dasara padagalu · kanakadasaru · MADHWA

Dimbadhilliruva jeeva

ಡಿಂಬದಲ್ಲಿ ಇರುವ ಜೀವ ಕಂಬಸೂತ್ರ ಗೊಂಬೆಯಂತೆಎಂದಿಗಿದ್ದರೊಂದು ದಿನ ಸಾವು ತಪ್ಪದು ||pa||

ಹುಟ್ಟುತೇನು ತಾರಲಿಲ್ಲ ಸಾಯುತೇನು ಒಯ್ಯಲಿಲ್ಲಸುಟ್ಟು ಸುಟ್ಟು ಸುಣ್ಣದ ಹರಳಾಯಿತೀ ದೇಹ|
ಹೊಟ್ಟೆ ಭಾಳ ಕೆಟ್ಟದೆಂದು ಎಷ್ಟು ಕಷ್ಟ ಪಟ್ಟರೂನುಬಿಟ್ಟು ಹೋಗುವಾಗ ಗೇಣು ಬಟ್ಟೆ ಕಾಣದು||1||

ಹತ್ತು ಎಂಟು ಲಕ್ಷ ಗಳಿಸಿ ಮತ್ತೆ ಸಾಲದೆಂದು ಪರರಅರ್ಥಕಾಗಿ ಆಸೆಪಟ್ಟು ಸುಳ್ಳು ನ್ಯಾಯ ಮಾಡ್ವರು
ಬಿತ್ತಿ ಬೆಳೆದು ತನ್ನದೆಂಬ ವ್ಯರ್ಥಚಿಂತೆಯನ್ನು ಮಾಡೆಸತ್ತು ಹೋದ ಮೇಲೆ ಅರ್ಥ ಯಾರಿಗಾಹುದೊ ||2||

ಹೊನ್ನು ಹೆಣ್ಣು ಮಣ್ಣು ಮೂರು ತನ್ನಲಿದ್ದು ಉಣ್ಣಲಿಲ್ಲಅಣ್ಣತಮ್ಮ ತಾಯಿ ತಂದೆ ಬಯಸಲಾಗದು
ಅನ್ನ ವಸ್ತ್ರ ಭೋಗಕಾಗಿ ತನ್ನ ಸುಖವ ಕಾಣಲಿಲ್ಲಮಣ್ಣುಪಾಲು ಆದಮೇಲೆ ಯಾರಿಗಾಹುದೊ ||3||

ಬೆಳ್ಳಿ ಬಂಗರಿಟ್ಟುಕೊಂಡು ಒಳ್ಳೆ ವಸ್ತ್ರ ಹೊದ್ದುಕೊಂಡುಅಳ್ಳಾಚಾರಿ ಗೊಂಬೆಯಂತೆ ಆಡಿ ಹೋಯಿತು|
ಹಳ್ಳ ಹರಿದು ಹೋಗುವಾಗ ಗುಳ್ಳೆ ಬಂದು ಒಡೆಯುವಂತೆಉಳ್ಳೆ ಪೊರೆಯಂತೆ ಕಾಣೊ ಸಂಸಾರದಾಟವು ||4||

ವಾರ್ತೆ ಕೀರ್ತಿಯೆಂಬುವೆರಡು ಸತ್ತ ಮೇಲೆ ಬಂದವಯ್ಯವಸ್ತು ಪ್ರಾಣನಾಯಕನು ಎಲ್ಲಿ ದೊರಕ್ಯಾನು
ಕರ್ತೃ ಕಾಗಿನೆಲೆಯಾದಿಕೇಶವನ ಚರಣಕಮಲನಿತ್ಯದಲ್ಲಿ ಭಜಿಸಿ ಸುಖಿಯಾಗಿ ಬಾಳೆಲೊ ||5||

Dimbadalli iruva jiva kambasutra gombeyante
Endigadarondu dina savu tappadu || pa ||

Huttutenu taralilla sayutenu oyyalilla
Suttu suttu sunnada haralayiti deha
Hotte balu kettadendu eshtu kashta madidaru
Bittu hoguvaga genu batte kanadu || 1 ||

Hattu entu laksha galisi matte saladendu parara
Arthakagi asepattu nyaya madvaru
Bitti beledu tannademba vyarthachinteyannu made
Sattu hoda mele artha yarigahudo || 2 ||

