dasara padagalu · MADHWA · Mahalakshmi

Chelveraratiya tandettire -Lakshmi arathi

ಚೆಲ್ವೇರಾರತಿಯ ತಂದೆತ್ತಿರೆ ||

ಹುಟ್ಟಿದಳಾ ಕ್ಷೀರಸಾಗರದಲಿ ಸ-
ಮಸ್ತ ಜನರಿಗೆ ಸುಖವ ನೀಡುತ
ಶ್ರೇಷ್ಠರೊಳಗೆ ಜೇಷ್ಠಾದೇವಿ ಶ್ರೀನಾಥನ
ಪಟ್ಟದರಸಿ ಮುದ್ದು ಮಾಲಕ್ಷ್ಮಿಗೆ ||

ಮುದ್ದು ಮೋರೆಗೆ ತಕ್ಕ ಮುಖುರ್ಯ ಬುಲಾಕ-
ನಿಟ್ಟ ್ವಜ್ರದ ಬುಗುಡಿ ವೈಯಾರದಿಂದ
ತಿದ್ದಿ ಬೈತಲು ಜಡೆಬಂಗಾರ ರಾಗಟೆ
ಪದ್ಮನಾಭನ ರಾಣಿ ಮಾಲಕ್ಷ್ಮಿಗೆ ||

ಸಣ್ಣ ಮುತ್ತಿನ ವಾಲೆ ಸರಪಳಿ ಚಳತುಂಬು
ಚಿನ್ನದ ಸರಿಗೆ ಮೋಹನ್ನಮಾಲೆ
ಕಣ್ಣಕಾಡಿಗೆ ಹಚ್ಚಿ ಕಸ್ತೂರಿ ಕುಂಕುಮ
ಚೆನ್ನಾರ ಚೆಲುವೆ ಶ್ರೀ ಮಾಲಕ್ಷ್ಮಿಗೆ ||

ಸೆಳೆನಡುವಿಗೆ ತಕ್ಕ ಬಿಳಿಯ ಪೀತಾಂಬರ
ನಳಿತೋಳಿನಲಿ ನಾಗಮುರಿಗೆ ವಂಕಿ
ಗಿಳಿಯು ಕಮಲ ದ್ವಾರ್ಯ ಹರಡಿ ಕಂಕಣನಿಟ್ಟು
ಕಳೆಯ ಸುರಿವ ಚೆಲ್ವೆ ಮಾಲಕ್ಷ್ಮಿಗೆ ||

ಗರುಡವಾಹನನ್ಹೆಗಲಿಳಿದು ಶ್ರೀನಾಥನ
ಹರಡಿ ಕಂಕಣ ಕರವ್ಹಿಡಿದುಕೊಂಡು
ಮುಡಿದ ಮಲ್ಲಿಗೆ ಪಾರಿಜಾತಗಳುದುರುತ
ನಡೆದು ಬರುವೊ ಮುದ್ದು ಮಾಲಕ್ಷ್ಮಿಗೆ ||

ಪಾದದಿ ರುಳಿ ಗೆಜ್ಜೆ ನಾದ ಝೇಂಕರಿಸುತ
ಆದರದಿಂದೆನ್ನ ಮನೆಗೆ ಬಂದು
ಶ್ರೀಧರ ಭೀಮೇಶಕೃಷ್ಣನೆದೆಯ ಮ್ಯಾಲ್ವಿ-
ನೋದದಿ ಕುಳಿತಿದ್ದ ಮಾಲಕ್ಷ್ಮಿಗೆ 6

Chelveraratiya tandettire ||pa||

Huttidala kshirasagaradali sa-
Masta janarige sukava niduta
Sreshtharolage jeshthadevi srinathana
Pattadarasi muddu malakshmige ||1||

Muddu morege takka mukurya bulaka-
Nitta vajrada bugudi vaiyaradinda
Tiddi baitalu jadebangara ragate
Padmanabana rani malakshmige ||2||

