dasara padagalu · MADHWA · prasanna venkata dasaru · siva

hara hara purahara girijamanohara

ಹರ ಹರ ಪುರಹರ ಗಿರಿಜಾಮನೊಹರ
ಸುರವರ ಕರುಣಾಕರನೆ ನಮೋ ನಮೋ ||ಪ||

ಶರಣರ ಸುರತರು ವರಪಂಪಾಪತಿ
ವಿರೂಪಾಂಬಕ ಪೊರೆ ಶುಭದಿ ||ಅಪ||

ಮದನನ ಮಥನ ಪಂಚವದನ ಕೈಲಾಸದ
ಸದನ ಸದಾಶಿವ ನಮೋ ನಮೋ
ಹದಿನಾಲ್ಕು ಭುವನದ ಬಲ್ಲರಜಿತ
ಕದನ ಕಲುಷಹರ ನಮೋ ನಮೋ ||೧||

ತಾರಕಪತಿಧರ ಭೂರಿಕೃಪಾಂಬಿಧಿ
ತಾರಕಹರ ಪಿತ ಜಯಾ ಜಯಾ
ತಾರಕ ಉಪದೇಶ ಕಾರಕ ಘನಭವ
ತಾರಕ ಮೃಂತ್ಯುಂಜಯಾ ಜಯಾ ||೨||

ಶೇಷಾಭರಣವಿ ಭೂಷಾಭವ ವಿ
ಶೇಷ ಭಕುತಪ್ರಿಯ ವಿಭೋ ವಿಭೋ
ಶೇಷಭೂಭೃತ್ ಪೊಷ ಪ್ರಸನ್ವೆಂಕ
ಟೇಶ ಭಜನಶೀಲ ವಿಭೋ ವಿಭೋ ||೩||
hara hara purahara girijAmanohara
suravara karuNAkarane namO namO ||pa||

SaraNara surataru varapaMpApati
virUpAMbaka pore SuBadi ||apa||

madanana mathana pancavadana kailAsada
sadana sadASiva namO namO
hadinAlku Buvanada ballarajita
kadana kaluShahara namO namO ||1||

tArakapatidhara BUrikRupAMbidhi
tArakahara pita jayA jayA
tAraka upadESa kAraka GanaBava
tAraka mRuntyunjayA jayA ||2||

SEShABaraNavi BUShABava vi
SESha Bakutapriya viBO viBO
SEShaBUBRut poSha prasanvenka
TESa BajanaSIla viBO viBO ||3||

dasara padagalu · MADHWA · prasanna venkata dasaru

Shiva raama Mahamahima

ಶಿವರಾಮಾ ಮಹಾಮಹಿಮ. ||ಪ||

ಭುವನಗಿರಿ ರಾಮೇಶ್ವರಧಾಮ ||ಅಪ||

ಮಾರಜನಕನ ಮಹಿಮೆ ಸಾರಲು
ತ್ವರದಿ ಶುಕಮುನಿಯಾಗಿ ಬರಲು
ಗುರುವೆನಿಸಿದಿ ಹರಿಮತದವರೊಳು
ಪರಗತಿ ಸಾಧನ ದಾರಿಯ ತೋರಲು ||೧||

ಭುಂಜಿಸಿ ವಷ ನಂಜುಂಡನೆನೆನಿಸಿದಿ
ಕೆಂಜಡೆಯಲಿ ನಂದಿನಿಯ ರಂಜಿಸಿ
ವಂಜೀರರ ಭವಭಂಜಕ ನಮ್ಮ
ಕಂಜನಾಭ ಪದಕಂಜ ತೋರುವ. ||೨||

ಜಪ ತಪ ನೇಮಾಬೇಕಿಲ್ಲ
ನೀಪ್ರಕಟನಾಗುವಿ ನಂಬುವಗೆಲ್ಲ
ಅಪತ್ತಿಗೊದಗುವ ಘಟಿತಾಘಟಿತಬಲ
ಶ್ರೀ ಪ್ರಸನ್ನವೆಂಕಟ ನಿನ್ನೊಳಗಿಹನಲ್ಲ. ||೩||
SivarAmA mahAmahima. ||pa||

Buvanagiri rAmESvaradhAma ||apa||

mArajanakana mahime sAralu
tvaradi SukamuniyAgi baralu
guruvenisidi harimatadavaroLu
paragati sAdhana dAriya tOralu ||1||

Bunjisi vaSha nanjunDanenenisidi
kenjaDeyali nandiniya ranjisi
vanjIrara BavaBanjaka namma
kanjanABa padakanja tOruva. ||2||

japa tapa nEmAbEkilla
nIprakaTanAguvi naMbuvagella
apattigodaguva GaTitAGaTitabala
SrI prasannavenkaTa ninnoLagihanalla. ||3||

dasara padagalu · MADHWA · prasanna venkata dasaru

Tappu nodade

ತಪ್ಪು ನೋಡದೆ ಬಂದೆಯಾ ಎನ್ನಯ ತಂದೆ
ತಪ್ಪು ನೋಡದೆ ಬಂದೆಯಾ ||ಪ||

ಆ ಪಾದ ಮೌಳಿ ಎನ್ನೋಳು ಅಘ ಬಹಳ
ಶ್ರೀಪತಿ ಕಾಯ್ದೆಯಾ ಉದಧಿ್ದ್ದೆಯಾ ||೧||

ಜಗದಘಹರನೆಂಬೊ ನಿನ್ನಯ ಬಿರುದು|
ತ್ರಿಗುಣಾತೀತನೆ ರಾಮನೆ ಗುಣಧಾಮನೆ ||೨||

ಇಂದೆನ್ನ ಕಲುಷವಾರಿಸೊ ಭವತಾರಿಸೋ|
ಪ್ರಸನ್ನವೆಂಕಟ ರಮಣಾ ಭಯ ಶಮನಾ ||೩||

tappu nODade bandeyA ennaya tande
tappu nODade bandeyA ||pa||

A pAda mauLi ennOLu aGa bahaLa
SrIpati kAydeyA udadhiddeyA ||1||

jagadaGaharaneMbo ninnaya birudu|
triguNAtItane rAmane guNadhAmane ||2||

indenna kaluShavAriso BavatArisO|
prasannavenkaTa ramaNA Baya SamanA ||3||

dasara padagalu · krishna · MADHWA · prasanna venkata dasaru

Kartha Krishnayya

ಕರ್ತಾ ಕೃಷ್ಣಯ್ಯ ನೀ ಬಾರಯ್ಯ ।
ಎನ್ನಾರ್ತದನಿಗೊಲಿದು ಬಾರಯ್ಯ ॥

ಸುಗುಣದಖಣಿಯೆ ನೀ ಬಾರಯ್ಯ ।
ಎಮ್ಮಘವ ನೋಡಿಸಲು ನೀ ಬಾರಯ್ಯ ।
ಧಗೆಯೇರಿತು ತಾಪ ಬಾರಯ್ಯ ಸದಾ ।
ಮುಗುಳ್ನಗೆ ಮಳೆಗೆರೆಯೆ ಬಾರಯ್ಯ ॥೧॥

ವೈರಿವರ್ಗದಿ ನೊಂದೆ ಬಾರಯ್ಯ ।
ಮತ್ಯಾರೂ ಗೆಳೆಯರಿಲ್ಲ ಬಾರಯ್ಯ ।
ಸೇರಿದೆ ನಿನ್ನಯ ಕರುಣೆಗೆ ಬಾರಯ್ಯ ।
ಒಳ್ಳೆ ದಾರಿಯ ತೋರಲು ಬಾರಯ್ಯ ॥೨॥

ವೈರಾಗ್ಯಭಾಗ್ಯವ ಕೊಡಬಾರಯ್ಯ ।
ನಾನಾರೋಗದ ಭೇಷಜ ಬಾರಯ್ಯ ।
ಜಾರುತದಾಯು ಬೇಗ ಬಾರಯ್ಯ ।
ಉದಾರ ಪ್ರಸನ್ನವೆಂಕಟ ಬಾರಯ್ಯ ॥೩॥

kartA kRuShNayya nI bArayya |
ennArtadanigolidu bArayya ||

suguNadaKaNiye nI bArayya |
emmaGava nODisalu nI bArayya |
dhageyEritu tApa bArayya sadA |
muguLnage maLegereye bArayya ||1||

vairivargadi nonde bArayya |
matyArU geLeyarilla bArayya |
sEride ninnaya karuNege bArayya |
oLLe dAriya tOralu bArayya ||2||

vairAgyaBAgyava koDabArayya |
nAnArOgada BEShaja bArayya |
jArutadAyu bEga bArayya |
udAra prasannavenkaTa bArayya ||3||

appanacharya · MADHWA · raghavendra

Raghavendra kavacha

ಕವಚಂ ಶ್ರೀ ರಾಘವೇಂದ್ರಸ್ಯ ಯತೀಂದ್ರಸ್ಯ ಮಹಾತ್ಮನ
ವಕ್ಷ್ಯಾಮಿ ಗುರುವರಸ್ಯ ವಾಂಚಿತಾರ್ಥ ಪ್ರದಾಯಕಂ||

ಋಷಿರಸ್ಯ ಅಪ್ಪಣ್ಣಾಚಾರ್ಯ ಚಾಂದೂನುಷ್ಟುಪ್ ಪ್ರಕೀರ್ತಿತಮ್
ದೇವತಾ ಶ್ರೀ ರಾಘವೇಂದ್ರ ಗುರುರಿಷ್ಟಾರ್ಥ ಸಿದ್ಧಯೇ||

ಅಷ್ಟೋತ್ತರಶತಮ್ ಜಪ್ಯಂ ಭಕ್ತಿ ಯುಕ್ತೇನ ಚೇತಸ
ಉದ್ಯತ್ ಪ್ರದ್ಯೋತನಧ್ಯೋತ ಧರ್ಮ ಕೂರ್ಮಸನೆ ಸ್ತಿತಂ||

ಖದ್ಯೋ ಖದ್ಯೋತಧ್ಯೋತ ಧರ್ಮ ಕೂರ್ಮಸನೆ ಸ್ತಿತಂ
ಧೃತ ಕಾಷಾಯವಸನಂ ತುಳಸೀಧರ ವಕ್ಷಸಂ||

ದೂರ್ದಂಡ ವಿಲಾಸದ್ದಂಡ ಕಮಂಡಲ ವಿರಾಜಿತಂ/
ಅಭಯ ಜ್ಞಾನಮುದ್ರಾಕ್ಷ ಮಾಲಾ ಲೋಲಕ ಕರಾ೦ಭುಜಂ||

ಯೋಗೀಂದ್ರ ವಂದ್ಯ ಪಾದಾಬ್ಜಂ ರಾಘವೇಂದ್ರ ಗುರುಂ ಭಜೆ
ಶಿರೋ ರಕ್ಷತುಮೆ ನಿತ್ಯಂ ರಾಘವೇ೦ದ್ರೋ ಭಿಲೇಸ್ತದ||

ಪಾಪಾದ್ರಿಪಾತನೆ ವಜ್ರ ಕೇಶಾನ್ ರಕ್ಷತುಮೆ ಗುರು
ಕ್ಷಮಾಸುರ ಗಣಾಧೀಶೋ ಮುಖಂ ರಕ್ಷತುಮೆ ಗುರು||

ಹರಿಸೇವಾಲಬ್ಧ ಸರ್ವಸಂಪತ್ ಫಲಂ ಮಮಾವತು
ದೇವಸ್ವಭಾವೋ ವತುಮೆ ದೃಷೌ ತತ್ವ ಪ್ರದರ್ಶಕ||

ಇಷ್ಟಪ್ರದಾನೆ ಕಲ್ಪದರು ಶ್ರೋತ್ರೆ ಶ್ರುತ್ಯರ್ಧ ಬೋಧಕ
ಭವ್ಯ ಸ್ವರೂಪಮೆ ನಾಸಾಂ ಜೀವಮೆ ವತು ಭವ್ಯಕೃತ್||

ಆಶ್ಯಂ ರಕ್ಷತುಮೆ ದುಃಖತೂಲ ಸಂಘಾಗ್ನಿ ಚರ್ಯಕ
ಸುಖ ಧೈರ್ಯಾದಿ ಸುಗುಣೋ ದ್ರುವೌ ಮಮ ಸದಾವತು||

ಔಷ್ಥ ರಕ್ಷತುಮೆ ಸರ್ವಗ್ರಹ ನಿಗ್ರಹ ಶಕ್ತಿಮಾನ್
ಉಪಪ್ಲವ ವೋದಧೇಸೇತುರ್ದಂತಾನ್ ರಕ್ಷತುಮೆ ಸದಾ||

ನಿರಸ್ತ ದೋಷೋಮೆ ಪಾತುಮೆ ಕಪೋಲೌ ಕರ್ವಪಾಲಕ
ನಿರವದ್ಯ ಮಹಾವೇಶ ಕಾಂತಮೇವತು ಸರ್ವದಾ||

ಕರ್ಣಮೂಲೇತು ಪರ್ತ್ಯರ್ಧಿ ಮೂಕತ್ವಕರವಾಗಿಮ
ಪರವಾದಿಜಯೇ ಪಾಟು ಹಸ್ತ ಸತಾತ್ವ ವಾದಕೃತ್||

ಕರೌ ರಕ್ಷತುಮೆ ವಿದ್ಯತ್ ಪರಿಜ್ಞೆಯ ವಿಶೇಷವಾನ್
ವಾಗ್ವೈಖರಿ ಭವ್ಯ ಶೇಷಜಯೀ ವಕ್ಷಸ್ತಳಂ ಮಮ||

ಸತೀ ಸಂತಾನ ಸಂಪತ್ತಿ ಭಕ್ತಿ ಜ್ಞಾನಾದಿ ವೃದ್ಧಿಕಂ
ಸ್ತಾನೌ ರಕ್ಷತುಮೆ ನಿತ್ಯಂ ಶರೀರವದ್ಯ ಹಾನಿಕೃತ್||

