dasara padagalu · MADHWA · Varadendra thirtharu

Dasara padagalu on Sri Varadendra theertharu

ವರದೇಂದ್ರ ಮುನಿಪ ದಿಕ್ಷತಿಗಳಂತೆ
ಪರಮ ಸಂಭ್ರಮದಿ ರಾಜಿಸುವ ನೋಳ್ಪರಿಗೆ ||pa||

ಸುರರಾಜನಂತೆ ಭೂಸುರಗಡಣ ಮಧ್ಯದಲಿ
ಮೆರೆವ ದುರ್ವಿಷಯಕೆ ಪಾವಕಾ
ನಿರುತ ಸದ್ಧರ್ಮ ಶಿಕ್ಷಿಸುವಲ್ಲಿ ವರದಂಡ
ಧರನಂತೆ ಇರುವ ದಿಗ್ವಜಿಯಿಸುವ ||1||

ಜ್ಞಾನಾದಿ ಗುಣದಿ ರತ್ನಾಕರನೆನಿಸಿ ಕುಮತ
ಪಾನೀಯಧರಗಳಿಗೆ ಪವಮಾನನೆನಿಪ
ದೀನಜನರಿಗೆ ಧನದ ವೈರಾಗ್ಯ ತಪದಲಿ
ಕೃಶಾನು ಕೇತನ ತೆರದಲೊಪ್ಪುವನಜಸ್ರ ||2||

ಸೂರಿಕುಲವರಿಯ ವಸುಧೀಂದ್ರರಾಯ ಕರಸ
ರೋರುಹದಿ ಜನಿಸಿ ಪರಮೋತ್ಸಹದಲಿ
ಶ್ರೀರಾಮ ವ್ಯಾಸ ಜಗನ್ನಾಥ ವಿಠಲನ ಚರ
ಣಾರವಿಂದರ್ಚನೆಯ ಪಡೆದು ಸಂತೋಷಿಸುವ||3||

varadEndra munipa dikShatigaLante
parama saMBramadi rAjisuva nOLparige ||pa||

surarAjanante BUsuragaDaNa madhyadali
mereva durviShayake pAvakA
niruta saddharma SikShisuvalli varadanDa
dharanante iruva digvajiyisuva ||1||

j~jAnAdi guNadi ratnAkaranenisi kumata
pAnIyadharagaLige pavamAnanenipa
dInajanarige dhanada vairAgya tapadali
kRuSAnu kEtana teradaloppuvanajasra ||2||

sUrikulavariya vasudhIndrarAya karasa
rOruhadi janisi paramOtsahadali
SrIrAma vyAsa jagannAtha viThalana cara
NAravindarcaneya paDedu santOShisuva||3||


ವರದೇಂದ್ರ ಯತಿ ಚಕ್ರವರ್ತಿ ನಿರಂತರ
ವರಣಿಸುವೆ ನಿಮ್ಮ ಕೀರ್ತಿ
ಪರಮ ಕರುಣಿ ನಿಮ್ಮ ಚರಣಕಮಲಯುಗ
ಕ್ಕೆರಗಿ ಬೇಡುವೆ ವರವಾ ಎಮ್ಮನು ಪೊರೆವಾ ||pa||

ನತಜನಬಂಧು ನೀನೆಂದೂ | ತಿಳಿದು
ನತಿಸಿದೆ ಗುಣಗಣಸಿಂಧು
ಪ್ರತಿಗಾಣೆ ನಿಮಗೆ ಸುವ್ರತಿ ವರ ಪ್ರಣತ ಕಾ
ಮಿತ ಕಲ್ಪತರುವೆ ನಿರ್ಜಿತಮಾರಮಾರ್ಗಣ
ಕ್ಷಿತಿಪರಿಗೆ ಪ್ರತಿದಿನದಿ ಪರಮಾದ್ಭುತವೆನಿಸುವುದು ನಿಮ್ಮದಾನ
ಪ್ರತತಿ ಸಾಂಪ್ರತ ಮಧುರವಚನಾ ಶಾಸ್ತ್ರ ಪ್ರವಚನಾ||1||

