dasara padagalu · MADHWA · prasanna venkata dasaru

ideko dhadi mathise

ಇದೆಕೋ ಧದಿ ಮಥಿಸೆ ಹಸೆ ಬೆಣ್ಣೆ ಕೊಡವೇನೊ
ಪದುಮನಾಭ ಗೊಲ್ಲಗೋರಸಕೆ ಗೋಳಿಡಬ್ಯಾಡೊ            ||ಪ||

ಮಲತಹಾಲು ಹುಳಿಮೊಸರು ತಂಗಳಬೆಣ್ಣೆ
ನಳಿನಾಕ್ಷ ನಿನಗೇನು ರುಚಿಯೋ ಕಂದಾ
ಕಳವೀನ ಮಾತ್ಯಾಕೆ ಹಸುಳೆ ಗೋವಳೆಯೇರ
ಗೆಳೆತನವ್ಯಾತಕೊ ನಿನಗೆ ರಂಗಮ್ಮಾ            ||೧||

ಮನೆಮನೆ ತಿರುಗಾಡಲು ಬಡವರ ಮಗನೇನೋ
ನಿನಗೇನು ಕೊರತೆನ್ನಾ ಮನೆಯೊಳಗೆ
ಅನುದಿನಾ ವಿಗಡೇರು ದೂರುತಲೈದಾರೆ
ದಣಿದೆನಾರೋಪಣಿಯಾ ಕೇಳಿ ಕೃಷ್ಣಯ್ಯಾ         ।।೨।।

ಎನ್ನ ಮುದ್ದಿನ ಅಮೃತ ಎನ್ನ ಭಾಗ್ಯದ ನಿಧಿಯೆ
ಎನ್ನ ಚಿಂತನೆಯ ಚಿಂತಾಮಣಿಯೇ
ಚಿನ್ನಾರರಸನಾದ ಪ್ರಸನ್ವೆಂಕಟ ಕೃಷ್ಣಾ
ನನ್ನಾಣೆ ಕಣ್ಣಮುಂದಿರು ನಮ್ಮಮ್ಮಾ              ।।೩।।

Ideko dhadi mathise hase benne kodaveno
Padumanaba gollagorasake golidabyado ||pa||

Malatahalu hulimosaru tangalabenne
Nalinaksha ninagenu ruciyo kanda
Kalavina matyake hasule govaleyera
Geletanavyatako ninage ramgamma ||1||

Manemane tirugadalu badavara maganeno
Ninagenu koratenna maneyolage
Anudina vigaderu durutalaidare
Danidenaropaniya keli krushnayya ||2||

Enna muddina amruta enna bagyada nidhiye
Enna chintaneya chintamaniye
Cinnararasanada prasanvenkata krushna
Nannane kannamumdiru nammamma ||3||

dasara padagalu · MADHWA

Helidha yamadharma

ಹೇಳಿದ ಯಮಧರ್ಮ ತನ್ನಾಳಿಗೆ                        ।।ಪ॥

ಹೇಳಿದ ಯಮ ತನ್ನೂಳಿಗದವರಿಗೆ
ಖೂಳ ದುರಾತ್ಮರಾಗಿ ಬಾಳುವರನು ತರ             ।।೧।।

ಹರಿ ಸಂಕೀರ್ತನೆಯ ನರನಾರಿಯರು ಆ-
ದರದಲಿ ಮಾಡಿದವರ ನಿಂದಿಪರ ತರ                 ।।೨।।

ಹರಿದಸರಿಗುಣಕರಿಯದೆ ಜನ್ಮಾಂತ
ಒರಟು ಮಾತಿನ ಲುಬ್ಧ ನರನಲ್ಲದೇ ತರ              ।।೩।।

ಹರಿಕಥಾಮೃತ ಉಪಚಾರಕಾಗಿ ಕೇಳುವಾ
ಪರನಾರೇರಾಳುವ ದುರುಳನ ಕಟ್ಟಿತರ               ।।೪।।

ಗುರುಹಿರಿಯರೊಳು ಪ್ರತ್ಯುತ್ತರ ಕೊಡುವರ
ಮರುಳಾಗಿ ಮಮತೆಯಾ ಸತಿ ವಶದನ ತರ        ।।೫।।

ಅಂಬುಜಾಕ್ಷನೆ ಪೂಜೆ ಜಂಭದಿ ಮಾಡುವ
ರಂಭೆಯರೊಡನಾಟದ ಡಂಭನ ಹಿಡಿತರ             ।।೬।।

ಒಳ್ಳೇದು ಹಳಿದು ತಾ ಬಲ್ಲವನೆನುವನ
ಚೆಲ್ವಾ ಪ್ರಸನ್ವೆಂಕಟಾ ವಲ್ಲಭಾಗರಿತರ                 ।।೭।।

