Gowri · MADHWA · pranesha dasaru · sulaadhi

Sri Parvathi devi sthothra sulaadhi

ಧೃವತಾಳ
ಉಮಾ ಕಾತ್ಯಾಯಿನಿ ಪಾವ೯ತಿ ಕಲ್ಯಾಣಿ|
ಬೊಮ್ಮ ಭೃಕುಟಿ ಸಂಭೂತ ದೇವನ ರಾಣಿ |
ಕಮ್ಮಗೋಲನ ಜನನಿ ದಾಕ್ಷಾಯಿಣಿ |
ಸುಮನಸರಿಗೆ ಗತಿ ಕರುಣಾಪೂರಿತ ಪಾಂಗೆ|
ಕುಮನಸರಿಗತಿ ವಜ್ರ ಕಠಿಣ ಪಾಂಗೆ |
ರಮೆಯರಸನ ಪಾದಸುಮನಸ್ವ ಭೃಂಗೆ |
ಬೊಮ್ಮಭಿನವ ಪ್ರಾಣೇಶ ವಿಠಲನ |
ಸುಮನ ಚರಣಗಳಲ್ಲಿ ಮನವ ಪ್ರೇರಿಸು ತಾಯೆ

ಮಟ್ಟತಾಳ
ಚಂಡಿದುರ್ಗೆ ಭೂತಗಣ ಸಂಸೇವಿತಳೆ |
ರುಂಡಾಹಿ ಮಾಲಾಧರ ಹೃನ್ಮಂದಿರಳೆ |
ಉಂಡು ವಿಷವ ನಿನ್ನ ಗಂಡನು ಬಳಲಿ |
ಕೈಕೊಂಡೌಷಧವೆನಗೆ ಕರುಣದಿ ನೀಡಮ್ಮ ಮಂಡೆ ಬಾಗಿ ಬೇಡ್ವೆ |
ಕರಗಳ ಜೋಡಿಸುತ | ಪುಂಡರೀಕ ನಯನೆ ಪುಂಡರೀಕ ಗಮನೆ |
ಪಂಢರ ಅಭಿನವ ಪ್ರಾಣೇಶ ವಿಠಲನ |
ಪುಂಡರೀಕ ಚರಣ ಬಂಡುಣಿ ಎನಿಸಮ್ಮಾ||

ತ್ರಿವಿಡಿತಾಳ
ಆರುಮೊಗನ ಪೆತ್ತ ಚಾರು ಚರಿತ್ರಳೆ |
ವಾರಣಾರಿ ವೃಷಭಶ್ಯಂದನಳೆ |
ಶ್ರೀ ರಜಪತಿ ರಾಮನಾಮ ಮಂತ್ರವ ಜಪಿಸಿ |
ಸರ್ವಮಂಗಳೆಯಾದ ಶರ್ವಾಣಿಯೆ ನಾರಿಯರಾಭಿಷ್ಟ ಪೂರೈಸುತವರಿಗೆ |
ವೀರ ಪತಿವ್ರತೆ ಧರ್ಮ ಮರ್ಮವ ತೋರ್ದ| ವಾರಿಜನಯನೆ ಮಂಗಳಗೌರಿಯೇ |
ಮಾರಮಣಭಿನವ ಪ್ರಾಣೇಶ ವಿಠಲನ |
ಚಾರು ಚರಣಗಳಲ್ಲಿ ಮನವ ಪ್ರೇರಿಸು ತಾಯಿ

ಅಟ್ಟತಾಳ
ಹರಿ ಸರ್ವೋತ್ತಮನೆಂಬ ಸ್ಥಿರವಾದ ಜ್ಞಾನವ |
ಕರುಣಿಸು ಕರುಣಿಸು ಶೆರಗೊಡ್ಡಿ ಬೇಡುವೆ |
ದುರುಳ ದಾನವರಂತೆ ಪರಮೇಶ ಶಿವನೆಂದು ಪೆರಧರ ಪರನೆಂದು ನುಡಿಸದಿರೆಂದೆಂದು |
ಸಿರಿಯರಸನ ಪೆದ್ದ ಪರಿಚರ್ಯವನು ಕೊಡು |
ಮರುಳೊಂದು ಬಯಸೇನು ಖೇಶ ಷಣ್ಮುಖಮಾತೆ |
ಸಿರಿವರ ಅಭಿನವ ಪ್ರಾಣೇಶ ವಿಠಲನ |
ಚರಣ ವಾರಿಜ ಭೃಂಗೆ ಸರ್ವಭಕ್ತಾಂತರಂಗೆ ||

ಆದಿತಾಳ
ಭಾಸುರ ಚರಿತಳೆ ಭೂಸುರ ವಿನುತಳೆ |
ಸಾಸಿರ ನಾಮನ ತೋಷದಿ ಭಜಿಪಳೆ |
ವಾಸವಾದಿ ದಿವಿಜೇಶ ಗಣಾರ್ಚಿತೆ |
ದಾಶರಥಿ ಹರಿ ವಾಸುದೇವ ಪದ |
ಸಾಸಿರ ಪತ್ರದಿ ಧೃಢ ಭಕುತಿಯ ಕೊಡು |
ಮೇಷಾಭಿನವ ಪ್ರಾಣೇಶ ವಿಠಲನ|
ದಾಸ್ಯತನವನಿತ್ತು ಪೋಷಿಸುವದೆಮ್ಮಾ||