ಮರುತ ಮತಾಂಬುಧಿ ಚಂದ್ರಾ | ಚಾಮಿ
ಕರವರ್ಣಸರಸ ರವೀಂದ್ರ
ಪರವಾದಿತಿಮಿರ ಭಾಸ್ಕರ ವಸುಧೀಂದ್ರ ಸ
ದ್ಗುರು ಕರಸಂಜಾತ ನಿರುಪಮ ನಿರ್ಭೀತಾ
ಖರಮಥನ ಪದಕೋನದ ಮಧುಕರ ಕೃಪಾಕರ
ಕರವ ಪಿಡಿದುದ್ಧರಿಸುವುದು ಭೂ
ಸುರ ಕುಲೋತ್ತಂಸಾ ನಮೋ ಪರಮಹಂಸಾ ||2||

ಕಲಿತ ಸುಂದರ ಮಂದಹಾಸಾ ಹೇ ನಿ
ಷ್ಕಲುಷ ಸುತತ್ವ ವಿಲಾಸಾ
ಗಳಿತಾ ಘಸಂಘನಿಶ್ಚಲ ಜಗನ್ನಾಥ ವಿ
ಠಲನೊಲಿಮೆಯ ಪಡೆದಿಳಿಯೊಳು ಚರಿಸುವ
ಭಳಿರೆ ಪ್ರತಿಯೋಗಿಗಳೆನಿಪ ಕಂ
ಕಲಭಕೇಸರಿ ನಿಮ್ಮ ದಾಸರೊಳೊಲಿದು
ಪಾಲಿಪುದನವರತ ಎನ್ನ ನಂಬಿದೆನೋ ನಿನ್ನ ||3||

varadEndra yati cakravarti nirantara
varaNisuve nimma kIrti
parama karuNi nimma caraNakamalayuga
kkeragi bEDuve varavA emmanu porevA ||pa||

natajanabandhu nInendU | tiLidu
natiside guNagaNasindhu
pratigANe nimage suvrati vara praNata kA
mita kalpataruve nirjitamAramArgaNa
kShitiparige pratidinadi paramAdButavenisuvudu nimmadAna
pratati sAMprata madhuravacanA SAstra pravacanA||1||

maruta matAMbudhi candrA | cAmi
karavarNasarasa ravIndra
paravAditimira BAskara vasudhIndra sa
dguru karasaMjAta nirupama nirBItA
Karamathana padakOnada madhukara kRupAkara
karava piDiduddharisuvudu BU
sura kulOttaMsA namO paramahaMsA ||2||

kalita sundara mandahAsA hE ni
ShkaluSha sutatva vilAsA
gaLitA GasanGaniScala jagannAtha vi
Thalanolimeya paDediLiyoLu carisuva
BaLire pratiyOgigaLenipa kaM
kalaBakEsari nimma dAsaroLolidu
pAlipudanavarata enna naMbidenO ninna ||3||


ವರದೇಂದ್ರ ತೀರ್ಥರ ಪದಧ್ಯಾನ
ಮುಕ್ತಿಮಾರ್ಗಕೆ ಸೋಪಾನ ||pa||

ಗುರುವಸುಧೇಂದ್ರರ ಕರ ಕಮಲಜ ತವ
ಚರಣಯುಗಲ  ಪರಿಶೇವನಾ ||1||

ಪರಮತ ತಿಮಿರ ಭಾಸ್ಕರನೆಂಬುವ ತವ
ಬಿರುದಾವಳಿ ಸಂಕೀರ್ತನಾ ||2||

ಕ್ಷೋಣಿಸುರರಿಗೆ ದ್ರವ್ಯ ದಾನದಿಂದಲಿ ಜಿತ
ಭಾನುಜರೆಂಬುವ ಭಾಷಣ ||3||

ಹರುಷತೀರ್ಥರ ಮತ ಶರಧಿಗೆ ಪೂರ್ಣ
ಚಂದಿರನೆಂಬುವ ಶುಭಗಾಯನ ||4||

ಶರಣರ ಪೊರಿವ ‘ಕಾರ್ಪರನರಸಿಂಹ’ನ
ಕರುಣ ಪಾತ್ರ ತವಶೇವನಾ ||5||
varadEndra tIrthara padadhyAna
muktimArgake sOpAna ||pa||

