FESTIVALS · Ganga · gangopatti · MADHWA

Gangotpatti

The meaning of gangotpatti means the origin of Ganga Devi or incarnation. This festival is observed on the Vaisakha Sukla Saptami. It is said that all the sins are removed by worshipping Goddess Ganga Devi on that day.

We all know that Bhageeratha brought the river Ganga to the Earth from Deva Loka. The river on its way, flooded into the Ashrama of Janhu Maharishi.

He got angry and swallowed the river by doing aachamana. Bhageeratha in great distress, begged Maharishi to released the river.

The kind-hearted, Maharishi, released the river, through his right ear. He thought if he releases the river from his mouth, it would become ‘uchchishta’. . That day is celebrated as  Gangot-patti. from then river Ganga became ‘Janhavi’ — since she became the daughter of Janhu Maharishi.

On this day, Ganga Puja is celebrated in the house.

Perform shodasopachara Pooja to Kalasa along with Ganga thaali

dasara padagalu · Ganga · MADHWA · purandara dasaru

Bhagirathi devi bayanivarane gange

ಭಾಗೀರಥೀದೇವಿ ಭಯನಿವಾರಣೆ ಗಂಗೆ |
ಸಾಗರನ ನಿಜರಾಣಿ ಸಕಲಕಲ್ಯಾಣಿ ||pa||

ಒಮ್ಮೆ ಶ್ರೀಹರಿ ಪಾದಕಮಲದಿಂದುದುಭವಿಸಿ |
ಬ್ರಹ್ಮಕರ ಪಾತ್ರೆಯಲಿ ನಿಂದು ಬಂದೆ ||
ಶ್ರೀ ಮನ್ನಾರಾಯಣನ ಪಾದತೀರ್ಥವಾಗಿ |
ಬೊಮ್ಮಾಂಡವನು ಪಾವನಮಾಡ ಬಂದೆ ||1||

ದೇವಿ ನೀ ವಿಷ್ಣುಪಾದೋದಕವೆಂದೆನಿಸಿ |
ದೇವತೆಗಳಿಗೆಲ್ಲ ಅಧಿಕವಾದೆ ||
ದೇವರೆಲ್ಲರು ನೆರೆದು ತಲೆಬಾಗಿದರು ಮಹಾ-|
ದೇವನ ಶಿರದಿಂದ ಧರೆಗಿಳಿದು ಬಂದೆ ||2||

ಜಹ್ನವಿನುದರದಿ ಪೂಕ್ಕ ಕಾರಣದಿಂದ |
ಜಾಹ್ನವಿಯೆಂದು ನೀನೆನಿನೆಕೊಂಡೆ ||
ಮುನ್ನ ನರಕಕ್ಕಿಳಿದ ಸಗರರಾಯನ ವಂಶ- |
ವನ್ನು ಪಾವನಮಾಡಿ ಪೊರೆಯಲು ಬಂದೆ ||3||

ನಿಟ್ಟಿಸಲು ಮುನ್ನಾರು ಜನ್ನಪಾತಕಹರಣ |
ದಿಟ್ಟಿಸಲು ಮೂರುಜನ್ಮದಿ ಮುಕುತಿಯು ||
ಮುಟ್ಟಿ ಮಾಡಿದರೊಂದು ಸ್ನಾನಮಾತ್ರದಲಿ |
ಸುಟ್ಟು ಹೋಹುದು ಸಾಸಿರಜನ್ಮ ಪಾಪ ||4||

ಹಲವು ಪರಿಯಲಿ ಹರಿಯ ಸ್ಮರಣೆಯಿಲ್ಲದೆ ಭವ-|
ದೊಳಗೆ ಸಿಲುಕಿ ಕಡುನೊಂದೆ ನಾನು ||
ಹಲವು ಮಾತೇಕೆ ಶ್ರೀ ಪುರಂದರವಿಠಲನ |
ಚೆಲುವಪದದಿಂದಿಳಿದು ಒಲಿದು ದಯೆ ಮಾಡೆ ||5||