ಪುಣ್ಯವರ್ಧನ ಪಾದಾಬ್ಜಾಭಿಷೇಕ ಜಲ ಸಂಚಯ
ನಾಭಿಂ ರಕ್ಷತುಮೆ ಪಾರೌಶ್ವ ದ್ಯುಣದೀತುಲ್ಯ ಸದ್ಗುಣ||

ಪ್ರವ್ರುಷ್ಟಂ ರಕ್ಷತುಮೆ ನಿತ್ಯಂ ತಾಪತ್ರಯ ವಿನಾಶಕೃತ್
ಕತ್ತಿಮೆ ರಕ್ಷತು ಸದಾ ವಂಧ್ಯಾ ಸತ್ಪುತ್ರದಾಯಕ||
ಜಗನಂ ಮೇವತು ಸದಾ ವ್ಯಂಗಸ್ವಂಗ ಸಮೃದ್ಧಿಕೃತ್
ಗುಹ್ಯಂ ರಕ್ಷತುಮೆ ಪಾಪ ಗ್ರಹಾರಿಷ್ಟ ವಿನಾಶಕೃತ್||

ಭಕಾಘ ವಿಧ್ವಂಸಕರ ನಿಜಮೂರ್ತಿ ಪ್ರದಾಯಕ
ಮೂರ್ತಿಮಾನ್ ಪಾತುಮೆ ರೋಮ ರಾಘವೇಂದ್ರ ಜಗದ್ಗುರು||

ಸರ್ವತಂತ್ರ ಸ್ವತಂತ್ರೋಸೌ ಜಾನುನೀಮೆ ಸದಾವತು
ಜಂಘೆ ರಕ್ಷತುಮೆ ನಿತ್ಯಂ ಶ್ರೀ ಮಧ್ವ ಮತವರ್ಧನ||

ವಿಜಯೀಂದ್ರ ಕರಾಬ್ಜೋತ್ತ ಸುಧೀಂದ್ರ ವರಪುತ್ರಕಃ
ಗುಲ್ಫೌ ಶ್ರೀ ರಾಘವೇ೦ದ್ರೋಮೆ ಯತಿರಾಟ್ ಸರ್ವದಾವತು||

ಪಾದೌ ರಕ್ಷತುಮೆ ಸರ್ವ ಭಯಹಾರಿ ಕೃಪಾನಿಧಿ
ಜ್ಞಾನಭಕ್ತಿ ಸುಪುತ್ರಾಯು: ಯಶಃ ಶ್ರೀ ಪುಣ್ಯವರ್ಧನಃ||

ಕರಪಾದಾಂಗುಲೀ ಸರ್ವ ಮಮಾವತು ಜಗದ್ಗುರು
ಪ್ರತಿವಾದಿ ಜಯಸ್ವಾಂತ ಭೇದ ಚಿಹ್ನಾದರೋ ಗುರು||

ನಖಾನವತುಮೆ ಸರ್ವಾನ್ ಸರ್ವ ಶಾಸ್ತ್ರ ವಿಶಾರದ
ಅಪರೋಕ್ಷಿಕೃತಶ್ರೀಶ ಪ್ರಾಚ್ಯಂ ದಿಶಿ ಸದಾವತು||

ಸದಕ್ಷಿಣೆ ಚಾವತುಮಾಂ ಸಮುಪೇಕ್ಷಿತ ಭಾವಜ
ಅಪೇಕ್ಷಿತ ಪ್ರದಾತಾಚ ಪ್ರಚೀತ್ಯಮವತು ಪ್ರಭು||

ದಯಾ ದಾಕ್ಷಿಣ್ಯ ವೈರಾಗ್ಯ ವಾಕ್ಪಾಟವ ಮುಖಾಂಕಿತ
ಸದೊದೀಚ್ಯಮಪತುಮಾಂ ಶಾಪಾನುಗ್ರಹ ಶಕ್ತಿಮಾನ್||

ನಿಖೆಂದ್ರಿಯ ದೋಷಗಣ ಮಹಾನುಗ್ರಹಕೃದ್ ಗುರು
ಅದಾಚ್ಯೋರ್ವಂ ಚಾವತು ಮಾಮುಷ್ಟಾಕ್ಷರ ಮನೂದಿತ||

ಆತ್ಮಾತ್ಮೀಯ ಘರಾಶಿಘ್ನ ಮಾಮ್ ರಕ್ಷತು ವಿಧಿಕ್ಷುಚ
ಚತುರ್ನಾಂಚ ಪುಮಾರ್ಧಾನಂ ದಾತಾ ಪ್ರಾತ ಸದಾವತು||

ಸಂಗಮೇವತು ಮಾಮ್ ನಿತ್ಯಂ ತತ್ವನಿತ್ಸರ್ವ ಸುಖಾಕೃತ್
ಮಾಧ್ಯಾಹ್ನೆ ಗಮ್ಯ ಮಹಿಮಾ ಮಾಮ್ ರಕ್ಷತು ಮಹಿಷಯ||

ಮೃತಪೋತ ಪ್ರಾಣದಾತ ಸಾಯಾಹ್ನೆ ಮಾಮ್ ಸದಾವತು
ವೇದಿಸ್ತ ಪುರುಷೋಜೀವಿ ನಿಷಿಧೆ ಪಾತು ಮಾಮ್ ಗುರು||

ವಹ್ನಿಸ್ಥ ಮಾಲಿಕೂಧಾರ್ಥ ವಹ್ನಿ ತಾಪಾತ್ಸದಾವತು
ಸಮಗ್ರ ಟೀಕಾ ವ್ಯಾಖ್ಯಾತ ಗುರುಮೆ ವಿಷಯೇವತು||

ಕಾಂತಾರೆವತು ಮಾಮ್ ನಿತ್ಯಂ ಭಟ್ಟ ಸಂಗ್ರಹಕೃದ್ ಗುರು
ಸುಧಾಪರಿಮಳೋಧಾರ್ತ ಸುಚಂದಸ್ತು ಸದಾವತು||

ರಾಜಚೋರ ವಿಷವ್ಯಾಧಿಯ ದೋವಸ್ಯಾಮ್ರುಗಾಧಿಭಿ
ಅಪಸ್ಮಾರಾಪಹರ್ತಾನ ಶಾಸ್ತ್ರ ವಿತ್ಸರ್ವದಾವತು||

ಗತೌ ಸರ್ವತ್ರ ಮಾಮ್ ಪಾತು ಉಪನಿಷದರ್ಧಕೃದ್ ಗುರು
ಚಾಗ್ವ ಶ್ಯನಕೃದಾಚಾರ್ಯ ಸ್ತಿತೌ ರಕ್ಷತು ಮಾಮ್ ಸದಾ||

ಮಂತ್ರಾಲಯ ನಿವಾಸೀ ಮಾಮ್ ಜಗತ್ಕಾಲೇ ಸದಾವತು
ನ್ಯಾಯ ಮುಕ್ತಾವಲೀಕರ್ತ ಸ್ವಪ್ನಂ ರಕ್ಷತು ಮಾಮ್ ಸದಾ||

ಮಾಮ್ ಪಾತು ಚಂದ್ರಿಕಾ ವ್ಯಾಖ್ಯಾಕರ್ತಾ ಸುಪ್ತೌಹಿ ತತ್ವಕೃತ್
ಸುತಂತ್ರ ದೀಪಿಕಕರ್ತ ಮುಕುಟೌ ರಕ್ಷತು ಮಾಮ್ ಸದಾ||

ಗೀತಾರ್ಥ ಸಂಗ್ರಹಕರ್ತಾ ಸದಾ ರಕ್ಷತು ಮಾಮ್ ಗುರು
ಶ್ರೀ ಮಧ್ವಮತ ದುಗ್ಧಾಬ್ಧಿ ಚಂದ್ರೋವತು ಸದಾನಘ||

ಫಲಸ್ತುತಿ
ಇತಿ ಶ್ರೀ ರಾಘವೇಂದ್ರಸ್ಯ ಕವಚಂ ಪಾಪ ನಾಶನಂ
ಸರ್ವ ವ್ಯಾಧಿ ಹರಮ್ ಸದ್ಯ ಪಾಪನಂ ಪುಣ್ಯವರ್ಧನಂ||

ಯ ಇದಂ ಪಠತೇ ನಿತ್ಯಂ ನಿಯಮೇನ ಸಮಾಹಿತ
ಅದೃಷ್ಟಿ ಪೂರ್ಣದೃಷ್ಟಿ ಸ್ಯಾದೇಡ ಮೂಕೋಪಿ ವಾಕ್ಪತಿ||

ಪೂರ್ಣಾಯು ಪೂರ್ಣ ಸಂಪತ್ತಿ ಭಕ್ತಿ ಜ್ಞಾನ ವೃದ್ಧಿಕೃತ್
ಪೀತ್ವಾ ವಾರಿ ನರೂ ಯೇನ ಕವಚೇನಾಭಿ ಮಂತ್ರಿತಂ||

ಜಹಾತಿ ಕುಕ್ಷಿಗಾನ್ ರೋಗಾನ್ ಗುರುವರ್ಯ ಪ್ರಸಾದತ
ಪ್ರದಕ್ಷಿಣ ನಮಸ್ಕಾರಾನ್ ಗುರೋ ವೃಂದಾವನಸ್ಯ||

ಕರೋತಿ ಪರಾಯ ಭಕ್ತಾ ತದೇತ್ ಕವಚಂ ಪಠನ್
ಪಂಗು ಕೂನಿಶ್ಚ ಪೌಂಗದ ಪೂರಾಂಗೋ ಜಾಯತೆ ದರ್ಶನಂ||

ಶೇಷಾಶ್ಚ ಕುಷ್ಟಪೂರ್ವಶ್ಚ ನಷ್ಯಾ೦ತ್ಯಾ ಮಯಿರಾಶಯಾ
ಅಷ್ಟಾಕ್ಷರೇನ ಮಂತ್ರೇನ ಸ್ತೋತ್ರೆಣ ಕವಚೇನ ಚ||

ವೃಂದಾವನೇ ಸನ್ನಿಹಿತ ಮಾಭಿಶಿಚ್ಯ ಯಥಾವಿಧಿ
ಯಂತ್ರೆ ಮಂತ್ರಾಕ್ಷರಾನ್ಯಸ್ಥ ವಿಲಿಖ್ಯಾರ್ತ ಪ್ರತಿಷ್ಟಿತಂ||

ಷೋಡಶೈ ರೂಪಚಾರ್ಯೈಶ್ಚ ಸಂಪೂಜ್ಯ ತ್ರಿಜಗದ್ಗುರುಂ
ಅಷ್ಟೋತ್ತರ ಶತಾಕ್ಯಾಭಿರರ್ಚಯೇತ್ಕು ಸುಮಾನಿಧಿಭಿ||

ಫಲೈಶ್ಚ ವಿವಿದೈರೇವ ಗುರೋರರ್ಚಾಂ ಪ್ರಕುರ್ವತ
ನಾಮ ಶ್ರವಣ ಮಾತ್ರೇನ ಗುರುವರ್ಯ ಪ್ರಸಾದತ||

ಭೂತ ಪ್ರೇತ ಪಿಶಾಚಾದ್ಯ ವಿದ್ರವಂತಿ ದಿಶೂ ದಶ
ಪಟೇದೆದತ್ರಿಕಂ ನಿತ್ಯಂ ಗುರೋ ವೃಂದಾವನಾ೦ತಿಕೆ||

ದೀಪಂ ಸಂಯೋಜ್ಯವಿದ್ಯಾವಾನ್ ಸುಖಾಸು ವಿಜಯೀ ಭವೇತ್
ರಾಜ ಚೋರ ಮಹಾವ್ಯಾಘ್ರ ಸರ್ಪನಕ್ರಾದಿ ಪೀಡನಾತ್||

ಕವಚಸ್ಯ ಪ್ರಭವೇನ ಭಯಂ ತಸ್ಯ ನಜಾಯತೆ
ಸೋಮಸೂರ್ಯೋ ಪರಾಗಾದಿ ಕಾಲೇ ವೃಂದಾವನಾ೦ತಿಕೆ||

ಕವಚಾದ್ರಿಕಂ ಪುಣ್ಯಮಪ್ಪಣ್ಣಾಚಾರ್ಯ ದರ್ಶಿತಂ
ಜಪೇದ ಸಾಧನಂ ಪುತ್ರಾನ್ ಭಾರ್ಯಾಂ ಚ ಸುಮನೋರಮಂ||

ಜ್ಞಾನಂ ಭಕ್ತಿಂ ಚ ವೈರಾಗ್ಯಂ ಭುಕ್ತಿಂ ಮುಕ್ತಿಂ ಚ ಶಾಶ್ವತಂ
ಸಂಪ್ರಾಪ್ಯೇ ಮೋದತೆ ನಿತ್ಯಂ ಗುರುವರ್ಯ ಪ್ರಸಾದತ||

ಇತಿ ಶ್ರೀಮದಪ್ಪ್ಪ್ಪಣ್ಣಾಚಾರ್ಯ ವಿರಚಿತಂ ಶ್ರೀ ರಾಘವೇಂದ್ರ ಕವಚಂ ಸಂಪೂರ್ಣಂ||
kavacaM SrI rAGavEndrasya yatIndrasya mahAtmana
vakShyAmi guruvarasya vAncitArtha pradAyakaM||

