guru jagannatha dasaru · MADHWA · raghavendra · raghavendra vijaya

Raghavendra Vijaya – SANDHI 02

ರಾಘವೇಂದ್ರರ ವಿಜಯ ಪೇಳುವೆ
ರಾಘವೇಂದ್ರರ ಕರುಣಬಲದಲಿ
ರಾಘವೇಂದ್ರರ ಭಕ್ತರಾದವರಿದನು ಕೇಳುವುದು ||

ಆದಿಯುಗದಲಿ ಧರಣಿ ಮಾನಿನಿ
ಆದಿ ದೈತ್ಯರ ಭಾಧೆತಾಳದೆ
ವೇದನಂಘ್ರಿಯ ಸಾರ್ದು ತನ್ನಯ ವ್ಯಸನ ಪೇಳಿದಳು
ಆದಿಕವಿ ಚತುರಾಸ್ಯನೀಪರಿ
ಮೇದಿನೀ ಶ್ರಮವಚನ ಲಾಲಿಸಿ
ಬಧೆಪರಿಹರ ಮಾಳ್ಪೆನೆಂದೂ ನುಡಿದೂ ತಾ ನಡೆದ ||೧||

ಶ್ವೇತದಿವಿಯನು ಸಾರ್ದು ಲಕುಮಿಸ-
ಮೇತಹರಿಯನು ತುತಿಸಿ ಭೂಮಿಯ
ಭೀತಿ ತಾ ಪರಿಹರಸೊಗೋಸುಗ ಹರಿಯ ಬೆಸಗೊಂಡ
ನಾಥ! ದಿತಿಜರ ಭಾರವತಿಶಯ
ಘಾತಿಪರು ತಾವಾರೊ ತಿಳೀಯೆನು
ತಾತ! ನೀ ಪರಿಹಾರ ಮಾಡೀ ಭೀತಿ ಬಿಡಿಸುವುದು ||೨||

ಪುರುಟ ಲೋಚನ ಸ್ವರ‍್ರ್ಣ ಕಶಿಪು
ಉರುಟು ದೈತ್ಯರು ಸರ್ವಜನರನ
ಚರಟ ಹಾರಿಸಿ ಸಕಲ ಲೋಕಕೆ ದುಃಖ ಕೊಡುತಿಹರು
ಉರುಟು ಮಾತುಗಳಲ್ಲ ಶಿರದಲಿ
ಕರವ ಸಂಪುಟ ಮಾಡಿ ಬೇಡುವೆ
ಜರಠ ದೈತ್ಯರ ತರಿದು ಭೂಮಿಗೆ ಸುಖವ ನೀಡೆಂದೆ ||೩||

ಚರುತವನನ ವಚನ ಕೇಳೀ
ಚತುರ ಭುಜ ತಾನಾದ ಹರಿಯೂ
ಚತುರ ತನದಲಿ ನಾನೆ ಸಂಹರ ಮಾಳ್ಪೆ ಚತುರಾಸ್ಯ
ಧೃತದಿ ನಡೆಯಲೊ ನಿನ್ನ ಸ್ಥಾನಕೆ
ಯತನ ಮಾಡುವೆ ಶ್ರೀಘ್ರವಾಗಿ
ಜತನ ಮಾಡಲೊಯನ್ನ ವಚನವು ಎಂದಿಘುಸಿಯಲ್ಲ ||೪||