BAgIrathIdEvi BayanivAraNe gange |
sAgarana nijarANi sakalakalyANi ||pa||

omme SrIhari pAdakamaladinduduBavisi |
brahmakara pAtreyali nindu bande ||
SrI mannArAyaNana pAdatIrthavAgi |
bommAnDavanu pAvanamADa bande ||1||

dEvi nI viShNupAdOdakavendenisi |
dEvategaLigella adhikavAde ||
dEvarellaru neredu talebAgidaru mahA-|
dEvana Siradinda dharegiLidu bande ||2||

jahnavinudaradi pUkka kAraNadinda |
jAhnaviyendu nIneninekonDe ||
munna narakakkiLida sagararAyana vaMSa- |
vannu pAvanamADi poreyalu bande ||3||

niTTisalu munnAru jannapAtakaharaNa |
diTTisalu mUrujanmadi mukutiyu ||
muTTi mADidarondu snAnamAtradali |
suTTu hOhudu sAsirajanma pApa ||4||

halavu pariyali hariya smaraNeyillade Bava-|
doLage siluki kaDunonde nAnu ||
halavu mAtEke SrI purandaraviThalana |
celuvapadadindiLidu olidu daye mADe ||5||

dasara padagalu · Ganga · MADHWA · Vijaya dasaru

JAya Jayathu Jahnaviye baktha sanjeevi

ಜಯಜಯತು ಜಾಹ್ನವಿಯೆ ಭಕ್ತ ಸಂಜೀವಿ
ಜಯ ಮಂಗಳವನೀಯೆ ಜಯ ನಮ್ಮ ಕಾಯೆ ||pa||

ಕಮಲಜನು ಪಾತ್ರೆಯೊಳು ಧರಿಸಲಾ ಹರಿಪಾದ-
ಕಮಲವನು ತೊಳೆಯಲಾವೇಗದಿಂದ
ವಿಮಲ ಸಂಗತಿಯಿಂದ ಮಂದಾದಿನಿಯೆನಿಸಿ
ಸುಮನ ಸಾವನಿಯಲ್ಲಿ ಮೆರೆದೆ ಸುರನದಿಯೆ||1||

ಧ್ರುವಲೋಕಕಿಳಿದು ಅಮರಾವತಿಯ ಸಾರಿದೆ
ರವಿಯಂತೆ ಪೊಳೆಯುತ ಆ ಜನ ಮಧ್ಯದಿಂ
ಭುವನದೊಳಗೀರೈದು ನೂರು ಯೋಜನದಗಲ
ತವಕದಿಂದಲಿ ಧುಮುಕಿ ಚತುರ ಭಾಗವಾದೆ ||2||

ಶಿವನ ಮಸ್ತಕದಲ್ಲಿ ಶೋಭಿಸುವ ಮಹಮಹಿಮೆ
ಭವದೊರೆ ಭಗೀರಥಗೆ ವಲಿದು ಬರುತ
ಕವಿ ಜನ್ಹುಮುನಿಯಿಂದ ಪುಟ್ಟಿ ಹಿಮಗಿರಿ ದಾಟಿ
ಜವನ ಭಗಿನಿಯ ಕೂಡಿ ಮಣಿಕರ್ಣಿಕೆಯ ನೆರದೆ ||3||

ಅಳಕನಂದನೆ ನಿನ್ನ ಸ್ಮರಣೆ ಮಾಡಿದ ಜನಕೆ
ಕುಲಕೋಟಿ ಪಾವನವು ಸಂದೇಹವಿಲ್ಲ
ಸಲಿಲವನು ಸ್ಮರಿಸಿ ಮಜ್ಜನ ಪಾನ ಮಾಡಿದಗೆ
ಪೊಳೆಗೆ ವೈಕುಂಠಪುರ ಅವನ ಹೃದಯದಲಿ ||4||

ದೇಶದೇಶಗಳಿಂದ ಬಂದ ಸುಜನರ ಪಾಪ
ನಾಶನವ ಮಾಳ್ಪ ನೀ ನಿಷ್ಕಾಮದಿ
ಕಾಶಿಸ್ಥ ಬಿಂದು ಮಾಧವ ವಿಜಯವಿಠ್ಠಲನ
ಸೋಸಿನಿಂದಲಿ ಪೊಗಳುತಿಹೆ ಸುವಿಖ್ಯಾತೆ ||5||

jayajayatu jAhnaviye Bakta saMjIvi
jaya mangaLavanIye jaya namma kAye ||pa||

kamalajanu pAtreyoLu dharisalA haripAda-
kamalavanu toLeyalAvEgadinda
vimala sangatiyinda mandAdiniyenisi
sumana sAvaniyalli merede suranadiye||1||

dhruvalOkakiLidu amarAvatiya sAride
raviyaMte poLeyuta A jana madhyadiM
BuvanadoLagIraidu nUru yOjanadagala
tavakadindali dhumuki catura BAgavAde ||2||

