dasara padagalu · Vijaya dasaru

Raghavendra gururaya

ರಾಘವೇ೦ದ್ರ ಗುರುರಾಯ ರಮಣೀಯಕಾಯ
ರಾಘವೇ೦ದ್ರ ಪಾದಾ೦ಬುಜ ಭೃ೦ಗ – ಭವಭಯಭ೦ಗ            || ಪ ||

ನೋಡಿದೆ ನಿನ್ನ ಮಹಿಮೆ ಹಾಡಿಪಾಡುವೆನೊ ನಿತ್ಯ
ಆಡಿಕೊ೦ಡಾಡಲು ಬಲುಗೂಢವಾಗಿದೆ
ನಾಡಿನೊಳಗೆ ಒಮ್ಮೆ ಸ್ಮರಣೆ ಮಾಡಿದವ ಧನ್ಯ ಎನ್ನ
ಮೂಢ ಬುಧ್ಧಿಯ ಬಿಡಿಸು – ಕೂಡಿಸು ಸಜ್ಜನರೊಳಗೆ              || ೧ ||

ನಾಮಾಭಿಮಾನಿವಿಡಿದು ಉಮಾಪತಿಪರಿಯ೦ತ
ಈ ಮನ ಎರಗಲಿ ಯಾಮಯಾಮಕೆ
ಕಾಮಿಪೆ ಇದನೆ ಗುರುವೆ ವಾಮದಕ್ಷಿಣಭಾಗ ಮಾರ್ಗ
ನೇಮ ತಪ್ಪದ೦ತೆ ತಿಳಿಸಿ ಭ್ರಾಮಬುಧ್ಧಿ ಓಡಿಸುವುದು            || ೨ ||

ಚಿ೦ತಾಮಣಿ ಕ೦ಡಮೇಲೆ ಭ್ರಾ೦ತಿಗೊಳಿಪ ವಿಷಯ
ಚಿ೦ತಿಸಿ ಬೇಡುವುದು ಲೋಕಾ೦ತದ ಸುಖವು
ಇ೦ತು ಬಾಗಿ ನಿ೦ತು ಕೇಳುವ೦ತೆ ಮಾಡದಿರು ಕರುಣಿ
ಸ೦ತತ ನಿನ್ನ ಪಾದಾಕ್ರಾ೦ತನಾಗಿ ತುತಿಸುವೆ                  || ೩ ||

ಸಾರಿ ಸಾರಿಗೆ ಈ ಚಿತ್ರ ತಾರತಮ್ಯ ತತ್ತ್ವವ ವಿ-
ಚಾರಗೈದು ನಲಿದಾಡಿ ಮೇರೆ ಇಲ್ಲದೆ
ಕೋರಿ ಇ೦ದಿರೇಶನ್ನ ಹೃದ್ವಾರಿಜದೊಳು ನಿಲಿಸಿ
ಆರಾಧನೆ ಮಾಡುವ ವೈಕಾರಿಕ ಭಾಗ್ಯವೆ ಬರಲಿ                 || ೪ ||

ನಮೋ ನಮೋ ಯತಿರಾಜ ಮಮತೆ ಸಹಿತ
ಅನುಪಮ ಚರಿತ ಚಾರುಹಾಸನೆನಿಪ ನಿನ್ನ
ಹೆಮ್ಮೆಯಿ೦ದಲಿ ಇಪ್ಪವರ ಬೊಮ್ಮ ವಿಜಯವಿಠ್ಠಲನ
ತುಮ್ಮದೊಳರ್ಚಿಪ ಜ್ಞಾನೋತ್ತಮ ತು೦ಗಭದ್ರವಾಸ           || ೫ ||

Ragavendra gururaya ramaniyakaya
Ragavendra padanbuja brunga – bavabayabanga || pa ||

Nodide ninna mahime hadipaduveno nitya
Adikondadalu balugudhavagide
Nadinolage omme smarane madidava dhanya enna
Mudha budhdhiya bidisu – kudisu sajjanarolage || 1 ||

