dasara padagalu · DEVOTIONAL · Dvaitha · gokulashtami · krishna · krishnajanmashtami · MADHWA · purandara dasaru

Pillangoviya cheluva

ಪಿಳ್ಳಂಗೋವಿಯ ಚೆಲುವ ಕೃಷ್ಣನ
ಎಲ್ಲಿ ನೋಡಿದಿರಿ ರಂಗನ ಎಲ್ಲಿ ನೋಡಿದಿರಿ                 ||ಪ||

ಎಲ್ಲಿ ನೋಡಿದರಲ್ಲಿ ತನಿಲ್ಲದಿಲ್ಲವೆಂದು ಬಲ್ಲ ಜಾಣರು     ||ಅ.ಪ||

ನಂದಗೋಪನ ಮಂದಿರಗಳ ಸಂದುಗೊಂದಿನಲಿ
ಚಂದ ಚಂದದ ಗೋಪಬಾಲರ ವೃಂದ್ವೃಂದದಲಿ
ಸುಂದರಾಂಗದ ಸುಂದರಿಯರ ಹಿಂದುಮುಂದಿನಲಿ
ಅಂದದಾಕಳ ಕಂದ ಕರುಗಳ ಮಂದೆ ಮಂದೆಯಲಿ        ||೧||

ಶ್ರೀ ಗುರುಕ್ತ ಸದಾ ಸುಮಂಗಳ ಯೋಗ ಯೋಗದಲಿ
ಅಗಮಾರ್ಥದೊಳಗೆ ಮಾಡುವ ಯಾಗ ಯಾಗದಲಿ
ಶ್ರೀಗೆ ಭಾಗ್ಯನಾಗಿ ವರ್ತಿಪ ಭೋಗ ಭೋಗದಲಿ
ಭಾಗವತರು ಸದಾ ಬಾಗಿ ಪಡುವ ರಾಗ ರಾಗದಲಿ        ||೨||

ಈ ಚರಾಚರದೊಳಗೆ ಜನಂಗಳಾಚೆ ಈಚೆಯಲಿ
ಖೇಚರೇಂದ್ರನ ಸುತನ ರಥದ ಚೌಕ ಪೀಠದಲಿ
ನಾಚದೆ ಮಾಧವ ಎಂಬ ಭಕ್ತರ ವಾಚಕಂಗಳಲಿ
ವೀಚುಕೊಂಡದ ಪುರಂದರವಿಠಲನ ಲೋಚನಾಗ್ರದಲಿ    ||೩||

 pillangoviya cheluva krsnana elli nodidiri rangana elli nodidiri
elli nodidaralli tanilla dillavendu balla janaru

 nandagopana mandiragala sandugondinali
chanda chandada gopa balara vrnda vrnadadali
sundarangada sundariyara hindu mundinali
andadakala kanda karugala manda mandeyali||1||

shri gurukta sada sumangala yoga yogadali
agamartadolage maduva yaga yagadali
Shrige bhagyanagi vartipa bhoga bhogadali
bhagavataru sada bagi paduva raga ragadali||2||

ee characharadolage janangala Ache Icheyali
kesarendrana sutana rathada chauka pithadali
nacade madhava emba bhaktara vacakangalali
vicukondada purandara vittalana locanagradali ||3||

dasara padagalu · DEVOTIONAL · gokulashtami · krishna · krishnajanmashtami · MADHWA · purandara dasaru

tholu tholu tholu ranga

ತೋಳು ತೋಳು ತೋಳು ಕೃಷ್ಣ ತೋಳನ್ನಾಡೈ
ನೀಲಮೇಘಶ್ಯಾಮ ಕೃಷ್ಣ ತೋಳನ್ನಾಡೈ

ಗಲಿಕೆಂಬಂದುಗೆ ಉಲಿಯುವ ಗೆಜ್ಜೆಯ ತೋಳನ್ನಾಡೈ
ಅಲುಗುವ ಅರಳೆಲೆ ಮಾಗಾಯ್ಮಿನುಗಲು ತೋಳನ್ನಾಡೈ
ನೆಲುವು ನಿಲುಕದೆಂದೊರಳ ತಂದಿಡುವನೆ ತೋಳನ್ನಾಡೈ
ಚೆಲುವ ಮಕ್ಕಳ ಮಾಣಿಕ್ಯವೆ ನೀ ತೋಳನ್ನಾಡೈ

