dasara padagalu · MADHWA · purandara dasaru

Tappugalellava pariharisuva nammappanallave ninu

ತಪ್ಪುಗಳೆಲ್ಲವ ಪರಿಹರಿಸುವ ನಮ್ಮಪ್ಪನಲ್ಲವೆ ನೀನು ||ಪ||
ಅಷ್ಟಾದರು ಎನ್ನವಗುಣ ಎಣಿಸದೆ ಸತ್ಯ ಸಂಕಲ್ಪ ತಿಮ್ಮಪ್ಪ ನೀನು ||ಅ||

ಬೆಳಗಿನ ಝಾವದಿ ಹರಿಯ ಸ್ಮರಣೆಯ ಮಾಡದಿರುವುದು ತಪ್ಪು
ಮಲಮೂತ್ರ ವಿಸರ್ಜನೆ ಮೃತ್ತಿಕೆಯಲಿ ಮಲವ ತೊಳೆಯದಿರುವುದು ತಪ್ಪು
ತುಳಸಿ ವೃಂದಾವನ ಗೋಸೇವೆಗೆ ಆಲಸ್ಯ ಮಾಡುತಲಿರುವುದು ತಪ್ಪು
ನಳಿನಸಹೋದರನಿಗರ್ಘ್ಯವನೀಯದೆ ಕಲಿವ್ಯಾಸಂಗದಲಿರುವುದು ತಪ್ಪು ||

ದಿನದಿನ ಉದಯ ಸ್ನಾನ ಮಾಡದ ತನು ವಂಚನೆಯಾ ತಪ್ಪು
ಮುನಿಸುರ ಭೂಸುರರಾರಾಧಿಸದೆ ಧನ ವಂಚನೆಯ ತಪ್ಪು
ಕ್ಷಣ ಗುಣ ಜಿಜ್ಞಾಸಿಲ್ಲದೆ ದುರ್ಜನರ ಸಂಸರ್ಗದ ತಪ್ಪು
ವನಜಾಕ್ಷ ನಿನ್ನ ಧ್ಯಾನವ ಮಾಡದೆ ಮನ ವಂಚನೆಯ ತಪ್ಪು ||

ಕಣ್ಣಿಲಿ ಕೃಷ್ಣಾಕೃತಿಯ ನೋಡದೆ ಪರಹೆಣ್ಣಿನ ನೋಡಿದ ತಪ್ಪು
ಅನ್ನವನರ್ಪಿಸದೆ ಅಜ್ಞಾನದಿ ಉಣ್ಣುವ ನಾಲಿಗೆ ತಪ್ಪು
ನಿನ್ನ ಕಥಾಮೃತವಿಲ್ಲದೆ ಹರಟೆಯ ಮನ್ನಿಸುವ ಕಿವಿ ತಪ್ಪು
ಚಿನ್ಮಯಮೂರುತಿ ಚರಣೆಕ್ಕೆರಗದೆ ಉನ್ಮತ್ತೆಯ ತಪ್ಪು ||

ಆನಂದನ ಸಂಕೀರ್ತನೆ ಮಾಡದೆ ಹೀನವಿವಾದದ ತಪ್ಪು
ಶ್ರೀನಾಥಾರ್ಚನೆ ಇರಲೂಳಿಗವ ಮಾಡಿದ ಕೈಯ ತಪ್ಪು
ಶ್ರೀನಿರ್ಮಾಲ್ಯ ವಿರಹಿತ ಸುರಭಿಯ ಘ್ರಾಣದ ನಾಸಿಕ ತಪ್ಪು
ಶ್ರೀ ನಾರಾಯಣನ ವೇಷಗೆಯ್ಯದನ ನಟನೆ ಪಾದದ ತಪ್ಪು ||

ಯಜ್ಞಾತ್ಮಗೆ ಯಜ್ಞವರ್ಪಿಸದೆ ಕಾಮ್ಯ ಯಜ್ಞಮಾಡಿದ ತಪ್ಪು
ಅಜ್ಞಾನ ಜ್ಞಾನದಲಿ ಕ್ಷಣ ಕ್ಷಣ ಅಘಗಳ ಗಳಿಸುವ ತಪ್ಪು
ಆಗತ ಶೌಚದ ಕರ್ಮವ ಜರೆದು ಸಮಗ್ರ ಗುಹ್ಯದ ತಪ್ಪು
ಯಜ್ಞೇಶ ಮಧ್ವಪತಿ ಪುರಂದರವಿಠಲನ ವಿಸ್ಮರಣೆಯ ತಪ್ಪು ||

