dasara padagalu · kaveri · MADHWA

Dasara padagalu on Kaveri

ನೋಡುವ ಬನ್ನಿರಯ್ಯ ||ಪ||

ಕಾವೇರಿಯ ಭವಹಾರಿಯ |
ಮುಕ್ತಿಕಾರಿಯ ನೋಡುವ ಬನ್ನಿರಯ್ಯ ||ಅ.ಪ||

ಮಾತೆಯ ನುತಜನಜಾತೆಯ ಹರಿಮನಃ |
ಪ್ರೀತೆಯ ಭುವನವಿಖ್ಯಾತೆಯ ||
ನೀತಿಯುನ್ನತಕರದಾತೆಯ ಶಿವನ ಸಂ-|
ಭೂತೆಯ ನೋಡುವ ಬನ್ನಿರಯ್ಯ ||1||

ಬಂದು ಸಕಲ ಮುನಿವೃಂದ ನೆರರೆಯೆ ವಿೂಯ-|
ಲಂದು ನಾರದಮುನಿ ಪೊಗಳುತಿರೆ ||
ಸಂದೇಹವಿಲ್ಲ ನೋಡಿದಡೆ ಮುಕುತಿಯಹು-|
ದೆಂದರೆ ಮುಳುಗಲದೇತಕಯ್ಯ?|| 2||

ಅರ್ಕಚಂದ್ರವಹ್ನಿಪುಷ್ಕರದೊಳು ಮಿಂದು |
ಚಕ್ರತೀರ್ಥದೊಳಗೋಲಾಡಿ ||
ಗಕ್ಕನೆ ಸದ್ಗತಿಯಹುದೆಂದು ಮನೆಗಳ |
ಕಕ್ಕುಲತೆಯ ಬಿಟ್ಟು ನಡೆಯಿರಯ್ಯ|| 3||

ಕಂಡರೆ ಸಕಲ ಪಾತಕ ಪರಿಹಾರ, ಪಡೆ-|
ದುಂಡರೆ ದುರಿತ-ದುರ್ಜನ ದೂರವು ||
ಕೊಂಡಾಡಿದವರಿಗನಂತ ಫಲವು ನೀ-|
ರುಂಡರೆ ಭವಬಂಧ ಮೋಕ್ಷವಯ್ಯ||4||

ಗಂಗೆ-ಯಮುನೆಗೆ ಹೋದಡೆ ಮೂರೈದುದಿ-|
ನಂಗಳಿಗಹುದು ಮುಕುತಿಯೆಂದಡೆ ||
ಹಿಂಗದೆ ಕಾವೇರಿಯ ನೋಡಿದಾಕ್ಷಣ ಪಾ-|
ಪಂಗಳಿರದೋಡಿ ಪೋಪುವಯ್ಯ ||5||

ಯಾಗಾದಿ ಸ್ವರ್ಗಯೋಗದಿ ಪೊಕ್ಕು ಕಾಶಿಯೊಳು |
ಆಗಲೆ ತನುವ ಬಿಡಲು ಮುಕುತಿ |
ಭೋಗಿ ಶಯನನ ದಿನದಲಿ ಕಾವೇರಿಗೆ |
ಹೋಗಿ ಮಿಂದವರಿಗಿದೇ ಗತಿಯಯ್ಯ ||6||

ಕಾವೇರಿಯ ಗಾಳಿ ಸೋಕಿದ ದೇಶದೊ-
ಳಾವಾವ ಮನುಜರು ಸುಕೃತಿಗಳೇ ||
ಕಾವೇರಿಯ ತೀರವಾಸಿಗಳಿಗೆ ಮಕ್ತಿ
ಆಹೋದು ಸಂದೇಃವಿಲ್ಲವಯ್ಯ||7||