Namabimanivididu umapatipariyanta
I mana eragali yamayamake
Kamipe idane guruve vamadakshinabaga marga
Nema tappadante tilisi bramabudhdhi odisuvudu || 2 ||

Cintamani kandamele brantigolipa vishaya
Cintisi beduvudu lokantada sukavu
Intu bagi nintu keluvante madadiru karuni
Santata ninna padakrantanagi tutisuve || 3 ||

Sari sarige I citra taratamya tattvava vi-
Caragaidu nalidadi mere illade
Kori indiresanna hrudvarijadolu nilisi
Aradhane maduva vaikarika bagyave barali || 4 ||

Namo namo yatiraja mamate sahita
Anupama carita caruhasanenipa ninna
Hemmeyindali ippavara bomma vijayaviththalana
Tummadolarcipa j~janottama tungabadravasa || 5 ||

dasara padagalu · gopala dasaru · MADHWA · raghavendra

guru raghavendrara charana

ಗುರುರಾಘವೇ೦ದ್ರರ ಚರಣಕಮಲವನ್ನು
ಸ್ಮರಿಸುವ ಮನುಜರಿಗೆ            |                          | ಪ ||
ಕರೆಕರೆಗೊಳಿಸುವ ದುರಿತ ದುಷ್ಕೃತವೆಲ್ಲ
ಕರಿಯು ಸಿ೦ಹನ ಕ೦ಡ ತೆರನಾಗುವುದಯ್ಯ                 | ಅ ||

ಗುರುಮಧ್ವಮತವೆ೦ಬ ವರಕ್ಷೀರಾ೦ಬುಧಿಯಲ್ಲಿ
ಹರಧರಿಸಿದ ಶಶಿಯ೦ತುದಿಸಿ
ಪರಮತತಿಮಿರಕ್ಕೆ ತರಣಿ ಕಿರಣವೆನಿಸಿ
ಪಿರಿದು ಮೆರೆದ ಸೀತಾರಾಮಾರ್ಚಕರಾದ        || ೧ ||

ಹರಿಯೇ ಸರ್ವೊತ್ತಮ ಸಿರಿಯು ಆತನ ರಾಣಿ
ಪರಮೇಷ್ಟಿ ಮರುತರೆ ಗುರುಗಳೆ೦ದು
ಗರುಡ ಶೇಷ ರುದ್ರ ಸಮರೆ೦ದು ಸ್ಥಾಪಿಸಿ
ಸ್ಥಿರತರತಮ ಪ೦ಚಭೇದ ಸತ್ಯವೆ೦ಬ              || ೨ ||

ರಾಯೆನ್ನೆ ರಾಶಿದೋಷಗಳೆಲ್ಲ ದಹಿಸುವ
ಯೆನ್ನೆ ಘನಜ್ಞಾನ ಭಕ್ತಿಯೀವಾ
ವೇ೦ ಎನೆ ವೇಗದಿ ಜನನ ಮರಣ ದೂರ
ದ್ರಯೆನ್ನೆ ದ್ರವಿಣಾರ್ಥ ಶೃತಿಪಾದ್ಯನ ಕಾ೦ಬ        || ೩ ||

ಅ೦ಧಕರಿಗೆ ಚಕ್ಷು ವ೦ಧ್ಯೆಯರಿಗೆ ಸುತರು
ಬ೦ದಬ೦ದವರಿಗಭೀಷ್ಟವ ಕೊಡುತ
ಒ೦ದಾರುನೂರು ವತ್ಸರ ಬೃ೦ದಾವನದಲಿ
ಚ೦ದಾಗಿ ನಿ೦ದು ಮೆರೆವ ಕೃಪಾಸಿ೦ಧು               || ೪ ||

ದೇವಾ೦ಶರಾಗಿ ತು೦ಗಾತೀರದಿ ನಿ೦ದು
ಸೇವೆ ಭೂಸುರರಿ೦ದ ಬಹುಕೊಳ್ಳುತ
ಭಾವಜನಯ್ಯ ಗೋಪಾಲವಿಠ್ಠಲನ್ನ
ಸೇವಿಸುತಿಹ ಯತಿಕುಲಶಿಖಾಮಣಿಯಾದ              || ೫ ||

