dasara padagalu · hari · MADHWA · prasanna venkata dasaru

Narayanaya namo narayana

ನಾರಾಯಣಾಯ ನಮೋ ನಾರಾಯಣಾ
ನಾರಾಯಣಾಯ ನಮೋ ನಾರಾಯಣಾ ||ಪ||

ನಾರದರ ಮುಖದಿಂದ ನರಕಸ್ಥರೆಬ್ಬಿಸಿದೆ
ನಾರಾಯಣಾಯ ನಮೋ ನಾರಾಯಣ. ||ಅಪ||

ಮತ್ತಕರಿಯವಸಾನಕಂಜಿ ಹರಿಯೇ ನೀಬಂದು ಕಾಯ್ದೆ
ನಾರಾಯಣಾ ನಮೋ ನಾರಾಯಣ
ಭಕ್ತ ಪ್ರಲ್ಹಾದನೇಕಾಂತ ನಿಷ್ಠೆಗೆ ಒಲಿದೆ
ನಾರಾಯಣಾಯ ನಮೋ ನಾರಾಯಣ. ||೧||

ಪೃಥುವಿಗಳ್ಳನಿರಿದು ಸತಿಯನುದ್ಧರಿಸಿದೆ
ನಾರಾಯಣಾಯ ನಮೋ ನಾರಾಯಣ
ಪೃಥು ಚಕ್ರವರ್ತಿಗೆ ಪ್ರತ್ಯಕ್ಷನಾಗ್ಯೊಲಿದೆ
ನಾರಾಯಣಾಯ ನಮೋ ನಾರಾಯಣ. ||೨||

ಶೂಲಿಯನು ಬೆಂಬೆತ್ತಿ ಸುಡುವೆನೆಂಬನ ಸುಟ್ಟೆ
ನಾರಾಯಣಾಯ ನಮೋ ನಾರಾಯಣ
ಶೀಲವಿಡಿದಂಬರೀಷನ ಮತವ ಗೆಲಿಸಿದೆಯೊ
ನಾರಾಯಣಾಯ ನಮೋ ನಾರಾಯಣ. ||೩||

ಮಕರರೂಪದಿ ಸತ್ಯವ್ರತಗೆ ತತ್ವವನೊರೆದೆ
ನಾರಾಯಣಾಯ ನಮೋ ನಾರಾಯಣ
ಮುಖದಿ ಶ್ರುತಿ ಪಿಡಿತಂದು ವಾರಿಜಾಸನಗಿತ್ತೆ
ನಾರಾಯಣಣಯ ನಮೋ ನಾರಾಯಣ. ||೪||

ಪುರುಹೂತಗಖಿಳ ಪರಮಾರ್ಥವನು ಅರುಹಿದೆ
ನಾರಾಯಣಾಯ ನಮೋ ನಾರಾಯಣ
ಸುರಪನ್ನ ಭಯವಟ್ಟಿ ಧ್ರುವಗೆ ಧ್ರುವಪದವಿತ್ತೆ
ನಾರಾಯಣಾಯ ನಮೋ ನಾರಾಯಣ. ||೫||

,ಮಹಾಪಾಪನಿರತ ಅಜಾಮಿಳನಘವ ಹರಿಸಿದೆ
ನಾರಾಯಣಾಯ ನಮೋ ನಾರಾಯಣ
ಮಹಿದಾಸನಾಗಿ ತಾಯಿಗೆ ತತ್ವನು ಪೇಳ್ದೆ
ನಾರಾಯಣಾಯ ನಮೋ ನಾರಾಯಣ. ||೬||

ಮುನಿ ಕಾಲಲೊದೆಯೆ ಎದ್ದು ಕರುಣಿಸಿದೆ ಕರಿಣಾನಿಧಿಯೆ
ನಾರಾಯಣಾಯ ನಮೋ ನಾರಾಯಣ
ಮುನಿವೆಂಗಳೆರೆಯಾಗೆ ಪದಸೋಂಕಿಸ್ಯೆತ್ತಿದೆಯೋ
ನಾರಾಯಣಾಯ ನಮೋ ನಾರಾಯಣ. ||೭||

ಮುಖವರಕ್ಷಿಸಿ ರಾಜ ಋಷಿಗಭೀಷ್ಟೆಯನಿತ್ತೆ
ನಾರಾಯಣಾಯ ನಮೋ ನಾರಾಯಣ
ಮಕರಧ್ವಜಾರಿ ಧನು ಮಿರಿದವನಿಜೇಶ
ನಾರಾಯಣಾಯ ನಮೋ ನಾರಾಯಣ. ||೮||

ಶುಭಕಪೀಶಗೆ ಅಭಯವರವಿತ್ತು ಕೈಪಿಡಿದೆ
ನಾರಾಯಣಾಯ ನಮೋ ನಾರಾಯಣ
ಶುಭಕಂಠನಂಜಿಕೆಯ ಹನುಮ ಹೇಳಲು ಕಳೆದೆ
ನಾರಾಯಣಾಯ ನಮೋ ನಾರಾಯಣ. ||೯||

ಶರಣು ಹೊಕ್ಕಿರೆ ವಿಭೀಷಣಗರಸುತನ ಕೊಟ್ಟೆ
ನಾರಾಯಣಾಯ ನಮೋ ನಾರಾಯಣ
ಶರಧಿ ರಾವಣನರಿದು ಸುರರ ಸಂಕಟ ಹರಿದೆ
ನಾರಾಯಣಾಯ ನಮೋ ನಾರಾಯಣ ||೧೦||

ಅನುಜನಗ್ನಿಗೆ ಧುಮುಕಲವಧಿ ಮೀರದೆ ಪೊರೆದೆ
ನಾರಾಯಣಾಯ ನಮೋ ನಾರಾಯಣ
ಅನಿಮಿಷರ ನಿಕರಕತಿ ಅಲ್ಹಾದ ಬೆಳೆಯಿಸಿದೆ
ನಾರಾಯಣಾಯ ನಮೋ ನಾರಾಯಣ. ||೧೧||

ಉರಿನುಂಗಿ ಗಿರಿನೆಗಹಿ ವ್ರಜಬ ಪಾಲನೆ ಮಾಡ್ದೆ
ನಾರಾಯಣಾಯ ನಮೋ ನಾರಾಯಣ
ಉರಗನೆಳೆತಂದವನ ರಾಣಿಯರ ಸ್ತುತಿಗೊಲಿದೆ
ನಾರಾಯಣಾಯ ನಮೋ ನಾರಾಯಣ. ||೧೨||

