ರಾಘವೇಂದ್ರರ ವಿಜಯ ಪೇಳುವೆ
ರಾಘವೇಂದ್ರರ ಕರುನ ಬಲದಲಿ
ರಾಘವೇಂದ್ರರ ಭಕುತರಾದವರಿದನ ಕೇಳುವುದು||
ಆನಮಿಪೆ ಗುರುರಾಯನಂಘ್ರಿಗೆ ಸಾನುರಾಗದಿ ಸರ್ವಕಾಲಕೆ
ದೀನಜರುದ್ಧಾರಿ ಜನರಘಹಾರಿ ಶುಭಕಾರಿ
ನೀನೆಯೆನುತಲಿ ದೀನನಾಗೀ ನಾನೆ ನಿನ್ನನು ಬೇದಿಕೊಂಬೆನೊ
ನೀನೆ ಪಾಲಿಸು ಪ್ರಭುವೆ ಸ್ವಶಿತ ಜನರಸುರತರುವೆ ||೧||
ಆ ಯುಗದಿ ಪ್ರಹ್ಲಾದನಾಮಕ
ರಾಯನೀ ಯುಗದಲ್ಲಿ ವ್ಯಾಸಾ-
ರಾಯನಾಗ್ಯವತರಿಸಿ ದಶಮತಿಮತವ ಸ್ಥಾಪಿಸಿದ
ತೋಯಜಾಂಬಕಲಕುಮಿಪತಿನಾ-
ರಾಯಣನೆ ತಾ ಸರ್ವರುತ್ತಮ
ತೋಯಜಾಸನದಿವಿಜರೆಲ್ಲರು ಹರಿಗೆ ಸೇವಕರೂ ||೨||
ಇನಿತು ಶಾಸ್ತ್ರದ ಸಾರ ತೆಗೆದೂ
ವಿನಯದಿಂದಲಿ ತನ್ನ ಭಜಿಸುವ
ಜನರ ಸಂತತಿಗರುದಿ ಮುಕುತಿಯ ಪಥವ ತೋರಿಸಿದ
ಮುನುಕುಲೋತ್ತಮ ಯತಿಶಿರೋಮಣೀ
ಕನಕದಾಸನ ಪ್ರಿಯನು ಸಂಯಮಿ-
ಗಣಕೆ ರಾಜನು ಯದುವರೇಶನ ಭಜಿಸಿ ತಾ ಮೆರೆದ ||೩||
ಈತ ಪುಟ್ಟಿದ ಚರ್ಯವರುಹುವೆ
ಭೂತಳದೊಳಾಶ್ಚರ್ಯವೆಂದಿಗು
ಭೂತ ಭಾವಿ ಪ್ರವರ್ತಕಾಲದಲಿಲ್ಲ ನರರೊಳಗೆ
ಜಾತನಾದರು ಜನವಿಲಕ್ಷಣ
ವೀತದೋಷ ವಿಶೇಷ ಮಹಿಮನು
ಖ್ಯಾತನಾದನು ಜಗದಿ ಸರ್ವದ ಜನನ ಮೊದಲಾಗಿ ||೪||
ದಕ್ಷಿಣದಿ ಬನ್ನೂರು ಗ್ರಾಮದಿ
ದಕ್ಷನೆನಿಸಿದ ದೇಶಮುಖರಲಿ
ಲಕ್ಷ್ಮಿನಾಯಕನೆನಿಸಿ ಲೋಕದಿ ಖ್ಯಾತನಾಗಿಪ್ಪ
ಯಕ್ಷನಾಥನ ಧನದಿ ತಾನೂ
ಲಕ್ಷಿಕರಿಸನು ಯೆನಿಪನಾತಗೆ
ಲಕ್ಷಣಾಂಕಿತಳಾದ ಜಯವತಿಯೆಂಬ ಸತಿಯುಯುಯುಂಟು ||೫||
ಜಲಜ ಜಯಿಸುವ ವದನ ನೈದಲಿ