ತಾನೆ ಅವತರ ಮಾಡೊಗೋಸುಗ
ಏನು ನೆವನವಮಾಡಲೆಂದೂ
ನಾನಾ ಯೋಚನೆಮಾಡಿ ಯುಕುತಿಯ ತೆಗೆದ ಹರಿ ತಾನು
ಸಾನುರಾಗದಿ ಸೇವೆ ಮಾಡುತ-
ಧೀನದೊಳಗಿರುತಿಪ್ಪ ವಿಷ್ವ-
ಕ್ಸೇನನಾಮಕ ವಾಯುಪುತ್ರನು ಶೇಷನವತಾರ ||೫||
ಎಂದಿಗಾದರು ನಿನ್ನೊಳಿಪ್ಪೆನು
ನಂದದಲೆ ನಾ ಪಂಚ ರೂಪದಿ
ಕುಂದದಲೆ ತಾ ಮಿನುಗುತಿಪ್ಪದು ಪ್ರಾಣನಾವೇಶ
ಪೊಂದಿ ಶೋಭಿತನಾಗಿ ಈ ಪುರ-
ದಿಂದ ಜಾಗ್ರತಿ ಭೂಮಿತಳಕೇ
ಇಂದು ನೀ ನುಡಿಯೆಂದು ಶ್ರೀಹರಿ ನುಡಿದ ದೂತನಿಗೆ ||೬||

ಸ್ವಾಮಿ ಲಾಲಿಸೊ ನಿನ್ನ ಶಿಭತಮ-
ಧಾಮಶಿರಿ ವೈಕುಂಠದಲಿ
ಆ ಮನೋಹರ ದೂತನೊಚನವ
ಸೀಮೆಯಿಲ್ಲದೆ ಎನಗೆ ನುಡಿದತಿ
ತಾಮಸಾತ್ಮಕ ದೈತ್ಯ ಕುಲದಲ್ಲಿ ಜನಿಸು ಪೋಗೆಂದ ||೭||

ಎನ್ನ ಶಾಪದಲಿಂದ ನೀ ತ್ವರ
ಮುನ್ನ ಪುಟ್ಟೆಲೊ ದೈತ್ಯರಾಗ್ರಣಿ
ಸ್ವಾನ್ನ ಕಶಿಪುನ ಧರ್ಮಸತಿಯಲ ಜಠರ ಮಂದಿರದಿ
ನಿನ್ನಗೋಸುಗ ನಾನೆ ನರಮೃಗ
ಘನ್ನ ರೂಪ ತಾಳಿ ಅಸುರನ
ಚೆನ್ನವಾಗೀ ಲೋಕದೀ ಕೀರ್ತಿ ನಿನಗಿಪ್ಪೆ ||೮||

ಅಂದ ಶ್ರೀಹರಿ ನುಡಿಯ ಮನಕೇ
ಗತ್ಂದು ವಿಶ್ವಕ್ಸೇನ ಮೊದಲೇ
ಬಂದು ಜನಿಸಿದನಸುರ ನಿಸತಿಯುದರದೇಶದಲಿ
ತಂದೆ ಸಂಭ್ರಮದಿಂದ ತನ್ನಯ
ಕಂದನನು ತಾ ಊರು ದೇಶದಿ
ತಂದು ಕೂಡಿಸಿ ಕೇಳ್ದ ಸುರರೊಳಗಾವನುತ್ತಮನು ||೯||

ವಾರಿಚಾಸನ ವಿಷ್ಣು ಪಶುಪತಿ
ಮೂರು ಜನರೊಳಗಾವನುತ್ತಮ
ಧೀರ ನೀ ಪೇಳೆನಗೆಯೆನುತಲಿ ತಾನೆ ಬೆಸಗೊಂಡ
ಸೂರಿ ತಾ ಪ್ರಹ್ಲಾದ ನುಡಿದನು
ನಾರ ಆಯನನ ಉಳಿದು ಸುರರೊಳು
ಆರು ಉತ್ತಮರಿಲ್ಲವೆಂದಿಗು ಹರಿಯೆ ಉತ್ತಮನು ||೧೦||

ಸರ್ವಗುಣ ಗನ ಪೂರ‍್ನ ಸರ್ವಗ
ಸರ್ವಪಾಲಕ ದೇವ ಸರ್ವಗ
ಸರ್ವತಂತರ್ಯಾಮಿ ತಾನೆ ಸ್ವತಂತ್ರ್ಯ ಪರಿಪೂರ‍್ರ್ಣ
ಶರ್ವಮೊದಲಾದಮರರೆಲ್ಲರು
ಸರ್ವಕಾಲದಿ ಹರಿಯಧೀನರು
ಸರ್ವಲೋಕಕೆ ಸಾರ್ವಭೌಮನು ಲಕುಮಿ ವಲ್ಲಭನು ||೧೧||

