durga · MADHWA · pancha ratna sulaadhi · sulaadhi · Vijaya dasaru

Durga suladhi

ತಾಳ – ಧ್ರುವ

ದುರ್ಗಾ ದುರ್ಗೆಯೆ ಮಹದುಷ್ಟಜನ ಸಂಹಾರೆ
ದುರ್ಗಾಂತರ್ಗತ ದುರ್ಗೆ ದುರ್ಲಭೆ ಸುಲಭೆ
ದುರ್ಗಮವಾಗಿದೆ ನಿನ್ನ ಮಹಿಮೆ ಬೊಮ್ಮ
ಭರ್ಗಾದಿಗಳಿಗೆಲ್ಲ ಗುಣಿಸಿದರೂ
ಸ್ವರ್ಗ ಭೂಮಿ ಪಾತಾಳ ವ್ಯಾಪುತ ದೇವಿ
ವರ್ಗಕ್ಕೆ ಮೀರಿದ ಬಲು ಸುಂದರೀ
ದುರ್ಗಣದವರ ಬಾಧೆ ಬಹಳವಾಗಿದೆ ತಾಯಿ
ದುರ್ಗತಿಹಾರೆ ನಾನು ಪೇಳುವುದೇನು
ದುರ್ಗಂಧವಾಗಿದೆ ಸಂಸೃತಿ ನೋಡಿದರೆ
ನಿರ್ಗಮ ನಾ ಕಾಣೆನಮ್ಮ ಮಂಗಳಾಂಗೆ
ದುರ್ಗೆ ಹೆ ದುರ್ಗೆ ಮಹಾ ದುರ್ಗೆ ಭೂದುರ್ಗೆ ವಿಷ್ಣು
ದುರ್ಗೆ ದುರ್ಜಯ ದುರ್ಧಕ್ಷೆ ಶಕ್ತಿ
ದುರ್ಗಕಾನನ ಗಹನ ಪರ್ವತಘೋರ ಸರ್ಪ
ಗರ್ಗರ ಶಬ್ದ ವ್ಯಾಘ್ರ ಕರಡಿ ಮೃತ್ಯು
ವರ್ಗ ಭೂತ ಪ್ರೇತ ಪೈಶಾಚಿ ಮೊದಲಾದ
ದುರ್ಗಣ ಸಂಕಟ ಪ್ರಾಪ್ತವಾಗೆ
ದುರ್ಗಾದುರ್ಗೆ ಎಂದು ಉಚ್ಚಸ್ವರದಿಂದ
ನಿರ್ಗಳಿತವಾಗಿ ಒಮ್ಮೆ ಕೂಗಿದರೂ
ಸ್ವರ್ಗಾಪವರ್ಗದಲ್ಲಿ ಹರಿಯೊಡನೆ ಇದ್ದರೂ
ಸುರ್ಗಣ ಜಯ ಜಯವೆಂದು ಪೊಗಳುತಿರೆ
ಕರ್ಗಳಿಂದಲಿ ಎತ್ತಿ ಸಾಕುವ ಸಾಕ್ಷಿ ಭೂತೆ
ನಿರ್ಗುಡಿದಂತೆ ಲೋಕ ಲೀಲೆ ನಿನಗೆ
ಸ್ವರ್ಗಂಗಾಜನಕ ನಮ್ಮ ವಿಜಯ ವಿಠ್ಠಲನಂಘ್ರಿ
ದುರ್ಗಾಶ್ರಮ ಮಾಡಿ ಬದುಕುವಂತೆ ಮಾಡು || ೧ ||

ತಾಳ – ಮಟ್ಟ

ಅರಿದರಾಂಕುಶ ಶಕ್ತಿ ಪರಶು ನೇಗಲಿಖಡ್ಗ
ಸರಸಿಜ ಗದೆ ಮುದ್ಗರ ಚಾಪ ಮಾರ್ಗಣ
ವರ ಅಭಯ ಮುಸಲ ಪರಿ ಪರಿ ಆಯುಧವ
ಧರಿಸಿ ಮೆರೆವ ಲಕುಮಿ ಸರಸಿಜ ಭವ ರುದ್ರ
ಸರುವ ದೇವತೆಗಳ ಕರುಣಾಪಾಂಗದಲ್ಲಿ
ನಿರೀಕ್ಷಿಸಿ ಅವರವರ ಸ್ವರೂಪ ಸುಖಕೊಡುವ
ಸಿರಿಭೂಮಿ ದುರ್ಗಾ ಸರ್ವೋತ್ತಮ ನಮ್ಮ
ವಿಜಯ ವಿಠ್ಠಲನಂಘ್ರಿ
ಪರಮ ಭಕುತಿಯಿಂದ ಸ್ಮರಿಸುವ ಜಗಜ್ಜನನಿ || ೨ ||

