MADHWA · sulaadhi · Vijaya dasaru

Srinivasa suladhi – 2(Vijaya dasaru)

ಧ್ರುವ ತಾಳ| ಕಾಂಬೊಡಿ ರಾಗ|

ಆದಿ ದೈವನೆ ನಿನ್ನ ಪಾದವನೆ ನೆರೆನಂಬಿದೆನೊ ಬಿಡದಲೆ |
ಆದರಿಸಿ ಕಾಡುವ ಖಳರು ವಾಮದಲಿ ಹುರಿಗೂಡಿ |
ಬಾಧೆ ಬಾಡೆಸುವದು ನಾ ಯಾರಿಗೆ ದೂರಲಿ |
ಪೊದವನೇಕ ಜನನವಾದ ಕಾಲದಲ್ಲಿ |
ಈ ದೇಹಕ್ಕೆ ಸುಖ ವಾದದ್ದು ಕಾಣೆನೋ |
ವೇದಾರಿಸಿ ಕಾಣದ ಬಲು ಮಹಿಮಾನೆ |
ಯಾದವ ಶಿರೋಮಣಿ ವಿಜಯವಿಠಲ ನಿನ್ನ |
ಮಾಧುರ್ಯ ನಾಮವ ಉಣಿಸಿ ಬೀದಿ ಬಸವನ್ನ ಮಾಡೋ ||

ಮಟ್ಟ ತಾಳ

ಅಪ್ಪನ ಅಪ್ಪಾನೇ ಗಿರಿಯ ತಿಮ್ಮಪ್ಪನೇ |
ಸರ್ಪನ ತಲ್ಪಾನೇ ಸರ್ವಾರೋಳಿಪ್ಪನೇ |
ಇಪ್ಪಲು ತಪ್ಪಾನೇ ಕರೆದಾರೆ ಬಪ್ಪ್ಪನೆ |
ದರ್ಪಣ ರೂಪನೆ ವಿಜಯವಿಟ್ಠಲ ನಿನ್ನ ಕಪ್ಪನೆ ಚರಣದಲಿ |
ಧೊಪ್ಪನೆ ಹೊರಹೊರಳುವೆನೋ || ೨ ||

ತ್ರಿವಿಡ ತಾಳ

ಕಟುಕನ ಕೈಯ್ಯ ಸಿಲುಕಿದ ಗೌ ಒಂದು ಸಂ –
ಕಟ ಬಡುವಂತೆ ನನ್ನೊಳಗೆ ನಾನೇ ಬೀಳುವೆ ಅ –
ಕಟಾಕಟಾ ನಿನಗಿನ್ನು ಕರುಣ ಬಾರದೆ ಸುರ –
ಕಟಕ ದೊಡೆಯನೆ ನಿರಾಕರಿಸಿ ಎನ್ನನು ಇರಾ –
ಕಟಕ ದೊಳಗೆ ಇಟ್ಟು ಎಳಸುವರೆ ಅ –
ಕಟಕಟಾ ನಾನಾರಿಗಾಲ್ಪರಿಯಲಿ ಮರ –
ಕಟ ಕುಣಿವಂತೆ ಮನಸು ಇಂದ್ರಿಯಗಳು ವ –
ಕ್ಕಟ ವಾಗಿ ಕುಣಿದು ಕಂಗೆಡಿಸುತಿದೆ ವೆಂ –
ಕಟಾಚಲವಾಸಾ ವಿಜಯವಿಟ್ಠಲ ಚೊ –
ಕ್ಕಟ ಮಾರ್ಗವ ತೋರಿ ವಿಕಟಮತಿ ಕಳೆಯೋ || ೩ ||

ಅಟ್ಟ ತಾಳ

ದಾಸರ ಮನೆಯಲ್ಲಿ ವಾಸವಾಗಿದ್ದವ ನಾನು |
ದಾಸರ ಬಳಿಯಲ್ಲಿ ಸೇರಿಕೊಂಡವ ನಾನು |
ದಾಸರ ಮನೆಯಲ್ಲಿ ನೀರು ಪೊತ್ತವ ನಾನು |
ದಾಸರ ಮನೆಯೆಂಜಲೆಲೆ ತೆಗೆದವ ನಾನು |
ದಾಸರುಂಡದ್ದು ಉಂಡು ಬೆಳೆದವ ನಾನು |
ದಾಸರ ಮನೆ ಮುಂದೆ ರಾತ್ರಿ ಜಾಗರ ನಾನು |
ದಾಸರ ಪಂಚಿಲಿ ದಿನ ಕಳೆದವ ನಾನು |
ದಾಸರ ನಂಬಿದ ದಾಸನು ನಾನು |
ದೋಷಿ ನಾನಾದೆಡೇ ದೋಷ ರಹಿತ ಪುಣ್ಯ –
ರಾಶಿ ಪುರಂದರದಾಸರ ಮ್ಯಾಲೆ ದಯಶರಧಿಇಟ್ಟು |
ನೀ ಸಲಹೋ ಯೆನ್ನ ಪಾಶವ ಬಿಡಿಸುತ್ತ |
ಲೇಸು ಪಾಲಿಪ ನಮ್ಮ ವಿಜಯವಿಟ್ಠಲರೇಯ |
ಬೀಸಿ ಬೀಸಾಟದಿರೋ ಬಿಂಕದ ದೈವ || ೪ ||