ಗೆಲುವ ನಿರ್ಮಲ ನಯನಯುಗಳವು
ಲಲಿತ ಚಂಪಕನಾಸ ದರ್ಪಣಕದಪು ಶುಭಕರಣ
ಚಲುವದಾಡಿಯ ರದನ ಪಂಕ್ತಿಯು
ಕಲಿತರಕ್ತಾಧರದಿ ಮಿನುಗುತ
ಚಲಿಪಮಂದಸ್ಮಿತದಿ ಶೋಭಿಪ ಚುಬುಕ ರಾಜಿಪುದು ||೬||
ಕಂಬು ಪೋಲುವ ಕಂಠದೇಶವು
ಕುಂಭಿ ಶುಂಡ ಸಮಾನ ಬಾಹೂ
ಅಂಬುಜೋಪಮ ಹಸ್ತಯುಗಳವು ಕಾಂಚನಾಭರಣ
ರಂಭೆಯುಳ ಕುಚಯುಗಳ ಸುಂದರ
ಕುಂಭ ಪೋಲ್ವವು ಉದರದೇಶವು
ರಂಭಪರಣ ಸುರೋಮರಾಜಿತ ಮೂರು ವಳಿಯುಪ್ಪೆ ||೭||
ಗುಂಭನಾಭಿಯ ಸುಳಿಯು ಸುರನದಿ
ಯಂಬುಸುಳಿಯಂದದಲಿ ನಾರಿ ನಿ-
ತಮ್ಬಪುಲಿನವು ಕದಲಿಊರು ಜಾನುಕನ್ನಡಿಯು
ಶಂಬರಾರಿಯ ತೂಣ ಜಂಘಯು
ಅಂಬುಜೋಪಮಚರಣ ಪುತ್ಥಳಿ-
ದೊಂಬೆಯಂದದಿ ಸಕಲಭೂಷಣದಿಂದಲೊಪ್ಪಿದಳು ||೮||
ಶಿರಿಯೋ ಭಾಗ್ಯದಿ ಚಲ್ವಿನಿಂದ-
ಪ್ಸರಯೋ ರೂಪದಿ ರತಿಯೊ ಕ್ಷಮದಲಿ
ಧರೆಯೊ ದಯದಲಿ ನಿರುತ ವರಮುನಿಸತಿಯೊ ಪೇಳ್ವೆರ್ಗೆ
ಅರಿಯದಂತಾ ನಾರಿ ಶಿರೋಮಣಿ
ಪಿರಿಯ ಶಿರಿಗುಣರೂಪದಿಂದಲಿ
ಮೆರೆಯುತಿಪ್ಪಳು ರಾಜಸದನದಿ ಲಕುಮಿ ತೆರೆದಂತೆ ||೯||
ದೇಶಪತಿಯತಿವೃದ್ಧನಾತಗೆ
ಕೂಸುಯಿಲ್ಲದೆ ಬಹಳ ಯೋಚಿಸೆ
ದೇಶತಿರುಗುತ ಬಂದನಾ ಬ್ರಹ್ಮಣ್ಯಮುನಿರಾಯ
ವಾಸಗೈಸಲು ತನ್ನ ಮನಿಯಲಿ
ಮಾಸನಾಲಕರಲ್ಲಿ ಯತಿವರ-
ಈಶ ಸೇವೆಯಮಾಡಿ ತಾನಾ ಮುನಿಯ ಬೆಸಗೊಂಡ ||೧೦||
ಎನಗೆ ಸುತ ಸಂತಾನವಿಲ್ಲವೊ
ಜನುಮಸಾರ್ಥಕವಾಗೊ ಬಗೆಯೂ
ಎನಗೆ ತೋರದು ನೀವೆ ಯೋಚಿಸಿ ಸುತನ ನೀಡುವುದು
ಎನಲು ನರವರ ವಚನಲಾಲಿಲಿ
ಮುನಿಕುಲೋತ್ತಮ ನುಡಿದ ನರವರ!