ತಾಳ -ತ್ರಿವಿಡಿ

ಸ್ತುತಿ ಮಾಡುವೆ ನಿನ್ನ ಕಾಳಿ ಮಹಾಕಾಳಿ ಉ
ನ್ನತ ಬಾಹು ಕರಾಳವದನೆ ಚಂದಿರೆ ಮುಖೆ
ಧೃತಿ ಶಾಂತಿ ಬಹುರೂಪೆ ರಾತ್ರಿ ರಾತ್ರಿ ಚರಣೆ
ಸ್ಥಿತಿಯೆ ನಿದ್ರಾಭದ್ರೆ ಭಕ್ತವತ್ಸಲೇ ಭವ್ಯೇ
ಚತುರಷ್ಟ ದ್ವಿಹಸ್ತೆ ಹಸ್ತಿ ಹಸ್ತಿ ಗಮನೆ ಅ
ದ್ಭುತ ಪ್ರಬಲೆ ಪ್ರವಾಸೆ ದುರ್ಗಾರಣ್ಯವಾಸೆ
ಕ್ಷಿತಿಭಾರಹರಣೆ ಕ್ಷೀರಾಬ್ಧಿ ತನಯೆ ಸ
ದ್ಗತಿ ಪ್ರದಾತೆ ಮಾಯಾ ಶ್ರೀಯೆ ಇಂದಿರೆ ರಮೆ
ದಿತಿ ಜಾತೆ ನಿಗ್ರಹೆ ನಿರ್ಧೂತ ಕಲ್ಮಷೆ
ಪ್ರತಿಕೂಲ ಭೇದೆ ಪೂರ್ಣಬೋಧೆ ರೌದ್ರೇ
ಅತಿಶಯ ರಕ್ತ ಜಿಹ್ವಾಲೋಲೆ ಮಾಣಿಕ್ಯಮಾಲೆ
ಜಿತಕಾಮೆ ಜನನ ಮರಣ ರಹಿತ ಖ್ಯಾತೆ
ಘೃತ ಪಾತ್ರ ಪರಮಾನ್ನ ತಾಂಬೂಲ ಹಸ್ತೆ ಸು
ವ್ರತೆ ಪತಿವ್ರತೆ ತ್ರಿನೇತ್ರೆ ರಕ್ತಾಂಬರೆ
ಶತಪತ್ರ ನಯನೆ ನಿರುತಕನ್ಯೇ ಉದಯಾರ್ಕ
ಶತಕೋಟಿ ಸನ್ನಿಭೆ ಹರಿಯಾಂಕಸಂಸ್ಥೆ
ಶ್ರುತಿತತಿನುತೆ ಶುಕ್ಲ ಶೋಣಿತ ರಹಿತೆ ಅ
ಪ್ರತಿಹತೆ ಸರ್ವದಾ ಸಂಚಾರಿಣಿ ಹ್ರೀ
ಉತ್ಪತ್ತಿ ಸ್ಥಿತಿಲಯ ಕರ್ತೆ ಶುಭ್ರಶೋಭನ ಮೂರ್ತೆ
ಪತಿತಪಾವನೆ ರನ್ನೆ ಸರ್ವೋಷಧಿಯಲಿದ್ದು
ಹತಮಾಡು ಕಾಡುವ ರೋಗಗಳಿಂದ
ಕ್ಷಿತಿಯೊಳು ಸುಖದಲ್ಲಿ ಬಾಳುವ ಮತಿಯಿತ್ತು
ಸತತ ಕಾಯಲಿ ಬೇಕು ದುರ್ಗೇ ದುರ್ಗೇ
ಚ್ಯುತದೂರ ವಿಜಯ ವಿಠ್ಠಲರೇಯನ ಪ್ರೀಯೆ
ಕೃತಾಂಜಲಿಯಿಂದಲಿ ತಲೆಬಾಗಿ ನಮಿಸುವೆ || ೩ ||

