dasara padagalu · hanuma · MADHWA

Palaya maam pavamana

ಪಾಲಯ ಮಾಂ ಪವಮಾನ | ಪವಮಾನ
ಪಾಲಯ ಮಾಂ ಪವಮಾನ
ಪಾಲಯಮಾಂ ಕರುಣಾಲಯ ಹರಿಪದ
ಕೀಲಾಲಯ ಮಧುಪ | ಪವಮಾನ ||

ಪ್ರಾಣ-ಅಪಾನ ವ್ಯಾನ-ಉದಾನ ಸಮಾನ ಪೂರ್ಣಜ್ಞಾನ
ನೀನೊಲಿದೆನ್ನ ಸದಾನುರಾಗದಲಿ
ಮಾಣದೆ ಪೊರೆಯೆನ್ನ |ಪವಮಾನ ||೧||

ಹರಿಸುತ ಹರಪಿತ ಚರಾಚರಸ್ಥಿತ ಶರಣ ಜನರ ಪಾಲ
ಹರಿಯಾಜ್ಞದಿ ಜೀವರಿಗೆ ತುದಿಯಲಿ
ಅವರವರ ಗತಿ ಪ್ರದಾತ | ಪವಮಾನ ||೨||

ಮುದ್ದು ಅಭಿನವ ಜನಾರ್ಧನ ವಿಠಲನ ಪದ್ಮಪಾದಯುಗಳ
ಶುದ್ಧ ಭಕುತಿಯಲಿ ಪೊತ್ತಿ ಸುಖಿಪ ತೆರ
ಉದ್ಧರಿಸುವುದೆನ್ನ | ಪವಮಾನ ||೩||

Palaya mam pavamana | pavamana
Palaya mam pavamana

Palayamam karunalaya haripada
Kilalaya madhupa | pavamana ||

Prana-apana vyana-udana samana purnaj~jana
Ninolidenna sadanuragadali
Manade poreyenna |pavamana ||1||

Harisuta harapita caracarasthita sarana janara pala
Hariyaj~jadi jivarige tudiyali
Avaravara gati pradata | pavamana ||2||

Muddu abinava janardhana vithalana padmapadayugala
Suddha Bakutiyali potti sukipa tera
Uddharisuvudenna | pavamana ||3||

dasara padagalu · hanuma · MADHWA

Hanumantha entha

ಹನುಮಂತ ಎಂಥ ವೈರಾಗ್ಯ ಹನುಮಂತ
ಎಂಥ ಸೌಭಾಗ್ಯ ಗುಣವಂತ ||ಪ||

ಸಂತತ ರಾಘವನಂಘ್ರಿ ಕಮಲದಲಿ ಅಂತರಂಗ
ಭಕುತಿಯ ಬೇಡಿದೆಯೊ ||ಅ.ಪ||

ಆವರಿಹರು ನಿನ್ಹೊರತು ರಾಘವರ
ಭಾವವರಿತು ಪ್ರತಿ ಕ್ಷಣಗಳಲಿ
ಸೇವೆ ಸಲಿಸಿ ದಯ ಪಡೆಯಲು ಭೋಗವ
ದಾವದನುಭವಿಸೆ ದುರ್ಲಭವು
ಜೀವೋತ್ತಮನದ ಬಯಸದೆ ಏಕೋ
ಭಾವದಿ ಪದಸೇವೆಯ ಕೇಳಿದ ವೀರ ||1||

ಜ್ಞಾನಪರಾಕ್ರಮ ಧ್ಯೆರ್ಯವೀರ್ಯಕಧಿ
ಷ್ಠಾನ ಪವನಸುತ ಜಗತ್ರಾಣ
ನೀನಲ್ಲದೆ ಖಗಮೃಗ ಸುರನರರುಗ
ಳೇನು ಚಲಿಸಬಲ್ಲರೊ ಹನುಮ
ಪ್ರಾಣಭಾವಿ ಚತುರಾನನ ಭುವಿಯೊಳ
ಗೇನು ರುಚಿಯೊ ಕಲ್ಯಾಣಚರಿತ ನಿನಗೆ ||2||

ಕಪಿ ರೂಪದಿ ದಶಕಂಧರನ ಮಹಾ
ಅಪರಾಧಕ್ಕೆ ಶಿಕ್ಷೆಯನಿತ್ತೆ
ನೃಪರೂಪದಿ ದುರ್ಯೋಧನನಸುವನು
ಅಪಹರಿಸಿದೆಯೋ ಬಲ ಭೀಮ
ವಿಪುಲ ಪ್ರಮತಿ ವರವೈಷ್ಣವ ತತ್ವಗ
ಳುಪದೇಶಿಸಿದ ಪ್ರಸನ್ನ ಯತಿವರೇಣ್ಯ||3||