Sivana mastakadalli SOBisuva mahamahime
Bavadore BagIrathage validu baruta
kavi janhumuniyinda puTTi himagiri dATi
javana Baginiya kUDi maNikarNikeya nerade ||3||

aLakanandane ninna smaraNe mADida janake
kulakOTi pAvanavu sandEhavilla
salilavanu smarisi majjana pAna mADidage
poLege vaikunThapura avana hRudayadali ||4||

dESadESagaLinda banda sujanara pApa
nASanava mALpa nI niShkAmadi
kASistha bindu mAdhava vijayaviThThalana
sOsinindali pogaLutihe suviKyAte ||5||

dasara padagalu · Ganga · MADHWA · Vijaya dasaru

Jaya Jahnavi devi Jaya bakuta

ಜಯ ಜಾಹ್ನವಿ ದೇವಿ ಜಯ ಭಕುತ ಸಂಜೀವಿ
ಜಯ ಪ್ರದಾಯಕ ವೀವೆ
ಜಯ ಎಮ್ಮ ಕಾವೆ ||pa||

ಅಜನ ಸಭೆಯಲಿ ವರುಣಗೆ ಶಾಪವು ಬರಲು
ಪ್ರಜಪಾಲನಾದ ಶಂತುನ ನಾಮದೀ
ನಿಜರೂಪದಲಿ ಬಂದು ಅಷ್ಟವಸುಗಳ ಪಡೆದೆ
ಭಜಿಸಬಲ್ಲೆನೆ ನಿನ್ನ ಬಹು ಭಾಗ್ಯವಂತೇ||1||

ಭಗೀರಥಗೆ ವೊಲಿದು ಭವದೂರ ಪಾವನಕಾರೆ
ಸಗರರಾಯನ ವಂಶವನ್ನೆ ಉದ್ಧಾರೆ
ಅಗಣಿತೋದಯ ಪಾರಂವಾರೆ ಶುಭಶರೀರೆ
ಮುಗುವೆನು ಕರವೆತ್ತಿ ಸಂತತ ವಾರಂವಾರೆ ||2||

ಏನು ಧನ್ಯರೊ ಎನ್ನ ಕುಲಕ ಪಾವನೆಯೆನಲು
ನೀನುಬ್ದಿ ಪೊರದೆ ಉತ್ಸಾಹದಿ ಮೆರೆದೆ
ಮಾನನಿಧಿ ವಿಜಯವಿಠ್ಠಲನ ಸನ್ನಿಧಿಯಲ್ಲಿ ಜ್ಞಾನ
ಪೂರ್ವಕ ವೊಲಿದು ಭಕುತಿ ಕೊಡು ಎನಗೆ ||3||
jaya jAhnavi dEvi jaya Bakuta sanjIvi
jaya pradAyaka vIve
jaya emma kAve ||pa|

ajana saBeyali varuNage SApavu baralu
prajapAlanAda SaMtuna nAmadI
nijarUpadali baMdu aShTavasugaLa paDede
Bajisaballene ninna bahu BAgyavantE||1||

BagIrathage volidu BavadUra pAvanakAre
sagararAyana vaMSavanne uddhAre
agaNitOdaya pAraMvAre SuBaSarIre
muguvenu karavetti santata vAraMvAre ||2||

Enu dhanyaro enna kulaka pAvaneyenalu
nInubdi porade utsAhadi merede
mAnanidhi vijayaviThThalana sannidhiyalli j~jAna
pUrvaka volidu Bakuti koDu enage ||3||

dasara padagalu · Ganga · MADHWA · Vijaya dasaru

Gange shobana tharange

ಗಂಗೆ ಶೋಭನ ತರಂಗೆ
ರಂಗನಂಘ್ರಿಯಂಗುಷ್ಠೆ ಸಂಗೆ ಭವಭಂಗೆ ||pa||

ಇಂದ್ರಸೇನನು ಸ್ವರ್ಗವ ಪರಿಹರಿಸಿ ಯಿರಲು
ಉಪೇಂದ್ರ ಭಗವಂತ ಪಟುರೂಪ ಧರಿಸಿ
ಚಂದ್ರಮಂಡಲ ಮೀರಿ ಬೆಳದಜಾಂಡವನೊಡಿಯೆ
ಸಾಂದ್ರಗುಣದಿಂದ ಉದ್ಭವಿಸಿದೆ ಜನನಿ ||1||

ಕಮಲಜನು ಪಾತ್ರಿಯೊಳು ಧರಿಸಿ ಸಿರಿಹರಿಪಾದ
ಕಮಲವನು ತೊಳಿಯಲಾವೇಗದಿಂದ
ವಿಮಲಗತಿಯಲಿ ಬಂದು ಮಂದಾಕಿನಿ ಎನಿಸಿ
ಸುಮನ ಸಾವನಿಯಲ್ಲಿ ಪರಿದೆ ಸ್ವರ್ಣನದಿಯೇ||2||