Tappugalellava pariharisuva nammappanallave ninu ||pa||
Ashtadaru ennavaguna enisade satya sankalpa timmappa ninu ||a||

Belagina javadi hariya smaraneya madadiruvudu tappu
Malamutra visarjane mruttikeyali malava toleyadiruvudu tappu
Tulasi vrumdavana gosevege Alasya madutaliruvudu tappu
Nalinasahodaranigargyavaniyade kalivyasangadaliruvudu tappu ||

Dinadina udaya snana madada tanu vancaneya tappu
Munisura busurararadhisade dhana vancaneya tappu
Kshana guna jij~jasillade durjanara samsargada tappu
Vanajaksha ninna dhyanava madade mana vancaneya tappu ||

Kannili krushnakrutiya nodade parahennina nodida tappu
Annavanarpisade aj~janadi unnuva nalige tappu
Ninna kathamrutavillade harateya mannisuva kivi tappu
Cinmayamuruti caranekkeragade unmatteya tappu ||

Anamdana sankirtane madade hinavivadada tappu
Srinatharcane iraluligava madida kaiya tappu
Srinirmalya virahita surabiya granada nasika tappu
Sri narayanana veshageyyadana natane padada tappu ||

Yaj~jatmage yaj~javarpisade kamya yaj~jamadida tappu
Aj~jana j~janadali kshana kshana agagala galisuva tappu
Agata Saucada karmava jaredu samagra guhyada tappu
Yaj~jesa madhvapati purandaravithalana vismaraneya tappu ||

dasara padagalu · hanuma · hanumabhimamadhwa · MADHWA · purandara dasaru

Gururayara nambiro

ಗುರುರಾಯರ ನಂಬಿರೋ, ಮಾರುತಿಯೆಂಬ
ಗುರುರಾಯರ ನಂಬಿರೊ ||ಪ||

ಗುರುರಾಯರ ನಂಬಿ ಬಿಡದೆ ಯಾವಾಗಲು
ದುರಿತವ ಕಳೆದು ಸದ್ಗತಿಯ ಪಡೆವರೆಲ್ಲ ||ಅ.ಪ||

ವನಧಿಯ ಮನೋವೇಗದಿ ,ಲಂಘಿಸಿ ಮಹೀ-
ತನುಜೆಯ ಶೋಕವ ತರಿದು
ವನವ ಬೇರೊಡನೆ ಕಿತ್ತಾಡಿ ಆರ್ಭಟಿಸಿದ
ದನುಜರ ಬಡಿದು ಲಂಕೆಯ ತನ್ನ ಸಖಗಿತ್ತ ||

ಕೌರವ ಬಕ ಹಿಡಿಂಬ, ಕೀಚಕರೆಂಬ
ದುರುಳ ಸಂತತಿ ನೆಗ್ಗೊತ್ತಿ
ಘೋರ ಪಾತಕಿ ದುಶ್ಯಾಸನನ ರಕುತವ
ಹೀರಿ ಮುದದಿ ಮುರವೈರಿಯ ಭಜಿಸಿದ ||

ಜೀವೇಶರೊಂದೆಂಬ ದುರ್ವಾದಿಯ
ಭಾವಶಾಸ್ತ್ರವ ಮುರಿದು
ಕೋವಿದರಿಗೆ ಸದ್ಭಾಷ್ಯ ತೋರಿದ
ದೇವ ಪುರಂದರ ವಿಠಲ ಸೇವಕನಾದ ||
Gururayara nambiro, marutiyemba
Gururayara nambiro ||pa||
Gururayara nambi bidade yavagalu
Duritava kaledu sadgatiya padevarella ||a.pa||

Vanadhiya manovegadi ,langisi mahi-
Tanujeya sokava taridu
Vanava berodane kittadi arbatisida
Danujara badidu lankeya tanna sakagitta ||

Kaurava baka hidimba, kicakaremba
Durula santati neggotti
Gora pataki dusyasanana rakutava
Hiri mudadi muravairiya Bajisida ||