Helida yamadharma tannalige ||pa||

Helida yama tannuligadavarige
Kula duratmaragi baluvaranu tara ||1||

Hari sankirtaneya naranariyaru A-
Daradali madidavara nindipara tara ||2||

Haridasarigunakariyade janmanta
Oratu matina lubdha naranallade tara ||3||

Harikathamruta upacarakagi keluva
Paranareraluva durulana kattitara ||4||

Guruhiriyarolu pratyuttara koduvara
Marulagi mamateya sati vasadana tara ||5||

Ambujakshane puje jambadi maduva
Rambeyarodanatada dambana hiditara ||6||

Olledu halidu ta ballavanenuvana
Celva prasanvenkata vallabagaritara ||7||

dasara padagalu · krishna · MADHWA · prasanna venkata dasaru

Avalanjisidhalavalu

ಆವಳಂಜಿಸಿದಳವಳು ಪೇಳು ರಂಗಮ್ಮಾ ನಾ
ನವಳ ಗಾರುಮಾಡುವೆ ನಡೆ ಕೃಷ್ಣಮ್ಮಾ ||ಪ||

ದೂರುವಿರ‍್ಯಾದರೆ ಮಗನ ಹಾದಿಗೆ ಹೋಗದಿರಿ ಎಂದು
ಸಾರಿಕೈಯ ಕಡ್ಡಿಕೊಟ್ಟೆ ಜಾರೆಯರಿಗೆ
ಸಾರಿಸಾರಿಗೆನ್ನ ಮನ ರಟ್ಟು ಮಾಡುವ ಮಾತೇನು
ಆರಿಗೆ ಮಕ್ಕಳಿಲ್ಲೆ ನಾನೇ ಹಡದವಳೇನೋ ||೧||

ಇದ್ದರಿರಲೀ ಕೂಸಿನ ಆಡುವಾಟಕೊಪ್ಪಿದರೆ
ಎದ್ದು ಹೋಗೆಮ್ದರೆ ಹೋಗಲಿಲ್ಲ ಪಳ್ಳಿಂದಾ
ಕದ್ದು ತಿಂದನೆಂಬ ಸುಳ್ಳು ಸುದ್ದಿಗೆ ಕಾರಣವೇನೋ
ಮುದ್ದೆಬೆಣ್ಣೆ ಕೈಯಲಿತ್ತಾರೊಲ್ಲದೆ ಚಲ್ಲುವ ಕಂದಗ ||೨||

ಏನು ಪುಣ್ಯರಾಶಿ ಕೂಡಿತೆಂದು ನಿನ್ನಾಟವ ನೋಡಿ
ಬೀಸಿ ಬಿಗಿದಪ್ಪುವಂಥ ಭಾಗ್ಯವನುಂಡೆ
ಕೂಸೆ ನಿನ್ನ ಕಂಡಸೂಯಾ ಬಡುವಾರ ಅಳಿಯಲಮ್ಮಾ
ದಾಸರಿಂಗೆ ಲೇಸಾಗಲಿ ಪ್ರಸನ್ನವೆಂಕಟ ಕೃಷ್ಣಾ ||೩||

Avalanjisidalavalu pelu rangamma nanavala
Garumaduve nade krushnamma ||pa||

Duruvir^yadare magana hadige hogadiri endu
Sarikaiya kaddikotte jareyarige
Sarisarigenna mana rattu maduva matenu
Arige makkalille nane hadadavaleno ||1||

Iddarirali kusina aduvatakoppidare
Eddu hogemdare hogalilla pallinda
Kaddu timdanemba sullu suddige karanaveno
Muddebenne kaiyalittarollade calluva kandaga ||2||

Enu punyarasi kuditendu ninnatava nodi
Bisi bigidappuvantha bagyavanunde
Kuse ninna kandasuya baduvara aliyalamma
Dasaringe lesagali prasannavenkata krushna ||3||