Hanumannta entha vairagya hanumanta^^entha saubagya gunavanta ||pa||

Santata ragavanangri kamaladali antaranga
Bakutiya bedideyo ||a.pa||

Avariharu ninhoratu ragavara
Bavavaritu prati kshanagalali
Seve salisi daya padeyalu bogava
Davadanubavise durlabavu
Jivottamanada bayasade eko
Bavadi padaseveya kelida vira ||1||

J~janaparakrama dhyeryaviryakadhi
Shthana pavanasuta jagatrana
Ninallade kagamruga suranararuga
Lenu chalisaballaro hanuma
Pranabavi caturanana buviyola
Genu ruciyo kalyanacarita ninage ||2||

Kapi rupadi dasakandharana maha
Aparadhakke siksheyanitte
Nruparupadi duryodhananasuvanu
Apaharisideyo bala bima
Vipula pramati varavaishnava tatvaga
Lupadesisida prasanna yativarenya||3||

dasara padagalu · hanuma · hanumabhimamadhwa · MADHWA · purandara dasaru

Hanumantha ne balu

ಹನುಮಂತ ನೀ ಬಲು ಜಯವಂತನಯ್ಯ |
ಅನುಮಾನವಿಲ್ಲ ಆನಂದತೀರ್ಥರಾಯ

ಪರಾಮಸೇವಕನಾಗಿ ರಾವಣನ ಪುರವ ನಿರ್ಧೂಮವ ಮಾಡಿದೆ ನಿಮಿಷದೊಳಗೆ ||
ಭೂಮಿಯ ಪುತ್ರಿಗೆ ಮುದ್ರೆಯುಂಗುರವಿತ್ತು |ಕ್ಷೇಮ ಕುಶಲವ ಶ್ರೀರಾಮ ಪಾದಕರ್ಪಿಸಿದೆ ||

ಕೃಷ್ಣಾವತಾರದಿ ಭೀಮನಾಗಿ ಬಂದುದುಷ್ಟ ದೈತ್ಯರನೆಲ್ಲ ಸಂಹರಿಸಿದೆ
|ದೃಷ್ಟಿಹೀನ ಧೃತರಾಷ್ಟ್ರನ ವಂಶವನುಕಷ್ಟವಿಲ್ಲದೆ ಕೊಂದು ಶ್ರೀಕೃಷ್ಣಪಾದಕರ್ಪಿಸಿದೆ ||

ಪತಿತ ಸಂಕರ ಹುಟ್ಟಿ ಮತವೆಲ್ಲ ಕೆಡಿಸಲುಮತಿ ಹೀನರಾದ ಸಜ್ಜನರಿಗೆಲ್ಲ
|ಅತಿ ಬೇಗದಲಿ ಮಧ್ವಯತಿರೂಪಧರಿಸಿ ಸದ್ಗತಿಪಾಲಿಸಿದೆಪುರಂದರವಿಠಲನ ದಾಸ||

Hanumanta ni balu jayavantanayya |
Anumanavilla anandatirtharaya || pa||

Paramasevakanagi ravanana purava nirdhumava madide nimishadolage ||
Bumiya putrige mudreyunguravittu |kshema kusalava srirama padakarpiside ||1||

Krushnavataradi bimanagi bandudushta daityaranella samhariside |drushtihina dhrutarashtrana vamsavanukashtavillade kondu srikrushnapadakarpiside ||2||

Patita sankara hutti matavella kedisalumati hinarada sajjanarigella |
|ati begadali madhvayatirupadharisi sadgatipaliside purandaravithalana dasa ||3||

dasara padagalu · hanuma · MADHWA · Vadirajaru

Ene yaro ninage hanumantaraya

ಎಣೆಯಾರೊ ನಿನಗೆ ಹನುಮಂತರಾಯ ||

ಎಣೆಯಾರೊ ನಿನಗೆ ತ್ರಿಭುವನದೊಳಗೆಲ್ಲಪ್ರಣತಜನಮಂದಾರ ಪವನಸುಕುಮಾರ ||

ಅಡಿಗಡಿಗೆ ರಾಮ ಪದಾಂಬುಜಕೆ ವಂದಿಸುತ
ನಡೆನಡೆದು ಮುದ್ರಿಕೆಯ ಪಡೆದು ಮುದದಿ
ದಡದಡನೆ ಅಂಬುಧಿಯ ದಾಟಿ ಸೀತೆಗೆ ಗುರುತ
ಕೊಡುಕೊಡುತ ಕುಸ್ತ್ತರಿಸಿದಂಥ ಹನುಮಂತ||

