dasara padagalu · MADHWA · raghavendra

Suvee suvaali raghavendra

ಸುವ್ವಿ ಸುವ್ವಾಲಿ |ಸುವ್ವಿ ಸಾಧ್ವಿಯರು ರಾಘವೇಂದ್ರರ ಪಾಡಿ

ಪಅಂದಿನ ಕಾಲದ ಮಧ್ವಶಾಸ್ತ್ರವ ಮನಕೆ ತಂದು |ಅಂದದಿ ಟಿಪ್ಪಣಿ ಮಾಡಿದ ದೇವರಾರು | ಸುವ್ವಿ ||
ಅಂದು ವಾದಿಸುವ ಜನರನ್ನು ಬಾಯಿ ಮುಚ್ಚಿಸಿದ |ಚಂದಿರ ವದನೆ ಈತನಮ್ಮ ಗುರುವು | ಸುವ್ವಿ ||

ಇವರ ಚರಿತೆಯನ್ನು ತೋರಿದಷ್ಟು ತುತಿಸುವೆ |ಕಿವಿಗೊಟ್ಟು ಕೇಳುವದುಬುಧಜನರು | ಸುವ್ವಿ ||ಪವನಾಂಶರಿವರು ಕವಲಿಲ್ಲ ಖ್ಯಾತರಾಗಿ |ಅವನಿಯ ಸುರರಿಂದರ್ಚನೆಗೊಂಗುವರು | ಸುವ್ವಿ ||

ಅಷ್ಟಾಕ್ಷರ ಮಂತ್ರವನು ತಪ್ಪದಲೆ ನಿತ್ಯವಾಗಿ |ನಿಷ್ಠೆಯಿಂದ ಭಜಿಸಲು ಭೂತ ಭಯವು | ಸುವ್ವಿ ||
ಕುಷ್ಠರೋಗ ಕ್ಷಯ ಪಾಂಡು ಜ್ವರ ಸನ್ನಿ ಮೊದಲಾದ |ಅಷ್ಟುಪದ್ರವಾಕ್ಷಣ ಬಿಟ್ಟು ಓಡುವುದು | ಸುವ್ವಿ ||

ಮೃತ್ತಿಕೆಮಾಲೆಅಂಗಾರದಿವ್ಯ ಮಂತ್ರಾಕ್ಷತೆಯು |ಹತ್ತಿರವಿರಲು ಕ್ಲೇಶವ ಲೇಶ ಕಾಣರು | ಸುವ್ವಿ ||
ಎತ್ತ ಹೋದರು ಜನರಿಗೆ ಜಯಪ್ರದ ತೋರುವದು |ಕತ್ತಲಿಲ್ಲ ಶತಸಿದ್ಧ ಮತ್ತೇನುಕೇಳಿ| ಸುವ್ವಿ ||

ಪಂಡಿತರು ಮೊದಲಾಗಿಹಸ್ತಿಉಷ್ಟ್ರ ಕುದುರೆಯ |ಹಿಂಡುಗಳು ತೃಷೆಯಿಂದ ಬಳಲುತಿರೆ | ಸುವ್ವಿ ||
ದಂಡ ಜಗತಿಗೂರಿ ತೋಯ ತೆಗಿಸಿಯವನೀ |ಮಂಡಲದೊಳಗೆ ಪೆಸರಾದರಿವರು | ಸುವ್ವಿ ||

ಕಟ್ಟಲಿಯ ಭತ್ತದೊಳು ಭೂಪದಳಯುಕ್ತ ಬರ |ಲಿಟ್ಟುಕೊಂಡು ಉಣಿಸಿ ಉತ್ತಮ ವರವ | ಸುವ್ವಿ ||
ಕೊಟ್ಟು ಕಳಿಸಿದ ಮೇಲೆ ಆವು ಕೊಂಚಿಯಾಗಲಿಲ್ಲ |ಗಟ್ಟಿ ಸಂಕಲ್ಪರಿವರು ಮುನಿವರರು | ಸುವ್ವಿ ||

ವಿಪ್ರರೆಲ್ಲರು ಹೇಳಿಸಿ ಕಟ್ಟಿಸಿದ ಸದನವ |ಥಟ್ಟನೆ ಕೆಡಿಸಿ ಭೂಪ ಮೆಚ್ಚುವಂದದಿ | ಸುವ್ವಿ ||
ನೆಪ್ಪು ಧರೆಗಾಗಲೆಂದುಗುರುಸುಧೀಂದ್ರ ಕುಮಾರ |ಸರ್ಪನ ತೋರಿಸಿ ಸುಪ್ರಖ್ಯಾತರಾದರು | ಸುವ್ವಿ ||

ದ್ವಿಜರ ಸ್ತೋಮವು ಬಾಯಿ ಬಿಡುತಿರೆ ದಯದಿಂದ |ನಿಜಕಾಷ್ಟವಿಳೆಗೆ ನಿಲ್ಲಿಸಿ ಮರವ | ಸುವ್ವಿ ||
ಸೃಜಿಸಿ ಪಲ್ಲವ ಫಲಯುಕ್ತವಾಗಿ ತೋರಿಸಿದ |ಭಜಿಸಿರಿವರನ್ನು ಮಕ್ಕಳು ಬೇಡುವವರು | ಸುವ್ವಿ ||

ಮುತ್ತಿನ ಮಾಲಿಕೆನೃಪಭಕ್ತಿಯಿಂದ ಕೊಡಲಾಗಿ |ಸಪ್ತಜಿಹ್ವಗುಣಿಸಿದ ಸರ್ವರು ನೋಡಿ | ಸುವ್ವಿ ||
ಮತ್ತೆ ಬೇಡಲು ಪಾವಕನಿಗೆ ಪ್ರಾರ್ಥನೆಯ ಮಾಡಿ |ಮತ್ರ್ಯಪಗೆ ಇತ್ತರು ಮೊದಲಂತೆಯೆ ತಂದು | ಸುವ್ವಿ ||

ಹಿಂದೆ ಮಾಡಿದ ದುಷ್ಕರ್ಮ ತೀರ ಬಂದದನು ನೋಡಿ |ಬಂದಾಕ್ಷಣದಲ್ಲಿ ಅವನ ವಿಚಾರಿಸಿ | ಸುವ್ವಿ ||ಇಂದಿರೇಶನ ಕಾರುಣ್ಯ ಬಲದಿಂದ ಜನನೋಡೆ |ಸಂದೇಹವಿಲ್ಲದೆ ಸುಲೋಕವನಿತ್ತರು | ಸುವ್ವಿ ||

ತುಂಗಾತೀರ ಮಂತ್ರಾಲಯದಲ್ಲಿಶ್ರಾವಣಬಹುಳ |ಮಂಗಳ ಬಿದಿಗಿಯಲ್ಲಿ ನಿವಾಸವಾದರು | ಸುವ್ವಿ ||
ಶೃಂಗಾರ ವೃಂದಾವನ ದ್ವಾದಶನಾಮ ಶ್ರೀ ಮುದ್ರೆಯು |ಕಂಗಳುಸಾಲವು ನೋಡ ಹೊದ್ದ ಶಾಠಿಯ | ಸುವ್ವಿ ||

