dasara padagalu · MADHWA · srinivasa · Vijaya dasaru

Hadinalku lokavanaluva tandege

ಹದಿನಾಲ್ಕು ಲೋಕವನಾಳುವ ತಂದೆಗೆ |
ಮುದದಿಂದ ನಾನೊಬ್ಬ ಭಾರವಾದೆನೆ ||pa||

ಸುರಗಿರಿಯು ಶರಧಿಯೊಳು ಕಡೆವಾಗ ಮುಣಗಲಾ ||
ಭರದಿಂದ ಪೋಗಿ ಚೆನ್ನಾಂತು ಪೊತ್ತೆ ||
ಧರಣಿಯು ಮೊರೆಯಿಡಲು ತೆರಳಲ್ಲಿ ಬಂದು |
ಭೂತರುಣಿಯನು ಸೆರೆಬಡಿಸಿ ಉಳುಹಿಕೊಳ್ಳಲಿಲ್ಲವೆ ||1||

ಸುರಪತಿ ಮುನಿದೇಳು ಹಗಲಿರುಳು ಮಳೆಗರೆಯೆ |
ಬೆರಳಲಿ ಧರಿಸಿ ಕಾಯ್ದು ನಿಜದೆ ||
ವರಮುನಿ ಪಸವನು ಬೇಡಲಾಗಿ ಬೆದರಿ ನರ- |
ನರಸಿ ನಿನ್ನ ಕರೆಯೆ ಕರುಣದಲಿ ಪಾಲಿಸಿದೆ ||2||

ಜಲಜಾಕ್ಷ ಬೆಟ್ಟವನು ಪೊತ್ತು ಬಳಲಿದಾಗ |
ಸಲಹಬೇಕೆಂದು ಬೇಸರಿಸಲಿಲ್ಲಾ ||
ಸುಲಭದಲಿ ಶೇಷಾಚಲನಾಗಿಪ್ಪ |
ಒಲಿದೆನ್ನ ಸಂರಕ್ಷಿಸೊ ವಿಜಯವಿಠ್ಠಲನೆ ||3||

Hadinalku lokavanaluva tandege |
Mudadinda nanobba baravadene | pa |

Suragiriyu saradhiyolu kadevaga munugalu |
Baradinda pogi bennantu potte |
Dharaniyu moreyidalu teralalli bandu |
Butaruniyanu serebadisi uluhikollalillave | 1 |

Surapatimunidelu hagalirulu malegareye |
Beralalli dharisi turugala kayde |
Varamuni asanavanu bedalu bedari nara |
Narasi ninna kareye karunadali paliside | 2 |

Jalajaksha bettavanu pottu balalidaga |
Salahabekendu besarisalilla |
Sulabadali seshacalavasanagippa |
Olidenna rakshiso vijayavithalane | 3

dasara padagalu · MADHWA · srinivasa · Vijaya dasaru

Venkatachalanilaya enna odeya |

ವೆಂಕಟಾಚಲನಿಲಯಾ ಎನ್ನ ಒಡೆಯ ||pa||

ವೆಂಕಟಾಚಲನಿಲಯಾ ವಿಧಾತೃಸಂತರೊಡೆಯಾ |
ಪಂಕಜಮುಖಿ ರಮಣ ಪಾವನಚರಣಾ||a.pa||

ಉದಯವಾಗದ ಮುನ್ನ ಉದರ ಪೋಷಣೆ ಚಿಂತೆ |
ಅದರ ಮೇಲೆ ಧಾನ್ಯ ಧನದ ಚಿಂತೆ ||
ಮದನ ಯೌವನದ ಚಿಂತೆ ಮತ್ತೆ ಸತ್ವದ ಚಿಂತೆ |
ಹೃದಯದಲಿ ನಿಮ್ಮ ಚಿಂತೆಯನು ಮಾಡದಲೆ ಕೆಟ್ಟೆ||1||

ಮಂದಗಮನೆಯರಾಶೆ ಮೇದಿನಿ ಆಳುವ ಆಶೆ |
ನಂದನರ ಆಶೆ ನಾನಾ ಆಶೆಯು ||
ಬಂಧುಬಳಗದ ಆಶೆ ಭಾಗ್ಯವುಳ್ಳವನಾಶೆ |
ಒಂದು ದಿನ ನಿಮ್ಮಾಶೆಯನು ಮಾಡದಲೆ ಕೆಟ್ಟಿ ||2||

ಎದುರುಯಿಲ್ಲವೆಂಬೊ ಗರ್ವ ಎದೆಯ ಬಿಗುವಿನ ಗರ್ವ |
ವದನನಿಷ್ಠುರ ಗರ್ವ ವಿದ್ಯ ಗರ್ವವು ||
ಉದಧಿಶಯನ ನಮ್ಮ ವಿಜಯವಿಠ್ಠಲರೇಯಾ |
ಮದ ಗರ್ವದಿಂದ ನಿನ್ನ ನೆನಹು ಮಾಡದೆ ಕೆಟ್ಟೆ||3||