Jivesarondemba durvadiya
Bavasastrava muridu
Kovidarige sadbashya torida
Deva purandara vithala sevakanada ||

dasara padagalu · MADHWA · purandara dasaru

Giliyu panjaradolilla

ಗಿಳಿಯು ಪಂಜರದೊಳಿಲ್ಲಾ|| ಪ||
ಶ್ರೀ ರಾಮ ರಾಮಾ ಬರಿದು ಪಂಜರವಾಯಿತಲ್ಲಾ|| ಅ ಪ||

|ಅಕ್ಕ ನಿನ್ನ ಮಾತು ಕೇಳಿ ಚಿಕ್ಕದೊಂದು ಗಿಳಿಯ ತಂದು ಸಾಕಿದೆ|
ಅಕ್ಕ ನಾನಿಲ್ಲದ ವೇಳೆ ಬೆಕ್ಕು ಕೊಂಡು ಹೋಯಿತಯ್ಯೋ|| ೧||

ಅರ್ತಿಗೊಂದು ಗಿಳಿಯ ಸಾಕಿದ ಮುತ್ತಿನಹಾರವ ಹಾಕಿದೆ|
ಮುತ್ತುಗೊಂಡು ಗಿಳಿಯು ತಾನು ಎತ್ತ ಓಡಿ ಹೋಯಿತಯ್ಯೋ|| ೨||

ಹಸಿರು ಬಣ್ಣದ ಗಿಳಿಯು ಕುಶಲ ಬುದ್ಧಿಯ ಗಿಳಿಯು|
ಅಸುವ ಕುಂದಿ ಗಿಳಿಯು ತಾನು ಹಸನಗೆಡಿಸಿ ಹೋಯಿತಯ್ಯೋ|| ೩||

ಮುಪ್ಪಾಗದ ಬೆಣ್ಣೆಯನು ತಪ್ಪದೇ ನಾ ಹಾಕಿದೆ ಸಾಕಿದೆ|
ಒಪ್ಪದಿಂದ ಗಿಳಿಯು ಈಗ ತೆಪ್ಪನೇ ಹಾರಿ ಹೋಯಿತಯ್ಯೋ|| ೪||

ರಾಮ ರಾಮ ಎಂಬೋ ಗಿಳಿ ಕೋಮಲ ಕಾಯದ ಗಿಳಿ|
ಸಾಮಜ ಪೋಷಕ ತಾನು ಪ್ರೇಮದಿ ಸಾಕಿದ ಗಿಳಿ|| ೫||

ಒಂಬತ್ತು ಬಾಗಿಲ ಮನೆ ತುಂಬುವ ಸಂದಣಿಯಿರಲು|
ಕುಂಭ ಮುರಿದು ಡಿಂಭ ಬಿದ್ದು ಅಂಬರಕೆ ಹಾರಿತಯ್ಯೋ|| ೬||

ಅಂಗೈಯಲಾಡುವ ಗಿಳಿ ಮುಂಗೈಯ ಮೇಲಣ ಗಿಳಿ|
ಗ ಪುರಂದರವಿಠಲನಂತ ರಂಗದಿ ಭಜಿಸುವ ಗಿಳಿ|| ೭||
Giliyu panjaradolilla|| pa||
Sri rama rama baridu panjaravayitalla|| a pa||

|akka ninna matu keli cikkadondu giliya tandu sakide|
Akka nanillada vele bekku kondu hoyitayyo|| 1||

Artigondu giliya sakida muttinaharava hakide|
Muttugondu giliyu tanu etta odi hoyitayyo|| 2||

Hasiru bannada giliyu kusala buddhiya giliyu|
Asuva kundi giliyu tanu hasanagedisi hoyitayyo|| 3||

Muppagada benneyanu tappade na hakide sakide|
Oppadinda giliyu Iga teppane hari hoyitayyo|| 4||

Rama rama embo gili komala kayada gili|
Samaja poshaka tanu premadi sakida gili|| 5||

Ombattu bagila mane tumbuva sandaniyiralu|
Kumba muridu dimba biddu ambarake haritayyo|| 6||

Angaiyaladuva gili mungaiya melana gili|
Ga purandaravithalananta rangadi Bajisuva gili|| 7||

dasara padagalu · MADHWA · purandara dasaru

Kaiya toro karunigalarasa

ಕೈಯ ತೋರೋ ಕರುಣಿಗಳರಸಾ-ಕೈಯ ತೋರೊ |ಕೈಯಲಿ ಬೆಣ್ಣೆಯ ಮುದ್ದೆಯ ನೀಡುವೆ-ಕೈಯ||pa||

ಗುಲಿಯೊಳು ಪೊನ್ನುಂಗುರವೊಪ್ಪುವ ಕೈಯ ತೋರೊ |ಶೃಂಗಾರದಿ ಶಂಖಚಕ್ರವ ಧರಿಸಿದ ಕೈಯ ತೋರೊ ಅಂಗೈಯಲಿ ಧ್ವಜಪಧ್ಮವಿರಾಜಿಪ ಕೈಯ ತೋರೊ |ಅಂಗನೆಯರಉತ್ತುಂಗಕುಚದಲಿಟ್ಟ ಕೈಯ ತೋರೊ||1||