ಅಂಧಕಬಧಿರಕುಂಟ ನಾನಾ ರೋಗಿಗಳು ಮತ್ತೆ |ಕಂದ ವಜ್ರ್ಯ ಮೊದಲಾದವರಿಗೆಕಾಮ್ಯ| ಸುವ್ವಿ ||ತಂದುಕೊಡುವರು ಬೇಗ ಇತರ ಸಂಶಯವಿಲ್ಲ |ಮಂದಭಾಗ್ಯರಿಗೆ ಇವರ ಸೇವೆ ದೊರೆಯದೇ || ಸುವ್ವಿ ||

ಕೌತುಕವೇನೆನ್ನಲಿ ಮುಂಜಿ ವಿವಾಹ ಮಾಡಿಸುವರು |ಚಾತುರ್ಮಾಸದೊಳಗೆ ಗ್ರಹಗಳಸ್ತವಾಗೆ | ಸುವ್ವಿ ||
ಧಾತಾ ಪಿತ ನಿಲಯವಿದೇನೋಯೆಂದು ತೋರುವದು |ಪ್ರೀತಿಯುಳ್ಳ ಭಕ್ತರಿಗೆ ಅಧಮರಿಗಲ್ಲ | ಸುವ್ವಿ ||

ಪಾಡ್ಯ ಪೂರ್ವಾರಾಧನೆ ಉತ್ತರಾರಾಧನೆಗೆ |ಒಡ್ಡಿಬರುವುದು ಎಂಟು ದಿಕ್ಕುಗಳಿಂದ ಜನವು | ಸುವ್ವಿ ||ಕಡ್ಡಿಹಿಡಿಯದಂಥ ಸಂದಣಿಯೊಳು ಸನ್ಮುಹೂರ್ತದಿ |ದೊಡ್ಡ ರಥವೇರಿ ಮಠವ ಸುತ್ತುವರು | ಸುವ್ವಿ ||

ಇಷ್ಟೇಯೆನ್ನಲು ವಶವಲ್ಲ ಮಹಿಮೆಗಳಿನ್ನೂ ಉಂಟು |ನಷ್ಟ ಮಾಡುವರು ದುರ್ಮತ ದಾರಿದ್ರ್ಯವ | ಸುವ್ವಿ ||ಸೃಷ್ಟಿಗೊಡೆಯ ಪ್ರಾಣೇಶ ವಿಠ್ಠಲನೆಂದು ಪೇಳ್ವರು |ಎಷ್ಟು ಪೇಳಿದರೂ ಎನ್ನಿಂದಲಿ ತೀರದು | ಸುವ್ವಿ ||

Suvvi suvvali |suvvi sadhviyaru raghavendrara paadi ||pa||

Andina kalada madhvasastrava manake tandu |andadi tippani madida devararu | suvvi ||
Andu vadisuva janarannu bayi muccisida |chandira vadane Itanamma guruvu | suvvi ||1||

Ivara cariteyannu toridashtu tutisuve |kivigottu keluvadubudhajanaru | suvvi ||
Pavanamsarivaru kavalilla kyataragi |avaniya surarindarchanegonguvaru | suvvi ||2||

Ashtakshara mantravanu tappadale nityavagi |nishtheyinda Bajisalu buta Bayavu | suvvi ||
Kushtharoga kshaya pandu jvara sanni modalada |ashtupadravakshana bittu oduvudu | suvvi ||3||

Mruttikemale^^angaradivya mantrakshateyu |hattiraviralu klesava lesa kanaru | suvvi ||
Etta hodaru janarige jayaprada toruvadu |kattalilla Satasiddha mattenukeli| suvvi ||4||

Panditaru modalagihasti^^ushtra kudureya |hindugalu trusheyinda balalutire | suvvi ||
Danda jagatiguri toya tegisiyavani |mandaladolage pesaradarivaru | suvvi ||5||

Kattaliya battadolu bupadalayukta bara |littukondu unisi uttama varava | suvvi ||
Kottu kalisida mele Avu konciyagalilla |gatti sankalparivaru munivararu | suvvi ||6||

Viprarellaru helisi kattisida sadanava |thattane kedisi bupa meccuvandadi | suvvi ||
Neppu dharegagalendugurusudhindra kumara |sarpana torisi suprakyataradaru | suvvi ||7||

Dvijara stomavu bayi bidutire dayadinda |nijakashtavilege nillisi marava | suvvi ||
Srujisi pallava palayuktavagi torisida |Bajisirivarannu makkalu beduvavaru | suvvi ||8||

Muttina malikenrupabaktiyinda kodalagi |saptajihvagunisida sarvaru nodi | suvvi ||
Matte bedalu pavakanige prarthaneya madi |matryapage ittaru modalanteye tandu | suvvi ||9||

Himnde madida dushkarma tira bandadanu nodi |bandakshanadalli avana vicarisi | suvvi ||
Indiresana karunya baladinda jananode |sandehavillade sulokavanittaru | suvvi ||10||

Tungatira mantralayadallisravanabahula |mangala bidigiyalli nivasavadaru | suvvi ||
Srungara vrundavana dvadasanama sri mudreyu |kangalusalavu noda hodda sathiya | suvvi ||11||

Andhakabadhirakunta nana rogigalu matte |kanda vajrya modaladavarigekamya| suvvi ||
Tandukoduvaru bega itara samsayavilla |mandabagyarige ivara seve doreyade || suvvi ||12||

Kautukavenennali munji vivaha madisuvaru |chaturmasadolage grahagalastavage | suvvi ||
Dhata pita nilayavidenoyendu toruvadu |pritiyulla Baktarige adhamarigalla | suvvi ||13||

Padya purvaradhane uttararadhanege |oddibaruvudu entu dikkugalinda janavu | suvvi kaddihidiyadantha sandaniyolu sanmuhurtadi |dodda rathaveri mathava suttuvaru | suvvi ||14||

Ishteyennalu vasavalla mahimegalinnu untu |nashta maduvaru durmata daridryava | suvvi ||srushtigodeya pranesa viththalanendu pelvaru |eshtu pelidaru ennindali tiradu | suvvi ||15||

dasara padagalu · MADHWA · raghavendra

Guru raayara nambiro

ಗುರುರಾಯರ ನಂಬಿರೋ | ರಾಘವೇಂದ್ರ
ಗುರುರಾಯರ ನಂಬಿರೋ || ಪ ||
ಗುರುರಾಯರ ನಂಬಿ | ದುರಿತ ದುಷ್ಕೃತ ಹರಿಸಿ
ಪುರುಷಾರ್ಥ ಪರಮವ ಕರಗತ ಕೈಗೊಳ್ಳಿ || ಅಪ||

ಪರಿಮಳೇತ್ಯಾದಿ ಸಂದ್ಗ್ರಂಥ | ವಿರಚಿಸಿ
ಪರಮೋಚ್ಚಪ್ರದವೆನಿಸುವಂಥ |
ಎರಡೆರಡ್ಹತ್ತು ಮತ್ತೆ | ಎರಡೈದು ಗ್ರಂಥವ
ಧರಣಿ ಸುರರಿಗಿತ್ತು | ಕರುಣವ ತೋರಿದ || 1 ||

ರಾಮಕೃಷ್ಣ ನರಹರೀ | ವೇದವ್ಯಾಸ
ಮಾಮನೋಹರ ವೃಂದಾವನದಿ
ವಾಮಾಂಗ ಎನಿಸೀಹ | ಶ್ರೀಮಹಿಳೆಸಹಿತಾಗಿ
ಕಾಮಿತಾರ್ಥದ ಹರಿ | ನೇಮದಿ ನೆಲಸೀಹ || 2 ||