Venkatachalanilaya enna odeya |
Venkatachalanilaya vidhatru santarodiya |
Pankajamuki ramana pavanacarana | pa |

Udayavagada munne udara poshana chinte |
Adara mele dhanyadhanada chinte |
Madana yauvvanada chinte mattasatvada cimte |
Hrudayadali nimma chinteyanu madadele katte | 1 |

Mandagamaneyarase medini aluva ase |
Nandanara ase nana aseyu |
Bandhu balagada ase bagyavullavarase |
Ondu dina nimma Seyanu madadele kette | 2 |

Eduru illavembo garva edeya biguvina garva |
Vadana nishtura garva vidya garvavu |
Udadhisayana namma vijayavithalareya |
Madagarvadinda ninna nenahu madade kette | 3 |

dasara padagalu · MADHWA · srinivasa · Vijaya dasaru

Entu ninna mecchisuveno elo venkata

ಎಂತು ನಿನ್ನ ಮೆಚ್ಚಿಸುವೆನೊ ಎಲೊ ವೆಂಕಟಾ
ಸಂತತ ಬಿಡದೆ ಎನ್ನ ಅಂತರಂಗದಲ್ಲಿ ಇರೊ||pa||

ಕುಣಿದು ನಿನ್ನ ಮೆಚ್ಚಿಸುವೆನೆ |
ಫಣಿಹಾರನೈಯನನ ಜನಕಾ |
ಮಣಿದು ನಿನ್ನ ಮೆಚ್ಚಿಸುವೆನೆ |
ಸನಕಾದಿಗಳ ಸುಪ್ರೇಮಾ||1||

ಅನ್ನವಿತ್ತು ಮೆಚ್ಚಿಸುವೆನೆ |
ಘನ್ನ ನಿತ್ಯ ತೃಪ್ತ ನೀನು |
ಹೆಣ್ಣನಿತ್ತು ಮೆಚ್ಚಿಸುವೆನೆ |
ಹೆಣ್ಣುರೂಪ ನೀನೆ ಸ್ವಾಮಿ ||2||

ಅಪ್ಪ ನಿನ್ನ ಮೆಚ್ಚಿಸುವೆನೆ |
ದರ್ಪಾಕ ಬೊಮ್ಮನ ತಂದೆ |
ಅಪ್ಪ ನಿನ್ನ ಮೆಚ್ಚಿಸುವೆನೆ |
ಸುಪ್ಪಾಣಿ ರಮೆಯರಸಾ ||3||

ಪಾಲು ಕುಡಿಸಿ ಮೆಚ್ಚಿಸುವೆನೆ |
ಪಾಲಸಾಗರ ಸದನ ನೀನು |
ಮಾಲೆ ಹಾಕಿ ಮೆಚ್ಚಿಸುವೆನೆ |
ಮಾಲೆ ಕೌಸ್ತಭ ಭೂಷಣಾ ||4||

ಸೇವೆ ಮಾಡಿ ಮೆಚ್ಚಿಸುವೆನೆ |
ಪಾವಮಾನಿ ತಾತ ನೀನು |
ಆವದೊ ಕಾಣೆನೋ ಎನ್ನ
ಕಾವುದು ವಿಜಯವಿಠ್ಠಲಾ ||5||

Entu ninna mecchisuveno elo venkata
Santata bidade enna antarangadalli iro | pa |

Kunidu ninna mecchisuvene panihara trinayana janaka |
Manidu ninna mecchisuvene sanakadigala suprema | 1 |

Annavittu mecchisuvene Ganna nityatrupta ninu |
Hennanittu mecchisuvene hennu rupa nine svami | 2 |

Appayendu meccisuvene darpaka bommara tande |
Appa ninna mecchisuvene suppanirameyarasa | 3 |

Palukudisi mecchisuvene palasagarasadana ninu |
Male haki mecchisuvene male kaustubabushana | 4 |

Seve madi mecchisuvene pavamani tata ninu |
Avudu kaneno enna kavudu vijayavithala | 5 |

dasara padagalu · MADHWA · narasimha · purandara dasaru

Mahadadi deva namo

ಮಹಾದಾದಿದೇವ ನಮೋ
ಮಹಾಮಹಿಮನೆ ನಮೋಪ್ರಹಲ್ಲಾದವರದ ಅಹೋಬಲ ನರಸಿಂಹ ||

.ತರಣಿಗುಬ್ಬಸವಾಗೆ ತಾರಾಪತಿಯು ನಡುಗೆಸುರರು ಕಂಗೆಟ್ಟೋಡೆ ನಭವ ಬಿಟ್ಟು ||
ತರುಗಿರಿಗಳಲ್ಲಾಡೆ ಶರಧಿಗಳು ಕುದಿದುಕ್ಕೆಉರಿಯನುಗುಳುತ ಉದ್ಭವಿಸಿದೆಯೊ ನರಸಿಂಹ ||

