dasara padagalu · MADHWA · purandara dasaru

Elliruvano ranganemba samsaya beda

ಎಲ್ಲಿರುವನೋ ರಂಗನೆಂಬ ಸಂಶಯ ಬೇಡ
ಎಲ್ಲಿ ಭಕ್ತರು ಕರೆದರಲ್ಲೆ ಒದಗುವನು ||ಪ||

ತರಳ ಪ್ರಹ್ಲಾದ ಶ್ರೀಹರಿ ವಿಶ್ವಮಯನೆಂದು
ಬರೆದೋದಲವನ ಪಿತ ಕೋಪದಿಂದ
ಸ್ಥಿರವಾದಡಿ ಕಂಭದೊಳು ತೋರು ತೋರೆನಲು
ಭರದಿ ಬರಲದಗೆ ವೈಕುಂಠ ನೆರೆ ಮನೆಯೆ ||

ಪಾಪ ಕರ್ಮವ ಮಾಡಿದಜಮಿಳನ ಯಮಭಟರು
ಕೋಪದಿಂದೆಳೆಯುತಿರೆ ಭೀತಿಯಿಂದ
ತಾ ಪುತ್ರನನು ಕರೆಯ ಕೇಳಿ ರಕ್ಷಿಸೆ ಶ್ವೇತ
ದ್ವೀಪವೀ ಧರೆಗತಿ ಸಮೀಪದಲ್ಲಿಹುದೆ ||

ಕರಿರಾಜನು ನೆಗಳು ನುಂಗುತಿರೆ ಭಯದಿಂದ
ಮೊರೆಯಿಡಲು ಕೇಳಿ ಅತಿ ತ್ವರಿತದಿಂದ
ಕರುಣದಲಿ ಬಂಧನವ ಬಿಡಿಸಲಾಗಜರಾಜ
ನಿರುವ ಸರಸಿಗೆ ಅನಂತಾಸನವು ಮುಮ್ಮನೆಯೆ ||

ಕುರುಪತಿಯು ದ್ರೌಪದಿಯ ಸೀರೆಯನು ಸೆಳೆಯುತಿರೆ
ತರುಣಿ ಹಾ ಕೃಷ್ಣ ಎಂದೊದರೆ ಕೇಳಿ
ಭರದಿಂದ ಅಕ್ಷಯಾಂಬರವಿತ್ತ ಹಸ್ತಿನಾ-
ಪುರಿಗು ದ್ವಾರಾವತಿಗು ಕೂಗಳತೆಯೆ ||

ಅಣು ಮಹತ್ತುಗಳಲ್ಲಿ ಪರಿಪೂರ್ಣೆಂದೆನಿಸಿ
ಗಣನೆಯಿಲ್ಲದ ಮಹಾಮಹಿಮನೆನಿಪ
ಘನಕೃಪಾನಿಧಿ ನಮ್ಮ ಪುರಂದರ ವಿಟ್ಠಲನು
ನೆನೆದವರ ಮನದೆಲ್ಲ ಇಹನೆಂಬ ಬಿರುದಿರಲು ||
Elliruvano ranganemba samsaya beda
Elli Baktaru karedaralle odaguvanu ||pa||

Tarala prahlada srihari visvamayanendu
Baredodalavana pita kopadinda
Sthiravadadi kambadolu toru torenalu
Baradi baraladage vaikuntha nere maneye ||

Papa karmava madidajamilana yamabataru
Kopadimdeleyutire bitiyinda
Ta putrananu kareya keli rakshise sveta
Dvipavi dharegati samipadallihude ||

Karirajanu negalu nungutire Bayadinda
Moreyidalu keli ati tvaritadinda
Karunadali bandhanava bidisalagajaraja
Niruva sarasige anantasanavu mummaneye ||

Kurupatiyu draupadiya sireyanu seleyutire
Taruni ha krushna emdodare keli
Baradimda akshayambaravitta hastina-
Purigu dvaravatigu kugalateye ||