ತಾಳ – ಅಟ್ಟ

ಶ್ರೀಲಕ್ಷ್ಮೀಕಮಲಾ ಪದ್ಮಾಪದ್ಮಿನಿ ಕಮ
ಲಾಲಯೆ ರಮಾ ವೃಷಾಕಪಿ ಧನ್ಯಾವೃದ್ಧಿವಿ
ಶಾಲಾ ಯಜ್ಞಾ ಇಂದಿರೆ ಹಿರಣ್ಯ ಹರಿಣಿ
ವಾಲಯ ಸತ್ಯ ನಿತ್ಯಾನಂದ ತ್ರಯಿ ಸುಧಾ
ಶೀಲೆ ಸುಗಂಧ ಸುಂದರಿ ವಿದ್ಯಾಸುಶೀಲೆ
ಸುಲಕ್ಷಣ ದೇವಿ ನಾನಾ ರೂಪಂಗಳಿಂದ ಮೆರೆವ ಮೃತ್ಯುನಾಶೆ
ವಾಲಗಕೊಡು ಸಂತರ ಸನ್ನಿಧಿಯಲ್ಲಿ
ಕಾಲ ಕಾಲಕೆ ಎನ್ನ ಭಾರ ವಹಿಸುವ ತಾಯಿ
ಮೇಲು ಮೇಲು ನಿನ್ನ ಶಕ್ತಿ ಕೀರ್ತಿ ಬಲು
ಕೇಳಿ ಕೇಳಿ ಬಂದೆ ಕೇವಲ ಈ ಮನ
ಘಾಳಿಯಂತೆ ಪರದ್ರವ್ಯಕ್ಕೆ ಪೊಪುದು
ಏಳಲ ಮಾಡದೆ ಉದ್ಧಾರ ಮಾಡುವ
ಕೈಲಾಸಪುರದಲ್ಲಿ ಪೂಜೆಗೊಂಬ ದೇವಿ
ಮೂಲಪ್ರಕೃತಿ ಸರ್ವ ವರ್ಣಾಭಿಮಾನಿನಿ
ಪಾಲಸಾಗರಶಾಯಿ ವಿಜಯ ವಿಠ್ಠಲನೊಳು
ಲೀಲೆ ಮಾಡುವ ನಾನಾಭರಣೆ ಭೂಷಣೆ ಪೂರ್ಣೆ || ೪ ||

ತಾಳ – ಆದಿ

ಗೋಪಿನಂದನೆ ಮುಕ್ತೆ ದೈತ್ಯ ಸಂತತಿಗೆ ಸಂ
ತಾಪವ ಕೊಡುತಿಪ್ಪ ಮಹಾಕಠೋರೆ ಉಗ್ರ
ರೂಪ ವೈಲಕ್ಷಣೆ ಅಜ್ಞಾನಕ್ಕಭಿಮಾನಿನಿ
ತಪತ್ರಯ ವಿನಾಶ ಓಂಕಾರೆ ಹೂಂಕಾರೆ
ಪಾಪಿ ಕಂಸಗೆ ಭಯ ತೋರಿದೆ ಬಾಲ ಲೀಲೆ
ವ್ಯಾಪುತ ಧರ್ಮಮಾರ್ಗ ಪ್ರೇರಣೆ ಅಪ್ರಾಕೃತೆ
ಸ್ವಾಪದದಲಿ ನಿನ್ನ ನೆನೆಸಿದ ಶರಣನಿಗೆ
ಅಪಾರವಾಗಿದ್ದ ವಾರಿಧಿಯಂತೆ ಮಹಾ
ಆಪತ್ತು ಬಂದಿರಲು ಹಾರೆ ಪೋಗೋವು ಸಪ್ತ
ದ್ವೀಪ ನಾಯಿಕೆ ನರಕ ನಿರ್ಲೇಪೆ ತಮೋಗುಣದ
ವ್ಯಾಪಾರ ಮಾಡಿಸಿ ಭಕ್ತ ಜನಕೆ ಪುಣ್ಯ
ಸೋಪಾನ ಮಾಡಿಕೊಡುವ ಸೌಭಾಗ್ಯವಂತೆ ದುರ್ಗೆ
ಪ್ರಾಪುತವಾಗಿ ಎನ್ನ ಮನದಲಿ ನಿಂದು ದುಃಖ
ಕೂಪದಿಂದಲಿ ಎತ್ತಿ ಕಡೆ ಮಾಡು ಜನ್ಮಂಗಳ
ಸೌಪರ್ಣಿ ಮಿಗಿಲಾದ ಸತಿಯರು ನಿತ್ಯ ನಿನ್ನ
ಆಪಾದ ಮೌಳಿತನಕ ಭಜಿಸಿ ಭವ್ಯರಾದರು
ನಾ ಪೇಳುವದೇನು ಪಾಂಡವರ ಮನೋಭಿಷ್ಟೆ
ಈ ಪಂಚ ಭೌತಿಕದಲ್ಲಿ ಆವ ಸಾಧನೆ ಕಾಣೇ
ಶ್ರೀಪತಿ ನಾಮ ಒಂದೇ ಜಿಹ್ವಾಗ್ರದಲಿ ನೆನೆವ
ಔಪಾಸನ ಕೊಡು ರುದ್ರಾದಿಗಳ ವರದೇ
ತಾಪಸ ಜನಪ್ರೀಯ ವಿಜಯವಿಠ್ಠಲ ಮೂರ್ತಿಯ
ಶ್ರೀಪಾದಾರ್ಚನೆ ಮಾಳ್ಪಾ ಶ್ರೀಭೂದುರ್ಗಾ ವರ್ಣಿಶ್ರಯೆ || ೫ ||