ಬಡಬ್ರಾಹ್ಮಣನವಲಕ್ಕಿಯ ಬೇಡಿದ ಕೈಯ ತೋರೊ |ಕೊಡೆ ಮಾಡಿ ಗಿರಿಯೆತ್ತಿ ಗೋಗಳ ಕಾಯ್ದ-ಕೈಯ ತೋರೊ ಕಡುಹಿರಣ್ಯಾಖ್ಯನ ಒಡಲನು ಬಗೆದ-ಕೈಯ ತೋರೊ |ಧೃಡ ಪ್ರಹ್ಲಾದನ ಮಂಡೆಯೊಳಿಟ್ಟ ಕೈಯ ತೋರೊ||2||

ಅಲ್ಲಿ ಪೂತನಿಯ ಅಸುವನೆ ಹೀರಿದ ಕೈಯ ತೋರೊ |ಬಲ್ಲಿದಮಲ್ಲರ ಮರ್ದಿಸಿ ಬಂದ-ಕೈಯ ತೋರೊ
ಮೆಲ್ಲನೆ ಕುಬುಜೆಯ ಡೊಂಕನೆ ತಿದ್ದಿದ ಕೈಯ ತೋರೊ |ಬಿಲ್ಲನು ಎಡಗೈಯಲಿ ಮುರಿದಿಟ್ಟ ಕೈಯ ತೋರೊ||3||

ಬಲಿಯನು ವಂಚಿಸಿ ದಾನವ ಬೇಡಿದ ಕೈಯ ತೋರೊ |ಫಲಪುಷ್ಪ ಪಾರಿಜಾತವ ತಂದ ಕೈಯ ತೋರೊ
ಒಲಿದು ಪಾರ್ಥಗೆ ರಥವನು ನಡೆಸಿದ ಕೈಯ ತೋರೊ |ಮಲ್ಲಿಗೆ ಜಾಜಿಯ ತುರುಬಿಗೆ ಮುಡಿಸಿದ ಕೈಯ ತೋರೊ ||4||

ಆಕಾಶದ ಚಂದ್ರಮನನು ಕರೆದ-ಕೈಯ ತೋರೊ |ನಾಕಪತಿಗೆ ಅಭಯವನಿತ್ತ-ಕೈಯ ತೋರೊ |
ನೇಕ ಬಗೆಯಲಿ ಕೊಳಲನೂದುವ-ಕೈಯ ತೋರೊ |ಶ್ರೀಕಾಂತ ನಮ್ಮ ಪುರಂದರವಿಠಲ-ಕೈಯ ತೋರೊ ||5||

Kaiya toro karunigalarasa-kaiya toro |kaiyali benneya muddeya niduve-kaiya||pa||

Guliyolu ponnunguravoppuva kaiya toro |srungaradi samkacakrava dharisida kaiya toro amgaiyali dhvajapadhmavirajipa kaiya toro |anganeyara^^uttungakucadalitta kaiya toro||1||

Badabrahmananavalakkiya bedida kaiya toro |kode madi giriyetti gogala kayda-kaiya toro kaduhiranyakyana odalanu bageda-kaiya toro |dhruda prahladana mandeyolitta kaiya toro||2||

Alli putaniya asuvane hirida kaiya toro |ballidamallara mardisi banda-kaiya toro
Mellane kubujeya Donkane tiddida kaiya toro |billanu edagaiyali muriditta kaiya toro||3||

Baliyanu vancisi danava bedida kaiya toro |palapushpa parijatava tanda kaiya toro
Olidu parthage rathavanu nadesida kaiya toro |mallige jajiya turubige mudisida kaiya toro ||4||