Anu mahattugalalli paripurnendenisi
Gananeyillada mahamahimanenipa
Ganakrupanidhi namma purandara vitthalanu
Nenedavara manadella ihanemba birudiralu ||

dasara padagalu · MADHWA · madhwacharyaru · purandara dasaru

Idiryaro guruve samaryaro

ಇದಿರ್ಯಾರೊ ಗುರುವೆ ಸಮರ್ಯಾರೊ ||ಪ||

ಮದನಜನಕ ಪ್ರಿಯ ಮಧ್ವರಾಯ ||ಅ||

ಸನ್ನುತಮಹಿಮ ಪ್ರಸನ್ನವದನ ನಿನ-
ಗನ್ಯನಲ್ಲವೋ ನೀ ಎನ್ನ ರಕ್ಷಿಸಬೇಕೋ
ನಿನ್ನ ನೋಡಿದವರು ಧನ್ಯರಾಗುವರು
ನಿನ್ನ ದಯಾಮೂರ್ತಿ ಮನ್ನಿಸಿನೋಡೊ ||

ದುರ್ಜನರ ಗರ್ಜನದಿಂದ ಓಡಿಸಿ
ಸಜ್ಜನರನು ಸಂರಕ್ಷಿಸಿದಾತನೆ
ತ್ರಿಜಗದಲ್ಲಿ ಮಧ್ಯಗೇಹರ ಪತ್ನಿಯ
ಪೂಜ್ಯ ಜಠರದಲಿ ಜನಿಸಿದ ಧೀರ ||

ವೇದಶಾಸ್ತ್ರಗಳಿಂದ ಮಾಯ್ಗಳ ಖಂಡಿಸಿ
ಸಾಧಿಸಿ ಹರಿಯೆ ಸರ್ವೋತ್ತಮನೆಂತೆಂದು
ಮೋದಭರಿತವದ ದಿವ್ಯಶಾಸ್ತ್ರವ ಮಾಡ್ದ
ಮೋದತೀರ್ಥ ಪುರಂದರವಿಠಲದಾಸ ||

Idiryaro guruve samaryaro ||pa||

Madanajanaka priya madhvaraya ||a||

Sannutamahima prasannavadana nina-
Ganyanallavo ni enna rakshisabeko
Ninna nodidavaru dhanyaraguvaru
Ninna dayamurti mannisinodo ||

Durjanara garjanadinda odisi
Sajjanaranu samrakshisidatane
Trijagadalli madhyagehara patniya
Pujya jatharadali janisida dhira ||

Vedasastragalinda maygala kandisi
Sadhisi hariye sarvottamanentendu
Modabaritavada divyasastrava madda
Modatirtha purandaravithaladasa ||

dasara padagalu · MADHWA

Antakana dutarige kincittu dayavilla

ಅಂತಕನ ದೂತರಿಗೆ ಕಿಂಚಿತ್ತು ದಯವಿಲ್ಲ
ಚಿಂತೆಯನು ಬಿಟ್ಟು ಶ್ರೀ ಹರಿಯ ನೆನೆ ಮನವೆ ||ಪ||

ದಿವ ರಾತ್ರಿಯೆನ್ನದೆ ವಿಷಯಲಂಪಟನಾಗಿ
ಸವಿಯೂಟಗಳನುಂಡು ಭ್ರಮಿಸ ಬೇಡ
ಅವನ ಕೊಂದಿವನ ಕೊಂದರ್ಥವನು ಗಳಿಸುವರೆ
ಜವನ ದೂತರು ಬರುವ ಹೊತ್ತ ನೀನರಿಯೆ ||

ಮೊನ್ನೆ ಮದುವೆಯಾದೆನೈ ಕರೆವುದೊಂದೆರಡೆಮ್ಮೆ
ನಿನ್ನೆ ಕೊಂಡೆನು ಕ್ಷೇತ್ರ ಫಲವು ಬಹುದು
ಹೊನ್ನು ಹಣವುಂಟೆನಗೆ ಸಾಯಲಾರೆನು ಎನಲು
ಬೆನ್ನ ಬಿಡುವಳೆ ಮೃತ್ಯು ವ್ಯರ್ಥ ಜೀವಾತ್ಮ ||