guruvasudhEndrara kara kamalaja tava
caraNayugala pariSEvanA ||1||

paramata timira BAskaraneMbuva tava
birudAvaLi saMkIrtanA ||2||

kShONisurarige dravya dAnadindali jita
BAnujareMbuva BAShaNa ||3||

haruShatIrthara mata Saradhige pUrNa
caMdiraneMbuva SuBagAyana ||4||

SaraNara poriva ‘kArparanarasiMha’na
karuNa pAtra tavaSEvanA ||5||


ಗುರು ವರದೇಂದ್ರ ದಯಾಂಬುಧೇ ಶರಣಾಗತ ವತ್ಸಲ ಈಶ |
ಚರಣ ಕಮಲ ಷಟ್ಪದ ಪಾಲಿಸು ಕಾಷಾಯ ವಸನ ಭೂಷಾ ||pa||

ದುರ್ಮತ ಭುಜಗ ಕುಘರ್ಮ ವಿನಾಯಕ ಕರ್ಮ ಬದ್ಧ ವ್ರತಾ |
ಶರ್ಮ ತ್ರಿಧರ ಪ್ರಿಯ ಧರ್ಮಾಸಕ್ತನೆ ನಿರ್ಮಲ ಶುಭಚರಿತಾ ||
ಭರ್ಮ ಸಮಾಂಗ ಅಧರ್ಮ ಶಿಕ್ಷ ಕರಿ ಚರ್ಮಾಂಬರ ಪ್ರೀತ |
ಕಿರ್ಮೀರಾರಿ ಸುಶರ್ಮ ತೀರ್ಥ ಸಖ ಕರ್ಮಂದಿಪ ನಾಥ ||1||

ಶ್ರೀ ಮನೋರಮ ಸು ತ್ರಿಧಾಮದೇವ ಶ್ರೀರಾಮ ಪದಾಸಕ್ತಾ |
ಕಾಮಿತ ಫಲದ ಧರಾಮರ ವಂದಿತ ಸ್ವಾಮಿ ನಮಿಪ ಭಕ್ತ ||
ಶ್ರೀ ಮಂದಾರ ಅನಾಮಯ ಸದ್ಗುಣಧಾಮನೆ ಸುವಿರಕ್ತಾ |
ಪಾಮರ ದೂರ ಲಲಾಮ ವದಾನ್ಯ ಮಹಾಮಹಿಮನೆ ಶಕ್ತ ||2||

ಮಾನಿ ಪೂಜ್ಯ ಸುಜ್ಞಾನಿ ಧೀರ ಸದ್ಭಾನುಚಂದ್ರ ಭಾಸ |
ದೀನ ಪೋಷಕ ನಿಜಾನುಗ ಪಾಲಕ ಕ್ಷೋಣಿಪ ನಿರ್ದೋಷ ||
ಸಾನುರಾಗದಲಿ ಪೋಣಿಸು ಸನ್ಮತಿ ಮೌನಿ ಕುಲಾಧೀಶ |
ನೀನಲ್ಲದೆ ಶ್ರೀ ಪ್ರಾಣೇಶ ವಿಠ್ಠಲ ತಾನೊಲಿಯನು ಲೇಶ ||3||
guru varadEndra dayAMbudhE SaraNAgata vatsala ISa |
caraNa kamala ShaTpada pAlisu kAShAya vasana BUShA ||pa||

durmata Bujaga kuGarma vinAyaka karma baddha vratA |
Sarma tridhara priya dharmAsaktane nirmala SuBacaritA ||
Barma samAMga adharma SikSha kari carmAMbara prIta |
kirmIrAri suSarma tIrtha saKa karmandipa nAtha ||1||