ಧ್ರುವಲೋಕಕಿಳಿದು ಅಮರಾಲಯವ ಸಾರಿದೆ
ರವಿಯಂತೆ ಪೊಳೆವುತ ಅಜನಮಧ್ಯ
ತವಕದಿಂದಲಿ ಧುಮುಕಿ ಚತುರಭಾಗವಾದೆ
ಭವ ಪರಿಹರಿಸಿ ಭಾಗೀರಥಿ ಎನಿಸಿದೆ ||3||

ಶಿವನ ಮಸ್ತಕದಲ್ಲಿ ಶೋಭಿಸುವ ಮಹಾಮಹಿಮೆ
ಭವದೊರೆ ಭಗೀರಥಗೆ ಒಲಿದು ಬರುತ
ಕವಿಜನ್ಹು ಮುನಿಯಿಂದ ಪುಟ್ಟಿ ಹಿಮಗಿರಿದಾಟಿ
ಜವನ ಮನಿಯ ಕೊಡ ಮಣಿಕರ್ಣಿಕೆ ನೆರದೆ||4||

ಅಳಕನಂದನೆ ನಿನ್ನ ಸ್ಮರಣೆ ಮಾಡಿದ ಜನಕೆ
ಕುಲಕೋಟಿ ಉದ್ಧಾರ ನಿಃಸಂದೇಹಾ
ಸಲಿಲವನು ಸ್ಪರ್ಶ ಮಜ್ಜನ ಪಾನ ಪಾಡಿದರೆ
ಪೊಳೆವ ವೈಕುಂಠಪುರ ಅವನ ಹೃದಯದಲಿ||5||

ಕುಲಪ್ರವಹವಾಗಿದ್ದ ಜೀವರ ಪುಣ್ಯವನು
ಹೇಳಿ ಕೇಳುವವನಾರು ಮೂಲೋಕದಿ
ಸೀಲಗುಣ ಸಂಪನ್ನೆ ವರುಣನರ್ಧಾಂಗಿನಿ
ಕಾಲ ಕಾಲಕೆ ನಿನ್ನ ಧ್ಯಾನದಿಂದಲ್ಲಿರಿಸು ||6||

ದೇಶದೇಶದಲಿಂದ ಬಂದ ಸುಜನರ ಪಾಪ
ನಾಶ ಮಾಳ್ಪ ಕಾಮಿತ ಫಲಪ್ರದೆ
ಕಾಸಿ ನಿರ್ಮಿತ ಬಿಂದು ಮಾಧವ ಚಲುವ ಶ್ರೀನಿವಾಸ
ಯದುಪತಿ ವಿಜಯವಿಠ್ಠಲನ ಸುತೆ ಖ್ಯಾತೇ ||7||

gange SOBana tarange
rangananGriyanguShThe sange BavaBange ||pa||

indrasEnanu svargava pariharisi yiralu
upEndra Bagavanta paTurUpa dharisi
candramanDala mIri beLadajAnDavanoDiye
sAndraguNadinda udBaviside janani ||1||

kamalajanu pAtriyoLu dharisi siriharipAda
kamalavanu toLiyalAvEgadinda
vimalagatiyali baMdu maMdAkini enisi
sumana sAvaniyalli paride svarNanadiyE||2||

dhruvalOkakiLidu amarAlayava sAride
raviyante poLevuta ajanamadhya
tavakadindali dhumuki caturaBAgavAde
Bava pariharisi BAgIrathi eniside ||3||

Sivana mastakadalli SOBisuva mahAmahime
Bavadore BagIrathage olidu baruta
kavijanhu muniyinda puTTi himagiridATi
javana maniya koDa maNikarNike nerade||4||

aLakanandane ninna smaraNe mADida janake
kulakOTi uddhAra niHsaMdEhA
salilavanu sparSa majjana pAna pADidare
poLeva vaikuMThapura avana hRudayadali||5||

kulapravahavAgidda jIvara puNyavanu
hELi kELuvavanAru mUlOkadi
sIlaguNa saMpanne varuNanardhAngini
kAla kAlake ninna dhyAnadiMdallirisu ||6||

dESadESadalinda banda sujanara pApa
nASa mALpa kAmita Palaprade
kAsi nirmita bindu mAdhava caluva SrInivAsa
yadupati vijayaviThThalana sute KyAtE ||7||