ಹೊಸ ಮನೆಯ ಕಟ್ಟಿದೆನು ಗೃಹ ಶಾಂತಿ ಮನೆಯೊಳಗೆ
ಬಸಿರಿ ಹೆಂಡತಿ ಮಗನ ಮದುವೆ ನಾಳೆ
ಹಸನಾಗಿ ಇದೆ ಬದುಕು ಸಾಯಲಾರೆನು ಎನಲು
ಕುಸುರಿದರಿಯದೆ ಬಿಡರು ಯಮನವರು ಆಗ ||

ಪುತ್ರ ಹುಟ್ಟಿದ ದಿವಸ ಹಾಲು ಊಟದ ಹಬ್ಬ
ಮತ್ತೊಬ್ಬ ಮಗನ ಉಪನಯನ ನಾಳೆ
ಅರ್ತಿಯಾಗಿದೆ ಬದುಕು ಸಾಯಲಾರೆನು ಎನಲು
ಮೃತ್ಯು ಹೆಡತಲೆಯಲ್ಲಿ ನಗುತಿರ್ಪುದರಿಯೆ ||

ಅಟ್ಟಡಿಗೆಯುಣಲಿಲ್ಲ ಇಷ್ಟ ದರುಶನವಿಲ್ಲ
ಕೊಟ್ಟ ಸಾಲವ ಕೇಳ್ವ ಹೊತ್ತನರಿಯೆ
ಕಟ್ಲೆ ತುಂಬಿದ ಮೇಲೆ ಕ್ಷಣಮಾತ್ರ ಇರಲಿಲ್ಲ
ಅಷ್ಟರೊಳು ಪುರಂದರ ವಿಠಲನೆನು ಮನವೆ ||
Antakana dutarige kincittu dayavilla
Cinteyanu bittu sri hariya nene manave ||pa||

Diva ratriyennade vishayalampatanagi
Saviyutagalanundu Bramisa beda
Avana kondivana kondarthavanu galisuvare
Javana dutaru baruva hotta ninariye ||

Monne maduveyadenai karevudonderademme
Ninne kondenu kshetra Palavu bahudu
Honnu hanavuntenage sayalarenu enalu
Benna biduvale mrutyu vyartha jivatma ||

Hosa maneya kattidenu gruha santi maneyolage
Basiri hendati magana maduve nale
Hasanagi ide baduku sayalarenu enalu
Kusuridariyade bidaru yamanavaru Aga ||

Putra huttida divasa halu utada habba
Mattobba magana upanayana nale
Artiyagide baduku sayalarenu enalu
Mrutyu hedataleyalli nagutirpudariye ||

Attadigeyunalilla ishta darusanavilla
Kotta salava kelva hottanariye
Katle tumbida mele kshanamatra iralilla
Ashtarolu purandara vithalanenu manave ||

dasara padagalu · MADHWA · purandara dasaru · siva

Siva darusana namagayitu kele

ಶಿವ ದರುಶನ ನಮಗಾಯಿತು ಕೇಳೆ
ಶಿವರಾತ್ರಿಯ ಜಾಗರಣೆ ||

ಪಾತಾಳ ಗಂಗೆಯ ಸ್ನಾನವ ಮಾಡಲು
ಪಾತಕವೆಲ್ಲ ಪರಿಹಾರವು
ಜ್ಯೋತಿರ್ಲಿಂಗನ ಧ್ಯಾನವ ಮಾಡಲು
ದ್ಯೂತಗಳಿಲ್ಲ ಅನುದಿನವು ||

ಬೇಡಿವ ವರಗಳ ಕೊಡುವನು ತಾಯಿ
ಬ್ರಹ್ಮನ ರಾಣಿಯ ನೋಡುವನು
ಆಡುತ ಪಾಡುತ ಏರುತ ಬಸವನ
ಆನಂದದಲಿ ನಲಿದಾಡುವನು ||

ಶಿಖರವ ಕಂಡೆನು ಪುರಂದರವಿಠಲನ
ಹರಿನಾರಾಯಣ ಧ್ಯಾನದಲೆ ||

Siva darusana namagayitu kele
Sivaratriya jagarane ||

Patala gangeya snanava madalu
Patakavella pariharavu
Jyotirlingana dhyanava madalu
Dyutagalilla anudinavu ||

