dasara padagalu · DEVOTIONAL · MADHWA · purandara dasaru · rama

raama mantrava

ರಾಮ ಮಂತ್ರವ ಜಪಿಸೋ ಹೇ ಮನುಜ                 ||ಪ||

ಆ ಮಂತ್ರ ಈ ಮಂತ್ರ ನೆಚ್ಚಿ ನೀ ಕೆಡಬೇಡ
ಸೋಮಶೇಖರ ತನ್ನ ಭಾಮೆಗೆ ಪೇಳಿದ ಮಂತ್ರ       ||ಅ.ಪ||

ಕುಲಹೀನನಾದರು ಕೂಗಿ ಜಪಿಸುವ ಮಂತ್ರ
ಸಲೆ ಬೀದಿ ಬೀದಿಯೊಳು ನುಡಿವ ಮಂತ್ರ
ಹಲವು ಪಾಪಂಗಳ ಹತಗೊಳಿಸುವ ಮಂತ್ರ
ಸುಲಭದಿಂದಲಿ ಸ್ವರ್ಗ ಸೂರೆ ಕೊಂಬುವ ಮಂತ್ರ      ||೧||

ಜ್ಞಾನನಿಧಿ ನಮ್ಮ ಆನಂದತೀರ್ಥರು
ಸಾನುರಾಗದಿ ನಿತ್ಯ ಸೇವಿಪ ಮಂತ್ರ
ಭಾನುಕುಲಾಂಬುಧಿ ಸೋಮನೆನಿಪ ನಮ್ಮ
ದೀನರಕ್ಷಕ ಪುರಂದರವಿಠಲನ ಮಂತ್ರ                  ||೨||

Rama mantrava jabiso hey manuja|

A mantra I mantra necci ni kedabeda somashekhara tanna bhamini korediha||

Kula hinanadarau kugi japisuva mantra sale bidiyolu uccaripa mantra
halavu papangala hadagedisuva mantra sulabhadindali svarga sure kombuva mantra||

Marutatmaja nitya smarane maduva mantra sarva rsigalalli serida mantra
durita kananakidu davanala mantra poredu vibhisanage patta kattida mantra||

Jnananidhi namma Ananda tirttaru sanuragadi nitya sevipa mantra
bhanu kulambudhi somanenipa namma dinaraksaka purandara vittalana mantra||

dasara padagalu · DEVOTIONAL · MADHWA · purandara dasaru · rama

Alli nodalu Raama

ಅಲ್ಲಿ ನೋಡಲು ರಾಮ ಇಲ್ಲಿ ನೋಡಲು ರಾಮ
ಎಲ್ಲಿಲ್ಲಿ ನೋಡಿದರೂ ಅಲ್ಲಿ ಶ್ರೀರಾಮ||ಪಲ್ಲವಿ||

ರಾವಣನ ಮೂಲಬಲ ಕಂಡು ಕಪಿಸೇನೆ
ಆವಾಗಲೇ ಬೆದರಿ ಓಡಿದವು
ಈ ವೇಳೆ ನರನಾಗಿ ಇರಬಾರದೆಂದೆಣಿಸಿ
ದೇವ ರಾಮಚಂದ್ರ ಜಗವೆಲ್ಲಾ ತಾನಾದ||1||

ಅವನಿಗೆ ಇವ ರಾಮ ಇವನಿಗೆ ಅವ ರಾಮ
ಅವನಿಯೊಳೀಪರಿ ರೂಪವುಂಟೇ
ಲವದಲ್ಲಿ ಅಸುರ ದುರುಳರೆಲ್ಲರು
ಅವರವರು ಹೊಡೆದಾಡಿ ಹತರಾಗಿಹೋದರು||2||

ಹನುಮದಾದಿ ಸಾಧು ಜನರು ಅಪ್ಪಿಕೊಂಡು
ಕುಣಿಕುಣಿದಾಡಿದರು ಹರುಷದಿಂದ
ಕ್ಷಣದಲ್ಲಿ ಪುರಂದರ ವಿಠಲರಾಯನು
ಕೊನೆಗೊಡೆಯನು ತಾನೊಬ್ಬನಾಗಿ ನಿಂತ||3||

Alli nodalu rama illi nodalu rama ellalli nodidaralli shri rama

Ravana moolabala kandu kapisene avagale bedari odidavu
I vele naranagi irabaradendenisi deva ramacandra jagavella tanada||1||

Avanige iva rama ivanige ava rama avaniyoli pari rupavunte
Lavamatradi asura durullellaru avaravar hodedadi hataragi podaru||2||

