dasara padagalu · MADHWA · mangalam · purandara dasaru · tulasi

Jaya mangala vrundavanadevige

ಜಯ ಮಂಗಳ ವೃಂದಾವನದೇವಿಗೆ||pa||

ನೋಡಿದ ಮಾತ್ರಕೆ ದೋಷ ಸಂಹಾರಿಗೆ
ಬೇಡಿದ ವರಗಳ ಕೊಡುವವಳಿಗೆ
ಮಾಡೆ ವಂದನೆಯನು ಮನುಜರ ಪಾಪದ
ಗೂಡ ನೀಡಾಡುವ ಗುಣವಂತೆಗೆ||1||

ಮುಟ್ಟಿದ ಮಾತ್ರಕೆ ಮುಕ್ತರ ಮಾಡುವ
ಮುದದಿಂದುದ್ಧರಿಸುವ ಮುನಿವಂದೈಗೆ
ಕೊಟ್ಟರೆ ನೀರನು ಬೇರಿಗೆ ಕಾಲನ
ಮುಟ್ಟಿಲೀಸದ ಹಾಗೆ ಮಾಳ್ಪಳಿಗೆ||2||

ಬಿತ್ತಿ ಬೆಳಸಿ ತನ್ನ ಹೆಚ್ಚಿಸಿದವರಿಗೆ
ಚಿತ್ತವಲ್ಲಭ ಕೃಷ್ಣನ್ಹರುಷದಲಿ
ಅತ್ಯಂತವಾಗಿ ತಾ ತೋರಿ ಭವದ ಬೇರ
ಕಿತ್ತು ಬಿಸಾಡುವ ಕೋಮಲೆಗೆ||3||

ಕೋಮಲವಾಗಿದ್ದ ದಳಮಂಜರಿಗಳ
ಪ್ರೇಮದಿಂದಲಿ ತಂದು ಶ್ರೀಹರಿಗೆ
ನೇಮದಿಂದರ್ಚಿಸೆ ಪರಮಾತ್ಮನೊಳು ಜೀವ
ಕಾಮಿತಾರ್ಥವನೀವ ಸದ್ಗುಣಿಗೆ||4||

ಕಾಷ್ಠವ ತಂದು ಗಂಧವ ಮಾಡಿ ಕೃಷ್ಣಗೆ
ನಿಷ್ಠಯಿಂದಲಿ ಲೇಪನ ಮಾಳ್ಪರ
ಜ್ಯೇಷ್ಠರೆನಿಸಿ ವೈಕುಂಠದಿ ನಿಲಿಸಿ ಸಂ
ತುಷ್ಟರ ಮಾಡುವ ಸೌಭಾಗ್ಯಗೆ||5||

ಅನ್ನವನುಂಡರು ನೀಚರ ಮನೆಯಲ್ಲಿ
ಉನ್ನತ ಪಾಪವ ಮಾಡಿದ್ದರೂ
ತನ್ನ ದಳವನೊಂದ ಕರ್ಣದಲ್ಲಿಟ್ಟರೆ
ಧನ್ಯರ ಮಾಡುವ ದಯವಂತೆಗೆ||6||

ಸರಸಿಜನಾಭನ ಸಲಿಗೆಯ ರಾಣಿಗೆ
ಶರಣಜನರ ಪೊರೆವ ಸದ್ಗುಣಿಗೆ
ತಿರುಪತಿ ನಿಲಯ ಶ್ರೀಪುರಂದರವಿಠಲನ
ಚರಣಸೇವಕಳಾದ ಚಿನ್ಮಯೆಗೆ||7||

Jaya mangala vrundavanadevige||pa||

Nodida matrake dosha samharige
Bedida varagala koduvavalige
Made vamdaneyanu manujara papada
Guda nidaduva gunavantege||1||

Muttida matrake muktara maduva
Mudadnduddharisuva munivandaige
Kottare niranu berige kalana
Muttilisada hage malpalige||2||

Bitti belasi tanna heccisidavarige
Cittavallaba krushnanharushadali
Atyantavagi ta tori Bavada bera
Kittu bisaduva komalege||3||

Komalavagidda dalamanjarigala
Premadindali tandu sriharige
Nemadindarcise paramatmanolu jiva
Kamitarthavaniva sadgunige||4||

Kashthava tandu gandhava madi krushnage
Nishthayindali lepana malpara
Jyeshtharenisi vaikunthadi nilisi san
Tushtara maduva saubagyage||5||

Annavanundaru nicara maneyalli
Unnata papava madiddaru
Tanna dalavanonda karnadallittare
Dhanyara maduva dayavantege||6||

Sarasijanabana saligeya ranige
Saranajanara poreva sadgunige
Tirupati nilaya sripurandaravithalana
Charanasevakalada chinmayege||7||

2 thoughts on “Jaya mangala vrundavanadevige

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s