MADHWA · Ugabogha · ugabogha

My favorite Ugabhoga collection

Sri Sripadarajaru

ಮನೆಯಿಂದ ಸಂತೋಷ ಕೆಲವರಿಗೆ ಲೋಕದಲ್ಲಿ
ಧನದಿಂದ ಸಂತೋಷ ಕೆಲವರಿಗೆ ಲೋಕದಲ್ಲಿ
ವನಿತೆಯಿಂ ಸಂತೋಷ ಕೆಲವರಿಗೆ ಲೋಕದಲ್ಲಿ
ತನಯರಿಂ ಸಂತೋಷ ಕೆಲವರಿಗೆ ಲೋಕದಲ್ಲಿ
ಇನಿತು ಸಂತೋಷ ಅವರವರಿಗಾಗಲಿ ನಿನ್ನ
ನೆನೆವೋ ಸಂತೋಷ ಎನಗಾಗಲಿ ನಮ್ಮ ರಂಗವಿಠಲ

Maneyinda santōṣa kelavarige lōkadalli dhanadinda santōṣa kelavarige lōkadalli vaniteyiṁ santōṣa kelavarige lōkadalli tanayariṁ santōṣa kelavarige lōkadalli initu santōṣa avaravarigāgali ninna nenevō santōṣa enagāgali nam’ma raṅgaviṭhala

ಧ್ಯಾನವು ಕೃತಯುಗದಿ
ಯಜನ ಯಜ್ಞವು ತ್ರೇತಾಯುಗದಿ
ದಾನವಾಂತಕನ ದೇವತಾರ್ಚನೆ ದ್ವಾಪರಯುಗದಿ
ಆ ಮಾನವರಿಗೆಷ್ಟು ಫಲವೊ ಅಷ್ಟು ಫಲವು
ಕಲಿಯುಗದಿ ಗಾನದಲಿ ಕೇಶವಯೆನಲು
ಕೈಗೂಡುವನು ರಂಗವಿಠಲ

Dhyānavu kr̥tayugadi yajana yajñavu trētāyugadi dānavāntakana dēvatārcane dvāparayugadi ā mānavarigeṣṭu phalavo aṣṭu phalavu kaliyugadi gānadali kēśavayenalu kaigūḍuvanu Ranga vittala

Purandara dasaru

ಎಲ್ಲಿ ಹರಿಕಥೆಯ ಪ್ರಸಂಗ
ಅಲ್ಲಿ ಗಂಗೆ ಯಮುನೆ ಗೋದಾವರಿ ಸಿಂಧು
ಎಲ್ಲ ತೀರ್ಥವು ಬಂದು ಎಣೆಯಾಗಿ ನಿಂದಿರಲು
ವಲ್ಲಭ ಪುರಂದರವಿಠಲನೊಪ್ಪಿದನು ||

Elli harikatheya prasanga
Alli gange yamune godavari sindhu
Ella tirthavu bandu eneyagi nindiralu
Vallaba purandaravithalanoppidanu ||

ಇಂದಿನ ದಿನ ಶುಭದಿನ
 ಇಂದಿನ ವಾರ ಶುಭವಾರ 
ಇಂದಿನ ತಾರೆ ಶುಭತಾರೆ
 ಇಂದಿನ ಕರಣ ಶುಭಕರಣ 
ಇಂದಿನ ಯೋಗ ಶುಭಯೋಗ
 ಇಂದಿನ ಲಗ್ನ ಶುಭಲಗ್ನ
ಇಂದು ಪುರಂದರವಿಠಲರಾಯನ
 ಪಾಡಿದ ದಿನವೆ ಶುಭದಿನವು

Indina dina subadina
Indina vara subavara
Indina tare subatare
Indina karana subakarana
Indina yoga subayoga
Indina lagna subalagna
Indu purandaravithalarayana
Padida dinave subadinavu

