aarathi · dasara padagalu · Harapanahalli bheemavva · Jyeshta Gowri · MADHWA

Traditional arati song of Jyeshta Gouri

ಹುಟ್ಟಿದಳಾ ಕ್ಷೀರಸಾಗರದಲಿ ಸಮಸ್ತ ಜನರಿಗೆ ಸುಖವ ನೀಡುತಲಿ
ಶ್ರೇಷ್ಠರೊಳಗೆ ಜ್ಯೇಷ್ಠಾದೇವಿ ಶ್ರೀನಾಥನ ಪಟ್ಟದರಸಿ ಮುದ್ದುಮಹಾಲಕ್ಷ್ಮಿಗೆ
ಚೆಲ್ವೇರಾರತಿಯ ತಂದೆತ್ತಿರೇ||

ಮುದ್ದು ಮೋರೆಗೆ ತಕ್ಕ ಮುಕುರ ಬುಲಾಕನಿಟ್ಟು ವಜ್ರದ ಬುಗುಡಿ ಒಯ್ಯಾರದಿಂದ
ತಿದ್ದಿ ಬೈತಲೆ ಜಡೆ ಬಂಗಾರ ರಾಗಟೆ ಪದ್ಮನಾಭನ ರಾಣಿ ಮಹಾಲಕ್ಷ್ಮಿಗೆ
ಚೆಲ್ವೇರಾರತಿಯ ತಂದೆತ್ತಿರೇ||

ಸಣ್ಣ ಮುತ್ತಿನ ಓಲೆ ಸರಪಳಿ ಚಳತುಂಬು ಚಿನ್ನದ ಸರಿಗೆ ಮೋಹನಮಾಲೆ
ಕಣ್ಣ ಕಾಡಿಗೆ ಹಚ್ಚಿ ಕಸ್ತೂರಿ ಕುಂಕುಮ ಚೆನ್ನಾಲ ಚೆಲುವೆ ಮುದ್ದು ಮಹಾಲಕ್ಷ್ಮಿಗೆ
ಚೆಲ್ವೇರಾರತಿಯ ತಂದೆತ್ತಿರೇ||

ಸೆಳೆ ನಡುವಿಗೆ ತಕ್ಕ ಬಿಳಿಯ ಪೀತಾಂಬರ ನಳಿ ತೋಳಿನಲಿ ನಾಗಮುರಿಗೆ ವಂಕಿ
ಗಿಳಿಯು ಕಮಲದ್ವಾರ್ಯ ಹರಡಿ ಕಂಕಣವಿಟ್ಟು ಕಳೆಯ ಸುರಿಯೋ ಮುದ್ದು ಮಹಾಲಕ್ಷ್ಮಿಗೆ
ಚೆಲ್ವೇರಾರತಿಯ ತಂದೆತ್ತಿರೇ||

ಗರುಡವಾಹನನ ಹೆಗಲಿಳಿದು ಶ್ರೀನಾಥನ ಹರಡಿ ಕಂಕಣ ಕರವಿಡಿದುಕೊಂಡು
ಮುಡಿದ ಮಲ್ಲಿಗೆ ಪಾರಿಜಾತಗಳುದುರುತ ನಡೆದು ಬರುವ ಮುದ್ದು ಮಹಾಲಕ್ಷ್ಮಿಗೆ
ಚೆಲ್ವೇರಾರತಿಯ ತಂದೆತ್ತಿರೇ||

ಪಾದದಿ ರುಳಿ ಗೆಜ್ಜೆ ನಾದ ಝೇಂಕರಿಸುತಾ ಆದರದಿಂದೆನ್ನ ಮನೆಗೆ ಬಂದು
ಶ್ರೀಧರ ಭೀಮೇಶಕೃಷ್ಣನೆದೆಯ ಮೇಲೆ ವಿನೋದದಿ ಕುಳಿತಿರುವ ಮಹಾಲಕ್ಷ್ಮಿಗೆ
ಚೆಲ್ವೇರಾರತಿಯ ತಂದೆತ್ತಿರೇ||

huTTidaLA kShIrasAgaradali samasta janarige suKava nIDutali
SrEShTharoLage jyEShThAdEvi SrInAthana paTTadarasi muddumahAlakShmige
celvErAratiya tandettirE

muddu mOrege takka mukura bulAkaniTTu vajrada buguDi oyyAradinda
tiddi baitale jaDe bangAra rAgaTe padmanABana rANi mahAlakShmige
celvErAratiya taMdettirE

saNNa muttina Ole sarapaLi caLatuMbu cinnada sarige mOhanamAle
kaNNa kADige hacci kastUri kuMkuma cennAla celuve muddu mahAlakShmige
celvErAratiya tandettirE

seLe naDuvige takka biLiya pItAMbara naLi tOLinali nAgamurige vanki
giLiyu kamaladvArya haraDi kankaNaviTTu kaLeya suriyO muddu mahAlakShmige
celvErAratiya tandettirE

garuDavAhanana hegaliLidu SrInAthana haraDi kankaNa karaviDidukonDu
muDida mallige pArijAtagaLuduruta naDedu baruva muddu mahAlakShmige
celvErAratiya tandettirE

pAdadi ruLi gejje nAda JEnkarisutA Adaradindenna manege bandu
SrIdhara BImESakRuShNanedeya mEle vinOdadi kuLitiruva mahAlakShmige
celvErAratiya tandettirE

 

2 thoughts on “Traditional arati song of Jyeshta Gouri

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s