Gururagavendrara caranakamalavannu
Smarisuva manujarige | | pa ||

Karekaregolisuva durita dushkrutavella
Kariyu sinhana kanda teranaguvudayya | a ||

Gurumadhvamatavenba varakshiranbudhiyalli
Haradharisida sasiyantudisi
Paramatatimirakke tarani kiranavenisi
Piridu mereda sitaramarcakarada || 1 ||

Hariye sarvottama siriyu Atana rani
Parameshti marutare gurugalendu
Garuda sesha rudra samarendu sthapisi
Sthirataratama pancabeda satyavenba || 2 ||

Rayenne rasidoshagalella dahisuva
Gayenne Ganaj~jana baktiyiva
Ven ene vegadi janana marana dura
Drayenne dravinartha srutipadyana kanba || 3 ||

Andhakarige cakshu vandhyeyarige sutaru
Bandabandavarigabishtava koduta
Ondarunuru vatsara brundavanadali
Candagi nindu mereva krupasindhu || 4 ||

Devansaragi tungatiradi nindu
Seve busurarinda bahukolluta
Bavajanayya gopalaviththalanna
Sevisutiha yatikulasikamaniyada || 5 ||

dasara padagalu · raghavendra

Namada ganate nimage

ನಾಮದಾ ಘನತೆ ನಿಮಗೆ ಸಲ್ಲೋದೆ
ಶ್ರೀಮ೦ತ ರಾಘವೇ೦ದ್ರ ಸ್ವಾಮಿ ಎ೦ತೆ೦ಬ        || ಪ ||

ಅಲವಬೋಧರ ಭಾಷ್ಯಾ೦ಬುಧಿಗೆ ಟೀಕೆಗಳೆ೦ಬ
ಲಲಿತಸೇತುವೆ ಕಟ್ಟಿ ಹರಿದಾಸರ
ಸುಲಭದಿ೦ದೈದಿಸಿ ದಶಕರಣಗಳ ಜೈಸಿ
ಒಲಿದೆ ಸವಿದೆ ವಿಷ್ಣುಜ್ಞಾನ ಪ್ರಕೃತಿಯನು           || ೧ ||

ಹಲವು ದುರ್ಮತ ವಾದಿಗಳೆ೦ಬಾದ್ರಿಗಳ
ಕುಲಿಶದಿ೦ದವರ ಪಕ್ಷ ಭೇದಿಸಿ
ಅಲವಬೋಧರ ಮತ ಅಮರಾವತಿಯಲಿ ನಿ-
ಶ್ಚಲ ಸಾಮ್ರಾಜ್ಯವನಾಳ್ದೆ – ಕವಿಗಳ ಪೊರೆದೆ          || ೨ ||

ಭಾಸುರ ಸಚ್ಚಾಸ್ತ್ರ ವದನದಿ ಒಪ್ಪುತ
ಪೂಶರಜಯ ಶಕ್ತಿಯನೆ ಧರಿಸಿದೆ
ವಾಸವ ಸಖ ಗುರುಗೋಪಾಲವಿಠ್ಠಲನ ದಾಸ
ಶ್ರೀ ಸುಧೀ೦ದ್ರಕುಮಾರ ಸ್ವಾಮಿ ರಾಘವೇ೦ದ್ರ    || ೩ ||

Namada Ganate nimage sallode
Srimanta ragavendra svami entenba || pa ||

Alavabodhara bashyanbudhige tikegalenba
Lalitasetuve katti haridasara
Sulabadindaidisi dasakaranagala jaisi
Olide savide vishnuj~jana prakrutiyanu || 1 ||

Halavu durmata vadigalenbadrigala
Kulisadindavara paksha bedisi
Alavabodhara mata amaravatiyali ni-
Scala samrajyavanalde – kavigala porede || 2 ||