RuShirasya appaNNAcArya cAndUnuShTup prakIrtitam
dEvatA SrI rAGavEndra gururiShTArtha siddhayE||

aShTOttaraSatam japyaM Bakti yuktEna cEtasa
udyat pradyOtanadhyOta dharma kUrmasane stitaM||

KadyO KadyOtadhyOta dharma kUrmasane stitaM
dhRuta kAShAyavasanaM tuLasIdhara vakShasaM||

dUrdanDa vilAsaddanDa kamanDala virAjitaM
aBaya j~jAnamudrAkSha mAlA lOlaka karAmBujaM||

yOgIndra vandya pAdAbjaM rAGavEndra guruM Baje
SirO rakShatume nityaM rAGavEndrO BilEstada||

pApAdripAtane vajra kESAn rakShatume guru
kShamAsura gaNAdhISO muKaM rakShatume guru||

harisEvAlabdha sarvasaMpat PalaM mamAvatu
dEvasvaBAvO vatume dRuShau tatva pradarSaka||

iShTapradAne kalpadaru SrOtre Srutyardha bOdhaka
Bavya svarUpame nAsAM jIvame vatu BavyakRut||

ASyaM rakShatume duHKatUla sanGAgni caryaka
suKa dhairyAdi suguNO druvau mama sadAvatu||

auShtha rakShatume sarvagraha nigraha SaktimAn
upaplava vOdadhEsEturdaMtAn rakShatume sadA||

nirasta dOShOme pAtume kapOlau karvapAlaka
niravadya mahAvESa kAntamEvatu sarvadA||

karNamUlEtu partyardhi mUkatvakaravAgima
paravAdijayE pATu hasta satAtva vAdakRut||

karau rakShatume vidyat parij~jeya viSEShavAn
vAgvaiKari Bavya SEShajayI vakShastaLaM mama||

satI santAna saMpatti Bakti j~jAnAdi vRuddhikaM
stAnau rakShatume nityaM SarIravadya hAnikRut||

puNyavardhana pAdAbjABiShEka jala sancaya
nABiM rakShatume pArauSva dyuNadItulya sadguNa||

pravruShTaM rakShatume nityaM tApatraya vinASakRut
kattime rakShatu sadA vandhyA satputradAyaka||
jaganaM mEvatu sadA vyangasvaMga samRuddhikRut
guhyaM rakShatume pApa grahAriShTa vinASakRut||

BakAGa vidhvaMsakara nijamUrti pradAyaka
mUrtimAn pAtume rOma rAGhavEndra jagadguru||

sarvatantra svatantrOsau jAnunIme sadAvatu
janGe rakShatume nityaM SrI madhva matavardhana||

vijayIndra karAbjOtta sudhIndra varaputrakaH
gulPau SrI rAGavE0drOme yatirAT sarvadAvatu||

pAdau rakShatume sarva BayahAri kRupAnidhi
j~jAnaBakti suputrAyu: yaSaH SrI puNyavardhanaH||

karapAdAngulI sarva mamAvatu jagadguru
prativAdi jayasvAnta BEda cihnAdarO guru||

naKAnavatume sarvAn sarva SAstra viSArada
aparOkShikRutaSrISa prAcyaM diSi sadAvatu||

sadakShiNe cAvatumAM samupEkShita BAvaja
apEkShita pradAtAca pracItyamavatu praBu||

dayA dAkShiNya vairAgya vAkpATava muKAnkita
sadodIcyamapatumAM SApAnugraha SaktimAn||

niKendriya dOShagaNa mahAnugrahakRud guru
adAcyOrvaM cAvatu mAmuShTAkShara manUdita||

AtmAtmIya GarASiGna mAm rakShatu vidhikShuca
caturnAnca pumArdhAnaM dAtA prAta sadAvatu||

sangamEvatu mAm nityaM tatvanitsarva suKAkRut
mAdhyAhne gamya mahimA mAm rakShatu mahiShaya||

mRutapOta prANadAta sAyAhne mAm sadAvatu
vEdista puruShOjIvi niShidhe pAtu mAm guru||

vahnistha mAlikUdhArtha vahni tApAtsadAvatu
samagra TIkA vyAKyAta gurume viShayEvatu||

kAntArevatu mAm nityaM BaTTa sangrahakRud guru
sudhAparimaLOdhArta sucandastu sadAvatu||

rAjacOra viShavyAdhiya dOvasyAmrugAdhiBi
apasmArApahartAna SAstra vitsarvadAvatu||

gatau sarvatra mAm pAtu upaniShadardhakRud guru
cAgva SyanakRudAcArya stitau rakShatu mAm sadA||

mantrAlaya nivAsI mAm jagatkAlE sadAvatu
nyAya muktAvalIkarta svapnaM rakShatu mAm sadA||

mAm pAtu candrikA vyAKyAkartA suptauhi tatvakRut
sutantra dIpikakarta mukuTau rakShatu mAm sadA||

gItArtha sangrahakartA sadA rakShatu mAm guru
SrI madhvamata dugdhAbdhi candrOvatu sadAnaGa||

Palastuti
iti SrI rAGavEndrasya kavacaM pApa nASanaM
sarva vyAdhi haram sadya pApanaM puNyavardhanaM||

ya idaM paThatE nityaM niyamEna samAhita
adRuShTi pUrNadRuShTi syAdEDa mUkOpi vAkpati||

pUrNAyu pUrNa saMpatti Bakti j~jAna vRuddhikRut
pItvA vAri narU yEna kavacEnABi mantritaM||

jahAti kukShigAn rOgAn guruvarya prasAdata
pradakShiNa namaskArAn gurO vRundAvanasya||

karOti parAya BaktA tadEt kavacaM paThan
pangu kUniSca paungada pUrAngO jAyate darSanaM||

SEShASca kuShTapUrvaSca naShyAntyA mayirASayA
aShTAkSharEna mantrEna stOtreNa kavacEna ca||

vRundAvanE sannihita mABiSicya yathAvidhi
yantre mantrAkSharAnyastha viliKyArta pratiShTitaM||

ShODaSai rUpacAryaiSca saMpUjya trijagadguruM
aShTOttara SatAkyABirarcayEtku sumAnidhiBi||

PalaiSca vividairEva gurOrarcAM prakurvata
nAma SravaNa mAtrEna guruvarya prasAdata||

BUta prEta piSAcAdya vidravanti diSU daSa
paTEdedatrikaM nityaM gurO vRundAvanAntike||

dIpaM saMyOjyavidyAvAn suKAsu vijayI BavEt
rAja cOra mahAvyAGra sarpanakrAdi pIDanAt||

kavacasya praBavEna BayaM tasya najAyate
sOmasUryO parAgAdi kAlE vRundAvanA0tike||

kavacAdrikaM puNyamappaNNAcArya darSitaM
japEda sAdhanaM putrAn BAryAM ca sumanOramaM||

j~jAnaM BaktiM ca vairAgyaM BuktiM muktiM ca SASvataM
saMprApyE mOdate nityaM guruvarya prasAdata||

iti SrImadappppaNNAcArya viracitaM SrI rAGavEndra kavacaM saMpUrNaM||

 

guru jagannatha dasaru · MADHWA · raghavendra

Sri Raghavendra Ashtakshara sthothram

ಶ್ರೀ ರಾಘವೇಂದ್ರಾಷ್ಟಾಕ್ಷರಸ್ತೋತ್ರಂ

ಗುರುರಾಜಾಷ್ಟಾಕ್ಷರಂ ಸ್ಯಾತ್ ಮಹಾಪಾತಕನಾಶನಮ್ |
ಏಕೈಕಮಕ್ಷರಂ ಚಾತ್ರ ಸರ್ವಕಾಮ್ಯಾರ್ಥ ಸಿದ್ಧಿದಮ್ || ೧ ||

ರಕಾರೋಚ್ಚಾರಣಮಾತ್ರೇಣ ರೋಗಹಾನಿರ್ನ ಸಂಶಯಃ |
ಘಕಾರೇಣ ಬಲಂ ಪುಷ್ಟಿಃಆಯುಃ ತೇಜಶ್ಚ ವರ್ಧತೇ || ೨ ||

ವಕಾರೇಣಾತ್ರ ಲಭತೇ ವಾಂಛಿತಾರ್ಥಾನ್ನ ಸಂಶಯಃ|
ದ್ರಕಾರೇಣಾಘರಾಶಿಸ್ತು ದ್ರಾವ್ಯತೇ ದ್ರುತಮೇವ ಹಿ || ೩ ||

ಯಕಾರೇಣ ಯಮಾದ್ಬಾಧೋ ವಾರ್ಯತೇ ನಾತ್ರ ಸಂಶಯಃ |
ನಕಾರೇಣ ನರೇಂದ್ರಾಣಾಂ ಪದಮಾಪ್ನೋತಿ ಮಾನವಃ || ೪ ||

ಮಕಾರೇಣೈವ ಮಾಹೇಂದ್ರಮೈಶ್ವರ್ಯಂ ಯಾತಿ ಮಾನವಃ|
ಗುರೋರ್ನಾಮ್ನಾಶ್ಚ ಮಹಾತ್ಮ್ಯಂ ಅಪೂರ್ವಂ ಪರಮಾದ್ಭುತಮ್ || ೫ ||

ತನ್ನಾಮಸ್ಮರಣಾದೇವ ಸರ್ವಾಭಿಷ್ಟಂ ಪ್ರಸಿಧ್ಯತಿ |
ತಸ್ಮಾನ್ನಿತ್ಯಂ ಪಠೇದ್ಭಕ್ತ್ಯಾ ಗುರುಪಾದರತಸ್ಸದಾ || ೬ ||

ಶ್ರೀರಾಘವೇಂದ್ರಾಯ ನಮಃ ಇತ್ಯಾಷ್ಟಾಕ್ಷರಮಂತ್ರತಃ |
ಸರ್ವಾನ್ಕಾಮಾನವಾಪ್ನೋತಿ ನಾತ್ರ ಕಾರ್ಯಾ ವಿಚಾರಣಾ || ೭ ||

ಅಷ್ಟೋತ್ತರಶತಾವೃತ್ತಿಂ ಸ್ತೋತ್ರಸ್ಯಾಸ್ಯ ಕರೋತಿ ಯಃ |
ತಸ್ಯ ಸರ್ವಾರ್ಥಸಿದ್ಧಿಸ್ಯಾತ್ ಗುರುರಾಜಪ್ರಸಾದತಃ || ೮ ||

ಏತದಷ್ಟಾಕ್ಷರಸ್ಯಾತ್ರ ಮಹಾತ್ಮ್ಯಂ ವೇತ್ತಿ ಕಃ ಪುಮಾನ್ |
ಪಠನಾದೇವ ಸರ್ವಾರ್ಥಸಿದ್ಧಿರ್ಭವತಿ ನಾನ್ಯಥಾ || ೯ ||

ಸ್ವಾಮಿನಾ ರಾಘವೇಂದ್ರಾಖ್ಯ ಗುರುಪಾದಾಬ್ಜಸೇವಿನಾ |
ಕೃತಮಷ್ಟಾಕ್ಷರಸ್ತೋತ್ರಂ ಗುರುಪ್ರೀತಿಕರಂ ಶುಭಮ್ || ೧೦ ||

||ಇತಿಶ್ರೀ ಗುರುಜಗನ್ನಾಥದಾಸಾರ್ಯ ವಿರಚಿತ ಶ್ರೀರಾಘವೇಂದ್ರಾಷ್ಟಾಕ್ಷರಸ್ತೋತ್ರಂ ಸಂಪೂರ್ಣಂ ||

SrI rAGavEndrAShTAkSharastOtraM
gururAjAShTAkSharaM syAt mahApAtakanASanam |
EkaikamakSharaM cAtra sarvakAmyArtha siddhidam || 1 ||

rakArOccAraNamAtrENa rOgahAnirna saMSayaH |
GakArENa balaM puShTiHAyuH tEjaSca vardhatE || 2 ||

vakArENAtra laBatE vAnCitArthAnna saMSayaH|
drakArENAGarASistu drAvyatE drutamEva hi || 3 ||

yakArENa yamAdbAdhO vAryatE nAtra saMSayaH |
nakArENa narEndrANAM padamApnOti mAnavaH || 4 ||

makArENaiva mAhEndramaiSvaryaM yAti mAnavaH|
gurOrnAmnASca mahAtmyaM apUrvaM paramAdButam || 5 ||

tannAmasmaraNAdEva sarvABiShTaM prasidhyati |
tasmAnnityaM paThEdBaktyA gurupAdaratassadA || 6 ||

SrIrAGavEndrAya namaH ityAShTAkSharamaMtrataH |
sarvAnkAmAnavApnOti nAtra kAryA vicAraNA || 7 ||

aShTOttaraSatAvRuttiM stOtrasyAsya karOti yaH |
tasya sarvArthasiddhisyAt gururAjaprasAdataH || 8 ||

EtadaShTAkSharasyAtra mahAtmyaM vEtti kaH pumAn |
paThanAdEva sarvArthasiddhirBavati nAnyathA || 9 ||

svAminA rAGavEndrAKya gurupAdAbjasEvinA |
kRutamaShTAkSharastOtraM guruprItikaraM SuBam || 10 ||

||itiSrIgurujagannAthadAsAryaviracita SrIrAGavEndrAShTAkSharastOtraM saMpUrNaM ||

guru jagannatha dasaru · MADHWA · raghavendra · raghavendra vijaya

Raghavendra Vijaya – SANDHI 08

ರಾಘವೇಂದ್ರರ ವಿಜಯ ಪೇಳುವೆ
ರಾಘವೇಂದ್ರರ ಕರುನ ಬಲದಲಿ
ರಾಘವೇಂದ್ರರ ಭಕುತರಾದವರಿದನು ಕೇಳುವುದು

ಶರಣು ಶ್ರೀಗುರುರಾಜ ನಿನ್ನಯ
ಚರಣಕಮಲಕೆ ಮೊರೆಯ ಪೊಕ್ಕೆನೊ
ಕರುಣ ಎನ್ನೊಳಗಿರಿಸಿ ಪಾಲಿಸು ಕರುನ ಸಾಗರನೆ
ಕರಣ ಮಾನಿಗಳಾದ ದಿವಿಜರು
ಶರಣು ಪೊಕ್ಕರು ಪೊರೆಯರೆನ್ನನು
ಕರುಣ ನಿಧಿ ನೀನೆಂದು ಬೇಡಿದೆ ಶರನ ವತ್ಸಲನೆ ||೧||