ಕ್ರತುನಾರಿಯರನ್ನ ಸವಿದುಂಡು ಸುಖವಿತ್ತೆ
ನಾರಾಯಣಾಯ ನಮೋ ನಾರಾಯಣ
ಕ್ರತುಭೋಕ್ತೃಕ್ರತುಗಾತ್ರ ಕ್ರತುಪಾಲ ಕ್ರತುಶೀಲ
ನಾರಾಯಣಾಯ ನಮೋ ನಾರಾಯಣ ||೧೩||

ಗೋಪ ಸ್ತ್ರೀಯರ ಕುಚದಿ ನ್ಯಸ್ತ ಚರಣಾಬ್ಜಯುಗ
ನಾರಾಯಣಾಯ ನಮೋ ನಾರಾಯಣ
ಗೋಪೀ ಜನಜಾರ ನವನೀತ ದಧಿಚೋರ
ನಾರಾಯಣಾಯ ನಮೋ ನಾರಾಯಣ. ||೧೪||

ವಂಶಗಾಯನಪ್ರಿಯ ವಿಧುಕುಲೋದ್ಭವ ಕೃಷ್ಣ
ನಾರಾಯಣಾಯ ನಮೋ ನಾರಾಯಣ
ವಂಶವರ್ಧಕ ಸುಜನ ವಂಶಮರ್ಧಕ ಕುಜನ
ನಾರಾಯಣಾಯ ನಮೋ ನಾರಾಯಣ. ||೧೫||

ಅಕ್ರೂರವಂದ್ಯ ಕಂಸಾರಿ ಕುಬ್ಜಾರಮಣ
ನಾರಾಯಣಾಯ ನಮೋ ನಾರಾಯಣ
ಆಕ್ರಂದಿಸಿದ ತಂದೆ ತಾಯಿಯರ ಭಯವಳದೆ
ನಾರಾಯಣಾಯ ನಮೋ ನಾರಾಯಣ. ||೧೬||

ಅದಿತಿ ಕುಂಡಲದಾತ ಭಗದತ್ತವರದನೆ
ನಾರಾಯಣಾಯ ನಮೋ ನಾರಾಯಣ
ಅಧಿಪತಿಗಳಧಿಪತಿಯೇ ಭೈಷ್ಮಿ ಸತ್ಯಾರಮಣ
ನಾರಾಯಣಾಯ ನಮೋ ನಾರಾಯಣ ||೧೭||

ಶಂಭುವಂದಿತಪಾದ ಸಾಂದೀಪೋದ್ಧವ ಪ್ರಿಯ
ನಾರಾಯಣಾಯ ನಮೋ ನಾರಾಯಣ
ಶಂಬರಾರಿಯ ಜನಕ ಯಜ್ಞ ಪೂಜಾಗ್ರಣಿಯೇ
ನಾರಾಯಣಾಯ ನಮೋ ನಾರಾಯಣ. ||೧೮||

ಪಾಂಡವರ ಪ್ರಾಣ ದ್ರೌಪದಿ ಮಾನರಕ್ಷಕನೆ
ನಾರಾಯಣಾಯ ನಮೋ ನಾರಾಯಣ
ಪೌಂಡ್ರಕ ಶೃಗಾಲ ಕೌರವ ಭೂಮಿಭಾರಹರ
ನಾರಾಯಣಾಯ ನಮೋ ನಾರಾಯಣ. ||೧೯||

ಅಭಿಮನ್ಯುನಾತ್ಮಜನ ಬಸುರೊಳಗೆ ಸಲಹಿದೆಯೊ
ನಾರಾಯಣಾಯ ನಮೋ ನಾರಾಯಣ
ಅಭಯದಲಿ ಪಾಂಡವರ ಸಂತತಿಯ ಬೆಳೆಸಿದೆಯೊ
ನಾರಾಯಣಾಯ ನಮೋ ನಾರಾಯಣ. ||೨೦||

ಗರುಡ ಗಂಧರ್ವ ಕಿನ್ನರ ಗೀತ ಸಂಪ್ರೀತ
ನಾರಾಯಣಾಯ ನಮೋ ನಾರಾಯಣ
ಗರುವೆ ಲಕುಮಿಯ ಕೂಡ ಕ್ರೀಡಾದ್ರಿಯಲ್ಲಿರುವೆ
ನಾರಾಯಣಾಯ ನಮೋ ನಾರಾಯಣ. ||೨೧|•

ಶಂಖ ಚಕ್ರ ಗದಾಬ್ಜ ಶ್ರೀ ವತ್ಸ ಶೋಭಿತನೆ
ನಾರಾಯಣಾಯ ನಮೋ ನಾರಾಯಣ
ಸಂಖ್ಯೆ ರಹಿತಾಭರಣ ಭೂಷಣಾವ್ಯಾಕೃತನೆ
ನಾರಾಯಣಾಯ ನಮೋ ನಾರಾಯಣ. ||೨೨||

ಮೀನ ಕಚ್ಛಪ ಪೋತ್ರಿ ನರಹರಿ ವಾಮನ ಭಾರ್ಗ್ವ
ನಾರಾಯಣಾಯ ನಮೋ ನಾರಾಯಣ
ಮಾವವಪ ಕೃಷ್ಣ ಬುದ್ದ ಕಲ್ಕಿಕಪಿಲಾತ್ರೆಯ
ನಾರಾಯಣಾಯ ನಮೋ ನಾರಾಯಣ. ||೨೩||

ಸ್ವಾಮಿ ತೀರ್ಥಾಂಬು ಅಂತರ್ಗಂಗಾಭಿಷಿಕ್ತ
ನಾರಾಯಣಾಯ ನಮೋ ನಾರಾಯಣ
ಸ್ವಾಮಿ ಭೂವರಾಹ ವೈಕುಂಠನಾಥ ವಿಶ್ವೇಶ
ನಾರಾಯಣಾಯ ನಮೋ ನಾರಾಯಣ. ||೨೪||

ಷಟ್ಕೋಟಿ ತೀರ್ಥಯುತಚರಣ ಶ್ರೀ ಭೂರಮಣ
ನಾರಾಯಣಾಯ ನಮೋ ನಾರಾಯಣ
ಷಟ್ಕಮಲ ನಿಲಯಚಿನ್ಮಯ ಚಿದ್ಗುಣಾರ್ಣವನೆ
ನಾರಾಯಣಾಯ ನಮೋ ನಾರಾಯಣ. ||೨೫||