Hanumadadi sadhu janaru appikondu kunikunidadidaru harusadinda
Ksanadalli purandara vittalarayanu konekodeyanu tanoppanagi ninta||3||

dasara padagalu · DEVOTIONAL · kanakadasaru · MADHWA · rama

angaladolu raamanaidha

ಅಂಗಳದೊಳು ರಾಮನಾಡಿದ ಚಂದ್ರ
ಬೇಕೆಂದು ತಾ ಹಠ ಮಾಡಿದ ॥ಪ॥

ತಾಯಿಯ ಕರೆದು ಕೈ ಮಾಡಿ ತೋರಿದ
ಮುಗಿಲ ಕಡೆಗೊಮ್ಮೆ ದಿಟ್ಟಿಸಿ ನೋಡಿದ
ಚಿನ್ನಿಕೊಳು ಚಂಡು ಬುಗುರಿ ಎಲ್ಲವ
ಬೇಡ ಬೇಡ ಎಂದು ತಾ ಬಿಸಾಡಿದ ॥೨॥

ಕಂದ ಬಾ ಎಂದು ತಾಯಿ ಕರೆದಳು ಮಮ್ಮು
ಉಣ್ಣೆಂದು ಬಣ್ಣಿಸುತ್ತಿದ್ದಳು
ತಾಯಿ ಕೌಸಲ್ಯ ಕಳವಳ ಗೊಂಡಳು ಕಂದ
ಅಂಜಿದನು ಎನ್ನುತಿದ್ದಳು ॥೩॥

ಅಳುವ ಧ್ವನಿ ಕೇಳಿ ರಾಜನು ಮಂತ್ರಿ
ಸಹಿತಾಗಿ ಧಾವಿಸಿ ಬಂದನು
ನಿಲುವ ಕನ್ನಡಿ ತಂದಿರಿಸಿದ
ಶ್ರೀ ರಾಮನ ಎತ್ತಿ ಮುದ್ದಾಡಿದ ॥೪॥

ಕನ್ನಡಿಯೊಳು ಬಿಂಬ ನೋಡಿದ ಚಂದ್ರ
ಸಿಕ್ಕಿದನೆಂದು ಕುಣಿದಾಡಿದ
ಈ ಸಂಭ್ರಮ ನೋಡಿ ಆದಿ ಕೇಶವ
ರಘು ವಂಶವನ್ನೇ ಕೊಂಡಾಡಿದ ॥೫॥

Angaladolu raamanaadidaa |
Chandra bekendu taa hata maadidaa || pa ||

Taayiya karedu kai maadi toridaa |
Mugila kadegomme dittisi nodidaa |
Chinni kolu cendu buguri ellavaa |
Bedaa bedaa endu beesaadidaa || 1 ||

Kanda baa endu taayi karedalu |
Mammu unnendu bannisuttiddalu |
Taayi kousalyaa kalavalagondalu |
Kanda anjidanu ennuttiddalu || 2 ||

Aluva dhwani keli raajanu |
Mantri sahitaagi dhaavisi bandanu |
Niluva kannadi tandirisidaa |
Shreeraamana etti muddaadidaa || 3 ||

Kannadiyolu bimba nodidaa |
Chandra sikkidanendu kunidaadidaa |
Ee sambhrama nodi aadi keshava |
Raghuvamshavanne kondaadidaa || 4 ||

dasara padagalu · DEVOTIONAL · MADHWA · purandara dasaru

Raama raama raama seetaa raamaa enniro

ರಾಮ ರಾಮ ರಾಮ ರಾಮ ರಾಮ ಎನ್ನಿರೋ |ಸೀತಾ|
ನೇಮದಿಂದ ಭಜಿಸುವವರ ಕಾಮಿತಗಳ ಕೊಡುವ ನಾಮ ||

ಭರದಿ ಯಮನ ಭಟರು ಬಂದು ಹೊರಡು ಎಂದು ಮೆಟ್ಟಿ ತುಳಿದು
ಕೊರಳಿಗಾತ್ಮ ಸೇರಿದಾಗ ಹರಿಯ ಧ್ಯಾನ ಬಾರದಯ್ಯ ||

ಇಂದ್ರಿಯಂಗಳೆಲ್ಲ ಕೂಡಿ ಬಂದು ತನುವ ಮುಸುಕಿದಾಗ
ಸಿಂಧು ಸುತೆಯ ಪತಿಯ ನಾಮ ಅಂದಿಗೊದಗಲರಿಯದಯ್ಯ ||

ಶ್ವಾಸೋಛ್ವಾಸವೆರಡು ಕಂಠ ವಾಸವಾಗಿ ಸಿಲುಕಿದಾಗ
ವಾಸುದೇವ ಕೃಷ್ಣನ ನಾಮ ಆ ಸಮಯಕೊದಗದಯ್ಯ ||

ಶೃಂಗಾರದ ದೇಹವೆಲ್ಲ ಅಂಗಬಡಿದು ಮುರಿದು ಬಿದ್ದು
ಕಂಗಳಿಗಾತ್ಮ ಸೇರಿದಾಗ ಶ್ರೀ ರಂಗನ ನಾಮ ಒದಗದಯ್ಯ ||

