ರಾಘವೇಂದ್ರರ ವಿಜಯ ಪೇಳುವೆ
ರಾಘವೇಂದ್ರರ ಕರುನ ಬಲದಲಿ
ರಾಘವೇಂದ್ರರ ಭಕುತರಾದವರಿದನು ಕೇಳುವುದು
ಪರಮಕರುಣಾಕರನು ಲೋಕಕೆ
ಚರಣಸೇವಕರಾದ ಜನರಿಗೆ
ಸುರರತರುವದಂತೆ ಕಾಮಿತ ನಿರುತ ಕೊಡುತಿಪ್ಪ
ಶರಣು ಪೊಕ್ಕೆನೊ ದುಃಖಮಯಭವ
ಅರಣದಾಟಿಸು ಶ್ರೀಘ್ರ ನಿನ್ನಯ
ಚರಣಯುಗದಲಿ ಎನ್ನನಿಟ್ಟು ಸಹಲೊ ಗುರುವರನೆ ||೧||
ಇನಿತು ಬಾಲನ ವಾಕ್ಯ ಲಾಲಿಸಿ
ಮುನಿಕುಲೋತ್ತಮನಾದ ಯತಿವರ
ಮತಿಮತಾಂವರನಾದ ಬಾಲನ ನೋಡಿ ಸಂತಸದಿ
ಮನದಿ ಯೋಚಿಸಿ ಸಪ್ತವತ್ಸರ
ತನಯಗಾಗಲು ಮುಂಜಿ ಮಾಡಿಸಿ
ವಿನಯದಿಂದಾಶ್ರಮವ ಕೊಟ್ಟೂ ವ್ಯಾಸಮುನಿಯೆಂದ ||೨||
ಮುಂದೆ ತಾ ಬ್ರಹ್ಮಣ್ಯಯತಿವರ
ಪೊಂದಿ ತಾ ಶ್ರೀಪಾದರಾಯರ
ಮುಂದೆ ಬಾಲನು ನಿಮ್ಮ ಸನ್ನಿಧಿಯಲ್ಲಿರಲೆಂದ
ಮಧ್ವಮತವುದ್ದರಿಸಲೋಸುಗ
ಬಂದ ಬಾಲನ ತತ್ವತಿಳೀದೂ
ಛಂದದಲಿ ತಾ ವಿದ್ಯೆಪೇಳಿದ ವೇದ್ಯಮತಿಗೆ ||೩||
ಮೂಲಮೂವತ್ತೇಳು ಗ್ರಂಥದ
ಜಾಲಟೀಕಾಟಿಪ್ಪಣೀಸಹ
ಪೇಳಿ ತಾ ಶ್ರೀಪಾದರಾಜರು ಧನ್ಯರೆನಿಸಿದರು
ಶೀಲಗುರುಬ್ರಹ್ಮಣ್ಯತೀರ್ಥರು
ಕಾಲಲದಲಿ ವೈಕುಂಠ ಲೋಕವ
ಶೀಲಮನದಲಿ ಹರಿಯ ಸ್ಮರಿಸುತ ತಾವೆ ಪೊಂದಿದರು ||೪||
ಅಂದು ಗುರುಗಳ ಛಂದದಿಂದಲಿ
ಒಂದು ವೄಂದಾವನದಿ ಪೂಜಿಸಿ
ಬಂದ ಭೂಸುರತತಿಗೆ ಭೋಜನ ಕನಕ ದಕ್ಷಿಣೆಯ
ಛಂದದಿದಲಿಯಿತ್ತು ದಿನದಿನ
ಇಂದಿರೇಶನ ಭಜಿಸುತಲಿ ತಾ-
ನಂದು ಗುರುಗಳ ಪ್ರೀತಿಪಡಿಸಿದ ವ್ಯಾಸಮುನಿರಾಯ ||೫||
ಮುಳ್ಳಬಾಗಿಲ ಮಠದ ಮಧ್ಯದಿ
ಒಳ್ಳೆಮುತ್ತಿನ ಚಿತ್ರದಾಸನ-
ದಲ್ಲಿ ತಾ ಕುಳೀತಿರ್ದು ಶಿಷ್ಯರ ತತಿಗೆ ನಿತ್ಯದಲಿ
ಖುಲ್ಲಮಾಯ್ಗಳ ಮತವಿಚಾರವ
ಸುಳ್ಳುಮಾಡಿದ ಮಧ್ವಶಾಸ್ತ್ರಗ-
ಳೆಲ್ಲ ಭೋದಿಸಿ ಹರಿಯೆ ಸರ್ವೋತ್ತಮನು ನಿಜವೆಂದ ||೬||
ಏಕೊನಾರಯಣನೆ ಲಯದಲ-
ನೇಕ ಜೀವರ ತನ್ನ ಜಠರದಿ
ಏಕಭಾಗದಲಿಟ್ಟು ಲಕುಮಿಯ ಭುಜಗಳಾಂತರದಿ
ಶ್ರೀಕರನು ತಾ ಶೂನ್ಯನಾಮದಿ
ಏಕರೂಪವ ಪೊಂದುಗೊಳಿಸುತ
ಶ್ರೀಕರಾತ್ಮಕವಟದ ಪತ್ರದಿ ಯೋಗನಿದ್ರಿಯನು ||೭||
ಮಾಡುತಿರಲಾಕಾಲಕಂಭ್ರಣಿ
ಪಾಡಿಜಯಜವೆಂದು ಸ್ತವನವ
ಮಾಡಿ ಭೋದಿಸಿ ಸೃಷ್ಟಿಕಾಲವು ಪ್ರಾಪ್ತವಾಗಿಹದೊ
ನೋಡಿ ಜೀವರ ಉದರದಿರುವರ
ಮಾಡಿ ಭಾಗವ ಮೂರುಮುಷ್ಟಿಯ
ಒಡೆಯ ತಾನೇ ಸೃಷ್ಟಿಮಾಡಿದ ಸ್ರೃಜ್ಯಜೀವರನ ||೮||
ಆದಿನಾರಾಯಣನೆ ಮೂಲನು
ವೇದಗಮ್ಯಾನಂತನಾಮಕ
ಆದನಾತನು ಅಂಶಿರೂಪನು ವಿಶ್ವತೋಮುಖನು
ಪಾದಹಸ್ತಾದ್ಯವಯಂಗಳು
ವೇದರಾಶಿಗೆ ನಿಲುಕಲಾರವು
ವೇದಮಾನಿಯು ಲಕುಮಿ ತಿಳಿಯಳು ತಿಳಿವ ಸರ್ವಜ್ಞ ||೯||
ವಿಶ್ವತೋಮುಖ ಚಕ್ಷು ಕರ್ಣನು
ವಿಶ್ವತೋದರನಾಭಿ ಕುಕ್ಷನು
