ತಿಳಿವದು ಸಜ್ಜನರೂ ಶಿರಿ |ನಿಲಿಯ ವಿಧಿಗೆ ತಾ ||
ವಲಿದು ಸರಿದ ನುಡಿ |ತಿಳಿವದು ಸಜ್ಜನರೂ ||ಪ||
ಮಾಧವನಿಪ್ಪತ್ನಾಲ್ಕು ಮೂರ್ತಿ ಬಹು |ಬೋಧರ ಉಕ್ತಿ ಮನಕೆ ತಂದೂ ||
ಶೋಧಿಸಿ ಕ್ರಮ ವ್ಯುತ್ಕ್ರಮ ಪದ್ಮಾದಿ ಗ- |ದಾದಿ ಅರ್ಧ ಸಾಂತರ ಕ್ರಮವೆಂಬುದು||1||
ಕೇಶವ ವಿಷ್ಣು ಗೋವಿಂದ ವಾಮನ ಕ್ರಮ |ಈಶ ಮಧುರಿಪುರ ಮಾಧವನೂ ||
ದೋಷಹ ತ್ರಿವಿಕ್ರಮ ನಾರಾಯಣ |ಭಾಸಿಸುತಿಹ ವ್ಯುತ್ಕ್ರಮ ಮೂರುತಿ ಎಂದು ||2||
ಸಂಕರುಷಣ ಅನಿರುದ್ಧನು ಶ್ರೀಧರ |ಪಂಕಜನಾಭ ಕಂಜಾದಿ ಕ್ರಮಾ ||
ಬಿಂಕದ ದಾಮೋದರ ಪುರುಷೋತ್ಮ ಕ |ಳಂಕ ಹೃಷೀಕಪುಪೇಂದ್ರ ಗದಾದೆಂದು ||3||
ಮುನಿನುತ ವಾಸುದೇವ ಅಧೋಕ್ಷಜ |ಮನಸಿಜ ಪಿತ ನರಸಿಂಹ ಹರೀ ||
ಅನಘರ್ಧಕ್ರಮ ಪ್ರದ್ಯುಮ್ನ ಜನಾ- |ರ್ದನ ಅಚ್ಯುತ ಕೃಷ್ಣನು ಸಾಂತರಕ್ರಮ||4||
ನೀಲ ಘನಾಂಗನ ರವಿ ನಿಭ ಇಪ್ಪ |ತ್ನಾಲಕು ಮೂರುತಿ ಲಕ್ಷಣವೂ ||
ಮ್ಯಾಲಿನ ಬಲಗೈ ಮೊದಲು ಕೆಳಗೆ ಕಡಿ |ಕೇಳಿ ಶಂಖ ರವಿಗದ ಕಂಜ ಕೇಶವ ||5||
ಕಂಜಗದ ರವಿದರ ಧರ ನಾರಾಯಣ |ವೃಜನ ಹರವಿದರ ಪದ್ಮ ಗದಾ ||
ಭುಜ ಮಾಧವ ಗದ ಕಂಜಧರ ರವಿ ಭೂ |ಮಿಜ ವಲ್ಲಭ ಗೋವಿಂದ ಮೂರುತಿಯಂದು ||6||
ಪುಂಡರೀಕಧರ ರವಿಗದ ವಿಷ್ಣು ಪ್ರ- |ಚಂಡ ಶಂಖ ಕಂಜ ಗದ ಚಕ್ರಾ ||
ಅಂಡಜವಹ ಮಧುರಿಪು ಗದ ರವಿದರ |ಮಂಡಿತ ಪದ್ಮ ತ್ರಿವಿಕ್ರಮ ಮೂರುತಿ||7||
ಅರಿದರ ಕಂಜ ಸು ಕಂಬುವಾಮನ ಶ್ರೀ- |ಧರ ರವಿ ಗದಧರ ಪದ್ಮಯುತಾ ||
ವರ ಚಕ್ರ ಜಲಜದರ ಗದ ಹೃಷಿಕ ಪ- |ಪರ ಕಂಜ ರವಿಗದ ಶಂಖ ಪದುಮನಾಭಾ ||8||
ದರಗದ ರವಿ ಕಂಜ ದಾಮೋದರ ಸಂ- |ಕರುಷಣ ಶಂಖ ಕಂಜಾರಿ ಗದಾ ||
ಶರಧಿಜ ರವಿ ಪಂಕಜ ಗದ ಸಂತತ |ಧರಿಸಿಹ ಮಾಯಪ ವಾಸುದೇವನೆಂದು||9||
ದರ ಸುಗದ ನಳಿನ ಅರಿ ಪ್ರದ್ಯುಮ್ನನು |ದುರುಳಹ ಗದ ಕಂಬು ಕಂಜಾರೀ ||
ಸುರಪನಿರುದ್ಧ ಕಮಲದರ ಗದ ರವಿ |ಧರಿಸಿಹ ಸರ್ವದ ಪುರುಷೋತ್ತುಮನೆಂದು||10||
ಗದ ಕಂಬುಚರಣ ಸರಸಿಜಧೋಕ್ಷಜ |ಪದುಮ ಗದದರ ರವಿ ನರಹರೀ ||
ಉದಜಾರಿದರ ಗದಾಚ್ಯುತ ರವಿದರ |ಗದ ಕಮಲಾಂಶ ಜನಾರ್ದನ ವಿಭುವೆಂದು ||11||
ಗದ ಚಕ್ರ ವಿಷಜ ಶಂಖ ಉಪೇಂದ್ರನು |ಸುದರುಶನ ಕಂಜ ಗದದರ ಹರೀ ||
ಯದುಪತಿ ಕರ ನಾಲ್ಕರೊಳು ಗದ ಕಮಲ |ಸುದರುಶನ ವಿಧುಭ ಪಾಂಚಜನ್ಯವೆಂದು ||12||
ವರ ಗಾಯತ್ರೀ ವರ್ಣ ಮೂರ್ತಿಗಳಿ- |ವರು ಸಾದರದಲಿ ಧೇನಿಪುದೂ ||
ನಿರುತ ಸುಕವಿಗಳ ಮತವಿದು ದಕ್ಷಿಣ |ವರ ಪ್ರಾಣೇಶ ವಿಠಲ ಸಂತೈಪನೂ ||13||
tiLivadu sajjanarU Siri |niliya vidhige tA ||
validu sarida nuDi |tiLivadu sajjanarU ||pa||
mAdhavanippatnAlku mUrti bahu |bOdhara ukti manake tandU ||
SOdhisi krama vyutkrama padmAdi ga- |dAdi ardha sAntara kramaveMbudu||1||