ವಾತ ಪಿತ್ತವೆರಡು ಕೂಡಿ ಶ್ಲೇಷ್ಮ ಬಂದು ಒದಗಿದಾಗ
ಧಾತುಗುಂದಿದಾಗ ರಘುನಾಥ ಧ್ಯಾನ ಒದಗದೋ ||

ಕಲ್ಲು ಮರನಂತೆ ಜೀವ ನಿಲ್ಲದಂತೆ ಮರಣ ವ್ಯಾಳೆ
ಫುಲ್ಲನಾಭ ಕೃಷ್ಣನೆಂಬೊ ಸೊಲ್ಲು ಬಾಯಿಗೊದಗದಯ್ಯ ||

ಭ್ರಷ್ಟ ಜನ್ಮದಲ್ಲಿ ಬಂದು ದುಷ್ಟ ಕರ್ಮಗಳನೆ ಮಾಡಿ
ಬಿಟ್ಟು ಹೋಗ್ವ ಸಮಯ ಪುರಂದರ ವಿಠ್ಠಲ ನಾಮ ಒದಗದಯ್ಯ ||

Raama raama raama seetaa raamaa enniro || pa ||

Amarapatiya divya naama andu odagado || a. Pa.||

Bharadi yamana bhataru bandu |
Horadirendu metti muriye |
Koraligaatma seridaaga |
Hariya naama odagado || 1 ||

Shwaasa khaasaveradu kantha |
Dehadalli seridaaga |
Vaasudevanembo naama |
Aa samayake odagado || 2 ||

Kallu maranaagi j~jaana |
Villadaaga marana odage |
Phullanaabha krushnanemba |
Sollu baayige odagado || 3 ||

Ketta janmadalli hutti |
Dushta karmagala maadi deha |
Bittu hoguvaaga purandaraviththalana |
Dhyaana vadagado || 4 ||

dasara padagalu · DEVOTIONAL · MADHWA · purandara dasaru · rama

Raama namava nudi nudi

ರಾಮನಾಮವ ನುಡಿ ನುಡಿ ಕಾಮಕ್ರೋಧಗಳ ಬಿಡಿ ಬಿಡಿ
ಶ್ರೀರಾಮನಾಮವ ನುಡಿ ನುಡಿ

ಗುರುಗಳ ಚರಣವ ಹಿಡಿ ಹಿಡಿ
ಹರಿ ನಿರ್ಮಾಲ್ಯವ ಮುಡಿ ಮುಡಿ
ಕರಕರೆ ಭವಪಾಶವ ಕಡಿ ಕಡಿ ಬಂದ
ದುರಿತವನೆಲ್ಲ ಹೂಡಿ ಹೂಡಿ

ಸಜ್ಜನರ ಸಂಗವ ಮಾಡೋ ಮಾಡೋ
ದುರ್ಜನರ ಸಂಗವ ಬಿಡೋ ಬಿಡೋ
ಅರ್ಜುನಸಾರಥಿ ರೂಪ ನೋಡೋ ನೋಡೋ ಹರಿ
ಭನನೆಯಲಿ ಮನ ಇಡೋ ಇಡೋ

ಕರಿರಾಜವರದನ ಸಾರೋ ಸಾರೋ ಶ್ರಮ
ಪರಹರಿಸೆಂದು ಹೋರೋ ಹೋರೋ
ವರದ ಭೀಮೇಶನ ದೂರದಿರೋ ನಮ್ಮ
ಪುರಂದರವಿಠಲನ ಸೇರೋ ಸೇರೋ

Raama naamava nudi nudi |
Kama krodhava bidi bidi sri || pa ||

Gurugala charanava hidi hidi |
Hari nirmalyava mudi mudi |
Kare kare bhavapasha kadi kadi | banda |
Duritava nellava hodi hodi || 1 ||

Sajjana sangava mado mado |
Durjana sangava bido bido |
Arjunana sarathiya nodo nodo |
Hari bhajaneli manavanu ido ido || 2 ||

Kariraja varadana saro saro |
Shrama pariharisendu horo horo |
Varada bheemesana dooradiro | namma |
Purandara vithalana sero sero || 3 ||

dasara padagalu · DEVOTIONAL · MADHWA · rama · Vijaya dasaru

raama raama emberadara

ರಾಮ ರಾಮ ಎಂಬೆರಡಕ್ಷರ
ಪ್ರೇಮದಿ ಸಲಹಿತು ಸುಜನರನು ||ಪಲ್ಲವಿ||

ಹಾಲಾಹಲವನು ಪಾನವ ಮಾಡಿದ|
ಫಾಲಲೋಚನನೆ ಬಲ್ಲವನು ||
ಆಲಾಪಿಸುತ ಶಿಲೆಯಾಗಿದ್ದ |
ಬಾಲೆ ಅಹಲ್ಯೆಯ ಕೇಳೇನು ||೧||