ವಿಶ್ವತೋಕಟಿ ಊರು ಜಾನೂ ಜಂಘಯುಗ ಗುಲ್ಫ
ವಿಶ್ವತೋಮಯ ಪಾದವಾರಿಜ
ವಿಶ್ವತಾಂಗುಲಿ ರಾಜಿನಖಗಳು
ವಿಶ್ವಕಾಯನು ವಿಶ್ವದೊಳಗಿಹ ವಿಶ್ವ ವಿಶ್ವೇಶ ||೧೦||
ಪದಪಾಣಿಯು ಜವನಪಿಡಿವನು
ಒಪಿತ ಶೃತಿ ಕಣ್ಕೇಳಿನೋಡ್ವನು
ಅಪರಮಹಮನ ಶಿರಿಯು ಅರಿಯಳು ಸುರರ ಪಾಡೇನು
ಜಪಿಸಿ ಕಾಣುವೆನೆಂದು ಲಕುಮಿಯು
ಅಪರಿಮಿತ ತಾ ರೂಪಧರಿಸೀ
ತಪಿಸಿಸ್ ಗುಣಗಳ ರಾಶಿಯೊಳು ತಾನೊಂದು ತಿಳಿಲಿಲ್ಲ ||೧೧||
ಅಂದುಪೋಗಿಹ ಲಕುಮಿರೂಪಗ-
ಳಿಂದಿಗೂ ಬರಲಿಲ್ಲ ಕಾರಣ-
ಛಂದದಿಂದಲಿ ವೇದಪೇಳ್ವೆದನಂತ ಮಹಿಮೆಂದು
ಒಂದೆರೂಪದಿ ಹಲವುರೂಪವು
ಒಂದೆಗುಣದೊಳನಂತಗುಣಗಳು
ಎಂದಿಗಾದರು ಪೊಂದಿಯಿಪ್ಪವನುತಕಾಲದಲಿ ||೧೨||
ಪೂರ್ಣವೆನಿಪವು ಗುಣಗಣಂಗಳು
ಪೂರ್ಣವೆನಿಪವು ಅವಯವಂಗಳು
ಪೂರ್ಣವೆನಿಪವು ರೂಪಕರ್ಮಗಲಾವಕಾಲದಲಿ
ಪೂರ್ಣನಗುಮುಖ ಕಂಠಹೃದಯನು
ಪೂರ್ಣಜಾನು ಸುಕಕ್ಷ ಕುಕ್ಷನು
ಪೂರ್ಣಕಟಿ ತಟಿ ನಾಭಿ ಊರು ಜಾನು ಜಂಘಗಳು ||೧೩||
ಪೂರ್ಣಗುಲ್ಫ ಸುಪಾದಪದುಮವು
ಪೂರ್ಣವಾದಂಗುಲಿಯ ಸಂಘವು
ಪೂರ್ಣ-ನಖ-ಧ್ವಜ-ವಜ್ರ-ಚಕ್ರ-ಸುಶಂಖ ರೇಖೆಗಳು
ಪೂರ್ಣವಾದುದು ಅಂಶಿರೂಪವು
ಪೂರ್ಣವಾದುದು ಅಂಶರೂಪವು
ಪೂರ್ಣವಾಗಿಹವೆಲ್ಲ ಜೀವರ ಬಿಂಬರೂಪಗಳು ||೧೪||
ಪುರುಷ ಸ್ತ್ರೀಯಳುಯೆಂಬ ಭೇದದಿ
ಎರಡು ರೂಪಗಳುಂತು ಈತಗೆ
ಪುರುಷನಾಮಕ ನಂದಮಯ ಬಲಭಾಗ ತಾನೆನಿಪ
ಕರೆಸುವೆನು ವಿಜ್ಞಾನಮಯ ತಾ-
ನರಸಿಯೆನಿಸುತ ವಾಮಭಾಗದಿ
ಇರುವೆ ಕಾರಣ ಸ್ವರಮಣನು ತಾನಾಗಿಯಿರುತಿಪ್ಪ ||೧೫||
ನಾರಾಯಣನು ಪುರುಷರೂಪದಿ
ನಾರ ಅಯಣಿಯು ಸ್ತ್ರೀಯ ರೂಪದಿ
ಬೇರೆಯಲ್ಲವು ತಾನೆ ಈ ವಿಧ ಎರಡುರೂಪದಲಿ
ತೋರುತಿಪ್ಪನು ಸ್ತ್ರೀಯ ರೂಪವೆ
ಚಾರುತರ ಸಿರಿವತ್ಸನಾಮದಿ
ಸೇರಿಯಿಪ್ಪನು ಪುರುಷರೂಪದಿ ವಕ್ಷೋಮಂದಿರದಿ ||೧೬||
ಲಕುಮಿದೇವಿಗೆಬಿಂಬವೆನಿಪುದು
ಸಕಲ ಸ್ತ್ರೀಯರ ಗಣದಲಿಪ್ಪುದು
ವ್ಯಕುತವಾಗಿದುದಾದಿಕಾಲದಿ ಮುಕುತಿ ಸೇರಿದರು
ವಿಕಲವಾಗದು ಯೆಂದಿಗಾದರು
ನಿಖಿಳಜಗದಲಿ ವ್ಯಾಪಿಸಿಪ್ಪುದು
ಲಕುಮಿರಮಣಿಯ ಲಶ್ಷ್ಯವಿಲ್ಲದೆ ಸೃಜಿಪ ತಾನೆಲ್ಲ ||೧೭||
ಪುರುಷಜೀವರ ಹೃದಯದಲಿ ತಾ
ಪುರುಷರೂಪದಿ ಬಿಂಬನೆನಿಸುವ
ಇರುವ ಸರ್ವದ ಪ್ರಳಯದಲಿಸಹ ಬಿಡನು ತ್ರಿವಿಧರನು
ಕರೆಸುತಿಪ್ಪನು ಜೀವನಾಮದಿ
ಬೆರೆತು ಕರ್ಮವಮಾಡಿ ಮಾಡಿಸಿ
ನಿರುತಜೀವರ ಕರ್ಮರಾಶಿಗೆ ಗುರಿಯಮಾಡುವನು ||೧೮||
ಮೂಲನಾರಾಯಣನು ತಾ ಬಲು
ಲೀಲೆಮಾಡುವ ನೆವದಿ ತಾನೆ ವಿ-
ಶಾಲಗುಣಗಣ-ಸಾಂಶ-ಜ್ಞಾನಾನಂದ -ಶುಭಕಾಯ
ಬಾಲರೂಪವ ಧರಿಸಿ ವಟದೆಲೆ
ಆಲಯದಿ ಶಿರ್-ಭೂಮಿ–ದುರ್ಗೆರ-