ಜತೆ

ದುರ್ಗೆ ಹಾ ಹೇ ಹೋ ಹಾಃ ದುರ್ಗೆ ಮಂಗಳ ದುರ್ಗೆ
ದುರ್ಗೆತಿ ಕೊಡದಿರು ವಿಜಯವಿಠ್ಠಲಪ್ರೀಯೆ || ೬ ||

Durgaa durgeye maha dushtajana samhaare |
Durgaantargata durge durlabhe sulabhe |
Durgamavaagide ninna mahime bomma |
Bhargaadigaligella gunisidaroo | swarga bhoomi
Paataala samasta vyaaputa devi | vargakke
Meerida balu sumdaree | durgunadavara baadhe
Bahalavaagide taayi | durgatihaare naanu
Peluvudenu | durgandhavaagide samsruti
Nodidare | nirgama naa kaanenamma
Mangalaange | durge he durge mahaa durge
Bhoodurge vishnu | durge durjaya durdhakshe
Shakti | durga kaanana gahana parvata ghora
Sarpa | gargara shabda vyaaghra karadi mrutyu |
Varga bhoota preta paishaaci modalaada |
Durgana sankata praaptavaage | durgaa durge
Endu uccha swaradinda | nirgalitanaagi omme
Koogidaroo | swargaapavargadalli hariyodane
Iddaroo | surguna jaya jayavendu pogalutire |
Kargalindali etti saakuva saakshi bhoote |
Nirgudidante lokaleele ninage ||
Swargaangaajanaka namma
Vijayaviththalananghri | durgaashraya maadi
Badukuvante maadu || 1 ||

Aridaraankusha shakti parashu negalikhadga |
Sarasija gade mudgara caapa maargana | vara
Abhaya musala pari pari aayudhava | dharisi
Mereva lakumi sarasija bhavarudra | saruva
Devategala karunaapaangadalli | nireekshisi
Avaravara swaroopasukha koduva | siri bhoomi
Durgaa sarvottama namma |
Vijayaviththalananghri | parama bhakutiyinda
Smarisuva jagajjanani || 2 ||

Stuti maaduve ninna kaali mahaakaali unnata
Baahu karaalavadane chandiramukhe |
Drutishaanti bahuroope raatri raatri charane |
Sthitiye nidraa bhadre bhaktavatsale bhavye |
Chaturashta dwihaste hasti hastigamane a-| dbhuta
Prabale pravaase durgaaranyavaase | kshiti
Bhaara harane kshiraabdhi tanaye sa | dgati
Pradaate maayaa shreeye indire rame || diti jaata
Nigrahe nirdoota kalmashe | pratikoola bhede
Poornabhodhe roudre | atishaya rakta jihvaalole
Maanikya maale | jita kaame janana marana
Rahita khyaate | ghruta paatra paramaanna
Taamboola haste su | vrute pativrute trinetre
Raktaambare | shatapatra nayane nirutakanye
Udayaarka | shatakoti sannibhe hariyaanka
Samsthe || shrutitatinute shuklashonita rahite a |
Pratihate sarvadaa samchaarini chature | chatura
Kapardiye ambhrani hri | utpatti sthitilaya karte
Shubhra shobhana moorte | patita paavane ranne
Sarvoshadhiyalliddu hata maadi kaaduva
Rogamgalinda | kshitiyolu sukhadalli baaluva
Matiyittu | satata kaayali beku durge durge ||
Chyutidoora vijayaviththalareyana priye |
Krutaanjaliyindali talebaagi namisuve || 3 ||

