ಚಂದ್ರಚೂಡ ಶಿವ ಶಂಕರ ಪಾರ್ವತಿ ರಮಣನೆ ನಿನಗೆ ನಮೋ ನಮೋ ||ಪ||
ಸುಂದರ ಮೃಗದರ ಪಿನಾಕಧರಹರ ಗಂಗಾಧರ ಶಿರ ಗಜ ಚರ್ಮಾಂಬರಧರ ||ಅ.ಪ||
ನಂದಿ ವಾಹನಾನಂದಿಂದ ಮೂರ್ಜಗದಿ ಮೆರೆವನು ನೀನೆ
ಅಂದು ಅಮೃತ ಘಟದಿಂದುದಿಸಿದ ವಿಷ ತಂದು ಭುಜಿಸಿದವನು ನೀನೆ
ಕಂದರ್ಪನ ಕ್ರೋಧದಿಂದ ಕಣ್ತೆರದು ಕೊಂದ ಉಗ್ರನು ನೀನೆ
ಇಂದಿರೇಶ ಶ್ರೀ ರಾಮನ ಪಾದವ ಚಂದದಿ ಪೋಗಳುವನು ನೀನೆ ||೧||
ಬಾಲ ಮೃಕಂಡನ ಕಾಲನು ಎಳೆವಾಗ ಪಲಿಸಿದವನು ನೀನೆ
ಕಾಲಕೂಟ ವಿಷವ ಪಾನ ಮಾಡಿದ ನೀಲಕಂಠ ನೀನೆ
ವಾಲಯದಿ ಕಪಾಲವ ಪಿಡಿದು ಭಿಕ್ಷೆ ಬೇಡೋ ದಿಗಂಬರನು ನೀನೆ
ಜಾಲ ಮಾಡುವ ಗೋಪಾಲನೆಂಬ ಪೆಣ್ಣಿಗೆ ಮರುಳಾದವನು ನೀನೆ ||೨||
ಧರೆಗೆ ದಕ್ಷಿಣ ಕಾವೇರಿ ತೀರ ಕುಂಭಾಪುರ ನಿವಾಸನು ನೀನೆ
ಕರದಲಿ ವೀಣೆಯ ಗಾನವ ಮಾಡುವ ನಮ್ಮ ಉರಗ ಭೂಷಣನು
ಕೊರಳಲಿ ಭಸ್ಮ ರುದ್ರಾಕ್ಷಿ ಧರಿಸಿದ ಪರಮ ವೈಷ್ಣವನು ನೀನೆ
ಗರುಡ ಗಮನ ಶ್ರೀ ಪುರಂದರ ವಿಠಲಗೆ ಪ್ರಾಣ ಪ್ರಿಯನು ನೀನೆ ||೩||
Chandracuda sivasankara parvati ramanane ninage namo namo ||pa||
Sundara mrugadhara pinaaka dhanukara ganga Sira ||
Gajacharmambaradharaa nandivahananandadinda mujagadi merave nine
Andu amruta ghatadindudisida visha tandu bhujisidava nine
Kandarpana krodhadimda kanteredu konda ugranu nine
Indiresa Sree ramana paadava chandadi pogaluva neene ||1||
Balamrukandajana kaalanu elevaaga paalisidava nine
Kalakutava paanamadida nilakanthanu nine
Valayadi kapala pididu bhikshe bedo digambara nine
Jala madida gopalanenba hennige maruladava nine ||2||
Dharege dakshina kaveritira kumbhapuravasanu nine
Karadali veeneya nudisuva namma uragabhushana neene
Koralolu bhasma rudrakshiya dharisida parama vaishnava nine
Garudagamana siri purandaravithalage pranapriyanu neene ||3||
ಶ್ರೀರಾಮ ಶ್ರೀರಾಮ ಶ್ರೀರಾಮ
ಶ್ರೀರಾಮಾ ಪದ ಪ್ರೀತ ಪ್ರಖ್ಯಾತ
ಪ್ರಖ್ಯಾತ ಪ್ರಖ್ಯಾತ ವರಧೃತ ತ್ರಿಜಗ ಖ್ಯಾತ ಅತಿ ಮಹಾರಥ