Bediva varagala koduvanu tayi
Brahmana raniya noduvanu
Aduta paduta Eruta basavana
Anamdadali nalidaduvanu ||

Sikarava kandenu purandaravithalana
Harinarayana dhyanadale ||

dasara padagalu · MADHWA · purandara dasaru

Noduvude kannu keluvude kivi

ನೋಡುವುದೇ ಕಣ್ಣು ಕೇಳುವುದೇ ಕಿವಿ
ಪಾಡುವುದೇ ವದನ||pa||

ಗಾಡಿಕಾರ ಶ್ರೀ ವೇಣುಗೋಪಾಲನ
ಕೂಡಿ ಕೊಂಡಾಡುವ ಸುಖದ ಸೊಬಗನು||apa||

ಪೊಂಗಳಲೂದುತ ಮೃಗಪಕ್ಷಿಗಳನೆಲ್ಲ
ಸಂಗಳಿಸುತಲಿಪ್ಪನ
ಅಂಗಜ ಜನಕ ಗೋಪಾಂಗನೇರೊಡನೆ ಬೆಳ-
ದಿಂಗಳೊಳಗೆ ಸುಳಿದಾಡೊ ರಂಗಯ್ಯನ||1||

ನವಿಲಂತೆ ಕುಣಿವ ಹಂಸೆಯಂತೆ ನಲಿವ
ಮರಿ ಕೋಗಿಲೆಯಂತೆ ಕೂಗುವ
ಎರಳೆಯ ಮರಿಯಂತೆ ಜಿಗಿಜಿಗಿದಾಡುವ
ತುಂಬಿ ಝೇಂಕರಿಸುವಂದದಿ ಝೇಂಕರಿಪನ||2||

ಮುರುಡು ಕುಬ್ಜೆಯ ಡೊಂಕು ತಿದ್ದಿ ರೂಪವ ಮಾಡಿ
ಸೆರೆಯ ಬಿಡಿಸಿಕೊಂಬನ
ಗರುಡಗಮನ ಸಿರಿ ಪುರಂದರವಿಠಲನ
ಶರಣಾಗತ ಸುರಧೇನು ರಂಗಯ್ಯನ||3||
Noduvude kannu keluvude kivi
Paduvude vadana||pa||

Gadikara sri venugopalana
Kudi kondaduva sukada sobaganu||apa||

Pongalaluduta mrugapakshigalanella
Sangalisutalippana
Angaja janaka gopanganerodane bela-
Dingalolage sulidado ramgayyana||1||

Navilante kuniva hamseyante naliva
Mari kogileyante kuguva
Eraleya mariyante jigijigidaduva
Tumbi jenkarisuvamdadi jenkaripana||2||

Murudu kubjeya Donku tiddi rupava madi
Sereya bidisikombana
Garudagamana siri purandaravithalana
Saranagata suradhenu rangayyana||3||

 

 

 

 

 

 

 

 

 

dasara padagalu · MADHWA · purandara dasaru

Narayana te namo namo Bava

ನಾರಾಯಣ ತೇ ನಮೋ ನಮೋ ಭವ
ನಾರದ ಸನ್ನುತ ನಮೋ ನಮೋ||pa||

ಮುರಹರ ನಗಧರ ಮುಕುಂದ ಮಾಧವ
ಗರುಡಗಮನ ಪಂಕಜನಾಭ
ಪರಮಪುರುಷ ಭವ ಭಂಜನ ಕೇಶವ
ನರಹರಿ ಶರೀರ ನಮೋ ನಮೋ||1||

ಜಲಧಿ ಶಯನ ರವಿ ಚಂದ್ರ ವಿಲೋಚನ
ಜಲರುಹ ಭವನುತ ಚರಣ ಯುಗ
ಬಲಿಭಂಜನ ಗೋವರ್ಧನವಲ್ಲಭ
ನಳಿನೋದರ ತೇ ನಮೋ ನಮೋ||2||

ಆದಿದೇವ ಸಕಲಾಗಮ ಪೂಜಿತ
ಯಾದವಕುಲ ಮೋಹನರೂಪ
ವೇದೋದ್ಧಾರ ಶ್ರೀ ವೇಂಕಟನಾಯಕ ಪು-
ರಂದರವಿಠಲ ತೇ ನಮೋ ನಮೋ||3||