Shreelakshmi kamalaa padmaa padmini kama |
Laalaye ramaa vrushaakapi dhanyaavruddhivi |
Shaalaa yaj~jaa indire hiranye harini | vaalaya
Satya nityaanandatrayi sudhaa | sheele sugandha
Sundari vidyaa susheele | sulakshana devi
Naanaa roopamgalinda mereva mrutyu naashe ||
Vaalaga kodu santara sannidhiyalli | kaala
Kaalake enna bhaara vahisuva taayi | melu melu
Ninna shakti keerti balu | keli keli bande kevala
Ee mana | ghaaliyante paradravyakke popadu
Elala maadade uddhaara maaduva | kailaasa
Puradalli poojegomba devi | moola prakruti
Sarvavarnaabhimaanini || paalasaagarashaayi
Vijayaviththalanolu leele maaduva naanaa
Bharane bhooshane poorne || 4 ||

Gopinandane mukte daitya santatige san|
Taapava kodutippa mahaa kathore ugra | roopa
Vailakshane aj~jaanakkabhimaani | taapatraya
Vinaashe omkaare hoomkaare | paapi kamsage
Bhaya toride baala leele | vyaaputa dharma
Maarga prerane apraakrute | swaapadadalli
Ninna nenesida sharananige | apaaravaagidda
Vaaridhiyante mahaa | aapattu bandiralu haare
Pogovu sapta | dweepanaayike naraka nirlepe
Tamogunada | vyaapaara maadisi bhakta janake
Punya | sopaana maadi koduva
Soubhaagyavante durge || praaputavaagi enna
Manadali nindu duhkha | koopadindali etti kade
Maadu janmangala | souparni migilaada satiyaru
Nitya ninna | apaadamouli tanaka bhajisi
Bhavyaraadaru | naa peluvudenu paandavara
Manobhishte | ee pancha bhoutikadalli aava
Saadhane kaane | shreepati naama onde
Jihvaagradali neneva | oupaasana kodu
Rudraadigala varade || taapasa janapreeya
Vijayaviththala moortiya | shreepaadaarchane
Maalpaa shreebhoodurgaa varnaashraye || 5 ||

Durge haa he ho haah durge mangala durge |
Durgati kodadiru vijayaviththala preeye || 6 ||

durga · MADHWA · navrathri · slokas

Durga slokas

ಸರ್ವಮಂಗಲ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ
ಶರಣ್ಯೇ ತ್ರಯಂಬಕೇ ಗೌರಿ ನಾರಾಯಣಿ ನಮೋಸ್ತುತೆ

Sarva mangala mangalye shive sarvaartha saadhike
Sharanye trayambake Gauri Narayani namosthute


ಯಾ ದೇವೀ ಸರ್ವಭೂತೇಶು ಮಾತೃರೂಪೇಣ ಸಂಸ್ಥಿತಃ
ಯಾ ದೇವೀ ಸರ್ವಭೂತೇಶು ಶಕ್ತಿರೂಪೇನ ಸಂಸ್ಥಿತಃ
ಯಾ ದೇವೀ ಸರ್ವಭೂತೇಶು ಶಾಂತಿರೂಪೇನ ಸಂಸ್ಥಿತಃ
ನಮಸ್ತಸ್ಯೆ ನಮಸ್ತಸ್ಯೆ ನಮಸ್ತಸ್ಯೆ ನಮೋ ನಮಃ

Ya devi sarva bhutesu, shanti rupena sansitha
Ya devi sarva bhutesu, shakti rupena sansthita
Ya devi sarva bhutesu, matra rupena sansthita
Namastasyai, namastasyai, namastasyai, namo namaha!


Namoh devyai mahadevyai shivayai satatam namah
Namah prakrutyai bhadraayai niyataah pranataahsma taam