 

dasara padagalu · krishna · MADHWA · prasanna venkata dasaru

Hakkiya hegaleri

ಹಕ್ಕಿಯ ಹೆಗಲೇರಿ ಬಂದವಗೆ
ನೋಡಕ್ಕ ಮನಸೋತೆ ನಾನವಗೆ||

ಸತ್ರಾಜಿತನ ಮಗಳೆತ್ತಿದ ಉನ್ಮತ್ತ ನರಕನೊಳು ತಾ ಕಾದಿದ
ಮತ್ತೆ ಕೆಡಹಿದ ಅವನಂಗವ ಸತಿಗಿತ್ತನು ತಾ ಆಲಿಂಗನವ||

ಹದಿನಾರು ಸಾವಿರ ನಾರಿಯರ ಸೆರೆ ಮುದದಿಂದ ಬಿಡಿಸಿ ಮನೋಹರ
ಅದಿತಿಯ ಕುಂಡಲ ಕಳಿಸಿದ ಹರಿ ವಿಧಿಸುರನೃಪರನು ಸಲಹಿದ||

ಉತ್ತಮ ಪ್ರಾಗ್ಜೋತಿಷಪುರವ ಭಗದತ್ತಗೆ ಕೊಟ್ಟ ವರಾಭಯವ
ಕರ್ತ ಕೃಷ್ಣಯ್ಯನ ನಂಬಿದೆ ಶ್ರೀಮೂರ್ತಿಯ ಪಾದವ ಹೊಂದಿದೆ||

ನರಕಚತುರ್ದಶಿ ಪರ್ವದ ದಿನ ಹರುಷದಿ ವ್ರಕಟಾದನು ದೇವ
ಶರಣಾಗತಜನ ವತ್ಸಲಾ ರಂಗ ಪರಮ ಭಾಗವತರ ಪರಿಪಾಲ||

ಹೊಗಳಿ ಕೃಷ್ಣಯ್ಯನ ಮಹಿಮೆಯ ಮುಕ್ತಿ ನಗರದ ಅರಸನ ಕೀರ್ತಿಯಾ
ಜಗದೀಶ ಪ್ರಸನ್ವೆಂಕಟೇಶನು ಭಕ್ತರಘಹಾರಿ ರವಿ ಕೋಟಿಪ್ರಕಾಶನು||

Hakkiya hegaleri bandavage no
Dakka manasote na navage ||pa||

Satrajitana magalettida U
Nmatta narakanolu kadida
Matte kedahida avanangava
Satigittanu ta Alinganava. ||1||

Hadinaru savira nariyara sere
Mudadinda bidisi manohara
Aditiya kundala kalasida hara
Vidhisura nruparanu salahida. ||2||

Uttama pragjotisha purava Baga
Dattage kotta varabayava
Karta krushnayyana nambide sri
Murtiya padava hondide ||3||

Naraka chaturdasi parvada diva
Harushadi prakatadanu deva
Saranagatajana vatsala ranga
Parama bagavatara pratipala ||4||

Hogali krushnayyana mahimeya mukti
Nagarada arasana kirtiya
Jagadisa prasanvenkatesana Bakta
Ragahari ravikoti prakasana. ||5||

dasara padagalu · ekadashi · MADHWA · prasanna venkata dasaru

Haridina intha haridina

ಹರಿದಿನ ಇಂಥ ಹರಿದಿನ ಪ.
ಹರಿದಿನದ ಮಹಿಮೆ ಹೊಗಳಲಗಾಧ||

ಪರಮ ಭಾಗವತರಾಚರಣೆಗಾಹ್ಲಾದÀ
ದುರಿತ ದುಷ್ಕøತ ಪರ್ವತಕೆ ವಜ್ರವಾದ
ಮರುತ ಸದ್ವ್ವ್ರತಕೆಲ್ಲ ಶಿರೋರತ್ನವಾದ||a.pa||

ಭಕ್ತಿಗೆ ಮೊದಲು ವಿರಕ್ತಿ ಬೀಜವೆಂಬ
ಸಕಲ ತಪದೊಳೆಲ್ಲ ಮೇಲೆನಿಸಿಕೊಂಬ
ಮಖಕೋಟಿಗಧಿಕ ಫಲಸ್ಥಿರ ಸ್ತಂಭ
ಮುಕ್ತಿ ಸೋಪಾನ ನಿಧಾನತ್ವವೆಂಬ ||1||

ತ್ವಕ್ ಚರ್ಮ ಅಸ್ತಿ ಮಜ್ಜ ಮಾಂಸ ರುಧಿರ
ಯುಕ್ತ ಸಪ್ತ ಧಾತುಗಳಿಹ ಶರೀರ
ನಖ ಕೇಶ ಕಫ ಸ್ವೇದ ಮಲ ಮೂತ್ರಾಗರ ಈ
ನಿಖಿಳ ಪಾವನ ಮಾಡುವ ನಿರಾಹಾರ ||2||