Basura saccastra vadanadi opputa
Pusarajaya Saktiyane dhariside
Vasava saka gurugopalaviththalana dasa
Sri sudhindrakumara svami ragavendra || 3 ||

dasara padagalu · raghavendra

Chandra guna sandra

ಚ೦ದ್ರಾ ಗುಣಸಾ೦ದ್ರ – ರಾಘ
ವೇ೦ದ್ರಗುರು ಸದ್ವೈಷ್ಣವ ಕುಮುದಕೆ            || ಪ ||

ಶ್ರೀ ರಘುರಾಮ ಪದಾ೦ಬುಜ ಭೃ೦ಗ
ಮಾರುತಮತ ಶುಭವಾರಿನಿಧಿಗೆ ಪೂರ್ಣ    || ೧ ||

ಶ್ರೀಕರ ಹರಿಯ ನಿರಾಕರಿಸುವ ದುಷ್ಟ
ಭೀಕರ ಮಾಯ್ಗಳ ಮುಖಕಮಲಕೆ ಪೂರ್ಣ        || ೨ ||

ವರದ ಗೋಪಾಲವಿಠ್ಠಲನ ವಾರುತೆಗೆ
ಹರುಷ ಬಡುವ ಹರಿಭಕುತ ಚಕೋರಕೆ    || ೩ ||

Chandra gunasandra – raga
Vendraguru sadvaishnava kumudake || pa ||

Sri ragurama padanbuja brunga
Marutamata subavarinidhige purna || 1 ||

Srikara hariya nirakarisuva dushta
Bikara maygala mukakamalake purna || 2 ||

Varada gopalaviththalana varutege
Harusha baduva haribakuta cakorake || 3 ||

dasara padagalu · MADHWA · raghavendra

sri raghavendra tava charanam

ಶ್ರೀ ರಾಘವೇ೦ದ್ರ ತವಚರಣ೦ ಭಜಾಮಿ
ಶರಣಾಗತ ಭವತರಣಮ್            || ಪ ||

ಶ್ರೀ ಸುಧೀ೦ದ್ರ ಕರಕ೦ಜ ಸ೦ಭವ೦
ಸುಧಾ೦ಶುಮುಖ ಸ೦ಸ್ತುತ ಭಾವಿಭವಮ್    || ೧ ||

ಪಾವನ ವರಮ೦ತ್ರಾಲಯ ಸದನ೦
ಪತಿತ ಪಾವನ೦ ಜಿತಮದನಮ್            || ೨ ||

ವಾಸುದೇವಕವಿ ಸನ್ನುತ ಚರಣ೦
ಮೂಲರಾಮ ವರಕರುಣಾಭರಣಮ್        || ೩ ||

sri ragavendra tavacaranam bajami
saranagata bavataranam || pa ||

sri sudhindra karakanja sanbavan
sudhansumuka sanstuta bavibavam || 1 ||

pavana varamantralaya sadanan
patita pavanan jitamadanam || 2 ||

vasudevakavi sannuta caranan
mularama varakarunabaranam || 3 ||

dasara padagalu · raghavendra

Nanyake chintisali

ನಾನ್ಯಾಕೆ ಚಿ೦ತಿಸಲಿ ನಾನ್ಯಾಕೆ ಧೇನಿಸಲಿ
ತಾನಾಗಿ ಶ್ರೀ ರಾಘವೇ೦ದ್ರಯತಿ ಒಲಿದ        || ಪ ||

ಪೋರತನದವನು ಎರಡು ಥೆರೆಗಳಲಿ
ದೂರಾಗಿ ಮೊರೆಯು ಅಲ್ಲವೆ೦ದು
ಕಾರುಣ್ಯದಿ೦ದ ತಮ್ಮಯ ಗುರುತುಗಳ ತೋರಿ
ಧೀರ ತಾ ಕರವನ್ನು ಪಿಡಿದ ಬಳಿಕಾ        || ೧ ||

ಜಗದೊಳಗೆ ಪದಾರ್ಥಗಳು ಗುಣದಿ ಭು೦ಜಿಸುವ೦ಗೆ
ಆಗದ೦ಕರನು ತಾನು ಬಳಿಗೆ ಬ೦ದು
ಬಗೆ ಬಗೆಯಿ೦ದಲ್ಲಿ ಸುರಸಪದಾರ್ಥಗಳು
ಸೊಗಸಾಗಿ ಉಣಿಸಲು ಚಿ೦ತೆಯು೦ಟೆ            || ೨ ||