ಆನೆಯು ಕರೆದರೆ ಆದಿಮೂಲ ಬಂದಂತೆ |
ಅಜಾಮಿಳನು ಕರೆದರೆ ನಾರಾಯಣನು ಬಂದಂತೆ |
ಅಡವಿಯಲ್ಲಿ ಧ್ರುವರಾಯ ಕರೆದರೆ ವಾಸುದೇವ ಬಂದಂತೆ |
ಸಭೆಯಲ್ಲಿ ದ್ರೌಪದಿ ಕರೆದರೆ ಶ್ರೀಕೃಷ್ಣ ಬಂದಂತೆ |
ನಿನ್ನ ದಾಸರ ದಾಸನು ನಾ ಕರೆದರೆ |
ಎನ್ನ ಪಾಲಿಸಬೇಕು ಪುರಂದರ ವಿಠಲ |

Aneyu karedare adimula bandante |
Ajamilanu karedare narayananu bandante |
Adaviyalli dhruvaraya karedare vasudeva bandante |
Sabeyalli draupadi karedare srikrushna bandante |
Ninna dasara dasanu na karedare |
Enna palisabeku purandara vithala |

ಜಯ ಹರಿಯೊಂಬುದೆ ಸುದಿನವು
 ಜಯ ಹರಿಯೆಂಬುದೆ ತಾರಾಬಲವು
 ಜಯ ಹರಿಯೆಂಬುದೆ ಚಂದ್ರಬಲವು
 ಜಯ ಹರಿಯೆಂಬುದೆ ವಿದ್ಯಾಬಲವು 
ಜಯ ಹರಿಯೆಂಬುದೆ ದೈವಬಲವು
 ಜಯ ಹರಿ ಪುರಂದರವಿಠಲನ
ಬಲವಯ್ಯಾ ಸುಜನರಿಗೆ ||

Jaya hariyombude sudinavu
Jaya hariyembude tarabalavu
Jaya hariyembude candrabalavu
Jaya hariyembude vidyabalavu
Jaya hariyembude daivabalavu
Jaya hari purandaravithalana
Balavayya sujanarige ||

ಶುಭವಿದು ಶೋಭನ ಹರಿಗೆ
 ಶುಭವಿದು ಶೋಭನ ಸಿರಿಗೆ
ಶುಭವಿದು ಪುರಂದರವಿಟ್ಠಲರಾಯನಿಗೆ 
ಶುಭವಿದು ಶೋಭನ ಹರಿಗೆ ||

Subavidu shobana harige
Subavidu shobana sirige
Subavidu purandaravitthalarayanige
Subavidu shobana harige ||

ಒಂದು ಕಾಲದಲ್ಲಿ ಆನೆ ಕುದುರೆ ಮೇಲ್ಮೆರೆಸುವೆ 
ಒಂದು ಕಾಲದಲ್ಲಿ ಬರಿಗಾಲಲ್ಲಿ ನಡೆಸುವೆ
 ಒಂದು ಕಾಲದಲ್ಲಿ ಮೃಷ್ಟಾನ್ನವುಣಿಸುವೆ
 ಒಂದು ಕಾಲದಲ್ಲಿ ಉಪವಾಸವಿರಿಸುವೆ
ನಿನ್ನ ಮಹಿಮೆಯ ನೀನೆ ಬಲ್ಲೆಯೊ ದೇವ
 ಪನ್ನಂಗಶಯನ ಶ್ರೀಪುರಂದರವಿಠಲ ||

Ondu kaladalli Ane kudure melmeresuve
Ondu kaladalli barigalalli nadesuve
Ondu kaladalli mrushtannavunisuve
Ondu kaladalli upavasavirisuve
Ninna mahimeya nine balleyo deva
Pannanngasayana sripurandara vittala||