ನಿನಗೆ ಸಂತತಿಯುಂಟು ಕೃಷ್ಣನ ಭಜಿಸು ಸತಿಸಹಿತ ||೧೧||
ಎಂದು ಮುನಿವರ ಚಂದದಿಂದಲಿ
ಒಂದು ಫಲವಭಿ ಮಂತ್ರಿಸಿತ್ತೂ
ಮುಂದಿನೀದಿನಕೊಬ್ಬ ತನಯನು ನಿನಗೆ ಪುಟ್ಟುವನು
ತಂದು ನೀವಾಸುತನ ನಮಗೇ
ಪೊಡಿಸುವದೂ ನಿಮಗೆ ಮತ್ತೂ
ಕಂದನಾಗುವ ನಿಜವು ವಚನವು ಕೇಳೋ ನರಪತಿಯೆ ||೧೨||
ಯಾದವೇಶನ ಭಜನೆ ಗರ್ಹನು
ಆದ ಬಾಲಕ ಗರ್ಭದಿರುವನು
ಆದರಿಸಿ ಪರಿಪಾಲಿಸೂವದು ನಮ್ಮದಾಗಮನ
ವಾದನಂತರ ನಿನ್ನ ಸದನದಿ
ಹಾದಿ ನೋಡುತ ನಾಲ್ಕು ತಿಂಗಳು
ಸಾಹಿಸೂವೆವುಯೆಂದು ಯತಿವರ ನುಡಿದು ತಾ ನಡೆದ ||೧೩||
ಪೋಗಲಾ ಯತಿನಾಥ ಮುಂದಕೆ
ಆಗಲಾತನ ಸತಿಯು ಗರ್ಭವ
ಜಾಗು ಮಾಡದೆ ಧರಿಸಿ ಮೆರೆದಳು ಆಯತಾಂಬಕೆಯು
ನಾಗರೀಯರ ಸತಿಯರೆಲ್ಲರು
ಆಗ ಸಂತಸದಿಂದ ನೆರೆದರು
ಬ್ಯಾಗ ರಾಜನ ರಾಣಿ ಗರ್ಭಿಣಿಯಾದುದಾಶ್ಚರ್ಯ ||೧೪||
ಸಣ್ನ ನಡು ತಾ ಬೆಳೆಯೆ ತ್ರಿವಳಿಯು
ಕಣ್ಣುಗಳಿಗೇ ಕಾಣದಾಗಲು
ನುಣ್ಣಗೇ ಮೊಗವರಿಯೆ ಚೂಚುಕವೆರಡು ಕಪ್ಪಾಗೆ
ತಿಣ್ನ ಪಚ್ಚಳ ಬೆಳೆಯೆ ಗಮನವು
ಸಣ್ಣದಾಗಲು ಬಿಳುಪು ಒಡೆಯೇ
ಕಣ್ಣು ಪೂರ್ಬಿನ ಮಿಂಚು ಬೆಳೆಯಲು ಗರ್ಭಲಾಂಛನವು ||೧೫||
ಬಿಳಿಯ ತಾವರೆಯೊಳಗೆಯಿರುತಿಹ
ಅಲಿಯ ಸಮುದಾಯವೇನೋ ಆಗಸ
ದೊಳಗೆ ದಿನದಿನ ಬೆಳೆಯೋ ಚಂದ್ರನ ಕಳೆಯೊಕನಕಾದ್ರಿ
ಯೊಳಗೆ ರಾಜಿಪ ಅಂಬುಧರತೆರ
ಪೊಳೆವ ಕಾಂತಿಯ ಚಲ್ವಿನಾನನ-
ದೊಳಗೆ ಮಿರುಗುವ ಗುರುಳುಗಳೊ ಸಲೆನಡುವಿನೋಳ್ತಾನೆ ||೧೬||
ಪೊಳೆವ ಗರ್ಭವಿದೇನೊ ಕುಚಯುಗ
ತೊಳಪು ಚೂಚುಕ ಕಪ್ಪಿನಿಂದಲಿ
ಪೊಳೆಯುತಿರ್ದಳು ಗರ್ಭಧಾರಣೆಮಾಡಿ ವನಜಾಕ್ಷಿ
ತಳಿರುಪೋಲುವ ಅಡಿಗಳಿಂದಲಿ
ಚಹಲುವಕದಳೀ ಊರುಯುಗದೀ
ಬಲಕಿ ಬಾಗುತ ನಡೆಯೊ ಲಲನೆಯೊ ನಡಿಗೆ ಶೋಭಿಪದು ||೧೭||
ಚಂದ್ರಮುಖಿಯಳ ಜಠರಮೆಂಬಾ
ಚಂದ್ರಕಾಂತದ ಮಣೀಯ ಮಧ್ಯದಿ
ಚಂದ್ರನಂದದಿ ಸಕಲಲೋಕನಂದಕರವಾದ
ಚಂದ್ರಬಿಂಬವ ಜೈಪ ಶಿಶು ತಾ
ಇಂದ್ರನಂದದಿ ಗರ್ಭದಿರಲೂ
ಸಾಂದ್ರತನುರುಚಿಯಿಂದಲೊಪ್ಪುತ ಮೆರೆದಳಾ ಜನನೀ ||೧೮||
ಕಾಂಚನಾಂಗಿಯ ಗರ್ಭಧಾರಣ
ಲಾಂಛನೀ ಪರಿ ನೋದಿ ನೃಪ ರೋ-
ಮಾಂಚನಾಂಕಿತ ಹರುಷದಿಂದಲಿ ಭೂಮಿ ದಿವಿಜರಿಗೆ
ವಾಂಛಿತಾರ್ಥವನಿತ್ತು ಮನದಲಿ
ಚಂಚಲಿಲ್ಲದೆ ನಾರಿಮಣಿಗೇ
ಪಂಚಮಾಸಕೆ ಕುಸುಮಮುಡಿಸೀ ಮಾಡ್ದ ಸೀಮಂತ ||೧೯||
ನಾರಿಗಾಗಲು ಬಯಕೆ ಪರಿಪರಿ
ಆರುತಿಂಗಳು ಪೋಗುತಿರಲೂ
ದೂರ ದೇಶದಲಿಂದಲಾಗಲೆ ಬಂದ ಮುನಿರಾಯ
ವಾರಿಜಾಕ್ಷಿಯು ಯತಿಯ ಪಾದಕೆ
ಸಾರಿನಮನವಮಾಡೆ ಗುರುವರ
ಧೀರತನಯನ ಬ್ಯಾಗ ನೀ ಪಡಿಯೆಂದು ಹರಸಿದನು ||೨೦||
ಬಾಲೆಬರಿರೊಳಗಿಪ್ಪ ಶಿಶು ಗೋ-
ಪಾಲಪದಯುಗ ಭಕ್ತನವನಿಗೆ
ಪಾಲಕಾಗಿಹ ಹರಿಯ ಮಜ್ಜನಮಾಡಿ ನಿತ್ಯದಲಿ
ಪಾಲಿನಿಂದಲಿ ಗರ್ಭದಲೆ ತಾ
ಬಾಲಗೀಪರಿ ಜ್ಞಾನವಿತ್ತೂ