ಆವಾವ ಜನ್ಮಕರ್ಮಂಗಳು ಸವೆವರೆ
ಕಾವೇರಿಯ ಕಾಡು ಸುಖಬಾಳಿರೈ ||
ಶ್ರೀವರ ಸ್ವಾಮಿ ಶ್ರೀಪುರಂದರವಿಠಲನ
ಸೇವೆಯೊಳನುದಿನವಿಪ್ಪುದಯ್ಯ ||8||

nODuva bannirayya ||pa||

kAvEriya BavahAriya |
muktikAriya nODuva bannirayya ||a.pa||

mAteya nutajanajAteya harimanaH |
prIteya BuvanaviKyAteya ||
nItiyunnatakaradAteya Sivana saM-|
BUteya nODuva bannirayya ||1||

bandu sakala munivRuMda nerareye miyu-|
landu nAradamuni pogaLutire ||
sandEhavilla nODidaDe mukutiyahu-|
dendare muLugaladEtakayya?|| 2||

arkacandravahnipuShkaradoLu mindu |
cakratIrthadoLagOlADi ||
gakkane sadgatiyahudendu manegaLa |
kakkulateya biTTu naDeyirayya|| 3||

kanDare sakala pAtaka parihAra, paDe-|
dunDare durita-durjana dUravu ||
konDADidavarigananta Palavu nI-|
runDare Bavabandha mOkShavayya||4||

gange-yamunege hOdaDe mUraidudi-|
nangaLigahudu mukutiyeMdaDe ||
hingade kAvEriya nODidAkShaNa pA-|
pangaLiradODi pOpuvayya ||5||

yAgAdi svargayOgadi pokku kASiyoLu |
Agale tanuva biDalu mukuti |
BOgi Sayanana dinadali kAvErige |
hOgi mindavarigidE gatiyayya ||6||

kAvEriya gALi sOkida dESado-
LAvAva manujaru sukRutigaLE ||
kAvEriya tIravAsigaLige makti
AhOdu saMndEHvillavayya||7||

AvAva janmakarmangaLu savevare
kAvEriya kADu suKabALirai ||
SrIvara svAmi SrIpurandaraviThalana
sEveyoLanudinavippudayya ||8||

 


ಕಾವೇರಿ ತ್ರಿಭುವನಕಾಯೆ | ಸುರಮುನಿಗೇಯೆ |
ಕಾವೇರಿ | ಆವಾವ ಜನುಮಕೆ ಬಿಡದೆ ಎನ್ನನು ಕಾಯೆ ||[a||

ಅಜನನಂದನೆ ಚಂದ್ರವದಗೆ | ಚತುರಮಯೆ |
ಸುಜನರಿಗಾನಂದ ಸದಗೆ | ಧವಳಕಾಯೆ |
ಭಜಿಸಿ ಬೇಡುವೆ ನಿನಗಿದನೆ |
ಸೃಜಿಸಿ ಕೊಡುವುದು |
ತ್ರಿಜಗದೊಳಗೆ ಹರಿ |
ನಿಜ ಭಕ್ತರಪಾದ | ರಜವಾಗಿ ಯಿಪ್ಪ ಸ |
ಹಜ ಮತಿಯನುದಿನ | ಕುಜನ ನಿವಾರೆ ||1||

ಕಲಿನಾಶ ಕಾರುಣ್ಯ ನಿಧಿಯೆ | ನಿರ್ಮಳಶೀಲೆ |
ಕಲಕಾಲಾ ಸುಜ್ಞಾನಾಂಬುಧಿಯೆ |
ತಲೆವಾಗಿ ನಮಿಸುವೆ |
ಹಲವು ಜನ್ಮಂಗಳ | ಒಳಗೊಳಗೆ ಬಿದ್ದು |
ಹಲಬುತಿಪ್ಪ ವ್ಯಾ |
ಕುಲವನು ಕಳೆದು ನಿ |
ಶ್ಚಲ ಮತದೊಳಗಿಡು ||2||

