ರಕ್ಷಿಸೇ ಕಲ್ಲೂರ ಪುರವಾಸೆ || ಪ ||
ದಕ್ಷ ಸುತೆ ಪತಿಯ ಪಿತ ಮಾತೆ ಕರುಣಿಸೆ || ಅ.ಪ.||
ಪತಿತ ಪಾವನೆ ಭಕ್ತ ಪೋಷಿಯೆ
ಉದ್ಧರಿಸೆ ಹರಿಸದನ ವಾಸಿಯೆ
ವೇದ ವೇದಾ೦ತಾಭಿಮಾನಿಯೇ
ಭವದ ಬಾಧೆ ಕಳೆಯೇ ಮಾಯಾ ದೇವಿಯೆ || ೧ ||
ಕ್ಷೀರವಾರಿಧಿಯಲ್ಲಿ ಜನಸಿ ದೇವಿ
ಸರ್ವ ಸ್ಥಳದಲ್ಲಿ ವ್ಯಾಪಿಸಿ
ಪರಿಪರಿಯಿ೦ದ ಹರಿಯ ಸೇವಿಸಿ
ನಿರುತ ಹರಿಭಕ್ತರ ಪೋಷಿಸಿ || ೨ ||
ನಾನಾಲ೦ಕಾರ ಶೋಭಿತೆ ಮಾತೆ
ದಿನಕರಶತಕೋಟಿ ತೇಜಿತೆ
ಕ್ಷೋಣಿಯೋಳಗೆ ಅಧಿಕ ಪ್ರಖ್ಯಾತೆ
ನಮ್ಮ ಆನ೦ದವಿಠಲನ೦ಘ್ರಿ ತೋರಿಸೆ || ೩ ||
rakShisE kallUra puravAse || pa ||
dakSha sute patiya pita mAte karuNise || a.pa.||
patita pAvane Bakta pOShiye
uddharise harisadana vAsiye
vEda vEdAntABimAniyE
Bavada bAdhe kaLeyE mAyA dEviye || 1 ||
kShIravAridhiyalli janasi dEvi
sarva sthaLadalli vyApisi
paripariyinda hariya sEvisi
niruta hariBaktara pOShisi || 2 ||
nAnAlankAra SOBite mAte
dinakaraSatakOTi tEjite
kShONiyOLage adhika praKyAte
namma AnandaviThalananGri tOrise || 3 ||
Thank you for the lyrics
LikeLike