ಪಾಹಿ ಪಂಕಜನಯನ ಪಾವನ
ಪಾಹಿ ಗುಣಗಣನಿಲಯ ಶುಭಕರ
ಪಾಹಿ ಪರಮೋದಾರ ಸಜ್ಜನಪಾಲ ಗಂಭೀರ
ಪಾಹಿ ಚಾರುವಿಚಿತ್ರಚರ್ಯನೆ
ಪಾಹಿ ಕರ್ಮಂಧೀಶ ಸರ್ವದ
ಪಾಹಿ ಜ್ಞಾನ ಸುಭಕ್ತಿದಾಯಕ ಪಾಹಿ ಪರಮಾಪ್ತ ||೨||

ಏನು ಬೇಡಲು ನಿನ್ನ ಬೇಡುವೆ
ಹೀನಮನುಜರ ಕೇಳರಾಲೆನೂ
ದೀನ ಜನರುದ್ಧಾರಿ ಈಪ್ಸಿತದಾನಿ ನೀನೆಂದು
ಸಾನುರಾಗದಿ ನಿನ್ನ ನಂಬಿದೆ
ನೀನೆ ಎನ್ನಭಿಮಾನರಕ್ಷಕ
ನಾನಾ ವಿಧವಿಧದಿಂದ ಕ್ಲೇಶಗಳಿನ್ನು ಬರಲೇನು ||೩||

ಮುಗಿಲು ಪರಿಮಿತ ಕಲ್ಲುಮುರಿದೂ
ಹೆಗಲ ಶಿರದಲಿ ಬೇಳಲೇನೂ
ಹಗಲಿರುಳು ಏಕಾಗಿ ಬೆಂಕಿಯ ಮಳೆಯು ಬರಲೇನು
ಜಗವನಾಳುವ ಧ್ವರಿಯು ಮುನಿದೂ
ನಿಗಡ ಕಾಲಿಗೆ ಹಾಕಲೇನೂ
ಮಿಗಿಲು ದುಖ ತರಂಗ ಥರಥರ ಮೀರಿ ಬರಲೇನು ||೪||

ರಾಘವೇಂದ್ರನೆ ನಿನ್ನ ಕರುಣದ-
ಮೋಘ ವೀಕ್ಷಣಲೇಶ ಎನ್ನಲಿ
ಯೋಗವಾದುದರಿಂದ ಚಿಂತೆಯು ಯಾತಕೆನಗಿನ್ನು
ಯೋಗಿಕುಲ ಶಿರೊರತ್ನ ನೀನಿರೆ
ಜೋಗಿ ಮಾನವಗಣಗಳಿಂದೆನ-
ಗಾಗ್ವ ಕಾರ್ಯಗಳೇನುಯಿಲ್ಲವೂ ನೀನೆ ಸರ್ವಜ್ಞ ||೫||

ಅಮರಶಕ್ವರಿ ಮನೆಯೊಳಿರುತಿರೆ
ಶ್ರಮದಿ ಗೋಮಯ ಹುಡುಕಿ ತರುವರೆ
ಅಮಲತರ ಸುರವೄಕ್ಷ ನೀನೆರೆ ತಿಂತ್ರಿಣೀ ಬಯಕೇ?
ಅಮಿತಮಹಿಮೋಪೇತ ನೀನಿರೆ
ಭ್ರಮಿತರಾಗಿಹ ನರರ ಬೇಡೂದ-
ಪ್ರಮಿತ ವಂದಿತಪಾದಯುಗಳನೆ ನಿನಗೆ ಸಮ್ಮತವೆ ||೬||

ಭೂಪ ನಂದನನೆನಿಸಿ ತಾಕರ-
ದೀಪದೆಣ್ಣಿಗೆ ತಿರುಪೆ ಬೇಡ್ವರೆ
ಆ ಪಯೋನಿಧಿ ತಟದಿ ಸಂತತ ವಾಸವಾಗಿರ್ದು
ಕೂಪಜಲ ತಾ ಬಯಸುವಂದದಿ
ತಾಪ ಮೂರರ ಹಾರಿ ನೀನಿರೆ
ಈಪರೀಪರಿಯಿಂದ ಪರರಿಗೆ ಬೇಡಿಕೊಂಬುದೆ ||೭||

ಬಲ್ಲಿದರಿಗತಿ ಬಲ್ಲಿದನು ನೀ-
ನೆಲ್ಲ ತಿಳಿದವರೊಳಗೆ ತಿಳಿದವ-
ನೆಲ್ಲಿ ಕಾಣೆನೊ ನಿನಗೆ ಸಮಸುರಸಂಘದೊಳಗಿನ್ನು
ಎಲ್ಲಕಾಲದಿ ಪ್ರಾಣಲಕುಮೀ-
ನಲ್ಲ ನಿನ್ನೊಳು ನಿಂತು ಕಾರ್ಯಗ-
ಳೆಲ್ಲ ತಾನೇಮಾಡಿ ಕೀರ್ತಿಯ ನಿನಗೆ ಕೊಡುತಿಪ್ಪ ||೮||

ಏನು ಪುಣ್ಯವೊ ನಿನ್ನ ವಶದಲಿ
ಶ್ರೀನಿವಾಸನು ಸತತಯಿಪ್ಪನು
ನೀನೆ ಲೋಕತ್ರಯದಿ ಧನ್ಯನು ಮಾನ್ಯ ಸುರರಿಂದ
ದೀನರಾಗಿಹ ಭಕುತಜನರಿಗೆ
ನಾನಾಕಾಮಿತ ನೀಡೋಗೋಸುಗ
ತಾನೆ ಸರ್ವಸ್ಥಳದಿ ನಿಂತೂ ಕೊಡುವನಖಿಳಾರ್ಥ ||೯||

ಕ್ಷಾಂತಿ ಗುಣದಲಿ ಶಿವನತೆರ ಶ್ರೀ-
ಕಾಂತ ಸೇವೆಗೆ ಬೊಮ್ಮ ಪೋಲುವ-
ನಂತರಂಗಗಂಭೀರತನದಲಿ ಸಿಂಧುಸಮನೆನಿಪ
ದಾಂತ ಜನರಘಕುಲಕೆ ವರುಣನ
ಕಾಂತೆ ತೆರ ತಾನಿಪ್ಪ ಶಬ್ಧದ್ಯ
ನಂತಪೋಲುವನರ್ಥದಲಿ ಗುರು ರಾಜ್ಯದಲಿ ರಾಮ ||೧೦||

ಆರುಮೊಗನಮರೇಂದ್ರರಾಮರು
ಮೂರಜನ ಸರಿಯಿಲ್ಲ ನಿನಗೇ
ಸಾರಿ ಪೇಳುವೆ ದೋಷಿಗಳು ನಿರ್ದೋಷಿ ನೀನೆಂದು
ಆರುವದನ ವಿಶಾಖನಿಂದ್ರಗೆ
ನೂರು ಕೋಪವು ರಾಮದೇವನು
ಸಾರಧರ್ಮದ ಭಂಗಮಾಡಿದ ದೋಷ ನಿನಗಿಲ್ಲ ||೧೧||

ಸಕಲ ಶಾಖಗಳುಂಟು ನಿನಗೇ
ವಿಕಲ ಕೋಪಗಳಿಲ್ಲವೆಂದಿಗು
ನಿಖಿಳ ಧರ್ಮಾಚಾರ್ಯ ಶುಭತಮಚರ್ಯ ಗುರುವರ್ಯ
ಬಕವಿರೋಧಿಯ ಸಖಗೆ ಮುದ್ಧಿನ
ಭಕುರವರ ನೀನಾದ ಕಾರಣ
ಲಕುಮಿರಮಣನ ಕರುಣ ನಿನ್ನೊಳು ಪೂರ್ಣವಾಗಿದಹದೊ ||೧೨||

ಹರಿಯತೆರದಲಿ ಬಲವಿಶಿಷ್ರ‍್ಟನು
ಹರನ ತೆರದಲಿ ರಾಜಶೇಖರ
ಸರಸಿಜೋದ್ಭವನಂತೆ ಸಂತತ ಚತುರಸದ್ವದನ
ಶರಧಿತೆರದಲನಂತರತ್ನನು
ಸರಸಿರುಹ ಸನ್ಮಿತ್ರನಂದದಿ
ನಿರುತ ನಿರ್ಜಿತದೋಷ ಭಾಸುರಕಾಯ ಗುರುರಾಯ ||೧೩||

ಇಂದ್ರತೆರದಲಿ ಸುರಭಿರಮ್ಯನು
ಚಂದ್ರತೆರದಲಿ ಶ್ರಿತ ಕುವಲಯೋ-
ಪೇಂದ್ರತೆರದಲಿ ನಂದಕದಿ ರಾಜಿತನು ಗುರುರಾಜ
ಮಂದ್ರಗಿರಿತೆರ ಕೂರ್ಮಪೀಠನು
ವೀಂದ್ರನಂದದಲರುಣಗಾತ್ರನು
ಇಂದಿರೇಶನ ತೆರದಿ ಸಂತತ ಚಕ್ರಧರ ಶೋಭಿ ||೧೪||

ಜಿತತಮನು ತಾನೆನಿಪ ಸರ್ವದ
ರತುನವರ ತಾ ಭುವನ ಮಧ್ಯದಿ
ವಿತತ ಧರಿಗಾಧರ ಸಂತತ ಮಂಚಮುಖ ಮೂರ್ತಿ
ನತಸುಪಾಲಕ ಕಶ್ಯಪಾತ್ಮಜ
ಪ್ರಥಿತರಾಜಸುತೇಜಹಾರಕ
ಸತತ ದೂಷಣ ವೈರಿ ಗೋಕುಲಪೋಷ ತಾನೆನಿಪ ||೧೫||

ವಿತತಕಾಂತಿಲಿ ಲಸದಿಗಂಬರ
ಪತಿತ ಕಲಿಕೃತಪಾಪಹಾರಕ
ಸತತ ಹರಿಯವತಾರ ದಶಕವ ತಾಳಿ ತಾನೆಸೆವ
ಕೃತಿಯರಮಣನ ಕರುಣಬಲದಲಿ
ನತಿಪಜನಕಖಿಳಾರ್ಥ ನೀಡುವ
ಮತಿಮತಾಂವರನೆನಿಸಿ ಲೋಕದಿ ಖ್ಯಾತನಾಗಿಪ್ಪ ||೧೬||

ವರವಿಭೂತಿಯ ಧರಿಸಿ ಮೆರೆವನು
ಹರನು ತಾನೇನಲ್ಲ ಸರ್ವದ
ಹರಿನಿವಾಸನು ಎನಿಸಲಾ ಪಾಲ್ಗಡಲುತಾನಲ್ಲ
ಸುರಭಿಸಂಯುತನಾಗಿ ಇರಲೂ
ಮಿರುಪುಗೋಕುಲವಲ್ಲತಾನೂ
ಸುರರಸಂತತಿ ಸಂತತಿರಲೂ ಸ್ವರ್ಗತಾನಲ್ಲ ||೧೭||

ತುರಗ-ಕರಿ-ರಥ-ನರ ಸಮೇತನು
ನರವರೇಶನ ದಳವುಯೆನಿಸನು
ನಿರುತ ಪರಿಮಳ ಸೇವಿಯಾದರು ಭ್ರಮರತಾನಲ್ಲ
ಕರದಿ ದಂಡವ ಪಿಡಿದುಯಿರುವನು
ನಿರಯಪತಿತಾನಲ್ಲವೆಂದಿಗು
ಸುರರಿಗಸದಳವೆನಿಪೊದೀತನ ಚರ್ಯವಾಶ್ಚರ್ಯ ||೧೮||

ಕರದಿ ಪಿಡಿದಿಹ ಗುರುವರೇಣ್ಯನು
ಶರಣ ಶರಣಜಹರಾಭೀಷ್ಟ ಫಲಗಳ
ತ್ವರದಿ ಸಲಿಸುತಲವರ ಭಾರವ ತಾನೆಪೊತ್ತಿಹನು
ಮರೆಯ ಬೇಡವೊ ಕರುಣನಿಧಿಯನು
ಸ್ಮರಣೆ ಮಾಡಲು ಬಂದು ನಿಲ್ಲುವ
ಪರಮ ಪಾವನರೂಪತೋರಿಸಿ ತಾನೆ ಕಾಯ್ದಿಹನೂ ||೧೯||

ಅತಸಿ ಪೂ ನಿಭಗಾತ್ರ ಸರ್ವದ
ಸ್ಮಿತಸುನೀರಜನೇತ್ರ ಮಂಗಳ
ಸ್ಮಿತಯುತಾಂಬುಜವದನ ಶುಭತಮರದನ ಜಿತಮದನ
ಅತುಲ ತುಳಸಿಯ ಮೂಲಕಂಧರ
ನತಿಪಜನತತಿಲೋಲ ಕಾಮದ
ಪತಿತ-ಪಾವನ-ಚರಣ ಶರಣಾಂಭರಣ ಗುರುಕರುಣಾ ||೨೦||