ಭಕ್ತಾಭಿಮಾನಿ ಭವ ದೂರ ಭಕ್ತರ ಪ್ರಭುವೆ
ನಾರಾಯಣಾಯ ನಮೋ ನಾರಾಯಣ
ಭಕ್ತವತ್ಸಲ ಕೃಪಾಂಬುಧಿ ಪರಾತ್ಪರಕೃಷ್ಣ
ನಾರಾಯಣಾಯ ನಮೋ ನಾರಾಯಣ. ||೨೬||

ವಸುಧೆ ವೈಕುಂಠ ಮಂದಿರವಾಸ ಶ್ರೀ ನಿವಾಸ
ನಾರಾಯಣಾಯ ನಮೋ ನಾರಾಯಣ
ವಸುಪ್ರೀತ ವಸುಕರ್ತ ವಸುದಾತ ವಸುಪೂರ್ಣ
ನಾರಾಯಣಾಯ ನಮೋ ನಾರಾಯಣ. ||೨೭||

ಆದಿನಾಥಪ್ರಮೇಯಾದಿ ಪುರುಷೋತ್ತಮನೆ
ನಾರಾಯಣಾಯ ನಮೋ ನಾರಾಯಣ
ಆದಿಮಧ್ಯಾಂತ ರಹಿತಾದ್ಯ ಮೂರುತಿ ವಿಷ್ಣು
ನಾರಾಯಣಾಯ ನಮೋ ನಾರಾಯಣ. ||೨೮||

ಬದುಕಿಪ್ಯಾದರೆ ನಿನ್ನಹೊಗಳಲಿಕೆ ಬದಿಕಿಸೈ
ನಾರಾಯಣಾಯ ನಮೋ ನಾರಾಯಣ
ಬುಧರ ಸಂಗತಿ ಕೊಟ್ಟು ಮನ್ನಿಸೆನ್ನನು ತಂದೆ
ನಾರಾಯಣಾಯ ನಮೋ ನಾರಾಯಣ. ||೨೯||

ಕಿವಿಯಲ್ಲಿ ಮುಖದಲ್ಲಿ ನಿನ್ನ ನಾಮದ ನೆನೆವು
ನಾರಾಯಣಾಯ ನಮೋ ನಾರಾಯಣ
ಕವಲಾಗದಂತಿರಿಸಿ ತವ ಪಾದಾಬ್ಜವ ತೋರು
ನಾರಾಯಣಾಯ ನಮೋ ನಾರಾಯಣ. ||೩೦||

ಭವಭವದಿ ತೊಳತೊಳಲಿ ಬಳಬಳಲಿ ಬಲುದಣಿದೆ
ನಾರಾಯಣಾಯ ನಮೋ ನಾರಾಯಣ
ಭವ ವಿರಿಂಚ್ಯಾದಿಕರಿ ಗಭಯದನೆ ನೀಸಲಹು
ನಾರಾಯಣಾಯ ನಮೋ ನಾರಾಯಣ. ||೩೧||

ನೀ ತಾಯಿ ನೀತಂದೆ ನೀಬಂಧು ನೀಬಳಗ
ನಾರಾಯಣಾಯ ನಮೋ ನಾರಾಯಣ
ನೀತಿಗಳನರಿಯೆ ನಿನ್ನಯ ನಾಮವೇ ಗತಿಯು
ನಾರಾಯಣಾಯ ನಮೋ ನಾರಾಯಣ. ||೩೨||

ತನು ನೆಚ್ಚಿಕಿಲ್ಲಚಿತ್ತದ ಗತಿಯು ನೀಟಿಲ್ಲ
ನಾರಾಯಣಾಯ ನಮೋ ನಾರಾಯಣ
ತನಯ ತರುಣಿ ಕೊನೆಯ ಸಂಗತಿಗೆ ಆರಿಲ್ಲ
ನಾರಾಯಣಾಯ ನಮೋ ನಾರಾಯಣ. ||೩೩||

ದೋಷಗಳನರಸದೆನ್ನನು ಸಾಕು ಸಾಕಯ್ಯ
ನಾರಾಯಣಾಯ ನಮೋ ನಾರಾಯಣ
ದಾಸಪಾಲಕ ದೇವ ಡಿಂಗರರ ಸಂಜೀವ
ನಾರಾಯಣಾಯ ನಮೋ ನಾರಾಯಣ ||೩೪||

ನಿನ್ನ ಮೂರುತಿ ನೋಡಿ ನೋಡಿ ನೋಡಿ ನೋಡಿ
ನಾರಾಯಣಾಯ ನಮೋ ನಾರಾಯಣ
ನಿನ್ನನೇ ಬಿಂಬವನೆಂದು ಕಂಡು ಕೊಂಡಾಡುವೆನೊ
ನಾರಾಯಣಾಯ ನಮೋ ನಾರಾಯಣ. ||೩೫||

ನಿನ್ನ ಮೈ ಬೆಮರ್ಹೊಳೆಯಲ್ಲೆನ್ನ ಮುಳುಗಿಸಿ
ನಾರಾಯಣಾಯ ನಮೋ ನಾರಾಯಣ
ನಿನ್ನವ ನಾ ನಿನ್ನವರ ಕೈಲಿ ಕೊಡು ಗಡ ಗಡ
ನಾರಾಯಣಾಯ ನಮೋ ನಾರಾಯಣ. ||೩೬||

ವಾರಿಯಲಿ ಸ್ಥಳದಲ್ಲಿ ಅಡವಿಯಲೆಲ್ಲೆಲ್ಲಿ ಕಾಯೊ
ನಾರಾಯಣಾಯ ನಮೋ ನಾರಾಯಣ
ವಾರಾಹ ವಾಮನ ನೃಸಿಂಹ ಕೇಶವ ಸ್ವಾಮಿ
ನಾರಾಯಣಾಯ ನಮೋ ನಾರಾಯಣ. ||೩೭||

ಸತ್ಕುಲೋದ್ಭವನಾದೆ ಸನ್ಮಾರ್ಗರಿಯಲಿಲ್ಲ
ನಾರಾಯಣಾಯ ನಮೋ ನಾರಾಯಣ
ಸತ್ಕರ್ಮಗಳಿಗೆ ಬಹಿಷ್ಕೃತನಾಗಿ ಬಾಳುತಿಹೆ
ನಾರಾಯಣಾಯ ನಮೋ ನಾರಾಯಣ. ||೩೮||

ಒಂದು ಜಾವದ ತಪ್ಪನೆಂದೆಂದಿಗಿಣಲಾರೆ
ನಾರಾಯಣಾಯ ನಮೋ ನಾರಾಯಣ
ವಂದಿಸುವೆ ಸಾಷ್ಟಾಂಗ ತ್ರಾಹಿ ತ್ರಾಹಿ ಪಾಹಿ ತ್ರಾಹಿ
ನಾರಾಯಣಾಯ ನಮೋ ನಾರಾಯಣ. ||೩೯||