kESava viShNu gOvinda vAmana krama |ISa madhuripura mAdhavanU ||
dOShaha trivikrama nArAyaNa |BAsisutiha vyutkrama mUruti endu ||2||
sankaruShaNa aniruddhanu SrIdhara |pankajanABa kaMjAdi kramA ||
binkada dAmOdara puruShOtma ka |Lanka hRuShIkapupEMdra gadAdendu ||3||
muninuta vAsudEva adhOkShaja |manasija pita narasiMha harI ||
anaGardhakrama pradyumna janA- |rdana acyuta kRuShNanu sAntarakrama||4||
nIla GanAngana ravi niBa ippa |tnAlaku mUruti lakShaNavU ||
myAlina balagai modalu keLage kaDi |kELi SanKa ravigada kanja kESava ||5||
kanjagada ravidara dhara nArAyaNa |vRujana haravidara padma gadA ||
Buja mAdhava gada kanjadhara ravi BU |mija vallaBa gOviMda mUrutiyaMdu ||6||
punDarIkadhara ravigada viShNu pra- |canDa SanKa kanja gada cakrA ||
anDajavaha madhuripu gada ravidara |manDita padma trivikrama mUruti||7||
aridara kanja su kaMbuvAmana SrI- |dhara ravi gadadhara padmayutA ||
vara cakra jalajadara gada hRuShika pa- |para kanja ravigada SanKa padumanABA ||8||
daragada ravi kanja dAmOdara san- |karuShaNa SanKa kanjAri gadA ||
Saradhija ravi pankaja gada santata |dharisiha mAyapa vAsudEvanendu||9||
dara sugada naLina ari pradyumnanu |duruLaha gada kaMbu kanjArI ||
surapaniruddha kamaladara gada ravi |dharisiha sarvada puruShOttumanendu||10||
gada kaMbucaraNa sarasijadhOkShaja |paduma gadadara ravi naraharI ||
udajAridara gadAcyuta ravidara |gada kamalAMSa janArdana viBuvendu ||11||
gada cakra viShaja SanKa upEndranu |sudaruSana kanja gadadara harI ||
yadupati kara nAlkaroLu gada kamala |sudaruSana vidhuBa pAncajanyavendu ||12||
vara gAyatrI varNa mUrtigaLi- |varu sAdaradali dhEnipudU ||
niruta sukavigaLa matavidu dakShiNa |vara prANESa viThala saMtaipanU ||13||