ನಿತ್ಯ ಉತ್ತಮ ಗುಣಸಮುದ್ರೇ |
ಸಿಂಹಜೆ ಮಾರುದೃತೆ ಎನಿಪ ಲೋಪಾಮುದ್ರೆ |
ಕವೇರಕನ್ಯೆ ……ಗಿತ್ತ ಪೊಳೆವ ಸೂಭದ್ರೆ |
ಸತ್ಯ ಸಂಕಲ್ಪ ಶ್ರೀ ವಿಜಯವಿಠ್ಠಲನ್ನ ಭೃತ್ಯನೆನೆಸಿಕೊಂಡು
ಸ್ರೌತ್ಯದಿಂದಲಿ ಬಲು |
ನೃತ್ಯಮಾಡುವ ಸಂ |ಪತ್ತನೆ ಕರುಣಿಸು ||3||

kAvEri triBuvanakAye | suramunigEye |
kAvEri | AvAva janumake biDade ennanu kAye ||[a||

ajananandane candravadage | caturamaye |
sujanarigAnanda sadage | dhavaLakAye |
Bajisi bEDuve ninagidane |
sRujisi koDuvudu |
trijagadoLage hari |
nija BaktarapAda | rajavAgi yippa sa |
haja matiyanudina | kujana nivAre ||1||

kalinASa kAruNya nidhiye | nirmaLaSIle |
kalakAlA suj~jAnAMbudhiye |
talevAgi namisuve |
halavu janmaMgaLa | oLagoLage biddu |
halabutippa vyA |
kulavanu kaLedu ni |
Scala matadoLagiDu ||2||

nitya uttama guNasamudrE |
siMhaje mArudRute enipa lOpAmudre |
kavErakanye ……gitta poLeva sUBadre |
satya saMkalpa SrI vijayaviThThalanna BRutyanenesikoMDu
srautyadiMdali balu |
nRutyamADuva saM |pattane karuNisu ||3||


ಕಾವೇರಿ ಜಲ ಸೋಕಿದಾ ವಾತ ಸಂಗದಿ
ಆವ ದೇಶವು ಧನ್ಯವೊ ||pa||

ಪಾವನಾತ್ಮಕ ಪ್ರಥಮ ಝಾವದಲಿ ಮಜ್ಜನವ
ಗೈವ ಸುಜನರೇ ಧನ್ಯರೋ||a.pa||

ಆದಿ ಮಧ್ಯಾಂತರಂಗರ ಸೇವೆಯನು ಮಾಡಿ
ಸಾಧಿಸಿದೆ ಮಾಂಗಲ್ಯವ
ಹೋದ ದೇಶದಿ ಹೊನ್ನು ಮಳೆಗರೆವ ನಿನ್ನ ಪರ
ಮಾದರದಿ ಸೇವಿಸುವರು ||1||

ಚೋಳ ಮಂಡಲಭಾಗ್ಯ ಪೇಳಸಾಧ್ಯವೆ ನಿನ್ನ
ಲಾಲನೆಯ ಪಡೆಯುತಿರಲು
ಕೇಳುವನು ನಿನ್ನಯ ಕೃಪಾಲವದಿ ತನು ಮನವ
ಕೀಳು ವಿಷಯಕೆ ಬಿಡದಿರು ||2||

ಪುಣ್ಯನದಿಗಳಲಿ ಬಲು ಗಣ್ಯಸ್ಥಾನವ ಪಡೆದು
ಮಾನ್ಯಳಾಗಿರುವೆ ಮಾತೆ
ನಿನ್ನ ತೀರದಲಿ ನೆಲಸಿಹ ಜನಕೆ ಪರಗತಿ ಪ್ರ
ಸನ್ನ ಮುಖಿ ನಿಶ್ಚಯವಿದು ||3||

kAvEri jala sOkidA vAta sangadi
Ava dESavu dhanyavo ||pa||

pAvanAtmaka prathama JAvadali majjanava
gaiva sujanarE dhanyarO||a.pa||

Adi madhyAntarangara sEveyanu mADi
sAdhiside mAngalyava
hOda dESadi honnu maLegareva ninna para
mAdaradi sEvisuvaru ||1||

cOLa manDalaBAgya pELasAdhyave ninna
lAlaneya paDeyutiralu
kELuvanu ninnaya kRupAlavadi tanu manava
kILu viShayake biDadiru ||2||

puNyanadigaLali balu gaNyasthAnava paDedu
mAnyaLAgiruve mAte
ninna tIradali nelasiha janake paragati pra
sanna muKi niScayavidu ||3||