Akasada candramananu kareda-kaiya toro |nakapatige abayavanitta-kaiya toro |
Neka bageyali kolalanuduva-kaiya toro |srikanta namma purandaravithala-kaiya toro ||5||

dasara padagalu · MADHWA · purandara dasaru

Krushnamurti kanna munde

ಕೃಷ್ಣಮೂರ್ತಿ ಕಣ್ಣ ಮುಂದೆ ನಿಂತಿದಂತಿದೆ ||ಪ||

ಕಷ್ಟಗಳೆಲ್ಲಾ ಪರಿಹರಿಸಿ ಮನ-
ದಿಷ್ಟಾರ್ಥಗಳನೆಲ್ಲಾ ಕೊಟ್ಟು ರಕ್ಷಿಸುವಂಥ || ಅ||

ಮಸ್ತಕದಲಿ ಮಾಣಿಕ್ಯದ ಕಿರೀಟ
ಕಸ್ತೂರಿ ತಿಲಕದಿಂದೆಸೆವ ಲಲಾಟ
ಶಿಸ್ತಿಲಿ ಕೊಳಲನೂದುವ ಓರೆ ನೋಟ
ಕೌಸ್ತುಭ ಎಡಬಲದಲಿ ಓಲಾಟ || ೧||

ಮಘಮಘಿಸುವ ಸೊಬಗಿನ ಸುಳಿಗುರುಳು
ಚಿಗುರು ತುಳಸಿ ವನಮಾಲೆಯ ಕೊರಳು
ಬಗೆ ಬಗೆ ಹೊನ್ನುಂಗುರವಿಟ್ಟ ಬೆರಳು
ಸೊಬಗಿನ ನಾಭಿಯ ತಾವರೆ ಯರಳು ||೨||

ಉಡುದಾರ ವಡ್ಡ್ಯಾಣ ನಿಖಿಲಾಭರಣ
ಉಡುಗೆ ಪೀತಾಂಬರ ರವಿಶತ ಕಿರಣ
ಕಡಗ ನೂಪುರ ಗೆಜ್ಜೆಗಳನಿಟ್ಟ ಚರಣ
ಒಡೆಯ ಶ್ರೀಪುರಂದರ ವಿಠಲನ ಕರುಣ || ೩||
Krushnamurti kanna munde nintidantide ||pa||

Kashtagalella pariharisi mana-
Dishtarthagalanella kottu rakshisuvantha || a||

Mastakadali manikyada kirita
Kasturi tilakadindeseva lalata
Sistili kolalanuduva Ore nota
Kaustuba edabaladali olata || 1||

Magamagisuva sobagina suligurulu
Ciguru tulasi vanamaleya koralu
Bage bage honnunguravitta beralu
Sobagina nabiya tavare yaralu ||2||

Ududara vaddyana nikilabarana
Uduge pitambara ravisata kirana
Kadaga nupura gejjegalanitta carana
Odeya sripurandara vithalana karuna || 3||

dasara padagalu · MADHWA

Kande na kanasinali govindana

ಕಂಡೆ ನಾ ಕನಸಿನಲಿ ಗೋವಿಂದನ||pa||

ಕಂಡೆ ನಾ ಕನಸಿನಲಿ ಕನಕ ರತ್ನದ ಮಣಿಯ
ನಂದನ ಕಂದ ಮುಕುಂದನ ಚರಣವ||apa||

ಅಂದುಗೆ ಕಿರುಗೆಜ್ಜೆ ಘಲಿರೆಂಬ ವಾದ್ಯದಿ
ಬಂದು ಕಾಳಿಂಗನ ಹೆಡೆಯನೇರಿ
ಧಿಂ ಧಿಮಿ ಧಿಮಿಕೆಂಧು ತಾಳಗತಿಗಳಿಂದಾ –
-ನಂದದಿ ಕುಣಿವ ಮುಕುಂದನ ಚರಣವ

ಉಟ್ಟ ಪೀತಾಂಬರ ಉಡಿಯ ಕಾಂಚಿಯ ಡಾಮ
ತೊಟ್ಟ ಮುತ್ತಿನ ಹಾರ ಕೌಸ್ತುಭವು
ಕಟ್ಟಿದ ವೈಜಯಂತಿ ತುಳಸಿ ವನಮಾಲೆ
ಇಟ್ಟ ದ್ವಾದಶನಾಮ ನಿಗಮ ಗೋಚರನ

ಕಿರು ಬೆರಳಿನ ಮುದ್ರೆ ಉಂಗುರ ಮುಂಗೈಯ
ಕರದಲಿ ಕಂಕಣ ನಲಿದೋಳುಗಳ
ವರ ಚತುರ್ಭುಜ ಶಂಖ ಚಕ್ರದಿ ಮೆರೆವನ
ನಿರತದಿ ಒಪ್ಪುವ ಕರುಣಾಮೂರುತಿಯ

ಬಣ್ಣದ ತುಟಿ ಭಾವ ರಚನೆಯ ಸುಳಿಪಲ್ಲು
ಸಣ್ಣ ನಗೆಯ ನುಡಿ ಸವಿಮಾತಿನ
ಪುಣ್ಯ ಚರಿತ್ರನ ಪೊಳೆವ ಕಿರೀಟವ
ಕಣ್ಣು ಮನ ತಣಿಯದು ಕಂಸಾರಿ ಕೃಷ್ಣನ

