ತೂಗಿರೆ ಗುರುಗಳ ತೂಗಿರೆ ಯತಿಗಳ
ತೂಗಿರೆ ದಾಸಗ್ರೇಸರರ ನಾಗಶಯನನು
ರಾಗವ ಪಡೆದಂಥ ಯೋಗಿವರೇಣ್ಯರ ತೂಗಿರೆ ||pa||
ಈ ಮಹಿಯೊಳು ಪುಟ್ಟಿ ಶ್ರೀಮುದತೀರ್ಥ
ಸು-ನಾಮದಿ ಕರೆಸುವರ ತೂಗಿರೆ
ಆ ಮುದತೀರ್ಥ ಪದ್ಮನಾಭ
ನಾಮದಿಂದಿರುವರ ತೂಗಿರೆ||1||
ರಾಮನ ತಂದಿತ್ತ ನರಹರಿ ಮುನಿಪರ
ಮಾಧವ ತೀರ್ಥರ ತೂಗಿರೆ ಆಮ-
ಹಾವಿದ್ಯಾರಣ್ಯರನ ಗೆಲಿದಂಥ
ಶ್ರೀ ಮದಕ್ಷೋಭ್ಯರ ತೂಗಿರೆ ||2||
ಕಾಕಿಣಿತೀರಸ್ಥ ಟೀಕಾಚಾರ್ಯರೆಂಬೊ
ನಾಕಪಾಂಶಜರನ ತೂಗಿರೆ ಶ್ರೀಕೃಷ್ಣ
ತಟದಿ ಜಿತಾಮಿತ್ರರೆಂಬೊ ಪಿ-
ನಾಕಿ ಅಂಶಜರನ ತೂಗಿರೆ ||3||
ರಾಜರಂದದಿ ಸುಖಭೋಜನ ಕೃದ್ಯತಿ
ರಾಜ ಶ್ರೀಪಾದರ ತೂಗಿರೆ
ವ್ಯಾಜದಿ ವಿಜಯ ಸಾಮ್ರಾಜ್ಯರೆನಿಸಿ
ವ್ಯಾಸರಾಜರು ಮಲಗ್ಯಾರ ತೂಗಿರೆ||4||
ವಾದಿಗಳನು ಯುಕ್ತಿವಾದದಿ ಗೆಲಿದಂಥ
ವಾದಿರಾಜರನ್ನ ತೂಗಿರೆ
ಮೇದಿನಿಯೊಳು ಕೃಷ್ಣದ್ವೈಪಾಯನರೆಂಬೊ
ವೇದವ್ಯಾಸಾತ್ಮಜರ ತೂಗಿರೆ ||5||
ಪರಿಮಳ ರಚಿಸಿದ ವರಹಜ ತೀರಸ್ಥ
ಗುರು ರಾಘವೇಂದ್ರರ ತೂಗಿರೆ
ಇರುಳು ಕಾಲದಲಿ ತರಣಿಯ ತೋರಿದ
ಗುರುಸತ್ಯ ಬೋಧರ ತೂಗಿರೆ ||6||
ಪರಮತ ಖಂಡನ ನಿರುತದಿ ಮಾಡಿದ
ಗುರುವರದೇಂದ್ರರ ತೂಗಿರೆ
ಗುರು ಭುವನೇಂದ್ರರ ಕರಜವ್ಯಾಸತತ್ವ
ವರಿತ ಯತೀಶರ ತೂಗಿರೆ||7||
ವರಭಾಗವತಸಾರ ಸರಸದಿ ರಚಿಸಿದ
ಗುರುವಿಷ್ಣು ತೀರ್ಥರ ತೂಗಿರೆ
ಪರಮ ಕ್ಷೇತ್ರಕೂಡಲಿಯೊಳಗಿರುವಂಥ
ಗುರುರಘುವೀರರ ತೂಗಿರೆ ||8||
ಹರಿಯ ಮಹಿಮೆಯನ್ನು ಸರಸದಿ ಪೇಳಿದ
ಪುರಂದರ ದಾಸರ ತೂಗಿರೆ
ಹರಿಸರ್ವೋತ್ತಮನೆಂದು ಸುರಮುನಿ ಗರುಹಿದ
ಗುರು ವಿಜಯದಾಸರ ತೂಗಿರೆ ||9||
ಬನ್ನವ ಬಿಡಿಸಿ ಶಿಷ್ಯನ್ನ ಪಾಲಿಸಿದ
ಭಾಗಣ್ಣ ದಾಸರನ್ನು ತೂಗಿರೆ
ಘನ್ನ ಹರಿಯಗುಣ ವರ್ಣಿಸಿದಂಥ ಜ
ಗನ್ನಾಥ ದಾಸರ ತೂಗಿರೆ ||10||
ಮಾನವಿರಾಯರ ಪ್ರಾಣಪದಕರಾದ
ಪ್ರಾಣೇಶದಾಸರ ತೂಗಿರೆ
ವೇಣುಗೋಪಾಲನ್ನ ಗಾನದಿ ತುತಿಸಿದ
ಆನಂದದಾಸರ ತೂಗಿರೆ ||11||
ವಾಸ ಆದಿಶಿಲಾಧೀಶನ್ನ ಭಜಿಸಿದ
ಶೇಷ್ಠ ದಾಸರನ್ನ ತೂಗೀರೆ
ಶ್ರೇಷ್ಠ ಕಾರ್ಪರ ನರಕೇಸರಿಗತಿಪ್ರೀಯ
ದಾಸೋತ್ತಮರನ್ನ ತೂಗೀರೆ ||12||
tUgire gurugaLa tUgire yatigaLa
tUgire dAsagrEsarara nAgaSayananu
rAgava paDedantha yOgivarENyara tUgire ||pa||