ಅಂಜಿಕೆ ಇಲ್ಲದೆ ಗಿರಿ ಸಾರಿದ ಕಪಿ|
ಕುಂಜರ ರವಿಸುತ ಬಲ್ಲವನು ||
ಎಂಜಲ ಫಲಗಳ ಹರಿಗರ್ಪಿಸಿದ |
ಕಂಜಲೋಚನೆಯ ಕೇಳೇನು ||೨||

ಕಾಲವನರಿತು ಸೇವೆಯ ಮಾಡಿದ |
ಲೋಲ ಲಕ್ಷ್ಮಣನೆ ಬಲ್ಲವನು ||
ವ್ಯಾಳ ಶಯನ ಶ್ರೀ ವಿಜಯವಿಠಲನ |
ಲೀಲೆ ಶರಧಿಯ ಕೇಳೇನು ||೩||

Raama raama emberadara premadi |
Salahitu sujanaru || pa ||

Haalaahalavannu paanava maadida |
Paala locanane ballavanu |
Aalaapisuta shileyaagidda baale |
Ahalyeya kelenu || 1 ||

Anjike illade giri saarida kapi |
Kunjara kunjara ravisuta ballavanu |
Enjala phalagala harigarpisida |
Kanjalocaneya kelenu || 2 ||

Kaalavanaritu seveya maadida |
Lola lakshmanane ballavanu |
Vyaalaashayana shreevijayaviththalana |
Leele sharadhiya kelenu || 3 ||

 

 

dasara padagalu · DEVOTIONAL · kanakadasaru · MADHWA · rama

Elli nodidaralli raamaa

ಎಲ್ಲಿ ನೋಡಿದರಲ್ಲಿ ರಾಮ – ಇದ ||pa||

ಬಲ್ಲ ಜಾಣರ ದೇಹದೊಳಗೆ ನೋಡಣ್ಣ ||apa||

ಕಣ್ಣೇ ಕಾಮನ ಬೀಜ – ಈಕಣ್ಣಿಂದಲೆ ನೋಡು |
ಮೋಕ್ಷ ಸಾಮ್ರಾಜ್ಯಕಣ್ಣಿನ ಮೂರುತಿ ಬಿಗಿದು – ಒಳಗಣ್ಣಿಂದಲೇ ದೇವರ ನೋಡಣ್ಣ ||1||

ಮೂಗೇ ಶ್ವಾಸ ನಿಶ್ವಾಸ – ಈಮೂಗಿಂದಲೇ ಕಾಣೊ ಯೋಗ ಸಂನ್ಯಾಸ|
ಮೂಗನಾದರೆ ವಿಶೇಷ – ಒಳಮೂಗಲಿ ನೋಡಣ್ಣ ಲೀಲಾವಿಲಾಸ ||2||

ಕಿವಿಯೇ ಕರ್ಮಕೆ ದ್ವಾರ – ಈಕಿವಿಯಿಂದಲೇ ಕೇಳೋ ಮೋಕ್ಷದ ಸಾರ|
ಕಿವಿಯೇ ಕರ್ಮ ಕುಠಾರ – ಒಳಗಿವಿಯಲ್ಲಿ ಕಾಣೊ ನಾದದ ಬೇರ ||3||

ಬೊಮ್ಮ ಮಾಡಿದ ತನುಬಿಟ್ಟು – ವಿಶ್ವಕರ್ಮನು ಮಾಡಿದ ಬೊಂಬೆಯನಿಟ್ಟು
ಸುಮ್ಮನೆ ಕೂಗುಗಳಿಟ್ಟು – ಅದನಂಬುವನೆಂಬೋನು ಹೋಹ ಕಂಗೆಟ್ಟು||4||

ರೂಢಿಯೊಳಗೆ ಶುದ್ಧ ಮೂಢ – ಈಕಾಡುಕಲ್ಲುಗಳನ್ನು ನಂಬಬೇಡ
ನಾಡಾಡಿ ದೈವಗಳನೆಲ್ಲ – ನಮ್ಮಬಡದಾದಿ ಕೇಶವನೊಬ್ಬನೆ ಬಲ್ಲ ||5||

Elli nodidaralli raamaa | ida |
Balla jaanara dehadalli nodannaa || pa ||

Kanne kaamana beeja |
kannindale nodu |
Moksha saamraajya | kannina mooruti bigidu |
Ola kannindale devara nodanna || 1 ||

Mooge shwaasa nishwaasa |
Moogimdale kaano yoga sanyaasa |
Mooganaadare vishesha |
Mooginda nodanna leelaa vilaasa || 2 ||