ಬಲಿಯ ಮನೆಗೆ ವಾಮನ ಬಂದಂತೆ
 ಭಗೀರಥಗೆ ಶ್ರೀಗಂಗೆ ಬಂದಂತೆ
 ಮುಚುಕುಂದಗೆ ಶ್ರೀ ಮುಕುಂದ ಬಂದಂತೆ
ಗೋಪಿಯರಿಗೆ ಗೋವಿಂದ ಬಂದಂತೆ
 ವಿದುರನ ಮನೆಗೆ ಶ್ರೀ ಕೃಷ್ಣ ಬಂದಂತೆ
 ವಿಭೀಷಣನ ಮನೆಗೆ ಶ್ರೀ ರಾಮ ಬಂದಂತೆ
 ನಿನ್ನ ನಾಮವು ಬಂದು ಎನ್ನ ನಾಲಿಗೆಯಲಿ ನಿಂದು
 ಸಲಹಲಿ ಶ್ರೀ ಪುರಂದರವಿಠಲ||

Baliya manege vamana bandante
Bagirathage srigange bandante
Mucukundage sri mukunda bandante
Gopiyarige govinda bandante
Vidurana manege sri krushna bandante
Vibishanana manege sri rama bandante
Ninna namavu bandu enna naligeyali nindu
Salahali sri purandaravithala||

ಹಗಲು ನಿನ್ನ ನೆನೆಯಲಿಲ್ಲ ಹಸಿವು ತೃಷೆಯಿಂದ
ಇರುಳು ನಿನ್ನ ನೆನೆಯಲಿಲ್ಲ ನಿದ್ರೆಭರದಿಂದ
ಈ ಎರಡರ ಬಾಧೆಗೆ ನಾನೊಳಗಾದೆನೊ
ಸಲಹೊ ಪುರಂದರವಿಠಲ ಪುರಂದರವಿಠಲ ||

Hagalu ninna neneyalilla hasivu tr̥ṣeyinda iruḷu ninna neneyalilla nidrebharadinda ī eraḍara bādhege nānoḷagādeno salaho purandaraviṭhala purandaraviṭhala ||

Vijaya dasaru

ಒಂದು ಕೈಯಲಿ ಖಡ್ಗ ಒಂದು ಕೈಯಲಿ ಹಲಿಗೆ
ಅಂದವಾಗಿ ಪಿಡಿದುಕೊಂಡು ದಿವಾರಾತ್ರಿಯಲಿ
ಬಂದು ಬದಿಯಲಿ ನಿತ್ಯ ಬಾರಾಸನಾಗಿ ನಿಂದು
ಹಿಂದು ಮುಂದುಪದ್ರವವಾಗದಂತೆ
ಇಂದಿರೆರಮಣ ಕಾಯುತ್ತಲಿರೆ ಎನಗಾವ
ಬಂಧಕಗಳು ಇಲ್ಲ ಧನ್ಯ ಧನ್ಯ
ಕಂದರ್ಪನಯ್ಯಾ ಸಿರಿ ವಿಜಯ ವಿಠ್ಠಲರಾಯ
ದೇವ ಆಪತ್ತು ಬರಲೀಯ ನೋಡಿ

Ondu kaiyali khaḍga ondu kaiyali halige andavāgi piḍidukoṇḍu divārātriyali bandu badiyali nitya bārāsanāgi nindu hindu mundupadravavāgadante indireramaṇa kāyuttalire enagāva bandhakagaḷu illa dhan’ya dhan’ya kandarpanayyā siri vijaya viṭhṭhalarāya dēva āpattu baralīya nōḍi

ತತ್ವಾಭಿಮಾನಿಗಳಿರಾ ಉತ್ತರ ಪಾಲಿಪುದು
ಎತ್ತಿ ಕರವ ಮುಗಿವೆ ವಿನಯದಲ್ಲಿ
ಆತ್ಮದೊಳಗೆ ನಿಮ್ಮ ವ್ಯಾಪಾರ ಘನವಯ್ಯ
ತತ್ತಸ್ಥಾನದಲ್ಲಿ ನಿತ್ಯವಾಗಿ
ದೈತ್ಯರಿಗೆ ಸರ್ವದ ನಿಮ್ಮ ಪ್ರೇರಣೆಯುಂಟು
ಅತ್ತ ಎಳೆಸದಿರಿ ದುಸ್ಸಂಗಕ್ಕೆ
ಚಿತ್ತದಲ್ಲಿ ನೀವೇ ನಿಜ ವ್ಯಾಪಾರ ಮಾಡುವರು
ಸತ್ಯಕ್ಕೆ ಎರಗುವ ಮಾರ್ಗವಿತ್ತು
ಉತ್ತಮ ಗುಣದಲ್ಲೆ ಮೊದಲೆ ನಿಮ್ಮ ಪೂಜಿಪ
ಅರ್ಥಿಯಾಗಲಿ ಆ ತರುವಾಯದಿ
ಉತ್ತಮ ಶ್ಲೋಕ ಸಿರಿವಿಜಯವಿಠಲನ್ನ
ತುತಿಸಿ ಆತನ್ನ ಚರಣ ನೋಳ್ಪದ ಮಾಡು||