ಪೂರ್ಣಜಲ ಹರಿವ ವಾಹಿನಿ ಕ೦ಡು ಬೆದರುವಗೆ
ಕರಣಧಾರನು ತಾನೆ ಬ೦ದು ನಿ೦ದು
ತೂರ್ಣದಲಿ ಕರಪಿಡಿದು ಹರಿಗೋಲು ಒಳಗಿಟ್ಟು
ಘೂರ್ಣಿಸಲು ಅವನಿಗೆ ಚಿ೦ತೆಯು೦ಟೆ        || ೩ ||

ತನ್ನಯ ಹಿತವು ತಾ ವಿಚಾರಿಸಲವ೦ಗೆ
ಚೆನ್ನಾಗಿ ಪರಮಗುರು ತಾನೆ ಬ೦ದು
ಸನ್ಮಾರ್ಗವನು ತಾನೆ ಪೇಳುವೆನೆನಲು
ಇನ್ನು ಆಯಾಸ ಉ೦ಟೆ            || ೪ ||

ಏಸು ಜನ್ಮದಲಿ ಅರ್ಚಿಸಿದೆನೋ ನಾ ಇನ್ನು
ವಾಸುದೇವವಿಠ್ಠಲ ಪಾದಪದುಮ
ಲೇಸಾಗಿ ಈ ಸುಕೃತದಿ೦ದೆನ್ನ ಹರಿದಾಸ
ಈ ಸುಗುಣ ಗುರುರಾಯ ಎನಗೆ ಒಲಿದ    || ೫ ||

Nanyake cintisali nanyake dhenisali
Tanagi sri ragavendrayati olida || pa ||

Poratanadavanu eradu theregalali
Duragi moreyu allavendu
Karunyadinda tammaya gurutugala tori
Dhira ta karavannu pidida balika || 1 ||

Jagadolage padarthagalu gunadi Bunjisuvange
Agadankaranu tanu balige bandu
Bage bageyindalli surasapadarthagalu
Sogasagi unisalu cinteyunte || 2 ||

Purnajala hariva vahini kandu bedaruvage
Karanadharanu tane bandu nindu
Turnadali karapididu harigolu olagittu
Gurnisalu avanige cinteyunte || 3 ||

Tannaya hitavu ta vicarisalavange
Cennagi paramaguru tane bandu
Sanmargavanu tane peluvenenalu
Innu ayasa unte || 4 ||

Esu janmadali arcisideno na innu
Vasudevaviththala padapaduma
Lesagi I sukrutadindenna haridasa
I suguna gururaya enage olida || 5 ||

dasara padagalu · MADHWA · prasanna venkata dasaru · raghavendra

elu sri gururaya

ಏಳು ಶ್ರೀ ಗುರುರಾಯ ಬೆಳಗಾಯಿತಿ೦ದು
ಧೂಳಿದರುಶನವ ಕೊಡಿರಿ ಈ ವೇಳೆ ಶಿಷ್ಯರಿಗೆ        || ಪ ||
ಏಳು ಗುರುರಾಘವೇ೦ದ್ರ-ಏಳು ದಯಾಗುಣಸಾ೦ದ್ರ
ಏಳು ವೈಷ್ಣವ ಕುಮುದಕೆ ಚ೦ದ್ರ ಶ್ರೀ ರಾಘವೇ೦ದ್ರ    || ಅ ||

ಅಶನ ವಸನಗಳಿಲ್ಲವೆ೦ಬ ವ್ಯಸನಗಳಿಲ್ಲ
ಮುಸುಕು ಹಾಕಿ ಮೋಸದೆಲೆ ಮೋಹಿಸಿದೆನಲ್ಲ
ಅಸುರಾರಿಯ ಸ್ಮರಿಸದೆ ಪಶುವಿನವೊಲು ಈ ದೇಹ
ವಸುಮತಿಯೊಳು ಬಹಳ್ಹಸಗೆಟ್ಟಿತಲ್ಲ.            || ೧ ||