ಮಂಗಳ ವರ ತುಂಗಭದ್ರದಿ* ಮೆರೆವನ
ಅಂಗಜಪಿತ ಶ್ರೀ ಲಕ್ಷ್ಮೀಪತಿಯ
ಶೃಂಗಾರಮೂರುತಿ ಪುರಂದರವಿಠಲನ
ಕಂಗಳಿಂದಲಿ ಕಂಡೆ ಹಿಂಗಿತು ಭವಭಯ
Kande na kanasinali govindana||pa||

Kande na kanasinali kanaka ratnada maniya
Nandana kanda mukundana caranava||apa||

Anduge kirugejje galiremba vadyadi
Bandu kalingana hedeyaneri
Dhim dhimi dhimikendhu talagatigalimda –
-nandadi kuniva mukundana caranava

Utta pitambara udiya kanciya dama
Totta muttina hara kaustubavu
Kattida vaijayanti tulasi vanamale
Itta dvadasanama nigama gocarana

Kiru beralina mudre ungura mungaiya
Karadali kankana nalidolugala
Vara caturbuja sanka cakradi merevana
Niratadi oppuva karunamurutiya

Bannada tuti bava racaneya sulipallu
Sanna nageya nudi savimatina
Punya caritrana poleva kiritava
Kannu mana taniyadu kamsari krushnana

Mangala vara tungabadradi* merevana
Amgajapita sri lakshmipatiya
Srungaramuruti purandaravithalana
Kangalimdali kamde hingitu bavabaya

dasara padagalu · MADHWA · purandara dasaru

Elliruvano ranganemba samsaya beda

ಎಲ್ಲಿರುವನೋ ರಂಗನೆಂಬ ಸಂಶಯ ಬೇಡ
ಎಲ್ಲಿ ಭಕ್ತರು ಕರೆದರಲ್ಲೆ ಒದಗುವನು ||ಪ||

ತರಳ ಪ್ರಹ್ಲಾದ ಶ್ರೀಹರಿ ವಿಶ್ವಮಯನೆಂದು
ಬರೆದೋದಲವನ ಪಿತ ಕೋಪದಿಂದ
ಸ್ಥಿರವಾದಡಿ ಕಂಭದೊಳು ತೋರು ತೋರೆನಲು
ಭರದಿ ಬರಲದಗೆ ವೈಕುಂಠ ನೆರೆ ಮನೆಯೆ ||

ಪಾಪ ಕರ್ಮವ ಮಾಡಿದಜಮಿಳನ ಯಮಭಟರು
ಕೋಪದಿಂದೆಳೆಯುತಿರೆ ಭೀತಿಯಿಂದ
ತಾ ಪುತ್ರನನು ಕರೆಯ ಕೇಳಿ ರಕ್ಷಿಸೆ ಶ್ವೇತ
ದ್ವೀಪವೀ ಧರೆಗತಿ ಸಮೀಪದಲ್ಲಿಹುದೆ ||

ಕರಿರಾಜನು ನೆಗಳು ನುಂಗುತಿರೆ ಭಯದಿಂದ
ಮೊರೆಯಿಡಲು ಕೇಳಿ ಅತಿ ತ್ವರಿತದಿಂದ
ಕರುಣದಲಿ ಬಂಧನವ ಬಿಡಿಸಲಾಗಜರಾಜ
ನಿರುವ ಸರಸಿಗೆ ಅನಂತಾಸನವು ಮುಮ್ಮನೆಯೆ ||

ಕುರುಪತಿಯು ದ್ರೌಪದಿಯ ಸೀರೆಯನು ಸೆಳೆಯುತಿರೆ
ತರುಣಿ ಹಾ ಕೃಷ್ಣ ಎಂದೊದರೆ ಕೇಳಿ
ಭರದಿಂದ ಅಕ್ಷಯಾಂಬರವಿತ್ತ ಹಸ್ತಿನಾ-
ಪುರಿಗು ದ್ವಾರಾವತಿಗು ಕೂಗಳತೆಯೆ ||