ದಟ್ಟಡಿಯಿಡುತಲಿ ಬೆಣ್ಣೆಯ ಮೆಲುವನೆ ತೋಳನ್ನಾಡೈ
ಕಟ್ಟಿದ ಕರಡೆಯ ಕರುವೆಂದೆಳೆವನೆ ತೋಳನ್ನಾಡೈ
ಬೊಟ್ಟಿನಲ್ಲಿ ತಾಯ್ಗಣಕಿಸಿ ನಗುವನೆ ತೋಳನ್ನಾಡೈ
ಬಟ್ಟಲ ಹಾಲನು ಕುಡಿದು ಕುಣಿವನೇ ತೋಳನ್ನಾಡೈ

ಅಂಬೆಗಾಲಿಲೊಂದೊರಳನ್ನೆಳೆವನೆ ತೋಳನ್ನಾಡೈ
ತುಂಬಿದ ಬಂಡಿಯ ಮುರಿಯಲೊದ್ದವನೆ ತೋಳನ್ನಾಡೈ
ಕಂಬದಿಂದಲವತರಿಸಿದವನೆ ನೀ ತೋಳನ್ನಾಡೈ
ನಂಬಿದವರನು ಹೊರೆವ ಕೃಷ್ಣ ತೋಳನ್ನಾಡೈ

ಕಾಲಕೂಟದ ವಿಷವ ಕಲಕಿದ ತೋಳನ್ನಾಡೈ
ಕಾಳಿಂಗನ ಹೆಡೆಯನು ತುಳಿದ ತೋಳನ್ನಾಡೈ
ಕಾಳೆಗದಲಿ ದಶಕಂಠನ ಮಡುಹಿದ ತೋಳನ್ನಾಡೈ
ಶಾಲಕ ವೈರಿಯೆ ಕರುಣಿಗಳರಸನೆ ತೋಳನ್ನಾಡೈ

ನಖದಿಂದಲಿ ಹಿರಣ್ಯಕನನು ಸೀಳಿದ ತೋಳನ್ನಾಡೈ
ಸುಖವನಿತ್ತು ಪ್ರಹ್ಲಾದನ ಕಾಯ್ಡವ ತೋಳನ್ನಾಡೈ
ವಿಕಳಗೊಳಿಸಿದೆ ಗೋಪಿಯರೆಲ್ಲರ ತೋಳನ್ನಾಡೈ
ರುಕುಮಿಣಿಪತಿ ಸಿರಿಪುರಂದರವಿಟ್ಠಲ ತೋಳನ್ನಾಡೈ

Tholu tholu tholu ranga tholannadai

Nila varnada bala krishnane tholannadai

Huluguraralelle magaigalanitta tholannadai
Swami galiru galiruemba gejjegalinda naliyuta tholanadai||1||

Niluvige silukada/nilukhada oralatanditta tholanadai
Swami cheluva makkala muttu manikyane tholannadai||2||

Putaniyembavala asuvane hiridavane tholanada
Swami mateya pitana anugana maduhida tholanadai||3||

Matige shishupalana shiravanu kadida tholanadai
Swami shree tulasiya priya nitya vinoda tholanadai||4||

Nakhadinda hiranyakana udarava seelida tholanadai
Swami sukhavanittu prahladana kayda tholannadai||5||

Vikhalita ghalisida gopiyarellara tholannadai
Swami sukhatheerthara pati purandaravittalane tholanadai||6||

 

dasara padagalu · gokulashtami · krishna · krishnajanmashtami · MADHWA · purandara dasaru

Enu saviyo

ಏನು ಸವಿಯೋ ನಿನ್ನ ಕೊಳಲು
ಗೊಲ್ಲ ಮಾನಿನಿಯರಿಗೆಲ್ಲ ಮಾಡಿತು ಮರುಳು ||ಪ.||

ಬರೆಗಡಿಗೆಯ ಕಡೆಯುವರೋ
ಗೋ-ಕರು ಎಂದು ಗೂಳಿಯ ಬಿಟ್ಟು ಎತ್ತಾನ್ಹಿಂಡುವರೋ
ತಿರುಗಿ ಕನ್ನಡಿಯ ನೋಡುವರೋ
ಹಿರಿಹಿರಿ ಹಿಗ್ಗಿ ಕಣ್ಣಿಗೆ ಕುಂಕುಮ ತೀಡುವರೋ ||೧|

ಮಕ್ಕಳ ಬಡಿದಳಿಸುವರೋ
ಬೆಕ್ಕು ಮರಿಯಾನೆತ್ತಿ ಮುದ್ದಾನಿಕ್ಕುವರೋ
ಉಕ್ಕುವ ಹಾಲು ಲೆಕ್ಕಿಸರೋ
ಬೋರಲಿಕ್ಕಿದ ಮಡಿಕೆಗೆ ನೀರ ಚೆಲ್ಲುವರೋ ||೨||