ಸಿಡಿಲಂತೆ ಗರ್ಜಿಸುತೆ ಕುಡಿಯ ನಾಲಗೆ ಚಾಚಿಅಡಿಗಡಿಗೆ ಹುಂಕರಿಸಿ ಕಡುಕೋಪದಿಂದ ||
ಮುಡಿವಿಡಿದು ರಕ್ಕಸನ ಕೆಡವಿ ನಖದಿಂದೊತ್ತಿಬಿಡದೊಡಲ ಬಗೆದ ಕಡುಗಲಿ ನಾರಸಿಂಹ||

ಸರಸಿಜೋದ್ಭವ ಹರ ಪುರಂದರಾದಿ ಸಮಸ್ತಸುರರು ಅಂಬರದಿ ಪೂಮಳೆಗರೆಯಲು
ಸಿರಿಸಹಿತ ಗರುಡಾದ್ರಿಯಲಿ ನಿಂತು ಭಕುತರನುಕರುಣಿಸುವ ಪುರಂದರವಿಠಲ ನಾರಸಿಂಹ ||

Mahadadi deva namo || mahadadi deva namo || pa ||

Mahamahimane namo |prahladavarada ahobala narasimha||a||

Dharanigubbasavage tarapathavu naduge |
Suraru kangettode nabava bittu |
Tarugirigalallade saradhigalu kudidukke |
Uriyanuguluta udbaviside narasimha | 1 |

Sidilante garjisuta kudiyanalage caci |
Adigadige lamgisuta kadukopadinda |
Mudipididu rakkasana kedahi nakadindotti |
Kadu udara bagede kadugali narasimha || 2 ||

Sarasijodbava hara purandaradi samasta |
Suraru ambaradi humaleya kareye |
Sirisahita garudadriyali nintu Bajakara |
Karuniside purandaravithala narasimha || 3 ||

dasara padagalu · kanakadasaru · MADHWA · narasimha

Kande na uddanda narasimhana

ಕಂಡೆ ನಾ ತಂಡ ತಂಡದ ಹಿಂಡು ಹಿಂಡು ದೈವ ಪ್ರಚಂಡ –
ರಿಪುಗಂಡ ಉದ್ದಂಡ ನರಸಿಂಹನ ಕಂಡೆನಯ್ಯ ||pa||

ಘುಡುಘುಡಿಸಿ ಕಂಬದಲಿ ಧಡಧಡ ಸಿಡಿಲು ಸಿಡಿಯೆ
ಕಿಡಿಕಿಡಿಸೆ ನುಡಿಯಡಗಲೊಡನೆ ಮುಡಿವಿಡಿದು
ಘಡಘಡನೆ ನಡುನಡುಗೆ ಘುಡುಘುಡಿಸಿ ಸಭೆ ಬೆದರೆ
ಹಿಡಿ ಹಿಡಿದು ಹಿರಣ್ಯಕನ ತೊಡೆ ಮೇಲೆ ಕೆಡಹಿದನ||1||

ಉರದೊಳಪ್ಪಳಿಸಿ ಅರಿ ಬಸಿರ ಸರಸರನೆ ಸೀಳಿ
ಪರಿಪರಿಯಲಿ ಚರ್ಮ ಎಳೆದೆಳೆದು ಎಲುಬು
ನರನರವನು ತೆಗೆದು ನಿರ್ಗಳಿತ ಶೋಣಿತ
ಸುರಿಯೆಹರಿಹರಿದು ಕರುಳ ಕೊರಳೊಳಿಟ್ಟವನ||2||

ಪುರಜನರು ಹಾಯೆನಲು ಸುರರು ಹೂಮಳೆ
ಗರೆಯೆತರತರದ ವಾದ್ಯ ಸಂಭ್ರಮಗಳಿಂದ
ಹರಿಹರಿ ಶರಣೆಂದು ಸ್ತುತಿಸಿ ಶಿಶು ಮೊರೆಯಿಡುವ
ಕರುಣಾಳು ಕಾಗಿನೆಲೆಯಾದಿಕೇಶವನ||3||

Kande na uddanda narasimhana
Kande na tanda tandada hindu hindu daiva pracanda
Ripuganda uddanda narasimhana kandenayya || pa ||

Gudugudisi kambadali dhadadhada sidilu sidiye |
Kidikidisi senudiya dagalodane mudi pididu |
Gada gadane nadu naduge gudugudisi sabe bedare |
Hidi hididu hiranyakana todeyolide kedahidane

Uradolappalisi aribasira sarasa sili |
Paripariyali carmaveledeleyalu |
Nara naratane negedu nirgalita sonita suriye ||

Hari haridu karula koralolittavana |
Purajanaru hayendu suraru hu malegareye |
Hari hari saranendu stutisi sisu mereye |
Karunalu kaginele adikesavana ||

