MADHWA · subramanya · sulaadhi · Vijaya dasaru

Subhramanya suladhi

ರಾಗ:ಸಾವೇರಿ
ಧ್ರುವತಾಳ
ಪರಮಾಧಿಕಾರಿಗೆ ದೊರಕುವುದೀ ಯಾತ್ರಿ |
ಹರಿಗುರು ವಿಶ್ವಾಸಾನಿರುತ ಉಳ್ಳವರಿಗೆ |
ಪರದೈವನಾದ ಸಿರಿ ಪರಶುರಾಮನ ಕ್ಷೇತ್ರ |
ಧರೆಯೊಳಗಿದೆ ಕನ್ಯಾಕುವರಿ ಗೋಕರಣಾ |
ಪರಿಯಂತ ಕುರುವಾಹದಿದರ ಮಧ್ಯ |
ಪರಿಮಿತಿ ಉಂಟು ತೌಲ |
ಅರಿಶಿನ ದೇಶ ತು[ಳು ವರಿವ]ರೆಂದು ಕರೆಸುವರು |
ಮರಳೆ ಇದು ಸಿಂಹಗಿರಿ ಎನಿಸುವುದು|
ಸ್ಮರಣೆ ಮಾಡಿದರೆ ದುಸ್ತರ ಭವಾಂಬುಧಿ ಉ |
ತ್ತರಿಸುವುದಾಕ್ಷಣ ಕರಣಶುದ್ಧನ ಮಾಡಿ |
ಗರುಡನ ಜನನಿಯಾ ಸೆರೆಯಬಿಡಿಸಿ ಪಗೆ |
ಧರಿಸಿ ನಿರ್ದಯದಿಂದ ಉರಗಗಳನ್ನು ಸದೆದು |
ಭರದಿಂದ ವಾಸುಕಿಯಾ ಎರಗಿ ತುಂಡದಿ ಕಚ್ಚಿ |
ತೆರಳೆ ಗಗನಾದಲ್ಲಿ ಹರಿದು ಪೋಗೆ ಕಶ್ಯಪ |
ಕರೆದು ಬುದ್ಧಿಯ ಪೇಳೆ ಶಿರಿಬಾಗೆ ವೈನತೇಯ |
ಅರಿಯಾ ಬಿಸಾಟು ಕಿರಾತರ ನುಂಗಿದೊಂದೆಶೆಯಲ್ಲಿ |
ನಿರುಪಮ ನಿಸ್ಸಂಗ ವಿಜಯವಿಠಲರೇಯನ |
ಚರಣ ಪೂಜಿಪ ಸಿದ್ಧರಲ್ಲಿ ವಾಸಕಾಣೊ ||1||

ಮಟ್ಟತಾಳ
ಉರಗವಾಸುಕಿಯನ್ನು ಕರೆದು ಕಶ್ಯಪಮುನಿ |
ಕರೆದಿಂದಲಿ ತಡವರಿಸಿ ಮನ್ನಿಸಿ ನಿಲ್ಲಿಸಿ |
ಗರುಡ ಕಂಡರೆ (ನಿನ್ನಾ) ತಿರಗಿ ಬಿಡನು
ತೀವರದಿಂದಲಲಿ ಪೋಗಿ |
ಹರನಕುರಿತು ಸಿಂಹಗಿರಿಯ ತೊಪ್ಪಲಲ್ಲಿ |
ವರತಪವನೆ ಮಾಡಿ ಉರುಕಾಲಭೀತರಹಿತನಾಗೆಂದು |
ಅರುಹಲು ಕೈಕೊಂಡು ಅರಿ ಉಪಟಳ |
ಪರಿಹರ ಮಾಳ್ಪೆನೆಂದು ಪರಮತ್ವರಿತದಲ್ಲಿ |
ಬರುತ ಇದನೆ ಕಂಡ ಉರಗ ವಾಸುಕಿ ಅಂದು |
ಸಿರಿ ಅರಸ ನಮ್ಮ ವಿಜಯವಿಠಲರೇಯನ್ನ |
ಹಿರಿಯ ಮಗನ ಕುವರನ ಒಲಿವೆನೆಂದ ||2||

ತ್ರಿವಿಡಿತಾಳ
ವಾತೋದಕ ಪರ್ಣಾಶನದಿಂದ ವಾಸುಕಿ |
ತಾ ತಪವನೆ ಮಾಡಿ ಬಹುಕಾಲಕ್ಕೆ |
ಭೂತನಾಥನ ಒಲಿಸಿ ಚರಣಯುಗ್ಮಕ್ಕೆರಗಿ |
ಶೀತಾ ನಾನಾಭೀತಿ ಬಿಡಿಸೆನಲೂ |
ಆತ ಕೇಳುತ ಶಿರದೂಗಿ ಸರ್ಪನ ಕೂಡ |
ಮಾತನಾಡಿದ ಒಂದು ಕ್ರೋಶದಷ್ಟು |
ಭೀತರಹಿತನಾಗಿ ಇಲ್ಲೆ ಇಪ್ಪದು ಎನ್ನ |
ಜಾತ[ಬ]ಪ್ಪನು ಮುಂದೆ ಕಾಲಾಂತರಕ್ಕೆ |
ಆತನ ಒಡಗೂಡಿ ಇಲ್ಲಿಯ ಪೂಜಿಯಗೊಂಡು |
ಭೂತಳದೊಳು ಖ್ಯಾತಿಯಾಗೀರೆಂದೂ |
ಭೂತ ಪ್ರಮಥರೊಡನೆ ಅಂತರ್ಧಾನನಾಗಿ |
ಗೋತುರಸುತೆ ಅರಸಾ ತೆರಳಲಿತ್ತ |
ಆತುಮಂತರಾತ್ಮ ವಿಜಯವಿಠಲಹರಿಗೆ |
ಪ್ರೀತಿಯಾಗಿಪ್ಪಾದೀ ಕ್ಷೇತುರಜಗದೊಳೂ ||3||