Hennu honnu mannu muru tannaliddu unnalilla
Anna tamma tayi tande bayasalagadu
Anna vastra bogakagi tanna sukava kanalilla
Mannupalu adamele yarigahudo || 3 ||

Belli bangarittukondu olle vastra hoddukomdu
Calla pilla gombeyante adi hodane
Halla haridu hoguvaga gulle bandu odeyuvante
Gulle poreyante kano samsaradata || 4 ||

Varte kirtiyembuveradu satta mele bandavayya
Vastu prananayakanu hyange dorakuvano
Kartru kagineleyadikesavana charanakamala
Nityadalli Bajisi sukiyagi baliro || 5 ||

dasara padagalu · kanakadasaru · MADHWA · purandara dasaru

Kanakadasana mele daye madalu vyasamuni

ಕನಕದಾಸನ ಮೇಲೆ ದಯೆ ಮಾಡಲು ವ್ಯಾಸಮುನಿ ಮಠದವರೆಲ್ಲ ದೂರಿಕೊಂಬುವರೊ ||

 

ತೀರ್ಥವನು ಕೊಡುವಾಗ ಕನಕನ್ನ ಕರೆಯೆನಲು
ಧೂರ್ತರಾಗಿದ್ದ ವಿದ್ವಾಂಸರೆಲ್ಲ
ಸಾರ್ಥಕವಾ ಇದು ಇವರ ಸನ್ಯಾಸಿತನವೆಲ್ಲ
ಪೂರ್ತ್ಯಾಗಲೆಂದೆನಲು ಯತಿಯು ನಗುತ್ತಿದ್ದನು

ಮರುದಿನ ಅವರವರ ಪರೀಕ್ಷಿಸಬೇಕೆಂದು
ಕರೆದು ವಿದ್ವಾಂಸರ ಕನಕ ಸಹಿತ
ಕರದಲ್ಲಿ ಕದಳಿಯ ಫಲಗಳನೆ ಕೊಟ್ಟು
ಯಾರಿರದ ಸ್ಥಳದಲಿ ಮೆದ್ದು ಬನ್ನಿರೆನಲು

ಊರ ಹೊರಗೆ ಹೋಗಿ ಬೇರೆ ಬೇರೆ ಕುಳಿತು
ತೋರದಲೆ ಎಲ್ಲರು ಮೆದ್ದು ಬರಲು
ತೋರಲಿಲ್ಲವು ಎನಗೆ ಏಕಾಂತ ಸ್ಥಳವೆನುತ
ಸಾರಿ ಕದಳೀಫಲವ ತಂದು ಮುಂದಿಟ್ಟ

ಡಿಂಭದೊಳು ಶಬ್ದ ವಾಗಾದಿ ಶ್ರೋತ್ರಗಳಲ್ಲಿ
ಇಂಬಾಗಿ ತತ್ವೇಶರೆಲ್ಲ ತುಂಬಿಹರೊ
ತಿಂಬುವುದು ಹೇಗೆನುತ ವ್ಯಾಸರಾಯರ ಕೇಳೆ
ಸಂಭ್ರಮದಲವರೆಲ್ಲ ಕುಳಿತು ಕೇಳಿದರು

ಮಾಣಿಕವು ಕೋಡಗನ ಕೈಯಲ್ಲಿ ಇದ್ದಂತೆ
ಕೋಣನಿದಿರಿಗೆ ಕಿನ್ನರಿಯ ಮೀಟಿದಂತೆ
ವೇಣು ಧ್ವನಿ ಬಧಿರನ ಬಳಿ ಮಾಡಿದಂತೆ
ಕಣ್ಣು ಕಾಣದವನಿಗೆ ಕನ್ನಡಿಯ ತೋರಿದಂತೆ

ನೋಡಿದಿರ ಈ ಕನಕನಾಡುವಾ ಮಾತುಗಳ
ಮೂಢ ಜನರರಿಯಬಲ್ಲಿರ ಮಹಿಮೆಯ
ನಾಡಾಡಿಯಂತೆಯೇ ಮಾಡಿ ಬಿಟ್ಟರು ಇವಗೆ
ನಾಡೆಲ್ಲ ಹುಡುಕಿದರು ಈಡಾರ ಕಾಣೆ