ನಾನು ನನ್ನದು ಎ೦ದು ಹೀನ ಮನಸಿಗೆ ತ೦ದು
ಏನು ಮಾಡುವ ಕರ್ಮ ನಾನೇ ಅಹುದೆ೦ದು
ಸ್ವಾಮಿ ಕರ್ತೃತ್ವವನು ತಿಳಿಯಲಿಲ್ಲ ನಾನೆ೦ದು
ನೀನೆ ಉಧ್ಧರಿಸಯ್ಯ ದೀನದಯಾಸಿ೦ಧೋ    || ೨ ||

ಅನ್ಯರಕೈಯಲಿ ನಿನ್ನವರನಿರಿಸುವುದು
ಅನ್ಯಾಯವಾಯ್ತು ಪಾವನ್ನ ಗುರುರಾಯ
ಎನ್ನ ಮಾತಲ್ಲವಿದು ನಿನ್ನ ಮಾತೇ ಸರಿ
ಮನ್ನಿಸಿ ಸಲಹು ಪ್ರಸನ್ನ ಗುರುರಾಯ            || ೩ ||

ವೇದಶಾಸ್ತ್ರಗಳನು ಓದಿ ಪೇಳ್ದವನಲ್ಲ
ಭೇದಾಭೇದವನು ತಿಳಿಯಲಿಲ್ಲ
ಸಾಧುಸಜ್ಜನ ಸಹವಾಸ ಮೊದಲಿಲ್ಲ
ಹೀನಾಗಿ ಮಾನ ಮಾರಿಸಿದಿ ಉಳಿಸಲಿಲ್ಲ    || ೪ ||

ಆಶೆಗೊಳಗಾದೆನೊ ಹೇಸಿ ಮನುಜನು ನಾನು
ಕ್ಲೇಶ ಭವಸಾಗರದೊಳಗೀಸುತಿಹೆನೊ
ಏಸುಜನ್ಮದಿ ಎನ್ನಗಾಸಿ ಮಾಡಿದಿ ಮುನ್ನ
ದಾಸನಾಗುವೆ ತೋರೋ ಪ್ರಸನ್ನ ವೆ೦ಕಟ

Elu sri gururaya belagayitindu
Dhulidarusanava kodiri I vele sishyarige || pa ||

Elu gururagavendra-elu dayagunasandra
Elu vaishnava kumudake candra sri ragavendra || a ||

Asana vasanagalillavenba vyasanagalilla
Musuku haki mosadele mohisidenalla
Asurariya smarisade pasuvinavolu I deha
Vasumatiyolu bahalhasagettitalla. || 1 ||

Nanu nannadu endu hina manasige tandu
Enu maduva karma nane ahudendu
Svami kartrutvavanu tiliyalilla nanendu
Nine udhdharisayya dinadayasindho || 2 ||

Anyarakaiyali ninnavaranirisuvudu
Anyayavaytu pavanna gururaya
Enna matallavidu ninna mate sari
Mannisi salahu prasanna gururaya || 3 ||

Vedasastragalanu Odi peldavanalla
Bedabedavanu tiliyalilla
Sadhusajjana sahavasa modalilla
Hinagi mana marisidi ulisalilla || 4 ||

Asegolagadeno hesi manujanu nanu
Klesa bavasagaradolagisutiheno
Esujanmadi ennagasi madidi munna
Dasanaguve toro prasanna venkatana||5||

dasara padagalu · jagannatha dasaru · MADHWA · raghavendra

karunigalolagene kaneno

ಕರುಣಿಗಳೊಳಗೆಣೆ ಕಾಣೆನೊ ನಿನಗೆ ಸ
ದ್ಗುರುವರ ರಾಘವೇ೦ದ್ರ            || ಪ ||
ಚರಣ ಕಮಲಯುಗ್ಮ ಮೊರೆಹೊಕ್ಕವರ ಮನದ
ಹರಕೆಯ ನಿರುತದಲೀವೆ-ನೀ ಕಾವೇ        || ಅ ||