ಅಟ್ಟತಾಳ
ಇನಿತಿರೆ ಕಾಲಾಂತರಕೆ ತಾರಕನೆಂಬಾ |
ದನುಜನು ಕ್ರೌಂಚ ಪರ್ವತದೆಡೆಯಲ್ಲಿದ್ದೂ |
ವನಜ ಸಂಭವನು ಮೆಚ್ಚುವಂತೆ ಮಹಾ ತಪ |
ವನು ಮಾಡಿದನು ತಲೆಕೆಳಗಾಗಿ ವಜ್ರದ |
ಕೊನೆಯಲ್ಲಿ ಅನೇಕ ವರ್ಷ ವಾಸವಾಗಿ |
ಅನಿಮಿಷನಿಕರ ಮಿಕ್ಕಾದ ಜನರಿಂದ |
ಅಣುಮಾತರ ಸೋಲದಂತೆ ಘೋರವೆಂ |
ದೆನಿಸುವ ವರವನ್ನು ಬೇಡಲು ನಿಲ್ಲದೆ |
ನೆನೆದು ಮಹತತ್ವದ ಅಭಿಮಾನಿ ಈಶನಾ |
ತನುಜಾನಿಂದಲಿ ನಿನಗಪಜಯವಾಗಲಿ |
ಎನಲು ದಾನವನು ಲೋಕೇಶಗೆರಗಿದ |
ಎನಗ್ಯಾರು ಸಮನೆಂದು ಸ್ವರ್ಗಪಾತಾಳದ |
ಜನರಿಗೆ ಮುನಿ ಸಮುದಾಯಕ್ಕೆ ಉಪಹತಿ |
ಯಾನುಮಾಡೆ ದೇವಾದಿಗಳು ಪೋಗಿ ಕಮಲಾ |
ಸನಗೆ ಬಿನ್ನೈಸಲು ಕೇಳಿಪೋದನು ತನ್ನ |
ಜನಕಗೆ ಪೇಳೆನಗುತ ನುಡಿದನಂದು |
ಮಾನುಮಥನಿಂದ ಪುರಾರಿಯ ಹಿಮವಂತ |
ತನುಜೆಯ ನೆರವಂತೆ ಮಾಳ್ಪದು ಅವರಿಗೆ |
ತನುಜನಾಗಿ ಮನುಮಥ ಪುಟ್ಟಿ ಅ |
ವನ ಸಂಹರಿಸುವೆನೆಂದು ಪೇಳಲು ಅ |
ಪ್ಪಣೆಗೊಂಡು ಬಂದಿತ್ತ ಸುರರೆಲ್ಲ ಒಂದಾಗಿ |
ಅನಳಾಕ್ಷನಲ್ಲಿಗೆ ಪೂಶರನಟ್ಟಲು |
ವಿನಯದಿಂದಲಿ ಪೋಗಿ ಚಾಪವ ಹೂಡಿಸರನೆ |
ಬಾಣ ಎಸೆಯಲು ಪಿನಾಕಿ ಚಂಚಲ |
ಮಾನದಲ್ಲಿ ಗೌರಿಯಕೂಡಿದ ಇತ್ತಲು |
ಮನಸಿಜ ನೆನಿಸೀದ ಕಾಮನೆಂದಾರಭ್ಯ |
ಜನಸೀದಾ ನಾನಾ ಠಾವಿನಲ್ಲಿ ಪ್ರಾಂತಕ್ಕ |
ಷಣ್ಮೊಗನಾಗಿ ಇಂದ್ರಾದ್ಯರ ಸಹವಾಗಿ |
ದನುಜಾ ತಾರಾಕನೊಳು ಕಾದಿ ಅವನ ಕೊಂದು |
ಅನಿಮಿಷ ಸೈನ್ಯಕ್ಕೆ ನಾಯಕನೆನಿಸಿದ |
ಪಣವದುಂದುಭಿ ಭೇರಿ ಮೆರಿಯಲುಕೊಂಡಾಡೆ |
ಗುಣನಿಧಿ ವಿಜಯವಿಠಲರೇಯನ ಪುತ್ರ |
ಮನು ಮದನವತಾರ ಸ್ಕಂದನು ಕಾಣಿರೊ ||4||

ಆದಿ]ತಾಳ
ದಿತಿಜನ ಕೊಂದು ವೇಗದಿಂದಲಿ ಪಾರ್ವತಿ |
ಸುತನು ತನ್ನ ಪೆತ್ತವನ ಕೇಳಲು ಸಿಂಹ ಪ |
ರ್ವತದಲ್ಲಿ ಪೋಗಿ ತಪವನು ಮಾಡೆನಲು ಹೃ |
ದ್ಗತನಾಗಿದ್ದ ಹರಿಲೀಲೆ ಸ್ಮರಿಸುತ್ತಾ ನಡೆತಂದ |
ಅತಿಶಯದಿಂದಲಿ ತಪವ ಮಾಡೆನಲು ತಾರಾ |
ಪಥದಲ್ಲಿ ಶಬ್ಧವಾಗೆ ಲಕ್ಷ ಭೋಜನ ಸು |
ಘ್ರøತ ಸಮೇತ ಏಕಾಪೋಶನನ ಒಂದೆ ದಿನ |
ಹಿತವಾಗಿಗೈಸಿ ಉಚ್ಚಿಷ್ಠದಲಿ ಹೊರಳಿ ನೀನು |
ಶಿತಮನನಾಗೆನಲು ಕ್ಷಿತಿಯೊಳಗಿದೆ ನಿ |
ರ್ಮಿತವಾಯಿತು ತಿಳಿವುದು |
ಕೃತಭುಜರು ನಲಿದಾಡೆ ಚತುರಾದ್ವಿಮೊಗನು ಇಲ್ಲಿ |
ಪ್ರತಿವಾರ ಬಿಡದಲೆ ಮತಿವಂತನಾಗಿ ಶಾ |
ಶ್ವತ ಕಾಲಾ ನೆಲಸೀದ ಖತಿಗೊಳ್ಳದರಿ ಶೋ |
ಭಿತ ಮತ್ಸ್ಯ ಸುಪಟ ತೀರಥ ರುದ್ರಪಾದ ಮೂರು |
ಪಥದ ಕುಮಾರಧಾರಿ ರತಿವುಳ್ಳ ಶಂಖ ತೀ |
ರಥ ನಾನಾ ಬಗೆ ಉಂಟು ಪ್ರತಿಕೂಲವಾಗದೇಪ |
ರ ರೀತಿಯ ತಿಳಿದು ಭಕುತಿಯಿಂದಲಿ ಮಿಂದು ಅ |
ಮೃತ ಭೋಜನ ದುಚ್ಚಿಷ್ಟಾ ಗತಿ ಎಂದು ಹೊರಳೆ ಪ |
ವಿತ್ರನಾಗುವ, ಭಾಗೀರಥಿ ಸ್ನಾನಕ್ಕೆ ಒಂದು |
ಶತಸಾರೆ ಪೋದಫಲ ಪ್ರಾಪ್ತತವಾಗುವದು ಕಾಣೊ |
ಶತಸಿದ್ಧವೆನ್ನಿ ಉನ್ನತ ಕುಷ್ಟರೋಗಗಳು |
ಹತವಾಗಿ ಪೋಗುವುದು ಪತಿತನಾದರು ಬಂದು |
ತತುವ ಮಾರ್ಗದಲ್ಯುಚಿತವುದನ್ನು ತಿಳಿಯೆ ಮು |
ಕುತಿವಂತ ಸತತದಲ್ಲಿ |
ನುತಿಸಿದವರಿಗೆ ಶ್ರೀ ವಿಜಯವಿಠಲರೇಯಾ |
ಚತುರದವರ ಸಂಗತಿಯಲ್ಲಿ ಪೊಂದಿಸುವ ||5||