ಕೂಸೆರಡರ ದಯದೀ | ಮಂತ್ರಾಲಯ
ದೇಶಕೆ ಪೋಗಿ ಮುದದೀ |
ಲೇಸು ಸೇವೆಯ ಗೈಯ್ಯೆ | ಕಾಸರೋಗವನೀಗಿ
ಮೇಶ ಗುರುಗೋವಿಂದ | ದಾಸನ್ನಾಗಿಸಿದ || 3 ||

Gururayara nambiro | raghavendragururayara nambiro ||
Padurita dushkrata harisipurushartha paramava karagata kaigolli || a.pa.||

Parimaletyadi sandgrantha | viracisivaramoksha pradavenisuvantha |
Eraderad~hattu matte | eradaidu granthavadharani surarigittu | karunava torida ||1||

Ramakrushna narahari | vedavyasamamanohara vrundavanadivamanga enisiha | srimahilesahitagikamitarthada hari | nemadi nelasiha ||21||

Kuseradara vayadi | mantralayadesake pogi mudadi |l
Esu seveya gaiyye | kasarogavanigimesa gurugovinda | dasannagisida ||3||

dasara padagalu · MADHWA · raghavendra

Guru raghavendra tava

ಗುರು ರಾಘವೇಂದ್ರ ತವ ಚರಣ ದರುಶನಕೆ
ಬರಲಿಲ್ಲವೆಂದು ಕೋಪವ ಮಾಡ್ವದ್ಯಾಕೊ || ಪ||

ಧನವಿಲ್ಲ ಕೈಯೊಳಗೆ ತನುವಿನಲಿ ಬಲವಿಲ್ಲಾ
ಅನುಕೂಲವಿಲ್ಲವೊ ಎನ್ನ ಮನೆಯೊಳಗೆ
ಘನ ಸುಪ್ರಯಾಸ ನಿನ ದಾಸಗೊದಗಿದ ಮೇಲೆ
ಎನ ಮೇಲೆ ದೋಷವೇನಿರುವದಿದರೊಳಗೆ ||1||

ಗೆಲುವಿಲ್ಲ ಮನದೊಳಗೆ ಫಲವಿಲ್ಲ ಸಂಸಾರ
ಬಲೆಯೊಳಗೆ ಸಿಲುಕಿ ನಾ ಬೇಸತ್ತೆನೋ
ಹಲುಬುವೆನೊ ದಾರಿದ್ರ್ಯ ಬವಣೆಯನು ತಪ್ಪಿಸಿ
ಸುಲಭ ಸಾಧನೆ ಪೇಳಿ ಸಲಹೊ ಗುರುವರನೇ ||2||

ಒಂದು ಬಗೆಯನು ತೋರೋ ಇಂದೇ ನಾ ಹೊರಡುವೆನೂ
ಛಂದದಿಂದಲಿ ಪರಿವಾರ ಸಹಿತಾ
ತಂದೆ ಹನುಮೇಶ ವಿಠಲನ ಕಂದನೆ ನಿನ್ನ
ಬಂದು ನೋಡುವೆ ಮಾಡ್ವೆ ಸೇವೆ ತವ ದೂತಾ ||3||

Guru ragavendra tava charana darushanake baralillavendu kopava madvadyako || pa||

Dhanavilla kaiyolage tanuvinali balavilla
Anukulavillavo enna maneyolage
Gana suprayasa nina dasagodagida mele
Ena mele doshaveniruvadidarolage ||1||

Geluvilla manadolage Palavilla samsara
Baleyolage siluki na besatteno
Halubuveno daridrya bavaneyanu tappisi
Sulaba sadhane peli salaho guruvarane ||2||

Ondu bageyanu toro inde na horaduvenu
Chandadindali parivara sahita
Tande hanumesa vithalana kandane ninna
Bandu noduve madve seve tava duta ||3||

dasara padagalu · jagannatha dasaru · MADHWA

Dasara padagalu on Sri Jagannatha dasaru

ತಂಗಿ ನೀ ಕೇಳಿದ್ಯಾ ಅಂಗನಾಮಣಿ
ರಂಗನೊಲಿದ ಭಾಗವತರ ಮಹಿಮೆಗಳ ||pa||

ಶ್ರವಣಾದಿ ನವವಿಧ ಸವಿಯ ಭಕುತಿಯಿಂದ
ಪ್ರವೀಣನೆನಿಸಿ ಮಾಧವನ ಧ್ಯಾನಿಪ ಖ್ಯಾತಿ ||1||

ಅಮಲ ಸತ್ಕರ್ಮದಿ ಶಮದಮಪೂರ್ವಕ
ಅಮಿತ ಮಹಿಮನಂಘ್ರಿ ಕಮಲಾಖ್ಯಪರ ಖ್ಯಾತಿ ||2||

ಶ್ರೀದವಿಠಲನ ಪಾದಭಜಕರಾದ
ಸಾಧುವರ್ಯರ ಸುಬೋಧ ಬಣ್ಣಿಪರಾರೆ ||3||

tangi nI kELidyA anganAmaNi
ranganolida BAgavatara mahimegaLa ||pa||

SravaNAdi navavidha saviya Bakutiyinda
pravINanenisi mAdhavana dhyAnipa KyAti ||1||

amala satkarmadi SamadamapUrvaka
amita mahimananGri kamalAKyapara KyAti ||2||

SrIdaviThalana pAdaBajakarAda
sAdhuvaryara subOdha baNNiparAre ||3||


ತೆರಳಿದರು ಶ್ರೀ ಜಗನ್ನಾಥದಾಸಾರ್ಯರು
ಸಿರಿಪತಿಯ ಸ್ಮರಿಸಿ ಹರಿಪುರಕೆ ಹರುಷದಲಿ ||pa||

ವರಶುಕ್ಲವತ್ಸರದ ಭಾದ್ರಪದ ಶಿತಪಕ್ಷ
ಹರಿವಾರ ನವಮಿಯಲ್ಲಿ
ಸುರಸಿದ್ಧ ಸಾಧ್ಯ ಸನ್ಮುನಿಗಣಾರ್ಚಿತ ಪಾದ
ಹರಿಯೆ ಪರನೆಂದೆನುತಲಿ
ಧರಣಿಯನು ತ್ಯಜಿಸಿ ಬಹುಮಾನಪೂರ್ವಕವಾಗಿ
ಬೆರೆದು ಸುರಸಂದಣಿಯಲಿ
ಪರಮಾರ್ಥವೈದಿ ಮನ ಹರಿಯ ಪಾದದಲಿಟ್ಟು
ವರವಿಷ್ಣುದೂತ ವೈಮಾನಿಕರ ಒಡಗೂಡಿ ||1||

ಅತಿಪ್ರೇಮಿಗಳು ಹಸನ್ಮುಖರು ದಯೆ ಬೀರುವರು
ಖತಿದೂರರಿವರು ಜಗದೀ
ಮಿತಿಮೀರಿ ಶ್ರೀಹರಿಯ ಕಥೆ ನಾನಾ ಪರಿಯಲ್ಲಿ
ಅತಿಶಯದಿ ಪೇಳಿ ಇಹಕೆ
ಸತತವು ಶರಣರ್ಗೆ ಗತಿಯಾಗುವಂತೆ ಸ
ತ್ವಥವಿಡಿಸಿ ಕರುಣದಿಂದ
ಹಿತವಂತರೆನಿಸಿ ಸಮ್ಮತವಾಗಿ ಸರ್ವರಿಗೆ
ಮತಿದೋರಿ ಕೊಟ್ಟು ಸದ್ಗತಿಯಗೋಸುಗವಾಗಿ 2||