ashtothram · Ganga · MADHWA

Ganga Ashtothra Namavali

ಓಂ ಗಂಗಾಯೈ ನಮಃ ।
ಓಂ ವಿಷ್ಣುಪಾದಸಂಭೂತಾಯೈ ನಮಃ ।
ಓಂ ಹರವಲ್ಲಭಾಯೈ ನಮಃ ।
ಓಂ ಹಿಮಾಚಲೇಂದ್ರತನಯಾಯೈ ನಮಃ ।
ಓಂ ಗಿರಿಮಂಡಲಗಾಮಿನ್ಯೈ ನಮಃ ।
ಓಂ ತಾರಕಾರಾತಿಜನನ್ಯೈ ನಮಃ ।
ಓಂ ಸಗರಾತ್ಮಜತಾರಕಾಯೈ ನಮಃ ।
ಓಂ ಸರಸ್ವತೀಸಮಯುಕ್ತಾಯೈ ನಮಃ ।
ಓಂ ಸುಘೋಷಾಯೈ ನಮಃ ।
ಓಂ ಸಿಂಧುಗಾಮಿನ್ಯೈ ನಮಃ ।
ಓಂ ಭಾಗೀರತ್ಯೈ ನಮಃ ।
ಓಂ ಭಾಗ್ಯವತ್ಯೈ ನಮಃ ।
ಓಂ ಭಗೀರತರಥಾನುಗಾಯೈ ನಮಃ ।
ಓಂ ತ್ರಿವಿಕ್ರಮಪದೋದ್ಭೂತಾಯೈ ನಮಃ ।
ಓಂ ತ್ರಿಲೋಕಪಥಗಾಮಿನ್ಯೈ ನಮಃ ।
ಓಂ ಕ್ಷೀರಶುಭ್ರಾಯೈ ನಮಃ ।
ಓಂ ಬಹುಕ್ಷೀರಾಯೈ ನಮಃ ।
ಓಂ ಕ್ಷೀರವೃಕ್ಷಸಮಾಕುಲಾಯೈ ನಮಃ ।
ಓಂ ತ್ರಿಲೋಚನಜಟಾವಾಸಾಯೈ ನಮಃ ।
ಓಂ ಋಣತ್ರಯವಿಮೋಚಿನ್ಯೈ ನಮಃ ।
ಓಂ ತ್ರಿಪುರಾರಿಶಿರಃಚೂಡಾಯೈ ನಮಃ ।
ಓಂ ಜಾಹ್ನವ್ಯೈ ನಮಃ ।
ಓಂ ನರಕಭೀತಿಹೃತೇ ನಮಃ ।
ಓಂ ಅವ್ಯಯಾಯೈ ನಮಃ ।
ಓಂ ನಯನಾನಂದದಾಯಿನ್ಯೈ ನಮಃ ।
ಓಂ ನಗಪುತ್ರಿಕಾಯೈ ನಮಃ ।
ಓಂ ನಿರಂಜನಾಯೈ ನಮಃ ।
ಓಂ ನಿತ್ಯಶುದ್ಧಾಯೈ ನಮಃ ।
ಓಂ ನೀರಜಾಲಿಪರಿಷ್ಕೃತಾಯೈ ನಮಃ ।
ಓಂ ಸಾವಿತ್ರ್ಯೈ ನಮಃ ।
ಓಂ ಸಲಿಲಾವಾಸಾಯೈ ನಮಃ ।
ಓಂ ಸಾಗರಾಂಬುಸಮೇಧಿನ್ಯೈ ನಮಃ ।
ಓಂ ರಮ್ಯಾಯೈ ನಮಃ ।
ಓಂ ಬಿಂದುಸರಸೇ ನಮಃ ।
ಓಂ ಅವ್ಯಕ್ತಾಯೈ ನಮಃ ।
ಓಂ ಅವ್ಯಕ್ತರೂಪಧೃತೇ ನಮಃ ।
ಓಂ ಉಮಾಸಪತ್ನ್ಯೈ ನಮಃ ।
ಓಂ ಶುಭ್ರಾಂಗಾಯೈ ನಮಃ ।
ಓಂ ಶ್ರೀಮತ್ಯೈ ನಮಃ ।
ಓಂ ಧವಲಾಂಬರಾಯೈ ನಮಃ ।
ಓಂ ಆಖಂಡಲವನವಾಸಾಯೈ ನಮಃ ।
ಓಂ ಕಂಠೇಂದುಕೃತಶೇಕರಾಯೈ ನಮಃ ।
ಓಂ ಅಮೃತಾಕಾರಸಲಿಲಾಯೈ ನಮಃ ।
ಓಂ ಲೀಲಾಲಿಂಗಿತಪರ್ವತಾಯೈ ನಮಃ ।
ಓಂ ವಿರಿಂಚಿಕಲಶಾವಾಸಾಯೈ ನಮಃ ।
ಓಂ ತ್ರಿವೇಣ್ಯೈ ನಮಃ ।
ಓಂ ತ್ರಿಗುಣಾತ್ಮಕಾಯೈ ನಮಃ ।
ಓಂ ಸಂಗತ ಅಘೌಘಶಮನ್ಯೈ ನಮಃ ।
ಓಂ ಭೀತಿಹರ್ತ್ರೇ ನಮಃ ।
ಓಂ ಶಂಖದುಂದುಭಿನಿಸ್ವನಾಯೈ ನಮಃ ।
ಓಂ ಭಾಗ್ಯದಾಯಿನ್ಯೈ ನಮಃ ।