Vale sarapali chalatumbu
Chinnada sarige mohannamale
Kannakadige hacchi kasturi kumkuma
Chennara cheluve sri malakshmige||3||

Selenaduvige takka biliya pitambara
Nalitolinali nagamurige vanki
Kamala dvarya haradi kamkananittu
Kaleya suriva celve malakshmige ||4||

Garudavahananhegalilidu srinathana
Haradi kankana karavhididukondu
Mudida mallige parijatagaluduruta
Nadedu baruvo muddu malakshmige ||5||

Padadi ruli gejje nada jenkarisuta
Adaradindenna manege bandu
Sridhara bimesakrushnanedeya myalvi-
Nodadi kulitidda malakshmige ||6||

dasara padagalu · guru jagannatha dasaru · MADHWA · Mahalakshmi

Hariya pattadha rani

 

ಹರಿಯ ಪಟ್ಟದ ರಾಣಿ ವರದೆ ಕಲಾಣೀ
ಉರುಗುಣಗಣಶ್ರೇಣಿ ಕರುಣೀ ||

ಶಿರದಿ ನಿನ್ನಯ ದಿವ್ಯ ಚರÀಣಕಮಲಕೆ ನಾನು
ಎರಗಿ ಬಿನೈಪೆ ತಾಯೆ ಸುಖವೀಯೇ ||

ವನಜಸಂಭವ ಮುಖ್ಯ ಅನಿಮಿಶೇಷರ ಸ್ತೋಮ
ದಿನದಿನ ನೀ ಪೊರೆವೇ ಘನಮಹಿಮಳೆ
ಮನುಜರಾಧಮನೆಂದು ಮನಸೀಗೆ ನೀ ತಂದು
ಕನಕವೃಷ್ಟಿಯ ಸುರಿದು ಪೊರೆಯೇ ಧ್ವರಿಯೇ ||

ಸೃಷ್ಟಿಕಾರಣಿ ನೀನೆ ಕಷ್ಟ ತರಿದು ಕೃಪಾ –
ದೃಷ್ಟಿಯಿಂದಲಿ ನೋಡಿ ಸಲಹೇ
ಇಷ್ಟದಾಯಕ ಶಿರಿ ಕೃಷ್ಣನರಸಿಯೆ ನಿನ್ನ
ಇಷ್ಟು ವಿಧದಲಿ ಬೇಡಿಕೊಂಬೆ ಅಂಬೆ ||

ಖ್ಯಾತಮಹಿಮಳೆ ಎನ್ನ ಮಾತು ಲಾಲಿಸು ದೇವಿ
ಪೋತ ನಾನಲ್ಲೆ ನಿನಗೆ
ದಾತಗುರುಜಗನ್ನಾಥವಿಠಲ ನಿನ್ನ
ನಾಥನಾಗಿ ಭಾಗ್ಯಪಡೆದ ಜಸಪಡೆದಾ ||

Hariya pattada rani varade kalyani^^urugunaganasreni karuni
Siradi ninnaya divya charanakamalake nanu
Eragi binnaipe taye sukaviye || pa ||

Vanajasambava mukya animiseshara stoma
Dinadina ni poreve ganamahimale
Manujaradhamanendu manasige ni tandu
Kanakavrushtiya suridu poreye dhvariye || 1 ||

Srushtikarini nine kashta taridu krupadrushti
Yindali nodi salahe mate
Ishtadayaka siri krushnanarasiye
Ishtu vidadi bedikombe ninna ambe || 2 ||