ಕರದಲ್ಲಿ ಮೂರ್ತಿಯನು ಪಿಡಿದು ಕೇಳುತಿರಲು
ಅರಿಯದ ಜ್ಞಾನದಲಿ ಪೇಳುತಿರಲು
ದ್ವಾರದಿ ಕನಕನು ಬಂದು ವಾಸುದೇವನ ರೂಪ
ಪರಬೊಮ್ಮ ಪುರಂದರ ವಿಟ್ಠಲನೆಂದು ಪೇಳಿದನು

Kanakadasana mele daye madalu vyasamuni madadavarella durikombuvaro||p||

Tirttavanu koduvaga kananna kareyanalu durtaragidda vidvamsarella
sarthakavaidu ivara sanyasi tanavella purtyagalendenalu yatiyu naguttiddanu||1||

amrudina avaravara pariksisa bekendu karedu vidvamsara kanaka sahita
karadalli kadaliya phalagalane kottu yarida sthaladali meddu bannirenalu||2||

Ura horage hogi bere bere kulitu toradale ellaru meddu baralu
toralillavu enage ekanta sthalavenuta sari kadaliphalava tandu munditta||3||

dimbhadolu shabda vagadi shrotragalalli imbagi tatvesharella tumbiharo
timbuvudu hegenuta vyasarayara kele sambhramadalavarella kulitu kelidaru||4||

manikavu kodagana kaiyalli iddante konanidirige kinnariya mitidante
venu dhvani badhirana bali madidante kannu kanadavanige kannadiya toridante||5||

nodadire I kanakanaduva matugala mudha janarariya ballare mahimeya
nadadiyanteye madi bittaru ivage nadella hudukidru idara kane||6||

karadalli murtiyanu pididu kelutiralu ariyada jnanadali pelutiralu
dvaradi kanakanu bandu vasudevana rupa parabomma purandara vittalanendu pelidanu||7||

dasara padagalu · MADHWA · ranganatha · sripadarajaru

Kangalidyaatako kaaveri rangana nodada

ಕಂಗಳಿದ್ಯಾತಕೋ ಕಾವೇರಿ ರಂಗನ ನೋಡದ ಜ || ಪ ||

ಗಂಗಳೊಳಗೆ ಮಂಗಳ ಮೂರುತಿ
ರಂಗನ ಶ್ರೀಪಾದಂಗಳ ನೋಡದ || ಅ ಪ ||

ಎಂದಿಗಾದರೊಮ್ಮೆ ಜನರು
ಬಂದು ಭೂಮಿಯಲಿ ನಿಂದು
ಚಂದ್ರಪುಷ್ಕರಣಿ ಸಾನವ ಮಾಡಿ ಆ
ನಂದದಿಂದಲಿ ರಂಗನ ನೋಡದ || ೧ ||

ಹರಿಪಾದೋದಕ ಸಮ ಕಾವೇರಿ
ವಿರಜಾನದಿ ಸಾನವ ಮಾಡಿ
ಪರಮ ವೈಕುಂಠ ರಂಗಮಂದಿರ
ಪರವಾಸುದೇವನ ನೋಡದ || ೨ ||

ಹಾರ ಹೀರ ವೈಜಯಂತಿ
ತೋರ ಮುತ್ತಿನ ಹಾರವ ಧರಿಸಿ
ತೇರನೇರಿ ಬೀದಿಲಿ
ಮೆರೆವ ರಂಗವಿಠಲನ ನೋಡದ || ೩ ||

Kangalidyaatako kaaveri rangana nodadaa ||pa ||

Jagangalolage mangala mooruti |
Rangana shreepaadangala nodada || a. Pa. ||

Endigaadaromme janaru |
Bandu bhoomiyalli nintu |
Chandra pushkarani snaanava maadi |
Aanandadindali rangana nodada || 1 ||

Hari paadodaka sama kaaveri |
Virajaa nadiya snaanava maadi |
Parama vaikuntha ranga mandira |
Para vaasudevana nodada || 2 ||