ಅಣು ಮಹತ್ತುಗಳಲ್ಲಿ ಪರಿಪೂರ್ಣೆಂದೆನಿಸಿ
ಗಣನೆಯಿಲ್ಲದ ಮಹಾಮಹಿಮನೆನಿಪ
ಘನಕೃಪಾನಿಧಿ ನಮ್ಮ ಪುರಂದರ ವಿಟ್ಠಲನು
ನೆನೆದವರ ಮನದೆಲ್ಲ ಇಹನೆಂಬ ಬಿರುದಿರಲು ||
Elliruvano ranganemba samsaya beda
Elli Baktaru karedaralle odaguvanu ||pa||

Tarala prahlada srihari visvamayanendu
Baredodalavana pita kopadinda
Sthiravadadi kambadolu toru torenalu
Baradi baraladage vaikuntha nere maneye ||

Papa karmava madidajamilana yamabataru
Kopadimdeleyutire bitiyinda
Ta putrananu kareya keli rakshise sveta
Dvipavi dharegati samipadallihude ||

Karirajanu negalu nungutire Bayadinda
Moreyidalu keli ati tvaritadinda
Karunadali bandhanava bidisalagajaraja
Niruva sarasige anantasanavu mummaneye ||

Kurupatiyu draupadiya sireyanu seleyutire
Taruni ha krushna emdodare keli
Baradimda akshayambaravitta hastina-
Purigu dvaravatigu kugalateye ||

Anu mahattugalalli paripurnendenisi
Gananeyillada mahamahimanenipa
Ganakrupanidhi namma purandara vitthalanu
Nenedavara manadella ihanemba birudiralu ||

MADHWA · purandara dasaru

Ikkalare kai enjalu , cikka

ಇಕ್ಕಲಾರೆ ಕೈ ಎಂಜಲು , ಚಿಕ್ಕ
ಮಕ್ಕಳು ಅಳುತಾರೆ ಹೋಗೋ ದಾಸಯ್ಯ ||ಪ||

ಮನೆಯ ಸಾರಿಸುತೇನೆ , ಮಡಕೆ ತೊಳೆಯುತೇನೆ
ಮನೆಯ ತೊಳೆಯೊಳಗಾರಿಲ್ಲ , ಹೋಗೋ ದಾಸಯ್ಯ
ತನಯರು ಅಳುತಾರೆ , ನಿನದೇನು ಕಾಟವು
ಕ್ಷಣ ಹೊತ್ತು ನಿಲ್ಲದೆ, ಹೋಗೋ ದಾಸಯ್ಯ ||

ಅಟ್ಟದ ಮೇಲಣ ಅಕ್ಕಿ ತೆಗೆಯಬೇಕು
ಹೊಟ್ಟೆ ನೋಯುತಲಿದೆ, ಹೋಗೋ ದಾಸಯ್ಯ
ಮುಟ್ಟಾಗಿ ಇದ್ದೇನೆ , ಮನೆಯೊಳಗಾರಿಲ್ಲ
ನಿಷ್ಠುರ ಮಾಡದೆ ಹೋಗೋ ದಾಸಯ್ಯ ||

ವೀಸದ ಕಾಸಿಗೆ ದವಸವ ನಾ ತಂದೆ
ಕೂಸಿಗೆ ಸಾಲದು , ಹೋಗೋ ದಾಸಯ್ಯ
ಆಸೆಕಾರ ನೀನು , ದೋಷಕಾರಿ ನೀನು
ಶೇಷಾಚಲವಾಸ ಪುರಂದರವಿಠಲ ||

Ikkalare kai enjalu , cikka
Makkalu alutare hogo dasayya ||pa||

Maneya sarisutene , madake toleyutene
Maneya toleyolagarilla , hogo dasayya
Tanayaru alutare , ninadenu katavu
Kshana hottu nillade, hogo dasayya ||

Attada melana akki tegeyabeku
Hotte noyutalide, hogo dasayya
Muttagi iddene , maneyolagarilla
Nishthura madade hogo dasayya ||

Visada kasige davasava na tande
Kusige saladu , hogo dasayya
Asekara ninu , doshakari ninu
Seshacalavasa purandaravithala ||

dasara padagalu · MADHWA · madhwacharyaru · purandara dasaru

Idiryaro guruve samaryaro

ಇದಿರ್ಯಾರೊ ಗುರುವೆ ಸಮರ್ಯಾರೊ ||ಪ||

ಮದನಜನಕ ಪ್ರಿಯ ಮಧ್ವರಾಯ ||ಅ||

ಸನ್ನುತಮಹಿಮ ಪ್ರಸನ್ನವದನ ನಿನ-
ಗನ್ಯನಲ್ಲವೋ ನೀ ಎನ್ನ ರಕ್ಷಿಸಬೇಕೋ
ನಿನ್ನ ನೋಡಿದವರು ಧನ್ಯರಾಗುವರು
ನಿನ್ನ ದಯಾಮೂರ್ತಿ ಮನ್ನಿಸಿನೋಡೊ ||