ಗರಗರನೆ ಪಲ್ಗಡಿದು ಕಲುಷದೈತ್ಯರನೆಲ್ಲ
ಚರಚರನೆ ಸೀಳಿ ಸಂಭ್ರಮದಿಂದ
ಬಿರಬಿರನೆ ಕಣ್ಬಿಡುತ ಬಿಂಕದಲಿ ಲಂಕೆಯನು
ಸುರಸುರನೆ ಬಾಲದಲಿ ಸುಟ್ಟ ರಣದಿಟ್ಟ ||

ಫಳಫಳನೆ ಆರ್ಭಟದಿಂದ ರಾವಣನ
ನಳನಳನೆ ಬೆಳೆದ ನಂದನವ
ಕಿತ್ತುಖಳಖಳನೆ ನಗುತ ದಶಕಂದರನ ಗುದ್ದಿ
ಬಂದೆಭಳಿಭಳಿರೆ ಹಯವದನ ದಾಸ ನಿಸ್ಸೀಮ ||

Ene yaro ninage hanumantaraya ||pa ||
Ene yaro ninage tribuvanadolagella |
Punata jana mandara pavana sukumara || a. Pa ||

Adigadige ramara padambujake vandisuta |
Nada nadedu mudrikeyagondu mudadi ||
Dhadadhadane ambudhiya dati sitege guru ta |
Koda kodutta kustarisidanta hanumanta || 1 ||

Garagarane halgiridu kalusha daityaranella |
Caracarane sili sambramadindali ||
Biribirine kanbiduta binkadali lankeyanu |
Surasurane baladali sutta rana dhitta || 2 ||

Galagalane arbatisi bapure ravanana
Belebeleda nandanavanava kitti ||
Kalakalane naguta dasakamdharana guddideyo |
Balibalire hayavadanana dasa nirdosha || 3 ||

dasara padagalu · hanuma · hanumabhimamadhwa · purandara dasaru

sari bandane

ಸಾರಿ ಬಂದನೆ ಪ್ರಾಣೇಶ ಬಂದನೆ || ಪಲ್ಲವಿ ||

ಸಾರಿ ಬಂದ ಲಂಕಾಪುರವ ಮೀರಿದ ರಾವಣನ ಕಂಡು
ಧೀರನು ವಯ್ಯಾರದಿಂದ || ಅನು ಪಲ್ಲವಿ ||

ವಾಯು ಪುತ್ರನೆ ಶ್ರೀರಾಮನ ದೂತನೆ ಪ್ರೀಯದಿಂದ
ಸೀತಾಂಗನೆಗೆ ಮುದ್ರಿಕೆಯ ತಂದಿತ್ತವನೆ || ೧ ||

ಭೀಮಸೇನನೆ ಕುಂತಿ ತನಯನೆ ವಿರಾಟನ ಮನೆಯಲ್ಲಿ
ನಿಂತು ಕೀಚಕನ ಸಂಹರಿಸಿದವನೆ || ೨ ||

ಮಧ್ವರಾಯನೆ ಸರ್ವಜ್ಞಶ್ರೇಷ್ಠ ಅದ್ವೈತವ ಗೆದ್ದು
ಪುರಂದರವಿಠಲನ ಮುಂದೆ ನಿಂತವನೆ || ೩ ||

Sari bandane | pranesa bandane ||

Sari bandu lankapurava mirida ravanana | ¸
Kandu dhira oyyaradimda||

Vayuputrane sriramadutane |
Pritiyinda sitanganege mudrikeya tandittavane ||

Bimasenane kunti tanayane
Viratana maneyali nintu kicakana samharisidavane ||

Madhvarayane sarvaj~ja sreshthane |
Advaitava geddu purandaravithalana munde||

dasara padagalu · hanuma · MADHWA

Prananathana noduva banni

Prananathana noduva banni | hari dasarella ||
Bedida muktiya niduva nadolu |

Noduva janara kaduva namma dore
Imdire arasana carana dvamdvava homdi | || 1 ||

Mamdaradhara madhusudana Baktana
Harihara karivarada paratpara || 2 ||

Purushana Baktana paripalanamma
Srida hanuma bima madhvamtargata ||3||

Ramakrushna vedavyasarpitavendu
Srushtiyolage bandu mukta puranindu |
Dushta daityara kondu venkatavithalana dasanendu || 4||

