dasara padagalu · MADHWA

Haridasa vrunda sthothra

ದಾಸವರ್ಯರಿಗೊಂದಿಪೆ | ದಾಸವರ್ಯರ ಪಾದಕ್ಕೆರಗಿ ಜನ್ಮಾಂತರದ |
ದೋಷವ ಪರಿಹರಿಸಿಕೊಂಬೆ ||ಪಲ್ಲ||

ನಾರದ ಮುನಿ ಹರಿ ಯಾಜ್ಞೆಯಿಂದಲೆ ಪುರಂ | ದರ ದಾಸರಾಗಿ ಜನಿಸಿದ ||
ನಾರಾಯಣನ ದಿವ್ಯ ನಾಮದ ಮಹಿಮೆಯ| ಮೂರು ಲೋಕಗಳಲ್ಲಿ ಹರಹಿದ ||೧||

ಭಜಿಸುವ ಭಕುತರ ಅಗಣಿತ ದೋಷವ| ನಿಜವಾಗಿ ಪರಿಹರಿಸುವಂಥ ||
ಸುಜನ ಪೋಷಕ ದುಷ್ಟ ಕುಜನ ಕುಠಾರ ಶ್ರೀ | ವಿಜಯರಾಯರ ಪಾದಕ್ಕೆರಗುವೆ ||೨||

ಕೋಪ ರಹಿತಭಕ್ತಪಾಪವಿದೂರಕ| ಶ್ರೀ ಪತಿ ಪಾದ ಕಮಲ ಭೃಂಗ ||
ತಾಪಸೋತ್ತಮ ಭವ ತಾಪನಿವಾರಕ| ಗೋಪಾಲದಾಸರಿಗೆರಗುವೆ ||೩||

ಧರೆಯ ಸುರರ ಉದ್ಧರಿಸಲೋಸುಗ ದಿವ್ಯ | ಹರಿಕಥಾಮೃತಸಾರ ಗ್ರಂಥವ ||
ವಿರಚಿಸುತಜ್ಞಾನ ಪರಿಹರಿಸಿದಂಥ| ಹರಿಭಕ್ತಾಗ್ರಣಿ ಶ್ರೀ ಜಗನ್ನಾಥ ||೪||

ಧರೆಯೋಳು ಹರಿ ಲೀಲಾಮೃತ ವೃಷ್ಟಿ ಗರೆಯಲು | ಪರಿ ಪರಿ ಕಥೆಗಳ ರಚಿಸಿದ ||
ವರದೇಂದ್ರ ಮುನಿಗಳ ಪಾದ ಸಾರಸ ಭೃಂಗ | ಪರಮ ಸುಚರಿತ ಶ್ರೀ ಪ್ರಾಣೇಶ ||೫||

ಹರಿ ಭಕ್ತಿ ಮಾರ್ಗವ ಪರಿ ಪರಿ ಶಿಷ್ಯರಿ | ಗರುಹಿ ಕರುಣದಿಂದುದ್ಧರಿಸಿದ ||
ಪರಮತ ತಿಮಿರಕ್ಕೆ ತರಣಿ ಸ್ವರೂಪ ಶ್ರೀ | ಗುರು ಪ್ರಾಣೇಶಾರ್ಯರಿಗೆರಗುವೆ ||೬||

ಗುರು ಪಾದ ಸೇವೆಯ ಪರಿ ಪರಿ ಗೈದು ಈ| ಧರೆಯೋಳು ಧನ್ಯರೆಂದೆನಿಸಿದ ||
ಹರಿ ದಾಸ ಕುಲರತ್ನ ಸರ್ವಸದ್ಗುಣ ಪೂರ್ಣ| ವರ ಶ್ರೀಶ ಪ್ರಾಣೇಶ ದಾಸಾರ್ಯ ||೭||

ಗುರು ಪ್ರಾಣೇಶರಕರ ಸರಸಿಜ ಸಂಜಾತ | ಪರಮ ಭಾಗವತರೆನಿಸಿದ ||
ಮರುತ ಮತದ ತತ್ವವರಿದಂಥ ಸುಖದ ಸುಂ | ದರ ವಿಠಲ ಮೋದ ವಿಠಲರೆಂಬ ||೮||

ಭೂಮಿಯೋಳ್ ವರದೇಶ ವಿಠ್ಠಲನ ನಿಜಭಕ್ತ | ಸ್ತೋಮಕ್ಕೆ ಶಿರಬಾಗಿ ನಮಿಸುವೆ ||
ಆ ಮಹಾತ್ಮರ ಪಾದ ರಜದೊಳೆನ್ನನು ದೇವ | ನೇಮದಿಂದಲಿ ಹೊರಳಾಡಿಸೊ ||೯||

dAsavaryarigondipe | dAsavaryara pAdakkeragi janmAntarada |
dOShava pariharisikoMbe ||palla||

nArada muni hari yAj~jeyindale puran | dara dAsarAgi janisida ||
nArAyaNana divya nAmada mahimeya| mUru lOkagaLalli harahida ||1||

Bajisuva Bakutara agaNita dOShava| nijavAgi pariharisuvantha ||
sujana pOShaka duShTa kujana kuThAra SrI | vijayarAyara pAdakkeraguve ||2||

kOpa rahitaBaktapApavidUraka| SrI pati pAda kamala BRunga ||
tApasOttama Bava tApanivAraka| gOpAladAsarigeraguve ||3||

dhareya surara uddharisalOsuga divya | harikathAmRutasAra granthava ||
viracisutaj~jAna pariharisidantha| hariBaktAgraNi SrI jagannAtha ||4||

dhareyOLu hari lIlAmRuta vRuShTi gareyalu | pari pari kathegaLa racisida ||
varadEndra munigaLa pAda sArasa BRuMga | parama sucarita SrI prANESa ||5||

hari Bakti mArgava pari pari SiShyari | garuhi karuNadinduddharisida ||
paramata timirakke taraNi svarUpa SrI | guru prANESAryarigeraguve ||6||

guru pAda sEveya pari pari gaidu I| dhareyOLu dhanyarendenisida ||
hari dAsa kularatna sarvasadguNa pUrNa| vara SrISa prANESa dAsArya ||7||

guru prANESarakara sarasija sanjAta | parama BAgavatarenisida ||
maruta matada tatvavaridantha suKada sun | dara viThala mOda viThalareMba ||8||

BUmiyOL varadESa viThThalana nijaBakta | stOmakke SirabAgi namisuve ||
A mahAtmara pAda rajadoLennanu dEva | nEmadindali horaLADiso ||9||

 

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s