ಆ ನಾದಾ ಇನ್ನೊಮ್ಮೆ ಮಾಡೋ
ನಿನ್ನಾಧೀನವಾಗಿಹುದಯ್ಯ ಈ ಜಗ ನೋಡೋ
ಭಕ್ತವತ್ಸಲ ದಯ ಮಾಡೋ
ಪುರಂದರವಿಠಲ ನೀ ಎನ್ನ ಕೈಯ ಬಿಡದಿರೋ ||೩||

Enu saviyo ninna kolalu
golla maniniyarigella maditu marulu ||pa.||

Baregadigeya kadeyuvaro
go-karu emdu guliya bittu ettan hinduvaro
tirugi kannadiya noduvaro
hirihiri higgi kannige kumkuma tiduvaro ||1|

Makkala badidalisuvaro
bekku mariyanetti muddanikkuvaro
ukkuva halu lekkisaro
boralikkida madikege nira celluvaro ||2||

Aa nada innomme mado
ninnadhinavagihudayya I jaga nodo
bhaktavatsala daya mado
purandaravithala ni enna kaiya bidadiro ||3||

 

 

dasara padagalu · DEVOTIONAL · gokulashtami · krishna · krishnajanmashtami · MADHWA

Gopi kele ninna maga

ಗೋಪಿ ಕೇಳ್ ನಿನ್ನ ಮಗ ಜಾರ ಇವ ಚೋರ ಸುಕುಮಾರ || ಪ ||

ಮುದದಿ ಮುಕುಂದ ಸದನಕಾ ಬಂದಾ
ದಧಿಯ ಮೀಸಲು ಬೆಣ್ಣೆ ತಿಂದ ನಿನ್ನಾ ಕಂದಾ ಆನಂದಾ

ಮಾರನ ಪಿತ ತಾ ಮನೆಯೊಳು ಪೊಕ್ಕ
ಹಿಡಿಯ ಹೋದರೆ ಕೈಗೆ ಸಿಕ್ಕ ನೋಡಿ ನಕ್ಕ ಭಾರಿ ಠಕ್ಕ || 1 ||

ಹರೆಯದ ಪೋರಿ ಜಗದ ಕಣ್ಗೋರಿ(?)
ಭರದಿಂದ ಸೀರೆಯ ಸೆಳೆದಾ ಕರವ ಪಿಡಿದಾ ಮಾನ ಕಳೆದಾ || 2 ||

ಬಹಳ ದಿನವಾಯ್ತು ಪೇಳುವುದ್ಹ್ಯಾಂಗೆ
ಗೋಪಾಲನ ಮನಸ್ಸೊಮ್ಮೆ ಹಾಂಗೆ ಒಮ್ಮೆ ಹೀಂಗೆ || 3 ||

ರಾಧೆಯ ಮನದ ಮೋದ ಮುಕುಂದ
ಶ್ರೀದವಿಠಲನಾಟ ಚೆಂದ ನಯನಾನಂದ ಆನಂದ || 4 ||

Gopi kele ninna maga jaara chora sukumara||

Mudhadh mukundha sadhanakke banda
dhathiya meesalu benne thindha
ninna kandha … anandha ||1||

maranna pithana maneyolu pokka
hidiya podhare kaige sikka
nodi nakka … paari takka ||2||

baaladhina vaithu helu vadh yange
gopala manasomme haange
omme heenge bicchi helali hyaange||2||

raadheya manadha modha mukundha namma
sridha vittalana naata chandha
aada chandha nayana aanandha||3||

dasara padagalu · DEVOTIONAL · gokulashtami · krishna · krishnajanmashtami · MADHWA · sripadarajaru