ಮಧ್ವೇಶ ಮಧ್ವಪ್ರಿಯ ಮಧ್ವಮತ ಪರಿಪಾಲ
ನಾರಾಯಣಾಯ ನಮೋ ನಾರಾಯಣ
ಮಧ್ವಗುರು ಸ್ತುತ್ಯ ಮಧ್ವಾರ್ಚಿತ ಪದಾಬ್ಜ ಹರಿ
ನಾರಾಯಣಾಯ ನಮೋ ನಾರಾಯಣ. ||೪೦||

ಏನರಿಯದವನಾನು ನೀನೆ ಪರಗತಿ ಎನಗೆ
ನಾರಾಯಣಾಯ ನಮೋ ನಾರಾಯಣ
ಪ್ರಾಣ ನಿನಗರ್ಪಿಸಿದೆ ಪ್ರಸನ್ನ ವೆಂಕಟಕೃಷ್ಣ
ನಾರಾಯಣಾಯ ನಮೋ ನಾರಾಯಣ ||೪೧||

nArAyaNAya namO nArAyaNA
nArAyaNAya namO nArAyaNA ||pa||

nAradara muKadinda narakastharebbiside
nArAyaNAya namO nArAyaNa. ||apa||

mattakariyavasAnakanji hariyE nIbaMdu kAyde
nArAyaNA namO nArAyaNa
Bakta pralhAdanEkAnta niShThege olide
nArAyaNAya namO nArAyaNa. ||1||

pRuthuvigaLLaniridu satiyanuddhariside
nArAyaNAya namO nArAyaNa
pRuthu cakravartige pratyakShanAgyolide
nArAyaNAya namO nArAyaNa. ||2||

SUliyanu beMbetti suDuveneMbana suTTe
nArAyaNAya namO nArAyaNa
SIlaviDidaMbarIShana matava gelisideyo
nArAyaNAya namO nArAyaNa. ||3||

makararUpadi satyavratage tatvavanorede
nArAyaNAya namO nArAyaNa
muKadi Sruti piDitandu vArijAsanagitte
nArAyaNaNaya namO nArAyaNa. ||4||

puruhUtagaKiLa paramArthavanu aruhide
nArAyaNAya namO nArAyaNa
surapanna BayavaTTi dhruvage dhruvapadavitte
nArAyaNAya namO nArAyaNa. ||5||

,mahApApanirata ajAmiLanaGava hariside
nArAyaNAya namO nArAyaNa
mahidAsanAgi tAyige tatvanu pELde
nArAyaNAya namO nArAyaNa. ||6||

muni kAlalodeye eddu karuNiside kariNAnidhiye
nArAyaNAya namO nArAyaNa
muniveMgaLereyAge padasOMkisyettideyO
nArAyaNAya namO nArAyaNa. ||7||

muKavarakShisi rAja RuShigaBIShTeyanitte
nArAyaNAya namO nArAyaNa
makaradhvajAri dhanu miridavanijESa
nArAyaNAya namO nArAyaNa. ||8||

SuBakapISage aBayavaravittu kaipiDide
nArAyaNAya namO nArAyaNa
SuBakaMThanaMjikeya hanuma hELalu kaLede
nArAyaNAya namO nArAyaNa. ||9||

SaraNu hokkire viBIShaNagarasutana koTTe
nArAyaNAya namO nArAyaNa
Saradhi rAvaNanaridu surara sankaTa haride
nArAyaNAya namO nArAyaNa ||10||

anujanagnige dhumukalavadhi mIrade porede
nArAyaNAya namO nArAyaNa
animiShara nikarakati alhAda beLeyiside
nArAyaNAya namO nArAyaNa. ||11||

urinungi girinegahi vrajaba pAlane mADde
nArAyaNAya namO nArAyaNa
uraganeLetaMdavana rANiyara stutigolide
nArAyaNAya namO nArAyaNa. ||12||

kratunAriyaranna savidunDu suKavitte
nArAyaNAya namO nArAyaNa
kratuBOktRukratugAtra kratupAla kratuSIla
nArAyaNAya namO nArAyaNa ||13||

gOpa strIyara kucadi nyasta caraNAbjayuga
nArAyaNAya namO nArAyaNa
gOpI janajAra navanIta dadhicOra
nArAyaNAya namO nArAyaNa. ||14||

vaMSagAyanapriya vidhukulOdBava kRuShNa
nArAyaNAya namO nArAyaNa
vaMSavardhaka sujana vaMSamardhaka kujana
nArAyaNAya namO nArAyaNa. ||15||

akrUravandya kaMsAri kubjAramaNa
nArAyaNAya namO nArAyaNa
AkraMdisida tande tAyiyara BayavaLade
nArAyaNAya namO nArAyaNa. ||16||

aditi kunDaladAta Bagadattavaradane
nArAyaNAya namO nArAyaNa
adhipatigaLadhipatiyE BaiShmi satyAramaNa
nArAyaNAya namO nArAyaNa ||17||

SaMBuvanditapAda sAMdIpOddhava priya
nArAyaNAya namO nArAyaNa
SaMbarAriya janaka yaj~ja pUjAgraNiyE
nArAyaNAya namO nArAyaNa. ||18||

pAMDavara prANa draupadi mAnarakShakane
nArAyaNAya namO nArAyaNa
pauMDraka SRugAla kaurava BUmiBArahara
nArAyaNAya namO nArAyaNa. ||19||

aBimanyunAtmajana basuroLage salahideyo
nArAyaNAya namO nArAyaNa
aBayadali pAMDavara saMtatiya beLesideyo
nArAyaNAya namO nArAyaNa. ||20||

garuDa gandharva kinnara gIta saMprIta
nArAyaNAya namO nArAyaNa
garuve lakumiya kUDa krIDAdriyalliruve
nArAyaNAya namO nArAyaNa. ||21|•

SaMKa cakra gadAbja SrI vatsa SOBitane
nArAyaNAya namO nArAyaNa
sanKye rahitABaraNa BUShaNAvyAkRutane
nArAyaNAya namO nArAyaNa. ||22||

mIna kacCapa pOtri narahari vAmana BArgva
nArAyaNAya namO nArAyaNa
mAvavapa kRuShNa budda kalkikapilAtreya
nArAyaNAya namO nArAyaNa. ||23||

svAmi tIrthAMbu antargangABiShikta
nArAyaNAya namO nArAyaNa
svAmi BUvarAha vaikuMThanAtha viSvESa
nArAyaNAya namO nArAyaNa. ||24||