Haara heera vaijayanti |
Tora muttina haara padaka |
Teraneri beedili mereva |
Shreerangaviththala raayana nodada || 3 ||

dasara padagalu · MADHWA

Kaayo kaveri ranga karunya

ಕಾಯೋ ಕಾವೇರಿರಂಗ | ಕಾರುಣ್ಯಪಾಂಗಾ ||pa||

ಕಾಯೊ ಕಾಯೊ ಕಾವೇರಿ ನಿಲಯನೆ
ಕಾಯೊ ವಾಙ್ಮನ ಪೂರ್ವಕದಿ ತವ
ತೋಯಜಾಂಘ್ರಿಯ ನಂಬಿದೆನುಭವ
ಮಾಯಗೆಲುವ ಉಪಾಯ ತೋರಿ ||a.pa||

ದೇವಾಧಿದೇವ ನೀನು | ಪ್ರಣತ ಜನರಿಗೆ
ದೇವತರು ಮಣಿಧೇನು | ಎಂದರಿತು ನಿಷ್ಟಿಲಿ
ಧಾವಿಸಿ ಬಂದೆ ನಾನು | ರಘುವಂಶ ಭಾನು
ಕಾವನಯ್ಯ ನೀನೊಲಿದು ಕರುಣದಿ
ಪಾವಮಾನಿಯ ಶಾಸ್ತ್ರವರಿತು
ಭಾವ ಭಕ್ತಿಲಿ ನಿನ್ನ ಪಾಡುವ
ಕೋವಿದರ ಸೇವಕನ ಮಾಡಿ ||1||

ಪನ್ನಂಗಪತಿಶಯನ | ಶಿರಬಾಗಿ ಪ್ರಾರ್ಥಿಪೆ
ಪನ್ನಂಗರಿಪುವಾಹನ | ಎನ್ನಪರಾಧವ
ಮನ್ನಿಸೊ ಹಯವದನ | ವೈಕುಂಠ ಸದನ
ನಿನ್ನನುಗ್ರಹ ಪೂರ್ಣಪಡೆದು ಜಗನ್ನಾಥದಾಸರ
ಸನ್ನಿಧಾನದಿಂ ಬಂದೆ ತಂದೆ ||2||

ನೇಸರ ಕುಲಜಾತ | ವೇದೋಕ್ತಕ್ರಮದಿಂ
ಭೂಸುರ ಕರಪೂಜಿತ | ಕೌಶಿಕನ ಯಜ್ಷವ
ಪೋಷಕ ಪವನಪಿತ | ಪಾವನ್ನ ಚರಿತ
ವಾಸುದೇವಾನಂತ ಮಹಿಮೆ | ವಿಭೀಷಣಪ್ರಿಯ
ದೋಷಕಳೆಯುವ | ಭೇಷಪುಷ್ಕರಣೀಶ
ಕೇಶವ ದಾಶರಧಿ ಶ್ರೀ ಶಾಮಸುಂದರ ||3||

Kayo kaveri ranga karunya panga ||pa.||

Kayo kayo kaveri nilayane kaya va~gmanapurnadallindu
Toyajanghriya nambideno bhava maya geluva upaya tori ||a.pa.||

Devadhideva ninu pranatajanarige devatarumanidhenu
Endaritu nishthili dhavisi bande nanu raghuvamsha bhanu |
Kavanayya ni olidu karunadi pavamaniya shastravaritu
Bhavabhakutili ninna paduva kovidara sevakana madi ||1||

Pannangapati shayana shirabagi prarthipe pannangaripu vahana
Ennaparadhava manniso hayavadana vaikunthasadana |
Ninnanugraha purna padedu dhanyarenisida manya manavi
Ghanna guru jagannathadasara sannidhanadi bande prabhuve ||2||

Nesarakulajata vedokta kramadim bhusurakara pujita
Koushikana yagnava poshaka pavanapita pavanna charita |
Vasudevananta mahima vibhishanapriya dosha kaleyuva
Bhesha pushkaranisha keshava dasharathi shri shyamasundara ||3||

 

dasara padagalu · kanakadasaru · MADHWA

Saku saku manuja seveyu

ಸಾಕು ಸಾಕು ಮನುಜಸೇವೆಯು, ರಂಗಯ್ಯ ಇನ್ನು ||a||

ಸಾಕು ಸಾಕು ಮನುಜಸೇವೆ ಮಾಡಿ ದಣಿದು ನೊಂದೆ ನಾನು|
ಬೇಕು ನಿನ್ನ ಪಾದಭಜನೆ ಕೊಟ್ಟು ಸಲಹೊ ರಂಗಯ್ಯ ||a.pa||