ಪಾಲಿಸೀ ಬ್ರಹ್ಮಣ್ಯತೀರ್ಥರು ನಿಂತರಾಗಲ್ಲೇ ||೨೧||
ಬಳಿಕ ಬರಲಾಪ್ರಸವಕಾಲದಿ
ಪೊಳೆವ ಮಿಸುಣಿಯ ಪಾತ್ರೆಯೊಳಗೇ
ತೊಳಪು ಸುಂದರ ಬೊಬೆಯಂದದಿ ಶಿಶುವು ಕಣ್ಗೊಪ್ಪೆ
ಕಳೆಗಳಿಂದಲಿ ನಭದಿ ದಿನದಿನ
ಬೆಳೆವ ಚಂದ್ರನೊ ಎನಿಪ ಬಾಲಕ
ಬೆಳಗುತೋರಿದ ಸೂತಿಕಾಗೃಹದೊಳಗೆ ತಾ ಜನಿಸೀ ||೨೨||
ಅಂಬುಜಾಪ್ತನು ತಾನೆಯಿಳದೀ
ಕುಂಭಿಣೀಯಲಿ ಬಂದನೇನೋ
ತುಂಬಿಸೂಸುವ ತೇಜದಿಂದಲಿ ಬಾಲ ಶೋಭಿಸಿದ
ಸಂಭ್ರಮಾಯಿತು ಮುನಿಗೆ ಹರಿಪ್ರತಿ-
ಬಿಂಬನಾಗಿಹ ಬಾಲರೂಪವ-
ನಂಬಕದ್ವಯದಿಂದ ನೋಡೀ ಹರುಷಪುಲಕಾಂಕ ||೨೩||
ಆಗ ಯತಿವರ ಬಂದು ಶಿಶುವಿನ
ಬೇಗ ತಾ ಸ್ವೀಕರಿಸಿ ನಡೆದನು
ಸಾಗರೋದ್ಭವ ಸುಧೆಯು ಕಲಶವ ಗರುಡನೊಯ್ದಂತೆ
ಜಾಗುಮಾಡದೆ ಮುನಿಪ ತಾನನು
ರಾಗದಿಂದಲಿ ಶಿಶುವಿನೀಪರಿ
ತೂಗಿ ಲಾಲಿಸಿ ಪಾಲುಬೆಣ್ಣೆಯ ತಾನೆ ನೀಡುತಲಿ ||೨೪||
ಇಂದು ತೆರದಲಿ ಬಾಲ ಕಳೆಗಳ
ಹೊಂದಿ ದಿನದಿನ ವೃದ್ಧಿಯೆಯ್ದಿದ
ಕಂದರಂದದಿ ಹಟಗಳಿಲಲ್ಲವೊ ಮೂರ್ಖತನವಿಲ್ಲಾ
ಮಂದಮತಿ ತಾನಲ್ಲ ಬುಧವರ
ವೃಂದವಂದಿತ ಪಾದಪಂಕಜ
ದಿಮ್ದ ಶೋಭಿತನಾಗಿ ಮಠದಲಿ ಪೊಂದಿಯಿರುತಿಪ್ಪ ||೨೫||
ಪೊಳೆವ ಪಲ್ಗಳು ಬಾಯಲೊಪ್ಪಿಗೆ
ತೊಳಪು ನಗೆಪುಖ ಸೊಬಗು ಸೂಸುವ
ಹೊಳೆವ ಕಂಗಳು ನುಣುಪುಪಣೆ ಮುಂಗುರುಳು ತಾ ಹೊಳೆಯೆ
ಸುಳೀಯನಾಭಿಯು ಉದರವಳಿತ್ರಯ
ಎಳೆಯ ಶಂಕರಿ ತೋಳು ಯುಗಳವು
ಜೋಲಿದಂಬೇಗಾಲು ನಡಿಗೆಯ ಸೊಗಸು ಶೋಭಿಪದೂ ||೨೬||
ಧೂಳೀಸೋಕಲು ಸುಂದರಾಂಗವು
ನೀಲ ಮೇಘದ ತೆರನೆ ತೋರ್ಪದು
ನೀಳಮಾರ್ಗದಿ ನಲಿದು ನಡೆವನು ಬೀಳುತೇಳುತಲಿ
ತಿಳಿಯದತಿಸಂತೋಷವಾರಿಧಿ
ಯೊಳಗೆ ಸಂತತ ಮುನಿಪ ಮುಳುಗಿದ
ಪೇಳೆಲೆನವಶವಲ್ಲ ಬಾಲನ ಲೀಲೆ ಸುಖಮಾಲೆ ||೨೭||
ಬಾಲೆ ಲೀಲೆಯ ನೋದಿ ಹಿಗುಉವ
ಲಾಲನೆಯ ತಾ ಮಾಡಿ ಪಾಡುವ
ಲೋಲಕುಂತಲ ಮುಖವ ಚಿಂಬಿಪ ಗೋಪಿಯಂದದಲಿ
ಪಾಲಸಾಗರ ಶಯನ ಪದಯುಗ
ಲೋಲಬಾಲಕ ಎನಗೆ ದೊರೆಗನು
ಪೇಳಲೇನಿಹದೆನ್ನ ಪುಣ್ಯದ ಫಲವೆ ಫಲಿಸಿಹುದೋ ||೨೮||
ಆಡುತಿಹನೆಳೆ ಮಕ್ಕಳೊಡನೇ
ಮಾಡುತಿಹ ತಾನೊಮ್ಮೆ ಲೀಲೆಯ
ನೋಡುತಿಹ ಆಶ್ಚರ್ಯಗೊಳುತಲಿ ಬಾಲರಾಟವನೂ
ಕೂಡೆ ಮನಿಮನಿ ತಿರುಗತಿಪ್ಪನು
ರೂಢಿಜನರನು ಮೋಹಗೊಳಿಸುವ
ಗಾಡಿಕಾರನು ಕೃಷ್ಣತೆರದಲಿ ಲೀಲೆಮಾಡಿದನು ||೨೯||
ಪಾಡುವಂ ಜನರನ್ನು ಪರಿಪರಿ
ನೋಡುವಂ ಥರಥರದಿ ಹಾಸ್ಯವ
ಮಾಡುವಂ ತಾನರ್ಥಿಸುತಲವರೊಡನೆ ಇರುತಿಪ್ಪ
ಕ್ರೀಡಿಸುತಲಾಪುರದ ಬಾಲರ
ಮೂಢಬಾಲನ ತೆರದಿ ತೋರಿದ ಗೂಢಬಾಲಕನೂ ||೩೦||
ಪಿಂತೆ ನಾರದಮುನಿಯ ವಚನವ
ಚಿಂತಿಸೀಪರಿ ತನ್ನ ಮನದಲಿ
ಕಂತುಜನಕನ ಸರ್ವಕಾಲದಿ ನೋಡಿ ನಲಿತಿಪ್ಪ
ಅಂತರಂಗದಿ ಶಿರಿಯ ರಮಣನ
ಇಂತು ಭಜನೆಯಗೈದು ಬಾಲಕ