SrI manOrama su tridhAmadEva SrIrAma padAsaktA |
kAmita Palada dharAmara vandita svAmi namipa Bakta ||
SrI mandAra anAmaya sadguNadhAmane suviraktA |
pAmara dUra lalAma vadAnya mahAmahimane Sakta ||2||

mAni pUjya suj~jAni dhIra sadBAnucaMdra BAsa |
dIna pOShaka nijAnuga pAlaka kShONipa nirdOSha ||
sAnurAgadali pONisu sanmati mauni kulAdhISa |
nInallade SrI prANESa viThThala tAnoliyanu lESa ||3||


ವರದೇಂದ್ರ ವರದೇಂದ್ರ
ವರದಾಯಕ ಗುರು | ವರಗುಣಸಾಂದ್ರ ||pa||

ಪಾವನ ಚರಿತ ವೃಂದಾವನ ಮಂದಿರ
ಕೋವಿದ ಜನ ಸುಸೇವಿತ ಸದಯ||1||

ಕಾಲಾಷಾಯಾಂಬರ | ಭೂಷಿತ ಎನ್ನಯ
ದೋಷಗಳೆಣಿಸದೆ ಪೋಷಿಸು ಸತತ ||2||

ಕಠಿಣ ಭವಾಂಬುಧಿ ಘಟಜ ಕುಟಿಲಮತ
ವಿಟಿಪಿ ಕುಠಾರಿ ಉತ್ಕಟ ಸನ್ಮಹಿಮ ||3||

ನತ ಸುರಕ್ಷಿತಿರುಹ | ಜಿತ ರತಿಪತಿ ಶರ
ಮತಿವರ ದಶಮತಿ ದುರಿತವಾರಿಧಿ ವಿಭು ||4||

ಹೇಮೋದರ ವಿತ ಶಾಮಸುಂದರನ
ಪ್ರೇಮಪಾತ್ರ ಪುಣ್ಯಧಾಮ ಮಹಾತ್ಮ ||5||
varadEndra varadEndra
varadAyaka guru | varaguNasAndra ||pa||

pAvana carita vRundAvana maMdira
kOvida jana susEvita sadaya||1||

kAlAShAyAMbara | BUShita ennaya
dOShagaLeNisade pOShisu satata ||2||

kaThiNa BavAMbudhi GaTaja kuTilamata
viTipi kuThAri utkaTa sanmahima ||3||

nata surakShitiruha | jita ratipati Sara
mativara daSamati duritavAridhi viBu ||4||