dasara padagalu · MADHWA

Hanumana maneyavaru

ಹನುಮನ ಮನೆಯವರು ನಾವೆಲ್ಲರು
ಹನುಮನ ಮನೆಯವರು ಪ

ಅನುಮಾನಪಡದೆಲೆ ಸ್ಥಳವ ಕೊಡಿರಿ ಎಮಗೆ ಅ.ಪ
ಊಧ್ರ್ವ ಪುಂಡ್ರವ ನೋಡಿ ಶ್ರದ್ಧೆ ಭಕುತಿ ನೋಡಿ
ಹೃದ್ಗತವಾದೆಮ್ಮ ತತ್ವಗಳನೆ ನೋಡಿ
ಇದ್ದುದನಿಲ್ಲೆಂಬ ಅಬದ್ಧ ನುಡಿವರಲ್ಲಾ
ಮಧ್ವಮುನಿಯು ನಮ್ಮ ತಿದ್ದಿರುವುದ ನೋಡಿ 1

ಸತ್ಯ ಮಿಥ್ಯಗಳಿಗೆ ಅಂತರ ಬಲ್ಲೆವು
ಉತ್ತಮ ನೀಚರೆಂಬುವ ಭೇದ ಬಲ್ಲೆವು
ಸುತ್ತಲು ಕಂಡು ಕಾಣದೆ ಇಹ ಎಲ್ಲಕೂ
ಉತ್ತಮನೊಬ್ಬನೇ ಹರಿಯೆಂದು ಬಲ್ಲೆವು 2

ಹಲವು ಲೋಕಗಳುಂಟೆಂಬುದ ಬಲ್ಲೆವು
ಹಲವು ಯೋನಿಗಳಲ್ಲಿ ಜನ್ಮಗಳೊಲ್ಲೆವು
ಅಲವಭೋಧರು ನಮ್ಮ ಕಳುಹಿದರಿಲ್ಲಿಗೆ
ತಿಳಿಸಿ ಪ್ರಸನ್ನ ಶ್ರೀ ಹರಿಗೆ ವಿಚಾರವ 3

Hanumana maneyavaru navellaru
Hanumana maneyavaru || pa ||

Anumana padedele sthalava kodiri emage ||apa||

Urdhvapundrava nodi sraddhebakuti nodi |
Hrudgatavademma tatvagalane nodi |
Iddudanillemba abaddha nudivaralla |
Madhvamuniyu namma tiddiruvuda nodi ||1||

Satya mithyagalige antara ballevu |
Uttamanicarembuva beda ballevu |
Suttalu kandu kanade iha ellakku |
Uttamanobbane hariyendu ballevu ||2||

Halavu lokagaluntembuda ballevu |
Halavu yonigalalli janmagalollevu |
Alava bodharu namma kaluhidarillige |
Tilisi prasanna sri harige vicharava || 3 ||

dasara padagalu · MADHWA · Vadirajaru

Itane kaniro madhwamuni

ಈತನೆ ಕಾಣಿರೊ ಮಧ್ವಮುನಿ ||

ಪರಿಪರಿ ಶ್ರುತಿಗಳೆಂಬ ಗುಹೆಗಳಲಿ ಕೇ-ಸರಿಯಂತೆ
ಚರಿಸುತ್ತಹರಿಯೆ ಸರ್ವೋತ್ತಮನೆಂಬ
ಘೋಷಗಳಿಂದದುರುಳ ವಾದಿಗಳೆಂಬ ನರಿಗಳೋಡಿಸಿದಾತ ||

ಸಕಲಾಗಮಗಳೆಂಬ ಶರಧಿಯೊಳಗೆ
ಯುಕುತಿಯಿಂದಲಿ ಮಥಿಸಿಅಕಳಂಕ ಶ್ರೀಹರಿಯೆಂಬ
ರತ್ನವ ಕಂಡುಮಕುಟದೊಳಿಟ್ಟು ಲೋಕದಿ ಮೆರೆಸಿದಾತ ||

ವೇದಸಾರವೆಂಬ ಈಶತತ್ವವಾದಸುಧೆಯ ಕಲ್ಪಿಸಿಕೊಂಡು
ಆದಿಮೂರುತಿ ಶ್ರೀ ಹಯವದನನ ದಿವ್ಯ
ಪಾದ ಸೇವಕನಾದ ಮಧ್ವಮುನಿಯೆಂಬಾತ ||

Itane kaniro madhwamuni || pa ||

Paripari sutigalemba guhegalalli ke sariyante
Charisutta hariye sarvottamanemba
Goshagalinda durulavadigalemba narigalodisidata || 1 ||

Sakalagamagalemba saradhiyolage
Mukutiyali mathisi akalanka srihariyemba
Ratnava kandu mukutadolagittu lokadi meredata || 2 ||

