ಶ್ರೀ ಜಗನ್ನಾಥತೀರ್ಥರ ದಿವ್ಯ ಮಹಿಮೆಯನು
ರಾಜಿಸುವ ಹೈಮಲಿಪಿಯಲ್ಲಿ ಬರೆಯಲಿ ಬೇಕು ||pa||
ಈ ಜಗದಿ ಸುಜನ ಸುರಭೂಜರಾಗಿಹ ಮಹಾ
ರಾಜ ಶ್ರೀ ರಘುನಾಥತೀರ್ಥ ಕರ ಸಂಜಾತ ||a.pa||
ಉದ್ಭವಿಸಿದರು ಗಾಲವರು ಜಗದೊಳೆಂಬಂಶ
ವೇದ್ಯವಾಯಿತು ಆಪ್ತಜನವೃಂದಕೆ
ಮಧ್ವಮತ ತತ್ವಗಳನುದ್ಧಾರವನೆಗೈದ
ದಿಗ್ಧಂತಿಗಳತಿ ಪ್ರಸಿದ್ಧ ಸ್ಥಾನವ ಪಡೆದ ||1||
ಸಕಲ ಶಾಸ್ತ್ರಾರ್ಥ ನಿರ್ಣಯಗೈವ ಪರಸೂತ್ರ
ನಿಕರಗಳಿಗಲವಬೋಧರ ಭಾಷ್ಯವ
ಸುಖದಿಂದಲರಿಯಲುಪಕೃತಿಗೈದ ಯತಿಕುಲ
ತಿಲಕ ಭಾಷ್ಯಾದೀಪಿಕಾಚಾರ್ಯರೆಂದತಿ ಖ್ಯಾತ ||2||
ಸರ್ವಗುಣ ಗುಣಪೂರ್ಣ ಸರ್ವತ್ರ ವ್ಯಾಪ್ತ ಹರಿ
ಸರ್ವಭಕ್ತ ಪ್ರಸನ್ನನೆಂದರುಹಲು
ಓರ್ವ ಆಮ್ರವೃಕ್ಷದಲಿ ಶ್ರೀ ನರಹರಿಯ
ಉರ್ವನುಗ್ರಹ ಪಡೆದ ಸರ್ವತಂತ್ರ ಸ್ವತಂತ್ರ ||3||
SrI jagannAthatIrthara divya mahimeyanu
rAjisuva haimalipiyalli bareyali bEku ||pa||
I jagadi sujana suraBUjarAgiha mahA
rAja SrI raGunAthatIrtha kara sanjAta ||a.pa||
udBavisidaru gAlavaru jagadoLeMbaMSa
vEdyavAyitu AptajanavRundake
madhvamata tatvagaLanuddhAravanegaida
digdhantigaLati prasiddha sthAnava paDeda ||1||
sakala SAstrArtha nirNayagaiva parasUtra
nikaragaLigalavabOdhara BAShyava
suKadindalariyalupakRutigaida yatikula
tilaka BAShyAdIpikAcAryarendati KyAta ||2||
sarvaguNa guNapUrNa sarvatra vyApta hari
sarvaBakta prasannanendaruhalu
Orva AmravRukShadali SrI narahariya
urvanugraha paDeda sarvatantra svatantra ||3||
One thought on “Dasara pada on Sri Jagannatha thirtharu(Bhasyadipikacharyaru)”