ಯಾದವ ನೀ ಬಾ ಯದುಕುಲನಂದನ
ಮಾಧವ ಮಧುಸೂಧನ ಬಾರೋ ।।ಪ॥
ಸೋದರ ಮಾವನ ಮಧುರೆಲಿ ಮಡುಹಿದ
ಯಶೋದೆ ಕಂದ ನೀ ಬಾರೋ ।।ಅ.ಪ।।
ಶಂಖಚಕ್ರವು ಕೈಯಲಿ ಹೊಳೆಯುತ
ಬಿಂಕದ ಗೋವಳ ನೀ ಬಾರೋ
ಅಕಳಂಕ ಮಹಿಮನೆ ಆದಿನಾರಾಯಣ
ಬೇಕೆಂಬ ಭಕುತರಿಗೊಲಿಬಾರೋ ।।೧।।
ಕಣಕಾಲಂದುಗೆ ಘಲುಘಲುರೆನುತಲಿ
ಝಣಝಣ ವೇಣುನಾದದಲಿ
ಚಿಣಿಕೋಲು ಚೆಂಡು ಬುಗುರಿಯನಾಡುತ
ಸಣ್ಣ ಸಣ್ಣ ಗೋವಳರೊಡಗೂಡಿ ಬಾರೋ ।।೨।।
ಖಗವಾಹನನೇ ಬಗೆಬಗೆ ರೂಪನೇ
ನಗುಮೊಗದರಸನೇ ನೀ ಬಾರೋ
ಜಗದೊಳು ನಿನ್ನಯ ಮಹಿಮೆಯ ಪೊಗಳುವೆ
ಪುರಂದರವಿಠಲ ನೀ ಬಾರೋ ।।೩।।
Yadava ni ba yadukula nandana madhava madhusudana baro
Sodara mavana madhureli maduhida yashode kandane ni baro
Shankha chakravu kayyali holeyuta binkada govala ni baro
akalanka mahimane Adi narayana bekemba bhaktarigoli baro||1||
Kanakaladuge gejje ghulu ghulurenutali jhana jhana venu nadadali
cinikola cendu bugariyanaduta sanna sanna govalarodagudi||2||
Khaga vahanane bage bage rupane nagumogadarasane ni baro
jagadolu ninnaya mahimeya pogaluve purandara vittala ni baro||3||
2 thoughts on “yadava ne baa”