ವರ ವಿಪ್ರ ಕ್ಷತ್ರಿಯ ವೈಶ್ಯ ಶೂದ್ರ ಜನರು
ತರಳ ಯೌವನ ವೃದ್ಧ ನಾರಿಯರು
ಕಿರಾತ ಪುಲತ್ಸ್ಯಾಂದ್ರ ಹೂಣ ಜಾತಿಯವರು
ಹರಿವ್ರತ ಮಾತ್ರದಿ ಮುಕ್ತಿಯೈದುವರು ||3||

ದ್ವಿಜ ಗೋವಧ ನೃಪರನು ಕೊಂದ ಪಾಪ
ನಿಜಗುರು ಸತಿಯರ ಸಂಗದ ಪಾಪ
ಅಜಲಪಾನದ ದಿನದುಂಡ ಮಹಾಪಾಪ
ನಿಜನಾಶ ಮೋಕ್ಷ ಪ್ರಾಪ್ತಿಯು ಸತ್ಯಾಲಾಪ ||4||

ಯಾಮಿನಿಯಲಿ ಅನಿಮಿಷದ ಜಾಗರವು
ಶ್ರೀ ಮದ್ಭಾಗವತ ಶ್ರವಣ ಗೀತಾಪಠಣ
ಪ್ರೇಮವಾರಿಧಿಲಿ ಮುಳುಗಿ ಸಂಕೀರ್ತನೆಯು
ಧಾಮತ್ರಯದ ಸುಖಕಿದೇ ಕಾರಣವು ||5||

ಅರ್ಧಕೋಟಿ ತೀರ್ಥಸ್ನಾನವೆಲ್ಲ ಅ
ಜಸ್ರಪ್ರಯಾಗ ಕಾಶಿವಾಸವೆಲ್ಲ ಸ
ಹಸ್ರ ಕೋಟಿ ಭೂಪ್ರದಕ್ಷಿಣೆಯೆಲ್ಲ
ಸುಶ್ರದ್ಧೆ ಸಹ ಜಾಗರಕೆ ಸರಿಯಲ್ಲ||6||

ಪಂಚಮಹಾ ಪಾಪ ಪ್ರಪಾಪವವಗೆ
ವಂಚಕ ಪಿಶುನ ಜನರ ಪಾಪವವಗೆ
ಮಿಂಚುವ ಕ್ಷೇತ್ರವಳಿ ಪಾಪವವಗೆ
ಪಂಚಕವ್ರತ ಪೆತ್ತ ವ್ರತ ಉಲ್ಲಂಘಿಪಗೆ||7||

ಸರ್ಪಶಯನಗೆ ನೀರಾಜನವೆತ್ತಿ ನೋಡಿ
ಉಪವಾಸದಿ ಭಗವಜ್ಜನ ನೃತ್ಯವಾಡಿ
ಚಪ್ಪಾಳಿಕ್ಕುತ ದಂಡಿಗೆ ಮುಟ್ಟಿ ಪಾಡಿ
ತಪ್ಪೆ ನಾಯಿ ನರಕ ಫಲ ಕೈಗೂಡಿ ||8||

ಶ್ರುತಿ ಪಂಚರಾತ್ರಾಗಮವು ಸಾರುತಿವೆ
ಯತಿ ಮಧ್ವರಾಯರುಕುತಿ ಪೇಳುತಿವೆ
ಕ್ರತು ಪ್ರಸನ್ವೆಂಕಟ ಕೃಷ್ಣ ಮತವೆ
ಕ್ಷಿತಿಪತಿ ಸುರರತಿಶಯದ ಸದ್ವ್ವ್ರತವೆ||9||

Haridina intha haridina –
Haridinada mahime hogalalagadha || pa ||

Parama bagavatara caranegahlada
Duritadushkutake vajranada
Marutasadvratakella siroratnavada
Haridina intha haridina || a ||

Bakutige modalu virakuti bijavemba
Sakala tapadolella melenisikomba
Makakotigadhika Pala sthirastamba
Mukuti sopana nidanatvademba || 1 ||

Tvak Sarma asthi majja mamsarudhira
Yukutasaputadhatugaliha sarira
Nakakesakapas vedamalamutragara
I nikila pavana maduva nirahara || 2 ||