ಜತೆ
ಸುಬ್ರಹ್ಮಣ್ಯದ ಯಾತ್ರೆ ಎಂಥಾದೊ ತಿಳಿಯಾದು |
ಶುಭ್ರಾವರಣ ವಿಜಯವಿಠಲ ನರಹರಿಬಲ್ಲಾ ||6||

rAga:sAvEri
dhruvatALa
paramAdhikArige dorakuvudI yAtri |
hariguru viSvAsAniruta uLLavarige |
paradaivanAda siri paraSurAmana kShEtra |
dhareyoLagide kanyAkuvari gOkaraNA |
pariyaMta kuruvAhadidara madhya |
parimiti uMTu taula |
ariSina dESa tu[Lu variva]reMdu karesuvaru |
maraLe idu siMhagiri enisuvudu|
smaraNe mADidare dustara BavAMbudhi u |
ttarisuvudAkShaNa karaNaSuddhana mADi |
garuDana jananiyA sereyabiDisi page |
dharisi nirdayadiMda uragagaLannu sadedu |
BaradiMda vAsukiyA eragi tuMDadi kacci |
teraLe gaganAdalli haridu pOge kaSyapa |
karedu buddhiya pELe SiribAge vainatEya |
ariyA bisATu kirAtara nuMgidoMdeSeyalli |
nirupama nissaMga vijayaviThalarEyana |
caraNa pUjipa siddharalli vAsakANo ||1||

maTTatALa
uragavAsukiyannu karedu kaSyapamuni |
karediMdali taDavarisi mannisi nillisi |
garuDa kaMDare (ninnA) tiragi biDanu
tIvaradiMdalali pOgi |
haranakuritu siMhagiriya toppalalli |
varatapavane mADi urukAlaBItarahitanAgeMdu |
aruhalu kaikoMDu ari upaTaLa |
parihara mALpeneMdu paramatvaritadalli |
baruta idane kaMDa uraga vAsuki aMdu |
siri arasa namma vijayaviThalarEyanna |
hiriya magana kuvarana oliveneMda ||2||

triviDitALa
vAtOdaka parNASanadiMda vAsuki |
tA tapavane mADi bahukAlakke |
BUtanAthana olisi caraNayugmakkeragi |
SItA nAnABIti biDisenalU |
Ata kELuta SiradUgi sarpana kUDa |
mAtanADida oMdu krOSadaShTu |
BItarahitanAgi ille ippadu enna |
jAta[ba]ppanu muMde kAlAMtarakke |
Atana oDagUDi illiya pUjiyagoMDu |
BUtaLadoLu KyAtiyAgIreMdU |
BUta pramatharoDane aMtardhAnanAgi |
gOturasute arasA teraLalitta |
AtumaMtarAtma vijayaviThalaharige |
prItiyAgippAdI kShEturajagadoLU ||3||

aTTatALa
initire kAlAMtarake tArakaneMbA |
danujanu krauMca parvatadeDeyalliddU |
vanaja saMBavanu meccuvaMte mahA tapa |
vanu mADidanu talekeLagAgi vajrada |
koneyalli anEka varSha vAsavAgi |
animiShanikara mikkAda janariMda |
aNumAtara sOladaMte GOraveM |
denisuva varavannu bEDalu nillade |
nenedu mahatatvada aBimAni ISanA |
tanujAniMdali ninagapajayavAgali |
enalu dAnavanu lOkESageragida |
enagyAru samaneMdu svargapAtALada |
janarige muni samudAyakke upahati |
yAnumADe dEvAdigaLu pOgi kamalA |
sanage binnaisalu kELipOdanu tanna |
janakage pELenaguta nuDidanaMdu |
mAnumathaniMda purAriya himavaMta |
tanujeya neravaMte mALpadu avarige |
tanujanAgi manumatha puTTi a |
vana saMharisuveneMdu pELalu a |
ppaNegoMDu baMditta surarella oMdAgi |
anaLAkShanallige pUSaranaTTalu |
vinayadiMdali pOgi cApava hUDisarane |
bANa eseyalu pinAki caMcala |
mAnadalli gauriyakUDida ittalu |
manasija nenisIda kAmaneMdAraBya |
janasIdA nAnA ThAvinalli prAMtakka |
ShaNmoganAgi iMdrAdyara sahavAgi |
danujA tArAkanoLu kAdi avana koMdu |
animiSha sainyakke nAyakanenisida |
paNavaduMduBi BEri meriyalukoMDADe |
guNanidhi vijayaviThalarEyana putra |
manu madanavatAra skaMdanu kANiro ||4||

Adi]tALa
ditijana koMdu vEgadiMdali pArvati |
sutanu tanna pettavana kELalu siMha pa |
rvatadalli pOgi tapavanu mADenalu hRu |
dgatanAgidda harilIle smarisuttA naDetaMda |
atiSayadiMdali tapava mADenalu tArA |
pathadalli SabdhavAge lakSha BOjana su |
Graøta samEta EkApOSanana oMde dina |
hitavAgigaisi ucciShThadali horaLi nInu |
SitamananAgenalu kShitiyoLagide ni |
rmitavAyitu tiLivudu |
kRutaBujaru nalidADe caturAdvimoganu illi |
prativAra biDadale mativaMtanAgi SA |
Svata kAlA nelasIda KatigoLLadari SO |
Bita matsya supaTa tIratha rudrapAda mUru |
pathada kumAradhAri rativuLLa SaMKa tI |
ratha nAnA bage uMTu pratikUlavAgadEpa |
ra rItiya tiLidu BakutiyiMdali miMdu a |
mRuta BOjana ducciShTA gati eMdu horaLe pa |
vitranAguva, BAgIrathi snAnakke oMdu |
SatasAre pOdaPala prAptatavAguvadu kANo |
Satasiddhavenni unnata kuShTarOgagaLu |
hatavAgi pOguvudu patitanAdaru baMdu |
tatuva mArgadalyucitavudannu tiLiye mu |
kutivaMta satatadalli |
nutisidavarige SrI vijayaviThalarEyA |
caturadavara saMgatiyalli poMdisuva ||5||

jate
subrahmaNyada yAtre eMthAdo tiLiyAdu |
SuBrAvaraNa vijayaviThala narahariballA ||6||