ShaTkOTi tIrthayutacaraNa SrI BUramaNa
nArAyaNAya namO nArAyaNa
ShaTkamala nilayacinmaya cidguNArNavane
nArAyaNAya namO nArAyaNa. ||25||

BaktABimAni Bava dUra Baktara praBuve
nArAyaNAya namO nArAyaNa
Baktavatsala kRupAMbudhi parAtparakRuShNa
nArAyaNAya namO nArAyaNa. ||26||

vasudhe vaikunTha mandiravAsa SrI nivAsa
nArAyaNAya namO nArAyaNa
vasuprIta vasukarta vasudAta vasupUrNa
nArAyaNAya namO nArAyaNa. ||27||

AdinAthapramEyAdi puruShOttamane
nArAyaNAya namO nArAyaNa
AdimadhyAnta rahitAdya mUruti viShNu
nArAyaNAya namO nArAyaNa. ||28||

badukipyAdare ninnahogaLalike badikisai
nArAyaNAya namO nArAyaNa
budhara saMgati koTTu mannisennanu tande
nArAyaNAya namO nArAyaNa. ||29||

kiviyalli muKadalli ninna nAmada nenevu
nArAyaNAya namO nArAyaNa
kavalAgadaMtirisi tava pAdAbjava tOru
nArAyaNAya namO nArAyaNa. ||30||

BavaBavadi toLatoLali baLabaLali baludaNide
nArAyaNAya namO nArAyaNa
Bava viriMcyAdikari gaBayadane nIsalahu
nArAyaNAya namO nArAyaNa. ||31||

nI tAyi nItaMde nIbaMdhu nIbaLaga
nArAyaNAya namO nArAyaNa
nItigaLanariye ninnaya nAmavE gatiyu
nArAyaNAya namO nArAyaNa. ||32||

tanu neccikillacittada gatiyu nITilla
nArAyaNAya namO nArAyaNa
tanaya taruNi koneya sangatige Arilla
nArAyaNAya namO nArAyaNa. ||33||

dOShagaLanarasadennanu sAku sAkayya
nArAyaNAya namO nArAyaNa
dAsapAlaka dEva DiMgarara sanjIva
nArAyaNAya namO nArAyaNa ||34||

ninna mUruti nODi nODi nODi nODi
nArAyaNAya namO nArAyaNa
ninnanE biMbavaneMdu kaMDu koMDADuveno
nArAyaNAya namO nArAyaNa. ||35||

ninna mai bemarhoLeyallenna muLugisi
nArAyaNAya namO nArAyaNa
ninnava nA ninnavara kaili koDu gaDa gaDa
nArAyaNAya namO nArAyaNa. ||36||

vAriyali sthaLadalli aDaviyalellelli kAyo
nArAyaNAya namO nArAyaNa
vArAha vAmana nRusiMha kESava svAmi
nArAyaNAya namO nArAyaNa. ||37||

satkulOdBavanAde sanmArgariyalilla
nArAyaNAya namO nArAyaNa
satkarmagaLige bahiShkRutanAgi bALutihe
nArAyaNAya namO nArAyaNa. ||38||

oMdu jAvada tappaneMdeMdigiNalAre
nArAyaNAya namO nArAyaNa
vandisuve sAShTAMga trAhi trAhi pAhi trAhi
nArAyaNAya namO nArAyaNa. ||39||

madhvESa madhvapriya madhvamata paripAla
nArAyaNAya namO nArAyaNa
madhvaguru stutya madhvArcita padAbja hari
nArAyaNAya namO nArAyaNa. ||40||

EnariyadavanAnu nIne paragati enage
nArAyaNAya namO nArAyaNa
prANa ninagarpiside prasanna veMkaTakRuShNa
nArAyaNAya namO nArAyaNa ||41||

dasara padagalu · hari · MADHWA · purandara dasaru

hariyemba namamrutada

ಹರಿಯೆಂಬ ನಾಮಾಮೃತದ ಸುರುಸಿಯು ಪರಮ ಭಕ್ತರಿಗಲ್ಲದೆ         ।।ಪ।।

ಅರಿಯದ ಕಡುಮೂರ್ಖ ನೀಚ ಜನರಿಗೆಲ್ಲ ಹರುಷವಾಗಬಲ್ಲದೆ          ।।ಅ.ಪ।।

ಅಂದಿಗೆ ಅರಳೆಲೆ ಇಟ್ಟರೆ ಕೊಡ ಕಂದನಾಗಬಲ್ಲುದೆ
ಹಂದಿಗೆ ಸಕ್ಕರೆ ತುಪ್ಪ ತಿನಿಸಲು ಗಜೇಂದ್ರನಾಗಬಲ್ಲುದೆ
ಚಂದಿರನ ಪೂರ್ಣ ಕಳೆಯನು ತೋರಲು ಅಂಧ ನೋಡಬಲ್ಲನೆ
ಇಂದಿರೆ ಅರಸನ ನಾಮದ ಮಹಿಮೆಯ ಮಂದಜ್ಞಾನಿ ಬಲ್ಲನೆ            ।।೧।।

ಉರಗಕ್ಕೆ ಕ್ಷೀರವನೆರೆಯಲು ಅದರ ವಿಷವು ಹೋಗಬಲ್ಲುದೆ
ತ್ವರೆಯಿಂದ ನೀಲಿಯ ಕರದಲಿ ತೊಳೆಯಲು ಕರಿದು ಹೋಗಬಲ್ಲುದೆ
ಪರಿಪರಿ ಬಂಗಾರವಿಟ್ಟರೆ ದಾಸಿಯು ಅರಸಿಯಾಗಬಲ್ಲಳೆ
ಭರದಿಂದ ಶ್ವಾನನ ಬಾಲವ ತಿದ್ದಲು ಸರಳವಾಗಬಲ್ಲುದೆ                  ।।೨।।

ಮೋಡಕೆ ಮಯೂರ ಕುಣಿವಂತೆ ಕುಕ್ಕುಟ ನೋಡಿ ಕುಣಿಯಬಲ್ಲುದೆ
ಹಾಡಿನ ಸವಿಯನು ಬಧಿರನು ಕೇಳಿ ಹರುಷಪಡಲು ಬಲ್ಲನೆ
ಗೋಡೆಯ ಮುಂದೆ ನಾಟ್ಯವನಾಡಲು ನೋಡಿ ಸುಖಿಸಬಲ್ಲುದೆ
ರೂಢಿಗೊಡೆಯ ನಮ್ಮ ಪುರಂದರವಿಠಲನ ಮೂಢಜ್ಞಾನಿ ಬಲ್ಲನೆ        ।।೩।।