ದುರ್ಜನರ ಗರ್ಜನದಿಂದ ಓಡಿಸಿ
ಸಜ್ಜನರನು ಸಂರಕ್ಷಿಸಿದಾತನೆ
ತ್ರಿಜಗದಲ್ಲಿ ಮಧ್ಯಗೇಹರ ಪತ್ನಿಯ
ಪೂಜ್ಯ ಜಠರದಲಿ ಜನಿಸಿದ ಧೀರ ||

ವೇದಶಾಸ್ತ್ರಗಳಿಂದ ಮಾಯ್ಗಳ ಖಂಡಿಸಿ
ಸಾಧಿಸಿ ಹರಿಯೆ ಸರ್ವೋತ್ತಮನೆಂತೆಂದು
ಮೋದಭರಿತವದ ದಿವ್ಯಶಾಸ್ತ್ರವ ಮಾಡ್ದ
ಮೋದತೀರ್ಥ ಪುರಂದರವಿಠಲದಾಸ ||

Idiryaro guruve samaryaro ||pa||

Madanajanaka priya madhvaraya ||a||

Sannutamahima prasannavadana nina-
Ganyanallavo ni enna rakshisabeko
Ninna nodidavaru dhanyaraguvaru
Ninna dayamurti mannisinodo ||

Durjanara garjanadinda odisi
Sajjanaranu samrakshisidatane
Trijagadalli madhyagehara patniya
Pujya jatharadali janisida dhira ||

Vedasastragalinda maygala kandisi
Sadhisi hariye sarvottamanentendu
Modabaritavada divyasastrava madda
Modatirtha purandaravithaladasa ||

MADHWA · purandara dasaru

Aj~janigala kuda adhika

ಅಜ್ಞಾನಿಗಳ ಕೂಡ ಅಧಿಕ ಸ್ನೇಹಕ್ಕಿಂತ
ಸುಜ್ಞಾನಿಗಳ ಕೂಡ ಜಗಳವೆ ಲೇಸು

ಉಂಬುಡುವುದಕ್ಕಿರದ ಅರಸನೋಲುಗಕ್ಕಿಂತ
ತುಂಬಿದೂರೊಳಗೆ ತಿರಿದುಂಬುವುದೆ ಲೇಸು
ಹಂಬಲಿಸಿ ಹಾಳುಹರಟೆಗಳ ಹರಟೆಗಿಂತ
ನಂಬಿ ಹರಿದಾಸರೊಳು ಪೊಂದುವುದೆ ಲೇಸು

ಒಡನೆ ಹಂಗಿಸುವವನ ಪಾಲೋಗರಕ್ಕಿಂತ
ಕುಡಿನೀರು ಕುಡಿದುಕೊಂಡಿರುವುದೆ ಲೇಸು
ಕಡು ಕುಹಕನೊಡನೆ ಸಂಗವ ಮಾಡುವುದಕ್ಕಿಂತ
ಅಡವಿಯೊಳಗಜ್ಞಾತವಾಸವೇ ಲೇಸು

ಮಸೆದು ಮತ್ಸರಿಪ ಸತಿಯೊಡನೆ ಸಂಸಾರಕ್ಕಿಂತ
ಹಸನಿಲ್ಲದಾ ಹಾಳುಗುಡಿಯೇ ಲೇಸು
ಎಸೆದು ಭಜಿಸಲು ನಮ್ಮ ಪುರಂದರ ವಿಠಲನ್ನ
ವಶವಹಗೆ ಮುಕ್ತಿಯು ವಶವಹುದೆ ಕೇಳಿ

Aj~janigala kuda adhika snehakkinta
Suj~janigala kuda jagalave lesu

Umbuduvudakkirada arasanolugakkinta
Tumbidurolage tiridumbuvude lesu
Hambalisi haluharategala harateginta
Nambi haridasarolu pomduvude lesu

Odane hangisuvavana palogarakkinta
Kudiniru kudidukondiruvude lesu
Kadu kuhakanodane sangava maduvudakkinta
Adaviyolagaj~jatavasave lesu

Masedu matsaripa satiyodane samsarakkinta
Hasanillada halugudiye lesu
Esedu Bajisalu namma purandara vithalanna
Vasavahage muktiyu vasavahude keli