 

ashtothram · MADHWA · subramanya

Subramanya Ashtothra namavali

ಓಂ ಸ್ಕಂದಾಯ ನಮಃ |
ಓಂ ಗುಹಾಯ ನಮಃ |
ಓಂ ಷಣ್ಮುಖಾಯ ನಮಃ |
ಓಂ ಫಾಲನೇತ್ರಸುತಾಯ ನಮಃ |
ಓಂ ಪ್ರಭವೇ ನಮಃ |
ಓಂ ಪಿಂಗಲಾಯ ನಮಃ |
ಓಂ ಕೃತ್ತಿಕಾಸೂನವೇ ನಮಃ |
ಓಂ ಶಿಖಿವಾಹನಾಯ ನಮಃ |
ಓಂ ದ್ವಿಷಡ್ಭುಜಾಯ ನಮಃ |
ಓಂ ದ್ವಿಷಣ್ಣೇತ್ರಾಯ ನಮಃ || ೧೦ ||

ಓಂ ಶಕ್ತಿಧರಾಯ ನಮಃ |
ಓಂ ಪಿಶಿತಾಶಪ್ರಭಂಜನಾಯ ನಮಃ |
ಓಂ ತಾರಕಾಸುರ ಸಂಹಾರಿಣೇ ನಮಃ |
ಓಂ ರಕ್ಷೋಬಲವಿಮರ್ದನಾಯ ನಮಃ |
ಓಂ ಮತ್ತಾಯ ನಮಃ |
ಓಂ ಪ್ರಮತ್ತಾಯ ನಮಃ |
ಓಂ ಉನ್ಮತ್ತಾಯ ನಮಃ |
ಓಂ ಸುರಸೈನ್ಯ ಸುರಕ್ಷಕಾಯ ನಮಃ |
ಓಂ ದೇವಸೇನಾಪತಯೇ ನಮಃ |
ಓಂ ಪ್ರಾಜ್ಞಾಯ ನಮಃ || ೨೦ ||

ಓಂ ಕೃಪಾಲವೇ ನಮಃ |
ಓಂ ಭಕ್ತವತ್ಸಲಾಯ ನಮಃ |
ಓಂ ಉಮಾಸುತಾಯ ನಮಃ |
ಓಂ ಶಕ್ತಿಧರಾಯ ನಮಃ |
ಓಂ ಕುಮಾರಾಯ ನಮಃ |
ಓಂ ಕ್ರೌಂಚಧಾರಣಾಯ ನಮಃ |
ಓಂ ಸೇನಾನ್ಯೇ ನಮಃ |
ಓಂ ಅಗ್ನಿಜನ್ಮನೇ ನಮಃ |
ಓಂ ವಿಶಾಖಾಯ ನಮಃ |
ಓಂ ಶಂಕರಾತ್ಮಜಾಯ ನಮಃ || ೩೦ ||

ಓಂ ಶೈವಾಯ ನಮಃ |
ಓಂ ಸ್ವಾಮಿನೇ ನಮಃ |
ಓಂ ಗಣಸ್ವಾಮಿನೇ ನಮಃ |
ಓಂ ಸನಾತನಾಯ ನಮಃ |
ಓಂ ಅನಂತಶಕ್ತಯೇ ನಮಃ |
ಓಂ ಅಕ್ಷೋಭ್ಯಾಯ ನಮಃ |
ಓಂ ಪಾರ್ವತೀಪ್ರಿಯನಂದನಾಯ ನಮಃ |
ಓಂ ಗಂಗಾಸುತಾಯ ನಮಃ |
ಓಂ ಶರೋದ್ಭೂತಾಯ ನಮಃ || ೪೦ ||

ಓಂ ಆಹುತಾಯ ನಮಃ |
ಓಂ ಪಾವಕಾತ್ಮಜಾಯ ನಮಃ |
ಓಂ ಜೃಂಭಾಯ ನಮಃ |
ಓಂ ಪ್ರಜೃಂಭಾಯ ನಮಃ |
ಓಂ ಉಜ್ಜೃಂಭಾಯ ನಮಃ |
ಓಂ ಕಮಲಾಸನಸಂಸ್ತುತಾಯ ನಮಃ |
ಓಂ ಏಕವರ್ಣಾಯ ನಮಃ |
ಓಂ ದ್ವಿವರ್ಣಾಯ ನಮಃ |
ಓಂ ತ್ರಿವರ್ಣಾಯ ನಮಃ |
ಓಂ ಸುಮನೋಹರಾಯ ನಮಃ || ೫೦ ||

ಓಂ ಚತುರ್ವರ್ಣಾಯ ನಮಃ |
ಓಂ ಪಂಚವರ್ಣಾಯ ನಮಃ |
ಓಂ ಪ್ರಜಾಪತಯೇ ನಮಃ |
ಓಂ ಅಹರ್ಪತಯೇ ನಮಃ |
ಓಂ ಅಗ್ನಿಗರ್ಭಾಯ ನಮಃ |
ಓಂ ಶಮೀಗರ್ಭಾಯ ನಮಃ |
ಓಂ ವಿಶ್ವರೇತಸೇ ನಮಃ |
ಓಂ ಸುರಾರಿಘ್ನೇ ನಮಃ |
ಓಂ ಹರಿದ್ವರ್ಣಾಯ ನಮಃ |
ಓಂ ಶುಭಾಕರಾಯ ನಮಃ || ೬೦ ||

ಓಂ ವಟವೇ ನಮಃ |
ಓಂ ವಟುವೇಷಧೃತೇ ನಮಃ |
ಓಂ ಪೂಷ್ಣೇ ನಮಃ |
ಓಂ ಗಭಸ್ತಯೇ ನಮಃ |
ಓಂ ಗಹನಾಯ ನಮಃ |
ಓಂ ಚಂದ್ರವರ್ಣಾಯ ನಮಃ |
ಓಂ ಕಲಾಧರಾಯ ನಮಃ |
ಓಂ ಮಾಯಾಧರಾಯ ನಮಃ |
ಓಂ ಮಹಾಮಾಯಿನೇ ನಮಃ |
ಓಂ ಕೈವಲ್ಯಾಯ ನಮಃ || ೭೦ ||

ಓಂ ಶಂಕರಾತ್ಮಭುವೇ ನಮಃ |
ಓಂ ವಿಶ್ವಯೋನಯೇ ನಮಃ |
ಓಂ ಅಮೇಯಾತ್ಮನೇ ನಮಃ |
ಓಂ ತೇಜೋನಿಧಯೇ ನಮಃ |
ಓಂ ಅನಾಮಯಾಯ ನಮಃ |
ಓಂ ಪರಮೇಷ್ಠಿನೇ ನಮಃ |
ಓಂ ಪರಬ್ರಹ್ಮಣೇ ನಮಃ |
ಓಂ ವೇದಗರ್ಭಾಯ ನಮಃ |
ಓಂ ವಿರಾಟ್ಸುತಾಯ ನಮಃ |
ಓಂ ಪುಲಿಂದಕನ್ಯಾಭರ್ತ್ರೇ ನಮಃ || ೮೦ ||