ಆಚರಣೆಯಲಿ ಒಂದರಘಳಿಗೆ ಬಿಡದೆ ಬಲು
ಖೇಚರಾರೂಢ ಹರಿಯಾ
ಸೋಚಿತಾರಾಧನೆಯ ಮಾಡಿ ಮರೆಯದಲೆ ಮಹಾ
ವೈಚಿತ್ರ್ಯವನು ತೋರಿ ಈ ಚರಾಚರದಿ ಸಂಗೀತ ಸಾಹಿತ್ಯದಲಿ
ಪ್ರಾಚಾರ್ಯವಂತರೆನಿಸೀ
ಆ ಚತುರ್ದಶಭುವನಪತಿ ಶ್ರೀದವಿಠಲನ
ಯೋಚನೆಯ ಬಿಡದೆ ಮಂಗಳ ಶಬ್ದವಾದ್ಯದಿಂ ||3||

teraLidaru SrI jagannAthadAsAryaru
siripatiya smarisi haripurake haruShadali ||pa||

varaSuklavatsarada BAdrapada SitapakSha
harivAra navamiyalli
surasiddha sAdhya sanmunigaNArcita pAda
hariye paranendenutali
dharaNiyanu tyajisi bahumAnapUrvakavAgi
beredu surasandaNiyali
paramArthavaidi mana hariya pAdadaliTTu
varaviShNudUta vaimAnikara oDagUDi ||1||

atiprEmigaLu hasanmuKaru daye bIruvaru
KatidUrarivaru jagadI
mitimIri SrIhariya kathe nAnA pariyalli
atiSayadi pELi ihake
satatavu SaraNarge gatiyAguvante sa
tvathaviDisi karuNadinda
hitavantarenisi sammatavAgi sarvarige
matidOri koTTu sadgatiyagOsugavAgi 2||

AcaraNeyali oMdaraGaLige biDade balu
KEcarArUDha hariyA
sOcitArAdhaneya mADi mareyadale mahA
vaicitryavanu tOri I carAcaradi sangIta sAhityadali
prAcAryavantarenisI
A caturdaSaBuvanapati SrIdaviThalana
yOcaneya biDade mangaLa SabdavAdyadiM ||3||


ರಂಗವಲಿದ ದಾಸರಾಯ | ಸಾಧು
ಸಂಗವಿಡಿಸಿ ಕರುಣದಿ ಪಿಡಿ ಕೈಯ್ಯ ||pa||

ಕುಂಭಿಣಿ ಸುರನಾಥ | ನಂಬಿದೆ ನಿನ್ನ ಪಾದ
ಬೆಂಬಿಡದಲೆ ಕಾಯೊ ||
ಸ್ತಂಭ ಮಂದಿರ | ಕಂಬು ಕಂಧರ
ಭಕ್ತಮಂದಾರ ||1||

ಹರಿಕಥೆ ಸುಧಾಸಾರ | ಸುರಸಗ್ರಂಥವ ಜಗದಿ |
ವಿರಚಿಸಿರುವ ನಿನ್ನ ||
ವರ ಉಪಕಾರ | ವರ್ಣಿಸಲಪಾರ |
ಪರಮೋದಾರ ||2||

ಸಾಮಗಾನ ವಿಲೋಲ | ಶಾಮಸುಂದರವಿಠಲ
ಸ್ವಾಮಿಯ ಭಕುತಿ | ನಿ |
ಸ್ಸಿಮ ಪ್ರಹ್ಲಾದ | ಅನುಜ ಸಲ್ಹಾದ
ನೀಡೆನಗಲ್ಹಾದ ||3||

rangavalida dAsarAya | sAdhu
sangaviDisi karuNadi piDi kaiyya ||pa||

kuMBiNi suranAtha | naMbide ninna pAda
beMbiDadale kAyo ||
staMBa mandira | kaMbu kandhara
BaktamandAra ||1||

harikathe sudhAsAra | surasagranthava jagadi |
viracisiruva ninna ||
vara upakAra | varNisalapAra |
paramOdAra ||2||

sAmagAna vilOla | SyAmasundaraviThala
svAmiya Bakuti | ni |
ssima prahlAda | anuja salhAda
nIDenagalhAda ||3||


ಶ್ರೀ ಜಗನ್ನಾಥದಾಸ ನಮಿಪೆ ಗುರುರಾಜ ಸಾತ್ವಿಕವಪುಷ ||pa||

ಈ ಜಗದೊಳು ನಿಮಗೆಣೆಗಾಣೆ ಸತತ ನಿ –
ವ್ರ್ಯಾಜದಿ ಹರಿಯ ಗುಣೋಪಾಸನೆ ಮಾಳ್ಪ||a.pa||

ಹರಿದಾಸ ಕುಲವರ್ಯರೆನಿಸಿ ಕಲ್ಪತರುವಂದದಿ ಚರ್ಯ
ಚರಿಸುತ ಧರೆಯೊಳು ಮೆರೆವ ಮಹಾತ್ಮರ
ಚರಣೇಂದ್ರೀವರಯುಗ್ಮ ದರುಶನ ಮಾಳ್ಪರ
ದುರಿತರಾಶಿಗಳಿರಗೊಡದೆ ನೆರೆ
ಪರಮಮುಕ್ತಿಯ ದಾರಿ ತೋರುತ
ಸಿರಿಸಹಿತ ಹರಿ ತೋರುವಂದದಿ
ಕರುಣ ಮಾಳ್ಪ ಸುಗಣಮಹೋದಧಿ ||1||

ರವಿಯು ಸಂಚರಿಸುವಂತೆ ಭೂವಲಯದಿ
ಕವಿಶ್ರೇಷ್ಠ ಚರಿಸಿದೆಯೋ
ಅವಿರುದ್ಧ ತ್ರಯಿಜ್ಞಾನ ಪ್ರವಹಂಗದಲಿ
ಭುವನೈಕ ವೇದವದ್ಯನ ಶ್ರವಣಭಕುತಿಯಿಂದ
ದಿವಸ ದಿವಸದಿ ಪ್ರೀತಿ ಬಡಿಸುತ
ಧ್ರುವವರನಂಘ್ರಿಗಳಿಗರ್ಪಿಸಿ
ಭುವನ ಪಾವನ ಮಾಡಲೋಸುಗ
ಅವನಿ ತಳದಿ ವಿಹರಿಸುತಿಹ ಗುರು ||2||

ಅಹೋ ರಾತ್ರಿ ಕ್ಷಣ ಬಿಡದೆ ಸನ್ಮನ ಹೃ –
ದ್ಗುಹಾಧೀಶನನು ಬಿಡದೆ
ಸಹನ ಗುಣಗಳನ್ನು ಅನುದಿನ ಸ್ಮರಿಸುತ
ಸಹನದಿ ಶಮದಮಯತು ನಿಯಮಗಳನ್ನು
ವಹಿಸಿ ಶ್ರೀದವಿಠಲನಂಘ್ರಿಯ
ಮಹಿಮೆ ತೋರುತ ಪೂಜಿಸುತ ಬಲು
ಮಹಿತಪೂರ್ಣಾನಂದತೀರ್ಥರ
ವಿಹಿತ ಶಾಸ್ತ್ರಗಳರಿತು ಬೋಧಿಪ ||3||

