dasara padagalu · gopala dasaru · MADHWA · Mahalakshmi

Kamalamukhiye kamalaalaye

ಕಮಲಮುಖಿಯೆ ಕಮಲಾಲಯೆ ಕಮಲೆಕಮಾಲಾಕ್ಷಿಯೆ ಕೋಮಲೆ ||

ಕಮಲನಾಭನ ಪಾದಕಮಲಯುಗಳ ಮಧುಪೆಕಮಲಜ ಜನನಿಯೆ ಕಮಲಮಿತ್ರೆ ಸುಪ್ರಭೆ ||ಅ.ಪ.||

ಅರುಣನ ಪೋಲುವ ಚರಣವು ಬಾಲಚಂದಿರನ ಸೋಲಿಪ ನಖವುಬೆರಳಲ್ಲಿ ಪಿಲ್ಲಿ ಕಾಲುಂಗುರ ಮೆಂಟಿಕೆ ಕಿರುಗೆಜ್ಜ್ಯಂದಿಗೆ ಪೆಂಡೆಯುಕರಿಯ ದಂತದಂತೆ ಜಾನುದರ್ಪಣ ಜಂಘೆ ಉಟ್ಟ ದಟ್ಟಿಯು ನೆರಿಗೆಯುಹರಿನಡು ಕಿಂಕಿಣಿ ಭರದಿ ಒಡ್ಯಾಣವು ಉದರ ತ್ರಿವಳಿರೇಖೆ ವರ ಕಂಚುಕಧಾರಿ||

ಕರಿಯ ಸೊಂಡಲಿನಂತೆ ಕರಯುಗದೊಳಗೊಪ್ಪುವ ಬೆರಳು ಮಾಣಿಕ್ಯದುಂಗುರಹರಡಿ ಕಂಕಣ ವಂಕಿ ಬಿರುದಿನ ತÉೂೀಳ್ಬಂದಿ ಶಿರಿಭುಜದಲ್ಲಿ ಕೇಯೂರಕೊರಳ ಒಪ್ಪುವ ಸರಗಳು ಪದಕವು ಉರೆ ವೈಜಯಂತೀ ಮಂದಾರಮೆರೆವ ಚುಬುಕ ಬಿಂಬಾಧರ ಕೂರ್ಮಕದಪು ಕಿರಿದಂತ ರತುನದ ಕರಡಿಗೆ ವದನೆ ||

ಸುರಭಿ ಚಂಪಕನಾಸಿಕ ಮೂಗುತಿ ಶಾಂತ ಪರಮ ಕರುಣ ನೋಟದಹರಿಣನಯನೆ ಪುಬ್ಬುಸ್ಮರನ ಚಾಪದಂತೆ ಕರ್ಣಾಭರಣಲಂಕಾರ ಸಿರಿಕುಂಕುಮ ಕಸ್ತೂರಿ ತಿಲಕದ ಮೇಲೆ ಅರಳೆಲೆ ಬೈತಲೆಯ ಸರ ಕುರುಳುಸುಳಿಯು ಪರಿಪರಿ ರತ್ನ ಖಚಿತದ ವರ ಮಕುಟವು ಕೋಟಿ ತರಣಿಯಂತೊಪ್ಪುವ ||

ತೆತ್ತೀಸಕೋಟಿ ದೇವತೆಗಳು ವಾಣಿ ಭಾರತಿ ಪಾರ್ವತಿ ಮೊದಲಾದಉತ್ತಮಸ್ತ್ರೀಯರು ಛತ್ರಚಾಮರನೆತ್ತಿ ಬೀಸುವಲಂಕಾರಸುತ್ತಗಂಧರ್ವರು ತುಂಬುರ ನಾರದರು ಸ್ವರವೆತ್ತಿ ಪಾಡುವ ಝೇಂಕಾರತತ್ತರಿತರಿಘಟ್ಟ ಝಣುತ ಝಣುತ ಎಂದು ಎತ್ತ ನೋಡಿದರತ್ತ ತಥೈ ಎಂಬೊ ಶಬ್ದ ||

ಪಕ್ಷಿವಾಹನನಾದ ಪಾವನಮೂರ್ತಿಯ ವಕ್ಷಸ್ಥಳದಿ ಶೋಭಿತೆಲಕ್ಷ್ಮೀದೇವಿಯೆ ಸಲಕ್ಷಣೆ ಅಜ ಫಾಲಾಕ್ಷ ಸುರವಿನುತೆಮೋಕ್ಷದಾಯಕಿ ಲೋಕರಕ್ಷಕಿ ರಮಾದೇವಿ ಇಕ್ಷುಧನ್ವನ ಜನನಿಅಕ್ಷಯಫಲದ ಗೋಪಾಲವಿಠಲನ ಪ್ರತ್ಯಕ್ಷ ತೋರಿಸೆನ್ನಪೇಕ್ಷೆ ಪೂರೈಸೆ ತಾಯೆ ||

Kamalamukiye kamalalaye kamalekamalakshiye komale ||

Kamalanabana padakamalayugala madhupekamalaja jananiye kamalamitre suprabe a||

Arunana poluva caranavu balachandirana solipa nakavuberalalli pilli kalungura mentike kirugejjyamdige pendeyukariya dantadante janudarpana jange utta dattiyu nerigeyuharinadu kimkini Baradi odyanavu udara trivalireke vara kancukadhari||

Kariya sondalinante karayugadolagoppuva beralu manikyadumguraharadi kankana vanki birudina tallbandi siribujadalli keyurakorala oppuva saragalu padakavu ure vaijayanti mandaramereva cubuka bimbadhara kurmakadapu kiridanta ratunada karadige vadane ||

Surabi champakanasika muguti santa parama karuna notadaharinanayane pubbusmarana capadante karnabaranalamkara siri kumkuma kasturi tilakada mele aralele baitaleya sara kurulusuliyu paripari ratna Kacitada vara makutavu koti taraniyantoppuva ||

Tettisakoti devategalu vani barati parvati modalada^^uttamastriyaru chatrachamaranetti bisuvalankarasuttagandharvaru tumbura naradaru svaravetti paduva jenkaratattaritarigatta januta januta endu etta nodidaratta tathai embo Sabda ||

Pakshivahananada pavanamurtiya vakshasthaladi sobitelakshmideviye salakshane aja palaksha suravinutemokshadayaki lokarakshaki ramadevi ikshudhanvana janani^^akshayapalada gopalavithalana pratyaksha torisennapekshe puraise taye ||

2 thoughts on “Kamalamukhiye kamalaalaye

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s