ಸ್ಮರಿಸು ಮಾನವ ನಿರುತ ಶ್ರೀ ಸುಶೀಲೇಂದ್ರ ತೀರ್ಥಾರ
ವರಹಜ ತಟವಾಸ ರಾಯರ ಕರುಣ ಪಾತ್ರರ ||pa||
ಭಾನುಜ ಸಮಾನ ದಾನಿ ದೀನ ಪಾಲರÀ |
ಮಾನಿತ ಸನ್ಮೌನಿ ವರಿಯ ಜ್ಞಾನ ಶೀಲರ ||1||
ಪ್ರಾಣಪತಿಯ ಮತಾಬ್ಧಿಗೆ ಪಠೀಣರೆನಿಪರ
ಕ್ಞೋಣಿ ತಳದಿ ಇವರಿಗೆ ಸರಿಗಾಣೆ ಜಾಣರ ||2||
ಶಾಮಸುಂದರವಿಠಲನ ನಿಸ್ಸೀಮ ಭಕುತರ
ಸ್ವಾಮಿ ಸುವೃತೀಂದ್ರ ಕೋಮಲ ಕರಸಂಜಾತರ ||3||
smarisu mAnava niruta SrI suSIlEndra tIrthAra
varahaja taTavAsa rAyara karuNa pAtrara ||pa||
BAnuja samAna dAni dIna pAlaraÀ |
mAnita sanmauni variya j~jAna SIlara ||1||
prANapatiya matAbdhige paThINarenipara
k~jONi taLadi ivarige sarigANe jANara ||2||
SAmasundaraviThalana nissIma Bakutara
svAmi suvRutIMdra kOmala karasaMjAtara ||3||
ಸುಶೀಲೇಂದ್ರ ಸುಶೀಲೇಂದ್ರ
ಅಸುನಾಯಕ ಮತ | ಬಿಸರುಹ ಭಾಸ್ಕರ ||pa||
ಕುಂಭಿಣಿದೇವ ಕದಂಬ ವಿನುತ | ಜಿತ
ಶಂಬರಾರಿ ಕರುಣಾಂಬುಧಿ ಗುರುವರ ||1||
ತುಂಗ ಮಹಿಮಯತಿ ಪುಂಗವರದ | ತ
ರಂಗಿಣಿ ನಿಲಯ ಸುಮಂಗಳ ಚರಿತ ||2||
ಭಾಗವತ ಪ್ರಿಯ ರಾಘವೇಂದ್ರರರಮ
ರಾಗಪಾತ್ರ ಮಧ್ವಾಗಮಜ್ಞ ಗುರು ||3||
ಸಾರಿದೆ ಸಂತತ ಸೊರಿವರ್ಯ | ಗುರು
ಧೀರೇಂದ್ರ ಪದ ಸಾರಸ ಮಧಕರ ||4||
ಶ್ರೀಮನೋವಲ್ಲಭ | ಶಾಮಸುಂದರನ
ಪ್ರೇಮಾನ್ವಿತ ನಿಸ್ಸೀಮ ಮಹಿಮ ||5||
suSIlEndra suSIlEndra
asunAyaka mata | bisaruha BAskara ||pa||
kuMBiNidEva kadaMba vinuta | jita
SaMbarAri karuNAMbudhi guruvara ||1||
tunga mahimayati pungavarada | ta
rangiNi nilaya sumangaLa carita ||2||
BAgavata priya rAGavEndrararama
rAgapAtra madhvAgamaj~ja guru ||3||
sAride santata sorivarya | guru
dhIrEMdra pada sArasa madhakara ||4||
SrImanOvallaBa | SAmasundarana
prEmAnvita nissIma mahima ||5||
ನಮೋ ನಮೋ ಸುಶೀಲೇಂದ್ರ | ಗುರುವರಿಯ ವೈಷ್ಣವ
ಸುಮತವಾರಿಧಿ ಚಂದ್ರ | ಸಕುವಿ ಸಂಸ್ತುತ |
ಅಮಿತ ಸದ್ಗುಣ ಸಾಂದ್ರ || ಸುಮತಾಹಿವೀಂದ್ರ ||pa||
ನಮಿಪ ಜನರಿಗೆ ಅಮರ ಭೂರುಹ
ಸಮಸುಖಪ್ರದ ವಿಮಲ ಚರಿತನೆ
ಯಮಿವರ್ಯ ಸುವೃತೀಂದ್ರ ಮಾನಸ
ಕಮಲರವಿ ಮಹಿ ಸುಮನಸಾಗ್ರಣಿ ||a.pa||
ಅಸಮ ಮಹಿಮೋದರ | ತವಸುಪ್ರಭಾವವ