Hariyemba namamrutada surusiyu parama Baktarigallade ||pa||

Ariyada kadumurka nica janarigella harushavagaballade ||a.pa||

Andige aralele ittare koda kandanagaballude
Handige sakkare tuppa tinisalu gajendranagaballude
Candirana purna kaleyanu toralu andha nodaballane
Indire arasana namada mahimeya mandaj~jani ballane ||1||

Uragakke kshiravanereyalu adara vishavu hogaballude
Tvareyimnda niliya karadali toleyalu karidu hogaballude
Paripari bangaravittare dasiyu arasiyagaballale
Baradinda svanana balava tiddalu saralavagaballude ||2||

Modake mayura kunivante kukkuta nodi kuniyaballude
Hadina saviyanu badhiranu keli harushapadalu ballane
Godeya munde natyavanadalu nodi sukisaballude
Rudhigodeya namma purandaravithalana mudhaj~jani ballane ||3||

dasara padagalu · hari · MADHWA · purandara dasaru

dharanige doreyendu

ಧರಣಿಗೆ ದೊರೆಯೆಂದು ನಂಬಿದೆ ಇಂಥ
ಪರಮಲೋಭಿ ಎಂಬುದರಿಯೆ ಶ್ರೀ ಹರಿಯೆ                   ।।ಪ॥

ಕಾಡಿ ಬೇಡುವರಿಗೆ ಕೊಡಲಾರದೆ ಅಂಜಿ
ಓಡಿ ನೀರೊಳು ಸೇರಿಕೊಂಡೆ ಬೇಗ
ಹೇಡಿಯ ತೆರದಲಿ ಮೋರೆಯ ತೋರದೆ
ಓಡಿ ಅರಣ್ಯದಿ ಮೃಗಗಳ ಸೇರಿದೆ                               ।।೧।।

ಬಡವರ ಬಿನ್ನಹ ಲಾಲಿಸದೆ ಹಲ್ಲ
ಕಡು ಕೋಪದಲಿ ತೆರೆದಂಜಿಸಿದೆ
ತಡೆಯದೆ ಭಿಕ್ಷುಕನಾದರೆ ಬಿಡರೆಂದು
ಕೊಡಲಿಯ ಪಿಡಿದು ಕೋಡಗ ಹಿಂಡ ಕಾಯ್ದೆ                   ।।೨।।

ಉತ್ತಮನೆಂದರೆ ಮತ್ತೆ ಚೋರನಾದೆ
ಬತ್ತಲೆ ನಿಂತೆ ತೇಜಿಯನೇರಿದೆ
ಎತ್ತಹೋದರು ಬಿಡೆ ಮತ್ತೆ ನಿನ್ನನು ದೇವ
ಚಿತ್ತಜಜನಕ ಶ್ರೀ ಪುರಂದರವಿಠಲ                               ।।೩।।

Dharanige doreyendu nambide intha
Paramalobi embudariye sri hariye ||pa||

Kadi beduvarige kodalarade anji
Odi nirolu serikomde bega
Hediya teradali moreya torade
Odi aranyadi mrugagala seride ||1||

Badavara binnaha lalisade halla
Kadu kopadali teredanjiside
Tadeyade bikshukanadare bidarendu
Kodaliya pididu kodaga hinda kayde ||2||

Uttamanendare matte coranade
Battale ninte tejiyaneride
Ettahodaru bide matte ninnanu deva
Chittajajanaka sri purandaravithala ||3||

dasara padagalu · hari · MADHWA · purandara dasaru

samanyavalla sri hariya seve

Samanyavalla sri hariya seve
Pamara janarige samanyavalla ||pa||

Samaja varadana premadi nenevudu
Tamasa buddhiya ta taggisade ||a.pa||

Antara malinavu aliyabeku
Srikantana carita kelalu beku
Santatavirabeku santa janara guna
Nirantaradali ta chintisa beku ||1||

Sarvantaryami sri hariyendu
Sarvesvaranendu svaramananendu
Sarvanugrahanendu purandara vithalana
Sarvada dhyanisi garvavaliyabeku ||2||

dasara padagalu · hari · MADHWA · purandara dasaru

Narayana ninna namada

ನಾರಾಯಣ ನಿನ್ನ ನಾಮದ ಸ್ಮರಣೆಯ
ಸಾರಾಮೃತವೆನ್ನ ನಾಲಿಗೆಗೆ ಬರಲಿ                   ||ಪ ||

ಕೂಡುವಾಗಲಿ ನಿಂತಾಡುವಾಗಲಿ ಮತ್ತೆ
ಹಾಡುವಾಗಲಿ ಹರಿದಾಡುವಾಗಲಿ
ಕೋಟಿ ವಿನೋದದಿ ನೋಡದೆ ನಾ
ಮಾಡಿದ ಪಾಪ ಬಿಟ್ಟೋಡಿ ಹೋಗೋ ಹಾಗೆ        ||೧||

ಊರಿಗೆ ಹೋಗಲಿ ಊರೊಳಗಿರಲಿ
ಕಾರಣಾರ್ಥಂಗಳೆಲ್ಲ ಕಾದಿರಲಿ
ವಾರಿಜನಾಭ ನರಸಾರಥಿ ಸನ್ನುತ
ಸಾರಿಸಾರಿಗೆ ನಾ ಬೀಸರದ್ಹಾಂಗೆ                      ||೨||

ಹಸಿದಿದ್ದಾಗಲಿ ಹಸಿವಿಲ್ಲದಾಗಲಿ
ಕಸವಿಸಿಯಿರಲಿ ಹರುಷಿರಲಿ
ವಸುದೇವಾತ್ಮಕ ಶಿಶುಪಾಲಕ್ಷಯ
ಅಸುರಾಂತಕ ನಿನ್ನ ಹೆಸರು ಮರೆಯದ್ಹಾಂಗೆ       ||೩||

ಕಷ್ಟದಲ್ಲಿರಲಿ ಉತ್ಕೃಷ್ಟದಲ್ಲಿರಲಿ
ಎಷ್ಟಾದರೂ ಮತಿಗೆಟ್ಟಿರಲಿ
ಕೃಷ್ಣ ಕೃಷ್ಣ ಎಂದು ಶಿಷ್ಟರು ಪೇಳುವ
ಅಷ್ಟಾಕ್ಷರ ಮಹಾಮಂತ್ರದ ನಾಮವ                  ||೪||