Kyatamahimale enna matu lalisu devi
Pota nanalle ninage
Data guru jagannathaviththala ninna
Nathanagi bagyapadeda jasapadeda || 3 ||

dasara padagalu · MADHWA · Mahalakshmi

Yelamma kolhapuri

ಏಳಮ್ಮ ಕೊಲ್ಲಾಪುರಧೀಶೆ | ಇನ್ನೂ
ಭಾಳ ಹೊತ್ತಾಯಿತು ವೈಕುಂಠವಾಸೆ ||pa||

ಸೃಷ್ಟಿಸೆಂದೆನುತ ಆಂಬ್ರಣಿರೂಪದಿಂದ್ಹರಿ
ಗಿಷ್ಟ ಸ್ತೋತ್ರವ ಮಾಡಿ ಎಬ್ಬಿಸಬೇಕು
ಅಷ್ಟ ಭುಜದ ಲಕುಮಿ ಪ್ರಕೃತಿರೂಪಿಣಿಯಾಗಿ
ಸೃಷ್ಟಿಕಾರ್ಯಕೆ ಅನುವಾಗಬೇಕು ||1||

ಸಕಲ ದೇವತೆಗಳ ಸೃಷ್ಟಿ ಮಾಡಲಿಬೇಕು
ಮುಕುತಿಯೋಗ್ಯರ ಸೇವೆ ಕೊಳ್ಳಬೇಕು
ಸಕಲರೂಪದಲಿ ಶ್ರೀಹರಿಯ ಸೇವಿಸಬೇಕು
ಅಕಳಂಕÉ ಆದಿದೇವತೆ ಎನಿಸಬೇಕು ||2||

ಶ್ರೀ ಪದ್ಮಭವೆ ವೆಂಕಟೇಶನ ಕೂಡುತ
ನೀ ಪರಿಪರಿ ಲೀಲೆಗೈಯ್ಯಬೇಕು
ಗೋಪಾಲಕೃಷ್ಣವಿಠ್ಠಲನ ವಕ್ಷಸ್ಥಳ
ವ್ಯಾಪಿಸಿ ಭಕ್ತರ ಕಾಪಾಡಬೇಕು ||3||

Elamma kollapuradhise | innubala hottayitu vaikunthavase ||pa||

Srushtisendenuta ambranirupadimd~hari
Gishta stotrava madi ebbisabeku
Ashta Bujada lakumi prakrutirupiniyagi
Srushtikaryake anuvagabeku ||1||

Sakala devategala srushti madalibeku
Mukutiyogyara seve kollabeku
Sakalarupadali srihariya sevisabeku
Akalanka adidevate enisabeku ||2||

Sri padmabave venkatesana kuduta
Ni paripari lilegaiyyabeku
Gopalakrushnaviththalana vakshasthala
Vyapisi Baktara kapadabeku ||3||

dasara padagalu · MADHWA · purandara dasaru · Vijaya dasaru

Guru purandara dasare nimma

ಗುರು ಪುರಂದರ ದಾಸರೇ ನಿಮ್ಮ ಚರಣ ಸರಸಿಜ ನಂಬಿದೆ ಪ
ಗುರುವ ರಹಿತರ ಮಾಡಿ ನಮ್ಮನು ಪೊರೆವ ಭಾರವು ನಿಮ್ಮದೆ|| ಅ||

ಒಂದು ಅರಿಯದ ಮಂದಮತಿ ನಾನಿಂದು ನಿಮ್ಮನು ವಂದಿಪೆ
ಇಂದಿರೇಶನ ತಂದು ತೋರಿಸಿ ತಂದೆ ಮಾಡೆಲೊ ಸತ್ಕಪೆ||1||

ಪುರಂದರ ಗಡದೊಳಗೆ ನಿಂದು ನಿರುತ ದ್ರವ್ಯವ ಗಳಿಸಿದೆ
ಪರಮ ಪುರುಷನು ವಿಪ್ರನಂದದಿ ಕರವ ನೀಡಿ ಯಾಚಿಸೆ ||2||

ಪರಮ ನಿರ್ಗುಣ ಮನವರಿತು ಹರಿಗೆ ಸೂರೆಯ ನೀಡುತ
ಅರಿತು ಮನದೊಳು ಹರಿದು ಭವಗಳ  ತರುಣಿ ಸಹಿತಾ ಹೊರಟನೆ ||3||