ಓಂ ಮಹಾಸಾರಸ್ವತಾವೃತಾಯ ನಮಃ |
ಓಂ ಆಶ್ರಿತಾಖಿಲದಾತ್ರೇ ನಮಃ |
ಓಂ ಚೋರಘ್ನಾಯ ನಮಃ |
ಓಂ ರೋಗನಾಶನಾಯ ನಮಃ |
ಓಂ ಅನಂತಮೂರ್ತಯೇ ನಮಃ |
ಓಂ ಆನಂದಾಯ ನಮಃ |
ಓಂ ಶಿಖಂಡಿಕೃತಕೇತನಾಯ ನಮಃ |
ಓಂ ಡಂಭಾಯ ನಮಃ |
ಓಂ ಪರಮಡಂಭಾಯ ನಮಃ |
ಓಂ ಮಹಾಡಂಭಾಯ ನಮಃ || ೯೦ ||

ಓಂ ವೃಷಾಕಪಯೇ ನಮಃ |
ಓಂ ಕಾರಣೋತ್ಪತ್ತಿದೇಹಾಯ ನಮಃ |
ಓಂ ಕಾರಣಾತೀತವಿಗ್ರಹಾಯ ನಮಃ |
ಓಂ ಅನೀಶ್ವರಾಯ ನಮಃ |
ಓಂ ಅಮೃತಾಯ ನಮಃ |
ಓಂ ಪ್ರಾಣಾಯ ನಮಃ |
ಓಂ ಪ್ರಾಣಾಯಾಮಪರಾಯಣಾಯ ನಮಃ |
ಓಂ ವಿರುದ್ಧಹಂತ್ರೇ ನಮಃ |
ಓಂ ವೀರಘ್ನಾಯ ನಮಃ |
ಓಂ ಶ್ಯಾಮಕಂಧರಾಯ ನಮಃ || ೧೦೦ ||

ಓಂ ಕುಷ್ಟಹಾರಿಣೇ ನಮಃ |
ಓಂ ಭುಜಂಗೇಶಾಯ ನಮಃ |
ಓಂ ಪುಣ್ಯದಾತ್ರೇ ನಮಃ |
ಓಂ ಶ್ರುತಿಪ್ರೀತಾಯ ನಮಃ |
ಓಂ ಸುಬ್ರಹ್ಮಣ್ಯಾಯ ನಮಃ |
ಓಂ ಗುಹಾಪ್ರೀತಾಯ ನಮಃ |
ಓಂ ಬ್ರಹ್ಮಣ್ಯಾಯ ನಮಃ |
ಓಂ ಬ್ರಾಹ್ಮಣಪ್ರಿಯಾಯ ನಮಃ || ೧೦೮ ||

|| ಶ್ರೀ ಸುಬ್ರಹ್ಮಣ್ಯಾಷ್ಟೋತ್ತರ ಶತನಾಮಾವಲಿ ಸಂಪೂರ್ಣಮ್‌ ||

Ōṁ skandāya namaḥ |
ōṁ guhāya namaḥ |
ōṁ ṣaṇmukhāya namaḥ |
ōṁ phālanētrasutāya namaḥ |
ōṁ prabhavē namaḥ |
ōṁ piṅgalāya namaḥ |
ōṁ kr̥ttikāsūnavē namaḥ |
ōṁ śikhivāhanāya namaḥ |
ōṁ dviṣaḍbhujāya namaḥ |
ōṁ dviṣaṇṇētrāya namaḥ || 10 ||

ōṁ śaktidharāya namaḥ |
ōṁ piśitāśaprabhan̄janāya namaḥ |
ōṁ tārakāsura sanhāriṇē namaḥ |
ōṁ rakṣōbalavimardanāya namaḥ |
ōṁ mattāya namaḥ |
ōṁ pramattāya namaḥ |
ōṁ unmattāya namaḥ |
ōṁ surasain’ya surakṣakāya namaḥ |
ōṁ dēvasēnāpatayē namaḥ |
ōṁ prājñāya namaḥ || 20 ||

ōṁ kr̥pālavē namaḥ |
ōṁ bhaktavatsalāya namaḥ |
ōṁ umāsutāya namaḥ |
ōṁ śaktidharāya namaḥ |
ōṁ kumārāya namaḥ |
ōṁ kraun̄cadhāraṇāya namaḥ |
ōṁ sēnān’yē namaḥ |
ōṁ agnijanmanē namaḥ |
ōṁ viśākhāya namaḥ |
ōṁ śaṅkarātmajāya namaḥ || 30 ||

ōṁ śaivāya namaḥ |
ōṁ svāminē namaḥ |
ōṁ gaṇasvāminē namaḥ |
ōṁ sanātanāya namaḥ |
ōṁ anantaśaktayē namaḥ |
ōṁ akṣōbhyāya namaḥ |
ōṁ pārvatīpriyanandanāya namaḥ |
ōṁ gaṅgāsutāya namaḥ |
ōṁ śarōdbhūtāya namaḥ || 40 ||

ōṁ āhutāya namaḥ |
ōṁ pāvakātmajāya namaḥ |
ōṁ jr̥mbhāya namaḥ |
ōṁ prajr̥mbhāya namaḥ |
ōṁ ujjr̥mbhāya namaḥ |
ōṁ kamalāsanasanstutāya namaḥ |
ōṁ ēkavarṇāya namaḥ |
ōṁ dvivarṇāya namaḥ |
ōṁ trivarṇāya namaḥ |
ōṁ sumanōharāya namaḥ || 50 ||

ōṁ caturvarṇāya namaḥ |
ōṁ pan̄cavarṇāya namaḥ |
ōṁ prajāpatayē namaḥ |
ōṁ aharpatayē namaḥ |
ōṁ agnigarbhāya namaḥ |
ōṁ śamīgarbhāya namaḥ |
ōṁ viśvarētasē namaḥ |
ōṁ surārighnē namaḥ |
ōṁ haridvarṇāya namaḥ |
ōṁ śubhākarāya namaḥ || 60 ||