ಚಂದ್ರಮಂಡಲವದನ ನಗೆ ನವ-
ಚಂದ್ರಿಕೆಯತೆರ ಮೆರೆಯಾ ಮೇಣ್ ಘನ-
ಚಂದ್ರತಿಲಕದ ರಾಗ ಮನದನುರಾಗ ಸೂಚಿಪದೂ
ಇಂದ್ರನೀಲದ ಮಣಿಯ ಮೀರುವ
ಸಾಂದ್ರದೇಹದ ಕಾಂತಿ ಜನನಯ-
ನೇಂದ್ರಿಯದ್ವಯ ಘಟಿತ ಪಾತಕತರಿದು ರಕ್ಷಿಪುದು ||೨೧||

ಶರಣ ಜನಪಾಪೌಘನಾಶನ
ಶರಣ ನೀರಜ ಸೂರ್ಯಸನ್ನಿಭ
ಶರಣಕುವಲಚಂದ್ರ ಸದ್ಗುಣಸಾಂದ್ರ ರಾಜೇಂದ್ರ
ಶರಣಸಂಘಚಕೋರ ಚಂದ್ರಿಕ
ಶರಣ ಜನಮಂದಾರ ಶಾಶ್ವತ
ಶರಣಪಾಲಕ ಚರಣಯುಗವಾಶ್ರಯಿಸಿ ಬಾಳುವೆನೂ ||೨೨||

ಪಾತಕಾದ್ರಿಗೆ ಕುಲಿಶನೆನಿಸುವ
ಪಾತಕಾಂಬುಧಿ ಕುಂಭಸಂಭವ
ಪಾತಕಾವಳಿ ವ್ಯಾಳವೀಂದ್ರನು ದುರಿತಗಜಸಿಂಹ
ಪಾತಕಾಭಿಧತಿಮಿರಸೂರ್ಯನು
ಪಾತಕಾಂಬುದವಾತ ಗುರು ಜಗ-
ನ್ನಾಥವಿಠಲಗೆ ಪ್ರೀತಿಪುತ್ರನು ನೀನೆ ಮಹಾರಾಯ||

rAGavEndrara vijaya pELuve
rAGavEndrara karuna baladali
rAGavEndrara BakutarAdavaridanu kELuvudu

SaraNu SrIgururAja ninnaya
caraNakamalake moreya pokkeno
karuNa ennoLagirisi pAlisu karuna sAgarane
karaNa mAnigaLAda divijaru
SaraNu pokkaru poreyarennanu
karuNa nidhi nInendu bEDide Sarana vatsalane ||1||

pAhi pankajanayana pAvana
pAhi guNagaNanilaya SuBakara
pAhi paramOdAra sajjanapAla gaMBIra
pAhi cAruvicitracaryane
pAhi karmandhISa sarvada
pAhi j~jAna suBaktidAyaka pAhi paramApta ||2||

Enu bEDalu ninna bEDuve
hInamanujara kELarAlenU
dIna janaruddhAri IpsitadAni nInendu
sAnurAgadi ninna naMbide
nIne ennaBimAnarakShaka
nAnA vidhavidhadinda klESagaLinnu baralEnu ||3||

mugilu parimita kallumuridU
hegala Siradali bELalEnU
hagaliruLu EkAgi benkiya maLeyu baralEnu
jagavanALuva dhvariyu munidU
nigaDa kAlige hAkalEnU
migilu duKa taranga tharathara mIri baralEnu ||4||

rAGavEMdrane ninna karuNada-
mOGa vIkShaNalESa ennali
yOgavAdudariMda ciMteyu yAtakenaginnu
yOgikula Siroratna nInire
jOgi mAnavagaNagaLiMdena-
gAgva kAryagaLEnuyillavU nIne sarvaj~ja ||5||

amaraSakvari maneyoLirutire
Sramadi gOmaya huDuki taruvare
amalatara suravRUkSha nInere tiMtriNI bayakE?
amitamahimOpEta nInire
BramitarAgiha narara bEDUda-
pramita vanditapAdayugaLane ninage sammatave ||6||

BUpa nandananenisi tAkara-
dIpadeNNige tirupe bEDvare
A payOnidhi taTadi santata vAsavAgirdu
kUpajala tA bayasuvandadi
tApa mUrara hAri nInire
IparIpariyinda pararige bEDikombude ||7||

ballidarigati ballidanu nI-
nella tiLidavaroLage tiLidava-
nelli kANeno ninage samasurasanGadoLaginnu
ellakAladi prANalakumI-
nalla ninnoLu nintu kAryaga-
Lella tAnEmADi kIrtiya ninage koDutippa ||8||

Enu puNyavo ninna vaSadali
SrInivAsanu satatayippanu
nIne lOkatrayadi dhanyanu mAnya surarinda
dInarAgiha Bakutajanarige
nAnAkAmita nIDOgOsuga
tAne sarvasthaLadi nintU koDuvanaKiLArtha ||9||

kShAnti guNadali Sivanatera SrI-
kAnta sEvege bomma pOluva-
nantarangagaMBIratanadali sindhusamanenipa
dAnta janaraGakulake varuNana
kAnte tera tAnippa Sabdhadya
nantapOluvanarthadali guru rAjyadali rAma ||10||

ArumoganamarEndrarAmaru
mUrajana sariyilla ninagE
sAri pELuve dOShigaLu nirdOShi nInendu
Aruvadana viSAKanindrage
nUru kOpavu rAmadEvanu
sAradharmada BangamADida dOSha ninagilla ||11||

sakala SAKagaLunTu ninagE
vikala kOpagaLillavendigu
niKiLa dharmAcArya SuBatamacarya guruvarya
bakavirOdhiya saKage muddhina
Bakuravara nInAda kAraNa
lakumiramaNana karuNa ninnoLu pUrNavAgidahado ||12||

hariyateradali balaviSiShr^Tanu
harana teradali rAjaSEKara
sarasijOdBavanaMte santata caturasadvadana
Saradhiteradalanantaratnanu
sarasiruha sanmitranandadi
niruta nirjitadOSha BAsurakAya gururAya ||13||

indrateradali suraBiramyanu
candrateradali Srita kuvalayO-
pEndrateradali nandakadi rAjitanu gururAja
mandragiritera kUrmapIThanu
vIndranandadalaruNagAtranu
indirESana teradi saMtata cakradhara SOBi ||14||

jitatamanu tAnenipa sarvada
ratunavara tA Buvana madhyadi
vitata dharigAdhara saMtata mancamuKa mUrti
natasupAlaka kaSyapAtmaja
prathitarAjasutEjahAraka
satata dUShaNa vairi gOkulapOSha tAnenipa ||15||

vitatakAntili lasadigaMbara
patita kalikRutapApahAraka
satata hariyavatAra daSakava tALi tAneseva
kRutiyaramaNana karuNabaladali
natipajanakaKiLArtha nIDuva
matimatAnvaranenisi lOkadi KyAtanAgippa ||16||

varaviBUtiya dharisi merevanu
haranu tAnEnalla sarvada
harinivAsanu enisalA pAlgaDalutAnalla
suraBisaMyutanAgi iralU
mirupugOkulavallatAnU
surarasantati santatiralU svargatAnalla ||17||

turaga-kari-ratha-nara samEtanu
naravarESana daLavuyenisanu
niruta parimaLa sEviyAdaru BramaratAnalla
karadi danDava piDiduyiruvanu
nirayapatitAnallavendigu
surarigasadaLavenipodItana caryavAScarya ||18||

karadi piDidiha guruvarENyanu
SaraNa SaraNajaharABIShTa PalagaLa
tvaradi salisutalavara BArava tAnepottihanu
mareya bEDavo karuNanidhiyanu
smaraNe mADalu bandu nilluva
parama pAvanarUpatOrisi tAne kAydihanU ||19||

atasi pU niBagAtra sarvada
smitasunIrajanEtra mangaLa
smitayutAMbujavadana SuBatamaradana jitamadana
atula tuLasiya mUlakandhara
natipajanatatilOla kAmada
patita-pAvana-caraNa SaraNAMBaraNa gurukaruNA ||20||

candramanDalavadana nage nava-
candrikeyatera mereyA mEN Gana-
candratilakada rAga manadanurAga sUcipadU
indranIlada maNiya mIruva
sAndradEhada kAnti jananaya-
nEndriyadvaya GaTita pAtakataridu rakShipudu ||21||

SaraNa janapApauGanASana
SaraNa nIraja sUryasanniBa
SaraNakuvalacandra sadguNasAMdra rAjEndra
SaraNasanGacakOra chandrika
SaraNa janamaMdAra SASvata
SaraNapAlaka caraNayugavASrayisi bALuvenU ||22||

pAtakAdrige kuliSanenisuva
pAtakAMbudhi kuMBasaMBava
pAtakAvaLi vyALavIndranu duritagajasiMha
pAtakABidhatimirasUryanu
pAtakAMbudavAta guru jaga-
nnAthaviThalage prItiputranu nIne mahArAya

guru jagannatha dasaru · MADHWA · raghavendra · raghavendra vijaya

Raghavendra Vijaya – SANDHI 07

ರಾಘವೇಂದ್ರರ ವಿಜಯ ಪೇಳುವೆ
ರಾಘವೇಂದ್ರರ ಕರುನ ಬಲದಲಿ
ರಾಘವೇಂದ್ರರ ಭಕುತರಾದವರಿದನು ಕೇಳುವುದು

ಜಯ ಜಯತು ಗುರುರಾಯ ಶುಭಕರ
ಜಯ ಜಯತು ಕವಿಗೇಯ ಸುಂದರ
ಜಯ ಜಯತು ಘನ ಬೋಧ ಗುಣಗಣಪೂರ್ಣ ಗಂಭೀರ
ಜಯ ಜಯತು ಭಕ್ತಲಿಪಾಲಕ
ಜಯ ಜಯತು ಭಕ್ತೇಷ್ಟದಾಯಕ
ಜಯ ಜಯತು ಗುರುರಾಘವೇಂದ್ರನೆ ಪಾಹಿ ಮಾಂ ಸತತ ||೧||

ಆದಿಯಲಿ ಪ್ರಹ್ಲಾದ ನಾಮಕ-
ನಾದ ತ್ರೇತಾಯುಗದಿ ಲಕ್ಷ್ಮಣ-
ನಾದ ದ್ವಾಪರಯುಗದಿ ಬಲ ಬಾಹ್ಲೀಕನಾಮದಲಿ
ಯಾದವೇಶನ ಭಜಿಸಿ ಕಲಿಯುಗ
ಪಾದದೊಳು ತಾ ಎರಡು ಜನ್ಮವ
ಸಾದರದಿ ತಾ ಧರಿಸಿ ಮೆರೆದನು ದೇವಗುರುರಾಯ ||೨||

ಸಾರ ಸುಂದರಕಾಯ ಸುಗಣೋ-
ದಾರ ಶುಭತಮ ಸ್ವೀಯ ಮಹಿಮಾ-
ಪಾರಕವಿನುತ ಖ್ಯಾತ ನಿರ್ಜಿತದೋಷ ಹರಿತೋಷ
ಧಾರುಣೀಸುರ ಕುಮುದಚಂದಿರ
ಘೋರಪಾತಕ ತಿಮಿರದಿನಕರ
ಧೀರಮಧ್ವಮತಾಬ್ಜಭಾಸ್ಕರನೆನಿಸಿ ರಾಜಿಪನು ||೩||

ಸೂರಿಜನಹೃದಯಾಬ್ಜಮಂದಿರ
ಹೀರ-ಹಾರ-ವಿಭೂಷಿತಾಂಗನು
ಚಾರು-ರತ್ನ-ಕಿರೀಟಕುಂಡಲ-ರತ್ನಮಾಲೆಗಳ
ವಾರೀಜಾಕ್ಷೀ ಮಣಿಯು ತುಲಸೀ
ಸಾರಮಾಲೆಯ ಧರಿಸಿ ಯತಿವರ
ತೋರುತಿಪ್ಪನು ಬಾಲಸೂರ್ಯನ ತೆರದಿ ಲೋಕದಲಿ ||೪||

ಚಾರುತರ ಕೌಪೀನ ಪಾದುಕ-
ಧಾರಿ ದಂಡ ಕಮಂಡು ಲಾಂಚಿತ
ಸಾರ ದ್ವಾದಶ ಪುಂಡ್ರ ಮುದ್ರೆಗಳಿಂದ ಚಿಹ್ನಿತನು
ಸಾರಿದವರಘ ಹರಿದು ಸುಖಫಲ
ಸೂರಿ ಕೊಡುತಲಿ ಸರ್ವಕಾಲದಿ
ಧಾರುಣೀ ತಳದಲ್ಲಿ ಈಪರಿ ಮೆರೆದ ಗುರುರಾಯ ||೫||

ಮತಿಮತಾಂವರ ರಾಘವೇಂದ್ರನು
ಮಿತಿಯುಯಿಲ್ಲದೆ ಮಹಿಮೆ ಜನರಿಗೆ
ಸತತ ತೋರುತ ಪೊರೆಯುತಿರುವನು ಸಕಲ ಸಜ್ಜನರ
ಸತಿಸುತಾದಿ ಸುಭಾಗ್ಯ ಸಂಪದ
ಮತಿಯು ಜ್ಞಾನ ಸುಭಕ್ತಿ ದಿನದಿನ
ವಿತತವಾಗಿತ್ತಖಿಲ ಜನರನು ಪ್ರೀತಿಗೊಳಿಸುತಲಿ ||೬||