ಮಾರಜನಕನ ಸನ್ನಿಧಾನದಿ ಸಾರಗಾನವ ಮಾಡುವ
ನಾರದರೆ ಈ ರೂಪದಿಂದಲಿ ಚಾರುದರುಶನ ತೋರಿದ ||4||

ಅಜಭವಾದಿಗಳರಸನಾದ ವಿಜಯವಿಠ್ಠಲನ ಧ್ಯಾನಿಪ
ನಿಜ ಸುe್ಞನವ ಕೊಡಿಸಬೇಕೆಂದು  ಭಜಿಪೆನೋ ಕೇಳ್ ಗುರುವರ ||5||

Guru purandaradasare nimma charanakamalava nambide||
Garuvarahitana madi ennanu poreva bharavu nimmade||1||

Ondu ariyada mandamati nanindu nimmanu vandipe|
Indireshana tandu torisi tande madelo satkrupe||2||

Purandaragadadolage nindu niruta dravyava galiside|
Paramapurushanu vipranandadi karava nidi yachise||3||

Parama nirgunavanavanaritu harige sureya niduta|
Aritu manadolu haridu bhavagala taruni sahita horatane||4||

Marajanakana sannidhanadi saraganava maduva|
Naradare I rupadindali charudarushana torida||5||

Ajabhavadigalarasanada vijayavithalana dyanipa|
Nija su~janava kodisabekendu bhajipeno kel guruvara||6||

dasara padagalu · MADHWA · srinivasa · Vijaya dasaru

Sagi barayya bavarogada

Once when Vijayadasaru attended Thirupathi BRahmothsavam, HE composed the song “Sagi barayya bavarogada” and after that only, Chariot/Ratha has moved forward.

ಸಾಗಿಬಾರೈಯ ಭವರೋಗದ ವೈದ್ಯನೆ
ಬಾಗಿ ನಿನಗೆ ಚೆನ್ನಾಗಿ ತುತಿಪೆ ನಿಂದು
ಭಾಗೀರಥಿಪಿತ ಭಾಗವತರ ಸಂ
ಯೋಗರಂಗ ಉರಗಗಿರಿ ವೆಂಕಟ ||pa||

ರಥದ ಮಧ್ಯದಲಿಪ್ಪನೆ ರಥಾಂಡಜ ವಾಹನನೆ
ರಥಾಂಗಪಾಣಿಯೆ ದಶರಥ ನೃಪಬಾಲ
ಪಾರ್ಥಗೆ ಒಲಿದವನ ರಥವ ನಡಿಸಿ ಅತಿ-
ರಥ ಮಹರಥರ ವಿರಥರ ಮಾಡಿ ಗೆಲಿಸಿದೆ
ಪ್ರಥಮ ದೈವವೆ ಮನ್ಮಥಪಿತ ದೈತ್ಯರ-
ಮಥನ ಭಕ್ತರ ಮನೋರಥನೆ ತಾರಾ-
ಪಥವರ್ಣನೆ ತವ ಕಥಾಶ್ರವಣದಲಿ ಸು-
ಪಥವನು ತೋರಿಸು ಪ್ರಥಮಾಂಗದೊಡೆಯ ||1||

ನಿಲ್ಲದೆ ಬರುವುದು ಪುಲ್ಲಲೋಚನೆ ಸಿರಿ-
ವಲ್ಲಭ ಸರ್ವರಿಗು ಬಲ್ಲಿದನೆ ಅಪ್ರತಿ-
ಮಲ್ಲ ಮುರವಿರೋಧಿ ಮೆಲ್ಲಮೆಲ್ಲನೆ ಪಾದ
ಪಲ್ಲವ ತೋರುತ್ತ ಎಲ್ಲಾ ಕಾಲದಿ ನಮ್ಮ-
ನೆಲ್ಲರುದ್ಧರಿಪುದು ಎಲ್ಲಿ ನಿನಗೆ ಸರಿ-
ಯಿಲ್ಲವೊ ನೋಡಲು ಸಲ್ಲುವುದೋ ಬಿರು-
ದಲ್ಲಿಗಲ್ಲಿಗೆ ಗುಣಬಲ್ಲವರಾರಿನ್ನು
ನೆಲ್ಲಕಟ್ಟು ಕೊನೆಯಲ್ಲಿಪ್ಪ ವಿಶ್ವ ||2||