ಯದುಪತಿ ಪ್ರೀತಾ ಸುರರ ಸೇವಿತಾ ಗರಳಭುಂಜಿತಾ
ಸತಿಗೆ ಪೂವಿತ್ತ ಭುಜಬಲಯುತಾ ಧೀಮಂತಾ
ಧೀಮಂತಾ ಧೀಮಂತಾ ಧೀಮಂತಾ ಭಾರತೀಕಾಂತಾ
ದುರಳ ಮಣಿಮಂತಾ ಸೆಣಸಿಬರೆ ನಿಂತಾ
ಹರಣ ಮಾಡಿ ಪಂಥಗೆಲಿದು ತಾ ನಿಂದಾ
ಪ್ರಣಯನಾಗಿ ನಿಂತಾ ಕೀಚಕನ ಧ್ವಾಂತದೊಳು ತಾ
ನೋಡಿ ತಾ ನೋಡಿ ತಾ ನೋಡಿ ತಾ ನೋಡಿ ಅವನೊಳು
ಕೂಡಿ ಕೈಯ ಹಿಡಿದಾಡಿ ಕೇಳಿಯೊಳು ಕೂಡಿ ಉರದಿಶಿರ
ನೀಡಿ ಮಾಂಸಮುದ್ದೆಮಾಡಿ
ನೆಲಕೆ ಈಡಾಡಿ ನಲಿದು ತೋರಿದಾ ||2||
ಆನಂದ ಆನಂದ ಆನಂದ ಆನಂದ ತಾ ನಿಂದ ಶ್ರೀಮ
ದಾನಂದ ಆನಂದ ಬುಧಜನಕ್ಲೇಶದಿಹ ಮನ ನೋಡಿ ಜೀ
ವನ ಸೂತ್ರ ವ್ಯಾಖ್ಯಾನ ಮಾಡಿ ಪಾವನ ವಾದಿಭಂಜನ
ಬಾದರಾಯಣ ಪ್ರೀತಿಪಾತ್ರ ಏಕಾಂತ ಭಕ್ತ ತಾನಿತ್ತ
ತಾನಿತ್ತ ತಾನಿತ್ತ ತಾನಿತ್ತ ಜಗಕತಿಮೋದ ಶಾಸ್ತ್ರ
ಸನ್ಮುದ ತೋರಿಸರ್ವದ ಜೀವರು ತ್ರಿವಿಧ ತರತಮಭೇದ
ಜಗ ಸತ್ಯ ಜಗವು ಸತ್ಯ ಜೀವರು ನಿತ್ಯ ಕಾರಣ ನಿತ್ಯ
ಕಾರ್ಯ ಅನಿತ್ಯ ಪ್ರಕೃತಿ ಸತ್ಯ ಸುಗುಣವೆ ನಿತ್ಯ
ಭೇದವು ನಿತ್ಯ ದ್ವೈತವು ಸತ್ಯವೆಂದ ಶ್ರೀವೇಂಕಟೇಶನ ನಿಜದೂತ ||3||
ಸೂತ್ರನಾಮಕ ದೇವ | ಸ್ತೋತ್ರ ಮಾಳ್ಪರ ಕಾವ |
ಚಿತ್ರ ಮಹಿಮರ ಕಾವ ವಿ | ಚಿತ್ರ ಶರೀರ ಸ |
ತ್ಪಾತ್ರನೆ ಸುಮನಸದಲಿಗರಳ ಹೇಮ |
ಪಾತ್ರಿಯೊಳಗೆ ಸವಿದು ಶ್ರೀಪತಿಯ ಶತ |
ಪತ್ರ ಪಾದವ ಕಾ | ಲತ್ರಯ ನೆನೆಸುವನೆ ||
e್ಞÁನ ಭಕುತಿ ವೈರಾಗ್ಯ ನೀ ನೀಯೋ
ಇದೆ ಭಾಗ್ಯ ನಾನಾವದೂ ಒಲ್ಲೆ |
ಆ ನಾಮದ ಸೊಲ್ಲೆ ಮೇಣು ಪಾಲಿಪುದು ಮುಖ್ಯ |
ಪ್ರಾಣಪಾವನ ಲೀಲ | ದಾನವರ ಕುಲಕಾಲ |
ಏನೇನು ಮಾಳ್ಪಾಧಿಷ್ಠಾನದಲಿ |
ನೀನೇ ನಾನೆಲ್ಲಿ ಎಣೆಗಾಣೆ||
ವಂದಿಸುವೆ ಜಗದ್ಗುರುವೆ | ಎಂದು ನಿನ್ನನು ಕರೆವೆ |
ಮುಂದೆ ಈ ಜನ್ಮವು | ಹಿಂದೆ ಮಾಡಿ ನೇಮವು |
ಪೊಂದಿಸು ಮೇಲುಗತಿ | ತಂದೆ ತಾಯಿ ಮಿಕ್ಕ |
ಬಂಧು ಬಳಗವನೇಕ ಅಂದವೆಲ್ಲವು ನಿತ್ಯ |
ವೆಂದೆ ಬಂದೆ ಸತ್ಯ ಕುಂದದೆ ಉದ್ಧರಿಸು ||
ರಾಮಚಂದ್ರನ ದೂತ | ಸೌಮಿತ್ರಿ ಪ್ರಾಣ | ದಾತ |
ರೋಮ ರೋಮ ಕೋಟಿ ಕಾಮ ಸಂಹಾರನೇ |
ಭೂಮಂಡಲಧರನೆ ಭೀಮಶೈನ |
ಭೀಮ ರಿಪು ಗಂಟಲಗಾಣ | ತಾಮಸ e್ಞÁನವಳಿ |
ನೀ ಮುಂದೆ ಬಂದು ಸುಳಿ | ಶ್ರೀ ಮದಾನಂದತೀರ್ಥ||
ಶ್ರೀ ಸಪುತ ಕುಜನರ | ಭಾಷ್ಯ ಮುರಿದ ಧೀರ |
ಭಾಸುರ ಕೀರ್ತಿ ಹಾರಾ | ದೋಷರಾಶಿ ದೂರ |
ಹ್ರಾಸವಿಲ್ಲದ ಮಹಿಮ | ಶ್ರೀಶ ವಿಜಯವಿಠ್ಠಲನ್ನ |
ದಾಸರೊಳಧಿಕ ನಿನ್ನ ಲೇಶವಾದರು ಬಿಡೆ |
ನಾ ಸರ್ವಥಾ ಕರೆ | ತೋಷದಲಿಡುವುದೆನ್ನ ||