ಕನಸಿನೊಳಾಗಲಿ ಕಳವಳಿಕಾಗಲಿ
ಮನಸುಗೊಟ್ಟಿರಲಿ ಮುನಿದಿರಲಿ
ಜನಕಜಾಪತಿ ನಿನ್ನ ಚರಣಕಮಲವನು
ಮನಸಿನೊಳಗೆ ಒಮ್ಮೆ ನೆನಸಿಕೊಳ್ಳೋ ಹಾಂಗೆ    ||೫||

ಜ್ವರ ಬಂದಾಗಲಿ ಚಲಿ ಬಂದಾಗಲಿ
ಮರಳಿ ಮರಳಿ ಮತ್ತೆ ನಡುಗವಾಗಲಿ
ಹರಿನಾರಾಯಣ ದುರಿತನಿವಾರಣೆಂದು
ಇರುಳು ಹಗಲು ನಿನ್ನ ಸ್ಮರಣೆ ಮರೆಯದ್ಹಾಂಗೆ       ||೬||

ಸಂತತ ಹರಿ ನಿನ್ನ ಸಾಸಿರನಾಮವ
ಅಂತರಂಗದ ಒಳಗಿರಿಸಿ
ಎಂತೋ ಪುರಂದರವಿಠ್ಠಲರಾಯನ
ಅಂತ್ಯಕಾಲದಲ್ಲಿ ಚಿಂತಿಸೋ ಹಾಂಗೆ                   ||೭||

Narayana ninna namada smaraneya
Saramrutavenna naligege barali ||pa ||

Kuduvagali nintaduvagali matte
Haduvagali haridaduvagali
Koti vinodadi nodade na
Madida papa bittodi hogo hage ||1||

Urige hogali urolagirali
Karanarthangalella kadirali
Varijanaba narasarathi sannuta
Sarisarige na bisarad~hamge ||2||

Hasididdagali hasivilladagali
Kasavisiyirali harushirali
Vasudevatmaka sisupalakshaya
Asurantaka ninna hesaru mareyad~hange ||3||

Kashtadallirali utkrushtadallirali
Eshtadaru matigettirali
Krushna krushna emdu sishtaru peluva
Ashtakshara mahamantrada namava ||4||

Kanasinolagali kalavalikagali
Manasugottirali munidirali
Janakajapati ninna charanakamalavanu
Manasinolage omme nenasikollo hange ||5||

Jvara bandagali chali bandagali
Marali marali matte nadugavagali
Harinarayana duritanivaranendu
Irulu hagalu ninna smarane mareyad~hange ||6||

Santata hari ninna sasiranamava
Antaramgada olagirisi
Ento purandaraviththalarayana
Antyakaladalli cimtiso hamge ||7||

dasara padagalu · hari · MADHWA · purandara dasaru

Kande na govindana

Kande na govindana
Pundarikaksha pandavapaksha krushnana ||pa||

Kesava narayana srikrushnana
Vasudeva acyutanantana
Sasira namada srihrushikesana
Seshasayana namma vasudevasutana ||1||

Madhava madhusudana trivikrama
Yadavakula jana munivamdyana
Vedantavedyana indiraramanana
Adimuruti prahladavaradana ||2||

Purushottama narahari srikrushnana
Saranagata vajrapanjarana
Karunakara namma purandaravithalana
Nere nambidenu belura cennigana ||3||

dasara padagalu · hari · MADHWA · purandara dasaru

hari namadaraginiyu

ಹರಿನಾಮದರಗಿಣಿಯು ಹಾರುತಿದೆ ಜಗದಿ
ಪರಮ ಭಾಗವತರು ಬಲೆಯ ಬೀಸುವರು           ||ಪ||

ಕೋಪವೆಂಬ ಮಾರ್ಜಾಲ ಕಂಡರೆ ನುಂಗುವುದು
ತಾಪವೆಂಬುವ ಹುಲಿಯ ಕೊಂಡೊಯ್ವುದು
ಕಾಪಾಡಲದನೊಯ್ದು ಹೃದಯದೊಳಗಿಂಬಿಟ್ಟು
ಆಪತ್ತಿಗೊದಗುವುದು ಆ ಮುದ್ದು ಅರಗಿಣಿಯು      ||೧||

ದಾರಿಯಲಿ ನಡೆವಾಗ ಚೋರರುಪಟಳವಿಲ್ಲ
ಮಾರಿ ಬಂದರೆ ಅದನು ಹೊಡೆದು ನೂಕುವುದು
ಕ್ರೂರ ಯಮಭಟರನು ಮೂಗು ರೆಕ್ಕಿಲಿ ಬಡಿದು
ದಾರಿ ತೋರುವುದು ಮುರಾರಿ ಪಟ್ಟಣಕೆ            ||೨||

ಎಷ್ಟು ವರ್ಣಿಸಲಿ ನಾ ಈ ಮುದ್ದು ಅರಗಿಣಿಯ
ಹೊಟ್ಟೆಯೊಳಗೀರೇಳು ಜಗವನಿಂಬಿಟ್ಟು
ಸೃಷ್ಟೀಶ ಪುರಂದರ ವಿಠಲನ ನೆನೆ ನೆನೆದು
ಮುಟ್ಟಿ ಭಜಿಸುವುದು ಈ ಮುದ್ದು ಅರಗಿಣಿಯು     ||೩||

Harinamadaraginiyu harutide jagadi
Parama bagavataru baleya bisuvaru ||pa||

Kopavemba marjala kandare nunguvudu
Tapavembuva huliya kondoyvudu
Kapadaladanoydu hrudayadolagimbittu
Apattigodaguvudu A muddu araginiyu ||1||

Dariyali nadevaga chorarupatalavilla
Mari bamdare adanu hodedu nukuvudu
Krura yamabataranu mugu rekkili badidu
Dari toruvudu murari pattanake ||2||

Eshtu varnisali na I muddu araginiya
Hotteyolagirelu jagavanimbittu
Srushtisa purandara vithalana nene nenedu
Mutti Bajisuvudu I muddu araginiyu ||3||

dasara padagalu · hari · MADHWA · purandara dasaru

Murutiyane nilliso

ಮೂರುತಿಯನೆ ನಿಲ್ಲಿಸೋ ಮಾಧವ ನಿನ್ನ          ||ಪ||

ಎಳೆ ತುಳಸಿಯ ವನಮಾಲೆಯು ಕೊರಳೊಳು
ಹೊಳೆವ ಪೀತಾಂಬರದಿಂದಲೊಪ್ಪುವ ನಿನ್ನ        ||೧||

ಮುತ್ತಿನ ಸರ ನವರತ್ನದುಂಗುರವಿಟ್ಟು
ಮತ್ತೆ ಶ್ರೀ ಲಕುಮಿಯ ಉರದೊಳೊಪ್ಪುವ ನಿನ್ನ   ||೨||

ಭಕ್ತರ ಕಲ್ಪತರು ಭಾಗ್ಯದ ಸುರಧೇನು
ಮುಕ್ತಿದಾಯಕ ಸಿರಿ ಪುರಂದರ ವಿಠಲ ನಿನ್ನ        ||೩||

Murutiyane nilliso madhava ninna ||pa||

Ele tulasiya vanamaleyu koralolu
Holeva pitambaradindaloppuva ninna ||1||

Muttina sara navaratnadunguravittu
Matte sri lakumiya uradoloppuva ninna ||2||

Baktara kalpataru bagyada suradhenu
Muktidayaka siri purandara vithala ninna ||3||