ಸುರರ ನದಿಯಂದದಲಿ ಪಾಪವ
ತರಿವ ನರ್ಕನ ತೆರದಿ ಕತ್ತಲೆ
ಶರಧಿತನಯನ ತೆರದಿ ತಾಪವ ಕಳೆದು ಸುಖವೀವ
ಸರಿಯುಗಾಣೆನು ಇವರ ಚರ್ಯಕೆ
ಹರಿಯು ತಾನೇ ಸಿರಿಯ ಸಹಿತದಿ
ಇರುವ ತಾನಾನಂದ ಮುನಿವರ ಸಕಲಸುರಸಹಿತ ||೭||

ಇನಿತೆ ಮೊದಲಾದಮಿತ ಗುಣಗಣ-
ವನಧಿಯೆನಿಸುತಲವನಿತಳದಲಿ
ಅನುಪಮೋಪವ ತಾನೆ ತನ್ನನು ನಂಬಿ ಭಜಿಪರಿಗೆ
ಕನಸಿಲಾದರು ಶ್ರಮವ ತೋರದೆ
ಮನದ ಬಯಕೆಯ ಸಲಿಸಿ ಕಾಯುವ
ತನುಸುಛಾಯದ ತೆರದಿ ತಿರುಗುವ ತನ್ನ ಜನರೊಡನೆ ||೮||

ಏನು ಕರುಣೀಯೊ ಏನು ದಾತನೊ
ಏನು ಮಹಿಮೆಯೊ ಏನು ಶಕುತಿಯೊ
ಏನು ಇವರಲಿ ಹರಿಯ ಕರುಣವೊ ಏನು ತಪಬಲವೋ
ಏನು ಕೀರ್ತಿಯೊ ಜಗದಿ ಮೆರೆವದು
ಏನು ಪುಣ್ಯದ ಫಲವೊ ಇವರನ
ಏನು ವರ್ಣಿಪೆ ಇವರ ಚರಿಯವನಾವ ಬಲ್ಲವನು ||೯||

ಧರಣಿ ತಳದಲಿ ಮೆರೆವ ಗುರುವರ
ಚರಿಯ ತಿಳಿಯಲು ಸುರರೆ ಯೋಗ್ಯರು
ಅರಿಯರೆಂದಿಗು ನರರು ದುರುಳರು ಪರಮಮೋಹಿತರೂ
ಮರುಳುಮಯ ಭವದಾಶ ಪಾಶದ
ಉರುಳು ಗಣ್ಣಿಗೆ ಶಿಲ್ಕಿ ಹಗಲೂ
ಇರುಳುಯನದಲೆ ಏಕವಾಗೀ ತೊಳಲಿ ಬಳಲುವರು ||೧೦||

ಕರುಣವಾರಿಧಿ ಶರಣಪಾಲಕ
ತರುನದಿನಕರನೆನಿಪ ಗುರುವರ
ಚರಣ ಸೇವಕಜನರಪಾಲಿಪ ಜನನಿ ತೆರದಂತೆ
ಸುರರತರುವರದಂತೆ ಸಂತತ
ಪೊರೆದು ತನ್ನಯ ಭಕುತ ಜನರನು
ಧರಣಿಮಂಡದೊಳಗೆ ರಾಜಿಪ ನತಿಪಜನಭೂಪಾ ||೧೧||

ಎನು ಚೋದ್ಯ್ವೊ ಕಲಿಯ ಯುಗದಲಿ
ಏನು ಈತನ ಪುಣ್ಯ ಬಲವೋ
ಏನು ಈತನ ವಶದಿ ಶ್ರೀಹರಿ ತಾನೆ ನಿಂತಿಹನೋ
ಏನು ಕರುಣಾನಿಧಿಯೊ ಈತನು
ಏನು ಭಕುರೈಗಭಯದಾಯಕ
ಏನು ಈತನ ಮಹಿಮೆ ಲೋಕಕಗಮ್ಯವೆನಿಸಿಹದೋ ||೧೨||

ವಿಧಿಯು ಬರದಿಹ ಲಿಪಿಯ ಕಾರ್ಯವ
ಬದಲಿಮಾಡುವ ಶಕುತಿ ನಿನಗೇ
ಪದುಮನಾಭನು ದಯದಿ ತಾನೇಯಿತ್ತ ಕಾರಣದಿ
ಸದಯ ನಿನ್ನಯ ಪಾದಪದುಮವ
ಹೃದಯ ಮದ್ಯದಿ ಭಜಿಪ ಶಕುತಿಯ
ಒದಗಿಸೂವದುಯೆಂದು ನಿನ್ನನು ನಮಿಸಿ ಬೇಡುವೆನು ||೧೩||

ಘಟನವಾಗದ ಕಾರ್ಯಗಳ ನೀ
ಘಟನಮಾಡುವ ವಿಷಯದಲಿ ನೀ
ಧಿಟನುಯೆನುತಲಿ ಬೇಡಿಕೊಂಬೆನೊ ಕರುಣವಾರಿಧಿಯೇ
ಶಠದಿ ನಿನ್ನನು ಭಜಿಸದಿಪ್ಪರ
ಶಠವ ಕಳೆದತಿಹಿತದಿ ನಿನ್ನಯ
ಭಠರ ಕೋತಿಗೆ ಘಟನಮಾಡುವದೇನು ಅಚ್ಚರವೋ ||೧೪||

ನಿನ್ನ ಕರುಣಕೆ ಎಣಿಯಗಾಣೆನೊ
ನಿನ್ನ ಶಕುತಿಗೆ ನಮನಮಾಡುವೆ
ನಿನ್ನ ಕರುಣಕಟಾಕ್ಷದಿಂದಲಿ ನೋಡೊ ಗುರುರಾಯ
ನಿನ್ನ ಪದಯುಗದಲ್ಲಿ ಸರ್ವದ
ಎನ್ನ ಮನವನು ನಿಲಿಸಿ ಪಾಲಿಸೊ
ನಿನ್ನ ಜನ್ಯನು ನಾನು ಎನ್ನಯ ಜನಕ ನೀನಲ್ಲೆ ||೧೫||

ಹಿಂದೆ ಮಾಡಿದ ನಿನ್ನ ಮಹಿಮೆಗ
ಳೊಂದು ತಿಳಿಯದು ಪೇಳೊ ಶಕುತಿಯು
ಎಂದಿಗಾದರು ಪುಟ್ಟಲಾರದು ಮನುಜರಾಧಮಗೇ
ಇಂದು ಮಹಿಮವ ತೋರಿ ಭಕುತರ
ವೃಂದ ಮೋದದಿ ಪಾಡಿಕುಣಿವದು
ನಂದಸಾಗರಮಗ್ನವಾದುದ ನೋಡಿ ಸುಖಿಸುವೆನು ||೧೬||

ವ್ಯಾಸಮುನಿ ಗುರುವರ್ಯ ಎನ್ನಯ
ಕ್ಲೇಶ ನಾಶನಮಡಿ ಕರುನದಿ
ವಾಸುದೇವನ ಹೃದಯಸದನದಿ ತೋರಿ ಪೊರೆಯೆಂದೇ
ವಾಸವಾಸರದಲ್ಲಿ ತವ ಪದ
ಆಶೆಯಿಂದಲಿ ಸೇವೆಮಾಳ್ಪೆನು
ದಾಸನೆನಿಸೀ ಭವದ ಶ್ರಮಪರಿಹರಿಸೊ ಗುರುರಾಯ ||೧೭||

ತತ್ವಸಾರವ ತಿಳಿಸು ಭವದಿ ವಿ-
ರಕ್ತ ಮತಿಯನುಯಿತ್ತು ತ್ವತ್ವದ
ಸಕ್ತಚಿತ್ತನಮಾಡಿ ಭಗವದ್ಭಕ್ತನೆಂದೆನಿಸು
ಕೆತ್ತವೋಲ್ ಮನ್ಮನದಿಯಿರುತಿಹ
ಕತ್ತಲೆಯ ಪರಿಹರಿಸಿ ದಿನದಿನ
ಉತ್ತಮೋತ್ತಮ ಜ್ಞಾನಭಕುತಿಯಿನಿತ್ತು ಪೊರೆಯೆನ್ನ ||೧೮||

ಪ್ರಣತಜನಮಂದಾರ ಕಾಮದ
ಕ್ಷಣ ಕ್ಷಣಕ್ಕೆ ನಿನ್ನ ಗುಣಗಳ
ಗಣನಪೂರ್ವಕ ಮನದಿ ಸಂತತ ಭಜನೆಗೈವಂತೆ
ಮಣಿಸು ಮನವನು ನಿನ್ನ ಪದದಲಿ
ಗುಣಿಸಿ ನಿನ್ನಯ ರೂಪ ನೋಡೀ ದಣಿಸು ನಿನ್ನವರೊಳಗೆ ಸಂತತ ಎಣಿಸೊ ಕರುಣಾಳೋ ||೧೯||

ನಿನ್ನ ಕಥೆಗಲ ಶ್ರವಣಮಾಡಿಸೊ
ನಿನ್ನ ಗುಣಕೀರ್ಥನೆಯ ಮಾಡಿಸೊ
ನಿನ್ನ ಸ್ಮರಣೆಯ ನೀಡು ಸಂತತ ನಿನ್ನ ಪದಸೇವಾ
ನಿನ್ನ ಅರ್ಚನೆಗೈಸೊ ಗುರುವರ
ನಿನ್ನ ವಂದನೆಗೈಸೊ ದಾಸ್ಯವ
ನಿನ್ನ ಗೆಳೆತನ ನೀಡೊ ಯತಿವರ ಎನ್ನನರ್ಪಿಸುವೇ ||೨೦||

ಅಮಿತ ಮಹಿಮನೆ ನಿನ್ನ ಪಾದಕೆ
ನಮಿಪೆ ಮತ್ಕೃತದೋಶವೆಣಿಸದೆ
ಕ್ಷಮಿಸಿ ಸೌಖ್ಯವನಿತ್ತು ಪಾಲಿಸೊ ಸುಮನಸೋತ್ತಮನೆ
ಅಮರರರಿಯರಗಮ್ಯಮಹಿಮವ
ವಿಮಲಗುಣಮಯ ಪ್ರಬಲತಮ ನೀ-
ನಮರತರು ಚಿಂತಾಮಣಿಯು ಸುರಧೇನು ನೀನಯ್ಯಾ ||೨೧||

ಶಿರದಿ ಸಮನವ ಮಾಡಿ ನಿನ್ನನು
ಕರದ ಸಂಪುಟಮಾಡಿ ವಿನಯದಿ
ಮರೆಯದಲೆ ನಾ ಬೇಡಿಕೊಂಬೆನೊ ಶರಣಪರಿಪಾಲ
ಪರಮಕರುಣಿಯೆ ದ್ವಿಜಗೆ ಬಂದಿಹ
ಮರಣ ಬಿಡಿಸೀ ಸುಖವ ನೀಡಿದೆ
ಅರಿಯಲೆಂದಿಗು ಸಾಧ್ಯವಲ್ಲವೊ ನಿನ್ನ ಮಹಮಹಿಮೆ ||೨೨||

ಸಕಲಗುಣಗಣಪೂರ್ಣ ಭಕುತಗೆ
ಅಖಿಳಕಾಮಿತದಾತ ಸುಖಮಯ
ವಿಖನಸಾಂಡದಿ ಪ್ರಬಲತಮ ನೀನೆನಿಸಿ ನೆಲಿಸಿರ್ಪೆ
ಲಕುಮಿರಮಣನ ಪ್ರೀತಿಪಾತ್ರನೆ
ಭಕುತಕೈರವಸ್ತೋಮ ಚಂದಿರ
ಮುಕುತಿದಾಯಕ ಮೌನಿಕುಲಮಣಿ ನಮಿಮೆ ಸಲಹೆನ್ನಾ ||೨೩||

ಸ್ವಸ್ತಿ ಶ್ರೀ ಗುರುರಾಘವೇಂದ್ರಗೆ
ಸ್ವಸ್ತಿ ಗುಣಗನಸಾಂದ್ರಮೂರ್ತಿಗೆ
ಸ್ವಸ್ತಿ ಶ್ರೀಯತಿನಾಥ ಲೋಕದಿ ಖ್ಯಾತ ಮಮನಾಥ
ಸ್ವಸ್ತಿ ಶ್ರೆ ಗುರುಸಾರ್ವಭೌಮಗೆ
ಸ್ವಸ್ತಿ ಶ್ರೀ ಸರ್ವಜ್ಞತಮಗೇ
ಸ್ವಸ್ತಿ ಶ್ರೀ ಸುರಧೇನು ಸುರತರು ನಮಿಪ ಭಕುತರಿಗೆ ||೨೪||

ಖ್ಯಾತನಾದನು ಸಕಲಲೋಕಕ-
ನಾಥಪಾಲಕನೆಂಬೊ ಬಿರುದನು
ಈತ ಸಂತತ ಪೊತ್ತು ಮೆರೆವನು ಹರಿಯ ಕರುಣದಲಿ
ಈತನೇ ಮಹದಾತ ಜಗದೊಳು
ಖ್ಯಾತ ಮಹಿಮನು ಶರಣವತ್ಸಲ
ದಾತ ಗುರುಜಗನ್ನಾಥವಿಠಲನ ಸೇವಕಾಗ್ರಣಿಯೂ ||೨೫||

guru jagannatha dasaru · MADHWA · raghavendra · raghavendra vijaya

Raghavendra Vijaya – SANDHI 06

ರಾಘವೇಂದ್ರರ ವಿಜಯ ಪೇಳುವೆ
ರಾಘವೇಂದ್ರರ ಕರುನ ಬಲದಲಿ
ರಾಘವೇಂದ್ರರ ಭಕುತರಾದವರಿದನು ಕೇಳುವುದು

ನತಿಪಜನತತಿಗಮರಪಾದಪ
ನುತಿಪಜನಸುರಧೇನು ಕಾಮಿತ
ಸತತನೀಡುತ ಧರಣೆಸುರವರನಿಕರಪರಿಪಾಲ
ಪ್ರತಿಯುಕಾಣೆನೊ ವ್ರತಿಗಳರಸನೆ
ನತಿಪೆ ತವಪದ ಕಮಲಯುಗ್ಮಕೆ
ತುತಿಪೆ ಎನ್ನನು ಪೊರೆಯೊ ಗುರುವರ ಪತಿತಪಾವನನೆ ||೧||