ashtothram · durga · MADHWA · navrathri

Durga Ashtothra Satha namavali

ಓಂ ದುರ್ಗಾಯೈ ನಮಃ
ಓಂ ಶಿವಾಯೈ ನಮಃ
ಓಂ ಮಹಾಲಕ್ಷ್ಮ್ಯೈ ನಮಃ
ಓಂ ಮಹಾಗೌರ್ಯೈ ನಮಃ
ಓಂ ಚಂಡಿಕಾಯೈ ನಮಃ
ಓಂ ಸರ್ವಙ್ಞಾಯೈ ನಮಃ
ಓಂ ಸರ್ವಾಲೋಕೇಶ್ಯೈ ನಮಃ
ಓಂ ಸರ್ವಕರ್ಮ ಫಲಪ್ರದಾಯೈ ನಮಃ
ಓಂ ಸರ್ವತೀರ್ಧ ಮಯಾಯೈ ನಮಃ
ಓಂ ಪುಣ್ಯಾಯೈ ನಮಃ ||10||
ಓಂ ದೇವ ಯೋನಯೇ ನಮಃ
ಓಂ ಅಯೋನಿಜಾಯೈ ನಮಃ
ಓಂ ಭೂಮಿಜಾಯೈ ನಮಃ
ಓಂ ನಿರ್ಗುಣಾಯೈ ನಮಃ
ಓಂ ಆಧಾರಶಕ್ತ್ಯೈ ನಮಃ
ಓಂ ಅನೀಶ್ವರ್ಯೈ ನಮಃ
ಓಂ ನಿರ್ಗುಣಾಯೈ ನಮಃ
ಓಂ ನಿರಹಂಕಾರಾಯೈ ನಮಃ
ಓಂ ಸರ್ವಗರ್ವವಿಮರ್ದಿನ್ಯೈ ನಮಃ
ಓಂ ಸರ್ವಲೋಕಪ್ರಿಯಾಯೈ ನಮಃ ||20||
ಓಂ ವಾಣ್ಯೈ ನಮಃ
ಓಂ ಸರ್ವವಿಧ್ಯಾದಿ ದೇವತಾಯೈ ನಮಃ
ಓಂ ಪಾರ್ವತ್ಯೈ ನಮಃ
ಓಂ ದೇವಮಾತ್ರೇ ನಮಃ
ಓಂ ವನೀಶ್ಯೈ ನಮಃ
ಓಂ ವಿಂಧ್ಯ ವಾಸಿನ್ಯೈ ನಮಃ
ಓಂ ತೇಜೋವತ್ಯೈ ನಮಃ
ಓಂ ಮಹಾಮಾತ್ರೇ ನಮಃ
ಓಂ ಕೋಟಿಸೂರ್ಯ ಸಮಪ್ರಭಾಯೈ ನಮಃ
ಓಂ ದೇವತಾಯೈ ನಮಃ ||30||
ಓಂ ವಹ್ನಿರೂಪಾಯೈ ನಮಃ
ಓಂ ಸತೇಜಸೇ ನಮಃ
ಓಂ ವರ್ಣರೂಪಿಣ್ಯೈ ನಮಃ
ಓಂ ಗುಣಾಶ್ರಯಾಯೈ ನಮಃ
ಓಂ ಗುಣಮಧ್ಯಾಯೈ ನಮಃ
ಓಂ ಗುಣತ್ರಯವಿವರ್ಜಿತಾಯೈ ನಮಃ
ಓಂ ಕರ್ಮಙ್ಞಾನ ಪ್ರದಾಯೈ ನಮಃ
ಓಂ ಕಾಂತಾಯೈ ನಮಃ
ಓಂ ಸರ್ವಸಂಹಾರ ಕಾರಿಣ್ಯೈ ನಮಃ
ಓಂ ಧರ್ಮಙ್ಞಾನಾಯೈ ನಮಃ ||40||
ಓಂ ಧರ್ಮನಿಷ್ಟಾಯೈ ನಮಃ
ಓಂ ಸರ್ವಕರ್ಮವಿವರ್ಜಿತಾಯೈ ನಮಃ
ಓಂ ಕಾಮಾಕ್ಷ್ಯೈ ನಮಃ
ಓಂ ಕಾಮಾಸಂಹಂತ್ರ್ಯೈ ನಮಃ
ಓಂ ಕಾಮಕ್ರೋಧ ವಿವರ್ಜಿತಾಯೈ ನಮಃ
ಓಂ ಶಾಂಕರ್ಯೈ ನಮಃ
ಓಂ ಶಾಂಭವ್ಯೈ ನಮಃ
ಓಂ ಶಾಂತಾಯೈ ನಮಃ
ಓಂ ಚಂದ್ರಸುರ್ಯಾಗ್ನಿಲೋಚನಾಯೈ ನಮಃ
ಓಂ ಸುಜಯಾಯೈ ನಮಃ ||50||
ಓಂ ಜಯಾಯೈ ನಮಃ
ಓಂ ಭೂಮಿಷ್ಠಾಯೈ ನಮಃ
ಓಂ ಜಾಹ್ನವ್ಯೈ ನಮಃ