ಹೊತ್ತರೆದ್ದು ಹೋಗಿ ಪರರ ಚಿತ್ತವೃತ್ತಿಯನ್ನು ತಿಳಿದು
ಹತ್ತರಿದ್ದು ಹಲವು ಕೆಲಸ ಭೃತ್ಯನಂತೆ ಮಾಡಿ –
ರಿಕ್ತಹಸ್ತದಿಂದ ಮನೆಯ ಸೇರುವೆ –
ಆಸೆಗಾಗಿಮತ್ತೆ ಕಂಡ ಕಡೆಗೆ ತೊಲಗುವೆ –
ಬಂದು ಅಪರರಾತ್ರಿಯಲ್ಲಿ ತಿಂದು ಒರಗುವೆ ರಂಗಯ್ಯ ರಂಗ ||1||

ಸ್ನಾನ ಸಂಧ್ಯಾನುಷ್ಠಾನ ನೇಮವೆಲ್ಲ ತೊರೆದು
ಬಿಟ್ಟುಹೀನನಾಗಿ ಕೆಟ್ಟ ಜನರ ಮನೆಗಳನ್ನು ತಿರುಗಿ
ತಿರುಗಿಶ್ವಾನನಂತೆ ದಿನವ ಕಳೆವೆನೊ –
ದುರಾಸೆಯನ್ನುಮನಸಿನಲ್ಲಿ ಮಡಗಿಕೊಂಡು
ಕುದಿವೆನೊಕೊನೆಗೂ ಎಳ್ಳುಕಾಳಿನಷ್ಟು ಸುಖವ ಕಾಣೆನೊ ರಂಗಯ್ಯ ರಂಗ||2||

ಒಡಲಿನಾಸೆಗಾಗಿ ನೊಣನು ತುಡುಕಿಬಿದ್ದು ಜೇನಕೊಡದಿ
ಮಿಡುಕುವಂತೆ ಬಾಯಿಬಿಡುವೆ ಬಿಸರುಹಾಕ್ಷನೆಬಿಡಿಸು
ಎನ್ನ ಬಂಧಪಾಶವ ಕಾಗಿನೆಲೆಯಾದಿಕೇಶವಕೊಡಿಸು ನಿನ್ನ ಭಕ್ತರ ಸಂಗವ –
ಕನಕದಾಸನೊಡೆಯ ವೆಂಕಟಾದ್ರಿ ಮಾಧವ – ರಂಗಯ್ಯ ರಂಗ||3||


Saku saku manuja seveyu rangayya innusaku
Saku manujaseve madi danidu nonde nanu
Beku ninna padabhajane lokadodeya rangaraya

Hottareddu hogi parara cittavrittiyanne aritu
Nityadalli halavu kelasa Bhrityanante madi
Rikta hastadinda manege seruve
Asegagi matte kanda kadege tolaguve
Bandu apara ratriyalli tindu oraguve rangayya ranga||1||

Snana mouna nitya sandhyana nemagalane toredu
Hinanagi ketta janmagalali tirugi tirugi
Shvananante dinava kaledeno
Duraseyannu manadalittukondu kudiveno
Konege ellukalinashtu sukhava kaneno rangayya ranga||2||

Odalinasegagi nonavu tunuki biddu jeninolage
Midukuvante bayabiduve bisaruhakshane
Bidiso enna bandhapashava kagineleyadikeshava
Kodiso ninna Bhaktara sangava
Odeya venkatadri madhava rangayya ranga||3||

dasara padagalu · kanakadasaru · MADHWA

Mareyadhiru mareyadhiru

 

Mareyediru mareyediru marulu manuja naraynana smaraneyanu madu manuja

Ranganathanu iralikke janguli daivagalekke tungabhadra iralikke bavikkereyekke
Angana sati iralikke banagu hennugaleke mangalatmaniralikke paradaivaveke||1||

Halu hallaviralikke valiyava taraleke melunama viralikke kataku inneke
Bala hanumaniralikke hulu kapigaleke olle tulasiyire kaggoraleyeke||2||