ಸುತನ ಮಾತನು ಕೇಳಿ ದೈತ್ಯರ
ಪತಿಯು ಕೋಪದಿ ತೋರಿಸೆನಲೂ
ವಿತತನಾಹರಿ ಸರ್ವದೇಶದಿ ಇರುವ ನೋಡೆಂದಾ
ಪತಿತ ದೈತ್ಯನು ಕಂಬ ತೋರೀ
ಯತನ ಪೂರ್ವಕ ಬಡಿಯಲಾಕ್ಷಣ
ಶ್ರೀತನ ವಚನವ ಸತ್ಯಮಾಡುವೆನೆಂದೂ ತಾ ಬಂದ ||೧೨||

ನರಮೃಗಾಕೃತಿತಾಳಿ ದುರುಳನ
ಕರುಳು ಬಗಿದಾ ನಾರಸಿಂಹನು
ತರುಳ ನಿನ್ನನು ಪೊರೆದನಾಗಲು ಕರುಣವಾರಿಧಿಯು
ಸ್ರಳ ಎನ್ನನು ಕಾಯೋ ಭವದೊಳು
ಮರುಳಮತಿ ನಾನಾಗಿ ಸಂತತ
ಇರುಳುಹಗಲೊಂದಾಗಿ ಪರಿಪರಿಮಾಳ್ಪೆ ದುಷ್ಕರ್ಮ ||೧೩||
ಆ ಯುಗದಿ ಪ್ರಹ್ಲಾದನಾಮಕ
ರಾಯನೆನಿಸೀ ಹರಿಯ ಭಜಿಸೀ
ತೋಯನಿಧಿ ಪರಿಪಸನ ಮಂಡಲವಾಳ್ದೆ ಹರಿಬಲದಿ
ರಾಯಕುಲದಲಿ ಸಾರ್ವಭೌಮನ-
ಚೇಯ ಮಹಿಮನು ಸತತ ಜಗದಲ-
ಮೇಯ ದಿಷಣನುಯೆಂದು ಸುರಮುನಿ ಮಾಡ್ದನುಪದೇಶ ||೧೪||

ಗರ್ಭದಲೆ ಪರತತ್ವ ಪದ್ಧತಿ
ನಿರ್ಭಯದಿ ನೀ ತಿಳಿದು ಆವೈ
ದರ್ಭಿರಮಣನೆ ಸರ್ವರುತ್ತಮನೆಂದು ಸ್ಥಾಪಿಸಿದೆ
ದುರ್ಭಗಾದಿಕವಾದವಗೆ ಸಂ-
ದರ್ಭವಾಗೋದೆ ನಿನ್ನ ಸೇವಾ
ನಿರ್ಭರಾಗದು ನಿನ್ನ ಜನರಿಗೆ ಸುಲಭವಾಗಿಹದೋ ||೧೫||

ದಿತಿಜ ಬಾಲ್ರಿಗೆಲ್ಲ ತತ್ವದಿ
ಮತಿಯ ಪುಟ್ಟಿಸಿ ನಿತ್ಯದಲಿ ಶ್ರೀ-
ಪತಿಯೆ ಸರ್ವೋತ್ತಮನುಯೆಂಬೀ ಜ್ಞಾನ ಬೊಧಿಸಿದೆ
ಇತರ ವಿಷಯ ವಿರಕ್ತಿ ಪುಟ್ಟಿತು
ಮತಿ ವಿಚಾರಾಸಕ್ತರಾದರು
ಸಿತನಸುತರೂ ಪೇಳ್ದುದೆಲ್ಲನು ಮನಕೆ ತರಲಿಲ್ಲ ||೧೬||