ಲೋಲನಾದಾಮಧುಮನಾಭನೆ ವ್ಯಕುತ ತಾನಾದ ||೧೯||
ನಾನಾವಿಧದವತಾರಗಳಿಗೆ ನಿ-
ದಾನ ಬೀಜವುಯೆನಿಸುತಿಪ್ಪೊದು
ಮೀನ-ಕೂರ್ಮ-ವರಾಹ ಮ್ದಲೂ ಸ್ವಾಂಶಕಳೆರೂಪ
ತಾನೆ ಸಕಲಕೆ ಮೂಲಕಾರಣ
ತಾನೆ ತನ್ನಯ ರೂಪ ಸಮುದಯ
ತಾನೆ ತನ್ನಲಿಯಿಡುವ ಪ್ರಲಯದನೇಕನ್ನಿಸುವನು ||೨೦||
ರಾಮರ‍್ರ‍್ರೂಪವನಂತಯಿಪ್ಪದು
ವಾಮನಾದಿಯನಂತ ಕೃಷ್ಣರು
ಸೀಮವಿಲ್ಲದೆ ರೂಪಸಂತತಿ ಬೇರೆ ರೋರುವುದು
ಹೇಮನಿರ್ಮಿತ ಮೂರ್ತಿಗೊಪ್ಪುವ
ಚಾಮಿಕರಮಯಚಾರುಭೂಷಣ-
ಸ್ತೋಮ ನೋಡುವ ಜನರ ಸಂಘಕೆ ಬೇರೆತೋರ್ಪಂತೆ ||೨೧||
ಅಂಶಿಯಲಿ ಸಂಶ್ಲೇಷ ಐಕ್ಯವು
ಅಂಶ ಸಮುಹವು ಎಯ್ದುತೋರ್ಪುದು
ಸಂಶಯೇನಿದರಲ್ಲಿ ತೆನೆಯೊಳು ಕಾಳ್ಗಳಿದ್ದಂತೆ
ಭ್ರಂಶರಾಗದೆ ಸುಮತಗಳು ಪ್ರ-
ಸಂಶಮಾಳ್ಪ ಸುಶಾಸ್ತ್ರದಲಿ ನಿ-
ಸ್ಸಂಶಯಾತ್ಮಕರಾಗಿ ಮನದೃಢ ಮಾಡಿ ನೋಡುವುದು ||೨೨||
ಬಿಂಬಹರಿ ಪ್ರತಿಬಿಂಬಜೀವರು
ಬಿಂಬನೇ ತಾ ಮೂಲ ಕಾರಣ
ಇಂಬುಯೆನಿಪ ಸ್ವರೂಪದೇಹೋಪಾಧಿಯೆನಿಸುವುದು
ಎಂಬ ವಾಕ್ಯದ ಭಾವ ತಿಳಿಯದೆ
ಶುಂಭರಾದರು ದ್ವಿಜರು ಕೆಲವರು
ಗುಂಭವಾಗಿದರ್ಥಯಿರುವುದು ಪರಮಗೋಪಿತವು ||೨೩||
ಸತ್ಯವಾಗಿಹ ಆತ್ಮರೂಪವ
ನಿತ್ಯವಾದೌಪಾಧಿಯೆನಿಪುದು
ವ್ಯತ್ಯವುಯೇನಿಲ್ಲ ನೋಡಲು ಗೊತ್ತು ತಿಳೀಯದೆಲೆ
ವ್ಯತ್ಯಯಾರ್ಥವ ಮಾಡಿ ಕೆಡಿಸದೆ
ಸತ್ಯವಾದುದು ತಿಳಿಯಾಲಾ ಹರಿ
ಭೃತ್ಯರಾಗ್ರಣಿಯಾಗಿ ಪರಸುಖವೆಯ್ದಿ ಮೋದಿಪನು ||೨೪||
ಅಂತರಾತ್ಮನು ಸಕಲಜೀವರ
ಅಂತರಂಗ ಸ್ವರೂಪ ದೇಹದಿ
ನಿಂತು ತಾ ಸರ್ವಾಂಗವ್ಯಾಪಕನಾಗಿಯಿರುತಿಪ್ಪ
ಸಂತತದಿ ತಾ ನಂದರೂಪನ-
ನಂತ ಜೀವಸ್ವರೂಪಬಹಿರದಿ
ನಿಂತು ಸದ್ವಿಜ್ಞಾನರೂಪದಿ ಆತ್ಮಯೆನಿಸಿಪ್ಪ ||೨೫||
ಈತನಂತಾನಂತರೂಪದಿ
ಪ್ರೀತಿಪೂರ್ವಕ ದಾಸಜನರಿಗೆ
ನೀತಫಲಗಳ ಸರ್ವವ್ಯಾಪಕ ತಾನೆ ಕೊಡುತಿಹನು
ಜಾತ ಸೂರ್ಯಾನಂತನಿಭ ನಿಜ-
ಜ್ಯೋತಿಮಯ ಸತ್ತೇಜೋಮೂರುತಿ
ದಾತಗುರುಜಗನ್ನಾಥವಿಠಲನು ತಾನೆ ಪರಿಪೂರ್ಣ ||೨೬||
rAGavEndrara vijaya pELuve
rAGavEndrara karuna baladali
rAGavEndrara BakutarAdavaridanu kELuvudu
paramakaruNAkaranu lOkake
caraNasEvakarAda janarige
surarataruvadante kAmita niruta koDutippa
SaraNu pokkeno duHKamayaBava
araNadATisu SrIGra ninnaya
caraNayugadali ennaniTTu sahalo guruvarane ||1||
initu bAlana vAkya lAlisi
munikulOttamanAda yativara
matimatAnvaranAda bAlana nODi santasadi