ōṁ vaṭavē namaḥ |
ōṁ vaṭuvēṣadhr̥tē namaḥ |
ōṁ pūṣṇē namaḥ |
ōṁ gabhastayē namaḥ |
ōṁ gahanāya namaḥ |
ōṁ candravarṇāya namaḥ |
ōṁ kalādharāya namaḥ |
ōṁ māyādharāya namaḥ |
ōṁ mahāmāyinē namaḥ |
ōṁ kaivalyāya namaḥ || 70 ||

ōṁ śaṅkarātmabhuvē namaḥ |
ōṁ viśvayōnayē namaḥ |
ōṁ amēyātmanē namaḥ |
ōṁ tējōnidhayē namaḥ |
ōṁ anāmayāya namaḥ |
ōṁ paramēṣṭhinē namaḥ |
ōṁ parabrahmaṇē namaḥ |
ōṁ vēdagarbhāya namaḥ |
ōṁ virāṭsutāya namaḥ |
ōṁ pulindakan’yābhartrē namaḥ || 80 ||

ōṁ mahāsārasvatāvr̥tāya namaḥ |
ōṁ āśritākhiladātrē namaḥ |
ōṁ cōraghnāya namaḥ |
ōṁ rōganāśanāya namaḥ |
ōṁ anantamūrtayē namaḥ |
ōṁ ānandāya namaḥ |
ōṁ śikhaṇḍikr̥takētanāya namaḥ |
ōṁ ḍambhāya namaḥ |
ōṁ paramaḍambhāya namaḥ |
ōṁ mahāḍambhāya namaḥ || 90 ||

ōṁ vr̥ṣākapayē namaḥ |
ōṁ kāraṇōtpattidēhāya namaḥ |
ōṁ kāraṇātītavigrahāya namaḥ |
ōṁ anīśvarāya namaḥ |
ōṁ amr̥tāya namaḥ |
ōṁ prāṇāya namaḥ |
ōṁ prāṇāyāmaparāyaṇāya namaḥ |
ōṁ virud’dhahantrē namaḥ |
ōṁ vīraghnāya namaḥ |
ōṁ śyāmakandharāya namaḥ || 100 ||

ōṁ kuṣṭahāriṇē namaḥ |
ōṁ bhujaṅgēśāya namaḥ |
ōṁ puṇyadātrē namaḥ |
ōṁ śrutiprītāya namaḥ |
ōṁ subrahmaṇyāya namaḥ |
ōṁ guhāprītāya namaḥ |
ōṁ brahmaṇyāya namaḥ |
ōṁ brāhmaṇapriyāya namaḥ || 108 ||

|| śrī subrahmaṇyāṣṭōttara śatanāmāvali sampūrṇam‌ ||

MADHWA · sloka · subramanya

Subramanya sloka

ಷಡಾನನಂ ಚಂದನ ಲೆಪಿತಾಂಗಂ ಮಹೋರಸಂ ದಿವ್ಯ ಮಯೂರ ವಾಹನಂ
ರುದ್ರಸ್ಯ ಸೂನುಂ ಸುರಲೋಕ ನಾದಂ ಬ್ರಾಹ್ಮಣ್ಯ ದೇವಂ ಶರಣಂ ಪ್ರಪದ್ಯೇ

ShaDAnanaM candana lepitAngaM mahOrasaM divya mayUra vAhanaM
rudrasya sUnuM suralOka nAdaM brAhmaNya dEvaM SaraNaM prapadyE

MADHWA

Subramanya sloka

Shadaananam Kumkuma-rakta-varnam
Mahaamayam Divya-mayoora-vahanam
Rudrasya Soonam Sura-sainya-natham
Guham Sadaa Sharanam-aham Prapadye

Meaning: I seek Sharan (refuge) in Guha (one who resides in the cave of the heart; another name for Subramanya), Who has 6 faces, Who adorns the color of Kumkum or Blood (red), one Who is a great warrior (?), one Whose vahana is the divine peacock, one Who is Rudra’s (Shiva’s) son, one Who is the leader of the army of devas.

dasara padagalu · MADHWA · subramanya · Vijaya dasaru

Subbaraya subakaya

ಸುಬ್ಬರಾಯ ಶುಭ ಕಾಯಾ |
ಸುಬ್ಬರಾಯ ಶುಭ ಕಾಯಂಗಜ ನೀನೆ ||
ನಿಬ್ಬರ ಮಹಿಮಾ ದಯಾಂಬುಧಿ ಸ್ಕಂದಾ ||pa||

ಮಾರಾ ಭರತನೆ ಶಂಬ | ರಾರಿ ಸನತ್ಕುಮಾರ ಕು |
ಮಾರಾ ಸಾಂಬಾ ||
ಸಾರಿದೆ ನಿನ್ನವತಾರ ಮೂಲರೂಪ ||
ಸಾರಿಸಾರಿಗೆ ಸಂಸಾರಮನ ವಿ ||
ಸ್ತಾರವಾಗದಂತೆ
ಹಾರಿಸುದುರವ್ಯಾಪಾರ ಗುಣ ಪಾರಾವಾರಾ ||1||

ಮಾಡುವೆ ವಂದನೆ ಸತತ | ಸಜ್ಜನರೊಳ |
ಗಾಡಿಸು ಭಕ್ತ ಪ್ರೀತಾ ||
ಪಾಡಿದವರ ಕಾ | ಪಾಡುವ ರತಿ-ಪತಿ |
ಈಡಾರು ನಿನಗೇ ನಾಡಿನೊಳಗೆಲ್ಲ |
ಬೇಡುವೆ ದಯವನ್ನು | ಮಾಡುವಿರಕುತಿಯ |
ನೀಡು ಬಿಡದಲೆ ನೋಡು||2||

ಕುಕ್ಕೆಪುರಿಯ ನಿಲಯಾ | ಶ್ರೀಧರ ಬೊಮ್ಮ |
ಮುಕ್ಕಣ್ಣಗಳ ತನಯ ||
ಸೊಕ್ಕಿದ ತಾರಕ ರಕ್ಕಸ ಹರ ದೇ |
ವಕ್ಕಳ ನಿಜ ದಳಕೆ ನಾಯಕನಾದೆ ||
ಪಕ್ಕಿವಾಹನ ಸಿರಿ ವಿಜಯವಿಠ್ಠಲನ |
ಚಕ್ರ ಐದೊಂದು ವಕ್ರಾ ||3||

Subbaraya subakaya |
Subbaraya nija kayangaja nine |
Nibbara mahima mahambudhi skanda || pa||

Mara Baratane sambarari | sanatku |
Mara kumara samba |
Saride ninnavatara mularupa ||
Sari sarige samsarake mana | vi |
Staravaguvante | harisu |
Dara vyapara guna paravara || 1 ||