ನಿನ್ನ ಮತವನುಸರಿಸಿ ಬಾಲರು
ಘನ ಬೋಧ ಸುಭಕ್ತಿ ಪಡೆದರು
ಧನ್ಯರದರು ಹರಿಯ ಭಕುತರುಯೆನಿಸಿ ತಾವಂದು
ನಿನ್ನ ಮಹಿಮೆಗೆ ನಮನ ಮಾಡುವೆ
ಎನ್ನ ಪಾಲಿಸೊ ಭವದಿ ಪರಿಪರಿ
ಬನ್ನ ಬಡುವೆನೊ ದಾರಿಗಾಣದೆ ನಿನ್ನ ನಂಬಿದೆನೊ ||೧೭||

ಪರಮ ಪಾವನ ರೂಪೆ ನೀನೂ
ಹರಿಯ ಶಾಪದಿ ಅಸುರಭಾವವ
ಧರಿಸಿ ದೈತ್ಯನುಯೆನಿಸಿಕೊಂಡೆಯೊ ಸುರವರೋತ್ತಮನು
ಹರಿಗೆ ಹಾಸಿಗೆಯಾದ ಕಾರಣ
ಹರಿವಿಭೂತಿಯ ಸನ್ನಿಧಾನವು
ನಿರುತ ನಿನ್ನಲಿ ಪೇರ್ಚಿ ಮೆರೆವದು ಮರುತನೊಡಗೂರ‍್ಡಿ ||೧೮||

ಪ್ರಾಣನಿಹ ಪ್ರಹ್ಲಾದನೊಳಗೆ ಅ-
ಪಾನ ನಿಹ ಸಹ್ಲಾದನೊಳು ತಾ
ವ್ಯಾನನಿಹ ಕಹ್ಲಾದನೊಳುದಾನ ನಿಂತಿಹನೂ
ದಾನವಾಗ್ರಣಿ ಹ್ಲಾದನೊಳು ಸ-
ಮಾನ ತಾನನುಹ್ಲಾದನೊಳಗೇ
ಶ್ರೀನಿವಾಸನ ಪ್ರಾನ ಭಜಿಸುವ ಪಂಚರೂಪದಲಿ||೧೯||

ಐವರೊಳು ಹರಿ ವಾಯು ಕರುಣವು
ಈ ವಿಧಾನದಿ ಪೇರ್ಚಿ ಇರುವುದು
ಆವ ಜನ್ಮದ ಪುಣ್ಯಫಲವೋ ಆರಿಗಳವಲ್ಲ
ದೇವ ದೇವನು ನಿನ್ನಧೀನನು
ಆವ ಕಾಲಕು ತೊಗಲನಾತನು
ಸೇವಕಾಗ್ರಣಿ ತೆರದಿ ನಿಮ್ಮನು ಕಾದುಕೊಂಡಿಹನು ||೨೦||

ಲಕುಮಿ ನಿನ್ನನು ಎತ್ತಿತೋರಲು
ಸಕಲ ಸುರವರರೆಲ್ಲ ನೋಡಲು
ಭಕುತವತ್ಸಲನಾದ ನರಹರಿ ನಿನಗೆ ವಶನಾಗೆ
ವ್ಯಕುತವಾಯಿತು ನಿನ್ನ ಮಹಿಮೆಯು
ನಿಖಿಳ ಸುರವರರೆಲ್ಲ ಪೊಗಳಲು
ಭಕುತಿ ಪೂರ್ವಕ ಕರೆದರಾಗಲೆ ಕುಸುಮ ವೄಷ್ಟಿಯನು ||೨೧||

ದೇವ ದುಂದಿಭಿ ವಾದ್ಯನಭದಲಿ
ತೀವಿತಾಗಲೆ ದಿವಿಜರೆಲ್ಲರು
ಭಾವಿಸೀ ಪರಿ ಜಯತು ಜಯಜಯವೆನುತ ನಿಂತಿಹರು
ಈ ವಸೂಮತಿ ತಲಕೆ ನರವರ
ದೇವ ಪಟ್ಟವಗಟ್ಟಿ ರಾಜ್ಯವ
ಏವಿಸೂವದುಯೆಂದು ಸುರಗುರು ಬೊಮ್ಮ ಪೇಳಿದನು ||೨೨||