ವಶವೆ ಪೊಗಳಲು ಧೀರಾ | ಸುಜನ ವಂದಿತ
ಸ್ವಶನ ಸುಮತೋದ್ಧಾರ || ದಯ ಪಾರವಾರ ||
ವಸುಧೆಯೊಳು ಮೊರೆಹೊಕ್ಕ ಜನರಿಗೆ
ಕುಶಲಪ್ರದ ನೀನೆಂದು ಬುಧ ಜನ
ಉಸುರುವದು ನಾ ಕೇಳಿ ನಿನ್ನ ಪದ
ಬಿಸಜ ನಂಬಿದೆ ಪೋಷಿಸನುದಿನ ||1||
ದೀನಜನ ಸುಖದಾತ | ಸುಕೃತೀಂದ್ರ ಕೋಮಲ
ಪಾಣಿ ಪದ್ಮ ಸುಜಾತ | ಜಯವಂತ ಜಿತಸ್ಮರ
ಬಾಣಲೋಕ ವಿಖ್ಯಾತÀ || ದ್ವಿಜಕುಲಕೆ ನಾಥ ||
ಕ್ಷೋಣಿಯೊಳು ನೀ ಒಲಿದ ಮಾತ್ರದಿ
ಮೌನಿವರ್ಯ ಶ್ರೀ ರಾಘವೇಂದ್ರರು
ಸಾನುರಾಗದಿ ಸಲಹುವರು ಪವ
ಮಾನ ಶಾಸ್ತ್ರ ಪ್ರವೀಣ ಜಾಣ ||2||
ಪಿಂಗಲೇಂದ್ರ ಪ್ರಕಾಶ | ಸುಪವಿತ್ರ ವರದತ
ರಂಗಿಣಿ ತಟವಾಸ | ಸದ್ಧರ್ಮ ಸ್ಥಾಪಕ
ಮಂಗಳಾಂಗ ಯತೀಶ | ಪಾಪೌಘನಾಶ ||
ತುಂಗವಿಕ್ರಮ ಶಾಮಸುಂದರನಂಘ್ರಿ ಕಮಲಕೆ
ಭೃಂಗ ಭವಗಜಸಿಂಗ ಕರುಣಾ
ಪಾಂಗದೀಕ್ಷಿಸೆ ಇಂಗಿತಜ್ಞರ ಸಂಗಪಾಲಿಸು ||3||
namO namO suSIlEndra | guruvariya vaiShNava
sumatavAridhi candra | sakuvi saMstuta |
amita sadguNa sAndra || sumatAhivIndra ||pa||
namipa janarige amara BUruha
samasuKaprada vimala caritane
yamivarya suvRutIndra mAnasa
kamalaravi mahi sumanasAgraNi ||a.pa||
asama mahimOdara | tavasupraBAvava
vaSave pogaLalu dhIrA | sujana vandita
svaSana sumatOddhAra || daya pAravAra ||
vasudheyoLu morehokka janarige
kuSalaprada nInendu budha jana
usuruvadu nA kELi ninna pada
bisaja naMbide pOShisanudina ||1||
dInajana suKadAta | sukRutIndra kOmala
pANi padma sujAta | jayavanta jitasmara
bANalOka viKyAtaÀ || dvijakulake nAtha ||
kShONiyoLu nI olida mAtradi
maunivarya SrI rAGavEndraru
sAnurAgadi salahuvaru pava
mAna SAstra pravINa jANa ||2||
pingalEndra prakASa | supavitra varadata
rangiNi taTavAsa | saddharma sthApaka
mangaLAnga yatISa | pApauGanASa ||
tungavikrama SAmasundarananGri kamalake
BRunga Bavagajasinga karuNA
pAngadIkShise ingitaj~jara sangapAlisu ||3||
One thought on “Dasara padagalu on Sri Sushilendra thirtharu”