Kiviye karmakke dwaara |
Kiviyindale kelo mokshada saaraa |
Kiviye karma kuthaaraa |
Olagiviyalli kaano naadada bera || 3 ||

Bommanu maadida tanu bittu |
Vishwa karmanu maadida bombeyanittu |
Summane koogugalittu |
Ada nambuvenembone poda kangettu || 4 ||

Roodhiyolage shuddha moodha |
Kaadu kallugalannu nambalu bedaa |
Naadaadi daivagalellaa namma |
Baadadaadikeshavanobbane ballaa || 5 ||

MADHWA · purandara dasaru

sri pathiyu namage

 

ಶ್ರೀಪತಿಯು ನಮಗೆ ಸಂಪದವೀಯಲಿ||

ವಾಣೀ ಪತಿಯು ನಮಗೆ ದೀರ್ಘಾಯು ಕೊಡಲಿ||a.pa||

ಸುರರ ಗಣವನು ಪೊರೆಯೆ ವಿಶವ ಕಂಠದಲಿಟ್ಟ
ಹರ ನಮಗೆ ಸತತ ಸಹಾಯಕನಾಗಲಿ|
ನರರೋಳುನ್ನತವಾದ ಭೋಗ ಭಾಗ್ಯಂಗಳನು
ಪುರುಹೂತ ಪೂರ್ಣ ಮಾಡಿಸಲಿ ನಮಗೆ||1||

ವಿನುತ ಸಿದ್ಧಿಪ್ರದನು ವಿಘ್ನೇಶ ದಯದಿಂದ
ನೆನೆದ ಕಾರ್ಯಗಲೆಲ್ಲ ನೆರವೇರಿಸಲಿ|
ದಿನದಿನದಿ ಅಶ್ವಿನಿಗಳಾಪತ್ತುಗಳ ಕಳೆದು
ಮನಕೆ ಹರುಷವನಿತ್ತು ಮನ್ನಿಸಲಿ ಬಿಡದೆ||2||

ನಿರುತ ಸುಜ್ಞಾನವನು ಈವ ಗುರು ಮಧ್ವರಾಯ
ಗುರುಗಳಾಶಿರ್ವಾದ ನಮಗಾಗಲಿ|
ಪುರಂದರ ವಿಠಲನ ಕರುಣದಿಂದಲಿ ಸಕಲ
ಸುರರೊಲುಮೆ ನಮಗೆ ಸುಸ್ಥಿರವಾಗಲಿ||3||

sri pathiyu namage sampathaveeyali
vaani pathiyu namage dheergayu kodali||

vara vibutharanu poreya vishava kandadhalalitta
hara nithya namage sahaayavagali
nararolu unnathavatha nithya boggalannu
puruhuta poorna madisi namage||1||

vinutha siddhi prathanu vignesa dayadhindha
nenatha kaaryagalella neraverisalu
dina dinadhi dhanvanthri abatthugala kaledhu
manage harusha vitthu mannisali bidadhe||2||

nerutha sugnanavanu eeva madhvaraaya
gurugaalasirvadha nama gagali
purandara vittalana karunda dhindhali
surarolume namage susthrivaagali||3||

dasara padagalu · DEVOTIONAL · MADHWA · purandara dasaru

Sri pathiya nabhi(Madhwa parampara)

ಶ್ರೀ ಪತಿಯ ನಾಭಿ ಕಮಲದಿಂದ ಅಜ ಜನಿಸಿದನು
ಅಜನ ಪುತ್ರರೆ ಸನಕಾದಿಗಳು ।
ಸನಕಾದಿಗಳ ಶಿಷ್ಯರೇ ದೂರ್ವಾಸರು ।
ದೂರ್ವಾಸರ ಶಿಷ್ಯರೇ ಪರತೀರ್ಥರು ।
ಪರತೀರ್ಥರ ಶಿಷ್ಯರೇ ಸತ್ಯಪ್ರಜ್ಞರು ।
ಸತ್ಯಪ್ರಜ್ಞರ ಶಿಷ್ಯರೇ ಪ್ರಾಜ್ಞತೀರ್ಥರು ।
ಪ್ರಾಜ್ಞತೀರ್ಥರ ಶಿಷ್ಯರೇ ಅಚ್ಯುತಪ್ರೇಕ್ಷರು ।
ಅಚ್ಯುತಪ್ರೇಕ್ಷರ ಕರಸಂಜಾತರೇ ಮಹಾಭಾಷ್ಯಕಾರರು।
ಮಹಾಭಾಷ್ಯಕಾರರೇ ಗುರುಮುಖ್ಯಪ್ರಾಣರು ।
ಗುರುಮುಖ್ಯಪ್ರಾಣಪತಿ ನಮ್ಮ ಪುರಂದರ ವಿಠ್ಠಲದಾಸರಿಗೆ ನಮೋ ನಮ: ।।

sri pathiya nabhi kamaladhalli aja janisidhanu
ajana manasa puthrare sanakathigalu
sanakaadhigala sishyare dhur vaasaru
dhur vasara sishyare para theertharu
para theerthara sishyare purna pragnyaru
sathya pragnara shisyare praagnya theertharu
praagnya theerthara sishyare achyuta preksharu
achyutha preksha kara sanjaathare mahaa bhasya kararu
mahaa bhasya kaarare guru mukhya praanaru
guru mukhya praana pathi namma
purandara vittala daasarige namo nama

dasara padagalu · DEVOTIONAL · MADHWA · narasimha · purandara dasaru

Narasimha prathrurbhava(kannada)