ಬೊಮ್ಮ ಮೊದಲು ಮನುಜೋತ್ತಮರು ಕಡೆಯಾಗಿ
ನಿಮ್ಮ ದಾಸರು ಅವರ ಸಮ್ಮಂಧಿಗಳ ಪಾದ-
ನೆಮ್ಮಿಕೊಂಡಿಪ್ಪಂಥ ಧಮ್ಮನು ನಾ ಸರ್ವೋ-
ತ್ತುಮ್ಮಾನೇಕ ಗುಣಮಹಿಮ ವಿಭೂಷಿತ
ರಮ್ಮೆಧರಣಿದೇವಿ ಇಮ್ಮಹಿಷೇರ ಕೂಡಿ
ಸಮುಖನಾಗುತ ಸುಮ್ಮನೆ ಬಾ ಬಾ
ಹಿಮ್ಮೆಟ್ಟಿದೆ ಸಿರಿ ವಿಜಯವಿಠ್ಠಲ ಅನು-
ಪಮ್ಮಚರಿತ ಪರಬೊಮ್ಮ ತಿರುಮಲೇಶ ||3||

Sagi barayya bavarogada vaidyane
Baguve ninage cennagi tutisi indu |
Bagiratipita bagavatara samyoga
Ranga uragagiri venkata |

Rathada madhyadallippane rathaganujavahana
Rathangapaniye dasarathanrupati pala |
Parthage sarathiyagi rathava nadesi |
Athirathamaharathara virathara madi geliside |
Prathamadaivave manmathapitadaityara
Mathana Baktara manoratha paripurnane
Pathamanivarnane kathasravanadali
Supathava torisutippa prathamanganodeya | 1 |

Nillade baruvudu pullalocana siri-
Vallaba sarvarige ballidane aprati-
Malla muravirodhiye mella mellane
Pada Pallava torisutta illa kaladi namma
Nella uddharisuvudu elli ninage sari-
Yillavo nodalu salluvudo birudalli
Gallige guna ballavararinnu –
Nella koti koneyalippa visva || 2 ||

Bomma modalu manujottamaru kadeyagi
Nimma dasaru avara sambandhigala pada
Nammikondippa adhama na sarvottamane
Aneka mahima sarvabushita Iremme
Mahishare gudi sammoga-
Vaguta Gammane ba ba |
Himmettide sirivijayavithala anupamma-
Charita parabomma tirumalesa ||3||

dasara padagalu · hari · MADHWA · Vijaya dasaru

Manave ni drudhavadare

ಮನವೆ ನೀ ದೃಢವಾದರೆ
ಮನಸಿಜನಯ್ಯನ ಚರಣ ಕಾಂಬೆನೊ ನಾನು||pa||

ಹಂಬಲವನು ಮಾಡದಿದ್ದರೆ ಹರಿ
ಎಂಬ ನಾಮಪೀಯೂಷ ದೊರಕುವುದು||1||

ಚಂಚಲವುಳ್ಳವುನಾಗದಿದ್ದರೆ ದುಷ್ಟ
ಪಂಚೇಂದ್ರಿಯಗಳ ಸ್ಥಿರವಾಗಿ ನಿಲ್ಲಿಸುವೆ ||2||

ಅತ್ತಲಿತ್ತಲಿ ಪೋಗದಿರು ಎ
ನ್ನತ್ತ ವಿಜಯವಿಠ್ಠಲ ಬರಲೀ ||3||

Manave ni drudhavadare manasi-
Janayyana charana kambeno nanu ||pa||

Hambalavannu madadiddare hari
Emba namapiyusha dorakuvudu ||1||

Chanchalavullavanagadiddare dushta
Panchendriyagalannu sthiravagi nillisuve ||2||

