ಗಜವದನ ಬೇಡುವೆ ಗೌರೀತನಯ ।।ಪ॥
ತ್ರಿಜಗವಂದಿತನೆ ಸುಜನರ ಪೊರೆವನೆ ।।ಅ.ಪ॥
ಪಾಶಾಂಕುರ ಪರಮಪವಿತ್ರ
ಮೂಷಕವಾಹನ ಮುನಿಜನ ಪ್ರೇಮ ।।೧।।
ಮೋದದಿ ನಿನ್ನಯ ಪಾದವ ತೋರೋ
ಸಾಧುವಂದಿತನೆ ಆದರದಿಂದಲಿ ।।೨।।
ಸರಸಿಜನಾಭ ಶ್ರೀ ಪುರಂದರವಿಠಲನ
ನಿರುತ ನೆನೆಯುವಂತೆ ಮಾಡೋ ।।೩।।
Gajavadana beduve | gouritanaya
gajavadana beduve
trijagavanditane sujanara porevane ||
Pashankushadhara paramapavitra
mushikavahana munijanaprema ||1||
Modadi ninnaya padhava toro
sadhuvanditane adaradindali ||2||
Sarasijanabha shri purandaravithalana
niruta neneyuvante daya mado ||3||
2 thoughts on “Gajavathana beduve”