 

dasara padagalu · MADHWA · narasimha · purandara dasaru

Banda simha narasimha

ಬಂದ ಸಿಂಹ ನಾರಸಿಂಹ ಬಂದ ನೋಡೇ
ಇಂದಿರೇಶ ಕಂಬ ಒಡೆದು ಬಂದ ನೋಡೇ
ಅಕೋ ಬಂದ ನೋಡೇ, ಇಕೋ ಬಂದ ನೋಡೇ ।।

ಎಲ್ಲಿ ನೋಡಿದರಲ್ಲಿ ನಾರಸಿಂಹ ನೋಡೇ
ಎಲ್ಲರಲ್ಲಿ ಮೇಲೆ ಎಂಬ ಚೆಲುವ ನೋಡೇ
ಎಲ್ಲರನ್ನು ಹರಿಗೆ ಎಂದು ದಾನ ಮಾಡೇ ।।೧।।

ಹರಿಯು ಕಂದನ ಕರೆಗೆ ಓಡಿ ಬಂದ ನೋಡೇ
ಧರಿಸಲಿಲ್ಲ ಪೂರ್ಣ ಸಿಂಹ ವೇಷ ನೋಡೇ
ಹರಿಯ ಪಾದಕೆ ನಮಿಸಿದಂದದಿ ಭಿಕ್ಷೆ ನೋಡೇ ।।೨।।

ಚರಣ ಸುಧೆಯ ಕಮಲನೀತ ಚಂದ್ರ ನೋಡೇ
ಭಕ್ತವತ್ಸಲ ಪುರಂದರವಿಠಲ ಬಂದ ನೋಡೇ
ಮುಕ್ತಿ ಕೊಡುವ ದಾತ ಮನೆಗೆ ಬಂದ ನೋಡೇ ।।೩।।

Banda simha narasimha banda node
Indiresa kamba odedu banda node

Ako banda node | iko banda node ||
Elli nodidaralli narasimha node

Ellaralli mele emba celuva node
Ellarannu harige endu dana made || 1 ||

Hariyu kandana karege odi banda node
Dharisalilla purna simha vesha node || 2 ||

Hariya padake namisidandadi bikshe node
Charana sudheya kamalanita chandra node || 3 ||

Baktavatsala purandaravithala banda node |
Mukti koduva datha manege banda node || 4 ||

 

dasara padagalu · MADHWA · narasimha · Vijaya dasaru

Balire balire narasimha

ಭಳಿರೆ ಭಳಿರೆ ನರಸಿಂಹ ಮಹಾಸಿಂಹ |
ಮಲಮಲಾ ಮಲತವರ ವೈರಿ ಉರಿಮಾರಿ||pa||

ನಗನಗಾ ನಗನಗಗಳಲ್ಲಾಡೆ ಚತುರ್ದಶ |
ಜಗಜಗ ಜಗವೆಲ್ಲ ಕಂಪಿಸಿ ಕಂಬನಾಗೆ ||
ಹಗೆ ಹಗೆ ಹಗೆ ಹಗೆ ಬಲವ ದೆಶೆಗೆಡಿಸಿ ರೋಷಗಿಡಿ |
ಉಗು ಉಗು ಉಗುಳುತ್ತ ಬಂದ ನರಸಿಂಹ ||1||

ಬಿಗಿ ಬಿಗಿ ಬಿಗಿದು ಹುಬ್ಬುಗಂಟನೆ ಹಾಕಿ |
ಹೊಗೆ ಹೊಗೆ ಹೊಗೆ ಸುತ್ತಿ ಸರ್ವರಂಜೆ ||
ನೆಗ ನೆಗ ನೆಗ ನೆಗದು ಕುಪ್ಪಳಿಸಿ ಅಸುರನ್ನ |
ಮಗು ಮಗು ಮಗು ಮಗು ಬೇಡಿಕೊಂಡ ನರಸಿಂಹಾ ||2||

ಉಗು ಉಗು ಉಗು ಉಗರಿಂದ ಕ್ರೂರನ್ನ ಹೇರೊಡಲ |
ಬಗ ಬಗ ಬಗ ಬಗದು ರಕುತವನ್ನು |
ಉಗಿ ಉಗೀ ಉಗೀ ಉಗಿದು ಚಲ್ಲಿ ಕೊರಳಿಗೆ ಕರುಳ |
ತೆಗೆ ತೆಗೆ ತೆಗೆ ತೆಗೆದು ಇಟ್ಟ ನರಸಿಂಹಾ ||3||

ಯುಗ ಯುಗ ಯುಗ ಯುಗದೊಳಗೆ ಪ್ರಣತಾರ್ತಿ ಹರನೆಂದು |
ಝಗ ಝಗಾ ಝಗಝಗಿಪ ಮಕುಟ ತೂಗೆ |
ನಗು ನಗು ನಗು ನಗುತ ಸುರರು ಗಗನದಿ ನೆರೆದು |
ಮಿಗಿ ಮಿಗಿ ಮಿಗಿ ಮಿಗಿಲೆನೆ ನರಸಿಂಹಾ ||4||