Attalittali pogadiru e-
Nnatta vijayavithala barali ||3||

dasara padagalu · hari · MADHWA · Vijaya dasaru

Dayamadu dayamadu enna mele

ದಯಮಾಡು ದಯಮಾಡು ಎನ್ನ ಮೇಲೆ |
ಅಂತರಂಗದೊಳಿಪ್ಪ ಅಚ್ಚುತಮೂರ್ತಿ ||pa||

ಗಂಧ ಪರಿಮಳ ಕುಸುಮ ಜಾಜಿ ಮಲ್ಲಿಗೆ ಮಾಲೆ |
ಮಂದಾರ ಹಾರ ಕೊರಳೊಳಿಡಲೂ ||
ಚಂದವಿಲ್ಲವೆಂದು ತೆಗೆದು ಬಿಸಾಟಿ ಊರ |
ಹಂದಿಯಂದದಿ ಇಲ್ಲಿ ಇಪ್ಪ ನರಗೆ || 1||

ಹೆತ್ತ ತುಪ್ಪ ಸಣ್ಣಶಾವಿಗೆ ಪರಮಾನ್ನ |
ಹೆತ್ತತಾಯಿ ತಂದು ಉಣ್ಣ ಬಡಿಸಲು ||
ಅತ್ತ ಮೊಗವಗಬೆ ತೊತ್ತು ಉಣಬಡಿಸಿದ |
ಹೊತ್ತು ಓಗರ ತಿಂದು ಇಪ್ಪೆನೆಂಬ ನರಗೆ ||2||

ತುಂಬಿದ ಹೊಳೆಯಲ್ಲಿ ಹರಿಗೋಲಿಟ್ಟುಕೊಂಡು |
ಅಂಬಿಗ ತಡೆಯದೆ ದಾಟಿಸಲು ||
ಅಂಬುವಾಸನೆ ನೋಡಿ ದಾಟಿ ಪೋಗುವೆನೆಂ |
ದೆಂಬ ಮಾನವನಾದೆ ವಿಜಯವಿಠ್ಠಲ ಕರುಣೀ||3||

Dayamadu dayamadu enna mele
Antarangadolippa acyuta murti ||pa||

Gandha parimala kusuma jati mallige male
Mandara hara koralolidalu
Chandavillavendu tegedu bisati Ura
Handiyandadi illi ippa narage ||1||

Hettatuppa sannasavige paramanna
Hettatayi tandu unnabadisalu
Atta mogavagaci tottu unabadisida
Hottu Ogara tindu ippenemba narage ||2||

Tumbida holeyalli harigolittukondu
Ambiga tadeyade datisalu
Ambuvasane nodi dati poguvenen
Demba manavanade vijayaviththala karuni ||3||

dasara padagalu · hari · MADHWA · Vijaya dasaru

Vithala ninna nambide enna kayo

ವಿಠಲಾ ನಿನ್ನ ನಂಬಿದೆ ಎನ್ನ ಕಾಯೋ |
ಪುಟ್ಟುವದು ಬಿಡಿಸೊ ಎನ್ನವರೊಳಗಿರಿಸೊ ||pa||

ಬಲುಕಾಲ ಮಲ-ಮೂತ್ರ ಡೊಳ್ಳಿನೊಳು ಬಿದ್ದು |
ಹಲುಬಿದೆ ಒಂದಿಷ್ಟು ನೆಲೆಗಾಣದೆ ನಾನು ||
ಹಲವು ಮಾತೇನು ಎನಗೆ ಬಿಡದು |
ಸಲಹಬೇಕಯ್ಯಾ ಸಮುದ್ರ ಶಯ್ಯಾ ||1||

ಕರ ಪಿಡಿದು ಎತ್ತುವ ಬಿರುದು ಪರಾಕ್ರಮ |
ಮರಳಿ ಮಿಗಿಲೊಂದು ದೇವರಿಗೆ ಉಂಟೆ ||
ಮರೆವು ಮಾಡದೆ ಮಹಾದುರಿತವ ಪರಿ_ |
ಹರಿಸು ಸ್ಮರಣೆಯನ್ನು ಇತ್ತು ಕೀರ್ತನೆ ಪೇಳಿಸೋ||2||