Varavi prakshatriyavai syasudra janaru
Taralayavvana vruddhanararu nariyaru
Kiratapulakasandhra hunajatiyavaru
Harivratamatradi mukutiyaiduvaru || 3 ||

Dvijagovuvuvadha nruparanu konda papa
Nijagurusatiyara sangama papa
Ajalapanada dinadunda mahapapa
Nijanasa moksha praptiyu satyalapa || 4 ||

Yaminiyali animishada jagaravu
Srimadbagavata sravana gitapathana
Premavaridhili mulugu samkirtaneyu
Dhamatrayada sukakide karanavu || 5 ||

Ardhakoti tirthasnanavella A
Asra prayaga kasivasavella
Sahasra koti bupradakshineyella
Susraddhe saha jagarake sariyalla || 6 ||

Pancha mahapapa prapapavavage
Vanchakapisunajanara papavavage
Minchuva kshetravali prapapavage
Panchakavrata pettavrata ullangipage || 7 ||

Sarpasayanage nirajanavetti nodi
Upavasadi bagavadbajana nrutyavadi
Cappalikkuta dandigi muttipadi
Tappena ilanarka Pala kaigudi || 8 ||

Srutipancaratragamavu sarutide
Yati madhvarayara kruti pelutive
Kratusevya prasanvenkata krushna matave
Kshitipatisuraratisayada sadvratave || 9 ||

dasara padagalu · MADHWA · prasanna venkata dasaru

besarade indu sadasivanenni

ಬೇಸರದೆಂದೂ ಸದಾಶಿವನೆನ್ನಿಕಾಶಿಯ ಪ್ರಭು ವಿಶ್ವೇಶ್ವರನೆನ್ನಿ ||pa||

ನಂದಿವಾಹನ ಆನಂದನು ಎನ್ನಿಸುಂದರ ಗಣಪನ ತಂದೆಯು ಎನ್ನಿ
ನಂಬೆ ಭವಾಂಬುಧಿ ಅಂಬಿಗನೆನ್ನಿಅಂಬಿಕೆಯರಸು ತ್ರಯಂಬಕನೆನ್ನಿ ||1||

ಕರ್ಪರಭಾಂಡಕಂದರ್ಪಹರೆನ್ನಿಸರ್ಪಭೂಷಣ ಸುಖದರ್ಪಣನೆನ್ನಿ
ಬೇಡಿದ ಭಾಗ್ಯವೀಡಾಡುವನೆನ್ನಿಬೇಡನ ಭಕುತಿಗೆ ಕೂಡಿದನೆನ್ನಿ ||2||

ಶಂಭು ಗಜದ ಚರ್ಮಾಂಬರನೆನ್ನಿಸಾಂಬಸುಗುಣ ಕರುಣಾಂಬುಧಿಯೆನ್ನಿ
ಎಂದಿಗೂ ಭಾವಿಕ ಮಂದಿರನೆನ್ನಿಇಂದುಶೇಖರ ನೀಲಕಂಧರನೆನ್ನಿ ||3||

ದುರ್ದನುಜಾಂಧಕ ಮರ್ದಕನೆನ್ನಿ ಕಪರ್ದಿ ಕೃಪಾಲತೆವರ್ಧಕನೆನ್ನಿ
ಶರಣು ಸುರಾರ್ಚಿತ ಚರಣನೆ ಎನ್ನಿಶರಣಾಗತರಾಭರಣನು ಎನ್ನಿ||4||

ತ್ರಿಪುರಾಂತಕ ನಿಷ್ಕಪಟನು ಎನ್ನಿಅಪಮೃತ್ಯುಹರ ಖಳರಪಹರನೆನ್ನಿ
ದಕ್ಷಯಜÕವೀಕ್ಷಕನೆನ್ನಿಪಕ್ಷಿಗಮನ ಭಟರಕ್ಷಕನೆನ್ನಿ
ಈಪರಿನೆನೆದರೆ ಪಾಪದೂರೆನ್ನಿಶ್ರೀ ಪ್ರಸನ್ವೆಂಕಟಗತಿ ಪ್ರೀತೆನ್ನಿ

besarade indu sadasivanenni | kasiya prabu visvesvaranenni |

nandivahana anandanu enni | sundara ganapana tande enni |
nanbi bavanbudhi anbigenni | anbake arasu triyanbaengenni | 1 |

dakshana yajna vivakshakavanenni | pakshigamana batu rakshaengenni |
durdanajasura mardaengenni | kapardi kapalaya pididihanenni | 2 |

bedida bagyava niduvanenni | bedana bakutige kudidanenni |
i pari nenedare papa duravenni | sri prasanna venkatage ati priyanenni | 3 |