ಒಂದೊಂದೊಂದೊಂದು ಮುನಿಗಳಿಗೊಲಿದು |
ಅಂದಂದಂದಂದದೀಗಾಯತ ವೊಲಿದು |
ಅಂದಂದಂದವ ಕಾವ ಚೊಳಂಗಿರಿ |
ಮಂದಿರನೆ ವಿಜಯವಿಠ್ಠಲ ನರಸಿಂಹಾ ||5||

Balire balire narasimha mahasimha
Malamala malatavara vairi uri mari | pa ||

Naga naga nagagalallade chaturda
Jagajaga jagavella kampisi kempage
Hage hage hage balava desegedesi roshakidi
Ugu ugu ugulutta banda narasimha || 1 ||

Bigi bigi bigidu hubbu gantane haki
Hoge hoge hogesutti sarvaranje
Nege nege nege negedu kuppalisi asuranna
Magu magu magu bedikonda narasimha || 2 ||

Ugu ugu ugurinda kruranna herodala
Bage bage bage bagedu rakutavannu
Ugi ugi ugi ugidu celli koralige karula
Tege tege tege tegedu itta narasimha || 3 ||

Juga Juga jugadolage pranatartiharanendu
Juga Juga Juga Jugipa mukuta toge
Nagu nagu nagu naguta suraru gaganadi neredu
Migi migi migi migilene narasimha || 4 ||

Ondondondondu munigalige olidu
Andandandandagayuta olidu
Anandandavakasa cholangiri
Mandirane vijaya vithala narasimha || 5 ||

dasara padagalu · jagannatha dasaru · MADHWA · narasimha

Namo namaste narasimha deva

ನಮೋ ನಮಸ್ತೇ ನರಸಿಂಹ ದೇವಾ
ಸ್ಮರಿಸುವವರ ಕಾವಾ ||pa||

ಸುಮಹಾತ್ಮ ನಿನೆಗೆಣೆ ಲೋಕದೊಳಾವಾ ತ್ರಿಭುವನ ಸಂಜೀವಾ
ಉಮೆಯರಸನ ಹೃತ್ಕಮಲದ್ಯುಮಣಿ ಮಾ
ರಮಣ ಕನಕ ಸಂಯಮಿ ವರವರದಾ ||a.pa||

ಕ್ಷೇತ್ರಜ್ಞ ಕ್ಷೇಮಧಾಮ ಭೂಮಾ ದಾನವ ಕುಲಭೀಮಾ
ಗಾತ್ರ ಸನ್ನುತ ಬ್ರಹ್ಮಾದಿ ಸ್ತೋಮಾ ಸನ್ಮಂಗಳ ನಾಮಾ
ಚಿತ್ರ ಮಹಿಮನಕ್ಷತ್ರನೇಮಿಸ
ರ್ವತ್ರಮಿತ್ರ ಸುಚರಿತ್ರ ಪವಿತ್ರ ||1||

ಅಪರಾಜಿತ ಅನಘ ಅನಿರ್ವಿಣ್ಣ ಲೋಕೈಕ ಶರಣ್ಯ
ಶಫರಕೇತು ಕೋಟಿಲಾವಣ್ಯ ದೈತ್ಯೇಂದ್ರ ಹಿರಣ್ಯಕ
ಶಿಪುಸುತನ ಕಾಯ್ದಪೆನೆನುತಲಿ ನಿ
ಷ್ಕಪಟ ಮನುಜಹರಿವಪುಷ ನೀನಾದೆ ||2||

ತಪನ ಕೋಟಿ ಪ್ರಭಾವ ಶರೀರಾ ದುರಿತೌಘವಿದೂರಾ
ಪ್ರಪಿತಾಮಹ ಮಂದಾರ ಖಳವಿಪಿನ ಕುಠಾರಾ
ಕೃಪಣಬಂಧು ತವ ನಿಪುಣತನಕೆ ನಾ
ನುಪಮೆಗಾಣೆ ಕಾಶ್ಯಪಿವರವಾಹನಾ ||3||

ವೇದವೇದಾಂಗವೇದ್ಯಾ ಸಾಧ್ಯ ಅಸಾಧ್ಯ
ಶ್ರೀದ ಮುಕ್ತಾಮುಕ್ತರಾರಾಧ್ಯಾ
ಅನುಪಮ ಅನವದ್ಯ ಮೋದಮಯನೆ ಪ್ರಹ್ಲಾದವರದ ನಿ
ತ್ಯೋದಯ ಮಂಗಳ ಪಾದಕಮಲಕೆ ||4||

ಅನಿಮಿತ್ತ ಬಂಧು ಜಗನ್ನಾಥ ವಿಠಲ ಸಾಂಪ್ರತ
ನಿನಗೆ ಬಿನ್ನೈಸುವೆ ಎನ್ನಯ ಮಾತಾ ಲಾಲಿಸುವುದು ತಾತಾ
ಗಣನೆಯಿಲ್ಲದವ ಗುಣವೆನಿಸಿದೆ ಪ್ರತಿ
ಕ್ಷಣಕೆ ಕಥಾಮೃತ ಉಣಿಸು ಕರುಣದಿ ||5||