Narayana te namo namo Bava
Narada sannuta namo namo||pa||

Murahara nagadhara mukunda madhava
Garudagamana pankajanaba
Paramapurusha Bava Banjana kesava
Narahari sarira namo namo||1||

Jaladhi Sayana ravi candra vilocana
Jalaruha Bavanuta carana yuga
Balibanjana govardhanavallaba
Nalinodara te namo namo||2||

Adideva sakalagama pujita
Yadavakula mohanarupa
Vedoddhara sri venkatanayaka pu-
Randaravithala te namo namo||3||

dasara padagalu · MADHWA · mangalam · purandara dasaru · tulasi

Jaya mangala vrundavanadevige

ಜಯ ಮಂಗಳ ವೃಂದಾವನದೇವಿಗೆ||pa||

ನೋಡಿದ ಮಾತ್ರಕೆ ದೋಷ ಸಂಹಾರಿಗೆ
ಬೇಡಿದ ವರಗಳ ಕೊಡುವವಳಿಗೆ
ಮಾಡೆ ವಂದನೆಯನು ಮನುಜರ ಪಾಪದ
ಗೂಡ ನೀಡಾಡುವ ಗುಣವಂತೆಗೆ||1||

ಮುಟ್ಟಿದ ಮಾತ್ರಕೆ ಮುಕ್ತರ ಮಾಡುವ
ಮುದದಿಂದುದ್ಧರಿಸುವ ಮುನಿವಂದೈಗೆ
ಕೊಟ್ಟರೆ ನೀರನು ಬೇರಿಗೆ ಕಾಲನ
ಮುಟ್ಟಿಲೀಸದ ಹಾಗೆ ಮಾಳ್ಪಳಿಗೆ||2||

ಬಿತ್ತಿ ಬೆಳಸಿ ತನ್ನ ಹೆಚ್ಚಿಸಿದವರಿಗೆ
ಚಿತ್ತವಲ್ಲಭ ಕೃಷ್ಣನ್ಹರುಷದಲಿ
ಅತ್ಯಂತವಾಗಿ ತಾ ತೋರಿ ಭವದ ಬೇರ
ಕಿತ್ತು ಬಿಸಾಡುವ ಕೋಮಲೆಗೆ||3||

ಕೋಮಲವಾಗಿದ್ದ ದಳಮಂಜರಿಗಳ
ಪ್ರೇಮದಿಂದಲಿ ತಂದು ಶ್ರೀಹರಿಗೆ
ನೇಮದಿಂದರ್ಚಿಸೆ ಪರಮಾತ್ಮನೊಳು ಜೀವ
ಕಾಮಿತಾರ್ಥವನೀವ ಸದ್ಗುಣಿಗೆ||4||

ಕಾಷ್ಠವ ತಂದು ಗಂಧವ ಮಾಡಿ ಕೃಷ್ಣಗೆ
ನಿಷ್ಠಯಿಂದಲಿ ಲೇಪನ ಮಾಳ್ಪರ
ಜ್ಯೇಷ್ಠರೆನಿಸಿ ವೈಕುಂಠದಿ ನಿಲಿಸಿ ಸಂ
ತುಷ್ಟರ ಮಾಡುವ ಸೌಭಾಗ್ಯಗೆ||5||

ಅನ್ನವನುಂಡರು ನೀಚರ ಮನೆಯಲ್ಲಿ
ಉನ್ನತ ಪಾಪವ ಮಾಡಿದ್ದರೂ
ತನ್ನ ದಳವನೊಂದ ಕರ್ಣದಲ್ಲಿಟ್ಟರೆ
ಧನ್ಯರ ಮಾಡುವ ದಯವಂತೆಗೆ||6||

ಸರಸಿಜನಾಭನ ಸಲಿಗೆಯ ರಾಣಿಗೆ
ಶರಣಜನರ ಪೊರೆವ ಸದ್ಗುಣಿಗೆ
ತಿರುಪತಿ ನಿಲಯ ಶ್ರೀಪುರಂದರವಿಠಲನ
ಚರಣಸೇವಕಳಾದ ಚಿನ್ಮಯೆಗೆ||7||