ಅಂತುತಿಳಿಸದೆ ತಾನೆ ಪ್ರಾಕೃತರಂತೆಯಿರುತಿಪ್ಪ ||೩೧||
ಪೋತಗಾಯಿತು ಪಂಚವತ್ಸರ
ನೀತದೇಸರಿ ಧೂಳಿಯಕ್ಷರ
ಪ್ರೀತಿಯಿಂದಲಿ ಬರೆದು ತೋರಲಿ ಬಾಲ ತಾ ನುಡಿದ
ತಾನ ಎನಯ ಮಾತು ಕೇಳೆಲೊ
ಧಾತನಾಂಡಕೆ ಮುಖ್ಯ ಗುರುಜಗ
ನ್ನಾಥ ವಿಠಲನು ತಾನೆ ಪೂರ್ಣನು ಸರ್ವರುತ್ತಮನು ||೩೨||
rAGavEndrara vijaya pELuve
rAGavEndrara karuna baladali
rAGavEndrara BakutarAdavaridana kELuvudu||
Anamipe gururAyananGrige
sAnurAgadi sarvakAlake
dInajaruddhAri janaraGahAri SuBakAri
nIneyenutali dInanAgI
nAne ninnanu bEdikoMbeno
nIne pAlisu praBuve svaSita janarasurataruve ||1||
A yugadi prahlAdanAmaka
rAyanI yugadalli vyAsA-
rAyanAgyavatarisi daSamatimatava sthApisida
tOyajAMbakalakumipatinA-
rAyaNane tA sarvaruttama
tOyajAsanadivijarellaru harige sEvakarU ||2||
initu SAstrada sAra tegedU
vinayadindali tanna Bajisuva
janara santatigarudi mukutiya pathava tOrisida
munukulOttama yatiSirOmaNI
kanakadAsana priyanu saMyami-
gaNake rAjanu yaduvarESana Bajisi tA mereda ||3||
Ita puTTida caryavaruhuve
BUtaLadoLAScaryavendigu
BUta BAvi pravartakAladalilla nararoLage
jAtanAdaru janavilakShaNa
vItadOSha viSESha mahimanu
KyAtanAdanu jagadi sarvada janana modalAgi ||4||
dakShiNadi bannUru grAmadi
dakShanenisida dESamuKarali
lakShminAyakanenisi lOkadi KyAtanAgippa
yakShanAthana dhanadi tAnU
lakShikarisanu yenipanAtage
lakShaNAMkitaLAda jayavatiyeMba satiyuyuyunTu ||5||
jalaja jayisuva vadana naidali
geluva nirmala nayanayugaLavu
lalita caMpakanAsa darpaNakadapu SuBakaraNa
caluvadADiya radana panktiyu
kalitaraktAdharadi minuguta
calipamaMdasmitadi SOBipa cubuka rAjipudu ||6||
kaMbu pOluva kanThadESavu
kuMBi SunDa samAna bAhU
aMbujOpama hastayugaLavu kAncanABaraNa
raMBeyuLa kucayugaLa suMdara
kuMBa pOlvavu udaradESavu
raMBaparaNa surOmarAjita mUru vaLiyuppe ||7||