Tatvābhimānigaḷirā uttara pālipudu etti karava mugive vinayadalli ātmadoḷage nim’ma vyāpāra ghanavayya tattasthānadalli nityavāgi daityarige sarvada nim’ma prēraṇeyuṇṭu atta eḷesadiri dus’saṅgakke cittadalli nīvē nija vyāpāra māḍuvaru satyakke eraguva mārgavittu uttama guṇadalle modale nim’ma pūjipa arthiyāgali ā taruvāyadi uttama ślōka sirivijayaviṭhalanna tutisi ātanna caraṇa nōḷpada māḍu||

Gopala dasaru

ಅನ್ಯರಿಂದಲಿ ಸುಖವಾಯಿತೆಂಬುವುದಕ್ಕಿಂತ
ನಿನ್ನಿಂದಾಯಿತೆಂಬ ಕ್ಲೇಶ ಮೇಲಯ್ಯ
ನಿನ್ನರಿಯದೆ ಅನ್ಯರ ಬಲ್ಲೆನೆಂಬುದಕ್ಕಿಂತ
ಕಣ್ಣಿಲ್ಲದಿರುವ ಕುರುಡ ಮೇಲಯ್ಯ
ಪುಣ್ಯಪಾಪವರಿಯದೆ ಬದುಕುವ ಮನು-
ಜನಿಗಿಂತ ನಾಯಿಕುನ್ನಿ ಲೇಸಯ್ಯ ಕುಲ-
ಹೀನನಾದರು ಸುಖ ದುಃಖಗಳನು
ನಿನ್ನಿಂದಾಯಿತೆಂಬ ಮತಿ
ಚೆನ್ನಾಗಿ ತಿಳಿಸಯ್ಯ ಗೋಪಾಲವಿಠಲ

An’yarindali sukhavāyitembuvudakkinta ninnindāyitemba klēśa mēlayya ninnariyade an’yara ballenembudakkinta kaṇṇilladiruva kuruḍa mēlayya puṇyapāpavariyade badukuva manu- janiginta nāyikunni lēsayya kula- hīnanādaru sukha duḥkhagaḷanu ninnindāyitemba mati cennāgi tiḷisayya gōpālaviṭhala

Achalananda vittala

ಗಂಡ ಮಾಡಿದ ಪುಣ್ಯ ಹೆಂಡತಿಗೆ ಸಮಪಾಲು
ಹೆಂಡತಿ ಮಾಡಿದ ಪುಣ್ಯ ಗಂಡನಿಗಿಲ್ಲಾ |
ಗಂಡ ಮಾಡಿದ ಪಾಪ ಹೆಂಡತಿಯದಲ್ಲಾ
ಹೆಂಡತಿ ಮಾಡಿದಪಾಪ ಗಂಡನಿಗೇ|
ತೋಂಡರಕ್ಷಕ ಅಚಲಾನಂದ ವಿಠಲಾ ನೀ ಗಂಡ-ನಾ ಹೆಂಡತಿ* ||

Gaṇḍa māḍida puṇya heṇḍatige samapālu heṇḍati māḍida puṇya gaṇḍanigillā | gaṇḍa māḍida pāpa heṇḍatiyadallā heṇḍati māḍidapāpa gaṇḍanigē| tōṇḍarakṣaka acalānanda viṭhalā nī gaṇḍa-nā heṇḍati* ||

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s