ಆದಿ ತಾಳ

ನಿನ್ನನೆ ಪೊಂದಿದೆ ನಿನ್ನನೆ ಸೇರಿದೆ |
ನಿನ್ನನೆ ಪಾಡಿದೆ ನಿನ್ನ ಕೊಂಡಾಡಿದೆ |
ನಿನ್ನಂಘ್ರಿ ಯುಗಳವನ್ನು ನಂಬಿದೆ ಪಾ –
ವನ್ನ ಚರಿತ ರಂಗ ಎನ್ನ ಸಲಹದಿರೆ |
ನಿನ್ನಾರು ಒಪ್ಪುವರು ಪನ್ನಗಾರಿ ವಾಹನ್ನ ವಿಜಯವಿಟ್ಠಲ |
ಎನ್ನ ಬಿಡದೆ ಕಾಯೋ ಅನಾಥರೊಡೆಯಾ | || ೫ ||

ಜತ್ತೆ

ದುರುಳ ನೆನದೆ ದುರ್ಜನರಿಗೆ ಒಪ್ಪಿಸದೆ |
ಪರಿಪಾಲಿಸಿ ಸಾಕು ವಿಜಯವಿಟ್ಠಲ ರೇಯ || ೬ ||

dhruva tALa| kAMboDi rAga|

Adi daivane ninna pAdavane nerenaMbideno biDadale |
Adarisi kADuva KaLaru vAmadali hurigUDi |
bAdhe bADesuvadu nA yArige dUrali |
podavanEka jananavAda kAladalli |
I dEhakke suKa vAdaddu kANenO |
vEdArisi kANada balu mahimAne |
yAdava SirOmaNi vijayaviThala ninna |
mAdhurya nAmava uNisi bIdi basavanna mADO ||

maTTa tALa

appana appAnE giriya timmappanE |
sarpana talpAnE sarvArOLippanE |
ippalu tappAnE karedAre bapppane |
darpaNa rUpane vijayaviTThala ninna kappane caraNadali |
dhoppane horahoraLuvenO || 2 ||

triviDa tALa

kaTukana kaiyya silukida gau ondu san –
kaTa baDuvaMte nannoLage nAnE bILuve a –
kaTAkaTA ninaginnu karuNa bArade sura –
kaTaka doDeyane nirAkarisi ennanu irA –
kaTaka doLage iTTu eLasuvare a –
kaTakaTA nAnArigAlpariyali mara –
kaTa kuNivante manasu indriyagaLu va –
kkaTa vAgi kuNidu kangeDisutide veM –
kaTAcalavAsA vijayaviTThala co –
kkaTa mArgava tOri vikaTamati kaLeyO || 3 ||

aTTa tALa

dAsara maneyalli vAsavAgiddava nAnu |
dAsara baLiyalli sErikonDava nAnu |
dAsara maneyalli nIru pottava nAnu |
dAsara maneyeMjalele tegedava nAnu |
dAsaruMDaddu unDu beLedava nAnu |
dAsara mane munde rAtri jAgara nAnu |
dAsara pancili dina kaLedava nAnu |
dAsara naMbida dAsanu nAnu |
dOShi nAnAdeDE dOSha rahita puNya –
rASi puraMdaradAsara myAle dayaSaradhi^^iTTu |
nI salahO yenna pASava biDisutta |
lEsu pAlipa namma vijayaviTThalarEya |
bIsi bIsATadirO binkada daiva || 4 ||

Adi tALa

ninnane pondide ninnane sEride |
ninnane pADide ninna koMDADide |
ninnanGri yugaLavannu naMbide pA –
vanna carita ranga enna salahadire |
ninnAru oppuvaru pannagAri vAhanna vijayaviTThala |
enna biDade kAyO anAtharoDeyA | || 5 ||

jatte

duruLa nenade durjanarige oppisade |
paripAlisi sAku vijayaviTThala rEya || 6 ||

 

2 thoughts on “Srinivasa suladhi – 2(Vijaya dasaru)

Leave a comment