ವರದಾತೀರದಿ ಶೋಭಿಪ ಯತಿವರನ್ಯಾರೇ
ನೋಡಮ್ಮಯ್ಯಾ ||pa||
ತ್ವರದಿ ಭಕುತರ ದುರಿತವ ತರಿದತಿ
ತ್ವರದಿ ಪಾಲಿಪ ಶ್ರೀಧಿರೇಂದ್ರ ಕಾಣಮ್ಮ||a.pa||
ಸುಂದರ ತಮವೃಂದಾವನ ಶುಭತರ
ಮಂದಿರಗತನ್ಯಾರೇ ನೋಡಮ್ಮಯ್ಯ
ನಂದದಿ ಮಹಜನಸಂದಣಿ ಮಧ್ಯದಿ
ಚಂದಿರ ತೆರದಿಹನ್ಯಾರೇ ನೋಡಮ್ಮಯ್ಯ
ಇಂದಿರಪತಿ – ಗುಣ – ವೃಂದವ ಭಜಿಸುತ
ನಂದಿದಿ ಶೋಭಿಪನ್ಯಾರೇ ಪೇಳಮ್ಮಯ್ಯಾ
ಅಂಧ ಬಧಿರÀರ ವೃಂದಗಳಿಗಿಷ್ಟವ
ನಿಂದು ನೀಡುವ ವಾದೀಂದ್ರರ ತನುಜ ||1||
ಮೂಢ ಮತಿಯನು ಓಡಿಸಿ ಜನರಿಗೆ
ಗಾಢಭಕುತಿಯನು ನೋಡಮ್ಮಯ್ಯ
ನೀಡುವ, ಭಜಕರು ಮಾಡುವಸೇವೆಗೆ
ನೀಡುವ ವರಗಳನ್ಯಾರ್ಯೇ ನೋಡಮ್ಮಯ್ಯ
ಪಾಡುವದಾಸರು ಬೇಡುವ ಇಷ್ಟವ
ನೀಡುವದಿನ್ಯಾರೇ ಪೇಳಮ್ಮಯ್ಯಾ
ರೂಢಿಯೊಳಗೆ ಇಷ್ಟನೀಡುವ ವಿಷಯದಿ
ಜೋಡುಗಾಣೆ ನಾ ನೋಡಮ್ಮಯ್ಯ ||2||
ಭೂvಪೀಡೆ ಮಹ ಪ್ರೇತಪಿಶಾಚಿಯ
ವ್ರಾತಗಳ ಬಲು ನೋಡಮ್ಮಯ್ಯ
ಭೀತಿಬಡುತ ಮಹ ಆತುರದಲಿ ಈ
ಭೂತಳ ಬಿಡುತಿಹವೋ ನೋಡಮ್ಮಯ್ಯ
ಯಾತುಧಾನಗಣ ಈತನ ನಾಮದ
ಭೀತಿಗೆ ಪೋಗುತಿಹುದು ನೋಡಮ್ಮಯ್ಯ
ತಾತನ ತೆರದಲಿ ಈತನು ನಿಜಪದ
ದೂತರ ಪೊರೆವನು ನೋಡಮ್ಮಯ್ಯ
ದಾತಗುರು ಜಗನ್ನಾಥ ವಿಠಲಗೆ
ಪ್ರೀತ ಜನರೊಳತಿ ಪ್ರೀತನೀತಮ್ಮಾ||3||
varadAtIradi SOBipa yativaranyArE
nODammayyA ||pa||
tvaradi Bakutara duritava taridati
tvaradi pAlipa SrIdhirEndra kANamma||a.pa||
sundara tamavRundAvana SuBatara
mandiragatanyArE nODammayya
nandadi mahajanasandaNi madhyadi
candira teradihanyArE nODammayya
indirapati – guNa – vRuMdava Bajisuta
nandidi SOBipanyArE pELammayyA
andha badhiraÀra vRundagaLigiShTava
nindu nIDuva vAdIndrara tanuja ||1||
mUDha matiyanu ODisi janarige
gADhaBakutiyanu nODammayya
nIDuva, Bajakaru mADuvasEvege
nIDuva varagaLanyAryE nODammayya
pADuvadAsaru bEDuva iShTava
nIDuvadinyArE pELammayyA
rUDhiyoLage iShTanIDuva viShayadi
jODugANe nA nODammayya ||2||
BUvpIDe maha prEtapiSAciya
vrAtagaLa balu nODammayya
BItibaDuta maha Aturadali I
BUtaLa biDutihavO nODammayya
yAtudhAnagaNa Itana nAmada
BItige pOgutihudu nODammayya
tAtana teradali Itanu nijapada
dUtara porevanu nODammayya
dAtaguru jagannAtha viThalage
prIta janaroLati prItanItammA||3||
ಧೀರೇಂದ್ರ ಧೀರೇಂದ್ರ ||pa||
ಧೀರ ಮೂಲರಾಮನ ಪದಕಮಲವ
ತೋರು ಮನದಿ ನೀ ಕುಣೀಕುಣಿದಾಡುವೆ ||a.pa||
ವರದಾ ತೀರದಿ ವರಗಳ ಕೊಡುತಲಿ
ಮರುತಮತಾಂಬುಧಿ ಚಂದಿರನೆನಿಸಿದ ||1||
ಕುಷ್ಟಾದಿ ಬಹು ದುಷ್ಟ ಗ್ರಹಗಳ
ಕುಟ್ಯೋಡಿಸುತ ಅಭೀಷ್ಟವಗರೆಯುವ ||2||
ಮುನಿ ಮೌಳಿಯೆ ನಿನ್ನನು ಸ್ತುತಿಗೈಯುತ
ಘನ ಭಕ್ತಿಯೊಳಾಂ ಕುಣಿಕುಣಿದಾಡುವೆ ||3||
ಅರ್ಥಿಯಿಂದ ನಾ ನರ್ತನಗೈಯುವೆ
ಸುತ್ತಿ ಸುತ್ತಿ ದಾಸತ್ವದ ನೇಮದಿ ||4||
ಶ್ರೇಷ್ಠ ಶ್ರೀ ಗೋಪಾಲಕೃಷ್ಣವಿಠ್ಠಲಪ್ರಿಯ
ಕೃಷ್ಣನ ಚರಣವ ಥಟ್ಟನೆ ತೋರಿಸೋ ||5||
dhIrEndra dhIrEndra ||pa||
dhIra mUlarAmana padakamalava
tOru manadi nI kuNIkuNidADuve ||a.pa||
varadA tIradi varagaLa koDutali
marutamatAMbudhi chandiranenisida ||1||
kuShTAdi bahu duShTa grahagaLa
kuTyODisuta aBIShTavagareyuva ||2||
muni mauLiye ninnanu stutigaiyuta
Gana BaktiyoLAM kuNikuNidADuve ||3||
arthiyinda nA nartanagaiyuve
sutti sutti dAsatvada nEmadi ||4||
SrEShTha SrI gOpAlakRuShNaviThThalapriya
kRuShNana caraNava thaTTane tOrisO ||5||
One thought on “Dasara padagalu on Sri Dheerendra theertharu”