ಹೇಳಿದ ಯಮಧರ್ಮ ತನ್ನಾಳಿಗೆ ।।ಪ॥
ಹೇಳಿದ ಯಮ ತನ್ನೂಳಿಗದವರಿಗೆ
ಖೂಳ ದುರಾತ್ಮರಾಗಿ ಬಾಳುವರನು ತರ ।।೧।।
ಹರಿ ಸಂಕೀರ್ತನೆಯ ನರನಾರಿಯರು ಆ-
ದರದಲಿ ಮಾಡಿದವರ ನಿಂದಿಪರ ತರ ।।೨।।
ಹರಿದಸರಿಗುಣಕರಿಯದೆ ಜನ್ಮಾಂತ
ಒರಟು ಮಾತಿನ ಲುಬ್ಧ ನರನಲ್ಲದೇ ತರ ।।೩।।
ಹರಿಕಥಾಮೃತ ಉಪಚಾರಕಾಗಿ ಕೇಳುವಾ
ಪರನಾರೇರಾಳುವ ದುರುಳನ ಕಟ್ಟಿತರ ।।೪।।
ಗುರುಹಿರಿಯರೊಳು ಪ್ರತ್ಯುತ್ತರ ಕೊಡುವರ
ಮರುಳಾಗಿ ಮಮತೆಯಾ ಸತಿ ವಶದನ ತರ ।।೫।।
ಅಂಬುಜಾಕ್ಷನೆ ಪೂಜೆ ಜಂಭದಿ ಮಾಡುವ
ರಂಭೆಯರೊಡನಾಟದ ಡಂಭನ ಹಿಡಿತರ ।।೬।।
ಒಳ್ಳೇದು ಹಳಿದು ತಾ ಬಲ್ಲವನೆನುವನ
ಚೆಲ್ವಾ ಪ್ರಸನ್ವೆಂಕಟಾ ವಲ್ಲಭಾಗರಿತರ ।।೭।।
Helida yamadharma tannalige ||pa||
Helida yama tannuligadavarige
Kula duratmaragi baluvaranu tara ||1||
Hari sankirtaneya naranariyaru A-
Daradali madidavara nindipara tara ||2||
Haridasarigunakariyade janmanta
Oratu matina lubdha naranallade tara ||3||
Harikathamruta upacarakagi keluva
Paranareraluva durulana kattitara ||4||
Guruhiriyarolu pratyuttara koduvara
Marulagi mamateya sati vasadana tara ||5||
Ambujakshane puje jambadi maduva
Rambeyarodanatada dambana hiditara ||6||
Olledu halidu ta ballavanenuvana
Celva prasanvenkata vallabagaritara ||7||
One thought on “Helidha yamadharma”