Namo namaste narasimha deva – smarisuvavara kava
Sumahatma ninagene lokadolagava tribuvana sanjiva
Umeyarasa hrutkamaladyumani
Ma ramana kanaka samyamivaravarada | pa |

Kshetraj~ja kshemadhamabuma danavakulabima
Gatrasannuta brahmadi stoma
Sanmangalanama chitramahi manakshatranemi
Sarvatra mitra sucaritra pavitra | 1 |

Aparajita anaga anirvinna lokaikasaranya
Saparaketukotilavanya daityendra hiranyaka
Siputanayana kaydepenenutali
Nishkapata manujaharivapusha ninade | 2 |

Tapanakoti praba sarira duritaugavidura
Prapitamahamandara kalavipinakuthara
Krupanabandu tava nipunatanake
Nanupamegane kasyapivaravahana | 3 |

Vedavedamgavedya – sadhya asadhya
Srida muktamuktaradhya anupama anavadya
Modamayane prahladavarada
Nityodaya mamgala padakamalake | 4 |

Animitta bandhu jagannatha vithala samprata
Ninage binnaipe ennaya mata lalisuvadu tata
Gananeyilladavagunaveniside pratikshanake
Kathamruta unisu karunadi | 5 |

dasara padagalu · jagannatha dasaru · MADHWA · narasimha

Narasimha pahi lakshmi

ನರಸಿಂಹ ಪಾಹಿ ಲಕ್ಷ್ಮೀ ನರಸಿಂಹ||pa||

ನರಸಿಂಹ ನಮಿಪೆ ನಾ ನಿನ್ನ
ಚಾರುಚರಣಕಮಲಕೆ ನೀ ಎನ್ನ
ಕರವ ಪಿಡಿದು ನಿಜ ಶರಣನೆಂದೆನಿಸೊ ಭಾ
ಸುರ ಕರಣಾಂಬುಧೆ ಗರುಡವಾಹನ ಲಕ್ಷ್ಮೀ ||a.pa||

ತರಳ ಪ್ರಹ್ಲಾದನ್ನ ನುಡಿಯಾ ಕೇಳಿ
ತ್ವರಿತದಿ ಬಂದ್ಯೊ ಎನ್ನೊಡೆಯ ನಾನು
ಕರುಣಾಳೊ ಭಕ್ತರ ಭಿಡೆಯ ಮೀರ
ಲರಿಯೆ ಎಂದೆಂದು ಕೆಂಗಿಡಿಯ ಅಹ
ಭರದಿಂದುಗುಳುತ ಬೊಬ್ಬಿರಿದು ಬೆಂಬತ್ತಿಕ
ರ್ಬುರ ಕಶ್ಯಪುವಿನ ಹಿಂಗುರುಳ ಪಿಡಿದೆ ಲಕ್ಷ್ಮೀ ||1||

ಪ್ರಳಯಾಂಬುನಿಧಿ ಘನಘೋಷದಂತೆ
ಘುಳಿ ಘುಳಿಸುತಲಿ ಪ್ರದೋಷ ಕಾಲ
ತಿಳಿದು ದೈತ್ಯನ ಅತಿರೋಷದಿಂದ
ಪ್ಪಳಿಸಿ ಮೇದಿನಿಗೆ ನಿದೋಷ ಅಹ
ಸೆಳೆಸೆಳೆಯುತ ಚರ್ಮಸುಲಿದು ಕೆನ್ನೆತ್ತರೋ
ಕುಳಿಯನಾಡಿದೆ ದಿಶಾವಳಿಗಳೊಳಗೆ ಲಕ್ಷ್ಮೀ ||2||

ಕ್ರೂರ ದೈತ್ಯನ ತೋರಗರುಳಾ ತೆಗೆ
ದ್ಹಾರ ಮಾಡಿದೆ ನಿಜಕೊರಳ ಕಂಡು
ವಾರಿಜಾಸನ ಮುಖದಯರ್ಕಳ ಪುಷ್ಪ
ಧಾರಿಗೆರೆದು ವೇಗ ತರಳಾ ಆಹ
ಸೂರಿ ಪ್ರಹ್ಲಾದಗೆ ತೋರಿ ತವಾಂಘ್ರಿ ಸ
ರೋರುಹಾವನು ಕಾಯ್ದೆ ಕಾರಣ್ಯನಿಧಿ ||3||

ಜಯಜಯ ದೇವವರೇಣ್ಯ ಮಹ
ದ್ಭಯ ನಿವಾರಣನೆ ಅಗಣ್ಯ ಗುಣಾ
ಶ್ರಯ ಘೋರ ದುರಿತಾರಣ್ಯ ಧನಂ
ಜಯ ಜಗದೇಕ ಶರಣ್ಯ ಅಹ
ಲಯವಿವರ್ಜಿತ ಲೋಕ
ತ್ರಯ ವ್ಯಾಪ್ತ ನಿಜಭಕ್ತ
ಪ್ರಿಯ ಘೋರಮಯ ಹರ
ದಯ ಮಾಡೆನ್ನೊಳು ಲಕ್ಷ್ಮೀ ||4||