manadi yOcisi saptavatsara
tanayagAgalu muMji mADisi
vinayadindASramava koTTU vyAsamuniyenda ||2||
munde tA brahmaNyayativara
pondi tA SrIpAdarAyara
munde bAlanu nimma sannidhiyalliralenda
madhvamatavuddarisalOsuga
banda bAlana tatvatiLIdU
Candadali tA vidyepELida vEdyamatige ||3||
mUlamUvattELu granthada
jAlaTIkATippaNIsaha
pELi tA SrIpAdarAjaru dhanyarenisidaru
SIlagurubrahmaNyatIrtharu
kAlaladali vaikunTha lOkava
SIlamanadali hariya smarisuta tAve pondidaru ||4||
andu gurugaLa Candadindali
ondu vRUndAvanadi pUjisi
banda BUsuratatige BOjana kanaka dakShiNeya
Candadidaliyittu dinadina
indirESana Bajisutali tA-
nandu gurugaLa prItipaDisida vyAsamunirAya ||5||
muLLabAgila maThada madhyadi
oLLemuttina citradAsana-
dalli tA kuLItirdu SiShyara tatige nityadali
KullamAygaLa matavicArava
suLLumADida madhvaSAstraga-
Lella BOdisi hariye sarvOttamanu nijavenda ||6||
EkonArayaNane layadala-
nEka jIvara tanna jaTharadi
EkaBAgadaliTTu lakumiya BujagaLAntaradi
SrIkaranu tA SUnyanAmadi
EkarUpava pondugoLisuta
SrIkarAtmakavaTada patradi yOganidriyanu ||7||
mADutiralAkAlakaMBraNi
pADijayajavendu stavanava
mADi BOdisi sRuShTikAlavu prAptavAgihado
nODi jIvara udaradiruvara
mADi BAgava mUrumuShTiya
oDeya tAnE sRuShTimADida sr^RujyajIvarana ||8||
AdinArAyaNane mUlanu
vEdagamyAnantanAmaka
AdanAtanu aMSirUpanu viSvatOmuKanu
pAdahastAdyavayangaLu
vEdarASige nilukalAravu
vEdamAniyu lakumi tiLiyaLu tiLiva sarvaj~ja ||9||
viSvatOmuKa cakShu karNanu
viSvatOdaranABi kukShanu
viSvatOkaTi Uru jAnU janGayuga gulPa
viSvatOmaya pAdavArija
viSvatAMguli rAjinaKagaLu
viSvakAyanu viSvadoLagiha viSva viSvESa ||10||