Cinnada giri iralikke kabbinada moradiyeke ranna manika viralikke kajina haraleke
Anna tuppa viralikke madya panagaleke cennadikeshavanire binugu daivagaleke||3||

dasara padagalu · kanakadasaru · MADHWA

Japava madidharenu

ಜಪವ ಮಾಡಿದರೇನು ತಪವ ಮಾಡಿದರೇನುವಿಪರೀತ ಕಪಟಗುಣ ಕಲುಷವಿದ್ದವರು ||pa||

ಆದಿಗುರುವರಿಯದೆ ಅತ್ತಲಿತ್ತಲು ತೊಳಲಿವೇದಶಾಸ್ತ್ರವನೋದಿ ಬಾಯಾರಲು|
ಹಾದಿಯನು ಕಾಣದಂತಿರುತಿರ್ದು ಹಲವೆಂಟುವಾದ ತರ್ಕದೊಳಿದ್ದ ಭೇದವಾದಿಗಳು ||1||

ನುಡಿ ನಡೆವ ಕಾಲದಲಿ ದಾನ ಮಾಡದೆ ಇರಲುಅಡವಿಯೊಳು ಕೆರೆ ತುಂಬಿ ಬತ್ತಿದಂತೆ
ಮಡದಿ ಮಕ್ಕಳಿಗೆಂದು ಒಡವೆ ವಸ್ತ್ರವ ಗಳಿಸೆಹಿಡಿಯಲಾ ಯಮನವರ ಕಟ್ಟಿಗೊಳಗಾಗಿ ||2||

ಚಳಿಮಳೆಯ ಅತಿ ಕಾರುಗತ್ತಲೆಯೊಳಗೆ ಎದ್ದುಹೊಳೆಯೊಳಗೆ ಮುಳುಗಿ ಜಪ ತಪವ ಮಾಡಿ
ಕಳವಳಿಸಿ ನೂರೆಂಟು ಹಲುಬಿ ಬಳಲಲು ಬೇಡನಳಿನಾಕ್ಷ ಆದಿಕೇಶವನ ನೆನೆ ಮನವೆ ||3||

Japava madidarenu tapava madidarenu viparita kapataguna kalusaviddavaru||p||

Adi guruvariyade attalittalu tolali veda shastrava nodi bayaralu
Hadiyenu kanadantirdu halaventu vada tarkadolidda bhedavadigalu||1||

Nudi nadeva kaladali dana madade iralu adaviyolu keretumbi battidante
Madadi makkaligendu odave vastravagalise hidiyala yamanavara kattigolagagi||2||

Cali maleyu ati karugattaleyolage eddu holeyolage mulugi japa tapava madi
Kalavalisi nurentu halubi balalalu beda nalinaksa Adi keshavana nene manave||3||

dasara padagalu · kanakadasaru · MADHWA

Beda beda elele

ಬೇಡ ಬೇಡ ಎಲೆಲೆ ದುರಿತಗಳಿರಾ ನಮ್ಮಬಾಡದಾಧಿಪನ ಕಿಂಕರನ ಕೂಡ ತೊಡರು ||pa||

ವಾರಿಕಲ್ಲಾನೆ ವಜ್ರದ ಮೃಗೇಂದ್ರನ ಕೂಡೆಹೋರಿ ಹೊದುಕುಳಿಗೊಂಡು ಗೆಲಬಲ್ಲುದೆ ?|
ಭೂರಿ ಭೂತಗಳೆ ಭೂಸತಿಯ ಕಾಂತನ ನಾಮಧಾರಿಗಳ ತೊಡರು ನಿಮಗಳವಡದು ನಾನರಿವೆ ||1||

ಮೇಣದಹಿಕೋಟಿ ದಳ್ಳುರಿಯ ಗರುಡನ ಕೂಡಪ್ರಾಣದಿಂ ಕಾದಿ ಜಯಿಸುವುದೆ ಹೇಳಾ|
ಕ್ಷೋಣಿಯೊಳು ಕ್ಷೀಣದೈವ ಬ್ರಹ್ಮಾಂಡ ಕೋಟಿಗಳುದಾನವಾರಿಯ ದಾಸಗಳವಡವು ನಾನರಿವೆ ||2||

ಹುಲಿಯ ಮೀಸೆಯ ಪಾಶವಿಡಿದು ಗೋವತ್ಸಗಳುನಲಿದು ಉಯ್ಯಾಲೆಯನಾಡುವವೆ ಹೇಳಾ|
ಕಲಿ ಬಾಡದಾದಿಕೇಶವರಾಯ ಚಕ್ರದಲಿತಲೆಗಳನು ಚೆಂಡಾಡಿಸುವ ಕಾಣೊ ಬೇಡ ||3||