ಕುಟಲ ದ್ವೇಷದವನು ನೀನಲ್ಲ ನಿನ್ನಾ
ರ್ಭಟಕಂಜಿದರು ಸುರರೆಲ್ಲ ನರ
ನಟನೆ ತೋರಿದ್ಯೋ ಲಕ್ಷ್ಮೀನಲ್ಲ ನಾ ಪಾ
ಸಟಿ ಕಾಣೆನಪ್ರತಿಮಲ್ಲ ಅಹ
ವಟಪತ್ರಶಯನ ಧೂ
ರ್ಜಟಿವಂದ್ಯ ಜಗನ್ನಾಥ
ವಿಠಲ ಕೃತಾಂಜಲಿಪುಟದಿ ಬೇಡುವೆ ಲಕ್ಷ್ಮೀ||5||

Narasimha pahi lakshmi narasimha | pa |

Narasimha namipe na ninna | charu charanakamalake ni enna |
Karava pididu nija sarananendenisu |
Basura karunambudhe garudavahana – lakshmi | a |

Tarala prahladana nudiya keli |
Tvaritadi bandyo ennodeya nanu
Karunalo Baktara bideya miralariye|
Endendu kengidiya aha-
Baradinduguluta bobbirudi bembatti
Karburakasyapuvina hingarula pidida lakshmi | 1 |

Pralayambunidhi ganagoshadante
Gulugulisutali pradosha kala
Tilidu daityana atiroshadinda appalisi
Medinige nirdosha aha
Seleseleyuta charmasulidu kennettaro-
Kuliyadide disavaligalolage – lakshmi | 2 |

Kruradaityana doregarula tegedhhara
Madide nijakorala kandu
Varijasana mukyararala – pushpa
Saragaredu vega tarala aha
Dhiraprahladana toritvadangri
Saroruhavanu sardaro karunyanidhe – lakshmi | 3 |

Jayajaya devavarenya mahadbaya
Nivaranane aganya gunasraya gora
Duritaranya dhananjaya jagadekasaranya aha
Layavivarjita lokatrayavyapta
Nijabaktapriya goramayahara dayamadu – lakshmi | 4 |

Kutiladaveshadava ninalla ninnarbatakanjidaru surarella
Naranatane toridyo lakshminalla
Napasati kanenapratimalla aha
Vatapatrasayana dhurjativandya
Jagannathavithala krutanjaliputadi beduve – lakshmi | 5 |

dasara padagalu · ekadashi · MADHWA · prasanna venkata dasaru

Haridina intha haridina

ಹರಿದಿನ ಇಂಥ ಹರಿದಿನ ಪ.
ಹರಿದಿನದ ಮಹಿಮೆ ಹೊಗಳಲಗಾಧ||

ಪರಮ ಭಾಗವತರಾಚರಣೆಗಾಹ್ಲಾದÀ
ದುರಿತ ದುಷ್ಕøತ ಪರ್ವತಕೆ ವಜ್ರವಾದ
ಮರುತ ಸದ್ವ್ವ್ರತಕೆಲ್ಲ ಶಿರೋರತ್ನವಾದ||a.pa||

ಭಕ್ತಿಗೆ ಮೊದಲು ವಿರಕ್ತಿ ಬೀಜವೆಂಬ
ಸಕಲ ತಪದೊಳೆಲ್ಲ ಮೇಲೆನಿಸಿಕೊಂಬ
ಮಖಕೋಟಿಗಧಿಕ ಫಲಸ್ಥಿರ ಸ್ತಂಭ
ಮುಕ್ತಿ ಸೋಪಾನ ನಿಧಾನತ್ವವೆಂಬ ||1||

ತ್ವಕ್ ಚರ್ಮ ಅಸ್ತಿ ಮಜ್ಜ ಮಾಂಸ ರುಧಿರ
ಯುಕ್ತ ಸಪ್ತ ಧಾತುಗಳಿಹ ಶರೀರ
ನಖ ಕೇಶ ಕಫ ಸ್ವೇದ ಮಲ ಮೂತ್ರಾಗರ ಈ
ನಿಖಿಳ ಪಾವನ ಮಾಡುವ ನಿರಾಹಾರ ||2||

ವರ ವಿಪ್ರ ಕ್ಷತ್ರಿಯ ವೈಶ್ಯ ಶೂದ್ರ ಜನರು
ತರಳ ಯೌವನ ವೃದ್ಧ ನಾರಿಯರು
ಕಿರಾತ ಪುಲತ್ಸ್ಯಾಂದ್ರ ಹೂಣ ಜಾತಿಯವರು
ಹರಿವ್ರತ ಮಾತ್ರದಿ ಮುಕ್ತಿಯೈದುವರು ||3||