Baaro namma manege gopala krishna

ಬಾರೋ ನಮ್ಮ ಮನೆಗೆ ಗೋಪಾಲಕೃಷ್ಣ||pa||

ಗೊಲ್ಲ ಬಾಲಕರನು ನಿಲ್ಲಿಸಿ ಹೆಗಲೇರಿ ಗುಲ್ಲು ಮಾಡದೆ ಮೊಸರೆಲ್ಲ ಸವಿದ ಕೃಷ್ಣ

ಕಸ್ತೂರಿ ತಿಲಕವ ಶಿಸ್ತಾಗಿ ಫಣೆಯಲಿಟ್ಟು ಮಸ್ತಾಗಿ ಕುಣಿವ ಪರವಸ್ತು ಕಾಣೇನೆಂದು

ಮುಜ್ಜಗವನೆಲ್ಲ ಬೊಜ್ಜೆಯೊಳಗೆಯಿಟ್ಟು ಗೆಜ್ಜೆಯ ಕಟ್ಟಿ ತಪ್ಪು ಹೆಜ್ಜೆಯನಿಕ್ಕುತ

ನಾರಿಯರು ಬಿಚ್ಚಿಟ್ಟ ಸೀರೆಗಳನೊಯ್ದು ಮೇರೆಯಿಲ್ಲದೆ ಕೈಯ ತೋರೆಂದ ಶ್ರೀ ಕೃಷ್ಣ

ಅಂಗನೆಯರ ವ್ರತ ಭಂಗವ ಮಾಡಿದ ರಂಗ ವಿಟ್ಠಲ ಭವಭಂಗ ಪರಿಹರಿಸೋ

Baaro namma manage gopala krishna||

golla balakaranu nillisi pegaleri
gullu madadhe mosarella kudidha krishna||1||

moorjagavanella pojjiyolage ittu
gejjeya katti thappe hejjaya nikkutha||2||

anganeyara vrata bangava madidha
ranga vittala bava bangava maadutha||3||

dasara padagalu · DEVOTIONAL · gokulashtami · krishna · krishnajanmashtami · MADHWA · Vijaya dasaru

De De adyaane

ಡೀ ಡೀ ಅಡೋನೆ ರಂಗ ಡೀ ಡೀ ಆಡೋನೆ |
ಓಡಿ ಓಡಿ ಬಂದು ತಲಿಗೆ ನೀ ಡೀ ಡೀ ಡೀ ಎಂದು ||pa||

ಮರಕತ ನವರತ್ನ ವಜ್ರ |
ಹರಳು ತೆತ್ತಿಸಿದ ದ್ಯುಮಣಿ ||
ಕಿರಣ ಮುಕುಟ ಧರಿಸಿದ ಶಿರದಲಿ |
ಸರಿ ಸರಿ ಸರಿ ಸರಿ ಹಾಯಿದು ||1||

ಚಂದ್ರಶೇಖರ ಹಂಸವಾಹನ|
ಇಂದ್ರಾದ್ಯರಾಕಾಶದಲಿ ಧುಂ ಧುಂ ||
ಧುಂ ಧುಂ ದುಂದುಭಿ ನುಡಿಸೆ |
ಬಂದೆ ಇಕ್ಕೋ ಬಂದೆ ಬಂದೆನುತ ||2||

ಪಿಂತಿರುಗಿ ಪೋಗಿ ನೀನು |
ಅಂತರಿಸಿ ದೂರದಿಂದ ||
ನಿಂತು ವಿಜಯವಿಠ್ಠಲರೇಯಾ |
ಇತ್ತಿಂ ತ್ತಿಂ ತ್ತಿಂ ತ್ತಿಂ ತ್ತಿಂ ತ್ತೆನುತಲಿ ||3||

De de adyaane ranga| de de adyaane|
Odi odi bandhu galige de de de de de de ditthu||

magara navarathna kundala haralu katthisidha kachidha
mukuta siradhalli dharisi siri siri siriyendhu||1||

chandrasekara hamsa vahana indraadhyar aakashadhalli
dhum dhum dhum dhum thudisi ikko bandhe bandhenutha||2||

thirugi thirugi bandhu neenu karadhindha andharisi
dheera vijaya vittala reya dheem dheem dheem dheemenutha||3||

dasara padagalu · DEVOTIONAL · gokulashtami · krishna · krishnajanmashtami · MADHWA · purandara dasaru

Yenu marulatheyamma

ಏನು ಮರುಳಾದೆಮ್ಮ ಎಲೆ ರುಕ್ಮಿಣಿ

ಹೀನಕುಲ ಗೊಲ್ಲ ಶ್ರೀ ಗೋಪಾಲಕೃಷ್ಣಗೆ
ಹಾಸಿಕಿಲ್ಲದೆ ಹಾವಿನ ಮೇಲೆ ಒರಗಿದವ
ಹೇಸಿಕಿಲ್ಲದೆ ಕರಡಿಯ ಕೂಡಿದ
ಗ್ರಾಸಕಿಲ್ಲದೆ ತೊತ್ತಿನ ಮಗನ ಮನೆಲುಂಡ
ದೋಷಕಂಜದೆ ಮಾವನ ಸಿರವ ತರಿದವಗೆ
ಕುಂಡಗೋಳಕರ ಮನೆ ಕುಲದೈವವೆನಿಸಿದಗೆ
ಮಂಡೆ ಬೋಳರ ಮನಕೆ ಮನದೈವವ
ಹಿಂಡು ಗೊಲ್ಲರ ಮನೆ ಹಿರಿಯನೆಂದೆನಿಸುವ
ಭಂಡಾಟದ ಗೊಲ್ಲ ಈ ಬಳಗದೊಳಗೆಲ್ಲ
ಒಬ್ಬರಲ್ಲಿ ಹುಟ್ಟಿ ಒಬ್ಬರಲ್ಲಿ ಬೆಳೆದ
ಒಬ್ಬರಿಗೆ ಮಗನಲ್ಲ ಜಗದೊಳಗೆಲ್ಲ
ಅಬ್ಬರದ ದೈವ ಶ್ರೀ ಪುರಂದರವಿಟ್ಠಲನ
ಉಬ್ಬುಬ್ಬಿ ಮದುವ್ಯಾದೆ ಉತ್ಸಾಹದಿಂದ