padapANiyu javanapiDivanu
opita SRuti kaNkELinODvanu
aparamahamana Siriyu ariyaLu surara pADEnu
japisi kANuvenendu lakumiyu
aparimita tA rUpadharisI
tapisis guNagaLa rASiyoLu tAnondu tiLililla ||11||
andupOgiha lakumirUpaga-
LindigU baralilla kAraNa-
Candadindali vEdapELvedananta mahimendu
onderUpadi halavurUpavu
ondeguNadoLanantaguNagaLu
endigAdaru pondiyippavanutakAladali ||12||
pUrNavenipavu guNagaNangaLu
pUrNavenipavu avayavangaLu
pUrNavenipavu rUpakarmagalAvakAladali
pUrNanagumuKa kanThahRudayanu
pUrNajAnu sukakSha kukShanu
pUrNakaTi taTi nABi Uru jAnu janGagaLu ||13||
pUrNagulPa supAdapadumavu
pUrNavAdaMguliya saMGavu
pUrNa-naKa-dhvaja-vajra-cakra-suSanKa rEKegaLu
pUrNavAdudu aMSirUpavu
pUrNavAdudu aMSarUpavu
pUrNavAgihavella jIvara biMbarUpagaLu ||14||
puruSha strIyaLuyeMba BEdadi
eraDu rUpagaLuntu Itage
puruShanAmaka nandamaya balaBAga tAnenipa
karesuvenu vij~jAnamaya tA-
narasiyenisuta vAmaBAgadi
iruve kAraNa svaramaNanu tAnAgiyirutippa ||15||
nArAyaNanu puruSharUpadi
nAra ayaNiyu strIya rUpadi
bEreyallavu tAne I vidha eraDurUpadali
tOrutippanu strIya rUpave
cArutara sirivatsanAmadi
sEriyippanu puruSharUpadi vakShOmandiradi ||16||
lakumidEvigebiMbavenipudu
sakala strIyara gaNadalippudu
vyakutavAgidudAdikAladi mukuti sEridaru
vikalavAgadu yendigAdaru
niKiLajagadali vyApisippudu
lakumiramaNiya laSShyavillade sRujipa tAnella ||17||
puruShajIvara hRudayadali tA
puruSharUpadi biMbanenisuva
iruva sarvada praLayadalisaha biDanu trividharanu
karesutippanu jIvanAmadi
beretu karmavamADi mADisi
nirutajIvara karmarASige guriyamADuvanu ||18||