Sri jagannathadasa namipe gururaja satvika varapurusha ||pa||

I jagadolu nimagenegane satata ni –
Vryajadi hariya gunopasane malpa ||a.pa.||

Haridasa kulavaryarenisi kalpataruvandadi charya
Charisuta dhareyolu mereva mahatmara
Charanendrivarayugma darusana malpara
Duritarasigaliragodade nere
Paramamuktiya dari toruta
Sirisahita hari toruvamdadi
Karuna malpa suganamahodadhi ||1||

Raviyu sancharisuvante buvalayadi
Kavisreshtha carisideyo
Aviruddha trayij~jana pravahangadali
Buvanaika vedavadyana sravanabakutiyinda
Divasa divasadi priti badisuta
Dhruvavaranangrigaligarpisi
Buvana pavana madalosuga
Avani taladi viharisutiha guru ||2||

Aho ratri kshana bidade sanmana hru –
Dguhadhisananu bidade
Anudina smarisuta
Sahanadi Samadamayatu niyamagalannu
Vahisi sridavithalanamgriya
Mahime toruta pujisuta balu
Mahitapurnanamdatirthara
Vihita sastragalaritu bodhipa ||3||


ರಕ್ಷಿಸೋ ಜಗನ್ನಾಥದಾಸ ರಕ್ಷಿಸೋ ||pa||

ರಕ್ಷಿಸು ಗುರು ಜಗನ್ನಾಥದಾಸ
ಪಕ್ಷಿವಾಹನನ ನಿಜದಾಸ ಮು
ಮುಕ್ಷು ಮಾರ್ಗವ ತೋರ್ದಧೀಶ ನೀನೆ ಪ್ರ
ತ್ಯಕ್ಷ ಪ್ರಹ್ಲಾದನನುಜ- ||ಅಹಾ||
ಈ ಕ್ಷಿತಿಯೊಳು ಸುರಶ್ರೇಷ್ಠನೆನಿಸಿ ವಿ
ಶಿಷ್ಟರ ಮನೋಭೀಷ್ಟವನಿತ್ತ ಹರಿದಾಸ ||1||

ವೇದವಂದ್ಯನ ನಿಜತತ್ತ್ವ ನಿಜ
ನಿತ್ಯ (ಸತ್ಯ) ಪೂರ್ಣ
ಬೋಧರ ಗ್ರಂಥ ತತ್ತ್ವ ನೀತಿ ತ
ಪ್ಪದೆ ಪೇಳ್ದೆ ಮಹತ್ವ ||ಅಹಾ||
ಮೋದಪಡಿಸಿ ಮೋದತೀರ್ಥರ ಮತ ದು
ಗ್ಧಾಬ್ಧಿಸುಧೆಯನಿತ್ತ ಬಾದರಾಯಣನ ದಾಸ ||2||

ಪ್ರಕೃತಿಬಂಧಕರಾದ ಜನರು ನಿನ್ನ
ಪ್ರಾಕೃತಗ್ರಂಥನೊಡಿ ಮೋದಿಪರು ಸತತಾ
ಪ್ರಾಕೃತನ ತಾ ವಂದಿಪರು ಜನ್ಮ
ಸುಕೃತಕ್ಕೆ ತಾವು ಸಾಧಿಪರು ||ಅಹಾ||
ಸಂಸ್ಕøತ ಭಾಷೆಯ ಪ್ರಕರಣಗಳನೆಲ್ಲ ಪ
ರಿಷ್ಕøತ ಪಡಿಸಿ ನೀ ಪ್ರಾಕೃತದೊಳು ತೋರ್ದೆ||3||

ವಿಪ್ರವರೇಣ್ಯನೆ ನೀನು ಜಗದಿ
ಅಪ್ರಮೇಯನ ಪ್ರಮೇಯವನ್ನೂ ಅದಕ್ಕೆ
ಸಪ್ರಮಾಣಗಳೆಲ್ಲವನ್ನೂ ತೋರಿ ದಿ
ಕ್ ಪ್ರದರ್ಶನ ಮಾಡಿ ಇನ್ನೂ ||ಅಹಾ||
ಸ್ವಪ್ರಯೋಜನ ರಹಿತ ಅಪ್ರಮೇಯನ ಮಹಿಮೆ
ಕ್ಷಿಪ್ರ ಭೋಧೆಯಾಗಲ್ ತ್ವತ್ಪ್ರಸಾದವನಿತ್ತೆ||4||

ನಿನ್ನುಪಕಾರದ ಪರಿಯಾ ನಾನು
ಜನ್ಮಜನ್ಮಾಂತರಕೆ ಮರೆಯೆ ನೀನೆ
ಘನ್ನ ಶ್ರೀಹರಿದಾಸಾಗ್ರಣಿಯೇ ಇನ್ನು
ನಿನ್ನ ಹರಿಕಥಾಮೃತಸಾರಕ್ಕೆಣೆಯೇ ||ಅಹಾ||
ಇನ್ನಿಲ್ಲ ನಿನ್ನಂಥ ಘನ್ನ ಕವಿಗಳ ಕಾಣೆ
ಪನ್ನಂಗಶಯನ ಶ್ರೀ ವೆಂಕಟೇಶನ ದಾಸಾ ||5||

Rakshiso jagannathadasa rakshiso ||pa||

Rakshisu guru jagannathadasa
Pakshivahanana nijadasa mu
Mukshu margava tordadhisa nine pra
Tyaksha prahladananuja- ||aha||
I kshitiyolu surasreshthanenisi vi
Sishtara manobishtavanitta haridasa ||1||

Vedavandyana nijatattva nija
Nitya (satya) purna
Bodhara grantha tattva niti ta
Ppade pelde mahatva ||aha||
Modapadisi modatirthara mata du
Gdhabdhisudheyanitta badarayanana dasa ||2||

Prakrutibandhakarada janaru ninna
Prakrutagranthanodi modiparu satata
Prakrutana ta vandiparu janma
Sukrutakke tavu sadhiparu ||aha||
Sankasta basheya prakaranagalanella pa
Rishkasta padisi ni prakrutadolu torde||3||

Vipravarenyane ninu jagadi
Aprameyana prameyavannu adakke
Sapramanagalellavannu tori di
K pradarsana madi innu ||aha||
Svaprayojana rahita aprameyana mahime
Kshipra bodheyagal tvatprasadavanitte||4||

Ninnupakarada pariya nanu
Janmajanmantarake mareye nine
Ganna sriharidasagraniye innu
Ninna harikathamrutasarakkeneye ||aha||
Innilla ninnantha Ganna kavigala kane
Pannangasayana sri venkatesana dasa ||5||


Jagannatha dasaru suladhi(by Shyama sundara dasaru)

dasara padagalu · MADHWA · purandara dasaru

Madhwa mathakinnu sari

ಮಧ್ವಮತಕಿನ್ನು ಸರಿಯುಂಟೆ – ಪ್ರ – |ಸಿದ್ಧ ವೈಕುಂಠಕಿಂತಧಿಕ ಮತ್ತುಂಟೆ ? ||

.ವೃಕ್ಷದೊಳಗೆ ತುಳಸಿ ವೃಕ್ಷಕಧಿಕವಿಲ್ಲ |ಪಕ್ಷಿಯೊಳಗೆ ಗರುಡ ಪಕ್ಷಿಗಿಂತ ಮಿಗಿಲಿಲ್ಲ ||
ದಕ್ಷ ಹನುಮಂತನಂತೆ ಲೋಕದೊಳು ಬಂಟರಿಲ್ಲ |ಲಕ್ಷ್ಮಿಗೆ ಸರಿಯಾದ ಸ್ತ್ರೀಯರಿಲ್ಲ – ನೀ ಕೇಳೊ |ಪಕ್ಷಿವಾಹನನೆನಿಪ ದೇವ ತಾ ಬಲ್ಲ ||