ರಾಯ ರಾಜ್ಯವ ಮಾಡುತಿರಲ
ನ್ಯಾಯವಿಲ್ಲದೆ ಸರ್ವಜನರೂ
ನ್ಯಾಯ ಮಾರ್ಗದಿ ನಡೆದರಾಗಲೆ ರಾಜನಾಜ್ಞದಲಿ
ಮಾಯ ಠಕ್ಕೂ ಠವಳಿ ಮಸಿಗಳ-
ಪಾಯ ಮೊದಲಾಗಿಪ್ಪ ದೋಷವು
ಕಾಯ ಜಾತನ ಉರುಬು ಜನರಲಿ ಜನಿಸದಾಪುರದಿ ||೨೩||

ರಾಜ್ಯಕಾರ್ಯವ ಭರದಿ ಮಾಡುತ
ವಾಜಿ ಮೇಧದ ಶತಕ ಪೂರ್ತಿಸಿ
ರಾಜ ರಾಜರ ತೇಜೋನಿಧಿ ತಾನೆನಿಸಿ ರಾಜಿಸಿದ
ಮಾಜದಲೆ ಶ್ರೀಹರಿಯ ಪದಯುಗ
ಪೂಜೆ ಮಾಡಿದ ಪುಣ್ಯಬಲದಿ ವಿ-
ರಾಜಮಾನ ಮಹಾನುಭಾವನು ಲೋಕ ಮೂರರಲಿ ||೨೪||

ಸಾಧು ಜನತತಿ ಪೋಷ ಶುಭತಮ-
ವಾದ ಧೃತ ನಿಜ ವೇಷ ಸಂತತ
ಮೋದಮಯ ಸತ್ಕಾಯ ನಿರ್ಜಿತ ದೋಷ ಗುಣಭೂಷಾ
ಪಾದ ಭಜಿಸಲು ಇಚ್ಚೆ ಪೂರ್ತಿಪ-
ನದಿ ಕಾಲದಲಿಂದಲಿ ಜನಕೇ
ಬೋಧಸುಖ ಮೊದಲಾದ ವಿಧವಿಧ ಪೂರ‍್ರ‍್ರ್ಣಫಲ ನೀಡ್ದ ||೨೫||

ದಿತಿಜರೆಲ್ಲರು ನಿನ್ನ ಗೋವಿನ
ಸುತನಮಾಡೀ ಸರ್ವರಸಗಳ
ಮಿತಿಯುಯಿಲ್ಲದೆ ಧರೆಯು ಗೋವಿನ ಮಾಡಿ ಕರೆಸಿದರು
ರತುನ ದೇಮ ಸುಮೌಕ್ತಿಕಾವಳಿ
ತತಿಯ ಸಂತತಯೆಯ್ದಿ ಭೋಗದಿ
ವಿತತರಾದರು ನಿನ್ನ ಕರುಣವಯೆಂತು ವರ್ಣಿಸಲಿ ||೨೬||

ಗೋವು ಪಂಕದಿ ಮಗ್ನವಾಗಿರೆ
ಕಾವ ನರನನು ಕಾಣದೀಪರಿ
ಧಾವಿ ಶ್ಯಾಗಲೆ ಬಪ್ಪ ನರನಿಗೆ ಉಸರಲದನವನು
ಭಾವಿ ಶಾಕ್ಷಣ ವ್ಯಸನ ಕಳೆಯದೆ
ತೀವಿ ಕೊಂಡದರಲ್ಲಿ ಮುಳುಗಿಸೆ
ಗೋವು ಮಾಡುವದೇನು ದೇವನೆ ನೀನೆ ಪಾಲಕನೂ ||೨೮||