mUlanArAyaNanu tA balu
lIlemADuva nevadi tAne vi-
SAlaguNagaNa-sAMSa-j~jAnAnanMda -SuBakAya
bAlarUpava dharisi vaTadele
Alayadi Sir-BUmi–durgera-
lOlanAdAmadhumanABane vyakuta tAnAda ||19||
nAnAvidhadavatAragaLige ni-
dAna bIjavuyenisutippodu
mIna-kUrma-varAha mdalU svAMSakaLerUpa
tAne sakalake mUlakAraNa
tAne tannaya rUpa samudaya
tAne tannaliyiDuva pralayadanEkannisuvanu ||20||
rAmar^r^rUpavanantayippadu
vAmanAdiyananta kRuShNaru
sImavillade rUpasantati bEre rOruvudu
hEmanirmita mUrtigoppuva
cAmikaramayacAruBUShaNa-
stOma nODuva janara sanGake bEretOrpante ||21||
aMSiyali saMSlESha aikyavu
aMSa samuhavu eydutOrpudu
saMSayEnidaralli teneyoLu kALgaLiddaMte
BraMSarAgade sumatagaLu pra-
saMSamALpa suSAstradali ni-
ssaMSayAtmakarAgi manadRuDha mADi nODuvudu ||22||
biMbahari pratibiMbajIvaru
biMbanE tA mUla kAraNa
iMbuyenipa svarUpadEhOpAdhiyenisuvudu
eMba vAkyada BAva tiLiyade
SuMBarAdaru dvijaru kelavaru
guMBavAgidarthayiruvudu paramagOpitavu ||23||
satyavAgiha AtmarUpava
nityavAdaupAdhiyenipudu
vyatyavuyEnilla nODalu gottu tiLIyadele
vyatyayArthava mADi keDisade
satyavAdudu tiLiyAlA hari
BRutyarAgraNiyAgi parasuKaveydi mOdipanu ||24||
antarAtmanu sakalajIvara
antaraMga svarUpa dEhadi
nintu tA sarvAMgavyApakanAgiyirutippa
santatadi tA naMdarUpana-
nanta jIvasvarUpabahiradi
nintu sadvij~jAnarUpadi Atmayenisippa ||25||
ItanantAnantarUpadi
prItipUrvaka dAsajanarige
nItaPalagaLa sarvavyApaka tAne koDutihanu
jAta sUryAnantaniBa nija-
jyOtimaya sattEjOmUruti
dAtagurujagannAthaviThalanu tAne paripUrNa ||26||
One thought on “Raghavendra Vijaya – SANDHI 04”