ಸಕಲ ಮಣಿಗಳಲಿ ಚಿಂತಾಮಣಿಗೆ ಸರಿಯಿಲ್ಲ |ಮಿಕ್ಕ ರತ್ನಮೊಳಗೆ ಮಾಣಿಕತೆ ಮಿಗಿಲಿಲ್ಲ ||
ಭಕುತರೊಳಗೆಲ್ಲ ಚಂದ್ರಶೇಖರಗೆ ಸರಿಯಿಲ್ಲ |ಮುಕುತಿ ಸುಖಗಳಿಗೆಣೆಯಿಲ್ಲ – ನೀ ಕೇಳೊ |ಅಖಿಳಬ್ರಹ್ಮಾಂಡನಾಯಕ ತಾ ಬಲ್ಲ||

ಪ್ರಥಮಯುಗದಲಿ ಹನುಮ , ದ್ವಿತಿಯ ಯುಗದಲಿ ಭೀಮ |ತೃತಿಯ ಯುಗದಲಿ ಮಧ್ವಾಚಾರ್ಯರೆಂದೆನಿಸಿ ||ಸತುಶಾಸ್ತ್ರ ಕಿದಿರಿಲ್ಲಅಮೃತಕಿಂತಧಿಕವಿಲ್ಲ |ರತಿಪತಿಗಿಂತ ಚೆಲುವರಿಲ್ಲ – ನೀ ಕೇಳೊ |
ಕಥೆಯನು ಪುರಂದರವಿಠಲ ತಾ ಬಲ್ಲ ||

Madhvamatakinnu sariyunte – pra – |siddha vaikunthakintadhika mattunte ||pa||

Vrukshadolage tulasi vrukshakadhikavilla |
Pakshiyolage garuda pakshiginta migililla ||
Daksha hanumantanante lokadolu bantarilla |
Lakshmige sariyada striyarilla – ni kelo |pakshivahananenipa deva ta balla ||1||

Sakala manigalali chintamanige sariyilla |
Mikka ratnamolage manikate migililla ||
Bakutarolagella camdrasekarage sariyilla |mukuti sukagaligeneyilla – ni kelo |
Akilabrahmandanayaka ta balla ||2||

Prathamayugadali hanuma , dvitiya yugadali bima |
Trutiya yugadali madhvacaryarendenisi ||
Satusastra kidirilla^^amrutakimtadhikavilla |ratipatiginta celuvarilla – ni kelo |
Katheyanu purandaravithala ta balla ||3||

dasara padagalu · hari · MADHWA · Vadirajaru

Naaraayanana nene Manave

ನಾರಾಯಣನ ನೆನೆ ಮನವೇ ನಾರಾಯಣನ ನೆನೆ||pa||

ನಾರಾಯಣನ ನೆನೆ ವರ್ಣಿಸು ಮನ್ನಿಸುಆರಾಧನೆಗಳ ಮಾಡುತ ಪಾಡುತನೀರಾಜನದಿಂದಲರ್ಚಿಸಿ ಮೆಚ್ಚಿಸಿ ವೇದಪಾರಾಯಣಪ್ರಿಯನ||a.pa||

ಅವನ ಶ್ರವಣ ಮನನ ನಿಧಿಧ್ಯಾಸನ
ಶ್ರೀವಿಷ್ಣುವಿನ ಭಕ್ತಿಮಹಾಪ್ರಸಾದಂಗಳು
ಕೈವಲ್ಯ ಪದಕಿಕ್ಕಿದ ನಿಚ್ಚಣಿಕೆ ಎಂದು
ಭಾವಜ್ಞರು ಪೇಳ್ವರೊ
ಜೀವನ ಜವನಬಾಧೆಯ ತಪ್ಪಿಸಿ
ಪಾವನ ವೈಕುಂಠಪುರದೊಳಗೆಂದೆಂದು
ಆವಾಸವನು ಮಾಡಿ ಸುಖಿಸಬೇಕಾದರೆ
ಸೇವಿಸು ವೈಷ್ಣವರ ||||

ದ್ವಾರಾವತಿಯ ಗೋಪಿಚಂದನದಿಂದಶ್ರೀ
ರÀಮಣನ ವರ ನಾಮವ ನೆನೆ
ದೆರಡಾರೂಧ್ರ್ವ ಪುಂಡ್ರಗಳ ಧರಿಸೆಂದೆಂದು
ವೀರವೈಷ್ಣವಗುರುವಸೇರಿ
ಸಂತಪ್ತ ಸುದರುಶನ ಶಂಖ
ಧಾರಣವನು ಭುಜಯುಗದಲಿ ಮಾಡಿ
ಮುರಾರಿಯ ಮಂತ್ರಗಳವರಿಂದ
ಕೇಳುತ ಓರಂತೆ ಜಪಿಸುತ್ತಿರು ||2||

ಹರಿ ನಿರ್ಮಾಲ್ಯವ ಶಿರದಿ ಧರಿಸುತಿರು
ಹರಿ ನೈವೇದ್ಯವನೆ ಭುಂಜಿಸುತಿರುಇರುಳು
ಹಗಲು ಹರಿಸ್ಮರಣೆಯ ಬಿಡದಿರು
ದುರುಳರ ಕೂಡದಿರೊ
ಹರಿಪದ ತೀರ್ಥದ ನೇಮವಬಿಡದಿರು
ಹರಿಪರದೇವತೆ ಎಂದರುಪುತಲಿರು
ಗುರುಮುಖದಿಂದ ಸಚ್ಛಾಸ್ತ್ರ ಪುರಾಣವ
ನಿರುತದಿ ಕೇಳು ||3||

ತುಷ್ಟನಹನು ಎಳ್ಳಷ್ಟು ಮುಂದಿಟ್ಟರೆ
ಅಷ್ಟಿಷ್ಟೆನ್ನದೆ ಸಕಲೇಷ್ಟಂಗಳಕೊಟ್ಟು
ಕಾಯ್ವನು ಶಕ್ರನಿಗೆ ತ್ರಿವಿಷ್ಟಪ
ಪಟ್ಟವ ಕಟ್ಟಿದವ
ದುಷ್ಟರನೊಲ್ಲ ವಿಶಿಷ್ಟರಿಗೊಲಿವ
ಅ-ನಿಷ್ಟವ ತರಿದೊಟ್ಟುವ ಜಗಜಟ್ಟಿ
ಅರಿಷ್ಟಮುಷ್ಟಿಕಾದ್ಯರÀ ಹುಡಿಗುಟ್ಟಿದ
ವಿಠಲ ಬಹು ದಿಟ್ಟ ||4||

ಕಂದ ಬಾಯೆಂದರೆ ನಂದನಿಗೊಲಿದಿ
ಹಕುಂದುಕೊರತೆ ಬಂದರೆ ನೊಂದು
ಕೊಳನುಇಂದಿರೆಯರಸ ಮುಕುಂದ ಮುಕುತಿಯ
ನಂದನವನೀವ ದೇವಸಂದೇಹವಿಲ್ಲದೆ
ಒಂದೆಮನದಿ ಸ-ನಂದನಾದಿಗಳು ಭಜಿಸಲು
ಒಲಿವ ಉ-ಪೇಂದ್ರನ ಶುಭಗುಣಸಾಂದ್ರನ
ಯದುಕುಲಚಂದ್ರನ ವಂದಿಸಿರೊ ||5||