I mahiyoLu puTTi SrImudatIrtha
su-nAmadi karesuvara tUgire
A mudatIrtha padmanABa
nAmadindiruvara tUgire||1||
rAmana tanditta narahari munipara
mAdhava tIrthara tUgire Ama-
hAvidyAraNyarana gelidaMtha
SrI madakShOByara tUgire ||2||
kAkiNitIrastha TIkAcAryareMbo
nAkapAMSajarana tUgire SrIkRuShNa
taTadi jitAmitrareMbo pi-
nAki aMSajarana tUgire ||3||
rAjarandadi suKaBOjana kRudyati
rAja SrIpAdara tUgire
vyAjadi vijaya sAmrAjyarenisi
vyAsarAjaru malagyAra tUgire||4||
vAdigaLanu yuktivAdadi gelidantha
vAdirAjaranna tUgire
mEdiniyoLu kRuShNadvaipAyanareMbo
vEdavyAsAtmajara tUgire ||5||
parimaLa racisida varahaja tIrastha
guru rAGavEndrara tUgire
iruLu kAladali taraNiya tOrida
gurusatya bOdhara tUgire ||6||
paramata KanDana nirutadi mADida
guruvaradEndrara tUgire
guru BuvanEMdrara karajavyAsatatva
varita yatISara tUgire||7||
varaBAgavatasAra sarasadi racisida
guruviShNu tIrthara tUgire
parama kShEtrakUDaliyoLagiruvantha
gururaGuvIrara tUgire ||8||
hariya mahimeyannu sarasadi pELida
purandara dAsara tUgire
harisarvOttamanendu suramuni garuhida
guru vijayadAsara tUgire ||9||
bannava biDisi SiShyanna pAlisida
BAgaNNa dAsarannu tUgire
Ganna hariyaguNa varNisidantha ja
gannAtha dAsara tUgire ||10||
mAnavirAyara prANapadakarAda
prANESadAsara tUgire
vENugOpAlanna gAnadi tutisida
AnaMdadAsara tUgire ||11||
vAsa AdiSilAdhISanna Bajisida
SEShTha dAsaranna tUgIre
SrEShTha kArpara narakEsarigatiprIya
dAsOttamaranna tUgIre ||12||