ಓಂ ನಂದಿನ್ಯೈ ನಮಃ ।
ಓಂ ಶೀಘ್ರಗಾಯೈ ನಮಃ ।
ಓಂ ಶರಣ್ಯೈ ನಮಃ ।
ಓಂ ಶಶಿಶೇಕರಾಯೈ ನಮಃ ।
ಓಂ ಶಾಂಕರ್ಯೈ ನಮಃ ।
ಓಂ ಶಫರೀಪೂರ್ಣಾಯೈ ನಮಃ ।
ಓಂ ಭರ್ಗಮೂರ್ಧಕೃತಾಲಯಾಯೈ ನಮಃ ।
ಓಂ ಭವಪ್ರಿಯಾಯೈ ನಮಃ ।
ಓಂ ಸತ್ಯಸಂಧಪ್ರಿಯಾಯೈ ನಮಃ ।
ಓಂ ಹಂಸಸ್ವರೂಪಿಣ್ಯೈ ನಮಃ ।
ಓಂ ಭಗೀರತಭೃತಾಯೈ ನಮಃ ।
ಓಂ ಅನಂತಾಯೈ ನಮಃ ।
ಓಂ ಶರಚ್ಚಂದ್ರನಿಭಾನನಾಯೈ ನಮಃ ।
ಓಂ ಓಂಕಾರರೂಪಿಣ್ಯೈ ನಮಃ ।
ಓಂ ಅನಲಾಯೈ ನಮಃ ।
ಓಂ ಕ್ರೀಡಾಕಲ್ಲೋಲಕಾರಿಣ್ಯೈ ನಮಃ ।
ಓಂ ಸ್ವರ್ಗಸೋಪಾನಶರಣ್ಯೈ ನಮಃ ।
ಓಂ ಸರ್ವದೇವಸ್ವರೂಪಿಣ್ಯೈ ನಮಃ ।
ಓಂ ಅಂಬಃಪ್ರದಾಯೈ ನಮಃ ।
ಓಂ ದುಃಖಹಂತ್ರ್ಯೈನಮಃ ।
ಓಂ ಶಾಂತಿಸಂತಾನಕಾರಿಣ್ಯೈ ನಮಃ ।
ಓಂ ದಾರಿದ್ರ್ಯಹಂತ್ರ್ಯೈ ನಮಃ ।
ಓಂ ಶಿವದಾಯೈ ನಮಃ ।
ಓಂ ಸಂಸಾರವಿಷನಾಶಿನ್ಯೈ ನಮಃ ।
ಓಂ ಪ್ರಯಾಗನಿಲಯಾಯೈ ನಮಃ ।
ಓಂ ಶ್ರೀದಾಯೈ ನಮಃ ।
ಓಂ ತಾಪತ್ರಯವಿಮೋಚಿನ್ಯೈ ನಮಃ ।
ಓಂ ಶರಣಾಗತದೀನಾರ್ತಪರಿತ್ರಾಣಾಯೈ ನಮಃ ।
ಓಂ ಸುಮುಕ್ತಿದಾಯೈ ನಮಃ ।
ಓಂ ಪಾಪಹಂತ್ರ್ಯೈ ನಮಃ ।
ಓಂ ಪಾವನಾಂಗಾಯೈ ನಮಃ ।
ಓಂ ಪರಬ್ರಹ್ಮಸ್ವರೂಪಿಣ್ಯೈ ನಮಃ ।
ಓಂ ಪೂರ್ಣಾಯೈ ನಮಃ ।
ಓಂ ಪುರಾತನಾಯೈ ನಮಃ ।
ಓಂ ಪುಣ್ಯಾಯೈ ನಮಃ ।
ಓಂ ಪುಣ್ಯದಾಯೈ ನಮಃ ।
ಓಂ ಪುಣ್ಯವಾಹಿನ್ಯೈ ನಮಃ ।
ಓಂ ಪುಲೋಮಜಾರ್ಚಿತಾಯೈ ನಮಃ ।
ಓಂ ಭೂದಾಯೈ ನಮಃ ।
ಓಂ ಪೂತತ್ರಿಭುವನಾಯೈ ನಮಃ ।
ಓಂ ಜಯಾಯೈ ನಮಃ ।
ಓಂ ಜಂಗಮಾಯೈ ನಮಃ ।
ಓಂ ಜಂಗಮಾಧಾರಾಯೈ ನಮಃ ।
ಓಂ ಜಲರೂಪಾಯೈ ನಮಃ ।
ಓಂ ಜಗದ್ಧಾತ್ರ್ಯೈ ನಮಃ ।
ಓಂ ಜಗದ್ಭೂತಾಯೈ ನಮಃ ।
ಓಂ ಜನಾರ್ಚಿತಾಯೈ ನಮಃ ।
ಓಂ ಜಹ್ನುಪುತ್ರ್ಯೈ ನಮಃ ।
ಓಂ ಜಗನ್ಮಾತ್ರೇ ನಮಃ ।
ಓಂ ಜಂಭೂದ್ವೀಪವಿಹಾರಿಣ್ಯೈ ನಮಃ ।
ಓಂ ಭವಪತ್ನ್ಯೈ ನಮಃ ।
ಓಂ ಭೀಷ್ಮಮಾತ್ರೇ ನಮಃ ।
ಓಂ ಸಿಕ್ತಾಯೈ ನಮಃ ।
ಓಂ ರಮ್ಯರೂಪಧೃತೇ ನಮಃ ।
ಓಂ ಉಮಾಸಹೋದರ್ಯೈ ನಮಃ ।
ಓಂ ಅಜ್ಞಾನತಿಮಿರಾಪಹೃತೇ ನಮಃ ।