Jaya mangala vrundavanadevige||pa||

Nodida matrake dosha samharige
Bedida varagala koduvavalige
Made vamdaneyanu manujara papada
Guda nidaduva gunavantege||1||

Muttida matrake muktara maduva
Mudadnduddharisuva munivandaige
Kottare niranu berige kalana
Muttilisada hage malpalige||2||

Bitti belasi tanna heccisidavarige
Cittavallaba krushnanharushadali
Atyantavagi ta tori Bavada bera
Kittu bisaduva komalege||3||

Komalavagidda dalamanjarigala
Premadindali tandu sriharige
Nemadindarcise paramatmanolu jiva
Kamitarthavaniva sadgunige||4||

Kashthava tandu gandhava madi krushnage
Nishthayindali lepana malpara
Jyeshtharenisi vaikunthadi nilisi san
Tushtara maduva saubagyage||5||

Annavanundaru nicara maneyalli
Unnata papava madiddaru
Tanna dalavanonda karnadallittare
Dhanyara maduva dayavantege||6||

Sarasijanabana saligeya ranige
Saranajanara poreva sadgunige
Tirupati nilaya sripurandaravithalana
Charanasevakalada chinmayege||7||

dasaavatharam · dasara padagalu · MADHWA · purandara dasaru

Mangalam jaya mangalam

ಮಂಗಳಂ ಜಯ ಮಂಗಳಂ||pa||

ನಿಗಮವ ತಂದಾ ಮತ್ಸ್ಯಾವತಾರಗೆ
ನಗವ ಬೆನ್ನಲಿ ಪೊತ್ತ ಕೂರ್ಮನಿಗೆ
ಜಗವನುದ್ಧರಿಸಿದ ವರಾಹಾವತಾರಗೆ
ಮಗುವಿನ ಕಾಯ್ದ ಮುದ್ದು ನರಸಿಂಹಗೆ||1||

ಭೂಮಿಯ ದಾನವ ಬೇಡಿದಗೆ
ಆ ಮಹಾ ಅರಸರ ಗೆಲಿದವಗೆ
ರಾಮಚಂದ್ರನೆಂಬ ಸ್ವಾಮಿಗೆ ಸತ್ಯ-
ಭಾಮೆಯ ಅರಸ ಗೋಪಾಲಕೃಷ್ಣಗೆ||2||

ಬತ್ತಲೆ ನಿಂತಿಹ ಬುದ್ಧನಿಗೆ
ಉತ್ತಮ ಹಯವನೇರಿದ ಕಲ್ಕಿಗೆ
ಹತ್ತವತಾರದಿ ಭಕ್ತರ ಸಲಹಿದ
ನಿತ್ಯ ಶ್ರೀ ಪುರಂದರವಿಠಲನಿಗೆ||3||

Mangalam jaya mangalam||pa||

Nigamava tanda matsyavatarage
Nagava bennali potta kurmanige
Jagavanuddharisida varahavatarage
Maguvina kayda muddu narasimhage||1||

Bumiya danava bedidage
A maha arasara gelidavage
Raamachandranemba svamige satya-
Bameya arasa gopalakrushnage||2||

Battale nintiha buddhanige
Uttama hayavanerida kalkige
Hattavataradi Baktara salahida
Nitya sri purandaravithalanige||3||

 

 

 

 

 

 

 

 

 

 

 

 

dasara padagalu · MADHWA · purandara dasaru

Muttu kolliro

ಮುತ್ತು ಕೊಳ್ಳಿರೊ||pa||

ಮುತ್ತು ಬಂದಿದೆ ಕೊಳ್ಳಿ
ಸಚ್ಚಿದಾನಂದ ದಿವ್ಯ||a.pa||

ಜ್ಞಾನವೆಂಬೋ ದಾರದಲಿ
ಪೋಣಿಸಿದ ದಿವ್ಯ ಮುತ್ತು
ಜ್ಞಾನದಿಂದ ಕೊಂಬುದಿದನು
ದೀನರಾದ ಭಕ್ತ ಜನರು||1||