ಆವ ಪಂಪಾಕ್ಷೇತ್ರದಲಿ ಹರಿ
ಶೇವಕಾಗ್ರಣಿ ವ್ಯಾಸಮುನಿಯೂ
ಕಾಮನಯ್ಯನ ಸತತ ಭಜಿಸುತ ವಾಸಮಾಡಿರಲೂ
ದೇವವರ್ಯರೆ ಒಂದುರೂಪದಿ
ತವೆಭೂತಳದಲ್ಲಿ ಜನಿಸುತ
ಕೋವಿದಾಗ್ರೇಸರರುಯೆನಿಸೆ ಮೆರದರಾ ಸ್ಥಳದಿ ||೨||

ನಾರದರೆ ತಾ ಶ್ರೀಪುರಂದರ
ಸೂರಿತನಯನೆ ಕನಕ ತಾ ಜಂ-
ಭಾರಿಯೇ ವೈಕುಂಠದಾಸರು ವ್ಯಾಸ ಪ್ರಹ್ಲಾದ
ಈರು ಎರಡೀ ಜನರು ಸರ್ವದ
ಮಾರನಯ್ಯನ ಪ್ರೇಮಪಾತ್ರರು
ಸೇರೆಯಿರುವದರಿಂದೆ ಪಂಪಾ ನಾಕಕಿನ್ನಧಿಕ ||೩||

ವ್ಯಾಸರಾಯರ ಮಠದ ಮಧ್ಯದಿ
ವಾಸಮಾಡಲು ಸಕಲದ್ವಿಜನೂ
ದಾಸರಾಗಿಹ ಸರ್ವರಿಂದಲಿ ಸಭೆಯು ಶೋಭಿಸಿತು
ವಾಸವನ ಶುಭಸಭೆಯೊ ಮೇಣ್ ಕಮ-
ಲಾಸನನ ಸಿರಿವೈಜಯಂತಿಯೊ
ಭಾಷಿಸುವರಿಗೆ ತೋರದಂದದಿ ಸಭೆಯು ತಾನೊಪ್ಪೆ ||೪||

ಪಂಪಕ್ಷೇತ್ರವು ದಾಸವರ್ಯರ
ಗುಂಪಿನಿಂದ ಸಮೇತವಾಗೀ
ಶಂಫಲಾಪುರದಂತೆ ತೋರ್ಪದು ಸುಜನಮಂಡಲಕೆ
ತಂಪುತುಂಗಾನದಿಯವನ ತಾ
ಸೊಂಪಿನಿಂದಲಿ ಸರ್ವಜನಮನ
ಕಿಂಪುಗಾಣಿಸಿ ಸರ್ವಸಂಪದದಿಂದ ಶೋಭಿಪುದು ||೫||

ಒಂದುದಿನದಲಿ ವ್ಯಾಸಮುನಿಯು ಪು-
ರಂದರಾರ್ಯರು ಒಂದುಗೂಡೀ
ಬಂದುಸೇರ್ದರು ಸುಖವನುಣಲೂ ವಿಜಯವಿಠಲನ್ನ
ಮಂದಿರಕೆ ಬಲಸಾರೆಯಿರುತಿಹ-
ದೊಂದು ಸುಂದರಪುಲಿನಮಧ್ಯದಿ
ಅಂದು ಹರಿಯಪರೋಕ್ಷವಾರಿಧಿಯೊಳಗೆ ಮುಳುಗಿದರು ||೬||

ಬಂದನಲ್ಲಿಗೆ ಕುರುಬನೊಬ್ಬನು
ತಮ್ದ ಕುರಿಗಳ ಬಿಟ್ಟುದೂರದಿ
ನಿಂದು ನೋಡಿದ ಇವರ ಚರಿಯವ ಕನಕನಿಲ್ಲದಲೆ
ಮಂದಹಾಸವು ಕೆಲವುಕಾಲದಿ
ಮಂದರಾಗೊರು ಕೆಲವುಕಾಲದಿ
ಪೊಂದಿರಿಬ್ಬರು ಅಪ್ಪಿಕೊಂಡೂ ಮುದದಿ ರೋದಿಪರೋ ||೭||

ಬಿದ್ದು ಪುಲಿನದಿ ಪೊರಳಿ ಹೊರಳೊರು
ಎದ್ದು ಕುಣಿಕುಣೀದಾಡೆ ಚೀರೊರು
ಮುದ್ಧು ಕೃಷ್ಣನ ತೋರಿತೋರುರ ತಾವು ಪಾಡುವರೋ
ಶಿದ್ಧಸಾಧನ ಕನಕ ಸಮಯಕೆ
ಇದ್ದರಿಲ್ಲೀ ಲಾಭವೋಗೋದು
ಇದ್ದಸ್ಥಾನಕೆ ಪೋಗಿ ಆತನ ಕರೆವೊರಾರಿಲ್ಲಾ ||೮||

ಸುದ್ಧಿ ಕೇಳುತ ನಿಂತ ಕುರುಬನು
ಎದ್ದು ಕನಕನ ಕರೆದು ತೋರುವೆ
ಇದ್ದ ಸ್ಥಳವನು ಪೇಳಿರೆಂದಾ ಮುನಿಗೆ ಬೆಸಗೊಂಡಾ
ಎದ್ದು ನಡೆದಾನದಿಯ ತೀರದ-
ಲಿದ್ದ ಕನಕನ ಬೇಗ ಕರದೂ
ತಂದು ತೋರುತ ವ್ಯಾಸಮುನಿಗೇ ಬಿದ್ದು ಬೇಡಿದನು ||೯||

ದಾರಿ ಮಧ್ಯದಿ ತನಗೆ ಕನಕನು
ತೋರಿ ಪೇಳಿದ ತೆರದಿ ಕುರುಬನು
ಸರೆಗರೆದೂ ಬೇಡಿಕೊಮ್ಡನು ಲಾಭ ಕೊಡಿರೆಂದು
ಧೀರಮುನಿವರ ದಾಸವರರೆ ವಿ-
ಚಾರಮಾಡಿರಿ ಏನು ನೀಡಲಿ
ತೋರಲೊಲ್ಲದು ಪರಿಯ ನೀವೇ ಪೇಳಿರೆಮಗೆಂದ ||೧೦||

ಕನಕ ಪೇಳಿದ ಕೊಟ್ಟವಚನವು
ಮನದಿ ಯೋಚಿಸಿ ಕೊಡುವದವಗೇ
ಅನುಜನಾತನು ನಿಮಗೆ ತಿಳಿವದಿ ಚಿಂತೆಯಾಕದಕೆ
ಎನಲು ಮುನಿವರ ಮನದಿ ತಿಳಿದೂ
ಜನಿತವಾದಾನಂದಲಾಭವ
ಮನಸುಪೂರ್ವಕಯಿತ್ತು ಕರುಣವ ಮಾಡಿ ತಾಪೊರೆದ ||೧೧||

ಜ್ಞಾನಿಗಳು ತಾವಂಗಿಕರಿಸಲು
ಹೀನಹೆಲಸಗಳಾದ ಕಾಲಕು
ಏನು ಶ್ರಮವದರಿಂದ ಬಂದರು ಬಿಡದೆ ಪಾಲಿಪರು
ಸಾನುರಾಗದಿ ಸಕಲಜನರಭಿ-
ಮಾನಪೂರ್ವಕ ಪೊರೆದು ಭಕ್ತಿ-
ಜ್ಞಾನವಿತ್ತೂ ಹರಿಯ ಲೋಕದಿ ಸುಖವ ಬಡಿಸುವರು ||೧೨||

ತೀರ್ಥಸ್ನಾನವಮಾಡಿ ತಾವಾ
ತೀರ್ಥಶುದ್ಧಿಯ ಮಾಡೊರಲ್ಲದೆ
ತೀರ್ಥಸ್ನಾನಗಳಿಂದಲವರಿಗೆ ಏನುಫಲವಿಲ್ಲಾ
ಪಾರ್ಥಸಾರಥಿಪಾದ ಮನದಲಿ
ಸ್ವಾರ್ಥವಿಲ್ಲದೆ ಭಜನಗೈದು ಕೃ-
ತಾರ್ಥರಾಗೀ ಜಗದಿ ಚರಿಪರು ಸತತ ನಿರ್ಭಯದಿ ||೧೩||

ಬುಧರ ದರುಶನದಿಂದ ಪಾತಕ
ಸದದು ಭಾಷಣದಿಂದ ಮುಕುತಿಯ
ಪದದ ದಾರಿಯ ತೋರಿ ಕೊಡುವರು ಸದನದೊಳಗಿರಲು
ಒದಗಿಸುವರೂ ಭಾಗ್ಯ ಜನರಿಗೆ
ಮದವು ಏರಿದ ಗಜದ ತೆರೆದಲಿ
ಪದುಮನಾಭನ ದಾಸರವರಿಗಸಾಧ್ಯವೇನಿಹದೋ ||೧೪||

ಯತಿಕುಲೋತ್ತಮವ್ಯಾಸರಾಯರ
ಮಿತಿಯುಯಿಲ್ಲದ ಮಹಿಮೆಯಿಂದಲಿ
ಪತಿತಪಾಮರರೆಲ್ಲರು ಧೃತರಾದುದೇನರಿದು
ಸತತಬಿಂಬೋಪಾಸನೊಚ್ಛ್ರಿತ
ವಿತತಜ್ಞಾನದ ವಿಭವದಿಂದಲಿ
ಪ್ರತಿಯಿಯಿಲ್ಲದೆ ತಾನು ರಾಜಿಪ ಸೂರ್ಯನಂದದಲಿ ||೧೫||

ಮೋದತೀರ್ಥರ ಶಾಸ್ತ್ರಜಲನಿಧಿಗೆ
ಮೋದದಾಯಕಸೋಮನೋ ರ-
ವಾವಿದ್ವಾರಿಜಹಂಸ ಚಂದಿರ ಸ್ವಮತಸತ್ಕುಮುದ-
ಕಾದ ತಾ ನಿಜ ಸುಜನ ಕೈರವ
ಬೋಧಕರ ತಾ ಚಂದ್ರಮಂಡಲ
ಪಾದಸೇವಕರೆನಿಪ ಸುಜನ ಚಕೋರ ಚಂದ್ರಮನೋ ||೧೬||

ಹರಿಯರೂಪ ಸಮಾದಿಯೋಗದಿ
ನಿರುತಕಾಣುತಲಿಪ್ಪ ಗುರುವರ
ಹೊರಗೆ ಕಾಣುವೆನಿಂಬ ಕಾರಣ ಕನಕಗಿನಿತೆಂದಾ
ಚರನ ತೆರದಲಿ ನಿನ್ನ ಸಂಗಡ
ತಿರುಗುತಿಪ್ಪನು ಸರ್ವಕಾಲದಿ
ಸಿರಿಯರಮಣನ ಎನಗೆ ತೋರಿಸು ಮರಿಯಬೇಡೆಂದಾ ||೧೭||

ಅಂದ ಮುನಿವರವಚನ ಮನಸಿಗೆ
ತಂದು ಕನಕನು ಹರಿಗೆ ಪೇಳಿದ
ಒಂದುಕಾಲದಿ ಮುನಿಗೆ ದರುಶನ ನೀಡು ಜಗದೀಶಾ
ಇಂದಿರಾಪತಿ ಕೇಳಿ ವಚನವ
ಮಂದಹಾಸವಮಾಡಿ ನುಡಿದನು
ಬಂದು ಶ್ವಾನಸ್ವರೂಪದಿಂದಲಿ ಮುನಿಗೆ ತೋರುವೆನು ||೧೮||

ದೇವತಾರ್ಚನೆಮಾಡಿ ಗುರುವರ
ಸಾವಧಾನದಿ ಭಕ್ಷ್ಯ-ಭೋಜ್ಯವ
ಕಮನಯ್ಯಗೆ ನೀಡೊಕಾಲದಿ ಶ್ವಾನ ಬರಲಾಗ
ಕೋವಿದಾಗ್ರಣಿ ವ್ಯಾಸಮುನಿಯು
ಭಾವಿಶ್ಯಾಗಲೆ ಹರಿಯ ಮಹಿಮೆಯ
ದೇವದೇವನೆ ಈ ವಿಧಾನದಿ ತೋರ್ದ ತನಗೆಂದೂ ||೧೯||

ದೃಷ್ಟಿಯಿಂದಲಿ ಕಮ್ಡು ಮುನಿವರ
ಥಟ್ಟನೆದುಕುಲತಿಲಕಕೃಷ್ಣನ
ಬಿಟ್ಟು ತಾ ಜಡಮೂರ್ತಿ ಪೊಜೆಯ ಶುನಕದರ್ಚನೆಯಾ
ಮುಟ್ಟಿ ಭಜಿಸಿದ ಭಕುತಿಯಿಂದಲಿ
ಕೊಟ್ಟ ತಾನೈವೇದ್ಯ ತ್ವರದಲಿ
ತಟ್ಟಿಮಂಗಳದಾರ್ತಿಮಾಡಿ ಶಿರದಿ ನಮಿಸಿದನು ||೨೦||