OM gangAyai namaH |
OM viShNupAdasaMBUtAyai namaH |
OM haravallaBAyai namaH |
OM himAcalEMdratanayAyai namaH |
OM girimaMDalagAminyai namaH |
OM tArakArAtijananyai namaH |
OM sagarAtmajatArakAyai namaH |
OM sarasvatIsamayuktAyai namaH |
OM suGOShAyai namaH |
OM siMdhugAminyai namaH |
OM BAgIratyai namaH |
OM BAgyavatyai namaH |
OM BagIratarathAnugAyai namaH |
OM trivikramapadOdBUtAyai namaH |
OM trilOkapathagAminyai namaH |
OM kShIraSuBrAyai namaH |
OM bahukShIrAyai namaH |
OM kShIravRukShasamAkulAyai namaH |
OM trilOcanajaTAvAsAyai namaH |
OM RuNatrayavimOcinyai namaH |
OM tripurAriSiraHcUDAyai namaH |
OM jAhnavyai namaH |
OM narakaBItihRutE namaH |
OM avyayAyai namaH |
OM nayanAnandadAyinyai namaH |
OM nagaputrikAyai namaH |
OM niranjanAyai namaH |
OM nityaSuddhAyai namaH |
OM nIrajAlipariShkRutAyai namaH |
OM sAvitryai namaH |
OM salilAvAsAyai namaH |
OM sAgarAMbusamEdhinyai namaH |
OM ramyAyai namaH |
OM bindusarasE namaH |
OM avyaktAyai namaH |
OM avyaktarUpadhRutE namaH |
OM umAsapatnyai namaH |
OM SuBrAMgAyai namaH |
OM SrImatyai namaH |
OM dhavalAMbarAyai namaH |
OM AKanDalavanavAsAyai namaH |
OM kanThEndukRutaSEkarAyai namaH |
OM amRutAkArasalilAyai namaH |
OM lIlAlingitaparvatAyai namaH |
OM virincikalaSAvAsAyai namaH |
OM trivENyai namaH |
OM triguNAtmakAyai namaH |
OM sangata aGauGaSamanyai namaH |
OM BItihartrE namaH |
OM SaMKaduMduBinisvanAyai namaH |
OM BAgyadAyinyai namaH |
OM naMdinyai namaH |
OM SIGragAyai namaH |
OM SaraNyai namaH |
OM SaSiSEkarAyai namaH |
OM SAMkaryai namaH |
OM SaParIpUrNAyai namaH |
OM BargamUrdhakRutAlayAyai namaH |
OM BavapriyAyai namaH |
OM satyasandhapriyAyai namaH |
OM haMsasvarUpiNyai namaH |
OM BagIrataBRutAyai namaH |
OM anantAyai namaH |
OM SaraccandraniBAnanAyai namaH |
OM OMkArarUpiNyai namaH |
OM analAyai namaH |
OM krIDAkallOlakAriNyai namaH |
OM svargasOpAnaSaraNyai namaH |
OM sarvadEvasvarUpiNyai namaH |
OM aMbaHpradAyai namaH |
OM duHKahantryainamaH |
OM SAntisantAnakAriNyai namaH |
OM dAridryahantryai namaH |
OM SivadAyai namaH |
OM saMsAraviShanASinyai namaH |
OM prayAganilayAyai namaH |
OM SrIdAyai namaH |
OM tApatrayavimOcinyai namaH |
OM SaraNAgatadInArtaparitrANAyai namaH |
OM sumuktidAyai namaH |
OM pApahantryai namaH |
OM pAvanAngAyai namaH |
OM parabrahmasvarUpiNyai namaH |
OM pUrNAyai namaH |
OM purAtanAyai namaH |
OM puNyAyai namaH |
OM puNyadAyai namaH |
OM puNyavAhinyai namaH |
OM pulOmajArcitAyai namaH |
OM BUdAyai namaH |
OM pUtatriBuvanAyai namaH |
OM jayAyai namaH |
OM jangamAyai namaH |
OM jangamAdhArAyai namaH |
OM jalarUpAyai namaH |
OM jagaddhAtryai namaH |
OM jagadBUtAyai namaH |
OM janArcitAyai namaH |
OM jahnuputryai namaH |
OM jaganmAtrE namaH |
OM jaMBUdvIpavihAriNyai namaH |
OM Bavapatnyai namaH |
OM BIShmamAtrE namaH |
OM siktAyai namaH |
OM ramyarUpadhRutE namaH |
OM umAsahOdaryai namaH |
OM aj~jAnatimirApahRutE namaH |