guMBanABiya suLiyu suranadi
yaMbusuLiyandadali nAri ni-
tambapulinavu kadali^^Uru jAnukannaDiyu
SaMbarAriya tUNa janGayu
aMbujOpamacaraNa putthaLi-
doMbeyandadi sakalaBUShaNadiMdaloppidaLu ||8||
SiriyO BAgyadi calvininda-
psarayO rUpadi ratiyo kShamadali
dhareyo dayadali niruta varamunisatiyo pELverge
ariyadantA nAri SirOmaNi
piriya SiriguNarUpadindali
mereyutippaLu rAjasadanadi lakumi teredante ||9||
dESapatiyativRuddhanAtage
kUsuyillade bahaLa yOcise
dESatiruguta bandanA brahmaNyamunirAya
vAsagaisalu tanna maniyali
mAsanAlakaralli yativara-
ISa sEveyamADi tAnA muniya besagonDa ||10||
enage suta santAnavillavo
janumasArthakavAgo bageyU
enage tOradu nIve yOcisi sutana nIDuvudu
enalu naravara vacanalAlili
munikulOttama nuDida naravara!
ninage santatiyuMTu kRuShNana Bajisu satisahita ||11||
endu munivara candadindali
ondu PalavaBi mantrisittU
mundinIdinakobba tanayanu ninage puTTuvanu
tandu nIvAsutana namagE
poDisuvadU nimage mattU
kandanAguva nijavu vacanavu kELO narapatiye ||12||
yAdavESana Bajane garhanu
Ada bAlaka garBadiruvanu
Adarisi paripAlisUvadu nammadAgamana
vAdanantara ninna sadanadi
hAdi nODuta nAlku tingaLu
sAhisUvevuyendu yativara nuDidu tA naDeda ||13||
pOgalA yatinAtha mundake
AgalAtana satiyu garBava
jAgu mADade dharisi meredaLu AyatAMbakeyu
nAgarIyara satiyarellaru
Aga santasadinda neredaru
byAga rAjana rANi garBiNiyAdudAScarya ||14||
saNna naDu tA beLeye trivaLiyu
kaNNugaLigE kANadAgalu
nuNNagE mogavariye cUcukaveraDu kappAge
tiNna paccaLa beLeye gamanavu
saNNadAgalu biLupu oDeyE
kaNNu pUrbina mincu beLeyalu garBalAnCanavu ||15||
biLiya tAvareyoLageyirutiha
aliya samudAyavEnO Agasa