This is one of my favorite songs from Mysore Ramachandra Achar kacheri. This is a masterpiece song performed by him. I am sure everyone who witnessed his kacheri live would have felt goosebumps.  He tooks us to the avathara time of Lord narasimha itself. What a wonderful lyrics purandara dasaru has composed in this song. I have seen so many kacheris of him where people requesting him to sing this particular song for them. The music, Jaankate sound, his powerful vocals, beautiful pictures all together gives the listener a divine experience. I attached his performance from a youtube link.

ನಾರಸಿಂಹನೆಂಬೊ ದೇವನು ನಾರಸಿಂಹನೆಂಬೊ ದೇವನು।
ನಂಬಿದಂಥ ನರರಿಗೆಲ್ಲ ವರವಕೊಡುವನು ।ಪ।

ಆದಿಯಲ್ಲಿ ಲಕ್ಷ್ಮೀಸಹಿತದಿ ಮಲಗಿರಲು
ಬಂದರಾಗ ಸನತ್ಕುಮಾರರು
ಆಗ ದ್ವಾರಪಾಲಕರು ತಡೆಯಲಾಗ ಕೋಪದಿಂದ
ಮೂರು ಜನ್ಮದಲ್ಲಿ ನೀವು ಅಸುರರಾಗಿ ಪುಟ್ಟಿರೆಂದರು ।। ನಾರಸಿಂಹ ।।

ದ್ವಿತೀಯ ಗರ್ಭದಲ್ಲಿ ಜನಿಸಿದ ಹಿರಣ್ಯಾಕ್ಷ
ಹಿರಣ್ಯಕಶಿಪುರೆಂಬ ಭ್ರಾತೃರು
ಪೃಥ್ವಿಯನ್ನು ಮುಳುಗಿಸಿದ ಕಾರಣಾದಿ ಶ್ರೀಹರಿಯು
ತೃತೀಯ ರೂಪದಿಂದ ಖಳನ ಕೊಂದು ಧರೆಯನುಳಿಹಿದನು ।। ನಾರಸಿಂಹ ।।

ಅನುಜನಾದ ಹಿರಣ್ಯಾಕ್ಷನ ಮರಣವನ್ನು
ಕೇಳಿ ಆಗ ನಡೆದ ತಪಸ್ಸಿಗೆ
ಹರಿಯ ಮೇಲೆ ಸಿಟ್ಟಿನಿಂದ ಉಗ್ರತಪಸ್ಸನ್ನು ಮಾಡಿ
ಬ್ರಹ್ಮನಿಂದ ವರಗಳನ್ನು ಪಡೆದುಕೊಂಡು ಬಂದನಾಗ ।। ನಾರಸಿಂಹ ।।

ಇಂದ್ರಲೋಕ ಸೂರೆ ಮಾಡಿದ
ಮೂರು ಲೋಕಕೆ ಅಸುರ ತನ್ನ ಭಯವ ತೋರಿದ
ಗರ್ಭಿಣಿ ಕಯಾದುವನ್ನು ಬ್ರಹ್ಮಪುತ್ರ ಬಂದು ಆಗ
ದೈತ್ಯನಾದ ಹಿರಣ್ಯಕಶಿಪುವಿಗೆ ಒಪ್ಪಿಸಿದನು ।। ನಾರಸಿಂಹ ।।

ನವಮಾಸಗಳು ತುಂಬಲು ಕಯಾದು
ಆಗ ಪುತ್ರರತ್ನವನ್ನು ಪಡೆದಳು
ನಾಮಕರಣವನ್ನು ಮಾಡಿ ವಿಪ್ರರನ್ನು ಕರೆಸಿ ಬೇಗ
ದೈತ್ಯ ತನ್ನ ಸುತಗೆ ಪ್ರಹ್ಲಾದನೆಂದು ಕರೆಸಿದನು ।। ನಾರಸಿಂಹ ।।

ಬಾಲಚಂದ್ರನಂತೆ ಹೊಳೆಯುತಾ ಇರುತಿರಲು
ಐದು ವರ್ಷ ತುಂಬಿತಾಗಲೆ
ಗುರುಗಳನ್ನು ಕರೆಸಿ ಬೇಗ ಸಕಲ ವಿದ್ಯೆ ಕಲಿಸಿರೆಂದು
ಗುರುಗಳಿಗೆ ಮಗನನ್ನು ಒಪ್ಪಿಸಿದ ದೈತ್ಯ ತಾನು ।। ನಾರಸಿಂಹ ।।

