗುಣದೊಡೆಯನು ತ್ರಿಜಗಾಧೀಶನು
ಭುಜಗಾಂಚಿತನಾದ್ಯಾಕೆ ?
ಭಜಿಸುವ ಜನ ಭೂಭುಜ ತಾನೆನಿಸಿ
ಅಜನ ಪದ ತಾ ಸೇರೋದಕೆ ||1||

ಸುರತತಿ ಸನ್ನುತ ಸರಸಿಜಭವ ಪದ –
ಕರಹನು ನರನ್ಯಾಕಾದಾ ?
ಧರೆಸುರರಿಗೆ ತನ್ನ ಕರುಹನು ತಿಳಿಸೀ
ಪರಿಪರಿ ಮಹಿಮೆಯ ತೋರಿಸಿದ ||2||

ವೀತಭಯನು ತಾನೀತೆರ ಜಗದಿ
ಯಾತಕೆ ಯತಿಯಾದ ?
ದಾತ ಗುರುಜಗನ್ನಾಥ ವಿಠಲ ಗುಣ
ಖ್ಯಾತಿಯ ತಾಮಾಡಿದ ||3||

Vadiraja suraraja tanadare
Mediniyolagihanyake ? ||pa||

Medini surarige moda kododake
Svadiyolage nintihanadake ||a.pa||

Rujugunadodeyanu trijagadhisanu
Bujagancitanadyake ?
Bajisuva jana bubuja tanenisi
Ajana pada ta serodake ||1||

Suratati sannuta sarasijabava pada –
Karahanu naranyakada ?
Dharesurarige tanna karuhanu tilisi
Paripari mahimeya torisida ||2||

Vitabayanu tanitera jagadi
Yatake yatiyada ?
Data gurujagannatha vithala guna
Kyatiya tamadida ||3||