Yenu Marulatheyama ele rukmani||

Heenakula kolla sri gopala krishnanige ||

Hasigilladha haavina mele oragidhava
hesikilladhe karaidya kooditha
kraasagilladhe thotthina magana maneloonta
dhosaganjane mavena sira tharidhavage||1||

kundakolakara mane kula dhaiva venisidhage
mande polara manage manaithavava
hindu kollara maneya hariya nendhenisuva
pandadadha kolla ee balagatholagella ||2||

obbaralli hutti obbaralli beledha
obbarige maganalla jagothalagella
apparatha deiva sri purandara vittalana
ubbuuppi madhu vyadhe uthsahadhindha||3||

dasara padagalu · DEVOTIONAL · gokulashtami · krishna · krishnajanmashtami · MADHWA · vyasathathvagnaru · vyasathathvagnya thirtharu

Bandakrishna chanda

ಬಂದ ಕೃಷ್ಣ ಚಂದದಿಂದ ಬಂದ ನೋಡೆ
ಗೋಪ ವೃಂದದಿಂದ ನಂದಿಸುತ ಬಂಡ ನೋಡೆ ।।

ಗೋವ ಮೇವ ನೀವ ದೇವ ಬಂದ ನೋಡೆ
ದೇವತಾ ವಾದ್ಯಗಳಿಂದ ಬಂದ ನೋಡೆ ।।

ಪಾಪಪೋಪ ಕೋಪ ರೂಪ ಬಂದ ನೋಡೆ
ತಾಪಲೋಪ ಲೇಪ ಲೋಪ ಬಂದ ನೋಡೆ ।।

ಭೂಸುರ ಸಖ ಸೂಸುತ ಬಂದ ನೋಡೆ
ವಾಸುದೇವ ವಿಠಲ ತಾ ಬಂದ ನೋಡೆ ।।

Bandakrishna Chandadinda banda node|

gopavrundadinda nandisuta banda node |
Gova meva neeva banda node ||1||

Devata vadyagalinda banda node |
Papa popa gopa rupa banda node ||2||

tapa lopa lepa lopa banda node |
vasudeva vittala ta banda node ||3||

dasara padagalu · DEVOTIONAL · Dvaitha · gokulashtami · krishna · krishnajanmashtami · MADHWA · vyasarayaru

Krishna ne begane baaro

ಕೃಷ್ಣ ನೀ ಬೇಗನೇ ಬಾರೋ |ಪ|
ಬೇಗನೆ ಬಾರೋ ಮುಖವನ್ನು ತೋರೋ|ಅ.ಪ|

ಕಾಲಾಲಂದುಗೆ ಗೆಜ್ಜೆ ನೀಲದ ಭಾವುಳಿ
ನೀಲವರ್ಣನೆ ನಾಟ್ಯವಾಡುತ್ತ ಬಾರೋ|

ಉಡಿಯಲ್ಲಿ ಉಡುಗೆಜ್ಜೆ ಬೆರಳಲ್ಲಿ ಉಂಗುರ
ಕೊರಳಲ್ಲಿ ಹಾಕಿದ ವೈಜಯಂತಿಮಾಲ|

ತಾಯಿಗೆ ಬಾಯಲ್ಲಿ ಜಗವನ್ನು ತೋರಿದ
ಜಗದೋದ್ಧಾರಕ ನಮ್ಮ ಉಡುಪಿ ಶ್ರೀ ಕೃಷ್ಣ|

Krishna nee begane baaro
Begane baaro mukavannu toro||

Kaalaal landhige gejje niladha baavuli
Nilavarnane naatya vaaduta baaro||

Odiyalli Odigejje beralalli ongura
Koralalli haakida vajayantimaale||1||

Kaasi peetambara kaiyalli kolalu
Pushida shreegandha mayaolu gamma||2||

Taayige baayalli jagavannu torida
Jagadhodhaaraka namma udupi shree Krishna ||3||