ಸ್ವಾತಿ ವೃಷ್ಟಿಗೆ ಬಾಯಿ ತೆರೆದಿಹ
ಚಾತಕಾಸ್ಯದೊಳಗ್ನಿಕಣ ಜೀ-
ಮೂತನಾಥನು ಗರೆಯಲಾಕ್ಷಣ ಅದರ ತಪ್ಪೇನೋ
ನೀತ ಗುರುವರ ನೀನೆ ಎನ್ನನು
ಪ್ರೀತಿಪೂರ್ವಕ ಪಾಲಿಸೆಂದೆಡೆ
ಮಾತು ಲಾಲಿಸದಿರಲು ಎನ್ನಯ ಯತನವೇನಿದಕೆ ||೨೯||

ಜನನಿ ತನಯಗೆ ವಿಷವ ನೀಡಲು
ಜನಕ ತನಯರ ಮಾರಿಕೊಳ್ಳಲು
ಜನಪ ವೃತ್ತಿ-ಕ್ಷೇತ್ರ ಕಳೆದರೆ ಆರಿಗುಸರುವೆದೂ
ಘನ ಶಿರೋಮಣಿ ನೀನೆ ಎನ್ನನು
ಮನಕೆ ತಾರದೆ ದೂರ ನೋಡಲು
ಇನಗೆ ಶ್ರಮವನು ಪಾಲಿಪರಾರೋ ಪೇಳೆನಗೆ ||೩೦||

ನಿನಗೆ ತಪ್ಪದು ಎನ್ನ ಕಾಯ್ವದು
ಎನಗೆ ತಪ್ಪದು ನಿನ್ನ ಭಜಿಸೊದು
ಜನುಮ ಜನುಮಕೆ ಸಿದ್ಧವೆಂದಿಗು ಪುಸಿಯ ಮಾತಲ್ಲ
ಕನಸಿಲಾದರು ಅನ್ಯದೇವರ
ನೆನಿಸೆನೆಂದಿಗು ನಿನ್ನ ಪದಯುಗ
ವನಜವಲ್ಲದೆ ಪೆರತೆ ಎನಗೇನುಂಟೊ ಸರ್ವಜ್ಞ ||೩೧||

ಭೀತಿಗೊಳಿಸೌವ ಭವದ ತಾಪಕೆ
ಭೀತನಾದೆನೋ ಎನ್ನ ಪಾಲಿಸೊ
ಭೂತನಾಥನು ಭವದಿ ತೊಳಲುವ ಎನ್ನ ಪಾಡೇನು
ಭೂತದಯಪರನಾದ ಕಾರಣ
ಭೂತಿ ನೀ ಎನಗಿತ್ತು ಭವಭಯ
ಭೀತಿ ಪರಿಹರ ಮಾಡೊ ಗುರು ಜಗನ್ನಾಥವಿಠಲನೆ ||೩೨||

raghavendrara vijaya pELuve
raghavendrara karuNabaladali
raghavendrara BaktarAdavaridanu kELuvudu ||

Adiyugadali dharaNi mAnini
Adi daityara BAdhetALade
vEdananGriya sArdu tannaya vyasana pELidaLu
Adikavi caturAsyanIpari
mEdinI Sramavacana lAlisi
badheparihara mALpenendU nuDidU tA naDeda ||1||

SvEtadiviyanu sArdu lakumisa-
mEtahariyanu tutisi BUmiya
BIti tA pariharasogOsuga hariya besagonDa
nAtha! ditijara BAravatiSaya
GAtiparu tAvAro tiLIyenu
tAta! nI parihAra mADI BIti biDisuvudu ||2||

puruTa lOcana svar^rNa kaSipu
uruTu daityaru sarvajanarana
caraTa hArisi sakala lOkake duHKa koDutiharu
uruTu mAtugaLalla Siradali
karava saMpuTa mADi bEDuve
jaraTha daityara taridu BUmige suKava nIDende ||3||

carutavanana vacana kELI
catura Buja tAnAda hariyU
catura tanadali nAne saMhara mALpe caturAsya
dhRutadi naDeyalo ninna sthAnake
yatana mADuve SrIGravAgi
jatana mADaloyanna vacanavu endiGusiyalla ||4||