dasara padagalu · guru jagannatha dasaru · MADHWA · Vadirajaru

Vadiraja palisu enna

ವಾದಿರಾಜಾ ಪಾಲಿಸು ಎನ್ನ ||pa||

ವಾದಿರಾಜ ತವ ಪಾದಸರೋಜಾ
ಮೋದಪರಾಗವ ಸಾದರ ನೀಡಿ||a.pa||

ಮೋದತೀರ್ಥಸುಮತೋದಧಿಚಂದಿರ
ಪಾದವ ನಂಬಿದೆ ನೀ ದಯದಲಿ ||1||

ಅರ್ತಜನರ ಮನದಾರ್ತಿಯ ಕಳೆದಿಹ
ವಾರ್ತದಿ ಬಂದವನಾರ್ತಿಯ ಬಿಡಿಸೋ ||2||

ಎಲ್ಲರಂತೆ ನೀನಲ್ಲವೊ ಜಗದೊಳು
ಬಲ್ಲಿದನೆಂಬೊದು ಬಲ್ಲೆ ಬಲ್ಲೆನು ||3||

ಕುರ್ತುಮಕರ್ತುಸಮರ್ಥನೆ ಎನ್ನನು
ಮರ್ತರೆ ಅನ್ಯ ಸಮರ್ಥರ ಕಾಣೆ ||4||

ಕಾಮಧೇನು ಸಮ ಭೂಮಿಯ ತಳದಿ
ಕಾಮಿತನೀಡೈ ಸುರತರುವೇ ||5||

ಮೋಕ್ಷದ ಕರುಣ ಕಟಾಕ್ಷದಿ ಎನ್ನಾ
ವೀಕ್ಷಿಸಿ ಮನದಾಪೇಕ್ಷವ ಸಲಿಸೋ ||6||

ಯಾತಕೆ ಎನ್ನನು ಈತೆರ ಮಾಡಿದೇ
ನೀತ ಗುರುಜಗನ್ನಾಥವಿಠಲ ದೂತ ||7||

Vadiraja palisu enna ||pa||

Vadiraja tava padasaroja
Modaparagava sadara nidi||a.pa||

Modatirthasumatodadhi candira
Padava nambide ni dayadali ||1||

Artajanara manadartiya kalediha
Vartadi bandavanartiya bidiso ||2||

Ellarante ninallavo jagadolu
Ballidanembodu balle ballenu ||3||

Kurtumakartusamarthane ennanu
Martare anya samarthara kane ||4||

Kamadhenu sama bumiya taladi
Kamitanidai surataruve ||5||

Mokshada karuna katakshadi enna
Vikshisi manadapekshava saliso ||6||

Yatake ennanu Itera madide
Nita gurujagannathavithala duta ||7||

dasara padagalu · jagannatha dasaru · MADHWA · Vadirajaru

Vadiraja prativadi gajendra dha

ವಾದಿರಾಜ ಪ್ರತಿವಾದಿ ಗಜೇಂದ್ರ ಧ
ರಾಧರಾಟ ವಿಬೋಧದಿ ಚಂದ್ರ ||pa||

ಯಮಿವರನೆ ತ್ರಿವಿಕ್ರಮನ ರಥೋತ್ಸವ
ಸಮಯವಿದೆಂದು ಉತ್ಕøಮಣವ ತೊರೆದೆ ||1||

ಬಂದು ಕರೆಯಲು ಪುರಂದರನಾಳ್ಗಳ
ಹಿಂದಟ್ಟಿದೆ ಕರ್ಮಂದಿಗಳರಸ ||2||

ಆರ್ಥಿಗಳಿಗೆ ಪರಮಾರ್ಥ ಕೊಡುವ ಸ
ತ್ತೀರ್ಥ ಪ್ರಬಂಧವ ಕೀರ್ತನೆ ಗೈದೆ ||3||

ಅದ್ವೈತ ಸಮಿಧಿ ಮಧ್ವ ಸುಸಿದ್ಧಾಂ
ತಿಧ್ಮಜಿಂಹದಿ ಪ್ರಧ್ವಂಶಿಸಿದೆ ||4||

ಪಾವನೀಯ ಸುಮತಾವಲಂಬಿಗಳ
ತಾವಕರೆಂದೀವುದು ವರವ ||5||

ಎಲರುಣಿ ಭಯಕಂಜಿಲಿ ನಿಮ್ಮಾಸನ
ಕೆಳಗಿರೆ ಕಂಡದನುಳುಹಿದೆ ಕರುಣಿ ||6||

ಹಯಮುಖ ಪಾದದ್ವಯ ಭಕ್ತಾಗ್ರನೀ
ದಯದಿ ವಿಪ್ರನಿಗೆ ನಯನಗಳಿತ್ತೆ ||7||

ಭಾಗೀರಥಿಯಂತ್ಯೋಗಿ ವರಗುರು
ವಾಗೀಶರ ಕರಾಬ್ಜ ಸಂಭವನೆ ||8||

ನಮಿಪೆ ತ್ವತ್ಪದಕಮಲಗಳಿಗೆಮ
ಧ್ವಮತ ಸರೋರುಹ ದ್ಯುಮಣಿಯೆ ನಿರುತ ||9||

ಗರಮಿಶ್ರಿತ ನರಹರಿ ನೈವೇದ್ಯವ
ನರಿತು ಪೇಳೆ ಉಂಡರಗಿಸಿಕೊಂಡೆ ||10||

ಪೂತಾತ್ಮ ಜಗನ್ನಾಥವಿಠಲನ
ಖ್ಯಾತಿಯ ತುತಿಸುವನಾಥ ಜನಾಪ್ತ 11