dasara padagalu · hari · MADHWA · purandara dasaru

Rama nama payasakke

ರಾಮ ನಾಮ ಪಾಯಸಕ್ಕೆ ಕೃಷ್ಣ ನಾಮ ಸಕ್ಕರೆ
ವಿಠಲ ನಾಮ ತುಪ್ಪವ ಕಲಸಿ ಬಾಯ ಚಪ್ಪರಿಸಿರೋ              ||ಪ||

ಒಮ್ಮಾನ ಗೋಧಿಯ ತಂದು ವೈರಾಗ್ಯ ಕಲ್ಲಲಿ ಬೀಸಿ
ಸುಮ್ಮಾನೆ ಸಜ್ಜಿಗೆಯ ತೆಗೆದು ಸಣ್ಣ ಶಾವಿಗೆಯ ಹೊಸೆದು       ||೧||

ಹೃದಯವೆಂಬೊ ಮಡಕೆಯಲಿ ಭಾವವೆಂಬೊ ಎಸರನಿಟ್ಟು
ಬುದ್ಧಿಯಿಂದ ಪಾಕ ಮಾಡಿ ಹರಿವಾಣಕೆ ಬಡಿಸಿಕೊಂಡು          ||೨||

ಆನಂದ ಆನಂದವೆಂಬೊ ತೇಗು ಬಂದಿತು ಕಾಣಿರೊ
ಆನಂದ ಮೂರುತಿ ನಮ್ಮ ಪುರಂದರ ವಿಠಲನ ನೆನೆಯಿರೊ    ||೩||

Rama nama payasakke krushna nama sakkare
Vithala nama tuppava kalasi baya capparisiro ||pa||

Ommana godhiya tamdu vairagya kallali bisi
Summane sajjigeya tegedu sanna savigeya hosedu ||1||

Hrudayavembo madakeyali bavavembo esaranittu
Buddhiyinda paka madi harivanake badisikondu ||2||

Ananda anandavembo tegu banditu kaniro
Ananda muruti namma purandara vithalana neneyiro ||3||

dasara padagalu · hari · kanakadasaru · MADHWA

Elliruvano ranga emba samsaya beda

ಎಲ್ಲಿರುವನೋ ರಂಗ ಎಂಬ ಸಂಶಯ ಬೇಡ || ಪ ||

ಎಲ್ಲಿ ಭಕ್ತರು ಕರೆಯೆ ಅಲ್ಲಿ ಬಂದೊದಗುವನು|| ಅ ||

ತರಳ ಪ್ರಹ್ಲಾದ ಹರಿ ವಿಶ್ವಮಯನೆಂದು
ಭರದೊದೆಯಲವನಪಿತ ಕೋಪದಿಂದ
ಸ್ಥಿರವಾದೊಡೀ ಕಂಭದಲಿ ತೋರು ತೋರೆನಲು
ಭರದಿಂದ ಬರಲದಕೆ ವೈಕುಂಠ ನೆರೆಮನೆಯೇ ?|| ೧ ||

ಪಾಪಕರ್ಮವ ಮಾಡಿದಜಮಿಳನ ಯಮಭಟರು
ಕೋಪದಿಂದೆಳೆಯುತಿರೆ ಭೀತಿಯಿಂದ
ತಾ ಪುತ್ರನನು ಕರೆಯೆ ಕೇಳಿ ರಕ್ಷಿಸೆ
ಶ್ವೇತದ್ವೀಪವೀ ಧರೆಗೆ ಸಮೀಪದಲ್ಲಿಹುದೇ ?|| ೨ ||

ಕರಿರಾಜನನು ನೆಗಳು ನುಂಗುತಿರೆ ಭಯದಿಂದ
ಮೊರೆಯಿಡಲು ಕೇಳಿ ತ್ವರಿತದಲಿ ಬಂದು
ಕರುಣದಲಿ ಬಂದವನ ಪರಿಹರಿಸೆ ಗಜರಾಜ
ನಿರುವ ಸರಸಿಯು ಅನಂತಾಸನಕೆ ಮುಮ್ಮನೆಯೆ ?|| ೩ ||

ಕುರುಪತಿಯು ದ್ರೌಪದಿಯ ಸೀರೆಯನು ಸೆಳೆಯುತಿರೆ
ತರುಹಿ ಹಾ ಕೃಷ್ಣ ಎಂದೊರೆ(*) ಕೇಳ್ದು
ಭರದಿಂದ ಅಕ್ಷಯಾಂಬರವೀಯೆ ಹಸ್ತಿನಾ
ಪುರಿಗೆ ದ್ವಾರಾವತಿಯು ಕೂಗಳತೆಯೇ ?|| ೪ ||

ಅಣುಹೊತ್ತಿನೊಳೆಲ್ಲ ಪರಿಪೂರ್ಣ ವಿಶ್ವಮಯ
ಗಣನೆಯಿಲ್ಲದ ಮಹಾಮಹಿಮನೆನಿಪ
ಘನ ಕೃಪಾನಿಧಿ ಕಾಗಿನೆಲೆಯಾದಿಕೇಶವನು
ನೆನೆವರು ಮನದೊಳಿಹನೆಂಬ ಬಿರುದುಂಟಾಗಿ|| ೫ ||

Elliruvano ranga emba samsaya beda ||pa||

Elli Baktaru kareye alli bandodaguvanu ||a.pa||

Tarala prahlada hari visvamayanendu
Baradodeyalavanapita kopadinda
Sthiravadoli kambadali toru torenalu
Baradinda baraladake vaikuntha neremaneye ||1||

Kurupatiyu draupadiya sireyanu seleyutire
Taruni ha krushna endare keldu
Baradimda akshayambaraviye hastina
Purige dvaravatiyu kugalateye ||2||

Anuhottinolella paripurna visvamaya
Gananeyillada mahamahimanenipa
Gana krupanidhi kagineleyadikesavanu
Nenevara manadolihanemba biruduntaagi ||3||