tAne avatara mADogOsuga
Enu nevanavamADalendU
nAnA yOcanemADi yukutiya tegeda hari tAnu
sAnurAgadi sEve mADuta-
dhInadoLagirutippa viShva-
ksEnanAmaka vAyuputranu SEShanavatAra ||5||

endigAdaru ninnoLippenu
nandadale nA paMca rUpadi
kundadale tA minugutippadu prANanAvESa
pondi SOBitanAgi I pura-
dinda jAgrati BUmitaLakE
indu nI nuDiyendu SrIhari nuDida dUtanige ||6||

svAmi lAliso ninna SiBatama-
dhAmaSiri vaikunThadali
A manOhara dUtanocanava
sImeyillade enage nuDidati
tAmasAtmaka daitya kuladalli janisu pOgenda ||7||

enna SApadalinda nI tvara
munna puTTelo daityarAgraNi
svAnna kaSipuna dharmasatiyala jaThara mandiradi
ninnagOsuga nAne naramRuga
Ganna rUpa tALi asurana
cennavAgI lOkadI kIrti ninagippe ||8||

anda SrIhari nuDiya manakE
gatndu viSvaksEna modalE
bandu janisidanasura nisatiyudaradESadali
tande saMBramadinda tannaya
kandananu tA Uru dESadi
tandu kUDisi kELda suraroLagAvanuttamanu ||9||

vAricAsana viShNu paSupati
mUru janaroLagAvanuttama
dhIra nI pELenageyenutali tAne besagoMDa
sUri tA prahlAda nuDidanu
nAra Ayanana uLidu suraroLu
Aru uttamarillaveMdigu hariye uttamanu ||10||

sarvaguNa gana pUr^na sarvaga
sarvapAlaka dEva sarvaga
sarvatantaryAmi tAne svatantrya paripUr^rNa
SarvamodalAdamararellaru
sarvakAladi hariyadhInaru
sarvalOkake sArvaBaumanu lakumi vallaBanu ||11||

sutana mAtanu kELi daityara
patiyu kOpadi tOrisenalU
vitatanAhari sarvadESadi iruva nODendA
patita daityanu kaMba tOrI
yatana pUrvaka baDiyalAkShaNa
SrItana vacanava satyamADuveneMdU tA banda ||12||

naramRugAkRutitALi duruLana
karuLu bagidA nArasiMhanu
taruLa ninnanu poredanAgalu karuNavAridhiyu
sraLa ennanu kAyO BavadoLu
maruLamati nAnAgi saMtata
iruLuhagaloMdAgi pariparimALpe duShkarma ||13||
A yugadi prahlAdanAmaka
rAyanenisI hariya BajisI
tOyanidhi paripasana manDalavALde haribaladi
rAyakuladali sArvaBaumana-
cEya mahimanu satata jagadala-
mEya diShaNanuyendu suramuni mADdanupadESa ||14||

garBadale paratatva paddhati
nirBayadi nI tiLidu Avai
darBiramaNane sarvaruttamanendu sthApiside
durBagAdikavAdavage saM-
darBavAgOde ninna sEvA
nirBarAgadu ninna janarige sulaBavAgihadO ||15||

ditija bAlrigella tatvadi
matiya puTTisi nityadali SrI-
patiye sarvOttamanuyeMbI j~jAna bodhiside
itara viShaya virakti puTTitu
mati vicArAsaktarAdaru
sitanasutarU pELdudellanu manake taralilla ||16||

ninna matavanusarisi bAlaru
Gana bOdha suBakti paDedaru
dhanyaradaru hariya Bakutaruyenisi tAvandu
ninna mahimege namana mADuve
enna pAliso Bavadi paripari
banna baDuveno dArigANade ninna naMbideno ||17||

parama pAvana rUpe nInU
hariya SApadi asuraBAvava
dharisi daityanuyenisikonDeyo suravarOttamanu
harige hAsigeyAda kAraNa
hariviBUtiya sannidhAnavu
niruta ninnali pErci merevadu marutanoDagUr^Di ||18||