Vadiraja prativadi gajendra dha
Radharata vibodhadi chandra ||pa||

Yamivarane trivikramana rathotsava
Samayavidendu utkaømanava torede ||1||

Bandu kareyalu purandaranalgala
Hindattide karmandigalarasa ||2||

Arthigalige paramartha koduva sa
Ttirtha prabandhava kirtane gaide ||3||

Advaita samidhi madhva susiddham
Tidhmajimhadi pradhvamsiside ||4||

Pavaniya sumatavalambigala
Tavakarendivudu varava ||5||

Elaruni Bayakanjili nimmasana
Kelagire kandadanuluhide karuni ||6||

Hayamuka padadvaya baktagrani
Dayadi vipranige nayanagalitte ||7||

Bagirathiyantyogi varaguru
Vagisara karabja sambavane ||8||

Namipe tvatpadakamalagaligema
Dhvamata saroruha dyumaniye niruta ||9||

Garamisrita narahari naivedyava
Naritu pele undaragisikonde ||10||

Putatma jagannathavithalana
Kyatiya tutisuvanatha janapta ||11||

dasara padagalu · MADHWA · Vadirajaru

Vadiraja guruve padaradhaka

ವಾದಿರಾಜ ಗುರುವೇ ಪಾದಾರಾಧಕ ಸುರತರುವೆ ||pa||

ಮೋದವ ಕೊಡುವದು ನೀ ದಯದಿಂದಲಿ
ಸ್ವಾದಿನಿಲಯ ತವ ಪಾದಕೆ ನಮಿಸುವೆ||a.pa||

ಮೇದಿನಿಯೊಳು ಚರಿಸೀ ಜನರೊಳಗಾಧ ಮಹಿಮರೆನಿಸಿ
ಮೋದಮುನಿಯ ಸುಮತೋದಧಿಚಂದಿರ
ವಾದಿ ಮದ ಗಜ ಮೃಗಾಧಿಪರೆನಿಸಿದ ||1||

ಯುಕ್ತಿ ಮಲ್ಲಿಕಾಧೀ ಬಹುಸರಸೋಕ್ತಿ ಸಹಿತವಾಗಿ
ಭಕ್ತಿ ಪುಟ್ಟಿಸುವ ರುಕ್ಮಿಣೇಶ ವಿಜಯಾಖ್ಯ
ಗ್ರಂಥದಿ ಚಮ ತ್ಕøತಿ ತೋರಿದ ||2||

ಭಾಗವತರ ಪ್ರೀಯಾ ನಮಿಸುವೆ ವಾಗೀಶರ ತನಯಾ
ಯೋಗಿವರ್ಯ ಕವಿಗೇಯ ದಯಾಕರ
ಭೋಗಪುರೀಶನ ರೋಗವ ಕಳೆದಿ ||3||

ರಾಜರನ್ನು ಪೊರೆದಿ ಯತಿಕುಲರಾಜರೆನಿಸಿ ಮೆರೆದಿ
ವಾಜಿಪದನ ಪದ ರಾಜೀವ ಯುಗಲ
ಪೂಜಿಸಿ ಜಗದಿವಿ ರಾಜಿಸಿದಂಥ ||4||

ಭೂತಭಯವ ಬಿಡಿಸಿ ಭಜಕರ ಪಾತಕ ಪರಿಹರಿಸಿ
ಖ್ಯಾತ ಕಾರ್ಪರ ಕ್ಷೇತ್ರದಿ ನರಮೃಗ
ನಾಥನ ಪರಮ ಪ್ರೀತಿಯ ಪಡೆದಿ ||5||
Vadiraja guruve padaradhaka surataruve ||pa||

Modava koduvadu ni dayadindali
Svadinilaya tava padake namisuve||a.pa||

Mediniyolu carisi janarolagadha mahimarenisi
Modamuniya sumatodadhicandira
Vadi mada gaja mrugadhiparenisida ||1||

Yukti mallikadhi bahusarasokti sahitavagi
Bakti puttisuva rukminesa vijayakya
Granthadi cama tkaøti torida ||2||

Bagavatara priya namisuve vagisara tanaya
Yogivarya kavigeya dayakara
Bogapurisana rogava kaledi ||3||