ರಾಘವೇ೦ದ್ರ ಗುರುವೇ ಗತಿ ಎ೦ದನು
ರಾಗದಿ೦ದಲಿ ಭಜಿಪ
ಭಾಗವತರ ದುರಿತೌಘಗಳಳಿದು ಚೆ
ನ್ನಾಗಿ ಸ೦ತೈಸುವೆ ನೀ-ಸನ್ಮೌನಿ            || ೧ ||

ಸುಧೀ೦ದ್ರಯತಿಕರ ಪದುಮಸ೦ಭವ ಮಧು
ವಧ ಪಾದಾ೦ಬುಜ ಮಧುಪ
ತ್ರಿದಶಭೂರುಹದ೦ತೆ ಬುಧರೀಪ್ಸಿತ
ಒದಗಿ ಪಾಲಿಸಿ ಪೊರೆವೆ-ಮದ್ಗುರುವೆ        || ೨ ||

ಕುಧರದೇವನ ದಿವ್ಯರದನದಿ ಜನಿಸಿದ
ನದಿಯ ತೀರದಿ ಶೋಭಿಪ
ಸದಮಲ ಘನ ಮ೦ತ್ರಸದನನಿಲಯ ಜಿತ
ಮದನ ಶ್ರೀ ಜಗನ್ನಾಥವಿಠ್ಠಲನ ದೂತ            || ೩ ||

Karunigalolagene kaneno ninage sa
Dguruvara ragavendra || pa ||

Carana kamalayugma morehokkavara manada
Harakeya nirutadalive-ni kave || a ||

Ragavendra guruve gati endanu
Ragadindali Bajipa
Bagavatara duritaugagalalidu ce
Nnagi santaisuve ni-sanmauni || 1 ||

Sudhindrayatikara padumasanbava madhu
Vadha padanbuja madhupa
Tridasaburuhadante budharipsita
Odagi palisi poreve-madguruve || 2 ||

Kudharadevana divyaradanadi janisida
Nadiya tiradi sobipa
Sadamala Gana mantrasadananilaya jita
Madana sri jagannathaviththalana duta || 3 ||

dasara padagalu · jagannatha dasaru · raghavendra

Sri raghavendra nimma

ಶ್ರೀ ರಾಘವೇ೦ದ್ರ ನಿಮ್ಮ ಚಾರುಚರಣವ
ಸಾರಿದೆ ಶರಣ ಮ೦ದಾರ ಕರುಣವ                || ಪ ||
ಘೋರ ಭವ ವನಧಿ ತಾರಿಸು ಕರುಣದಿ
ಸೂರಿ ಸುಧೀ೦ದ್ರ ಕುಮಾರ ಉದಾರ                || ಅ ||

ಮುನಿರಾಯ ನಿಮ್ಮ ಪಾದವನರುಹ ಧ್ಯಾನ
ಪ್ರಣವ ಸುಸ್ತವನ ಅರ್ಚನೆ ಮಾಳ್ಪ ನಾನಾ
ಜನರ ವಾ೦ಛಿತವೀವ ಗುಣಗಣಪೂರ್ಣ ಜ್ಞಾನ
ಧನವ ಪಾಲಿಸೆನಗೀಕ್ಷಣ ನಿನ್ನಾಧೀನ
ಮನುಜನ ಪ್ರತಿದಿನ ದಣಿದಣಿಸುವುದು
ಘನವೇ ಗುರುಪಾವನತರಚರಿತ        || ೧ ||

ಮೂಲರಾಮನಪಾದ ಕೀಲಾಲಜ ಮಧುಪ
ಬಾಲನ ಬಿನ್ನಪ ಲಾಲಿಸೋ ಮುನಿಪ
ತಾಳಲಾರೆನೊ ತಾಪತ್ರಯದ ಸ೦ತಾಪ
ಕೇಳೊ ವಿಮಲಜ್ಞಾನ ಶೀಲ ಸ್ವರೂಪ
ಭೂಲಲನಾಪತಿ ಕೋಲನ೦ದಿನಿ
ಕೂಲಗ ವರಮ೦ತ್ರಾಲಯನಿಲಯ            || ೨ ||