ಅಲ್ಲಿ ದ್ವಿಜವರರಿದನು ನೋಡೀ
ಎಲ್ಲಿಯಿಲ್ಲದೆ ಚರಿಯ ಯತಿವರ-
ರಲ್ಲಿ ನಡೆಯಿತುಯಿನ್ನುಮುಂದೇ ಮಡಿಯು ಮೈಲಿಗೆಯು
ಇಲ್ಲದಾಯಿತು ನಾಯಿಪೂಜೆಯು
ಎಲ್ಲ ಜನರಿಗೆ ಮತವು ಎನಿಪದು
ಖುಲ್ಲಕನಕನ ಮಾತಿಗೆಯತಿ ಮರಳುಗೊಂಡಿಹನು ||೨೧||

ಈ ತೆರದಿ ತಾವೆಲ್ಲ ವಿಬುಧರು
ಮಾತನಾಡಿದರೆಂಬೊ ವಾರ್ತೆಯ
ದೂರಪರಿಮುಖದಿಂದ ಕೇಳೀ ವ್ಯಾಸಮುನಿರಾಯ
ನೀತವಾದಪರೋಕ್ಷದಿಂದಲಿ
ಜಾತಜ್ಞಾನದಿ ಹರಿಯ ರೂಪವ
ಸೋತ್ತುಮಾದ್ವಿಜರೊಳಗೆ ಓರ್ವಗೆ ತೋರಿ ಮೋದಿಸಿದ ||೨೨||

ಸರ್ವಜನರಿಗೆ ಸಮ್ಮತಾಯಿತು
ಗುರುವರೇಣ್ಯನ ಮಹಿಮೆ ಪೊಗಳುತ
ಊರ್ವಿತಳದಲಿ ಖ್ಯಾತಿಮಾಡ್ದರು ಸರ್ವಸಜ್ಜನರು
ಶರ್ವನಾಲಯದಲ್ಲಿ ಸೂರ್ಯನ
ಪರ್ವಕಾಲದಿ ವಿಪ್ರಪುತ್ರನ
ದರ್ವಿಸರ್ಪವು ಕಚ್ಚಲಾಕ್ಷಣ ಮೃತಿಯನೆಯ್ದಿದನು ||೨೩||

ಮೃತಿಯನೆಯ್ದಿದ ವಿಪ್ರಪುತ್ರನ
ಮ್ರ‍ೃತಿಯ ತಾ ಪರಿಹರಿಸಿ ಶೀಘ್ರದಿ
ಪಿತಗೆ ನೀಡಿದ ಸರ್ವಜನರೂ ನೋಡುತರಲಾಗಾ
ವ್ರತಿವರೋತ್ತಮಮಹಿಮೆ ಜಗದೊಳ-
ಗತುಳವೆನುತಲಿ ಮುನಿಯ ಗುಣಗಳ
ತುತಿಸಿ ಪೊಗಳುತ ಪಾದಕಮಲಕೆ ನಮನಮಾಡಿದರು ||೨೪||

ವಿದ್ಯಾರಣ್ಯನ ವಾದದಲಿ ತಾ
ಗೆದ್ದ ಶ್ರೀ ಜೈತೀರ್ಥವಿರಚಿತ
ಶುದ್ಧ ಶ್ರೀಮನ್ಯಾಯಸತ್ಸುಧನಾಮಸತ್ಕೃತಿಗೆ
ಎದ್ದುತೋರುವ ಚಂದ್ರಿಕಾಭಿಧ
ಮುದ್ದುತಿಪ್ಪಣಿಸಹಿತ ಪಾಠವ
ಮಧ್ವರಾಯರ ಬಳಿಯೆ ಪೇಳುತಲಿದ್ದನಾಸ್ಥಳದಿ ||೨೫||

ಮತ್ತೆ ಪಂಪಾಕ್ಷೇತ್ರದಲಿ ತಾ-
ನಿತ್ಯನಿತ್ಯದಲಿ ಹರಿಯ ಭಜಿಸುತ
ಸತ್ಯಸಂಕಲ್ಪಾನುಸಾರದಿ ಕೃತ್ಯ ತಾಮಾಡಿ
ಉತ್ತಮೋತ್ತಮವೆನಿಪ ಸ್ಥಾನವು
ಹತ್ತಲಿಹ ಗಜಗಹ್ವರಾಭಿಧ
ಎತ್ತನೋಡಲು ತುಂಗನಧಿಯುಂಟದರ ಮಧ್ಯದಲಿ ||೨೬||

ಇಂದಿಗಿರುತಿಹವಲ್ಲಿ ಶುಭನವ
ಛಂದ ಬೃಂದಾವನಗಳೊಳಗೇ
ಸುಂದರಾತ್ಮಕವಾದ ವೄಂದಾವನದಿ ಮುನಿರಾಯಾ
ಪೊಂದಿಯಿಪ್ಪನು ಸತತ್ ತನ್ನನು
ವಂದಿಸೀಪರಿ ಭಜಿಪ ಜನರಿಗೆ
ಕುಂದದತೆ ಸರ್ವಾರ್ಥ ಕೊಡುತಲಿಯಿಪ್ಪ ನಮ್ಮಪ್ಪ ||೨೮||

ವ್ಯಾಸರಾಯರ ಮಹಿಮೆ ದಿನದಿನ
ಬ್ಯಾಸರಿಲ್ಲದೆ ಪಠಿಪ ಜನರಿಗೆ
ಕ್ಲೇಶ-ದೇಹಾಯಾಸ-ಘನತರ ದೋಷ-ಸಮನಿಸವು
ವಾಸುದೇವನ ಕರುಣವವನಲಿ
ಸೂಸಿತುಳಕೊದು ಸಂಶಯಾತಕೆ
ಕೀಶಗುರುಜಗನ್ನಾಥ ವಿಠಲನು ಪ್ರೀತನಾಗುವನು ||೨೯||

rAGavEndrara vijaya pELuve
rAGavEndrara karuna baladali
rAGavEndrara BakutarAdavaridanu kELuvudu

natipajanatatigamarapAdapa
nutipajanasuradhEnu kAmita
satatanIDuta dharaNesuravaranikaraparipAla
pratiyukANeno vratigaLarasane
natipe tavapada kamalayugmake
tutipe ennanu poreyo guruvara patitapAvanane ||1||

Ava paMpAkShEtradali hari
SEvakAgraNi vyAsamuniyU
kAmanayyana satata Bajisuta vAsamADiralU
dEvavaryare ondurUpadi
taveBUtaLadalli janisuta
kOvidAgrEsararuyenise meradarA sthaLadi ||2||

nAradare tA SrIpurandara
sUritanayane kanaka tA jaM-
BAriyE vaikunThadAsaru vyAsa prahlAda
Iru eraDI janaru sarvada
mAranayyana prEmapAtraru
sEreyiruvadarinde paMpA nAkakinnadhika ||3||

vyAsarAyara maThada madhyadi
vAsamADalu sakaladvijanU
dAsarAgiha sarvarindali saBeyu SOBisitu
vAsavana SuBasaBeyo mEN kama-
lAsanana sirivaijayantiyo
BAShisuvarige tOradandadi saBeyu tAnoppe ||4||

paMpakShEtravu dAsavaryara
guMpininda samEtavAgI
SaMPalApuradaMte tOrpadu sujanamanDalake
taMputungAnadiyavana tA
soMpinindali sarvajanamana
kiMpugANisi sarvasaMpadadinda SOBipudu ||5||

oMdudinadali vyAsamuniyu pu-
raMdarAryaru oMdugUDI
baMdusErdaru suKavanuNalU vijayaviThalanna
maMdirake balasAreyirutiha-
doMdu suMdarapulinamadhyadi
aMdu hariyaparOkShavAridhiyoLage muLugidaru ||6||

bandanallige kurubanobbanu
tanda kurigaLa biTTudUradi
nindu nODida ivara cariyava kanakanilladale
mandahAsavu kelavukAladi
mandarAgoru kelavukAladi
pondiribbaru appikoMDU mudadi rOdiparO ||7||

biddu pulinadi poraLi horaLoru
eddu kuNikuNIdADe cIroru
muddhu kRuShNana tOritOrura tAvu pADuvarO
SiddhasAdhana kanaka samayake
iddarillI lABavOgOdu
iddasthAnake pOgi Atana karevorArillA ||8||

suddhi kELuta ninta kurubanu
eddu kanakana karedu tOruve
idda sthaLavanu pELirendA munige besagonDA
eddu naDedAnadiya tIrada-
lidda kanakana bEga karadU
tandu tOruta vyAsamunigE biddu bEDidanu ||9||

dAri madhyadi tanage kanakanu
tOri pELida teradi kurubanu
saregaredU bEDikomDanu lABa koDirendu
dhIramunivara dAsavarare vi-
cAramADiri Enu nIDali
tOralolladu pariya nIvE pELiremagenda ||10||

kanaka pELida koTTavacanavu
manadi yOcisi koDuvadavagE
anujanAtanu nimage tiLivadi cinteyAkadake
enalu munivara manadi tiLidU
janitavAdAnandalABava
manasupUrvakayittu karuNava mADi tAporeda ||11||

j~jAnigaLu tAvangikarisalu
hInahelasagaLAda kAlaku
Enu Sramavadarinda bandaru biDade pAliparu
sAnurAgadi sakalajanaraBi-
mAnapUrvaka poredu Bakti-
j~jAnavittU hariya lOkadi suKava baDisuvaru ||12||

tIrthasnAnavamADi tAvA
tIrthaSuddhiya mADorallade
tIrthasnAnagaLindalavarige EnuPalavillA
pArthasArathipAda manadali
svArthavillade Bajanagaidu kRu-
tArtharAgI jagadi cariparu satata nirBayadi ||13||

budhara daruSanadinda pAtaka
sadadu BAShaNadinda mukutiya
padada dAriya tOri koDuvaru sadanadoLagiralu
odagisuvarU BAgya janarige
madavu Erida gajada teredali
padumanABana dAsaravarigasAdhyavEnihadO ||14||

yatikulOttamavyAsarAyara
mitiyuyillada mahimeyindali
patitapAmararellaru dhRutarAdudEnaridu
satatabiMbOpAsanocCrita
vitataj~jAnada viBavadindali
pratiyiyillade tAnu rAjipa sUryanandadali ||15||

mOdatIrthara SAstrajalanidhige
mOdadAyakasOmanO ra-
vAvidvArijahaMsa caMdira svamatasatkumuda-
kAda tA nija sujana kairava
bOdhakara tA candramanDala
pAdasEvakarenipa sujana cakOra candramanO ||16||

hariyarUpa samAdiyOgadi
nirutakANutalippa guruvara
horage kANuveniMba kAraNa kanakaginiteMdA
carana teradali ninna saMgaDa
tirugutippanu sarvakAladi
siriyaramaNana enage tOrisu mariyabEDeMdA ||17||

anda munivaravacana manasige
tandu kanakanu harige pELida
ondukAladi munige daruSana nIDu jagadISA
indirApati kELi vacanava
mandahAsavamADi nuDidanu
bandu SvAnasvarUpadindali munige tOruvenu ||18||

dEvatArcanemADi guruvara
sAvadhAnadi BakShya-BOjyava
kamanayyage nIDokAladi SvAna baralAga
kOvidAgraNi vyAsamuniyu
BAviSyAgale hariya mahimeya
dEvadEvane I vidhAnadi tOrda tanagendU ||19||

dRuShTiyindali kanDu munivara
thaTTanedukulatilakakRuShNana
biTTu tA jaDamUrti pojeya SunakadarcaneyA
muTTi Bajisida Bakutiyindali
koTTa tAnaivEdya tvaradali
taTTimangaLadArtimADi Siradi namisidanu ||20||

alli dvijavararidanu nODI
elliyillade cariya yativara-
ralli naDeyituyinnumundE maDiyu mailigeyu
illadAyitu nAyipUjeyu
ella janarige matavu enipadu
Kullakanakana mAtigeyati maraLugonDihanu ||21||

I teradi tAvella vibudharu
mAtanADidareMbo vArteya
dUraparimuKadinda kELI vyAsamunirAya
nItavAdaparOkShadindali
jAtaj~jAnadi hariya rUpava
sOttumAdvijaroLage Orvage tOri mOdisida ||22||

sarvajanarige sammatAyitu
guruvarENyana mahime pogaLuta
UrvitaLadali KyAtimADdaru sarvasajjanaru
SarvanAlayadalli sUryana
parvakAladi vipraputrana
darvisarpavu kaccalAkShaNa mRutiyaneydidanu ||23||

mRutiyaneydida vipraputrana
mr^Rutiya tA pariharisi SIGradi
pitage nIDida sarvajanarU nODutaralAgA
vrativarOttamamahime jagadoLa-
gatuLavenutali muniya guNagaLa
tutisi pogaLuta pAdakamalake namanamADidaru ||24||

vidyAraNyana vAdadali tA
gedda SrI jaitIrthaviracita
Suddha SrImanyAyasatsudhanAmasatkRutige
eddutOruva candrikABidha
muddutippaNisahita pAThava
madhvarAyara baLiye pELutaliddanAsthaLadi ||25||

matte paMpAkShEtradali tA-
nityanityadali hariya Bajisuta
satyasankalpAnusAradi kRutya tAmADi
uttamOttamavenipa sthAnavu
hattaliha gajagahvarABidha
ettanODalu tunganadhiyunTadara madhyadali ||26||

indigirutihavalli SuBanava
Canda bRundAvanagaLoLagE
sundarAtmakavAda vRUndAvanadi munirAyA
pondiyippanu satat tannanu
vandisIpari Bajipa janarige
kundadate sarvArtha koDutaliyippa nammappa ||28||

vyAsarAyara mahime dinadina
byAsarillade paThipa janarige
klESa-dEhAyAsa-Ganatara dOSha-samanisavu
vAsudEvana karuNavavanali
sUsituLakodu saMSayAtake
kISagurujagannAtha viThalanu prItanAguvanu ||29||