Rajarannu poredi yatikularajarenisi meredi
Vajipadana pada rajiva yugala
Pujisi jagadivi rajisidantha ||4||

Butabayava bidisi Bajakara pataka pariharisi
Kyata karpara kshetradi naramruga
Nathana parama pritiya padedi ||5||

dasara padagalu · MADHWA · Vadirajaru · Vijaya dasaru

Vadiraja dhira yativara vadadi

ವಾದಿರಾಜ ಧೀರ ಯತಿವರ ವಾದದಿ ಬಹು ಶೂರ
ಮೋದತೀರ್ಥರ ಮತವ ಪೊಂದಿದ
ಸಾಧುಗಳನು ಉದ್ಧಾರ ಮಾಡುವ||pa||

ರಂಗ ಮಂಗಳಾಪಾಂಗ ತುಂಗ ವಿಕ್ರಮ ಹರಿಯಾ
ಶೃಂಗೇರಿ ಮಠದ ಧ್ವಜ ಹಾರಿಸಿದ ||1||

ಒಡೆಯ ಹಯವಕ್ತ್ರನಿಗೆ ಕಡಲೆ ಹೂರಣವಿತ್ತ
ಕಡಲಶಯನ ಪದಬಿಡದೆ ಆರಾಧಿಸುವ ||2||

ಅಜಪದಕರ್ಹ ಋಜುಗಣಪತಿ ಜೀವೋತ್ತಮ
ವಿಜಯವಿಠ್ಠಲದಾಸ ಸುಜನಮಂದಹಾಸ ||3||
Vadiraja dhira yativara vadadi bahu sura
Modatirthara matava pondida
Sadhugalanu uddhara maduva||pa||

Ranga mangalapanga tunga vikrama hariya
Srungeri mathada dhvaja harisida ||1||

Odeya hayavaktranige kadale huranavitta
Kadalasayana padabidade aradhisuva ||2||

Ajapadakarha rujuganapati jivottama
Vijayaviththaladasa sujanamandahasa ||3||

dasara padagalu · jagannatha dasaru · MADHWA · Vadirajaru

Vadiraja asmadguru vadiraja

ವಾದಿರಾಜ ಅಸ್ಮದ್ಗುರು ವಾದಿರಾಜ ||pa||

ವಾದಿರಾಜ ತವ ಪಾದಕಮಲಕಭಿ
ವಾದನ ಮಾಳ್ಪೆ ಸಮೋದವಿತ್ತು ಕಾಯೊ ||1||

ಸಾರಿದರಿಗೆ ಕಲ್ಪ ಭೂರುಹ ದಂತೆ ಮ
ನೋರಥ ಸಲಿಸುವ ಸೂರಿಗಳರಸೇ 2||2||

ಭೇದ ಪಂಚಕವನು ಸಾಧಿಸಿ ಕುಮತಕು
ವಾದಿಗರ್ವಾದ್ರಿ ವಿಭೇದನ ಗೈದೆ ||3||

ದೇಶಿಕವರ್ಯ ವಾಗೀಶ ಕುವರನೆ
ಕ್ಲೇಶ ಹರಿಸು ಅಘನಾಶ ಗೈದು ||4||

ಸಿರಿ ಜಗನ್ನಾಥವಿಠಲನ
ಸುಗುಣಗಳನುದಿನ ಪೊಗಳಿ ಹಿಗ್ಗುವೊ ||5||

Vadiraja asmadguru vadiraja ||pa||

Vadiraja tava padakamalakabi
Vadana malpe samodavittu kayo ||1||

Saridarige kalpa buruha dante ma
Noratha salisuva surigalarase 2||2||

Beda pancakavanu sadhisi kumataku
Vadigarvadri vibedana gaide ||3||

Desikavarya vagisa kuvarane
Klesa harisu aganasa gaidu ||4||

Siri jagannathavithalana
Sugunagalanudina pogali higguvo ||5||