Vedasaranemba isatatta vada sude ya kalpisikondu
Adimuruti srihayavadanana divsa
Padasevakanada madhvamuniyembata || 3 ||

dasara padagalu · MADHWA · sripadarajaru

Marudamsara mata

ಮರುದಂಶರ ಮತ ಪಿಡಿಯದೆ ಇಹ -ಪರದಲ್ಲಿ ಸುಖವಿಲ್ಲವಂತೆ|| ಪ||

ಅರಿತು ವಿವೇಕದಿ ಮರೆಯದೆ ನಮ್ಮಗುರುರಾಯರ ನಂಬಿ ಬದುಕಿರೋ ||ಅ.ಪ||

ಕ್ಷೀರವ ಕರೆದಿಟ್ಟ ಮಾತ್ರದಿ ಸಂಸ್ಕಾರವಿಲ್ಲದೆ ಘೃತವಾಗದಂತೆ
ಸೂರಿಜನರ ಸಂಗವಿಲ್ಲದೆ ಸಾರವೈರಾಗ್ಯ ಭಾಗ್ಯ ಪುಟ್ಟದಂತೆ ||

ಉಪದೇಶವಿಲ್ಲದ ಮಂತ್ರ ಏಸುಜಪಿಸಲು ಫಲಗಳ ಕೊಡದಂತೆ
ಉಪವಾಸ ವ್ರತಗಳಿಲ್ಲದೆ ಜೀವತಪಸಿಯೆನಿಸಿಕೊಳ್ಳಲರಿಯನಂತೆ ||

ಸಾರಮಧ್ವಶಾಸ್ತ್ರವೋದದೆ ಗುರುತಾರತಮ್ಯ ಸುಜ್ಞಾನ ಪುಟ್ಟದಂತೆ
ಶ್ರೀರಂಗವಿಠಲನ ಭಜಿಸದೆ ಮುಂದೆಪರಮಗತಿ ದೊರಕೊಳ್ಳದಂತೆ ||

Marudamsara mata pidiyade iha | paradalli sukavillavante || pa ||

Aritu vivekadi mareyade namma gururayara nambi badukiro || a pa ||

Kshirava kareditta matradi sam skaravilladegrutavagadante
Surijanara samgavillade sara vairagyabagya puttadante || 1 ||

Upadesavillada mantra Esu japisalu palagala kodadante
Upavasa-vratagalillade jiva tapasiyenisikolla lariyanante || 2 ||

Sara madasastravodade guru taratamya saj~jana puttadante
Srirangaviththalana Bajisade munde paramagati dorakolladante || 3 ||

dasara padagalu · hanuma · MADHWA · purandara dasaru

Svami mukya prana ninna

ಸ್ವಾಮಿ ಮುಖ್ಯಪ್ರಾಣ, ನಿನ್ನ
ಮರೆವರ ಗಂಟಲ ಗಾಣ
ನೀ ಹಿಡಿದ್ಯೋ ರಾಮನ ಚರಣ , ನೀ
ನ್ಹೌದೌದೊ ಜಗತ್ಪ್ರಾಣ ||

ಸಂಜೀವಿನಿ ಪರ್ವತವ, ನೀ
ನಂಜದೆ ತಂದ್ಯೋ ನೀನು
ಅಂಜನೆಸುತ ಸದಾಕಾವ, ಹೃ-
ತ್ಕಂಜವಾಸ ಸರ್ವಜೀವ ||

ಏಕಾದಶಿಯ ರುದ್ರ , ನೀ
ಒಯ್ದ್ಯೋ ರಾಮರ ಮುದ್ರ
ಸಕಲವಿದ್ಯಾಸಮುದ್ರ , ನೀ
ನ್ಹೌದೌದೋ ಬಲಭದ್ರ ||

ವೈಕುಂಠದಿಂದ ಬಂದು, ನೀ
ಪಂಪಾಕ್ಷೇತ್ರದಿ ನಿಂದು
ಯಂತ್ರೋದ್ಧಾರಕನೆಂದು, ಪು-
ರಂದರವಿಠಲ ಸಲಹೆಂದು ||

Svami mukya prana ninna marevara gantala gana
Hididyo ramana charana ni haudaudo mukyaprana || pa ||

Sanjivana parvatava ni anjade tamdyo dev |
Anjane suta sadakava hrut kanjavasa sarvajiva || 1 ||

Ekadasara rudra ni vaidyoramara mudra |
Sakala vidya samudra ni haudu haudu balabadra || 2 ||

Vaikunthadinda bandu ni panpakshetradi nindu |
Yantroddarakanendu purandara vithala salahendu || 3 ||