Beda beda elele durithagalira namma
Badadadipana kinkarana kuda thodadu||p||

Vari kallane vajrada mrugendrana koode
Hori hodukuligondu gellaballude
Buri buthagale busathiya kanthana naama
Darigala thodaraya Nimagalavadadu Naanarive||1||

Menadahikoti dalluriya garudana kuda
Thranadim kaadi jayisuvude hela
Kshoniyolu ksheeenadaiva bramhanda kotigalu
Daanavariya Dasagalavadavu Naanariye||2||

Huliya meeseya pashavididu govathsagalu
Nalidu vuyyaleyanaduvave hela
Kali baadadadikeshavaraya chakradali
Thalegala chendadisuvano beda||3||

 

dasaavatharam · dasara padagalu · kanakadasaru · MADHWA

Govinda hari govindha

ಗೋವಿಂದ ಹರಿ ಗೋವಿಂದ ||
ಗೋವಿಂದ ಪರಮಾನಂದ ಮುಕುಂದ||

ಮಚ್ಛ್ಯಾವತಾರದೊಳಾಳಿದನೆ – ಮಂದರಾಚಲ ಬೆನ್ನೊಳು ತಾಳಿದನೆ
ಅಚ್ಛ ಸೂಕರನಾಗಿ ಬಾಳಿದನೆ – ಮದಹೆಚ್ಚೆ ಹಿರಣ್ಯಕನ ಸೀಳಿದನೆ||1||

ಕುಂಭಿನಿ ದಾನವ ಬೇಡಿದನೆ – ಕ್ಷಾತ್ರ-ರೆಂಬುವರನು ಹತ ಮಾಡಿದನೆ|
ಅಂಬುಧಿಗೆ ಶರ ಹೂಡಿದನೆ – ಕಮ-ಲಾಂಬಕ ಗೊಲ್ಲರೊಳಾಡಿದನೆ ||2||

ವಸುದೇವನುದರದಿ ಪುಟ್ಟಿದನೆ – ಪಲ್‍ಮಸೆವ ದನುಜರೊಡೆಗುಟ್ಟಿದನೆ|
ಎಸೆವ ಕಾಳಿಂಗನ ಮೆಟ್ಟಿದನೆ – ಬಾ-ಧಿಸುವರ ಯಮಪುರಕಟ್ಟಿದನೆ ||3||

ಪೂತನಿಯ ಮೈ ಸೋಕಿದನೆ – ಬಲುಘಾತದ ಮೊಲೆಯುಂಡು ತೇಕಿದನೆ
ಘಾತಕಿಯನತ್ತ ನೂಕಿದನೆ – ಗೋಪವ್ರಾತ ಗೋಗಳನೆಲ್ಲ ಸಾಕಿದನೆ||4||

ಸಾಧಿಸಿ ತ್ರಿಪುರರ ಗೆಲಿದವನೆ – ಮ್ಲೇಚ್ಛರಛೇದಿಸೆ ಹಯವೇರಿ ಕೆಲೆದವನೆ
ಸಾಧುಸಂತರೊಡನೆ ನಲಿದವನೆ – ಬಾಡದಾದಿಕೇಶವ ಕನಕಗೊಲಿದವನೆ ||5||

Govinda Hari Govinda Keshava Krishna Janaardana||pa||

Matsyaavataradolaadidne mandaraacala bennolu taalidane
Accasookaranaagi baalidane madahecce hiranyana seelidane || 1 ||

Kumbhini daanava bedidane kshaatrarembuvaranu hata maadidane
Ambudhige shara hoodidane kamalaambaka gollarolaadidane || 2 ||

Vasudevanudaradi puttidane palmaseva danujarodaguttidane
Eseva kaalingana mettidane bhaadisuvara yamapurakattidane || 3 ||

Pootaniya maiya sokidane mahaa ghaatada moleyundu tegidane
Ghaatakiyanatta nookidane gopa vraata gogalanella saakidane || 4 ||

Saadhisi tripurava gelidavane mlecchara bhedisi hayaveri meredavane
Saadhisi sakalava tilidavane baadadaadikeshaava bhaktigolidavane || 5 ||