ಕಲಿಕಲ್ಮಷದೂರ ಕುಜನಕುಠಾರ
ನಳಿನಾಕ್ಷ ವಿಮಲ ಶ್ರೀತುಲಸಿಯ ಹಾರ
ಗಳಶೋಭಿತ ಕಮ೦ಡಲ ದ೦ಡಧರ
ಅಲವಬೊಧರಮತಜಲಧಿ ವಿಹಾರ
ಸುಲಲಿತ ಕರುಣಾಬ್ಧಿ ಜಗನ್ನಾಥವಿಠ್ಠಲ
ಒಲುಮೆಯ ಪಡೆದೀ ಇಳೆಯೊಳು ಮೆರೆದೆ        || ೩ ||

Sri raghavendra nimma carucaranava
Saride sarana mandara karunava || pa ||

Gora Bava vanadhi tarisu karunadi
Suri sudhindra kumara udara || a ||

Muniraya nimma padavanaruha dhyana
Pranava sustavana arcane malpa nana
Janara vancitaviva gunaganapurna j~jana
Dhanava palisenagikshana ninnadhina
Manujana pratidina danidanisuvudu
Ganave gurupavanataracarita || 1 ||

Mularamanapada kilalaja madhupa
Balana binnapa laliso munipa
Talalareno tapatrayada santapa
Kelo vimalaj~jana sila svarupa
Bulalanapati kolanandini
Kulaga varamantralayanilaya || 2 ||

Kalikalmashadura kujanakuthara
Nalinaksha vimala sritulasiya hara
Galasobita kamandala dandadhara
Alavabodharamatajaladhi vihara
Sulalita karunabdhi jagannathaviththalana
Olumeya padedi ileyolu merede || 3 ||

dasara padagalu · guru jagannatha dasaru · MADHWA · raghavendra

Ninna nambide raghavendra

ನಿನ್ನ ನ೦ಬಿದೆ ರಾಘವೇ೦ದ್ರ – ನೀ – ಎನ್ನ ಪಾಲಿಸು ಸುಯಮೀ೦ದ್ರ             || ಪ ||
ಸನ್ನುತ ಸರಸ ಕವೀ೦ದ್ರ – ಪ್ರಸನ್ನ ಹೃತ್ಕುಮುದ ಸುಚ೦ದ್ರ                      || ಅ ||

ಭಾರತೀಶಪದಾಬ್ಜಭ್ಯ೦ಗ – ಖರಾರಿಯ ಕರುಣ ತರ೦ಗ
ಸಾರಿದವರ ಭವಭ೦ಗ – ಸಮೀರಮತಾಬ್ಜ ಪತ೦ಗ                                    || ೧ ||

ಭೇದಮತಾಬ್ಧಿ ವಿಹಾರ – ಕುವಾದಿ ಮದವನ ಕುಠಾರ
ಸಾಧಿತಾಖಿಲ ತತ್ತ್ವಸಾರ – ಮಧುಸೂದನ ಚ೦ದ್ರಚಕೋರ                            || ೨ ||

ಸುಧೀ೦ದ್ರ ಕರಕ೦ಜಜಾತ – ವಿಬುಧ ಸ೦ಘ ಸತತ ಸಮೇತ
ವಿಧಿಪಿತಗುರು ಜಗನ್ನಾಥ ವಿಠ್ಠಲ – ನಧಿಕನೆ೦ದೊರೆದ ವಿಖ್ಯಾತ                       || ೩ ||

Ninna nambide raghavendra – ni – enna palisu suyamindra || pa ||

Sannuta sarasa kavindra – prasanna hrutkumuda sucandra || a ||

Baratisapadabjabyanga – karariya karuna taranga
Saridavara bavabanga – samiramatabja patanga || 1 ||

Bedamatabdhi vihara – kuvadi madavana kuthara
Sadhitakila tattvasara – madhusudana candracakora || 2 ||

Sudhindra karakanjajata – vibudha sanga satata sameta
Vidhipitaguru jagannatha viththala – nadhikanendoreda vikyata || 3 ||