ಓಡುವ ಅಡಗುವ ದೇವರೆ ಬಲ್ಲರು
ಬಾಡುವ ಬೇಡುವ ಮುನಿಗಳೆ
ಬಲ್ಲರುನೋಡುವ ಕೂಡುವ ಮುಕುತರೆ
ಬಲ್ಲರೊಡನಾಡುವ ರಮೆ
ಬಲ್ಲಳುಊಡುವ ಪಾಡುವ ಯಶೋದೆ
ಬಲ್ಲಳುಕಾಡುವ ಖಳರ ಮರ್ದಿಸಿ
ಹುಡಿಗುಟ್ಟಿದನಾಡೊಳು ಕೇಡುಗಳೆವ [ಕೃಷ್ಣನಿಗೀಡೆಂದಾಡದಿರು] ||6||

ಆವನ ಪಕ್ಷವದಕೆದುರಿಲ್ಲಆವನ ಕುಕ್ಷಿಯೊಳಕ್ಕು
ಜಗತ್ರಯಆವನು ಶಿಕ್ಷಿಪ ರಕ್ಷಿಪನು ಮತ್ತಾವನು
ಪಾವನನುಆವನ ಶಿಕ್ಷೆಯ ಮಿಕ್ಕವರಿಲ್ಲ
ಕೇ-ಳಾವನುಪೇಕ್ಷೆ ಕುಲಕ್ಷಯವೆನಿಪುದುಆವನುರುಕ್ರಮ
ವಿಕ್ರಮನೆನಿಸಿದ ದೇವನಿಗಾವನೆಣೆ ||7||

ಶಿರಿದೆವಿಯು ಯಾವನಿ ಗರಸಿಯು ಸುರ |
ಘುರು ವಿರಿನ್ಚಿಪರು ಅವನ ಕುಮಾರರು |
ಊರಗಾಧಿಪಗಾವನ ಮನ್ಚ ವಿಹಗೆ-| ಶ್ವರಗಾವನ ಆಹನ ||
ಫುರಹರ ನಾವನುನ್ಗುತ ನೀರ ಪೊತ್ತ |
ಣಿರ್ಜರ ಪತಿಯಾವನ ಚರನ ಸೆವಕನಾದ ||
ಶುರರೊಲಗಾ ಹಯವದನಗಿನ್ನಾರು |
ಶರಿಯೆನ್ದುಸುರುವೆನಯ್ಯ | ಸರಿಯೆನ್ದುಸುರುವೆನಯ್ಯ || ೮ ||

Naaraayanana nene | manave | naaraayanana nene || pa ||

Naaraayanana mannisu varnisu aaraadhanegala maaduta paaduta |
Neeraajanadinda archisu mecchisu paaraayana priyana |
Veda | paarayana priyana || a.pa ||

Avana shravana manana nidhidhyaasana |
Aa vishnuvina bhakti mahaa prasaadangalu |
Kaivalyapadakikkida nicchanike endu bhaavaj~jaru pelvaru
| deva | bhaavaj~jaru pelvaru ||
Jeevana javana baadhegalannutappisi |
Paavana puradolagendigu |
Aavaasava maadi sukhisa bekaadare |
Sevisu vaishnavara | nee | sevisu vaishnavara || 1 ||

Dwaaraavatiya gopi chandanadinda | shreeramanana vara
Naamava nenedare |
Eradaaru oordhwa pundrangala dharisendu |
Veera vaishnava guruva | nee | veera vaishnava guruva ||
Seri samtapta sudarushana shamkhava |
Dhaaranavanu bhujayugadolu maadi ||
Muraariya mantragalavarindale keli |
Orante japisutiru | nee | Orante japisutiru || 2 ||

Kanda baarendare nandanigolidu |
Kundu korate bandare nondu kollanu ||
Indireyarasa mukundane mukuti aanandavaniva deva |
Aanandavanivadeva || sandeha villade onde manadigo-|
Vindana neneva gajendranigolida | u- |
Pendrana shubhaguna saandrana yadukula
Chandrana vandisiro |
Yadukula chandrana vandisiro || 3 ||

Tushtanahudo ellashtu mundittare |
Ashtishtennade sakaleshtangala ||
Kottu kaavanu shakranige trivishtapa pattavagattidava|
Trivishtapa pattavagattidava ||
Nishturanalla vishishtharigolidiha |
Dushtara taridattida jagajatti ||
Arishta mushtikaadyara hudigattida viththala baludhitta |
Namma viththala baludhitta || 4 ||

Avana paksha balakkidirillake-|
Laavana kukshiyolakku jagatraya ||
Avanu rakshipa shikshipano ma- |
Ttaavanu paavanano, mattaavanu paavanano ||
Avana shikshege mikkavarilla ke-|
Laavanu pekshege kulakshaya venipudu ||
Avanurukrama trivikrama nenisidaa |
Devanigaavagene | namma | devani gaavagene || 5 ||

Oduva aaduva devare ballaru |
Kooduva noduva mukutare ballaru ||
Beduva munigalu ballaru |
Avanodanaaduva rame taa ballalu ||
Ooduva paaduva yashode ballalu |
Kaaduva khoolara aaduta kedahida |
Naadolu sharanara keelu kaleda krushna ||
Geedennadiru moodha | iva geedennadiru moodha ||6||

Hari nirmaalyava shiradi dharisutiru |
Hari naivedyava bhunjisutiru nitya ||
Hagalu irulu hari smaraneya bidadiru |
Durulara koodadiru | nee | durulara koodadiru ||
Hari para teeratha nemava bidadiru |
Hari para devate yamdusurutaliru ||
Guru mukhadinda saccaastra puraanava |
Nirutadi kelutiru | nee | nirutadi kelutiru || 7 ||

Sirideviyu yaavani garasiyu sura |
Guru virinchiparu avana kumaararu |
Uragaadhipagaavana manca vihage-| shwaragaavana
Vaahana ||
Purahara naavanunguta neera potta |
Nirjara patiyaavana charana sevakanaada ||
Surarolagaa hayavadanaginnaaru |
Sariyendusuruvenayya | sariyendusuruvenayya || 8 ||