hEmOdara vita SAmasundarana
prEmapAtra puNyadhAma mahAtma ||5||


ಗುರುರಾಯಾ ಗುರುರಾಯಾ |ತರಣಿ ಪ್ರಕಾಶ ಯತಿಪ ವರದೇಂದ್ರ ||pa||

ಬೆಂದೆನೋ ಭವದೊಳು | ತಂದೆ ನೀ ಬಹು ತ್ವರೆ ||
ಯಿಂದ ಕರಪಿಡಿಯೋ | ಮಂದ ದಯಾಳೋ ||1||

ಆರೆನು ಮನುಜರು | ದೂರುವ ಮಾತನು ||
ಆರಿಗುಸಿರಲಿ ನಿ | ವಾರಿಸೋ ಸ್ವಾಮಿ||2||

ನೀನೊಲಿಯಲು ಭಯ | ಕಾಣಿಸಿಕೊಂಬುದೆ ||
ಹೀನ ಮತಾಟವಿ ಕೃ | ಶಾನು ಮಹಾತ್ಮ ||3||

ಮೇದಿನಿಪರು ಬೆರ | ಗಾದರು ದಾನಕೆ ||
ಮೋದಮುನಿ ಮತ ಮ | ಹೋದಧಿ ಚಂದ್ರ ||4||

ಕಾಷಾಯ ವಸನಿ | ದೇಶಿಕ ವರ ಪ್ರಾ ||
ಣೇಶ ವಿಠಲನವ | ರಾ ಸಲಹುವದೋ ||5||

gururAyA gururAyA |taraNi prakASa yatipa varadEndra ||pa||

bendenO BavadoLu | tande nI bahu tvare ||
yiMda karapiDiyO | manda dayALO ||1||

Arenu manujaru | dUruva mAtanu ||
Arigusirali ni | vArisO svAmi||2||

nInoliyalu Baya | kANisikoMbude ||
hIna matATavi kRu | SAnu mahAtma ||3||

mEdiniparu bera | gAdaru dAnake ||
mOdamuni mata ma | hOdadhi candra ||4||

kAShAya vasani | dESika vara prA ||
NESa viThalanava | rA salahuvadO ||5||


ಗುರುವೇ ಶ್ರೀ ವಸುಧೇಂದ್ರ ಕರಜಾತ ಸದ್ಗುಣಸಾಂದ್ರ |
ವರದೇಂದ್ರರಾಯ ಜಿತೇಂದ್ರ | ಮರುತ ಮತಾಬ್ಧಿ ಚಂದ್ರ ||pa||

ಶರಣು ನಿನ್ನಯ ಪದ ಸರಸಿಜ ಯುಗಗಳಿಗೆ |
ಎರವು ಮಾಡದೆ ಕಾಯೊ ಪರಮ ದಯಾಳು ||a.pa||

ದಾತಾ ಧರಿತ್ರೀ ಸುತೀನಾಥ ಶ್ರೀರಘುಪತಿ |ದೂತ ಭುವನದೋಳ್ ಖ್ಯಾತಿಯೋ ತವ ಸತ್ಕೀರುತಿ ||
ಭೂತ ಭಯ ರೋಗವಾ ತಂದಟ್ಟುವಾ |ನಾಥ ರಕ್ಷಕ ಜಲಜಾತಾಂಬಕನೇ ||1||

ದೋಷರಹಿತ ಯನ್ನ ಕ್ಲೇಶ ಹಿಂಗಿಸೊ ಸಂ |ನ್ಯಾಸ ಶಿರೋಮಣಿಯೆ ಮುನ್ನಾ ಆಶೆ ಬಿಡಿಸಿ ನಿನ್ನ ||ದಾಸನೆನಿಸಿಕೋ ಉದಾಸಿಸದಲೆ ಬಹು |ಘಾಸಿ ಮಾಡದೆ ರವಿಭಾಸ ಗುಣಾಢ್ಯ ||2||

ಏನಾದರೇನು ಕೀಳು ಮಾನವರಾಶ್ರಯ ಧರೆಯೊಳು |ನಾನಿಚ್ಛಿಸೆನೊ ಕೃಪಾಳು ಮಾನ ನಿನ್ನದು ಕೇಳು ||ನೀನೆವೆ ಗತಿಯೆಂದು ಧ್ಯಾನ ಮಾಡುವರಿಗೆ |ಪ್ರಾಣೇಶ ವಿಠಲನ ಕಾಣಿಸಿಕೊಡುವಿ ||3||

guruvE SrI vasudhEndra karajAta sadguNasAndra |
varadEndrarAya jitEndra | maruta matAbdhi candra ||pa||

SaraNu ninnaya pada sarasija yugagaLige |
eravu mADade kAyo parama dayALu ||a.pa||

dAtA dharitrI sutInAtha SrIraGupati |dUta BuvanadOL KyAtiyO tava satkIruti ||
BUta Baya rOgavA taMdaTTuvA |nAtha rakShaka jalajAtAMbakanE ||1||

dOSharahita yanna klESa hiMgiso saM |nyAsa SirOmaNiye munnA ASe biDisi ninna ||dAsanenisikO udAsisadale bahu |GAsi mADade raviBAsa guNADhya ||2||

EnAdarEnu kILu mAnavarASraya dhareyoLu |nAnicCiseno kRupALu mAna ninnadu kELu ||nIneve gatiyeMdu dhyAna mADuvarige |prANESa viThalana kANisikoDuvi ||3||


ತುತಿಸಲಳವೇ ಶ್ರೀ ವರದೇಂದ್ರನಾ ಅಮಿತ ಮಹಿಮ |
ಕ್ಷಿತಿ ಸುರ ಗುರು ಸುಗುಣ ಸಾಂದ್ರನ ಮುನಿಪನ ||pa||