ಜತೆ
ಅಜನಾಮಭಿನವ ಪ್ರಾಣೇಶ ವಿಠಲನ|
ನಿಜ ದಾಸನೆಂದೆನಿಸು ಸುಜನ ಪೋಷಕಳೆ


dhruvatala
Uma katyayini pava9ti kalyani|
bomma brukuti sambuta devana rani |
kammagolana janani dakshayini |
sumanasarige gati karunapurita pange|
kumanasarigati vajra kathina pange |
rameyarasana padasumanasva brunge |
bommabinava pranesa vithalana |
sumana caranagalalli manava prerisu taye

Mattatala
Chandidurge butagana samsevitale |
rundahi maladhara hrunmandirale |
undu vishava ninna gandanu balali |
kaikondaushadhavenage karunadi nidamma mande bagi bedve | karagala jodisuta | pundarika nayane pundarika gamane |
pandhara abinava pranesa vithalana |
pundarika charana banduni enisamma||

Trividitala
Arumogana petta caru caritrale |
varanari vrushabasyandanale |
sri rajapati ramanama mantrava japisi |
sarvamangaleyada sarvaniye nariyarabishta puraisutavarige |
vira pativrate dharma marmava torda|
varijanayane mangalagauriye |
maramanabinava pranesa vithalana |
charu charanagalalli manava prerisu tayi

Attatala
Hari sarvottamanemba sthiravada j~janava |
karunisu karunisu seragoddi beduve |
durula danavarante paramesa Sivanendu peradhara paranendu nudisadirendendu |
siriyarasana pedda paricharyavanu kodu |
marulondu bayasenu kesa shanmukamate |

Sirivara abinava pranes vithalana |
carana varija brunge sarvabaktantarange ||

Aditala
Basura caritale busura vinutale |
sasira namana toshadi bajipale |
vasavadi divijesa ganarcite |
dasarathi hari vasudeva pada |
sasira patradi dhrudha Bakutiya kodu |
meshabinava pranesa vithalana|
dasyatanavanittu poshisuvademma||

Jate
Ajanamabinava pranesa vithalana|
Nija dasanendenisu sujana poshakale

aarathi · dasara padagalu · Gowri · Harapanahalli bheemavva · MADHWA

Arathi belega bannire

ಆರತಿಯ ಬೆಳಗಬನ್ನಿರೆ ಆರತಿಯ ಬೆಳಗಬನ್ನಿರೆ
ಪಾರ್ವತಿದೇವಿಯರಿಗೆ
ಕೀರುತಿ ಕೊಂಡಾಡುತಲಿ ಪರ್ವತರಾಜನ ಮಗಳಿಗೆ
ಆರತಿಯ ಬೆಳಗಬನ್ನಿರೆ ||ಪ||

ವಾಲೆ ಕಠಾಣಿ ಚಿಂತಾಕು ಮ್ಯಾಲೆ ಸರಿಗೆ ಸರ ಮುತ್ತುಗಳು
ಕಾಲಗೆಜ್ಜೆಸರಪಳಿನಿಟ್ಟ ಫಾಲಾಕ್ಷನ ಮಡದಿಗೆ ||1||

ರಂಗುಮಾಣಿಕ್ಯದ ಹೆರಳು ಬಂಗಾರದಾಭರಣವಿಟ್ಟು
ದುಂಡುಮಲ್ಲಿಗೆ ಮುಡಿದು ಕುಳಿತ ಮಂಗಳಾದೇವಿಯರಿಗೆ ||2||

ದುಂಡುಮುತ್ತಿನ ಮುಕುರ್ಯವು ಚಂದ್ರ ಬಾಳ್ಯಬುಗುಡಿನಿಟ್ಟು
ದುಂಡು ಹರಡಿ ಕಂಕಣಕಮಲ ದ್ವಾರ್ಯನಿಟ್ಟ ವಾರಿಜಾಕ್ಷಿಗೆ ||3||

ಜಾತಿಮಾಣಿಕ್ಯದ ವಂಕಿ ನೂತನಾದ ನಾಗಮುರಿಗೆ
ಪ್ರೀತಿಯಲಿ ಪೀತಾಂಬ್ರನುಟ್ಟು ಜ್ಯೋತಿಯಂತೆ ಹೊಳೆವೊ ಗೌರಿಗೆ ||4||

ನೀಲವರ್ಣ ಭೀಮೇಶಕೃಷ್ಣ ಧ್ಯಾನಮಾಡುತ ಕೃಷ್ಣನ
ನೀಲಕಂಠನ ಸಹಿತ ಕುಳಿತ್ವಿಶಾಲನೇತ್ರೆ ಪಾರ್ವತಿಗೆ||5||

Arathiya belagabannire parvati deviyarige
Kiruti kondadutali parvatarajana magalige
Aratiya belagabannire ||pa||

Vale kathani cintaku myale sarige sara muttugalu
Kalagejjesarapalinitta palakshana madadige ||1||

Rangumanikyada heralu bangaradabaranavittu
Dundumallige mudidu kulita mangaladeviyarige||2||

Dundumuttina mukuryavu camdra balyabugudinittu
Dundu haradi kankanakamala dvaryanitta varijakshige ||3||

Jatimanikyada vanki nutanada nagamurige
Pritiyali pitambranuttu jyotiyamte holevo gaurige ||4||

Nilavarna bimesakrushna dhyanamaduta krushnana
Nilakanthana sahita kulitvisalanetre parvatige 5