 

dasara padagalu · MADHWA · panduranga · prasanna venkata dasaru

Nee karuniso viththala namma

ನೀ ಕರುಣಿಸೊ ವಿಠಲ ನಮ್ಮಸಾಕೊ ಪಂಡರಿ ವಿಠಲ ||pa||

ದೋಷಿಗಳೊಳಗೆ ಹಿರಿಯನು ನಾ ನಿರ್ದೋಷಿಗಳರಸನೆ ವಿಠಲ
ಸಾಸಿವೆಯಷ್ಟು ಭಕುತಿಯನರಿಯೆನುಶೇಷಶಯನ ಶ್ರೀ ವಿಠಲ |\1||

ಭವಸಾಗರದೊಳು ಮುಳುಗುವೆ ಸುಮ್ಮನೆಅವಲೋಕಿಸುವರೆ ವಿಠಲ
ನವ ನವ ವಿಷಯಕೆ ಮುಗ್ಗುತಲಿಹ ಮನದವಸರ ಕಾಯೊ ವಿಠಲ ||2||

ತನುಸಂಬಂಧಿಗಳತಿ ಕಾರ್ಯಾರ್ಥಿಗಳ್ಎನಗಾರಿಲ್ಲೊ ವಿಠಲಾ
ಬಿನಗುಮಾನವರನುಸರಣೆಯಲಿದಣಿಸದಿರಯ್ಯ ವಿಠಲ||3||

ನಿಶಿದಿನಅಶನವಸನಕೆ ಹೆಣಗುವೆಹುಸಿಸಂಗ್ರಹಿಸಿದೆ ವಿಠಲ
ನಿಶಿದ್ಧಗಳಂಜಿಕೆ ಇಲ್ಲವು ನರಕದಗಸಣೆಗೆ ಅಂಜುವೆ ವಿಠಲ||4||

ಜಾವಕೆ ಮಾಡುವೆ ಸಾವಿರ ತಪ್ಪನುಕಾವದಯಾಂಬುಧಿ ವಿಠಲ
ನಾ ವಡಲ್ಹೊಕ್ಕೆನೊ ಪ್ರಸನ್ವೆಂಕಟಪತಿಜೀವಕೆ ಹೊಣೆ ನೀ ವಿಠಲ ||5||

Nee karuniso viththala namma|saako pandari viththala||pa||

Doshigalolage hiriyanu naa nirdoshigalarase viththala|
Saasiveyashtu bhakutiyanariyeno shesha shayana hari viththala ||1||

Bhava saagaradolu muluguve summaneavalokisuvare viththala|
Nava nava vishayake higgutaliha manadavasara kaayo viththala ||2||

Nishidina ashanaa vasanake henaguve husi sangrahiside viththala|
Nishedha maayaa illavo narakada gasanege anjuve viththala ||3||

Tanu sambandhigalati kaamyaarthigalu yenagyaarillo viththala|
Binuguva maanavara anusaraneyali danisadirayyaa viththala ||4||

Jaavake maaduve saavira tappanu kayo dayaambudhe viththala|
Shreevara prasanna venkata viththala jeevake hone nee viththala ||5||

dasara padagalu · DEVOTIONAL · MADHWA · prasanna venkata dasaru

Dasara pada on Prasanna venkata dasaru

ಸಿರಿವಿರಿಂಚಿ ಭವೇಂದ್ರಾದಿ ಸುರರಿಂದ ರ್ಚಿತನಾದ ಸಿರಿ ಪ್ರಸನ್ನವೆಂಕಟನ್ನ||
ನಿರುತ ಸ್ಮರಿಪ ಕಾಖಂಡಿಕಿ ವೆಂಕಪ್ಪನವರ ಚರಣವನೆ ನೆನೆವನೆ ಧನ್ಯಾಮಾನ್ಯ ||pa||

ಮರುತ ಮತಾಬ್ಧಿ ಮರಕತ ಭೂಸುರಜನ್ಮ ಧರನಾಗಿಭೂಮಿಯೊಳು
ದಿಸಲುತರುಳತ್ವ ಕಳೆದು ತರುಣತನ ಬರಲಿನ್ನು ಅರಿವ ಕಾಣದೆ ಇರುತಿರಲು
ಹರಿನಾಮಾವಳಿಗಳು ಬರೆದು ಓದುವ ಭಾಗ್ಯ ಅರಿವೆನೆಂದರೆ ಬಾರದಿರಲು
ತೊರೆದು ಮನೆಯವರ ಗಿರಿಯಾತ್ರೆ ಮಾಳ್ಪರನನುಸರಿಸಿ ತೆರಳಿಬರುತಿರಲು ||1||

