ಆವ ಕುಲವೊ ರಂಗ ಅರಿಯಬಾರದು ||ಪ.||
ಆವ ಕುಲವೆಂದರಿಯಬಾರದು ಗೋವುಕಾವ ಗೊಲ್ಲನಂತೆಪಾರಿಜಾತದ ವೃಕ್ಷÀವ ಸತ್ಯಭಾಮೆಗೆ ತಂದಿತ್ತನಂತೆ ||ಅ.ಪ.||
ಗೋಕುಲದಲ್ಲಿ ಪುಟ್ಟಿದನಂತೆ ಗೋವಳರೊಡನೆ ಆಡಿದನಂತೆತಾ ಕೊಳಲನೂದಿ ಮೃಗಪಕ್ಷ್ಷಿಗಳ ಮರುಳುಮಾಡಿದ ದೇವನಂತೆ ||1||
ಕಾಲಲ್ಲಿ ಶಕಟನ ಒದ್ದನಂತೆ ಗೂಳಿಯ ಕೊಂಬ ಕಿತ್ತನಂತೆಕಾಳಿಂಗನ ಹೆಡೆಯ ತುಳಿದು ಬಾಲೇರಿಗೊಲಿದ ದೇವನಂತೆ ||2||
ಗೊಲ್ಲತೇರ ಮನೆಗಳಲ್ಲಿ ಕಳ್ಳತನವ ಮಾಡಿದನಂತೆಮೆಲ್ಲನೆ ಪೂತನಿ ಅಸುವ ಹೀರಿ ಬಲ್ಲಿದ ಕಂಸನ ಕೊಂದನಂತೆ ||3||
ಸರ್ಪ ತನ್ನ ಹಾಸಿಗೆಯಂತೆ ಪಕ್ಷಿ ತನ್ನ ವಾಹನವಂತೆÀರ್ಪಭೂಷಣ ಮೊಮ್ಮಗನಂತೆ ಮುದ್ದುಮುಖದ ದೇವನಂತೆ ||4||
ತರಳತನದಿ ಒರಳನೆಳೆದು ಮರನ ಕೆಡಹಿ ಮತ್ತವರ ಸಲಹಿದುರುಳ ರಕ್ಕಸರನು ಕೊಂದ ಚೆಲುವ ಹಯವದನನಂತೆ ||5|
Āva kulavo raṅga ariyabāradu ||pa.||
Āva kulavendariyabāradu gōvukāva gollanantepārijātada vr̥kṣaÀva satyabhāmege tandittanante ||a.Pa.||
Gōkuladalli puṭṭidanante gōvaḷaroḍane āḍidanantetā koḷalanūdi mr̥gapakṣṣigaḷa maruḷumāḍida dēvanante ||1||
kālalli śakaṭana oddanante gūḷiya komba kittanantekāḷiṅgana heḍeya tuḷidu bālērigolida dēvanante ||2||
gollatēra manegaḷalli kaḷḷatanava māḍidanantemellane pūtani asuva hīri ballida kansana kondanante ||3||
sarpa tanna hāsigeyante pakṣi tanna vāhanavanteÀrpabhūṣaṇa mom’maganante muddumukhada dēvanante ||4||
taraḷatanadi oraḷaneḷedu marana keḍahi mattavara salahiduruḷa rakkasaranu konda celuva hayavadananante ||5||