ಓಂ ಜನಪೂಜಿತಾಯೈ ನಮಃ
ಓಂ ಶಾಸ್ತ್ರಾಯೈ ನಮಃ
ಓಂ ಶಾಸ್ತ್ರಮಯಾಯೈ ನಮಃ
ಓಂ ನಿತ್ಯಾಯೈ ನಮಃ
ಓಂ ಶುಭಾಯೈ ನಮಃ
ಓಂ ಚಂದ್ರಾರ್ಧಮಸ್ತಕಾಯೈ ನಮಃ
ಓಂ ಭಾರತ್ಯೈ ನಮಃ ||60||
ಓಂ ಭ್ರಾಮರ್ಯೈ ನಮಃ
ಓಂ ಕಲ್ಪಾಯೈ ನಮಃ
ಓಂ ಕರಾಳ್ಯೈ ನಮಃ
ಓಂ ಕೃಷ್ಣ ಪಿಂಗಳಾಯೈ ನಮಃ
ಓಂ ಬ್ರಾಹ್ಮ್ಯೈ ನಮಃ
ಓಂ ನಾರಾಯಣ್ಯೈ ನಮಃ
ಓಂ ರೌದ್ರ್ಯೈ ನಮಃ
ಓಂ ಚಂದ್ರಾಮೃತ ಪರಿವೃತಾಯೈ ನಮಃ
ಓಂ ಜ್ಯೇಷ್ಠಾಯೈ ನಮಃ
ಓಂ ಇಂದಿರಾಯೈ ನಮಃ ||70||
ಓಂ ಮಹಾಮಾಯಾಯೈ ನಮಃ
ಓಂ ಜಗತ್ಸೃಷ್ಟ್ಯಾಧಿಕಾರಿಣ್ಯೈ ನಮಃ
ಓಂ ಬ್ರಹ್ಮಾಂಡ ಕೋಟಿ ಸಂಸ್ಥಾನಾಯೈ ನಮಃ
ಓಂ ಕಾಮಿನ್ಯೈ ನಮಃ
ಓಂ ಕಮಲಾಲಯಾಯೈ ನಮಃ
ಓಂ ಕಾತ್ಯಾಯನ್ಯೈ ನಮಃ
ಓಂ ಕಲಾತೀತಾಯೈ ನಮಃ
ಓಂ ಕಾಲಸಂಹಾರಕಾರಿಣ್ಯೈ ನಮಃ
ಓಂ ಯೋಗಾನಿಷ್ಠಾಯೈ ನಮಃ
ಓಂ ಯೋಗಿಗಮ್ಯಾಯೈ ನಮಃ ||80||
ಓಂ ಯೋಗಧ್ಯೇಯಾಯೈ ನಮಃ
ಓಂ ತಪಸ್ವಿನ್ಯೈ ನಮಃ
ಓಂ ಙ್ಞಾನರೂಪಾಯೈ ನಮಃ
ಓಂ ನಿರಾಕಾರಾಯೈ ನಮಃ
ಓಂ ಭಕ್ತಾಭೀಷ್ಟ ಫಲಪ್ರದಾಯೈ ನಮಃ
ಓಂ ಭೂತಾತ್ಮಿಕಾಯೈ ನಮಃ
ಓಂ ಭೂತಮಾತ್ರೇ ನಮಃ
ಓಂ ಭೂತೇಶ್ಯೈ ನಮಃ
ಓಂ ಭೂತಧಾರಿಣ್ಯೈ ನಮಃ
ಓಂ ಸ್ವಧಾನಾರೀ ಮಧ್ಯಗತಾಯೈ ನಮಃ ||90||
ಓಂ ಷಡಾಧಾರಾಧಿ ವರ್ಧಿನ್ಯೈ ನಮಃ
ಓಂ ಮೋಹಿತಾಯೈ ನಮಃ
ಓಂ ಅಂಶುಭವಾಯೈ ನಮಃ
ಓಂ ಶುಭ್ರಾಯೈ ನಮಃ
ಓಂ ಸೂಕ್ಷ್ಮಾಯೈ ನಮಃ
ಓಂ ಮಾತ್ರಾಯೈ ನಮಃ
ಓಂ ನಿರಾಲಸಾಯೈ ನಮಃ
ಓಂ ನಿಮಗ್ನಾಯೈ ನಮಃ
ಓಂ ನೀಲಸಂಕಾಶಾಯೈ ನಮಃ
ಓಂ ನಿತ್ಯಾನಂದಿನ್ಯೈ ನಮಃ ||100||
ಓಂ ಹರಾಯೈ ನಮಃ
ಓಂ ಪರಾಯೈ ನಮಃ
ಓಂ ಸರ್ವಙ್ಞಾನಪ್ರದಾಯೈ ನಮಃ
ಓಂ ಅನಂತಾಯೈ ನಮಃ
ಓಂ ಸತ್ಯಾಯೈ ನಮಃ
ಓಂ ದುರ್ಲಭ ರೂಪಿಣ್ಯೈ ನಮಃ
ಓಂ ಸರಸ್ವತ್ಯೈ ನಮಃ
ಓಂ ಸರ್ವಗತಾಯೈ ನಮಃ
ಓಂ ಸರ್ವಾಭೀಷ್ಟಪ್ರದಾಯಿನ್ಯೈ ನಮಃ || 108 ||