ಭಾಗವತರ ಪ್ರಿಯನೆನಿಪನ ಪ್ರಣತ ಜನರ |
ರೋಗ ಕಳೆದು ಸುಖ ಕೊಡುವನ ಕುಮತಗಳನು |
ಬೇಗ ಗೆಲಿದು ಸುಮತಿ ಕೊಡುವನ ದಯಾ ಸಮುದ್ರ |
ಯೋಗಿ ವರ್ಯ ರವಿ ಪ್ರಕಾಶನಾ ಅನಘನ ||1||

ರಾಘವೇಂದ್ರರನುಗ್ರಹ ಪಾತ್ರನ ವೈಷಿಕದ ಕು |
ಭೋಗ ತೊರೆದ ನಿಷ್ಪ್ರಪಂಚನ ದುರ್ಮತಿಗಳ |
ಯೋಗಕೊಲಿಯದಿಪ್ಪ ಧೀರನ ಭವ ಭಯವನು |
ನೀಗಿ ಹರಿಯ ಸದನವ ತೋರ್ಪನಾ ವರದನ ||2||

ಕಲಿ ಮಲಾಪಹಾರ ಶಕ್ತನ, ಪ್ರಾಣೇಶ ವಿಠಲ |
ನೊಲಿಸಿಕೊಂಡಮಿತ ಸಮರ್ಥನ ಮಾರುತ ಮತ ||
ಜಲಧಿ ಪೆರ್ಚಿಸುತಿಹ ಚಂದ್ರನ ಬೃಹತ್ಸು ತಟ ನೀ |
ನಿಲಯ ಶ್ರೀ ವಸುಧೇಂದ್ರ ಪುತ್ರನ ವಿರಕ್ತನ||3||

tutisalaLavE SrI varadEMdranA amita mahima |
kShiti sura guru suguNa sAMdrana munipana ||pa||

BAgavatara priyanenipana praNata janara |
rOga kaLedu suKa koDuvana kumatagaLanu |
bEga gelidu sumati koDuvana dayA samudra |
yOgi varya ravi prakASanA anaGana ||1||

rAGavEMdraranugraha pAtrana vaiShikada ku |
BOga toreda niShprapancana durmatigaLa |
yOgakoliyadippa dhIrana Bava Bayavanu |
nIgi hariya sadanava tOrpanA varadana ||2||

kali malApahAra Saktana, prANESa viThala |
nolisikonDamita samarthana mAruta mata ||
jaladhi percisutiha candrana bRuhatsu taTa nI |
nilaya SrI vasudhEndra putrana viraktana||3||


ಪಾಲಿಸೋ ಪಾಲಿಸೋ || ಕರುಣಾಲಯ ವರದೇಂದ್ರ ಮುನಿ ಸುಖ ಸಾಂದ್ರ ||pa||

ಪುಣ್ಯ ಮಂದಿರ ವಾಸ | ಸನ್ನುತ ಜನಪಾಲ ||
ಬನ್ನ ಪಡಿಸದಲೆ | ಯನ್ನನುದ್ಧರಿಸೋ ||1||

ದೀನ ಸುರದ್ರುಮ | ಹೀನ ಪಂಕಜ ಸೋಮ ||
ಮಾನಿ ಸುಜ್ಞಾನಿ  ನಿ | ನ್ನೇನು ಬಣ್ಣಿಪೆನೋ ||2||

ತ್ರುಟಿ ಮಾತ್ರ ಬಿಡದಲೆ | ಘಟನೆಯ ಮಾಡಿಸೊ ||
ಸಟೆಯಲ್ಲ ಪ್ರಾಣೇಶ | ವಿಠಲನ ಸ್ಮರಣೆ ||3||

pAlisO pAlisO || karuNAlaya varadEndra muni suKa sAndra ||pa||

puNya mandira vAsa | sannuta janapAla ||
banna paDisadale | yannanuddharisO ||1||

dIna suradruma | hIna pankaja sOma ||
mAni suj~jAni ni | nnEnu baNNipenO ||2||

truTi mAtra biDadale | GaTaneya mADiso ||
saTeyalla prANESa | viThalana smaraNe ||3||

One thought on “Dasara padagalu on Sri Varadendra theertharu

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s