doLage dinadina beLeyO chandrana kaLeyokanakAdri
yoLage rAjipa aMbudharatera
poLeva kAntiya calvinAnana-
doLage miruguva guruLugaLo salenaDuvinOLtAne ||16||
poLeva garBavidEno kucayuga
toLapu cUcuka kappinindali
poLeyutirdaLu garBadhAraNemADi vanajAkShi
taLirupOluva aDigaLindali
cahaluvakadaLI UruyugadI
balaki bAguta naDeyo lalaneyo naDige SOBipadu ||17||
chandramuKiyaLa jaTharameMbA
chandrakAntada maNIya madhyadi
chandranandadi sakalalOkanandakaravAda
chandrabiMbava jaipa SiSu tA
indranandadi garBadiralU
sAndratanuruciyindalopputa meredaLA jananI ||18||
kAncanAngiya garBadhAraNa
lAnCanI pari nOdi nRupa rO-
mAncanAnkita haruShadindali BUmi divijarige
vAnCitArthavanittu manadali
cancalillade nArimaNigE
pancamAsake kusumamuDisI mADda sImaMta ||19||
nArigAgalu bayake paripari
ArutingaLu pOgutiralU
dUra dESadalindalAgale banda munirAya
vArijAkShiyu yatiya pAdake
sArinamanavamADe guruvara
dhIratanayana byAga nI paDiyendu harasidanu ||20||
bAlebariroLagippa SiSu gO-
pAlapadayuga Baktanavanige
pAlakAgiha hariya majjanamADi nityadali
pAlinindali garBadale tA
bAlagIpari j~jAnavittU
pAlisI brahmaNyatIrtharu nintarAgallE ||21||
baLika baralAprasavakAladi
poLeva misuNiya pAtreyoLagE
toLapu sundara bobeyaMdadi SiSuvu kaNgoppe
kaLegaLindali naBadi dinadina
beLeva candrano enipa bAlaka
beLagutOrida sUtikAgRuhadoLage tA janisI ||22||
aMbujAptanu tAneyiLadI
kuMBiNIyali baMdanEnO
tuMbisUsuva tEjadiMdali bAla SOBisida
saMBramAyitu munige hariprati-
biMbanAgiha bAlarUpava-
naMbakadvayadinda nODI haruShapulakAnka ||23||
Aga yativara baMdu SiSuvina
bEga tA svIkarisi naDedanu
sAgarOdBava sudheyu kalaSava garuDanoydaMte
jAgumADade munipa tAnanu
rAgadiMdali SiSuvinIpari