ಓಂ ನಮಃ ಶಿವಾಯ ಎನುತಲಿ
ಅಸುರ ತನ್ನ ಸುತನ ಬರೆದು ತೋರು ಎನಲು
ನರಹರಿಯ ನಾಮವನ್ನು ನಗುನಗುತಲೆ ಬರೆಯುತಿರಲು
ಎಡದ ತೊಡೆಯ ಮೇಲಿದ್ದ ಶಿಶುವ ಬಡಿದು ಧರೆಗೆ ನೂಕಿದನು ।। ನಾರಸಿಂಹ ।।

ಸುತ್ತ ಜನರ ಕರೆಸಿ ಬೇಗದಿ
ಅಸುರ ತನ್ನ ಸುತನ ಕೊಲ್ಲಿಸಬೇಕೆಂದಾಗ
ಅಟ್ಟ ಅಡವಿಯೊಳು ವಿಷವನಿಟ್ಟು ಭೋಜನಂಗಳ ಮಾಡಿ
ಹರಿಯ ಸ್ಮರಣೆ ಮಾತ್ರದಿಂದ ಭುಂಜಿ ತಿಳಿದ ಜಟ್ಟಿಹಾಂಗೆ ।। ನಾರಸಿಂಹ ।।

ಅಂಬುಧಿಯೊಳು ಮಗನ ಮಲಗಿಸಿ
ಮೇಲೆ ದೊಡ್ಡ ಬೆಟ್ಟವನಿಟ್ಟು ಬನ್ನಿರೋ
ಹರಿಯ ಕೃಪೆಗೆ ವಶನಾದ ತರಳನೆಂದು ವರುಣದೇವ
ಮರಣ ಇಲ್ಲದಹಾಂಗೆ ಮಾಡಿ ಮನೆಗೆ ಕೊಟ್ಟು ಕಳುಹಿದನು ।। ನಾರಸಿಂಹ ।।

ಬೆಟ್ಟದಿಂದ ಕಟ್ಟಿ ಉರುಳಿಸಿ ಅಸುರ
ತನ್ನ ಪಟ್ಟದಾನೆ ಕಾಲಲಿ ಮೆಟ್ಟಿಸಿ
ಹರಿವ ಒಲೆಯ ಮಾಡಿ ಸುಟ್ಟು ಹುಲಿಯ ಬೋನಿನಲ್ಲಿಟ್ಟು
ಯತ್ನವಿಲ್ಲದೆ ಸುತನ ಕೊಲ್ಲಲು ಶಕ್ತನಲ್ಲದೆ ಪೋದನಂತೆ ।। ನಾರಸಿಂಹ ।।

ನಿನ್ನ ದೇವ ಇದ್ದ ಎಡೆಯನು ತೋರು
ಎನುತ ಪಿತನು ತನ್ನ ಸುತನ ಕೋರಲು
ಎನ್ನ ದೇವ ಇಲ್ಲದಂತ ಎಡೆಗಳುಂಟೆ ಲೋಕದಲ್ಲಿ
ಕಂಬದಲ್ಲೂ ಇರುವನೆಂದು ಕೈಯ ಮುಗಿದು ತೋರ್ದನಾಗೆ ।। ನಾರಸಿಂಹ ।।

ವರಕಂಬವನ್ನು ಒಡೆಯಲು ನರಹರಿಯು ಉಗ್ರಕೋಪವನ್ನು ತಾಳಿದ
ಕಟಕಟೆಂಬ ಧ್ವನಿಯ ಮಾಡಿ ನಖಗಳಿಂದ
ಪಿಡಿದು ಒತ್ತಿ ಕರುಳ ಬಗೆದು
ಮಾಲೆ ಹಾಕಿ ಕಂದ ಭಕ್ತನಪ್ಪಿಕೊಂಡ ।। ನಾರಸಿಂಹ ।।

ಅಂತರಿಕ್ಷದಲಿ ಅಮರರು ನೋಡಿ ಆಗ
ಪುಷ್ಪವೃಷ್ಟಿಯನ್ನೆ ಕರೆದರು
ಅಜನ ಪಡೆದ ದೇವಿ ಬಂದು ತೊಡೆಯ ಮೇಲೆ ಕುಳಿತಿರಲು
ಅಮರಪತಿಯರೆಲ್ಲರ ನೋಡಿ ಅಂಜಬೇಡೆಂದಭಯವಿತ್ತ ।। ನಾರಸಿಂಹ ।।