ಕಟ್ಟಲಾಗದು ಮೂಗಿನಲಿ
ಇಟ್ಟು ಮೆರೆಯಲಾಗದಿದು
ಭ್ರಷ್ಟ ಜನಕೆ ಕಾಣಿಸದಂಥ
ಕೃಷ್ಣನೆಂಬೊ ಅಣಿಮುತ್ತು||2||

ಹಿಡಿಯಲಿಕ್ಕೆ ನಿಲುಕದದು
ಕಡೆ ಕಾಣದೆಂದು ಬೆಲೆಯು
ಪೊಡವಿಗೆಲ್ಲ ಪುರಂದರವಿಠಲ
ಒಡೆಯನೆಂಬೊ ದಿವ್ಯ ಮುತ್ತು||3||

Muttu kolliro janaru
Muttu kolliro||pa||

Muttu bandide kolli
Saccidananda divya||a.pa||

J~janavembo daradali
Ponisida divya muttu
J~janadinda kombudidanu
Dinarada Bakta janaru||1||

Kattalagadu muginali
Ittu mereyalagadidu
Brashta janake kanisadantha
Krushnanembo animuttu||2||

Hidiyalikke nilukadadu
Kade kanadendu beleyu
Podavigella purandaravithala
Odeyanembo divya muttu||3||

dasara padagalu · MADHWA · purandara dasaru

Ranga baro ranga baro rangayya baro

ರಂಗ ಬಾರೋ ರಂಗ ಬಾರೋ ರಂಗಯ್ಯ ಬಾರೋ
ಪೊನ್ನುಂಗುರ ನಿನಗೀವೆ ಪನ್ನಗಶಯನನೆ ಬಾರೋ||pa||

ವೆಂಕಟರಮಣನೆ ಬಾರೋ ಪಂಕಜ ಚರಣವ ತೋರೋ
ಮುಕುಂದ ಮುಂದೆ ನಿಂದಾಡೋ ಕಿಂಕಿಣಿಕಿಣಿ ರವದಿಂದ||1||

ಕರ್ಣದೊಳಿಟ್ಟ ಮಾಗಾಯಿ ಹೊನ್ನ ಕದಪಿಲಿ ಧುಮುಕಾಡುತ್ತ
ಪನ್ನಗಶಯನನೆ ನಿನ್ನ ಚಿನ್ನದ ಸರ ಹೊಳೆವುತ್ತ ಬಾರೋ||2||

ಬಡನಡುವಿನ ಘಂಟೆ ಬಳುಕಿ ಢಣಢಣಿಸುತ್ತ
ಕಡಗ ಕಾಲಂದುಗೆ ಗೆಜ್ಜೆ ಅಡಿಗಡಿಗೆ ನುಡಿಸುತ್ತ ಬಾರೋ||3||

ಮುಂಗುರುಳಿನ ಸೊಬಗಿನಿಂದ ರಂಗ ನಿನ್ನ ಫಣೆಯೊಳಿಟ್ಟ
ರಂಗು ಮಾಣಿಕ್ಯದರಳೆಲೆ ತೂಗಿ ತೂಗಿ ಓಲಾಡುತ್ತ ಬಾರೋ||4||

ಕೊರಳಿಗಹಾಕಿದ ಹುಲಿಯುಗುರು ತೋರಮುತ್ತಿನ ಹಾ
ರಂಗಳ್ಹೂಳೆಯುತ್ತ ಪರಿಪರಿ ವಿಧಗಳಿಂದ ಪುರಂದರವಿಠಲ ಬಾರೋ||5||
Ranga baro rangabaro rangayya baro
Ponnungura ninagive pannagasayanane baro||pa||

Venkataramanane baro pankaja caranava toro
Mukunda munde nindado kimkinikini ravadinda||1||

Karnadolitta magayi honna kadapili dhumukadutta
Pannagasayanane ninna cinnada sara holevutta baro||2||

Badanaduvina gante baluki dhanadhanisutta
Kadaga kalanduge gejje adigadige nudisutta baro||3||

Mungurulina sobagininda ranganinna paneyolitta
Rangu manikyadaralele tugi tugi oladutta baro||4||

Koraligahakida huliyuguru toramuttina ha
Rangalhuleyutta paripari vidhagalinda purandaravithala baro||5||