dasara padagalu · gopala dasaru · MADHWA · narasimha

Kaayo shreenaarasimha

ಕಾಯೋ ಶ್ರೀ ನಾರಸಿಂಹ ಕಾಯೋ ಜಯ ನಾರಸಿಂಹ ।ಪ।

ಕಾಯೋ ಶ್ರೀ ನಾರಸಿಂಹ ತ್ರಿಯಂಬಕಾದ್ಯಮರೇಶ
ಭಯಾಂಧತಿಮಿರಮಾರ್ತಾಂಡ ಶ್ರೀನಾರಸಿಂಹ ।ಅ ಪ।

ಘೋರ ಅಕಾಲಮೃತ್ಯು ಮೀರಿ ಬರಲು ಕಂಡು
ಧೀರ ನೀ ಬಿಡಿಸದಿನ್ಯಾರೋ ಶ್ರೀ ನಾರಸಿಂಹ ।।೧।।

ಧೀಷಣನೆ ಸುಭದ್ರ ದೋಷ ಮೃತ್ಯುಗೆ ಮೃತ್ಯು
ಸುಷಮ್ನಾನಾಡಿಸ್ಥಿತವಿಭುವೆ ಶ್ರೀನಾರಸಿಂಹ ।।೨।।

ಜ್ಞಾನರಹಿತನಾಗಿ ನಾ ನಿನ್ನ ಮರೆತರೆ
ನೀನೂ ಮರೆತದ್ಯಾಕೆ ಪೇಳೋ ಶ್ರೀ ನಾರಸಿಂಹ ।।೩।।

ಪ್ರಬಲೋತ್ತಮನೆನಿಸಿ ಅಬಲರ ಕಾಯದಿರೆ
ಸುಬಲರು ಕಂಡು ಮೆಚ್ಚುವರೆ ಶ್ರೀ ನಾರಸಿಂಹ ।।೪।।

ಪಾಲಮುನ್ನೀರಾಗರ ಪದುಮಮನೋಹರ
ಗೋಪಾಲ ವಿಠಲ ಜಗತ್ಪಾಲ ಶ್ರೀ ನಾರಸಿಂಹ ।।೫।।

Kaayo shreenaarasimha | kaayo jaya Naarasimha Kaayo || pa ||

Kaayo shreenaarasimha trayambakaadyamaresha |
Bhayaandhatimira maartaanda jaya naarasimha kaayo || a. Pa. ||

Ghora akaalamrutyu meeri baralu kandu |
Dheera nee bidisadinyaaro jaya naarasimha kaayo ||1 ||

Bheeshanane subhadra dosha mrutyuge mrutyu |
Sushumnaanaadisthita vibhuve jaya naarasimha || 2 ||

J~jaana rahitanaagi naa ninna maretare |
Neenu maretaddeko pelo jaya naarasimha kaayo || 3 ||

Prabalottamanenisi abalara kaayadiralu |
Subalaru kandu macchuvarenu jaya naarasimha kaayo|| 4 ||

Paalamunniragaara padumemanohara |
Gopaalaviththala jagatpaala shree naarasimha kaayo || 5 ||

dasara padagalu · MADHWA · narasimha

Bhaala bhaara ninnolhaakide

Bhaala bhaara ninnolhaakide |
Shreenaarasimha shree naarasimha || pa ||

Bhaala bhaara haakidenendu |
Doora maatra maadabeda |
Toru ninna paada padma |
Neerajaaksha aananda odeya || a. Pa. ||

Adaviyalli bandu kulite naa | ninna |
Adigalige vandisuve naa |
Kadalibyaali bella modalu |
Odaligendu beduve naa |
Kodade neenu madadi sahita |
Sadagaraadi bhumjisutiruve || 1 ||

Ashana vashana kaadi bedida | anudina |
Shashimukhiyara koodi aaduve |
Niruta ninna paada padma |
Bisajeyinda bhajisuvenu |
Hosataraada guruvininda |
Hecchige kaarya maaduvenu || 2 ||

Tande taayi endu naa | nimma |
Charana kamalagalige vandisuve naa |
Kandanantendu enna hinde munde nodadale |
Munde bandu paalisayyaa |
Indiresha shreeshaviththala || 3 ||

dasara padagalu · MADHWA · narasimha

Karunadinda karava pidiyo

ಕರುಣದಿಂದ ಕರವ ಪಿಡಿಯೊ ತೊರವಿ ನರಹರೆಆಹಾ ತೊರವಿ ನರಹರೆ||pa||

ಶರಣಾಗತರಮಲ ತೋರುವ ಕರುಣ ವಾರಿಧೆ ||a.pa||

ಸ್ತಂಭಜಾತ ನಂಬಿ ನಿನ್ನ ಅಂಬುಜಾತನೆಬಿಂಬದಂತೆ ಪಾಲಿಸೆನ್ನ ಸಾಂಬವಿನುತನೆ ||1||

ಛಟಿಛಟೆಂದು ಒಡೆದು ಕಂಬ ಪುಟಿದು ಸಭೆಯೊಳುಕಟಿಯ ತಟದೊಳಿಟ್ಟು ರಿಪುವ ಒಡಲ ಬಗೆದೆಯೊ ||2||

ಇಂದಿರೇಶ ಎನ್ನ ಹೃದಯ ಮಂದಿರದೊಳು ಬಂದು ತೋರೆ ಮುಖವ ನಿನ್ನ ವಂದಿಸುವೆನು||3||

Karunadinda karava pidiyo | toravi narasimha |
Aahaa | toravi narasimha || pa ||

Sharanaagatari gamala tori | karuna vaaridhe |A.pa||

Stambhajaata nambi ninna | ambujaatane |
Bimbadante | paalisenna saambhavinutane || 1 ||

Phata phatemdu odedu kamba | putidu sabheyolu |
Katiya tatadolittu | ripuva odala bagedeyo || 2 ||

Indiresha enna hrudaya mandiradolu |
Bandu ninna mukhava toro vandisuvenu || 3 ||

dasara padagalu · MADHWA · panduranga

Kandu endhige

ಕಂಡು ಎಂದಿಗೆ ಧನ್ಯಳಾಗುವೆ ನಾನು
ಪಂಡರೀಶನ ಪಾದ ಪುಂಡರೀಕವನೂ||pa||
.
ಪುಂಡರೀಕನಿಗೊಲಿದು ಒಂದು ಇಟ್ಟಿಗೆ ಮೇಲೆ
ಪಾಂಡವರ ಪ್ರಿಯ ಬಂಧು ನೆಲಸಿದಂಥಾ
ಪಂಡರೀ ಕ್ಷೇತ್ರದಲಿ ಚಂದ್ರಭಾಗದಿ ಮಿಂದು
ಮಂಡೆ ಬಾಗುತ ಹರಿಗೆ ಹಿಂಡಘವ ಕಳೆದೂ ||1||

ಕೋಮಲದ ಚರಣಕಭಿನಮಿಸಿ ಕರಯುಗದಿಂದ
ಶ್ಯಾಮವರ್ಣನ ಪಾದಕಮಲ ಮುಟ್ಟೆ
ಆ ಮಹಾ ಆನಂದ ಅನುಭವಿಪ ಭಾಗ್ಯವನು
ಶ್ರೀ ಮಹಾಲಕುಮಿಪತಿ ಎಂದು ಕಾಂಬುವೆನೋ ||2||

ಆಪಾರಭಕ್ತರಿಗೆ ವಲಿದ ವಿಠಲನ ಮೂರ್ತಿ
ಆಪಾದ ಮೌಳಿ ಈಕ್ಷಿಸುತ ಹೃದಯದಲಿ
ಇರ್ಪಮೂರ್ತಿಯ ತಂದು ಗುರುಬಿಂಬ ಸಹಿತದಲಿ
ಗೋಪಾಲಕೃಷ್ಣವಿಠಲನ ಎಂದು ಕಾಂಬೆ ||3||

Kandu endige dhanyalaguve nanu
Pada pundarikavanu ||pa||

Pundarikanigolidu ondu ittige mele
Pandavara priya bandhu nelasidantha
Pandari kshetradali chandrabagadi mindu
Mande baguta harige hindagava kaledu ||1||

Komalada charanakabinamisi karayugadinda
Syamavarnana padakamala mutte
A maha Ananda anubavipa bagyavanu
Sri mahalakumipati endu kambuveno ||2||

Aparabaktarige valida vithalana murti
Apada mauli ikshisuta hrudayadali
Irpamurtiya tandu gurubimba sahitadali
Gopalakrushnavithalana endu kambe ||3||