tUgi lAlisi pAlubeNNeya tAne nIDutali ||24||
indu teradali bAla kaLegaLa
hondi dinadina vRuddhiyeydida
kandarandadi haTagaLilallavo mUrKatanavillA
mandamati tAnalla budhavara
vRundavandita pAdapankaja
dimda SOBitanAgi maThadali pondiyirutippa ||25||
poLeva palgaLu bAyaloppige
toLapu nagepuKa sobagu sUsuva
hoLeva kangaLu nuNupupaNe munguruLu tA hoLeye
suLIyanABiyu udaravaLitraya
eLeya Sankari tOLu yugaLavu
jOlidaMbEgAlu naDigeya sogasu SOBipadU ||26||
dhULIsOkalu sundarAMgavu
nIla mEGada terane tOrpadu
nILamArgadi nalidu naDevanu bILutELutali
tiLiyadatisantOShavAridhi
yoLage santata munipa muLugida
pELelenavaSavalla bAlana lIle suKamAle ||27||
bAle lIleya nOdi higu^^uva
lAlaneya tA mADi pADuva
lOlakuntala muKava ciMbipa gOpiyandadali
pAlasAgara Sayana padayuga
lOlabAlaka enage doreganu
pELalEnihadenna puNyada Palave PalisihudO ||28||
ADutihaneLe makkaLoDanE
mADutiha tAnomme lIleya
nODutiha AScaryagoLutali bAlarATavanU
kUDe manimani tirugatippanu
rUDhijanaranu mOhagoLisuva
gADikAranu kRuShNateradali lIlemADidanu ||29||
pADuvaM janarannu paripari
nODuvaM tharatharadi hAsyava
mADuvaM tAnarthisutalavaroDane irutippa
krIDisutalApurada bAlara
mUDhabAlana teradi tOrida gUDhabAlakanU ||30||
pinte nAradamuniya vacanava
cintisIpari tanna manadali
kantujanakana sarvakAladi nODi nalitippa
antarangadi Siriya ramaNana
intu Bajaneyagaidu bAlaka
antutiLisade tAne prAkRutaranteyirutippa ||31||
pOtagAyitu pancavatsara
nItadEsari dhULiyakShara
prItiyindali baredu tOrali bAla tA nuDida
tAna enaya mAtu kELelo
dhAtanAnDake muKya gurujaga
nnAtha viThalanu tAne pUrNanu sarvaruttamanu ||32||
One thought on “Raghavendra Vijaya – SANDHI 03”