dasara padagalu · Ganga · MADHWA · mahipathi dasaru

Jayadevi jayadevi jaya pavanagange

ಜಯದೇವಿ ಜಯದೇವಿ ಜಯ ಪಾವನಗಂಗೇ |
ಜಯಜಯ ತ್ರಿಪಥಗಾಮಿನಿ ಜಯ ತುಂಗತರಂಗೇ ||ಪ||

ಆದಿಲಿ ಶ್ರೀಹರಿ ಕೋಮಲ ಪದನಖದಿಂದೊಗದು |
ಸಾಧಿನಿ ವಾರಿಜಭವನಾ ಕರಪಾತ್ರಕೆ ಬಂದು |
ಸಾದರದಿಂದಾಶಿವನ ಕೆಂಜೆಡೆಯೊಳು ನಿಂದು |
ಮೇದಿನಿಗಿಳಿದು ನೀಬಂದೆ ಭಗೀರಥನೃಪಗೊಲಿದು ||1||

ಕಾಶಿಪ್ರಯಾಗದಿ ನಿಂದು ಉದ್ದರಿಸುತ ಕೆಲರಾ |
ಆಶೆಯ ಪೂರಿಸಲಾಗಿ ದಕ್ಷಿಣ ದಿಶೆದವರಾ |
ರಾಶಿಯ ಕನ್ಯಾ ಮೆಟ್ಟಲು ಸುರಗುರು ಗಂಭೀರಾ |
ಭಾಶಿಶಿ ತೋರಿದೆ ಬಂದು ಕೃಷ್ಣವೇಣಿಲಿ ಸದರಾ ||2||

ಹರಿಹರ ದೇವರು ದ್ರವರೂಪದಿ ಹರಿವುತಲೀ |
ನೆರೆನೀಕೂಡಿದ ಸಂಭ್ರಮ ಏನೆಂದುಸುರಲಿ |
ದರುಶನ ಮಾತ್ರದಲಾದೆನು ಮುಕ್ತನು ಭವದಲಿ |
ಗುರು ಮಹೀಪತಿಸುತ ಎನ್ನನು ರಕ್ಷಿಸು ಕರುಣದಲಿ ||3||

Jayadevi jayadevi jaya pavanagange |
Jayajaya tripathagamini jaya tungatarange ||pa||

Adili srihari komala padanakadindogadu |
Sadhini varijabavana karapatrake bandu |
Sadaradindasivana kenjedeyolu nindu |
Medinigilidu nibande bagirathanrupagolidu ||1||

Kasiprayagadi nindu uddarisuta kelara |
Aseya purisalagi dakshina disedavara |
Rasiya kanya mettalu suraguru gambira |
Basisi toride bandu krushnavenili sadara ||2||

Harihara devaru dravarupadi harivutali |
Nerenikudida sambrama Enendusurali |
Darusana matradaladenu muktanu Bavadali |
Guru mahipatisuta ennanu rakshisu karunadali ||3||