Maduve vandane satata | sajjanarola |
Gadisu Bakta prita |
Padidavara kapaduva rati pati ||
Idaru ninagi nadinolagella |
Beduve dayavannu madu virakutiya |
Nidu bidadale nodu || 2 ||

Kukkepuriya nilaya | sridhara bomma |
Mukkannagala tanaya |
Sokkida taraka rakkasa hara | de ||
Vakkala nija dalake nayakanade |
Pakshivahana siri vijayaviththalana |
Chakra aidondu vaktra || 3 ||

dasara padagalu · MADHWA · subramanya

Dasara padagalu on Subramanya devaru

ಶರಣು ಶರಣು ರತಿನಾಥಾ ।
ಸುರವರ ಅನಿರುದ್ಧನ ತಾತಾ ।
ಕರುಣಾ ಪಯೋನಿಧಿ ರುಗ್ಮಿಣೀ ಜಾತಾ ।। ಪ ।।

ತ್ವರದಿಂ ಲಾಲಿಸು ಮಾತಾ ।
ಭರತನೆ ಸನತ್ಕುಮಾರಾ ।
ಸುದರುಶನ ಪರಮೋದಾರಾ ।।
ಹರನಂದನ ನತ ಬಂದು ಕುಮಾರಾ ।
ಕರ ಪಿಡಿ ಕೃಷ್ಣ ಕುಮಾರಾ ।। 1।।

ಗುರು ಮೊರೆ ಇಡಲೈತಂದೂ । ದಿವಿ ।
ಜರರಿಗೆ ಮನಸಿಗೆ ತಂದೂ ।
ತರುಣಿಯ ಬಿನ್ನಪ ಶಿವನಲ್ಲಿ ಬಂದು ।
ಶರೀರವ ಕರಗಿಸಿದೆಂದೂ ।। ಚರಣ ।।

ಮೀನಿನ ಬಸರೊಳು ಪೊಕ್ಕೆ ।
ಆ ಮಾನವರ ಕೈಗೆ ಸಿಕ್ಕೆ ।
ದಾನವನನ್ನು ಬಿಸುಟಿದೆ ಕುಕ್ಕೆ ।
ಆ ನೊರಣಿಸಲಿಕ್ಕಿದು ಶಕ್ಕೆ ।। 2 ।।

ಭುವನದ ಅಶೋಕ ಚೂತಾ ।
ನವ ಮಲ್ಲಿಕುತ್ಪಲ ಧರಿತಾ ।
ಪವನ ಉಡುಗಣಪ ವಸಂತ ಮಿಳಿತಾ ।
ಸುವಿಶಾಲ ಅದ್ಭುತ ಚರಿತಾ ।। 3 ।।

ಅಕಳಂಕನಂಗ ಮಾರಾ ।
ಮಕರ ಧ್ವಜ ಶುಕದೇರಾ ।
ಅಕುಟಿಲ ಪ್ರಾಣೇಶವಿಠಲನುದಾರಾ ।
ಸುಕಥೆ ಅರುಪು ಗಂಭೀರಾ ।। ಚರಣ ।।

Saranu saranu ratinatha |
Suravara aniruddhana tata |
Karuna payonidhi rugmini jata || pa||

Tvaradim lalisu mata |
Baratane sanatkumara |
Sudarusana paramodara ||
Haranandana nata bandu kumara |
Kara pidi krushna kumara || 1 ||

Guru more idalaitandu | divi |
Jararige manasige tandu |
Taruniya binnapa Sivanalli bandu |
Sarirava karagisidendu || 2 ||

Minina basarolu pokke |
A manavara kaige sikke |
Danavanannu bisutide kukke |
A noranisalikkidu Sakke || 3 ||

Buvanada asoka cuta |
Nava mallikutpala dharita |
Pavana uduganapa vasanta milita |
Suvisala adbuta carita || 4 ||

Akalankananga mara |
Makara dhvaja sukadera |
Akutila pranesavithalanudara |
Sukathe arupu gambira || 5 ||


 

ಸುಬ್ಬರಾಯ ಶುಭ ಕಾಯಾ |
ಸುಬ್ಬರಾಯ ಶುಭ ಕಾಯಂಗಜ ನೀನೆ ||
ನಿಬ್ಬರ ಮಹಿಮಾ ದಯಾಂಬುಧಿ ಸ್ಕಂದಾ ||pa||

ಮಾರಾ ಭರತನೆ ಶಂಬ | ರಾರಿ ಸನತ್ಕುಮಾರ ಕು |
ಮಾರಾ ಸಾಂಬಾ ||
ಸಾರಿದೆ ನಿನ್ನವತಾರ ಮೂಲರೂಪ ||
ಸಾರಿಸಾರಿಗೆ ಸಂಸಾರಮನ ವಿ ||
ಸ್ತಾರವಾಗದಂತೆ
ಹಾರಿಸುದುರವ್ಯಾಪಾರ ಗುಣ ಪಾರಾವಾರಾ ||1||

ಮಾಡುವೆ ವಂದನೆ ಸತತ | ಸಜ್ಜನರೊಳ |
ಗಾಡಿಸು ಭಕ್ತ ಪ್ರೀತಾ ||
ಪಾಡಿದವರ ಕಾ | ಪಾಡುವ ರತಿ-ಪತಿ |
ಈಡಾರು ನಿನಗೇ ನಾಡಿನೊಳಗೆಲ್ಲ |
ಬೇಡುವೆ ದಯವನ್ನು | ಮಾಡುವಿರಕುತಿಯ |
ನೀಡು ಬಿಡದಲೆ ನೋಡು||2||

ಕುಕ್ಕೆಪುರಿಯ ನಿಲಯಾ | ಶ್ರೀಧರ ಬೊಮ್ಮ |
ಮುಕ್ಕಣ್ಣಗಳ ತನಯ ||
ಸೊಕ್ಕಿದ ತಾರಕ ರಕ್ಕಸ ಹರ ದೇ |
ವಕ್ಕಳ ನಿಜ ದಳಕೆ ನಾಯಕನಾದೆ ||
ಪಕ್ಕಿವಾಹನ ಸಿರಿ ವಿಜಯವಿಠ್ಠಲನ |
ಚಕ್ರ ಐದೊಂದು ವಕ್ರಾ ||3||

Subbaraya subakaya |
Subbaraya nija kayangaja nine |
Nibbara mahima mahambudhi skanda || pa||

Mara Baratane sambarari | sanatku |
Mara kumara samba |
Saride ninnavatara mularupa ||
Sari sarige samsarake mana | vi |
Staravaguvante | harisu |
Dara vyapara guna paravara || 1 ||

Maduve vandane satata | sajjanarola |
Gadisu Bakta prita |
Padidavara kapaduva rati pati ||
Idaru ninagi nadinolagella |
Beduve dayavannu madu virakutiya |
Nidu bidadale nodu || 2 ||