ದ್ವಿಜ ಗೋವಧ ನೃಪರನು ಕೊಂದ ಪಾಪ
ನಿಜಗುರು ಸತಿಯರ ಸಂಗದ ಪಾಪ
ಅಜಲಪಾನದ ದಿನದುಂಡ ಮಹಾಪಾಪ
ನಿಜನಾಶ ಮೋಕ್ಷ ಪ್ರಾಪ್ತಿಯು ಸತ್ಯಾಲಾಪ ||4||

ಯಾಮಿನಿಯಲಿ ಅನಿಮಿಷದ ಜಾಗರವು
ಶ್ರೀ ಮದ್ಭಾಗವತ ಶ್ರವಣ ಗೀತಾಪಠಣ
ಪ್ರೇಮವಾರಿಧಿಲಿ ಮುಳುಗಿ ಸಂಕೀರ್ತನೆಯು
ಧಾಮತ್ರಯದ ಸುಖಕಿದೇ ಕಾರಣವು ||5||

ಅರ್ಧಕೋಟಿ ತೀರ್ಥಸ್ನಾನವೆಲ್ಲ ಅ
ಜಸ್ರಪ್ರಯಾಗ ಕಾಶಿವಾಸವೆಲ್ಲ ಸ
ಹಸ್ರ ಕೋಟಿ ಭೂಪ್ರದಕ್ಷಿಣೆಯೆಲ್ಲ
ಸುಶ್ರದ್ಧೆ ಸಹ ಜಾಗರಕೆ ಸರಿಯಲ್ಲ||6||

ಪಂಚಮಹಾ ಪಾಪ ಪ್ರಪಾಪವವಗೆ
ವಂಚಕ ಪಿಶುನ ಜನರ ಪಾಪವವಗೆ
ಮಿಂಚುವ ಕ್ಷೇತ್ರವಳಿ ಪಾಪವವಗೆ
ಪಂಚಕವ್ರತ ಪೆತ್ತ ವ್ರತ ಉಲ್ಲಂಘಿಪಗೆ||7||

ಸರ್ಪಶಯನಗೆ ನೀರಾಜನವೆತ್ತಿ ನೋಡಿ
ಉಪವಾಸದಿ ಭಗವಜ್ಜನ ನೃತ್ಯವಾಡಿ
ಚಪ್ಪಾಳಿಕ್ಕುತ ದಂಡಿಗೆ ಮುಟ್ಟಿ ಪಾಡಿ
ತಪ್ಪೆ ನಾಯಿ ನರಕ ಫಲ ಕೈಗೂಡಿ ||8||

ಶ್ರುತಿ ಪಂಚರಾತ್ರಾಗಮವು ಸಾರುತಿವೆ
ಯತಿ ಮಧ್ವರಾಯರುಕುತಿ ಪೇಳುತಿವೆ
ಕ್ರತು ಪ್ರಸನ್ವೆಂಕಟ ಕೃಷ್ಣ ಮತವೆ
ಕ್ಷಿತಿಪತಿ ಸುರರತಿಶಯದ ಸದ್ವ್ವ್ರತವೆ||9||

Haridina intha haridina –
Haridinada mahime hogalalagadha || pa ||

Parama bagavatara caranegahlada
Duritadushkutake vajranada
Marutasadvratakella siroratnavada
Haridina intha haridina || a ||

Bakutige modalu virakuti bijavemba
Sakala tapadolella melenisikomba
Makakotigadhika Pala sthirastamba
Mukuti sopana nidanatvademba || 1 ||

Tvak Sarma asthi majja mamsarudhira
Yukutasaputadhatugaliha sarira
Nakakesakapas vedamalamutragara
I nikila pavana maduva nirahara || 2 ||

Varavi prakshatriyavai syasudra janaru
Taralayavvana vruddhanararu nariyaru
Kiratapulakasandhra hunajatiyavaru
Harivratamatradi mukutiyaiduvaru || 3 ||

Dvijagovuvuvadha nruparanu konda papa
Nijagurusatiyara sangama papa
Ajalapanada dinadunda mahapapa
Nijanasa moksha praptiyu satyalapa || 4 ||

Yaminiyali animishada jagaravu
Srimadbagavata sravana gitapathana
Premavaridhili mulugu samkirtaneyu
Dhamatrayada sukakide karanavu || 5 ||

Ardhakoti tirthasnanavella A
Asra prayaga kasivasavella
Sahasra koti bupradakshineyella
Susraddhe saha jagarake sariyalla || 6 ||

Pancha mahapapa prapapavavage
Vanchakapisunajanara papavavage
Minchuva kshetravali prapapavage
Panchakavrata pettavrata ullangipage || 7 ||

Sarpasayanage nirajanavetti nodi
Upavasadi bagavadbajana nrutyavadi
Cappalikkuta dandigi muttipadi
Tappena ilanarka Pala kaigudi || 8 ||

Srutipancaratragamavu sarutide
Yati madhvarayara kruti pelutive
Kratusevya prasanvenkata krushna matave
Kshitipatisuraratisayada sadvratave || 9 ||