ಹಸನಾಗಿ ಕಪಿಲ ತೀರ್ಥದಲಿ ಮಜ್ಜನಗೈದು ಶಶಿಧರನ ಅಡಿಗಳಿಗೆರಗಿ
ಎಸೆವ ಪರ್ವತಾರೋಹಣವ ಮಾಡಿ ಸ್ವಾಮಿ ಪುಷ್ಕರಣಿ ತೀರ್ಥದಲಿಮುಳುಗಿ
ಬಿಸಜದಾಳಾಕ್ಷ ವರಾಹ ಮೂರ್ತಿಯನೆ ಕಂಡಾಲಸವ ಮಾಡದಲೆಚೆನ್ನಾಗಿ
ಝಷಕೇತು ಜನಕನ ಪುಟ್ಟಿಸಿದ ಕಾರಣವೇನು ಉಸಿರೆಂದು ಚರಣಕ್ಕೆಬಾಗಿ ||2||

ವಂದಿಸಿದ ಕ್ಷಣ ಸ್ವಪ್ನದಿ ಪ್ರಸನ್ನವೆಂಕಟನೆಂದು ಬರೆಯೆ ನಾಲಿಗೆಲಿ
ನಂದದಿಂದೆಚ್ಚೆತ್ತು e್ಞÁನವುದಿಸೆ ಮುಕುಂದನ ಕಂಡು ಎದೆಯಲಿ
ಚಂದ ಚಂದದಿ ಪೊಗಳುತ್ತ ಕಂಗಳಿಂದಾ ನಂದಬಾಷ್ಪ ಸುರಿಸುತಲಿ
ಇಂದು ಧನ್ಯನಾದೆನೆಂದು ತೋಷಾಬ್ಧಿಯ ಹೊಂದಿ ಹರಿಯಾಜ್ಞೆಯಲಿತೆರಳಿ||3||

ಹಿತದಿ ಮಾತಿಗೆ ಬಂದಚ್ಯುತನ ನಾಮಾವಳಿ ಅತಿಶಯ ಭಕುತಿ ಪೂರ್ವಕದಿ
ಸತತ ಅನೇಕ ಗ್ರಂಥಗಳು ದಶಮಸ್ಕಂಧ ಭಾಗವತ ಪೂರ್ವಾರ್ಧಕನ್ನಡದಿಮತಿ
ಪೂರ್ವಕ ರಚಿಸುತಾನಂದವು ತುಳುಕು ತಿಹುದು ಕವಿತೆಯಲಿನುತಿಸಿ
ದುರ್ಮತ ನಿರಾಕರಿಸಿ ಬಾಳಿ ಬಲು ಕುಲ ತತಿ ಶುದ್ಧಮಾಳ್ಪರು ಹರಿಪುರವಹೊಂದಿ ||4||

ಕಲಿಕಾಲದಿ ನರಹರಿ ನಾಮ ಸ್ಮರಣೆಯು ಮುಖದಿಂದ ಬರುವುದು ಅತ್ಯಸಾಧ್ಯ
ಲಲಿತಕವನದಿ ತುತಿಸೆ ರಮಾಪತಿವಿಠಲನು ಒಲಿವನು ಇದು ಸತ್ಯ
ಹಲವು ಮಾತೇಕಿವರು ಸುರರೇ ಸರಿ ನರರಲ್ಲ ಇದು ಸಿದ್ಧವೇ ಸಿದ್ಧಛಲದಿ
ಮನುಜನೆಂಬಧಮನು ಹರಿಯಾಜ್ಞೆಯಲಿ ಬಲು ಬಲು ನರಕದೊಳು ಬೇಳುವುದುರಾದ್ಧ||5||

Sirivirinchi bhavendradi Suririndarchitanaad siri Prasannavenkatanna ||

Nirutsmaripakakhandaki Venkappanavar Charanvane Nenevane Dhanyamanya || Pa ||

Marutamatabdhi bhusurmara kat janmadharnagi bhuviyolludisalu |
Tarullatva kalledu tarunatanabaralinnu arrive kannade iratiralu Harina –
Mavalligalla baredu oduva bhagya aritenedara Baradiralu
Toredu maneyavara giriyatre mallvarnusarasi teralli barutiralu || 1 ||