ಬಿನ್ನಹ ಲಾಲಿಸು ಚೆನ್ನ ಲಕುಮಿಪತಿ |
ಚೆನ್ನಾಗಿಡು ನಿತ್ಯ ಪ್ರಾಣನಾಥಾ ಅಭಯ ಹಸ್ತಾ ||
ಅನ್ನದಾತಾ ಸಿರಿ ವಿಜಯವಿಠ್ಠಲರೇಯಾ |
ಸನ್ನಿಧಿಯಲ್ಲಿ ಎನ್ನ ಸಂತೋಷಪಡಿಸೊ ||3||

Vithala ninna nambide enna kayo
Puttuvadu bidiso ninnavarolagiriso ||pa||

Bahukala malamutra dollinolu biddu
Halubide ondishtu neleganade nanu
Halavu matenu enage bidadu
Salahabekayya samudrasayya ||1||

Karapididu ettuva birudu parakrama
Marali migilondu devarige umte
Marevu madade mahaduritava pari
Harisu smaraneyannu ittu kirtane peliso ||2||

Binnaha lalisu cenna lakumipati
Chennagidu nitya prananatha abayahasta
Annadata siri vijayaviththalareya
Sannidhiyalli enna samtoshapadiso ||3||

dasara padagalu · hari · Vijaya dasaru

Bandu nillo kanna munde

ಬಂದು ನಿಲ್ಲೋ ಕಣ್ಣ ಮುಂದೆ            ।।ಪ।।

ಬಂದು ನಿಲ್ಲೋ ನನ್ನ ಪಾದಕ್ಕೆ ವಂದಿಪೆ
ಇಂದಿರೆಯರಸ ಗೋವಿಂದ ಮುಕುಂದ ನೀ       ।।ಅ.ಪ।।

ಅರಳಿದ ಕೆಂದಾವರೆಯ ಧಿಕ್ಕರಿಸುವ
ಚರಣಾರವಿಂದವ ನಿರುತ ತೋರು ನೀನು         ।।೧।।

ನೀಲಾಲಕ ಭ್ರಮರಕುಂತಲಮಂಡಿತ
ಮೇಲಾದ ರಾಕೇಂದು ಮುಖವ ತೋರಿಸುತಲಿ   ।।೨।।

ಪದುಮನೇತ್ರನೆ ನಿನ್ನ ಸದನವೆನುತ ಎನ್ನ
ಹೃದಯದೊಳಗೆ ನಿಂತು ನಾ ಮುದದಿ ಭಜಿಸುವಂತೆ  ।।೩।।

ಕರಿಯ ಮೊರೆಯ ಕೇಳಿ ಕರುಣದಿಂ ಬಂದಂತೆ
ಕರೆದಾಗ ನಿನ್ನ ದಿವ್ಯಚರಣವ ತೋರಿಸುತ         ।।೪।।

ಅಜಭವಾದಿಗಳಿಗೆ ನಿಜಪದವನಿತ್ತಂತೆ
ಭಜಿಪ ಭಕ್ತರಿಗೊಲಿವ ವಿಜಯವಿಠಲರೇಯ         ।।೫।।

Bandu nillo kanna munde ||pa||

Bandu nillo nanna padakke vandipe
Indireyarasa govinda mukunda ni ||a.pa||

Aralida kendavareya dhikkarisuva
Charanaravindava niruta toru ninu ||1||

Nilalaka bramarakuntalamandita
Melada rakendu mukava torisutali ||2||

Padumanetrane ninna sadanavenuta enna
Hrudayadolage nintu na mudadi Bajisuvante ||3||

Kariya moreya keli karunadim bandante
Karedaga ninna divyacharanava torisuta ||4||

Ajabavadigalige nijapadavanittante
Bajipa Baktarigoliva vijayavithalareya ||5||