Kukkepuriya nilaya | sridhara bomma |
Mukkannagala tanaya |
Sokkida taraka rakkasa hara | de ||
Vakkala nija dalake nayakanade |
Pakshivahana siri vijayaviththalana |
Chakra aidondu vaktra || 3 ||


ವರಗಳನು ಕೊಡುವುದು ವಾಸುಕಿಯ ಪ್ರಿಯಾ ।
ಕರುಣದಿಂದಲಿ ಒಲಿದು ಕಂಡಮಾತುರದಲಿ ।। ಪ |।

ಇಂದ್ರ ಸಮಾನ ದೇವತೆಯೆ ರತಿಪತಿಯೇ ।
ಇಂದಿರೇಶನ ನಿಜ ಕುಮಾರ । ಮಾರ ।
ಒಂದು ಕಾಲದಲಿ ಸುಂದರನೆನಿಸಿಕೊಂಡಿರ್ದ ।
ಬಂಧುವೇ ಅಹಂಕಾರ ಪ್ರಾಣಗಿಂದಧಿಕನೇ ।। 1 ।।

ವನಜ ಸಂಭವನು ಸೃಷ್ಠಿ ಸೃಜಿಪಗೋಸುಗ ।
ಮನದಲ್ಲಿ ಪುಟ್ಟಿಸೆ ಚತುರ ಜನರ ।
ಮುನಿಗಳೊಳಗೆ ಸನತ್ಕುಮಾರನಾಗಿ ।
ಜನಿಸಿ ಯೋಗ ಮಾರ್ಗದಲ್ಲಿ ಚರಿಸಿದ ಕಾಮಾ ।। 2 ।।

ತಾರಕಾಸುರನೆಂಬ ಬಹು ದುರಳ ತನದಲಿ ।
ಗಾರು ಮಾಡುತಿರಲು ಸುರಗಣವನು ।
ಗೌರಿ ಮಹೇಶ್ವರರಿಗೆ ಮಗನಾಗಿ ಪುಟ್ಟಿ ।
ಧಾರುಣಿಯೊಳಗೆ ಸ್ಕಂಧ ನೆನಿಸಿದೆ ।।3 ।।

ರುಕ್ಮಿಣಿಯಲಿ ಜನಿಸಿ ಮತ್ಸ್ಯ ಉದರದಲಿ ।
ಪೊಕ್ಕು ಶಿಶುವಾಗಿ ಸತಿಯಿಂದ ಬೆಳೆದು ।
ರಕ್ಕಸ ಶಂಬರನೊಡನೆ ಕಾದು ಗೆದ್ದು ಮರಳಿ ।
ಚಕ್ಕನೆ ಸಾಂಬ ನೆನಿಸಿದೆ ಜಾಂಬವತಿಯಲ್ಲಿ ।। 4 ।।

ಜನಪ ದಶರಥನಲ್ಲಿ ಭರತನಾಗಿ ಪುಟ್ಟಿದೆ ।
ಮನೋ ವೈರಾಗ್ಯ ಚಕ್ರಾಭಿಮಾನಿ ।
ಯೆನಗೊಲಿದ ವಿಜಯವಿಠ್ಠಲರೇಯನಂಘ್ರಿ ।
ಅರ್ಚನೆ ಮಾಡುವ ಸುಬ್ರಹ್ಮಣ್ಯ ಬಲು ಧನ್ಯ ।। 5 ।।

Varagalanu koduvudu vasukiya priya |
Karunadindali olidu kandamaturadali || pallavi ||

Indra samana devateye ratipatiye |
Indiresana nija kumara | mara |
Ondu kaladali sundaranenisikondirda |
Bandhuve ahankara pranagindadhikane || 1 ||

Vanaja sambavanu srushthi srujipagosuga |
Manadalli puttise catura janara |
Munigalolage sanatkumaranagi |
Janisi yoga margadalli carisida kama || 2 ||

Tarakasuranemba bahu durala tanadali |
Garu madutiralu suraganavanu |
Gauri mahesvararige maganagi putti |
Dharuniyolage skandha neniside || 3 ||

Rukminiyali janisi matsya udaradali |
Pokku sisuvagi satiyinda beledu |
Rakkasa sambaranodane kadu geddu marali |
Chakkane samba neniside jambavatiyalli || 4 ||

Janapa dasarathanalli baratanagi puttide |
Mano vairagya chakrabimani |
Yenagolida vijayaviththalareyanangri |
Arcane maduva subrahmanya balu dhanya || 5 ||


ಸಂತತಂ ತೋಷಂ ದೇಹಿ ತ್ವಂ ದೇಹಿ
ಶ್ರೀ ಸುಬ್ರಹ್ಮಣ್ಯ ದೇಹಿ ತ್ವಂ ದೇಹಿ ||pa||

ದೇಹಿ ದೇಹಿ ತವ ಸ್ನೇಹ ಸುಖ ವಚಂ
ಬ್ರೂಹಿ ಸುವಚನಂ ಗಹನ ಜ್ಞಾನಂ ||1||

ಅಭ್ರೋಡುಪ ನಿಭ ಶುಭ್ರಶರೀರಾ
ದಭ್ರ ದಯಾನಿಧೆ ವಿಭ್ರಾಜಿತಶಂ ||2||

ವಾಸವ ಸೇನಾಧೀಶ ಖಳಾನ್ವಯ
ನಾಶ ಸ್ವಜನ ಪರಿಪೋಷ ಸುತೋಷಂ ||3||

ಭೂರಿ ಫಲದ ಭಯದೂರ ಕುಮಾರ ಕು
ಮಾರ ಸುಧಾರಾತೀರಗ ಸುಮತಿಂ ||4||

ಪನ್ನಗ ನೃಪ ಸುಪನ್ನಗನಗಪ ಪ್ರ
ಸನ್ನವೆಂಕಟಪತಿ ಚಿನ್ಮಯ ಭಕ್ತಿಂ ||5||

santataM tOShaM dEhi tvaM dEhi
SrI subrahmaNya dEhi tvaM dEhi ||pa||

dEhi dEhi tava snEha suKa vacaM
brUhi suvacanaM gahana j~jAnaM ||1||

aBrODupa niBa SuBraSarIrA
daBra dayAnidhe viBrAjitaSaM ||2||

vAsava sEnAdhISa KaLAnvaya
nASa svajana paripOSha sutOShaM ||3||

BUri Palada BayadUra kumAra ku
mAra sudhArAtIraga sumatiM ||4||

pannaga nRupa supannaganagapa pra
sannavenkaTapati chinmaya BaktiM ||5||