prANaniha prahlAdanoLage a-
pAna niha sahlAdanoLu tA
vyAnaniha kahlAdanoLudAna nintihanU
dAnavAgraNi hlAdanoLu sa-
mAna tAnanuhlAdanoLagE
SrInivAsana prAna Bajisuva pancarUpadali||19||

aivaroLu hari vAyu karuNavu
I vidhAnadi pErci iruvudu
Ava janmada puNyaPalavO ArigaLavalla
dEva dEvanu ninnadhInanu
Ava kAlaku togalanAtanu
sEvakAgraNi teradi nimmanu kAdukonDihanu ||20||

lakumi ninnanu ettitOralu
sakala suravararella nODalu
BakutavatsalanAda narahari ninage vaSanAge
vyakutavAyitu ninna mahimeyu
niKiLa suravararella pogaLalu
Bakuti pUrvaka karedarAgale kusuma vRUShTiyanu ||21||

dEva duMdiBi vAdyanaBadali
tIvitAgale divijarellaru
BAvisI pari jayatu jayajayavenuta nintiharu
I vasUmati talake naravara
dEva paTTavagaTTi rAjyava
EvisUvaduyendu suraguru bomma pELidanu ||22||

rAya rAjyava mADutirala
nyAyavillade sarvajanarU
nyAya mArgadi naDedarAgale rAjanAj~jadali
mAya ThakkU ThavaLi masigaLa-
pAya modalAgippa dOShavu
kAya jAtana urubu janarali janisadApuradi ||23||

rAjyakAryava Baradi mADuta
vAji mEdhada Sataka pUrtisi
rAja rAjara tEjOnidhi tAnenisi rAjisida
mAjadale SrIhariya padayuga
pUje mADida puNyabaladi vi-
rAjamAna mahAnuBAvanu lOka mUrarali ||24||

sAdhu janatati pOSha SuBatama-
vAda dhRuta nija vESha santata
mOdamaya satkAya nirjita dOSha guNaBUShA
pAda Bajisalu icce pUrtipa-
nadi kAladalindali janakE
bOdhasuKa modalAda vidhavidha pUr^r^rNaPala nIDda ||25||

ditijarellaru ninna gOvina
sutanamADI sarvarasagaLa
mitiyuyillade dhareyu gOvina mADi karesidaru
ratuna dEma sumauktikAvaLi
tatiya santatayeydi BOgadi
vitatarAdaru ninna karuNavayentu varNisali ||26||

gOvu paMkadi magnavAgire
kAva narananu kANadIpari
dhAvi SyAgale bappa naranige usaraladanavanu
BAvi SAkShaNa vyasana kaLeyade
tIvi konDadaralli muLugise
gOvu mADuvadEnu dEvane nIne pAlakanU ||28||

svAti vRuShTige bAyi terediha
cAtakAsyadoLagnikaNa jI-
mUtanAthanu gareyalAkShaNa adara tappEnO
nIta guruvara nIne ennanu
prItipUrvaka pAlisendeDe
mAtu lAlisadiralu ennaya yatanavEnidake ||29||

janani tanayage viShava nIDalu
janaka tanayara mArikoLLalu
janapa vRutti-kShEtra kaLedare ArigusaruvedU
Gana SirOmaNi nIne ennanu
manake tArade dUra nODalu
inage Sramavanu pAliparArO pELenage ||30||

ninage tappadu enna kAyvadu
enage tappadu ninna Bajisodu
januma janumake siddhavendigu pusiya mAtalla
kanasilAdaru anyadEvara
nenisenendigu ninna padayuga
vanajavallade perate enagEnunTo sarvaj~ja ||31||

BItigoLisauva Bavada tApake
BItanAdenO enna pAliso
BUtanAthanu Bavadi toLaluva enna pADEnu
BUtadayaparanAda kAraNa
BUti nI enagittu BavaBaya
BIti parihara mADo guru jagannAthaviThalane ||32||

One thought on “Raghavendra Vijaya – SANDHI 02

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s