1. Om Durgayai namaha
2. Om Sivayai namaha
3. Om Mahalakshmyai namaha
4. Om Maha gowryai namaha
5. Om Chandikayai namaha
6. Om Sarvajnayai namaha
7. Om Sarva Lokesayai namaha
8. Om Sarva karma Phala Pradayai namaha
9. Om Sarva teertha mayayai namaha
10. Om Punyayai namaha
11. Om Deva yonaye namaha
12. Om Ayonijayai namaha
13. Om Bhumijayai namaha
14. Om Nirgunayai namaha
15. Om Adhara Sakthyai namaha
16. Om Aneeswaryai namaha
17. Om Nirgamayai namaha
18. Om Nirahamkarayai namaha
19. Om Sarva Garva Vimardinyai namaha
20. Om Sarva Loka Priyayai namaha
21. Om Vanyai namaha
22. Om Sarva Vidyadi devatayai namaha
23. Om Parvatyai namaha
24. Om Deva matre namaha
25. Om Vaneesayai namaha
26. Om Vindhya Vasinyai namaha
27. Om Tejo vatyai namaha
28. Om Maha Matre namaha
29. Om Koti Surya Sama prabhayai namaha
30. Om Devatayai namaha
31. Om Vahni Roopayai namaha
32. Om Satejase namaha
33. Om Varna Roopinyai namaha
34. Om Gunasrayayai namaha
35. Om Guna madhyayai namaha
36. Om Gunatraya vivarjitayai namaha
37. Om Karma jnana pradayai namaha
38. Om Kanthayai namaha
39. Om Sarva Samharakarinyai namaha
40. Om Dharma jnanayai namaha
41. Om Dharma Nishtayai namaha
42. Om Sarva Karma Vivarjitayai namaha
43. Om Kamakshyai namaha
44. Om Kamaa Samhamtryai namaha
45. Om Kama krodha vivarjithayai namaha
46. Om Sankaryai namaha
47. Om Sambhavyai namaha
48. Om Santhayai namaha
49. Om Chandra Suryagnilochanayai namaha
50. Om Sujayayai namaha
51. Om Jayayai namaha
52. Om Bhoomishtayai namaha
53. Om Jahnavyai namaha
54. Om Jana poojithayai namaha
55. Om Sastrayai namaha
56. Om Sastra mayayai namaha
57. Om Nityayai namaha
58. Om Subhayai namaha
59. Om chandrartha mastakayai namaha
60. Om Bharatyai namaha
61. Om Bhramaryai namaha
62. Om Kalpayai namaha
63. Om Karalyai namaha
64. Om Krishna Pingalayai namaha
65. Om Brahmai namaha
66. Om Narayanyai namaha
67. Om Roudryai namaha
68. Om Chandramrutha Parisruthayai namaha
69. Om Jyestayai namaha
70. Om Indirayai namaha
71. Om maha mayayai namaha
72. Om Jagatsrushtyadhikarinyai namaha
73. Om Brahmanda koti Samsthanayai namaha
74. Om Kaminyai namaha
75. Om Kamalalayayai namaha
76. Om Katyayanyai namaha
77. Om Kalatheethayai namaha
78. Om Kala samhara karinyai namaha
79. Om yoga nishtayai namaha
80. Om Yogi Gamyayai namaha
81. Om Tapasvinyai namaha
82. Om Jnana Roopayai namaha
83. Om Nirakarayai namaha
84. Om Bhakthabheesta phala pradayai namaha
85. Om Bhoothathmikayai namaha
86. Om Bhootha matre namaha
87. Om Bhoothesayai namaha
88. Om Bhootha dharinyai namaha
89. Om Swadha naari Madhya gathayai namaha
90. Om Shadadharadhi vardhinyai namaha
91. Om Mohithayai namaha
92. Om Subhayai namaha
93. Om Subhrayai namaha
94. Om Sukshmayai namaha
95. Om Matrayai namaha

96. Om Niralasayai namaha
97. Om Nimagnayai namaha
98. Om Neela Samkasayai namaha
99. Om nityanandayai namaha
100. Om harayai namaha
101. Om Parayai namaha
102. Om Sarva Jnana pradayai namaha
103. Om Anandayai namaha
104. Om Satyayai namaha
105. Om Durga Bharupinyai namaha
106. Om Sarasvatyai namaha
107. Om Sarva gathayai namaha
108. Om Sarvabheestapradayinyai namah