Hasanagi kapilatirthdali majjanagaidu shashidharan adigalige eragi
Eseva parvatarohannava madi swami puskarani tirhadali mulagi |
Bisajdalaksha varahamurtiyene kandalasav madadale channagi
Jhashaketujanak puttisidakaravenu usirendu charanakke bagi || 2||

Vandisidakshana swapnadi prasanna venkatanendu bareya naligeyali
Nandadindechettu jnandise mukundanakandu yedeyari
Chandachandai pogaluta kangalindananda bhaspa surisutali
Indu dhanyanendu toshabdiya hondi Hariygneya terali || 3 ||

Hitadi matige Bandachyusana namavali atishaya bhakuti purvakadi
Satat anekagranthagalu dashamaskanda bhagavat purvardha kannadadi
Matipurvaka rachisutanadavu tulukatihadu kaviteyali
Nutisi durmata nirakarisi baallibalukulatati shudhamalparu haripura hondi || 4 ||

Kalikaladi narahariya nam smarnniyu mukhadindabaruvadu atyasadhya
Lalitakvanadi tutise Ramapativithal valivanu idu satya
Halavu matyakavaru surare sari naranalla idu sidhavesiddha
Chaladi manujanendavdhama hariyjnadi balu balu narakadolu belluvadu radhya || 5||

dasara padagalu · DEVOTIONAL · MADHWA · prasanna venkata dasaru

Sangavaagali saadhu sangavaagali

Sangavaagali saadhu sangavaagali || pa ||
Sangadinda lingadeha bhangavaagali || a.pa ||

Achyutaanghri nishtara yadrucchalaabha tushtara |
Nishcaya j~jaanavantara | acca bhaagavatara nitya || 1 ||

Tantra saara ashtamahaa-| mantra paripoorna sneha |
Yantradinda moor jagaswa-| tantryana gurimaaduvavara || 2 ||

Pancha samskaara bedha panchayuktaraagi | nitya
Pra-pancha sootra prasanna venkata | panchabaanayyanavara || 3 ||

 

dasara padagalu · DEVOTIONAL · MADHWA · prasanna venkata dasaru

Ane bantane bantane bantamma

ಆನೆ ಬಂತಾನೆ ಬಂತಾನೆ ಬಂತಮ್ಮಮ್ಮ
ದಾನವ ಕದಳಿಯಕಾನನ ಮುರಿಯುತ

ಗುಂಗುರುಗುರುಳ ನೀಲಾಂಗ ಚೆಲ್ವಾನೆ
ಕಂಗಳಿಗೊಳೆವ ವ್ಯಾಂಘ್ರಾಗುಳಿ ಆನೆ
ಬಂಗಾರದಣುಗಂಟೆ ಶೃಂಗಾರದಾನೆ
ಮಂಗಳ ತಿಲಕದ ರಂಗನೆಂಬಾನೆ

ಕೆಳದಿ ಗೋಪಿಯರೊಳು ಗೆಳೆತನದಾನೆ
ಸುಲಭದಿಂದಲಿಯುವ ಎಳೆಮರಿ ಆನೆ
ಘಲಿರುಘಲಿರುರವದಿ ನಲಿದಾಡೋ ಆನೆ
ಮಲೆತವರೆದೆಮ್ಯಾಲೆ ತುಳಿದಾಡೋ ಆನೆ

ನಳಿನಜಭವರಿಗೆ ಸಿಲುಕದ ಆನೆ
ಒಲವಿಂದ ಭಕುತರ ಸಲಹುವ ಆನೆ
ಹಲವು ಕವಿಗಳೀಗೆ ನಿಲುಕದ ಆನೆ
ಬಲ ಪ್ರಸನ್ವೆಂಕಟ ನಿಲಯನೆಂಬಾನೆ

Ane bantane bantane bantamma |
Danava kadaliya kanana muriyuta ||

Gungurugula nilanga chelvane
Kangalige holiyuva vyagranguli ane |
Bangaradanugunte srungaradane
Mangalatilaka ranganembane ||1||

Keladigopiyorolu geletanadane
Sulabadindoliyuva ele mari ane |
Galirugaliru ravadi nalidado ane
Maretavaredemyale nalidado ane ||2||

Nalinajabhavarige silukada ane
Olavinda bhakutara salahuva ane |
Halavu kavigalige silukada ane
Bana prasannavenkatanilaya nembane ||3||