ಕಾವೇರಿ ಕಲುಪಾಪಹಾರಿ ಪಾವನ
ಶರೀರೆ ಶುಭತೋಷಕಾರಿ ||pa||

ಶ್ರೀ ವಾಸುದೇವ ರಂಗೇಶನಾಲಯಕೆ ನೀ
ನಾವರಣಳಾಗಿಪ್ಪೆ ವಿರಜೆಯಂತೇ
ದೇವ ಋಷಿ ಗಂಧರ್ವ ಪಿತೃಪ ನರವರರಿಂದ
ಸೇವನೀಯಳಾಗಿ ಸರ್ವಾರ್ಥ ಪೂರೈಪೆ ||1||

ಜಲಚರಾನ್ವೇಷಣ ಲುಬ್ಧ ಸಾಲಿಗ್ರಾಮ
ತುಲಸಿ ವೃಕ್ಷವನೆ ಕೊಡಿಸಿದ ಮಾತ್ರದೀ
ಕಲುಷರಾಶಿಗಳೆಲ್ಲ ಕಳೆದು ಮುಕ್ತಿಯನಿತ್ತೆ
ಸಲಿಲಮಂದಿರೆ ನಿನ್ನ ಕರುಣಕೇನೆಂಬೆ ||2||

ರವಿ ತುಲಾರಾಶಿಗೈದಿದ ಸಮಯದೊಳಗೊಂದು
ದಿವಸ ಮಜ್ಜನ ಗೈವ ಮಾನವರಿಗೆ
ಪವನಾಂತರಾತ್ಮಕನ ಪಾದಕಮಲವ ತೋರಿ
ಭವಜ ರೋಗವ ಕಳೆದು ಭಾಗ್ಯವಂತರ ಮಾಳ್ಪೆ ||3||

ಶ್ರೀ ಪವನ ಶಿವರಿಂದ ತಾ ಪೂಜೆಗೊಳುತ ಬಹು
ರೂಪಗಳ ಧರಿಸಿಕೊಂಡಾ ಪರ ಮನು
ವ್ಯಾಪಿಸಿಹ ನಿನ್ನೊಳದ್ಯಾಪಿ ಸ್ವರ್ಗಸ್ಥ ಜನ
ರೀ ಪೊಡವಿಯೊಳು ತವ ಸಮೀಪದಲಿ ಜನಿಸುವರು ||4||

ಮೂಢಮತಿ ನಾನು ಕೊಂಡಾಡ ಬಲ್ಲೆನೆ ನಿನ್ನ
ಬೇಡಿಕೊಂಡೆನು ಹೃದಯ ನೀಡದೊಳಗೇ
ಗೂಡ ಪದ ಶಯನ ಜಗನ್ನಾಥ ವಿಠ್ಠಲನಂಘ್ರಿ
ನೋಡುವ ಸೌಭಾಗ್ಯ ದಯ ಮಾಡು ಪ್ರತಿದಿನದಲ್ಲಿ ಬ ||5||

kAvEri kalupApahAri pAvana
SarIre SuBatOShakAri ||pa||

SrI vAsudEva rangESanAlayake nI
nAvaraNaLAgippe virajeyaMtE
dEva RuShi gandharva pitRupa naravarariMda
sEvanIyaLAgi sarvArtha pUraipe ||1||

jalacarAnvEShaNa lubdha sAligrAma
tulasi vRukShavane koDisida mAtradI
kaluSharASigaLella kaLedu muktiyanitte
salilamandire ninna karuNakEneMbe ||2||

ravi tulArASigaidida samayadoLagondu
divasa majjana gaiva mAnavarige
pavanAntarAtmakana pAdakamalava tOri
Bavaja rOgava kaLedu BAgyavaMtara mALpe ||3||

SrI pavana Sivarinda tA pUjegoLuta bahu
rUpagaLa dharisikoMDA para manu
vyApisiha ninnoLadyApi svargastha jana
rI poDaviyoLu tava samIpadali janisuvaru ||4||

mUDhamati nAnu konDADa ballene ninna
bEDikonDenu hRudaya nIDadoLagE
gUDa pada Sayana jagannAtha viThThalananGri
nODuva sauBAgya daya mADu pratidinadalli ba ||5||

2 thoughts on “Dasara padagalu on Kaveri

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s