ಲಕ್ಷ್ಮೀನಾರಸಿಂಹ ಚರಿತೆಯ
ಉದಯಕಾಲ ಪಠಿಸುವಂತ ನರರಿಗೆಲ್ಲ ಪುತ್ರಸಂತಾನಂಗಳಿತ್ತು
ಮತ್ತೆ ಬೇಡಿದಹಾಂಗೆ ಕೊಟ್ಟು
ಭಕ್ತವತ್ಸಲ ಮುಕ್ತಿಕೊಡುವ ಪುರಂದರವಿಠಲರಾಯ ।। ನಾರಸಿಂಹ ।

Narasimha nembo Devanu Nambidanta Nararigella Varava Koduvanu ||

Aadiyalli Lakshmi Sahitadi Malagiralu
Bandaraaga Sanatkumaararu
Aaga Dvaarapaalakaru Tadeyalaaga Kopadinda
Mooru Janmadalli Neevu Asuraraagi Puttirendu ||1||

Ditiya Gargbadalli Janisida
hiranyaakshya hiranyakashipu remba Bhraatruru
Pruthviyannu Mulugisida Kaaranaadi Shree Haariyu Thruthiya
Roopadinda Khalana Kondu Dhareyanulihidanu ||2||

Anujanaada hiranyaakshana Maranavannu
Keli Aaga Nadeda Tapasige
Hariya Meley Sittininda Ugra Tapassannu Maadi
Bramhaninda Varagalannu Padedukondu Bandanaaga ||3||

Indraloka Soore Maadida Mooru Lokake
Asura Tanna Bhayava Torida
Garbhini Kayaaduvannu Bramhaputra Bandu Aaga
Dyityaraaja hiranyakashipuvige Voppisidanu ||4||

Navamaasagalu Tumbalu Kayaadu Aaga
Putra Ratnavannu Padedalu
Naamakaranavannu Maadi Viprarannu Karesi Beyga
Dyitya Tanna Sutanige Prahalada nendu Karesidanu ||5||

Baalachandranante Holeyutaa Irutiralu
Iyidu Varsha Tumbitaagale
Gurugallannu Karesi Bega Sakala Vidyey Kalisirendu
Gurugalige Magannannu Voppisida Dyitya Taanu ||6||

Om Namaha Shivaaya Yenutali Asura Tanna
Sutana Baredu Toru Yennalu
Narahariya Naamavannu Nagunagutale Bareyutiralu
Yedade Todeya Meylidda Shishuva Badidu Dharegey Nookidanu ||7||

Sutta Janara Karesi Begadi Asura Tanna Sutana Kolisi Beku Yendaaga
Atta Adagiyolu Vishava Nittu Bhojanagala Maadi
Hariya Smaraney Maatradinda Bhunji Tilida Jattihaange ||8||

Ambudhiyolu Magana Malagisi Meyley Dodda
Bettavannu Ittu Banniro
Hariya Krupege Vashanaada Taralanendu Varunadeva
Marana Illadhaange Maadi Manege Kottu Kaluhidenu     ||9||

Bettadinda Katti Urulisi Asura Tanna
Pattadaane Kaalali Meyttisi
Urriyuva Voleya Maadi Suttu Huliya Boninalli Ittu
Yatnavillade Sutana Kollalu Shaktanallade Podanante ||10||

Ninna Deva Idda Yedeyanu Toru Yenuta
Pitanu Tanna Sutana Koralu
Yenna Deva Illadanta Yedegaluntee Lokadalli
Kambhadalu Iruvanendu Kyiya Mugidi Tordhanaaga ||11||

Narahari Narahari baa baa
Narahari Narahari baa baa

Varakambhavannu Vodeyalu Narahariyu
Ugra Kopavannu Taalida

(Bagavatham Narasimha avatara slokam)

Satyam Vidhaatum Nijabhrutyabhaashitam Vyaptim Cha
Bhooteshvakhileshu Chaatmanaha|
Adyasyataatyadhbhutaroopamudhvahan Stambhe Sabhaayaam
Na Mrugam Na Maanusham||

Katakatemba Dhvaniya Maadi Nakhagalinda Pididu Votti
Karula Bagedu Maale Haaki Kandha Bhaktanappikonda ||12||

Antarikshadalli Amaararu Nodi Aaga
Pushpavrushtiyanne Karedaru
Ajana Padeda Devi^ Bandu Todeya Meyley Kulitiralu
Amarapatiyarella Nodi Anja Bedembhaya Kotta ||13||

Lakshmi Narashima chariteya Udaya Kaala
Patisuvanta Nararigella
Putrasantaanangalittu Mattey Bedidhaange Kottu
Bhaktavatsala Mukuti Koduva Purandara Vittala Raya ||13||

for audio link:

http://www.saavn.com/s/song/kannada/Narasimha-Nembo-Devanu/Narasimha-Nembo/Rw0GRwR5TwE